Tag: ಆಪ್ತ ಸಹಾಯಕ

  • ಶಾಸಕ ಪ್ರಕಾಶ್‌ ಕೋಳಿವಾಡ ಆಪ್ತಸಹಾಯಕನ ಮನೆಗೆ ಕನ್ನ

    ಶಾಸಕ ಪ್ರಕಾಶ್‌ ಕೋಳಿವಾಡ ಆಪ್ತಸಹಾಯಕನ ಮನೆಗೆ ಕನ್ನ

    – 21 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿದ ಖದೀಮರು

    ಹಾವೇರಿ: ಶಾಸಕ ಪ್ರಕಾಶ್‌ ಕೋಳಿವಾಡ (Prakash Koliwad) ಅವರ ಆಪ್ತಸಹಾಯಕನ ಮನೆಗೆ ಕಳ್ಳರು ಕನ್ನ ಹಾಕಿದ್ದು, 21 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿ ಖದೀಮರು ಪರಾರಿಯಾಗಿರುವ ಘಟನೆ ಹಾವೇರಿ (Haveri) ಜಿಲ್ಲೆಯ ರಾಣೇಬೆನ್ನೂರು ನಗರದ ಕಂಠಿಬಿರೇಶ್ವರ ನಗರದಲ್ಲಿ ನಡೆದಿದೆ.

    ಶಾಸಕ ಪ್ರಕಾಶ್‌ ಕೋಳಿವಾಡ ಅಪ್ತ ಸಹಾಯಕರಾಗಿ ಕೆಲಸ ಮಾಡ್ತಿದ್ದ ಶ್ರೀನಿವಾಸ ಹಳ್ಳಳಿ ಅವರ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ. ಟ್ರಿಜೋರಿಯಲ್ಲಿಟ್ಟಿದ್ದ ಮಾಂಗಲ್ಯಸರ ಮತ್ತು ಕಿವಿ ಒಲೆ ಸೇರಿದಂತೆ ನಾಲ್ಕುವರೆ ಲಕ್ಷ ರೂ. ನಗದನ್ನು ದೋಚಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗ | ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿ ಮನೆಗಳ ಮೇಲೆ ಇಡಿ ದಾಳಿ

    ಶ್ರೀನಿವಾಸ ಅವರು ಬೆಂಗಳೂರಿಗೆ ತೆರಳಿದ್ದ ವೇಳೆ ಕಳ್ಳರು ಕೈಚಳಕ ತೋರಿಸಿದ್ದಾರೆ. ಘಟನಾ ಸ್ಥಳಕ್ಕೆ ರಾಣೇಬೆನ್ನೂರು ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರಾಣೇಬೆನ್ನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪರಂ ಪಿಎ ಆತ್ಮಹತ್ಯೆಗೆ ಟ್ವಿಸ್ಟ್- ರಮೇಶ್ ಮನೆಗೆ ಐಟಿಯವ್ರು ಹೋಗಿರೋ ಸಿಸಿಟಿವಿ ದೃಶ್ಯ ಲಭ್ಯ

    ಪರಂ ಪಿಎ ಆತ್ಮಹತ್ಯೆಗೆ ಟ್ವಿಸ್ಟ್- ರಮೇಶ್ ಮನೆಗೆ ಐಟಿಯವ್ರು ಹೋಗಿರೋ ಸಿಸಿಟಿವಿ ದೃಶ್ಯ ಲಭ್ಯ

    ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಸಾವಿಗೆ ಐಟಿ ಅಧಿಕಾರಿಗಳೇ ಕಾರಣ ಎಂದು ರಮೇಶ್ ಕುಟುಂಬಸ್ಥರು, ಕೈನಾಯಕರು ದೂರಿದ್ದಾರೆ. ಆದರೆ ಐಟಿ ಅಧಿಕಾರಿಗಳು ನಾವು ರಮೇಶ್ ಮನೆ ಮೇಲೆ ಐಟಿ ದಾಳಿ ನಡೆಸಿಲ್ಲ. ಅಲ್ಲದೆ ಯಾವುದೇ ಹೇಳಿಕೆಯನ್ನೂ ಪಡೆದಿಲ್ಲ. ದಾಳಿ ವೇಳೆ ಪರಮೇಶ್ವರ್ ನಿವಾಸದಲ್ಲೇ ಇದ್ದ ರಮೇಶ್ ಹೇಳಿಕೆಯನ್ನ ಪಂಚನಾಮೆಗಾಗಿ ಪಡೆಯಲಾಗಿದೆಯಷ್ಟೇ ಅಂತ ಸ್ಪಷ್ಟಪಡಿಸಿದ್ದಾರೆ. ಆದರೆ ಐಟಿ ಅಧಿಕಾರಿಗಳು, ಉಲ್ಲಾಳದಲ್ಲಿರುವ ರಮೇಶ್ ಮನೆಗೆ ಹೋಗಿ ಬಂದಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭಿಸಿದೆ.

    ಹೌದು. ಕಳೆದ ಮೂರು ದಿನಗಳಿಂದ ಐಟಿ ಅಧಿಕಾರಿಗಳು ಪರಮೇಶ್ವರ್ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದರು. ಶನಿವಾರ ನಸುಕಿನ ಜಾವ 3.30ರ ಸುಮಾರಿಗೆ ಎಲ್ಲಾ ಅಂತ್ಯಗೊಳಿಸಿ ಐಟಿ ಅಧಿಕಾರಿಗಳು ವಾಪಸ್ ಆಗಿದ್ದರು. ಈ ವೇಳೆ ರಮೇಶ್ ಕೂಡ ಪರಮೇಶ್ವರ್ ಜೊತೆಯೇ ಇದ್ದರು. ಐಟಿ ರೇಡ್ ನೋಡಿದ್ದ ರಮೇಶ್ ತುಂಬಾ ಹೆದರಿದ್ದರು. ಇದನ್ನ ತಮ್ಮ ಸಾಹೇಬ್ರು ಪರಮೇಶ್ವರ್ ಬಳಿಯೂ ಹಂಚಿಕೊಂಡಿದ್ದರು. ಆಗ ಪರಮೇಶ್ವರ್, ರಮೇಶ್‍ಗೆ ಧೈರ್ಯ ಹೇಳಿ, ಈಗ ಇಲ್ಲೇ ಮಲಗು ಬೆಳಗ್ಗೆ ಮನೆಗೆ ಹೋಗು ಅಂದಿದ್ದರು. ಇದನ್ನೂ ಓದಿ: ಪರಂ ಪಿಎ ಸೂಸೈಡ್ ಪ್ರಕರಣ – ಇಂದು ರಾಮನಗರದ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ

    ಸಾಹೇಬ್ರ ಮಾತಿನಂತೆ ಬೆಳಗ್ಗೆ 6 ಗಂಟೆಗೆ ಹೊರಟ ರಮೇಶ್ ಆತ್ಮಹತ್ಯೆಗೆ ನಿರ್ಧಾರ ಮಾಡಿದಂತಿತ್ತು. ಹೀಗಾಗಿ ತಮ್ಮ ಉಲ್ಲಾಳ ನಿವಾಸಕ್ಕೆ ಬಂದು ಕುಟುಂಬಸ್ಥರ ಜೊತೆ 2 ತಾಸು ಕಳೆದು, ತಿಂಡಿ ತಿಂದು 9 ಗಂಟೆ 7 ನಿಮಿಷಕ್ಕೆ ಸರಿಯಾಗಿ ಮನೆಯಿಂದ ಹೊರಬಂದಿದ್ದರು. ಈ ವೇಳೆ ಮನೆಯವರಿಗೆಲ್ಲ ಟಾಟಾ ಮಾಡಿದ್ದರು. ವಿದಾಯದ ಅರಿವಿಲ್ಲದ ಕುಟುಂಬಸ್ಥರು ರಮೇಶ್ ನನ್ನ ಸಂತೋಷದಿಂದಲೇ ಕಳುಹಿಸಿಕೊಟ್ಟರು. ಅಲ್ಲಿಂದ ರಮೇಶ್ ನೇರವಾಗಿ ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‍ಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪರಮೇಶ್ವರ್ ಆಪ್ತ ರಮೇಶ್ ಐಟಿಗೆ ಬೆದರಿದ್ರಾ? ಕೊನೆ ಕ್ಷಣ ಹೇಗಿತ್ತು?

    ಐಟಿ ಅಧಿಕಾರಿಗಳು ನಾವು ರಮೇಶ್ ಮನೆ ಮೇಲೆ ದಾಳಿಯೇ ನಡೆಸಿಲ್ಲ ಎಂದು ಹೇಳಿದ್ದಾರೆ. ಆದರೆ ಅ.10ರಂದು ಮಧ್ಯಾಹ್ನ 1.15ರ ಸುಮಾರಿಗೆ ಐಟಿ ಅಧಿಕಾರಿಗಳು ರಮೇಶ್ ಅವರ ಉಲ್ಲಾಳ ನಿವಾಸಕ್ಕೆ ಬಂದು ಕೆಲವೊಂದು ದಾಖಲೆಗಳನ್ನು ಹೊತ್ತೊಯ್ದಿದ್ದಾರೆ. ಅಲ್ಲದೇ ರಮೇಶ್ ಪಂಚಾನಾಮೆ ಮಾಡಿ ಹವಾಲಾ ಬಗ್ಗೆ, ಮೆಡಿಕಲ್ ಸೀಟ್‍ಗಳು ಎಷ್ಟಕ್ಕೆ ಮಾರಾಟವಾಗಿದೆ ಅಂತೆಲ್ಲಾ ಪ್ರಶ್ನೆ ಮಾಡಿ ಬೆದರಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೆಲ್ಲಾ ನೋಡಿದ ರಮೇಶ್ ಭಯಗೊಂಡಿದ್ದಾರೆ. ಇಂದು ನಮ್ಮನ್ನು ಸಾಕ್ಷಿಯಾಗಿ ಮಾಡಿದ್ದಾರೆ. ಮುಂದಿನ ದಿನ ನನ್ನನ್ನೂ ಆರೋಪಿಯನ್ನಾಗಿ ಮಾಡಬಹುದು. ಇದರಿಂದ ನನ್ನ ಮಾನ ಹೋಗುತ್ತೆ ಅಂತ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಮೇಶ್ ಡೆತ್‍ನೋಟ್‍ ನಲ್ಲಿ ಪರೋಕ್ಷವಾಗಿ ಐಟಿ ಬೆದರಿಕೆಯನ್ನ ಬಿಚ್ಚಿಟ್ಟಿದ್ದಾರೆ. ಹೀಗಾಗಿ ಐಟಿ ಇಲಾಖೆ ಸ್ಪಷ್ಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದನ್ನೂ ಓದಿ: ಪರಮೇಶ್ವರ್ ಪಿಎ ರಮೇಶ್ ವಿಚಾರಣೆ ನಡೆಸಿಲ್ಲ: ಐಟಿ ಸ್ಪಷ್ಟನೆ

    ಈ ನಡುವೆ, ಐಟಿ ಅಧಿಕಾರಿಗಳ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ರಮೇಶ್ ಸಹೋದರ ಸತೀಶ್ ದೂರು ಕೊಟ್ಟಿದ್ದಾರೆ. ಪೊಲೀಸರು ಸಿಆರ್‍ಪಿಸಿ ಸೆಕ್ಷನ್ 174ರ ಅಡಿ ಅಸಹಜ ಸಾವು ಎಂದು ಕೇಸ್ ದಾಖಲಿಸಿಕೊಂಡಿದ್ದಾರೆ.

    https://www.youtube.com/watch?v=U7jgbwAAatQ

  • ಮೊದಲ ದಿನವೇ ಆಪ್ತನ ವಿರುದ್ಧ ಬಿಎಸ್‍ವೈ ಗರಂ

    ಮೊದಲ ದಿನವೇ ಆಪ್ತನ ವಿರುದ್ಧ ಬಿಎಸ್‍ವೈ ಗರಂ

    ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಬಿ.ಎಸ್.ಯಡಿಯೂರಪ್ಪ ಅವರು ಆಪ್ತ ಸಹಾಯಕ ಸಂತೋಷ್ ವಿರುದ್ಧ ಗರಂ ಆಗಿದ್ದಾರೆ.

    ಪ್ರಮಾಣವಚನ ಕಾರ್ಯಕ್ರಮದ ಬಳಿಕ ಬಿ.ಎಸ್.ಯಡಿಯೂರಪ್ಪ ಅವರು ರಾಜಭವನದಿಂದ ತೆರಳುತ್ತಿದ್ದರು. ಈ ವೇಳೆ ನಮ್ಮ ಗಾಡಿ ಎಲ್ಲೋ? ಯಾಕೆ ಅಷ್ಟು ದೂರ ಕಾರನ್ನು ನಿಲ್ಲಿಸಿದ್ದಾನೆ ಎಂದು ಕೋಪದಿಂದಲೇ ಆಪ್ತ ಸಹಾಯಕ ಸಂತೋಷ್‍ನನ್ನು ಪ್ರಶ್ನಿದರು.

    ಬಿಎಸ್‍ವೈ ಕೋಪವನ್ನು ಅರಿತ ಸಂತೋಷ್, ಕಾರು ಚಾಲಕ ತಿಂಡಿ ತಿನ್ನಲು ಹೋಗಿದ್ದಾನೆ ಎಂದು ತಿಳಿಸಿದರು. ಆಗ ಫುಲ್ ಗರಂ ಆದ ಬಿ.ಎಸ್.ಯಡಿಯೂರಪ್ಪ ಅವರು, ತಿಂಡಿ ತಿನ್ನೋಕೆ ಹೋಗು ಅಂತ ಹೇಳಿಬಿಡು ಎಂದು ಗುಡುಗಿದರು. ಈ ವೇಳೆ ಅಲ್ಲಿಗೆ ಬಂದಿದ್ದ ಮತ್ತೊಂದು ಕಾರನ್ನು ಹತ್ತಿ ಪ್ರಯಾಣ ಬೆಳೆಸಿದರು.

  • ವಿಧಾನಸೌಧದ ಬಳಿ ಹಣ ಸಿಕ್ಕಿದ್ದು ಭ್ರಷ್ಟರ ಧೈರ್ಯಕ್ಕೆ ಸಾಕ್ಷಿ: ಸಂತೋಷ್ ಹೆಗ್ಡೆ

    ವಿಧಾನಸೌಧದ ಬಳಿ ಹಣ ಸಿಕ್ಕಿದ್ದು ಭ್ರಷ್ಟರ ಧೈರ್ಯಕ್ಕೆ ಸಾಕ್ಷಿ: ಸಂತೋಷ್ ಹೆಗ್ಡೆ

    ಧಾರವಾಡ: ವಿಧಾನ ಸೌಧದ ವೆಸ್ಟ್ ಗೇಟ್ ಬಳಿಯ ರಕ್ಷಣಾ ಸಿಬ್ಬಂದಿಗೆ ತಪಾಸಣೆ ವೇಳೆ ಭಾರೀ ಮೊತ್ತದ ಹಣ ಸಿಕ್ಕಿರುವುದು ಭ್ರಷ್ಟಾಚಾರಿಗೆ ಎಷ್ಟು ಧೈರ್ಯವಿದೆ ಎನ್ನುವುದನ್ನು ತೋರಿಸುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.

    ನಗರದಲ್ಲಿ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಧಾನಸೌಧದ ಬಳಿ ಹಣ ಸಿಕ್ಕಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಇಂತಹ ಘಟನೆ ನಡೆದಿತ್ತು. ಆದರೆ ಇದು ಭ್ರಷ್ಟಾಚಾರದ ವಿಚಾರವಲ್ಲ. ಭ್ರಷ್ಟಾಚಾರಿಗಳಿಗೆ ಎಷ್ಟು ಧೈರ್ಯವಿದೆ ಎನ್ನುವುದು ತೋರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಮಂತ್ರಿಗಳ ಆಪ್ತ ಸಹಾಯಕರೇ ಘಟನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು. ಇದರಲ್ಲಿ ಮಂತ್ರಿಗಳದ್ದು ಎಷ್ಟಿದೆ ಎಂಬುವುದು ಹೇಳುವುದಕ್ಕೆ ಹೋಗುವುದಿಲ್ಲ. ಆದರೆ ಮಂತ್ರಿಗಳ ಪಿಎ ಗಳಿಗೆ ಅಷ್ಟು ಹಣ ಯಾರು ಕೊಡೋದಿಲ್ಲ. ಇದರಲ್ಲಿ ದೊಡ್ಡವರ ಕೈವಾಡವಿದೆ ಎಂದು ಅನ್ನಿಸುತ್ತದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು. ಯಾರ ಕೈವಾಡವಿದೆ ಎನ್ನುವುದು ತಿಳಿಯಬೇಕಿದೆ ಆಗ್ರಹಿಸಿದರು. ಇದನ್ನು ಓದಿ: ವಿಧಾನಸೌಧದ ಗೇಟ್ ಬಳಿ ಹಣ ಸಿಕ್ಕ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

    ಈ ಘಟನೆಯ ಮೂಲಕ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಾ ಎಂಬುವುದು ತಿಳಿಯುತ್ತದೆ. ವಿಚಾರಣೆ ಮಾಡದೇ ಇದ್ದರೆ, ಅದು ಬೇರೆ ಆರ್ಥ ಪಡೆದುಕೊಳ್ಳುತ್ತೆ ಎಂದರು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಧಾನಸೌಧದ ಗೇಟ್ ಬಳಿ ಹಣ ಸಿಕ್ಕ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

    ವಿಧಾನಸೌಧದ ಗೇಟ್ ಬಳಿ ಹಣ ಸಿಕ್ಕ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

    ಬೆಂಗಳೂರು: ವಿಧಾನಸೌಧ ಪ್ರವೇಶದ ಗೇಟ್ ಬಳಿ 25.76 ಲಕ್ಷ ರೂ. ಹಣ ಸಿಕ್ಕ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಟೈಪಿಸ್ಟ್ ಮೋಹನ್ ಬಳಿ ಸಿಕ್ಕ ಹಣದ ಹಿಂದೆ ಮತ್ತೊಬ್ಬ ಸಚಿವರ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ವೆಂಕಟರಮಣಪ್ಪ ಆಪ್ತ ಸಹಾಯಕ ಕೃಷ್ಣಮೂರ್ತಿ ಎಂಬವರಿಗೆ ವಿಧಾನಸೌಧ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆ ವೇಳೆ ಟೈಪಿಸ್ಟ್ ಮೋಹನ್ ಕೃಷ್ಣಮೂರ್ತಿ ಅವರ ಬಗ್ಗೆ ಮಾಹಿತಿ ನೀಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಹಣ ಯಾರಿಗೆ ಸಂಬಂಧಿಸಿದ್ದು ಹಾಗೂ ಯಾವ ಕಾರಣಕ್ಕೆ ಹಣ ತರಲಾಗಿತ್ತು ಎಂಬ ಬಗ್ಗೆ ಉತ್ತರ ನೀಡುವಂತೆ ಕೃಷ್ಣ ಅವರಿಗೆ ನೋಟಿಸ್‍ನಲ್ಲಿ ಪೊಲೀಸರು ಮಾಹಿತಿ ಕೇಳಿದ್ದಾರೆ.

    ಸದ್ಯ ಪೊಲೀಸರು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಸಚಿವ ವೆಂಕಟರಮಣಪ್ಪ ಅವರ ಕೈವಾಡ ಇದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ. ಈ ಹಿಂದೆ ಕೃಷ್ಣಮೂರ್ತಿ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ಹಲವರ ಬಳಿ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸಚಿವ ವೆಂಕಟರಮಣಪ್ಪ ಅವರ ಎಲ್ಲಾ ಕಾರ್ಯಗಳನ್ನು ಅವರ ಪುತ್ರ ನೋಡಿಕೊಳ್ಳುತ್ತಿದ್ದು, ಈ ಹಣವನ್ನು ಅವರಿಗೆ ತಲುಪಿಸಲು ತಂದಿದ್ದರು ಎನ್ನಲಾಗಿದೆ.

    ಇಂದು ಪೊಲೀಸರ ವಿಚಾರಣೆಯಲ್ಲಿ ಟೈಪಿಸ್ಟ್ ಮೋಹನ್ ವಿಚಾರಣೆಯನ್ನು ವಿಧಾನಸಭೆ ಪೊಲೀಸರು ನಡೆಸಿದ್ದರು. ಈ ವಿಚಾರಣೆಯಲ್ಲಿ ಮೋಹನ್ ಸಚಿವರ ಆಪ್ತ ಸಹಾಯಕರ ಹೆಸರು ಬಾಯ್ಬಿಟ್ಟಿದ್ದಾನೆ. ಈ ಹಿಂದೆ ವಿಧಾನಸಭೆಯಲ್ಲಿ ಹಣದ ಹೊಳೆ ಹರಿಯುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದರು. ಅಲ್ಲದೇ ಇದಕ್ಕೆ ಕಡಿವಾಣ ಹಾಕುವುದಾಗಿ ಎಚ್‍ಡಿಕೆ ಆಶ್ವಾಸನೆ ನೀಡಿದ್ದರು. ಆದರೆ ಸದ್ಯ ಅವರ ಸರ್ಕಾರದ ಸಚಿವರ ಆಪ್ತ ಸಹಾಯಕರ ಹೆಸರು ಪ್ರಕರಣದಲ್ಲಿ ಕೇಳಿ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪ್ತ ಸಹಾಯಕನಿಗೆ ಸಂಬಳವೇ ಕೊಟ್ಟಿಲ್ವಂತೆ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್

    ಆಪ್ತ ಸಹಾಯಕನಿಗೆ ಸಂಬಳವೇ ಕೊಟ್ಟಿಲ್ವಂತೆ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್

    ಉಡುಪಿ: ರಾಜ್ಯಸಭಾ ಸದಸ್ಯ, ಕೇಂದ್ರ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ತಮ್ಮ ಆಪ್ತ ಸಹಾಯಕನಿಗೆ ಲಕ್ಷಗಟ್ಟಲೆ ಸಂಬಳ ಬಾಕಿಯಿಟ್ಟಿದ್ದಾರಂತೆ. ವರ್ಷಗಟ್ಟಲೆ ಕಾದರೂ ಸಂಬಳ ಕೊಟ್ಟಿಲ್ವಂತೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ರೂ ಆಸ್ಕರ್ ಪರ್ಸ್ ಬಿಚ್ಚಿಲ್ವಂತೆ.

    ಆಸ್ಕರ್ ಆಪ್ತ ಸಹಾಯಕ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಮಾಡಲಿದ್ದಾರೆ. ಆಸ್ಕರ್ ಅವರ ಮಣಿಪಾಲ ವರ್ಕ್ ಶಾಪ್ ನಲ್ಲಿ ನಂತರ ಮನೆಯಲ್ಲಿ 1972ರಿಂದ 1987ರವರಗೆ ಉಡುಪಿಯ ಅಂಬಲ್ಪಾಡಿಯ ಗೋಪಾಲ ಪೂಜಾರಿ ಕೆಲಸಕ್ಕಿದ್ದರು. ಮೊದಲು ಸೂಪರ್ ವೈಸರ್ ಆಗಿದ್ದ ಗೋಪಾಲ್ ಪೂಜಾರಿ ನಂತರ ಆಪ್ತ ಸಹಾಯಕರಾದರು. ಈ ಸಂದರ್ಭದಲ್ಲಿ ಸಂಬಳ ನೀಡಿಲ್ಲ. ಆ ಮೇಲೆ ಸಂಬಳ ಕೊಡುವುದಾಗಿ ಹೇಳುತ್ತಾ ದಿನ ದೂಡಿದರು.

    ಈವರೆಗೆ ನನಗೆ 6 ಲಕ್ಷ 10 ಸಾವಿರ ರೂಪಾಯಿ ಸಂಬಳದ ಹಣ ಕೊಡೋದು ಬಾಕಿಯಿದೆ ಅಂತ ಗೋಪಾಲ ಪೂಜಾರಿ ಆರೋಪಿಸಿದ್ದಾರೆ. 1995ರಲ್ಲಿ ಸೋನಿಯಾಗಾಂಧಿಗೆ ದೂರು ನೀಡಿದ್ದೆ. ಸೋನಿಯಾಗಾಂಧಿ ಆಸ್ಕರ್ ಅವರನ್ನು ಕರೆದು ಸಂಬಳ ಕೊಡಿ ಎಂದು ತಾಕೀತು ಮಾಡಿದ್ದರು. ಆದ್ರೂ ಅವರು ಹಣ ಕೊಡಲಿಲ್ಲ. ಮಗಳ ಮದುವೆ ಸಂದರ್ಭದಲ್ಲಾದ್ರೂ ಕೊಡಬಹುದು ಎಂದು ಕಾದು ಈಗ ಮೋಸ ಹೋಗಿದ್ದೇನೆ ಎಂದು ಅವರು ಹೇಳಿದರು.

    ಕಾರ್ಮಿಕ ಇಲಾಖೆ, ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ರೂ ಪ್ರಯೋಜನವಿಲ್ಲ ಎಂದು ಗೋಪಾಲ್ ಪೂಜಾರಿ ದೂರಿದ್ದಾರೆ. ಏಪ್ರಿಲ್ 1 ರವರೆಗೆ ಗಡುವು ನೀಡಿರುವ ಅವರು, ಏಪ್ರಿಲ್ 2ರಂದು ಉಪವಾಸ ಕೂರುವುದಾಗಿ ಹೇಳಿದ್ದಾರೆ. ಗೋಪಾಲ್ ಪೂಜಾರಿ ಪತ್ನಿ ಚಂಚಲ ಅನಾರೋಗ್ಯದಿಂದ ಬಳಲುತ್ತಿದ್ದು ಸಂಬಂಧಿಕರಿಂದ ಸಹಾಯ ಯಾಚಿಸುವಂತಾಗಿದೆ ಎಂದು ಹೇಳಿದರು.

    15 ದಿನದ ಹಿಂದೆ ಆಸ್ಕರ್ ಗೆ ಪತ್ರ ಬರೆದಿದ್ದೆ. ಅದಕ್ಕೆ ಕಾರ್ಮಿಕ ಇಲಾಖೆ ಅಧಿಕಾರಿಕೊಟ್ಟ ಹಿಂಬರವನ್ನೂ ಲಗತ್ತಿಸಿದ್ದೆ. ಇದಕ್ಕೂ ಅವರಿಂದ ಉತ್ತರ ಬಂದಿಲ್ಲ ಎಂದು ಹೇಳಿದರು. ನಿಗಮ ಮಂಡಳಿಗೆ ನೇಮಕ ಮಾಡುತ್ತೇನೆ ಎಂದು ಒಂದು ಬಾರಿ ಆಸ್ಕರ್ ಭರವಸೆ ಕೊಟ್ಟಿದ್ದರು ಎಂಬುದನ್ನು ಗೋಪಾಲ್ ಪೂಜಾರಿ ನೆನಪಿಸಿಕೊಂಡರು.