Tag: ಆಪ್ ಪಕ್ಷ

  • ದೆಹಲಿ ಮಾದರಿ ಎಂದರೆ ಪ್ರಾಮಾಣಿಕ ಸರ್ಕಾರ: ಕೇಜ್ರಿವಾಲ್

    ದೆಹಲಿ ಮಾದರಿ ಎಂದರೆ ಪ್ರಾಮಾಣಿಕ ಸರ್ಕಾರ: ಕೇಜ್ರಿವಾಲ್

    ನವದೆಹಲಿ: ದೆಹಲಿ ಮಾದರಿ ಎಂದರೆ ಪ್ರಾಮಾಣಿಕ ಸರ್ಕಾರವಾಗಿದೆ. ಇದು ಮುಂದಿನ ದಿನಗಳಲ್ಲಿ ಹಿಮಾಚಲ ಪ್ರದೇಶಕ್ಕೂ ಸಿಗಲಿದೆ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್‌ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿರುಗೇಟು ನೀಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಮಾದರಿ ಎಂದರೆ ಪ್ರಾಮಾಣಿಕ ಸರ್ಕಾರ. ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳು ವಿಭಿನ್ನವಾಗಿರುವುದರಿಂದ ಹಿಮಾಚಲ ಪ್ರದೇಶದಲ್ಲಿ ಪ್ರಾಮಾಣಿಕ ಸರ್ಕಾರ ಇರಲು ಸಾಧ್ಯವಿಲ್ಲ. ಆದರೆ ಪಂಜಾಬ್ ಹಾಗೂ ದೆಹಲಿಯಂತೆ ಹಿಮಾಚಲ ಪ್ರದೇಶದಲ್ಲೂ ಆಪ್ ಪಕ್ಷ ಪ್ರಾಮಾಣಿಕ ಸರ್ಕಾರವನ್ನು ನೀಡುತ್ತದೆ ಎಂದರು. ಇದನ್ನೂ ಓದಿ: ಇಮ್ಲಿವಾಲಿ ಮಸೀದಿ ಮುಂದೆ ನಮಾಜ್ ಮಾಡಿದ 150 ಮಂದಿ ವಿರುದ್ಧ FIR

    ಈ ಹಿಂದೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮಾತನಾಡಿ, ಅರವಿಂದ್ ಕೇಜ್ರಿವಾಲ್ ಅವರು ಇಲ್ಲಿ ಆಪ್ ಪಕ್ಷವನ್ನು ತರಲು ಪ್ರಯತ್ನಿಸುತ್ತಿದ್ದಾರೆ. ಅವರ ಭೇಟಿಯೂ ಚುನಾವಣೆ ಬರುವವರೆಗೂ ಮುಂದುವರೆಯುತ್ತದೆ. ಆದರೆ ಹಿಮಾಚಲ ಪ್ರದೇಶವನ್ನು ದೆಹಲಿ ಮಾದರಿಗೆ ಹೋಲಿಸುವುದು ಸರಿಯಲ್ಲ. ಇಲ್ಲಿನ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಗಳು ವಿಭಿನ್ನವಾಗಿವೆ ಎಂದು ಹೇಳಿದ್ದರು. ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಕೊರೊನಾ ಸೋಂಕು ಶೇ.50ಕ್ಕೆ ಏರಿಕೆ – ಕಠಿಣ ಕ್ರಮಕ್ಕೂ ಬಗ್ಗದ ಜನ

    ಹಿಮಾಚಲ ಪ್ರದೇಶವು ಮೂರನೇ ವ್ಯಕ್ತಿಗೆ ಸ್ಥಾನ ಅಥವಾ ಗೌರವ ನೀಡಲ್ಲ. ಹೀಗಾಗಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

  • ದೆಹಲಿ ರಿಮೋಟ್ ಕಂಟ್ರೋಲ್‍ಗೆ ಹೊಸ ಬ್ಯಾಟರಿಗಳು ಸೇರ್ಪಡೆ: ಸಿಧು

    ದೆಹಲಿ ರಿಮೋಟ್ ಕಂಟ್ರೋಲ್‍ಗೆ ಹೊಸ ಬ್ಯಾಟರಿಗಳು ಸೇರ್ಪಡೆ: ಸಿಧು

    ಚಂಡೀಗಢ: ಪಂಜಾಬ್‍ನ ರಾಜ್ಯಸಭಾ ನಾಮನಿರ್ದೇಶಿತರಲ್ಲಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೊರತು ಪಡಿಸಿ ಉಳಿದ ಸಂಸದರೆಲ್ಲರೂ ದೆಹಲಿ ರಿಮೋಟ್ ಕಂಟ್ರೋಲ್‍ನ ಬ್ಯಾಟರಿಗಳು ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಟೀಕಿಸಿದರು.

    ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಪಂಜಾಬ್‍ನಿಂದ ಐದು ರಾಜ್ಯಸಭಾ ನಾಮನಿರ್ದೇಶಿತರ ಪಕ್ಷದ ಆಯ್ಕೆ ಕುರಿತು ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದರು.

    ಟ್ವೀಟ್‍ನಲ್ಲಿ ಏನಿದೆ?: ದೆಹಲಿ ರಿಮೋಟ್ ಕಂಟ್ರೋಲ್‍ಗೆ ಹೊಸ ಬ್ಯಾಟರಿಗಳು ಸೇರ್ಪಡೆಯಾಗಿವೆ. ಹರ್ಭಜನ್ ಅವರನ್ನು ಹೊರತು ಪಡಿಸಿದರೆ, ಉಳಿದವರು ದೆಹಲಿ ರಿಮೋಟ್ ಕಂಟ್ರೋಲ್‍ಗೆ ಬ್ಯಾಟರಿಗಳಾಗಿದ್ದಾರೆ. ಇದರಿಂದ ಪಂಜಾಬ್‍ಗೆ ದ್ರೋಹವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಜನರಿಗೆ ಬೆಲೆ ಏರಿಕೆ ಚರ್ಚೆಯ ವಿಷಯ ಅಲ್ಲ, ಮಾತಿನಲ್ಲೇ ಅಭಿವೃದ್ಧಿ ಮಾಡುವವವರು ಇಷ್ಟ: ಹೆಚ್‍ಡಿಕೆ

    ಹರ್ಭಜನ್ ಸಿಂಗ್ ಜೊತೆಗೆ ದೆಹಲಿಯ ಆಪ್ ಶಾಸಕ ರಾಘವ್ ಚಡ್ಡಾ, ಸಂದೀಪ್ ಪಾಟಕ್, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಕುಲಪತಿ ಅಶೋಕ್ ಮಿತ್ತಲ್ ಹಾಗೂ ಕೃಷ್ಣ ಪ್ರಾಣ್ ಸ್ತನ ಕ್ಯಾನ್ಸರ್ ಕೇರ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಸಂಜೀವ್ ಅರೋರಾ ಅವರನ್ನು ಪಂಜಾಬ್‍ನಿಂದ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಇದನ್ನೂ ಓದಿ: ಬಿಜೆಪಿ ಸರ್ಕಾರದಿಂದ ಜನರಿಗೆ ಹಣದುಬ್ಬರದ ಗೀಫ್ಟ್: ಅಖಿಲೇಶ್ ಯಾದವ್

    ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳ ಪೈಕಿ 92 ಸ್ಥಾನಗಳಲ್ಲಿ ಆಮ್ ಅದ್ಮಿ ಗೆಲವು ಸಾಧಿಸಿರುವ ಹಿನ್ನಲೆ ಐದು ಮಂದಿ ನಾಮನಿರ್ದೇಶಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಇದರಿಂದ ರಾಜ್ಯಸಭೆಯಲ್ಲಿ ಆಪ್ ಸಂಖ್ಯೆ 3 ರಿಂದ 8ಕ್ಕೆ ಏರಿಕೆಯಾಗಲಿದೆ.

  • ಕಾಂಗ್ರೆಸ್‍ನಂತೆ ಅಳಬೇಡಿ, ಧೈರ್ಯವಿದ್ರೆ ನಮ್ಮೊಂದಿಗೆ ಹೋರಾಡಿ: ಬಿಜೆಪಿಗೆ ದೆಹಲಿ ಡಿಸಿಎಂ ಸವಾಲು

    ಕಾಂಗ್ರೆಸ್‍ನಂತೆ ಅಳಬೇಡಿ, ಧೈರ್ಯವಿದ್ರೆ ನಮ್ಮೊಂದಿಗೆ ಹೋರಾಡಿ: ಬಿಜೆಪಿಗೆ ದೆಹಲಿ ಡಿಸಿಎಂ ಸವಾಲು

    ನವದೆಹಲಿ: ಕಾಂಗ್ರೆಸ್‍ನಂತೆಯೇ ಅಳುವುದನ್ನು ನಿಲ್ಲಿಸಿ. ನಿಮಗೆ ಧೈರ್ಯವಿದ್ದರೇ ಓಡಿಹೋಗದೆ ನಮ್ಮೊಂದಿಗೆ ಹೋರಾಡಿ ಎಂದು ಬಿಜೆಪಿಗೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸವಾಲು ಹಾಕಿದ್ದಾರೆ.

    ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ (ಎಂಸಿಡಿ) ಚುನಾವಣೆಯ ವಿಳಂಬದ ಬಗ್ಗೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಎಂಸಿಡಿ ಚುನಾವಣೆಗೆ ಸ್ಪರ್ಧಿಸಿ, ನಮ್ಮೊಂದಿಗೆ ಹೋರಾಡಿ. ನೀವು 10 ಸ್ಥಾನಗಳನ್ನು ಗಳಿಸಲು ಸಾಧ್ಯವಾದರೆ ಅದು ನಿಮ್ಮ ದೊಡ್ಡ ಸಾಧನೆಯಾಗಲಿದೆ ಎಂದು ವ್ಯಂಗ್ಯವಾಡಿದ್ದಾರೆ.

    ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ದೆಹಲಿಯಲ್ಲಿ ಮುನ್ಸಿಪಲ್ ಕಾರ್ಪೊರೇಷನ್‌ ಚುನಾವಣೆಗಳನ್ನು ಮುಂದೂಡಿದ ಬಗ್ಗೆ ನಿರಾಶೆ ವ್ಯಕ್ತಪಡಿಸಿದರು. ಕೇಂದ್ರವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‍ಗೆ ಹೀನಾಯ ಸೋಲು – ಬಿಜೆಪಿಗಿಂತಲೂ, ಕಾಂಗ್ರೆಸ್‍ಗೆ ಡೇಂಜರ್ ಆ ಪಕ್ಷ!

    ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ದೆಹಲಿ ಸರ್ಕಾರವು ಎಂಸಿಡಿ ಉದ್ಯೋಗಿಗಳಿಗೆ 13,000 ಕೋಟಿ ರೂ.ಗಳನ್ನು ವಂಚಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿತ್ತು. ಇದನ್ನೂ ಓದಿ: ರೈತರ ಬೇಡಿಕೆ ಈಡೇರಿಸದಿದ್ದರೆ ಆಗುತ್ತೆ ಹಿಂಸಾಚಾರ: ಮೇಘಾಲಯ ರಾಜ್ಯಪಾಲ ಎಚ್ಚರಿಕೆ

    ರಾಜ್ಯ ಚುನಾವಣಾ ಆಯುಕ್ತ ಎಸ್.ಕೆ. ಶ್ರೀವಾಸ್ತವ ಅವರು, ಕೇಂದ್ರ ಸರ್ಕಾರವು ಚುನಾವಣಾ ಆಯೋಗವು ಕಾನೂನುಬದ್ಧವಾಗಿ ಪರಿಶೀಲಿಸಬೇಕಾದ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ ನಂತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ (ಎಂಸಿಡಿ) ಚುನಾವಣಾ ದಿನಾಂಕಗಳ ಘೋಷಣೆಯನ್ನು ಕೇಂದ್ರವು ಮುಂದೂಡಿದೆ ಎಂದು ಮಾಹಿತಿ ನೀಡಿದ್ದರು.