Tag: ಆಪರೇಷನ್ ಲೋಟಸ್ ರಾಕೆಟ್

  • ಆಪರೇಷನ್ ಲೋಟಸ್ ಯಶಸ್ಸಿಗೆ `ಗರುಡ’ನ ಮೊರೆ ಹೋದ ಬಿಜೆಪಿ..!

    ಆಪರೇಷನ್ ಲೋಟಸ್ ಯಶಸ್ಸಿಗೆ `ಗರುಡ’ನ ಮೊರೆ ಹೋದ ಬಿಜೆಪಿ..!

    ಬೆಂಗಳೂರು: ಆಪರೇಷನ್ ಕಮಲದ ಬಳಿಕ ಇದೀಗ ಆಪರೇಷನ್ ಲೋಟಸ್ ರಾಕೆಟ್ ಹೆಸರಿನಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ತನ್ನತ್ತ ಸೆಳೆಯಲು ಮುಂದಾಗುತ್ತಿರುವ ಬೆನ್ನಲ್ಲೇ ಬಿಜೆಪಿ ಈಗ `ಗರುಡಚಯನ’ ಮಹಾಯಾಗದ ಮೊರೆ ಹೋಗಿದೆ.

    ಹೌದು. ಮೊನ್ನೆಯಿಂದಲೇ ಬಿಇಎಲ್ ವೃತ್ತದ ಬಳಿಯ ಗಣಪತಿ ದೇವಸ್ಥಾನದಲ್ಲಿ ಗರುಡಚಯನ ಯಾಗ ನಡೆಯುತ್ತಿದೆ. ಫೆಬ್ರವರಿ 10ರವರೆಗೆ ಈ ಮಹಾಯಾಗ ನಡೆಯಲಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಈ ಯಾಗಕ್ಕೆ ಬರೋಬ್ಬರಿ 30 ಲಕ್ಷ ಖರ್ಚಾಗುತ್ತಿದ್ದು, ಕೇಂದ್ರದ ಹಾಲಿ ಸಚಿವರೊಬ್ಬರು ಮತ್ತು ನಗರದ ಬಿಜೆಪಿ ಶಾಸಕರೊಬ್ಬರ ನೇತೃತ್ವದಲ್ಲಿ ಈ ಮಹಾಯಾಗ ನಡೆಯುತ್ತಿದೆ. 60 ವರ್ಷಗಳ ಹಿಂದೆ ಶೃಂಗೇರಿ ಮಠದಲ್ಲಿ ನಡೆದಿದ್ದ ಯಾಗ ಈ ಬಾರಿ ಬೆಂಗಳೂರಲ್ಲಿ ನಡೆಯುತ್ತಿದೆ. ಒಟ್ಟಿನಲ್ಲಿ ಅಪರೂಪದಲ್ಲೇ ಅಪರೂಪದ ಮಹಾಯಾಗ ನಡೆಸುತ್ತಿರುವ ಬಿಜೆಪಿ ನಾಯಕರ ಸರ್ಕಾರ ರಚಿಸುವ ಪ್ರಯತ್ನ ಕೈಗೂಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಷನ್ ಲೋಟಸ್ ರಾಕೆಟ್‍ಗೆ ತಿರುಗೇಟು ನೀಡಲು ಎಚ್‍ಡಿಕೆ ಸ್ಕೆಚ್

    ಆಪರೇಷನ್ ಲೋಟಸ್ ರಾಕೆಟ್‍ಗೆ ತಿರುಗೇಟು ನೀಡಲು ಎಚ್‍ಡಿಕೆ ಸ್ಕೆಚ್

    ಬೆಂಗಳೂರು: ಬಿಜೆಪಿ ಆಪರೇಷನ್ ಕಮಲ ಬಿಟ್ಟು, ಈಗ ಆಪರೇಷನ್ ಲೋಟಸ್ ರಾಕೆಟ್ ಮಾಡುತ್ತಿದೆ. ಆದರೆ ಆಪರೇಷನ್ ಲೋಟಸ್ ರಾಕೆಟ್‍ಗೆ ತಿರುಗೇಟು ನೀಡಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ಪ್ಲಾನ್ ಮಾಡಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರಿಗೆ ಟಾಂಗ್ ಕೊಡಲು ಪ್ಲಾನ್ ಮಾಡಿದ್ದಾರೆ. ಒಂದು ವೇಳೆ ಆಪರೇಷನ್ ಲೋಟಸ್ ರಾಕೆಟ್ ಯಶಸ್ವಿಯಾಗಿ ಕಾಂಗ್ರೆಸ್-ಜೆಡಿಎಸ್ 18 ಮಂದಿ ಶಾಸಕರು ರಾಜೀನಾಮೆ ಕೊಟ್ಟರೆ, ಆಗ ರಾಜ್ಯಪಾಲರು ಸಿಎಂ ಕುಮಾರಸ್ವಾಮಿ ಅವರಿಗೆ ವಿಶ್ವಾಸಮತ ಯಾಚನೆಗೆ ಸೂಚನೆ ಕೊಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ಈ ವೇಳೆ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆಗೆ ರಾಜ್ಯಪಾಲರಿಂದ ವಾರಗಳ ಕಾಲ ಸಮಯ ಕೇಳುವ ಸಾಧ್ಯತೆ ಇದೆ. ಇನ್ನು ಸಮಯ ಸಿಕ್ಕಿದರೆ ಬಿಜೆಪಿಯ ನಾಲ್ವರು ಶಾಸಕರಿಗೆ ರಿವರ್ಸ್ ಆಪರೇಷನ್ ಮಾಡುವ ಸಾಧ್ಯತೆಯೂ ಇದೆ. ಇದರ ಜೊತೆಗೆ ರಾಜೀನಾಮೆ ಕೊಟ್ಟ ಸಚಿವರಿಗೆ ಸ್ಪೀಕರ್ ಮುಂದಿಟ್ಟುಕೊಂಡು ಪಕ್ಷಾಂತರ ಕಾಯ್ದೆಯಡಿ ಅನರ್ಹಗೊಳಿಸುವ ಅಸ್ತ್ರವನ್ನು ಪ್ರಯೋಗಿಸಬಹುದು ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಒಂದೇ ಎಸೆತಕ್ಕೆ ಒಂದೂವರೆ ಡಜನ್ ವಿಕೆಟ್ ಪತನಕ್ಕೆ ಮುಹೂರ್ತ ಫಿಕ್ಸ್ – ಇದು ಕಟ್ಟಕಡೆಯ ಆಪರೇಷನ್

    ಒಂದೇ ಎಸೆತಕ್ಕೆ ಒಂದೂವರೆ ಡಜನ್ ವಿಕೆಟ್ ಪತನಕ್ಕೆ ಮುಹೂರ್ತ ಫಿಕ್ಸ್ – ಇದು ಕಟ್ಟಕಡೆಯ ಆಪರೇಷನ್

    -ಇದು ಆಪರೇಷನ್ ಕಮಲ ಅಲ್ಲ ಆಪರೇಷನ್ ಲೋಟಸ್ ರಾಕೆಟ್

    ಬೆಂಗಳೂರು: ಒಂದೇ ಎಸೆತಕ್ಕೆ ಒಂದೂವರೆ ಡಜನ್ ವಿಕೆಟ್ ಪತನಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಇದು ಬಿಜೆಪಿಯ ಕಟ್ಟಕಡೆಯ ಆಪರೇಷನ್ ಆಗಿದೆ. ಈ ಮಹಾಪತನ ನೂರಕ್ಕೆ ನೂರು ಖಚಿತವಾಗಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರ್ಕಾರ ಬೀಳುವುದು ಗ್ಯಾರಂಟಿ ಎಂಬ ಮಾತು ಕೇಳಿಬರುತ್ತಿದೆ.

    ಬಿಜೆಪಿ ತನ್ನ `ಆಪರೇಷನ್ ಕಮಲ’ಕ್ಕೆ `ಆಪರೇಷನ್ ಲೋಟಸ್ ರಾಕೆಟ್’ ಹೊಸ ಹೆಸರಿಟ್ಟು ಕಾರ್ಯಾಚರಣೆಗಿಳಿದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಂದ ಬರೋಬ್ಬರಿ 18 ಶಾಸಕರಿಂದ ರಾಜೀನಾಮೆ ಸಾಧ್ಯತೆ ಇದ್ದು, ಇನ್ನೆರಡು ದಿನದಲ್ಲಿ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಲಿದೆ.

    ಶಾಸಕರ ರಾಜೀನಾಮೆ:
    ಕಾಂಗ್ರೆಸ್ ಮತ್ತು ಜೆಡಿಎಸ್‍ನ ಒಟ್ಟು 18 ಮಂದಿ ಅತೃಪ್ತ ಶಾಸಕರಿಂದ ರಾಜೀನಾಮೆ ಪಕ್ಕವಾಗಿದ್ದು, ಅಧಿವೇಶನಕ್ಕೂ ಮೊದಲು 18 ಮಂದಿ ಶಾಸಕರಿಂದ ರಾಜೀನಾಮೆ ಸಾಧ್ಯತೆ ಇದೆ. ರಾಜೀನಾಮೆಗೂ ಮೊದಲು ಅತೃಪ್ತರ ಕೂಟ ರಾಜ್ಯಪಾಲರನ್ನು ಭೇಟಿ ಆಗಲಿದೆ. ನಮಗೆ ಈ ಸರ್ಕಾರದ ಮೇಲೆ ಕಿಂಚಿತ್ತೂ ನಂಬಿಕೆ ಇಲ್ಲ. ನಾವು ಸ್ಪೀಕರ್ ಬಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇವೆ. ಆದರೆ ಸ್ಪೀಕರ್ ಬಳಿ ಹೋಗಿ ರಾಜೀನಾಮೆ ಕೊಡಲು ನೀವು ಪೊಲೀಸ್ ಭದ್ರತೆ ಕೊಡಬೇಕು ಎಂದು ರಾಜ್ಯಪಾಲರ ಬಳಿ ಮಾತನಾಡಲಿದ್ದಾರೆ. ನಂತರ ಶಾಸಕರ ಮನವಿಯಂತೆ ಅಗತ್ಯ ಪೊಲೀಸ್ ರಕ್ಷಣೆಗೆ ಡಿಜಿಪಿಗೆ ರಾಜ್ಯಪಾಲರು ಸೂಚಿಸಬಹುದು ಎಂದು ಹೇಳಲಾಗುತ್ತಿದೆ.

    ಶಾಸಕರು ರಾಜ್ಯಪಾಲರ ಭೇಟಿ ಬಳಿಕ ಪೊಲೀಸರ ರಕ್ಷಣೆಯೊಂದಿಗೆ ಸೀದಾ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಪತ್ರ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೇ ಒಂದೇ ಟೈಮ್‍ಗೆ ಕಾಂಗ್ರೆಸ್-ಜೆಡಿಎಸ್ ಶಾಸಕರಿಂದ ರಾಜೀನಾಮೆ ಪತ್ರ ಸಲ್ಲಿಕೆಗೆ ತೀರ್ಮಾನಿಸಿದ್ದು, ನಮ್ಮ ಮೇಲೆ ಯಾರ ಒತ್ತಡವೂ ಇಲ್ಲ, ಸ್ವ-ಇಚ್ಛೆಯಿಂದ ರಾಜೀನಾಮೆ ಕೊಡುತ್ತಿದ್ದೇವೆ. ನಮ್ಮ ರಾಜೀನಾಮೆಯನ್ನ ನೀವು ಅಂಗೀಕಾರ ಮಾಡಲೇಬೇಕು ಎಂದು ಖುದ್ದು ಸ್ಪೀಕರ್ ಮುಂದೆ ಹಾಜರಾಗಿ ರಾಜೀನಾಮೆ ಪತ್ರ ಕೊಟ್ಟು ಶಾಸಕರಿಂದ ಅಲ್ಲೇ ವಿವರಣೆ ನೀಡುವ ಸಾಧ್ಯತೆಯೂ ಇದೆ.

    ಅಖಾಡಕ್ಕೆ ಬಿಜೆಪಿ ಎಂಟ್ರಿ:
    ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆ ಬಳಿಕ ಅಧಿಕೃತವಾಗಿ ಬಿಜೆಪಿ ಅಖಾಡಕ್ಕೆ ಎಂಟ್ರಿಯಾಗಲಿದ್ದು, ಶಾಸಕರ ರಾಜೀನಾಮೆ ಬಳಿಕ ಬಿಜೆಪಿ ನಾಯಕರ ನಿಯೋಗ ರಾಜ್ಯಪಾಲರನ್ನು ಭೇಟಿ ಆಗಲಿದೆ. ಈ ಸರ್ಕಾರಕ್ಕೆ ಬಹುಮತ ಇಲ್ಲ, ಅವರ ಶಾಸಕರೇ ರಾಜೀನಾಮೆ ನೀಡಿದ್ದಾರೆ. ಸಿಎಂ ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರಕ್ಕೆ ಸಂಖ್ಯಾಬಲವೇ ಇಲ್ಲ. ಹೀಗಾಗಿ ಕುಮಾರಸ್ವಾಮಿ ಸಿಎಂ ಆಗಿ ಮುಂದುವರಿಯಬಾರದು. ಕುಮಾರಸ್ವಾಮಿ ಸರ್ಕಾರ ರಾಜೀನಾಮೆ ಕೊಡಬೇಕು, ಇಲ್ಲವೇ ವಿಶ್ವಾಸಮತ ಸಾಬೀತಿಗೆ ಸೂಚಿಸಿ ತಕ್ಷಣವೇ ಬಿಜೆಪಿ ಮಧ್ಯಪ್ರವೇಶಿಸಿ ವಿಶ್ವಾಸಮತ ಸಾಬೀತಿಗೆ ಸಿಎಂ ಕುಮಾರಸ್ವಾಮಿ ಆದೇಶ ನೀಡಿ ರಾಜ್ಯಪಾಲರ ಮುಂದೆ ಬಿಜೆಪಿ ನಿಯೋಗದಿಂದ ಬೇಡಿಕೆ ಸಾಧ್ಯತೆ ಇದೆ.

    ಒಂದು ವೇಳೆ 18 ಮಂದಿ ಶಾಸಕರು ರಾಜೀನಾಮೆ ಕೊಟ್ಟರೆ ಆಗ ಸರ್ಕಾರ ಅಲ್ಪಮತಕ್ಕೆ ಕುಸಿತವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿಯವರನ್ನು ಕರೆಸಿಕೊಂಡು ರಾಜ್ಯಪಾಲರು ವಿವರಣೆ ಕೇಳಲಿದ್ದಾರೆ. ನಿಮ್ಮ ಮೈತ್ರಿಕೂಟದ 18 ಮಂದಿ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ನಿಮ್ಮ ಸರ್ಕಾರಕ್ಕೆ ಈಗ ಬಹುಮತ ಇಲ್ಲ. ಈ ಬೆಳವಣಿಗೆ ಬಗ್ಗೆ ಏನಂತೀರಿ? ಎಂದು ಸಿಎಂ ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡಲಿದ್ದಾರೆ. ಬಳಿಕ ನೀವು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸಬೇಕಾಗುತ್ತದೆ ಎಂದು ಹೇಳಿ ಬಹುಮತ ಸಾಬೀತಿಗೆ ಕುಮಾರಸ್ವಾಮಿಗೆ ರಾಜ್ಯಪಾಲರು ಗಡುವು ಕೊಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv