Tag: ಆಪ್ತರು

  • ರವಿ ಬೆಳಗೆರೆ ಅಸ್ತಂಗತ – ಒಡನಾಟ ಹಂಚಿಕೊಂಡ ಆಪ್ತರು

    ರವಿ ಬೆಳಗೆರೆ ಅಸ್ತಂಗತ – ಒಡನಾಟ ಹಂಚಿಕೊಂಡ ಆಪ್ತರು

    ಬೆಂಗಳೂರು: ರವಿ ಬೆಳಗೆರೆ ನನ್ನ ನಾಲ್ಕು ದಶಕಗಳ ಸ್ನೇಹಿತ, ಸಂಗಾತಿ, ಜೀವದ ಗೆಳೆಯ. ಎಂಬತ್ತರ ದಶಕದಲ್ಲಿ ಆತ ಧಾರವಾಡ ವಿವಿಯಲ್ಲಿ ಓದುತ್ತಿದ್ದ. ಆತನ ಸಹಪಾಠಿ ನನ್ನ ಚಳವಳಿಯ ಒಡನಾಡಿ ಅಶೋಕ ಶೆಟ್ಟರ್ ಮೂಲಕ ಪರಿಚಯ. ಪರಿಚಯ ಕ್ರಮೇಣ ಸ್ನೇಹವಾಯಿತು. ಮುಂದೆ ಆತ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ನನ್ನ ಸಹೋದ್ಯೋಗಿಯಾದಾಗ ಬಾಂಧವ್ಯ ಇನ್ನಷ್ಟು ನಿಕಟವಾಯಿತು. ರವಿ, ನಾನು, ಜಿ.ಎಚ್.ರಾಘವೇಂದ್ರ ಎಷ್ಟೋ ಸಂಜೆಗಳನ್ನು ನಮ್ಮದೇ ಲೋಕದಲ್ಲಿ ಕಳೆದೆವು. ದಿನಗಟ್ಟಲೇ ಮಾತಾಡಿದೆವು. ನನ್ನ ಬರಹ ಇಷ್ಟ ಪಡುತ್ತಿದ್ದ ಆತ ನನ್ನಿಂದ ಬರೆಸಿದ ಎಂದು ರವಿ ಬೆಳೆಗೆರೆ ಬಗ್ಗೆ ಅಂಕಣಕಾರ ಸನತ್ ಕುಮಾರ್ ಬೆಳಗಲಿ ಹೇಳಿದ್ದಾರೆ.

    ಬಳ್ಳಾರಿಯ ರವಿ ಧಾರವಾಡಕ್ಕೆ ಓದಲು ಬಂದು ಅಶೋಕ ಶೆಟ್ಟರ ಸ್ನೇಹ ದಿಂದ ಎಡಪಂಥೀಯನಾಗಿ ಬದಲಾದ. ಜೀವನದಲ್ಲಿ ತುಂಬ ಕಷ್ಟ ಪಟ್ಟು ಬರಿಗೈಲಿ ಬೆಂಗಳೂರಿಗೆ ಬಂದು ಸಾಕಷ್ಟು ಬೆಳೆದ. ಹಾಯ್ ಬೆಂಗಳೂರು ಪತ್ರಿಕೆ ಮಾತ್ರವಲ್ಲ ಪ್ರಾರ್ಥನಾ ಶಾಲೆ ಕಟ್ಟಿ ಬೆಳೆಸಿದ. ಇಷ್ಟೆಲ್ಲ ಬೆಳೆದರು ನನ್ನಂಥ ಹಳೆಯ ಗೆಳೆಯರನ್ನು ರವಿ ಮರೆತಿರಲಿಲ್ಲ. ನೆನಪಾದಾಗಲೆಲ್ಲ ಗುರುವೇ ಬಾ ಎಂದು ಕರೆದು ತಾಸುಗಟ್ಟಲೇ ಮಾತಾಡುತ್ತಿದ್ದ. ಫೋನ್ ನಲ್ಲಿ ಆರೋಗ್ಯ ವಿಚಾರಿಸುತ್ತಿದ್ದ. ‘ಇವರು ಮಾಕ್ರ್ಸ್ ವಾದ ಕಲಿಸಿದ ಗುರು’ ಎಂದು ಎಲ್ಲರಿಗೂ ಪರಿಚಯಿಸುತ್ತಿದ್ದ. ಆತ ‘ಹಾಯ್ ಬೆಂಗಳೂರು’ ನಲ್ಲಿ ಬರೆದದ್ದು ತಪ್ಪೆಂದು ಹೇಳಿದರೆ ಒಪ್ಪಿಕೊಳ್ಳುತ್ತಿದ್ದ ಎಂದಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಟು ಬೆಂಗಳೂರು – ರವಿ ಬೆಳಗೆರೆ ಜೀವನ ಪಯಣ ಹೇಗಿತ್ತು..?

    ಜಾತಿ-ಮತ ಮೀರಿದ ಮನುಷ್ಯ ಪ್ರೇಮಿ ಆತ. ಹಿಂದು ಹುಡುಗಿಯೊಬ್ಬಳು ಮುಸ್ಲಿಂ ಹುಡುಗಿಯನ್ನು ಪ್ರೀತಿಸಿ ಮದುವೆಯಾದಾಗ ಆಕೆಯ ಬೆಂಗಾವಲಿಗೆ ನಿಂತ. ಎಲ್ಲಕ್ಕಿಂತ ಮಿಗಿಲಾಗಿ ದೈತ್ಯ ಬರಹಗಾರ. ಓದಿಸಿಕೊಂಡು ಹೋಗುವ ಶೈಲಿ ಆತನದ್ದು. ನಾನು ತುಂಬಾ ಕಷ್ಟದಲ್ಲಿದ್ದಾಗ ಧೈರ್ಯ ಹೆಳಿ ನೆರವಿಗೆ ಬಂದ ರವಿಯನ್ನು ಹೇಗೆ ಮರೆಯಲಿ ಎಂದು ಅಂಕಣಕಾರ ಸನತ್ ಕುಮಾರ್ ಬೆಳಗಲಿ ಮೆಲುಕು ಹಾಕಿಕೊಂಡರು. ಇದನ್ನೂ ಓದಿ:  ನಾನು ನಿಮ್ಮ ಜೊತೆ ಇದ್ದೀನಿ ಕಣೋ ಅಂದಿದ್ರು: ರವಿ ಪುತ್ರ ಕಣ್ಣೀರು

    ಅವನು ಕವಿವಿದಲ್ಲಿ ನನಗಿಂತ ಒಂದು ವರ್ಷ ಜ್ಯೂನಿಯರ್. ಆಗಲೇ ಆತ ಅನೇಕ ವಿಷಯಗಳ ರಹಸ್ಯದ ಮೊಟ್ಟೆಯಾಗಿದ್ದ. ಅನೇಕ ಸಲ ಅವನ ಬಗ್ಗೆ ನನಗೆ ವಿಸ್ಮಯ ಅನ್ನಿಸುತ್ತಿತ್ತು. ನಾನು ಸಂ.ಕ ಬಿಟ್ಟು ಇಂಡಿಯನ್ ಎಕ್ಸ್ ಪ್ರೆಸ್ ಹಾಗೂ ಕನ್ನಡಪ್ರಭಕ್ಕೆ ಬಂದಾಗ ಆತ ಸಂ.ಕ ಸೇರಿದ. ಇಪ್ಪತ್ತು ದಿನಗಳ ಹಿಂದಷ್ಟೇ ಮಾತಾಡಿದ್ದ ಎಂದು ಹಿರಿಯ ಪತ್ರಕರ್ತ ಸರಜೂ ಕಾಟ್ಕರ್ ಸಂತಾಪ ಸೂಚಿಸಿದರು. ಇದನ್ನೂ ಓದಿ: ಖ್ಯಾತ ಬರಹಗಾರ, ಪತ್ರಕರ್ತ ರವಿ ಬೆಳಗೆರೆ ಇನ್ನಿಲ್ಲ

    ಯಾರೂ ಮರೆಯಲಾರದ ಪತ್ರಕರ್ತ ರವಿಯವರು. ಜಯಕುಮಾರ್, ಆರಾಧ್ಯ ಸಂಯುಕ್ತ ಕರ್ನಾಟಕದಲ್ಲಿದ್ದಾಗ ಅದೊಂದು ದಿನ ಅಲ್ಲಿಗೇ ಹೋದೆ. ಸೆಕ್ಸ್ ವರ್ಕರ್ಸ್ ಮಧ್ಯೆ ಕೆಲಸ ಮಾಡುವ ಅವಕಾಶ ಬಂದಿದೆ ಎಂದಾಗ, ಎಲ್ಲರಿಗಿಂತಲೂ ಮೊದಲು ನನಗೆ ಧೈರ್ಯ ಹೇಳಿ, ಜರ್ನಲಿಸಂ ಯಾರಾದ್ರೂ ಮಾಡಬಹುದು, ಈ ಅವಕಾಶ ಕಳೆದುಕೊಳ್ಳಬೇಡ ಅಂತ ಮುನ್ನುಗ್ಗಲು ಕಲಿಸಿದವರು. ಡಿ ಫೀಲ್ಡ್ ನಲ್ಲಿ ನನ್ನ ತಾಕಕಾಟಗಳನ್ನು ಸದಾ ಹಂಚಿಕೊಳ್ಳುತ್ತಿದ್ದೆ, ಹಾಯ್ ಜೊತೆಯಲ್ಲಿ ಆರಂಭದಿಂದಲೂ ಇದ್ದೆ. ಹಾಯ್ ನಲ್ಲಿ ಅಂಕಣವನ್ನೂ ಬರೆದೆ. ಅವರಿಗಿದ್ದ ಸಾವಿರಾರು ಅತಿ ಆತ್ಮೀಯ ಕುಟುಂಬಗಳಲ್ಲಿ ನಮ್ಮದೂ ಕೂಡ. ಹೇಗೆ ಮರೆಯುವುದು..? ಅವರಿಗೆ ಅಂತಿಮ ನಮನಗಳು.. ???? ಅವೆಷ್ಟು ನೆನಪುಗಳ ಸಾಲು..! ಎಂದು ಲೇಖಕಿ ಲೀಲಾ ಸಂಪಿಗೆ ಸಂತಾಪ ಸೂಚಿಸಿದರು.

  • ಸೂಪರ್ ಸಿಎಂ ರೇವಣ್ಣ ಆಪ್ತರಿಗೂ ಐಟಿ ಶಾಕ್

    ಸೂಪರ್ ಸಿಎಂ ರೇವಣ್ಣ ಆಪ್ತರಿಗೂ ಐಟಿ ಶಾಕ್

    ಹಾಸನ: ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರ ಆಪ್ತ ಮನೆ ಮೇಲೂ ಐಟಿ ದಾಳಿ ನಡೆದಿದೆ.

    ಚನ್ನರಾಯಪಟ್ಟಣ ಹಾಸನ ಸೇರಿ ಮೂರು ಕಡೆ ಐಟಿ ರೇಡ್ ಆಗಿದೆ. ಅಶ್ವಥ್ ನಾರಾಯಣ್ ರೆಡ್ಡಿ, ರಾಯಗೌಡ ಸೇರಿದಂತೆ ಒಟ್ಟು ಮೂವರ ಮನೆಗಳ ಮೇಲೆ ದಾಳಿ ನಡೆದಿದೆ.

    ಹಾಸನದ ರೇವಣ್ಣ ಅವರ ಇಲಾಖೆಗೆ ಸೇರಿದಂತೆ ಪಿಡ್ಲ್ಬೂಡಿ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ. ಅಧಿಕಾರಿಗಳ 2 ವಾಹನದಲ್ಲಿ 8 ಮಂದಿ ಇರುವ ತಂಡ ಬಂದಿದೆ. ಅಧಿಕಾರಿಗಳು ಈಗ ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. 8 ಅಧಿಕಾರಿಗಳು ಇನ್ನೋವಾ ಕಾರಿನಲ್ಲಿ ಬಂದು ದಾಳಿ ನಡೆಸಿದ್ದಾರೆ.

    ಜಿಲ್ಲಾದ್ಯಂತ ಲೋಕೋಪಯೋಗಿ ಇಲಾಖೆಗೆ ಸೇರಿದಂತೆ ಏನೂ ಕಾಮಗಾರಿ ನಡೆದಿದೆ? ಇತ್ತೀಚೆಗೆ ಸರ್ಕಾರ ಬಂದ ನಂತರ ಏನೇನೂ ಕಾಮಗಾರಿ ನಡೆದಿದೆ? ಯೋಜನೆಗಳಿಗೆ ಕೋಟ್ಯಂತರ ರೂ. ಬಂದಿರುವ ಹಣ ಹೇಗೆ ಬಳಕೆಯಾಗಿದೆ? ಎನ್ನುವುದನ್ನು ಪರಿಶೀಲನೆ ನಡೆಸುತ್ತಿದ್ದಾರೆ.

    ಹಾಸನ ಜಿಲ್ಲಾದ್ಯಂತ ಚನ್ನರಾಯಪಟ್ಟಣ ತಾಲೂಕು ಹೊಳೆನರಸೀಪುರ ಈಗ ಬಂದಿರುವ ಯೋಜನೆಗಳಿಗೆ ಕಾಮಗಾರಿ ನಡೆಯುತ್ತಿರುವ ತಾಲೂಕುಗಳಾಗಿದ್ದು ಯಾವ ಯಾವ ಇಲಾಖೆಗೆ ಎಷ್ಟು ಹಣ ವರ್ಗಾವಣೆ ಆಗಿದೆ ಎನ್ನುವದನ್ನು ಪರಿಶೀಲನೆ ನಡೆಸುತ್ತಿದ್ದಾರೆ.

  • ಬಯಲಾಯ್ತು ಪ್ರಹ್ಲಾದ್ ಜೋಷಿ ಆಪ್ತರ ಆಟ

    ಬಯಲಾಯ್ತು ಪ್ರಹ್ಲಾದ್ ಜೋಷಿ ಆಪ್ತರ ಆಟ

    – ನಕಲಿ ದಾಖಲೆ ಸೃಷ್ಟಿಸಿ ವಿವಿಯಲ್ಲಿ ಹುದ್ದೆ ಗಿಟ್ಟಿಸಿಕೊಂಡಿದ್ದ ಪರಮಾಪ್ತರು

    ಬೆಂಗಳೂರು: ಬೀದರ್ ನಲ್ಲಿರುವ ಕರ್ನಾಟಕ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಸಂಸದ ಪ್ರಹ್ಲಾದ್ ಜೋಶಿಯವರ ಪರಮಾಪ್ತರು ನಕಲಿ ದಾಖಲೆ ಸೃಷ್ಟಿಸಿ ಹುದ್ದೆ ಪಡೆದುಕೊಂಡಿದ್ದ ವಿಷಯ ಈಗ ಬಯಲಾಗಿದೆ.

    ಧಾರವಾಡದ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷರಾಗಿರುವ ಈರೇಶ್ ಅಂಚಟಗೇರಿ ಹಾಗೂ ಟಿ ಮುಕುಂದ ವರ್ಮ ಸುಳ್ಳು ಪ್ರಮಾಣ ಪತ್ರ ಕೊಟ್ಟು ವಿವಿಯಲ್ಲಿ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದರು. ಇವರಿಬ್ಬರೂ ಸಹ ಪ್ರಹ್ಲಾದ್ ಜೋಷಿಯವರ ಬಲಗೈ ಬಂಟರಾಗಿದ್ದಾರೆ.

    ವಿವಿಯಲ್ಲಿ ಪ್ರಗತಿಪರ ಮೀನುಗಾರರು, ರೈತರು ಹಾಗೂ ಶಿಕ್ಷಣ ತಜ್ಞರು ಸದಸ್ಯರಾಗಲು ಅವಕಾಶ ಇದೆ. ಆದರೆ ಇಬ್ಬರೂ ಒಂದು ಬಾರಿ ಪ್ರಗತಿಪರ ರೈತ ಹಾಗೂ ಇನ್ನೊಂದು ಬಾರಿ ಶಿಕ್ಷಣ ತಜ್ಞ ಎಂದು ಹೇಳಿ ಎರಡು ಬಾರಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೇ ಪ್ರಹ್ಲಾದ್ ಜೋಷಿಯವರ ಪ್ರಭಾವದ ಮೂಲಕ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಇದಕ್ಕೆ ರಾಜ್ಯಪಾಲರೂ ಅಂಕಿತ ಹಾಕಿದ್ದರೆನ್ನುವ ಆರೋಪವು ಕೇಳಿ ಬರುತ್ತಿದೆ.

    ವಿವಿ ನಿಯಮಗಳ ಪ್ರಕಾರ ಒಂದು ಬಾರಿ ಮಾತ್ರ ಬೋರ್ಡ್ ಮೆಂಬರ್ ಆಗಿ ಆಯ್ಕೆಯಾಗಬಹುದು. ಆದರೆ ಜೋಷಿ ಆಪ್ತರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ವಿವಿಯ ಬೋರ್ಡ್ ಸದಸ್ಯ ಸ್ಥಾನಗಳು ಕೇವಲ ಪ್ರಗತಿಪರ ರೈತರು, ಮೀನುಗಾರರು ಹಾಗೂ ಶಿಕ್ಷಣ ತಜ್ಞರಿಗೆ ಮೀಸಲಿದೆ. ಆದರೆ ಇವರಿಬ್ಬರೂ ರಾಜಕೀಯ ಪ್ರಭಾರ ಬೀರಿ ತಮ್ಮ ವಶ ಮಾಡಿಕೊಂಡಿದ್ದಾರೆ. ಸದ್ಯ ಜೋಷಿ ಆಪ್ತರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ವಿವಿಯ ನಿವೃತ್ತ ಸಹಾಯಕ ಆಡಳಿತಾಧಿಕಾರಿ ಎಸ್.ಈಶ್ವರಪ್ಪ, ಅರ್ಹರಿಗೆ ಸಿಗಬೇಕಾದ ಹುದ್ದೆಗಳು ಪುಡಾರಿಗಳು, ರಾಜಕೀಯ ಪ್ರಭಾವಿಗಳಿಗೆ ಸಿಗುತ್ತಿವೆ. ರಾಜಕೀಯ ಪ್ರಭಾವ ಬೀರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಎರಡೆರಡು ಬಾರಿ ಸದಸ್ಯರಾಗುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv