ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಸ್ಕ್ವಾಡ್ರನ್ ಲೀಡರ್ ಶಿವಾಂಗಿ ಸಿಂಗ್ (Squadron Leader Shivangi Singh) ಅವರ ಜೊತೆ ಫೋಟೋ ತೆಗೆಸಿಕೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಟಾಂಗ್ ಕೊಟ್ಟಿದ್ದಾರೆ.
ಸಶಸ್ತ್ರ ಪಡೆಗಳ ಅಧ್ಯಕ್ಷೆ ಮತ್ತು ಸುಪ್ರೀಂ ಕಮಾಂಡರ್ ಆಗಿರುವ 67 ವರ್ಷದ ದ್ರೌಪದಿ ಮುರ್ಮು ಅವರು ಇಂದು ಹರ್ಯಾಣದ ಅಂಬಾಲಾ ವಾಯುನೆಲೆಗೆ ತೆರಳಿ ರಫೇಲ್ ಯುದ್ಧ ವಿಮಾನದಲ್ಲಿ (Rafale Fighter Jet) ಹಾರಾಟ ನಡೆಸಿದರು. ಹಾರಾಟ ನಡೆಸಿದ ಬಳಿಕ ಶಿವಾಂಗಿ ಸಿಂಗ್ ಅವರ ಜೊತೆ ದ್ರೌಪದಿ ಮುರ್ಮು ಫೋಟೋ ಕ್ಲಿಕ್ಕಿಸಿದರು.
Shivangi Singh before and after operation sindoor.🤫 pic.twitter.com/FMJQGGeJyl
— Pakistan Strategic Prism (@StrategicPrism1) July 18, 2025
ಯಾರಿದು ಶಿವಾಂಗಿ ಸಿಂಗ್?
ಆಪರೇಷನ್ ಸಿಂಧೂರದ (Operation Sindoor) ಸಮಯದಲ್ಲಿ ಪಾಕಿಸ್ತಾನ (Pakistan) ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿತ್ತು. ಅದರಲ್ಲಿ ಶಿವಾಂಗಿ ಸಿಂಗ್ ಅವರನ್ನು ನಾವು ಸೆರೆ ಹಿಡಿದಿದ್ದೇವೆ ಎಂದು ಹೇಳಿತ್ತು. ಪತನಗೊಂಡ ರಫೇಲ್ ಯುದ್ಧ ವಿಮಾನದಿಂದ ಹಾರಿದ್ದ ಶಿವಾಂಗಿ ಸಿಂಗ್ ಅವರನ್ನು ನಾವು ಸೆರೆ ಹಿಡಿದಿದ್ದೇವೆ ಎಂದು ಹೇಳಿತ್ತು. ಇದನ್ನೂ ಓದಿ: ರಫೇಲ್‌ನಲ್ಲಿ ಹಾರಾಟ ನಡೆಸಿ ದಾಖಲೆ ಬರೆದ ರಾಷ್ಟ್ರಪತಿ ದ್ರೌಪದಿ ಮುರ್ಮು
ಭಾರತ ಇದಕ್ಕೆ ಪ್ರತಿಕ್ರಿಯಿಸಿ ನಮ್ಮ ಯಾವುದೇ ಪೈಲಟ್‌ಗಳನ್ನು ಪಾಕಿಸ್ತಾನ ಸೆರೆ ಹಿಡಿದಿಲ್ಲ. ಕಾರ್ಯಾಚರಣೆ ನಡೆಸಿ ನಮ್ಮ ಎಲ್ಲಾ ಪೈಲಟ್‌ಗಳು ಸುರಕ್ಷಿತವಾಗಿ ಮರಳಿದ್ದಾರೆ ಎಂದು ತಿಳಿಸಿತ್ತು.
President Droupadi Murmu at the Ambala Air Force Station. She will shortly take a sortie in the Rafale aircraft.#Rafale @rashtrapatibhvn pic.twitter.com/BPlnSZSJQW
— All India Radio News (@airnewsalerts) October 29, 2025
2023ರ ಏಪ್ರಿಲ್ 8ರಂದು ಅಸ್ಸಾಂನ ತೇಜ್‌ಪುರ ಏರ್‌ಬೇಸ್‌ನಲ್ಲಿ ಸುಖೋಯ್ -30 ಯುದ್ಧ ವಿಮಾನದಲ್ಲಿ ದ್ರೌಪದಿ ಮುರ್ಮು ಹಾರಾಟ ನಡೆಸಿದ್ದರು. ಇದಕ್ಕೂ ಮುನ್ನ ಭಾರತದ ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್ ಮತ್ತು ಅಬ್ದುಲ್ ಕಲಾಂ ಅವರು ಸುಖೋಯ್-30 ಫೈಟರ್ ಜೆಟ್‌ಗಳಲ್ಲಿ ಹಾರಾಟ ನಡೆಸಿದ್ದರು.
`ಆಪರೇಷನ್ ಸಿಂಧೂರ’ದ (Operation Sindoor) ವೇಳೆ ಅಂಬಾಲಾ ಏರ್‌ಬೇಸ್‌ನಿಂದ ಟೇಕಾಫ್ ಆದ ನಮ್ಮ ಫೈಟರ್ ಜೆಟ್‌ಗಳು ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ಏರ್‌ಸ್ಟ್ರೈಕ್ ಮಾಡಿದ್ದವು.












