Tag: ಆಪ್ತಮಿತ್ರ

  • ಆಪ್ತಮಿತ್ರ ದುರ್ಘಟನೆ ನೆನಪಿಸಿಕೊಂಡ ರಮೇಶ್ ಅರವಿಂದ್

    ಆಪ್ತಮಿತ್ರ ದುರ್ಘಟನೆ ನೆನಪಿಸಿಕೊಂಡ ರಮೇಶ್ ಅರವಿಂದ್

    ಟ, ನಿರ್ದೇಶಕ ಹಾಗೂ ನಿರೂಪಕ ರಮೇಶ ಅರವಿಂದ್ (Ramesh Aravind) 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ದೈಜಿ ಸಿನಿಮಾದ (Daiji Cinema) ಟೀಸರ್ ಕೂಡಾ ರಿಲೀಸ್ ಆಗಿದೆ. ಈ ವೇಳೆ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ನಟ ವಿಷ್ಣುವರ್ಧನ್ (Vishnuvardhan) ಅವರ ಜೊತೆಗಿನ ದಿನಗಳು ಹಾಗೂ ಅವರಿಗೆ ಸಲ್ಲಬೇಕಾದ ಗೌರವಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ಜೊತೆಗೆ ಆಪ್ತಮಿತ್ರ-3 ಸಿನಿಮಾ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

    ಆಪ್ತಮಿತ್ರ (Apthamitra) ಸಿನಿಮಾವನ್ನ ಮಾಡಿಯಾದ್ಮೇಲೆ ಒಂದು ದುರ್ಘಟನೆ ನಡೆಯಿತು. ಇದಾದ ಬಳಿಕ ಆಪ್ತರಕ್ಷಕ ಅಂದ್ರೆ ಆಪ್ತಮಿತ್ರ ಸಿನಿಮಾದ ಭಾಗ-2 ಸಿನಿಮಾ ರಿಲೀಸ್ ನಂತರ ಮತ್ತೊಂದು ಆಘಾತವೇ ನಡೆದುಹೋಯ್ತು. ಕಾಕತಾಳಿಯವೋ ಅಥವಾ ಆಕಸ್ಮಿಕವೋ ಇವೆರಡು ಘಟನೆ ನಡೆದ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಆಪ್ತಮಿತ್ರ ಸಿರೀಸ್ ಅಂದ್ರೆ ಕೊಂಚ ಹಿಂಜರಿಕೆ ಉಂಟಾಗಿದೆ. ಇದು ಕಲಾವಿದರಿಗೂ ಸಹ ಆಘಾತ, ಆತಂಕವನ್ನ ಸೃಷ್ಟಿಸಿದೆ. ಹೀಗಾಗಿ ಆಪ್ತಮಿತ್ರ ಪಾರ್ಟ್-3 ಬರುತ್ತಾ ಎನ್ನುವ ಹಲವಾರು ಪ್ರಶ್ನೆಗಳು ಆಗಾಗ ಕೇಳಿ ಬರುತ್ತಿವೆ. ಇದನ್ನೂ ಓದಿ: ಉಪೇಂದ್ರ ದಂಪತಿ ಫೋನ್ ಹ್ಯಾಕ್ ಸೈಬರ್ ವಂಚಕರು ದೋಚಿದ್ದೆಷ್ಟು ಹಣ?

    ಆಪ್ತಮಿತ್ರ ಸಿನಿಮಾದ ಪಾರ್ಟ್-3 ಸ್ಕಿಪ್ಟ್‌ ಬಂದಿದೆಯಾ..? ಬಂದರೆ ಸಿನಿಮಾ ಮಾಡುತ್ತಿರಾ ಎನ್ನುವ ಪ್ರಶ್ನೆಗೆ ನಟ ರಮೇಶ್ ಅರವಿಂದ್ ಪ್ರತಿಕ್ರಿಯೆ ನೀಡಿದ್ದಾರೆ. `ನನ್ನ ಪ್ರಕಾರ ಅದೊಂದು ಸಬ್ಜೆಕ್ಟ್, ಅದೊಂದು ಸ್ಕಿçÃನ್, ಅದೊಂದು ಪಿಕ್ಸಿಯಸ್ ಕ್ಯಾರೆಕ್ಟರ್ ನಾಗವಲ್ಲಿ ಅನ್ನೋದು. ಆದರೆ ಆಪ್ತರಕ್ಷಕ ಮಾಡುವ ವೇಳೆ ಅಂತಹದೊಂದು ಕಥೆ ಬಂದಿತ್ತು. ಆಪ್ತಮಿತ್ರ, ಆಪ್ತರಕ್ಷಕ ಆದ್ಮೇಲೆ ನಾನು ಮಾಡ್ತಿರುವ ಹಾರರ್ ಸಿನಿಮಾ ದೈಜಿನೇ’ ಎಂದು ಹೇಳಿದ್ದಾರೆ.

  • ರಜನಿಕಾಂತ್ ಜೊತೆ ನಟಿಸುವ ಚಾನ್ಸ್ ಸಿಕ್ಕಿದ್ದು ಹೇಗೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ ಅವಿನಾಶ್

    ರಜನಿಕಾಂತ್ ಜೊತೆ ನಟಿಸುವ ಚಾನ್ಸ್ ಸಿಕ್ಕಿದ್ದು ಹೇಗೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ ಅವಿನಾಶ್

    ಕಿರುತೆರೆ ಜನಪ್ರಿಯ ಶೋ ‘ವೀಕೆಂಡ್ ವಿತ್ ರಮೇಶ್’ (Weekend With Ramesh) ಕಾರ್ಯಕ್ರಮದಲ್ಲಿ ಖ್ಯಾತ ನಟ ಅವಿನಾಶ್ ಅವರ ಯಶೋಗಾಥೆಯನ್ನ ತಿಳಿಸಿದ್ದಾರೆ. ಈ ವಾರದ ಅತಿಥಿಯಾಗಿ ಸಾಧಕರ ಸಾಲಿನಲ್ಲಿ ನಟ ಅವಿನಾಶ್ ಅಲಂಕರಿಸಿದ್ದಾರೆ. 37 ವರ್ಷಗಳ ಸಿನಿ ಜರ್ನಿಯಲ್ಲಿ ಬಹುಭಾಷಾ ನಟನಾಗಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವಿನಾಶ್ ನಟಿಸಿದ್ದಾರೆ. ಕಾಲಿವುಡ್‌ನಲ್ಲಿ ರಜನಿಕಾಂತ್ (Rajanikanth) ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ಹೇಗೆ? ಎಂದು ಅವಿನಾಶ್ (Actor Avinash) ಬಿಚ್ಚಿಟ್ಟಿದ್ದಾರೆ.

    ಬಹುಭಾಷೆಗಳಲ್ಲಿ ನಟ, ಖಳನಟ, ಪೋಷಕ ಪಾತ್ರ ಸೇರಿದಂತೆ ನಾನಾ ಪಾತ್ರಗಳಲ್ಲಿ ಅವಿನಾಶ್ ನಟಿಸಿ ಗಮನ ಸೆಳೆದಿದ್ದಾರೆ. ‘ಚಂದ್ರಮುಖಿ’ ಚಿತ್ರದ ಮೂಲಕ ರಜನಿಕಾಂತ್ ಜೊತೆಗೆ ಅವಿನಾಶ್ ನಟಿಸಿದರು. ಅಸಲಿಗೆ, ಕನ್ನಡದ ‘ಆಪ್ತಮಿತ್ರ’ (Apthamitra Film) ಚಿತ್ರದ ರೀಮೇಕ್ ‘ಚಂದ್ರಮುಖಿ’ ಸಿನಿಮಾದಲ್ಲಿ ಅವಿನಾಶ್‌ಗೆ ಚಾನ್ಸ್ ಸಿಕ್ಕಿತ್ತು.

    ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ‘ಆಪ್ತಮಿತ್ರ’ ಚಿತ್ರದಲ್ಲಿ ಅವಿನಾಶ್ ಅವರು ಆಚಾರ್ಯ ರಾಮಚಂದ್ರ ಶಾಸ್ತ್ರಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದರು. ಅವರ ಈ ಪಾತ್ರ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಅವಿನಾಶ್ ಅವರ ಖಡಕ್ ನಟನೆ ಮೆಚ್ಚಿ, ‘ಆಪ್ತಮಿತ್ರ’ ಚಿತ್ರವನ್ನ ತಮಿಳಿನಲ್ಲಿ ‘ಚಂದ್ರಮುಖಿ’ (Chandramukhi) ಆಗಿ ರೀಮೇಕ್ ಮಾಡುವ ಸಂದರ್ಭದಲ್ಲಿ ಶಾಸ್ತ್ರಿಗಳ ಪಾತ್ರಕ್ಕೆ ಅವಿನಾಶ್ ಅವರೇ ಬೇಕು ಅಂತ ರಜನಿಕಾಂತ್ ಸೂಚಿಸಿದರಂತೆ. ಇದನ್ನೂ ಓದಿ:ಕುಟುಂಬ ಸಮೇತ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಭೇಟಿ

    ರಜನಿಕಾಂತ್ (Rajanikanth) ಜೊತೆಗೆ ಆಕ್ಟ್ ಮಾಡ್ತೀನಿ ಅಂತ ನಾನು ಕನಸು ಕೂಡ ಕಂಡಿರಲಿಲ್ಲ. ‘ಆಪ್ತಮಿತ್ರʼ ಆದ್ಮೇಲೆ ಅದರ ರೀಮೇಕ್‌ನಲ್ಲಿ ಅವಿನಾಶ್ ಅವರೇ ನಟಿಸಬೇಕು ಅಂತ ರಜನಿಕಾಂತ್ ಹೇಳ್ತಿದ್ದಾರೆ ಅಂತಲೇ ಸುದ್ದಿ ಬಂತು. ಆಮೇಲೆ ಪಿ.ವಾಸು ಅವರೂ ಕೂಡ ರಜನಿಕಾಂತ್ ಹೇಳ್ತಿದ್ದಾರೆ ನೀವೇ ಮಾಡಿ ಎಂದರು. ಈ ವಿಚಾರ ಕೇಳಿ ನನಗೆ ಸರ್ಪ್ರೈಸ್ ಆಯ್ತು. ಮೊದಲನೇ ದಿನ ಶೂಟಿಂಗ್‌ಗೆ ಹೋದೆ. ‌’ಚಂದ್ರಮುಖಿ’ ಸೆಟ್‌ನಲ್ಲೇ ನಾನು ಮೊದಲನೇ ಬಾರಿಗೆ ರಜನಿಕಾಂತ್ ಅವರನ್ನ ನೋಡಿದ್ದು ಎಂದು ಅವಿನಾಶ್ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟಿದ್ದಾರೆ.

    ರಜನಿಕಾಂತ್‌, ಜ್ಯೋತಿಕಾ, ನಯನತಾರಾ, ಅವಿನಾಶ್‌ ನಟನೆಯ ಚಂದ್ರಮುಖಿ ಸಿನಿಮಾ ಕೂಡ ಸೂಪರ್‌ ಡೂಪರ್‌ ಹಿಟ್‌ ಆಗಿತ್ತು. ಅಲ್ಲೂ ಅವಿನಾಶ್‌ ಅವರ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.