Tag: ಆಪಲ್ ಬಾಕ್ಸ್ ಸ್ಟುಡಿಯೋಸ್

  • ಎರಡೆರಡು ಸಿನಿಮಾಗಳ ಮೂಲಕ ಕಮ್ ಬ್ಯಾಕ್ ಆಗಿ ಕುತೂಹಲ ಮೂಡಿಸಿದ ರಮ್ಯಾ

    ಎರಡೆರಡು ಸಿನಿಮಾಗಳ ಮೂಲಕ ಕಮ್ ಬ್ಯಾಕ್ ಆಗಿ ಕುತೂಹಲ ಮೂಡಿಸಿದ ರಮ್ಯಾ

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ಬಂದಾಯ್ತು. ಹಲವು ವರ್ಷಗಳಿಂದ ನಡೆಯುತ್ತಿದ್ದ ಈ ಚರ್ಚೆಗೆ ನಿರ್ಮಾಪಕಿಯಾಗುವ ಮೂಲಕ ವಾಪಸ್ಸಾಗಿ ಫುಲ್ ಸ್ಟಾಪ್ ಇಟ್ಟಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿರುವ ರಮ್ಯಾ, ಆ ಸಂಸ್ಥೆಗೆ ಆಪಲ್ ಬಾಕ್ಸ್ ಸ್ಟುಡಿಯೋಸ್ ಎಂದು ಹೆಸರಿಟ್ಟಿ‍ದ್ದಾರೆ. ಗಣೇಶ ಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯನ್ನೇ ಕೊಟ್ಟಿದ್ದಾರೆ.

    ಗಣೇಶ ಹಬಕ್ಕೆ ಸಿಹಿ ಸುದ್ದಿ ಕೊಡುವುದಾಗಿ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದ ರಮ್ಯಾ, ಯಾವೆಲ್ಲ ಸುದ್ದಿಗಳನ್ನು ಕೊಡಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದರು. ಬಹುಶಃ ನಟಿಯಾಗಿ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಆಪಲ್ ಬಾಕ್ಸ್ ಕೊಡುವ ಮೂಲಕ ಸಿಹಿ ಸಿಹಿ ಹಣ್ಣುಗಳನ್ನೇ ನೀಡಿದ್ದಾರೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    RAMYA

    ನಿರ್ಮಾಣ ಸಂಸ್ಥೆಯ ಆಳ ಅಗಲವನ್ನು ಅರ್ಥ ಮಾಡಿಕೊಂಡಿರುವ ರಮ್ಯಾ, ಸಂಸ್ಥೆಯ ಕುರಿತಾದ ಮಾಹಿತಿಯನ್ನು ಕೆಆರ್.ಜಿ ಸೇರಿದಂತೆ ಹಲವರಿಂದ ಪಡೆದಿದ್ದಾರೆ. ಕೆ.ಆರ್.ಜಿ ಸ್ಟುಡಿಯೋ ಸಹಕಾರದಲ್ಲೇ ತಮ್ಮ ಸಂಸ್ಥೆಯನ್ನು ಕಟ್ಟುವ ಕನಸು ಕಂಡಿದ್ದಾರೆ. ಹೀಗಾಗಿ ಏಕಕಾಲಕ್ಕೆ ಎರಡು ಸಿನಿಮಾಗಳನ್ನು ಮಾಡುತ್ತಿರುವುದಾಗಿಯೂ ಅವರು ಘೋಷಣೆ ಮಾಡಿದ್ದಾರೆ. ಆಪಲ್ ಬಾಕ್ಸ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಮೊದಲ ಬಾರಿಗೆ ಯಾರಿಗೆ ಅವಕಾಶ ಸಿಗುತ್ತದೆ ಎಂದು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇದೀಗ ನಿರ್ಮಾಪಕಿ: ಗಣೇಶ ಹಬ್ಬಕ್ಕೆ ಅಭಿಮಾನಿಗಳಿಗೆ ಆಪಲ್ ಬಾಕ್ಸ್ ಗಿಫ್ಟ್

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇದೀಗ ನಿರ್ಮಾಪಕಿ: ಗಣೇಶ ಹಬ್ಬಕ್ಕೆ ಅಭಿಮಾನಿಗಳಿಗೆ ಆಪಲ್ ಬಾಕ್ಸ್ ಗಿಫ್ಟ್

    ಗಣೇಶ ಹಬ್ಬದಂದು ಬುಧವಾರ ಬೆಳಗ್ಗೆ 11.15ಕ್ಕೆ ಸ್ವೀಟ್ ನ್ಯೂಸ್ ಕೊಡುವುದಾಗಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕುತೂಹಲ ಮೂಡಿಸಿದ್ದರು. ಸಿಹಿ ಸುದ್ದಿ ಯಾವುದಿರಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದರು. ಕೊನೆಗೂ ರಮ್ಯಾ ಸಿಹಿ ಸುದ್ದಿ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ. ಈವರೆಗೂ ಬೇರೆಯವರ ಬ್ಯಾನರ್ ನಲ್ಲಿ ನಟಿಸುತ್ತಿದ್ದ ರಮ್ಯಾ, ಸ್ವತಃ ತಮ್ಮದೇ ಬ್ಯಾನರ್ ಶುರು ಮಾಡಿ ಅಚ್ಚರಿ ಮೂಡಿಸಿದ್ದಾರೆ.

    ರಮ್ಯಾ ಕೊಡುವ ಸ್ವೀಟ್ ನ್ಯೂಸ್ ಯಾವುದು ಎನ್ನುವುದರ ಸುತ್ತ ಹಲವು ವಿಶ್ಲೇಷಣೆಗಳು ನಡೆದಿದ್ದವು. ನಟಿಯಾಗಿ ಅವರು ವಾಪಸ್ಸಾಗುತ್ತಿದ್ದಾರಾ? ಅಥವಾ ನಿರ್ಮಾಪಕಿಯಾಗಿ ನಿರ್ಮಾಣ ಸಂಸ್ಥೆಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರಾ ಎನ್ನುವ ಕುತೂಹಲ ಮೂಡಿಸಿತ್ತು. ಕೊನೆಗೂ ರಮ್ಯಾ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ತಮ್ಮದೇ ಆಪಲ್ ಬಾಕ್ಸ್ ಸ್ಟುಡಿಯೋಸ್ ಸಂಸ್ಥೆಯನ್ನು ಶುರು ಮಾಡಿದ್ದು, ಈ ಸಂಸ್ಥೆಯ ಮೂಲಕ ಸಿನಿಮಾ ಮಾಡಲಿದ್ದಾರೆ. ಈ ಸಂಸ್ಥೆಯ ಮೂಲಕ ಎರಡು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವುದಾಗಿಯೂ ತಿಳಿಸಿದ್ದಾರೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಈ ಹಿಂದೆ ರಾಜ್ ಬಿ ಶೆಟ್ಟಿ ಅವರ ಸಿನಿಮಾದ ಮೂಲಕ ರಮ್ಯಾ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗಲಿದ್ದಾರೆ ಎನ್ನುವ ಸುದ್ದಿ ಇತ್ತು. ಆದರೆ, ಇಂಥದ್ದೊಂದು ಮಾತುಕತೆ ನಡೆದೇ ಇಲ್ಲ ಎಂದೂ ಹೇಳಲಾಗುತ್ತಿದೆ. ರಾಜ್ ಬಿ ಶೆಟ್ಟಿ ಅವರು ರಮ್ಯಾಗಾಗಿ ಯಾವುದೇ ಸಿನಿಮಾ ಮಾಡುತ್ತಿಲ್ಲ ಎನ್ನುವ ಮಾಹಿತಿಯೂ ಇದೆ. ಹಾಗಾಗಿ ರಮ್ಯಾ ಬ್ಯಾನರ್ ನಲ್ಲಿ ಬರುವ ಮೊದಲ ಸಿನಿಮಾ ಯಾವುದು ಎನ್ನುವ ಕುತೂಹಲ ಮೂಡಿದೆ.

    Live Tv
    [brid partner=56869869 player=32851 video=960834 autoplay=true]