Tag: ಆಪರೇಷನ್ ಕಾಂಗ್ರೆಸ್

  • ಚುನಾವಣೆ ಹೊಸ್ತಿಲಲ್ಲಿ ಆಪರೇಷನ್‌ ಕಾಂಗ್ರೆಸ್‌ – ಕೊತ್ತುರು ಬಾಂಬ್‌ಗೆ ಸಮೃದ್ಧಿ, ವೆಂಕಟಶಿವಾರೆಡ್ಡಿ ಸ್ಪಷ್ಟನೆ

    ಚುನಾವಣೆ ಹೊಸ್ತಿಲಲ್ಲಿ ಆಪರೇಷನ್‌ ಕಾಂಗ್ರೆಸ್‌ – ಕೊತ್ತುರು ಬಾಂಬ್‌ಗೆ ಸಮೃದ್ಧಿ, ವೆಂಕಟಶಿವಾರೆಡ್ಡಿ ಸ್ಪಷ್ಟನೆ

    ಕೋಲಾರ: ಲೋಕಸಭಾ ಚುನಾವಣೆ (Lok Saba Election) ಹೊಸ್ತಿಲಲ್ಲಿ ಆಪರೇಷನ್ ಕಾಂಗ್ರೆಸ್ (Operation Congress) ಶುರುವಾಗಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಇಂಥಾದೊಂದು ಅನುಮಾನಕ್ಕೆ ಕಾರಣವಾಗಿದ್ದು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ (Kothur Manjunath) ಸಿಡಿಸಿದ ಬಾಂಬ್.

    ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ (Samruddhi Manjunath) ಹಾಗೂ ಶ್ರೀನಿವಾಸಪುರ ಶಾಸಕ ವೆಂಕಟಶಿವಾರೆಡ್ಡಿ (Venkatashiva Reddy) ಶೀಘ್ರ ಕಾಂಗ್ರೆಸ್ ಸೇರಲಿದ್ದಾರೆ ಎಂದು ಕೊತ್ತೂರು ಮಂಜುನಾಥ್ ಹೇಳಿಕೆ ನೀಡಿದ್ದಾರೆ.  ಇದನ್ನೂ ಓದಿ: ಜಿಮ್ಸ್ ಆಸ್ಪತ್ರೆಯಲ್ಲಿ ರೀಲ್ಸ್ ಮಾಡಿದ 38 ವಿದ್ಯಾರ್ಥಿಗಳು ಅಮಾನತು

     

    ಇಬ್ಬರು ಜೆಡಿಎಸ್ ಶಾಸಕರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಪರಮೇಶ್ವರ್‌ ಸಮ್ಮುಖದಲ್ಲಿ ಮಾತುಕತೆ ನಡೆದಿದೆ. ಸಚಿವ ಕೆ.ಹೆಚ್ ಮುನಿಯಪ್ಪ ಸಮ್ಮುಖದಲ್ಲಿ ಆಪರೇಷನ್ ನಡೆಯುತ್ತಿದೆ ಎಂದು ಕೊತ್ತೂರು ಮಂಜುನಾಥ್ ಹೇಳಿದ್ದಾರೆ. ಈ ಬೆಳವಣಿಗೆ ಜಿಲ್ಲೆಯಲ್ಲಿ ಹಾಗೂ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಸಂಸತ್ತಿನಲ್ಲಿ ಇಂದು ರಾಮ ಮಂದಿರ ಗೊತ್ತುವಳಿ: ಬಿಜೆಪಿ ಸಂಸದರಿಗೆ ವಿಪ್‌ ಜಾರಿ

    ಕೊತ್ತೂರು ಮಂಜುನಾಥ್ ಆಪರೇಷನ್ ಹಸ್ತ ಬಾಂಬ್‌ಗೆ ಜೆಡಿಎಸ್ ಶಾಸಕರು ಸ್ಪಷ್ಟನೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ದಿಗಾಗಿ ಸಿಎಂ, ಡಿಸಿಎಂ ಭೇಟಿಯಾಗಿ ಅನುದಾನ ಕೇಳಿದ್ದು ನಿಜ. ಈ ವೇಳೆ ಅವರು ಪಕ್ಷಕ್ಕೆ ಬರುವಂತೆ ಕರೆದಿದ್ದು ನಿಜ. ಆದರೆ ನಾವು ಯಾವತ್ತೂ ಪಕ್ಷಕ್ಕೆ ಬರುವುದಾಗಿ ಹೇಳಿಲ್ಲ ಎಂದು ಶಾಸಕ ಸಮೃದ್ದಿ ಮಂಜುನಾಥ್ ಹಾಗೂ ಜಿ.ಕೆ.ವೆಂಕಟಶಿವಾರೆಡ್ಡಿ ಆಪರೇಷನ್ ವಿಚಾರವನ್ನು ತಳ್ಳಿಹಾಕಿದ್ದಾರೆ.

    ಒಟ್ಟಿನಲ್ಲಿ ಲೋಕಸಭೆ ಚುನಾವಣೆಯ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರುಗಳ ರಾಜಕೀಯ ಪ್ರಹಸನಗಳು ಶುರುವಾಗಿದೆ. ಆಪರೇಷನ್ ಹಸ್ತ ನಿಜವೇ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

     

  • ಲೋಕಸಮರಕ್ಕೆ ಆಪರೇಷನ್ ಹಸ್ತ – ಕರಾವಳಿಯಿಂದ ಸ್ಪರ್ಧಿಸ್ತಾರಾ ಬಿಜೆಪಿಯ ಆ ಸಂಸದ?

    ಲೋಕಸಮರಕ್ಕೆ ಆಪರೇಷನ್ ಹಸ್ತ – ಕರಾವಳಿಯಿಂದ ಸ್ಪರ್ಧಿಸ್ತಾರಾ ಬಿಜೆಪಿಯ ಆ ಸಂಸದ?

    ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ (Vidhan Sabha Election) ಹೀನಾಯವಾಗಿ ಸೋತು, ಸದ್ಯ ನಾಯಕನಿಲ್ಲದೇ ಕಂಗೆಟ್ಟಿರುವ ಬಿಜೆಪಿಗೆ (BJP) ಠಕ್ಕರ್ ಕೊಡಲು ಕಾಂಗ್ರೆಸ್ (Congress) ಮುಂದಾಗಿದ್ದು ಕೇಂದ್ರದ ಮಾಜಿ ಸಚಿವ, ಹಾಲಿ ಸಂಸದರೊಬ್ಬರಿಗೆ ಗಾಳ ಹಾಕಿದೆ.

    ಹೌದು. ಲೋಕಸಭೆ ಚುನಾವಣೆಯನ್ನು (Lok Sabha Election) ದೃಷ್ಟಿಯಲ್ಲಿಟ್ಟುಕೊಂಡು ಆಪರೇಷನ್ ಹಸ್ತಕ್ಕೆ (Operation Congress) ಮುಂದಾಗಿರುವ ಕಾಂಗ್ರೆಸ್‌ ನಾಯಕರು ಎಸ್‍ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಸೇರಿ ಬಾಂಬೆ ಫ್ರೆಂಡ್ಸ್‌ನ ಹಲವರನ್ನು ಸೆಳೆಯಲು ಮುಂದಾಗುತ್ತಿದೆ. ಇದನ್ನು ಅರಗಿಸಿಕೊಳ್ಳಲು ಕಷ್ಟಪಡುತ್ತಿರುವ ಬಿಜೆಪಿಗೆ ಮತ್ತೊಂದು ಶಾಕ್ ನೀಡಲು ಕಾಂಗ್ರೆಸ್ ಪ್ಲಾನ್ ಮಾಡಿದೆ.  ಇದನ್ನೂ ಓದಿ: ನಮ್ಮ ಸಿದ್ಧಾಂತ ಒಪ್ಪಿ ಬರುವವರನ್ನ ನಾವು ಸ್ವಾಗತ ಮಾಡುತ್ತೇವೆ: ಜಿ.ಪರಮೇಶ್ವರ್‌

     

    ಹಿಂದುತ್ವದ ಪ್ರಯೋಗ ಶಾಲೆ ಎನಿಸಿರುವ ಕರಾವಳಿಯಲ್ಲೂ ಆಪರೇಷನ್‍ಗೆ ಕೈಹಾಕಿದೆ. ಕೇಂದ್ರದ ಮಾಜಿ ಸಚಿವ, ಹಾಲಿ ಸಂಸದರೊಬ್ಬರಿಗೆ (BJP MP) ಗಾಳ ಹಾಕಲು ಯತ್ನಿಸಿದೆ. ಪ್ರಬಲ ಸಮುದಾಯಕ್ಕೆ ಸೇರಿದ ಅವರನ್ನು ದಕ್ಷಿಣ ಕನ್ನಡದಲ್ಲಿ ಕಣಕ್ಕಿಳಿಸುವ ಮೂಲಕ ಮಂಗಳೂರು, ಉಡುಪಿ, ಚಿಕ್ಕಮಗಳೂರು, ಮಡಿಕೇರಿಯಲ್ಲೂ ಲಾಭ ಪಡೆಯುವುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ.

    ಆಪರೇಷನ್ ಹಸ್ತ ನಡೆಯುತ್ತಿರುವುದನ್ನು ಕೈ ನಾಯಕರು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಬಿಜೆಪಿ, ಜೆಡಿಎಸ್‍ನ 10-15 ಶಾಸಕರು, ಮಾಜಿ ಶಾಸಕರು ಕಾಂಗ್ರೆಸ್ ಸೇರಲು ರೆಡಿಯಾಗಿದ್ದಾರೆ ಎಂಬ ಸ್ಫೋಟಕ ವಿಚಾರವನ್ನು ಸಚಿವ ಚಲುವರಾಯಸ್ವಾಮಿ ಬಹಿರಂಗವಾಗಿಯೇ ಹೇಳಿದ್ದಾರೆ.

     

    ರಾಜಕೀಯದಲ್ಲಿ ಏನು ಬೇಕಿದ್ದರೂ ಆಗಬಹುದು ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ. ಕಾಲಕ್ಕೆ ತಕ್ಕಂತೆ ನಿರ್ಧಾರಗಳು ಬದಲಾಗುತ್ತವೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ವಲಸಿಗರಿಗೆ ಮಣೆ ಹಾಕಲು ಮುಂದಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅವರಾಗಿಯೇ ಬರುತ್ತೇನೆ ಎಂದರೆ ಬೇಡ ಎನ್ನಲು ಆಗುವುದಿಲ್ಲ ಎಂದು ಗೃಹಮಂತ್ರಿ ಪರಮೇಶ್ವರ್‌ ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೋಕಸಭಾ ಚುನಾವಣೆ ಮುನ್ನ ಆಪರೇಷನ್ ಕಾಂಗ್ರೆಸ್- ಬೆಂಗ್ಳೂರಿನ ಕೆಲ ಶಾಸಕರಿಗೆ ಗಾಳ

    ಲೋಕಸಭಾ ಚುನಾವಣೆ ಮುನ್ನ ಆಪರೇಷನ್ ಕಾಂಗ್ರೆಸ್- ಬೆಂಗ್ಳೂರಿನ ಕೆಲ ಶಾಸಕರಿಗೆ ಗಾಳ

    – ಅತ್ತ ಬಿಜೆಪಿ ಅಲರ್ಟ್, ನಾಳೆ ಬಿಎಸ್‍ವೈ ಸಭೆ

    ಬೆಂಗಳೂರು: ಕಾಂಗ್ರೆಸ್‍ನವರ (Congress) ಜೊತೆ ಬಿಜೆಪಿಯ ಕೆಲ ಶಾಸಕರು ಲಿಂಕ್‍ನಲ್ಲಿದ್ದಾರೆ ಎಂಬ ಗುಮಾನಿಯೊಂದು ಎದ್ದಿದೆ. ಈ ಮೂಲಕ ಅಧಿಕಾರ ಕಳೆದುಕೊಂಡ ಬಿಜೆಪಿಗೆ (BJP) ಈಗ ಆಪರೇಷನ್ ಹಸ್ತದ ಟೆನ್ಶನ್ ಶುರುವಾಗಿದೆ.

    ಲೋಕಸಭೆ (Loksabha Election), ಬಿಬಿಎಂಪಿ ಚುನಾವಣೆ (BBMP Election) ಮುನ್ನ ಆಪರೇಷನ್ ಹಸ್ತ ನಡೆಯುತ್ತಿದೆ. ಕೈ ಪಾಳಯದ ನಾಯಕರು ಬಿಜೆಪಿಯ ಕೆಲ ಶಾಸಕರ ಸಂಪರ್ಕದಲ್ಲಿದ್ದಾರೆ. ಪ್ರಭಾವಿ ಸಮುದಾಯಗಳ ಶಾಸಕರು, ಮುಖಂಡರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ. ಕೆಲ ಕ್ಷೇತ್ರಗಳ ಶಾಸಕರ ಬೆಂಬಲಿಗರಿಗೆ ಆಪರೇಷನ್ ಹಸ್ತ ಯಶಸ್ವಿಯಾಗಿದೆ ಎನ್ನಲಾಗಿದೆ.

    ಒಟ್ಟಿನಲ್ಲಿ ಕಾಂಗ್ರೆಸ್‍ನ ಸೀಕ್ರೆಟ್ ಆಪರೇಷನ್ ಪ್ಲಾನ್‍ಗೆ ಬಿಜೆಪಿ (BJP) ಅಲರ್ಟ್ ಆಗಿದ್ದು, ಕಾಂಗ್ರೆಸ್ ಸಂಪರ್ಕ ಸಾಧಿಸಲೆತ್ನಿಸುತ್ತಿರುವ ನಾಯಕರ ಮೇಲೆ ಬಿಜೆಪಿ ಹದ್ದಿನ ಕಣ್ಣಿಟ್ಟಿದೆ. ಕೆಲ ವಲಸಿಗರ ಬಗ್ಗೆ ಹೈಕಮಾಂಡ್ ಗಮನಕ್ಕೆ ತರಲು ನಿರ್ಧಾರ ಮಾಡಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆ ಹೊತ್ತಿಗೆ ಮತ್ತೊಂದು ತಾಲೀಮು ನಡೀತಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಗುತ್ತಿಗೆದಾರರು ಯೂಟರ್ನ್ ಹೊಡೆಯಲು ಸಂಧಾನ: ಹೆಚ್‍ಡಿಕೆ ಹೊಸ ಆರೋಪ

    ಬಿಎಸ್‍ವೈ ಸಭೆ: ಗುರುವಾರ ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರು ಶಾಸಕರ ಮಹತ್ವದ ಸಭೆ ನಡೆಯಲಿದೆ. 15% ಕಮೀಷನ್, ಕಾಮಗಾರಿ ಸ್ಥಗಿತ, ಅಭಿವೃದ್ಧಿ ಕಡೆಗಣನೆ ವಿರುದ್ಧ ಹೊರಾಟದ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಜೊತೆಗೆ ಇದೇ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ನಿರ್ಧಾರ ಮಾಡಲಾಗುತ್ತದೆ. ಒಂದಿಡೀ ದಿನ ಬೆಂಗಳೂರು ಶಾಸಕರಿಂದ ಸರ್ಕಾರದ ವಿರುದ್ಧ ಧರಣಿ ನಡೆಯಲಿದೆ. ರಾಜ್ಯಪಾಲರಿಗೂ ಕಮಿಷನ್, ಕಾಮಗಾರಿ ಸ್ಥಗಿತ ವಿರುದ್ಧ ದೂರಿಗೆ ಚಿಂತನೆಯನ್ನು ಈ ಸಭೆಯಲ್ಲಿ ನಡೆಸುವ ಸಾಧ್ಯತೆಗಳಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Exclusive: ಜೆಡಿಎಸ್‍ಗೆ ಬಿಗ್ ಶಾಕ್ ಕೊಡಲು ಡಿಕೆಶಿ ರಣತಂತ್ರ

    Exclusive: ಜೆಡಿಎಸ್‍ಗೆ ಬಿಗ್ ಶಾಕ್ ಕೊಡಲು ಡಿಕೆಶಿ ರಣತಂತ್ರ

    ಬೆಂಗಳೂರು: ಒಂದು ಕಾಲದ ಜೋಡೆತ್ತಿ(ಹೆಚ್.ಡಿ.ಕುಮಾರಸ್ವಾಮಿ)ಗೆ ಟಕ್ಕರ್ ಕೊಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿದ್ಧತೆ ನಡೆಸಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಜೆಡಿಎಸ್ ಹಳೆ ಮೈಸೂರು ಭಾಗದಲ್ಲಿ ಪ್ರಾಬಲ್ಯ ಹೊಂದಿರುವ ಪಕ್ಷ. ಇಲ್ಲಿ ಕಾಂಗ್ರೆಸ್‍ಗೆ ಮೊದಲನೇ ಎದುರಾಳಿಯಾಗಿ ಜೆಡಿಎಸ್ ನಿಲ್ಲುತ್ತದೆ. ಹಾಗಾಗಿ ಜೆಡಿಎಸ್ ಪ್ರಾಬಲ್ಯ ಕುಂದಿಸುವ ನಿಟ್ಟಿನಲ್ಲಿ ಸೋದರ, ಸಂಸದ ಡಿ.ಕೆ.ಸುರೇಶ್ ಜೊತೆ ಸೇರಿ ಡಿ.ಕೆ.ಶಿವಕುಮಾರ್ ರಣತಂತ್ರ ರಚಿಸಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಮೈಸೂರು ಭಾಗದಲ್ಲಿನ ಕೆಲ ಪ್ರಬಲ ಜೆಡಿಎಸ್ ನಾಯಕರನ್ನು ಸೆಳೆಯುವ ರಣತಂತ್ರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಆಪರೇಷನ್ ಕಾಂಗ್ರೆಸ್ ಗಾಗಿ ಖಾಸಗಿ ಸರ್ವೆಗೆ ಡಿ.ಕೆ.ಶಿವಕುಮಾರ್ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

    ಏನದು ಖಾಸಗಿ ಸರ್ವೆ?
    ಮೈಸೂರು, ಮಂಡ್ಯ, ಹಾಸನ, ತುಮಕೂರು, ರಾಮನಗರ, ಬೆಂಗಳೂರು ಗ್ರಾ., ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಸಮೀಕ್ಷೆ ನಡೆಸಲು ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಭಾಗದಿಂದ ಯಾರು ಬಂದ್ರೆ ಕಾಂಗ್ರೆಸ್‍ಗೆ ಒಳ್ಳೆಯದು? ಯಾವ ಭಾಗದ ಕ್ಷೇತ್ರದ ನಾಯಕರನ್ನು ಸೆಳೆಯಬಹುದು? ಯಾರನ್ನ ಕಾಂಗ್ರೆಸ್‍ಗೆ ಕರೆತಂದರೆ ಜೆಡಿಎಸ್‍ಗೆ ಹಿನ್ನಡೆ ಆಗಲಿದೆ ಎಂಬಿತ್ಯಾದಿ ವಿಷಯಗಳ ಕುರಿತು ಸಮೀಕ್ಷೆ ನಡೆಯಲಿದೆ. ಈ ಸಮೀಕ್ಷೆಯ ಆಧಾರದ ಮೇಲೆಯೇ ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಆಪರೇಷನ್ ಕಾಂಗ್ರೆಸ್ ಮುಂದಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಜೋಡೆತ್ತುಗಳು ಒಂಟೆತ್ತುಗಳಾಗಿವೆ, ಒಂದು ಮತ್ತೊಂದನ್ನು ಅಟ್ಟಾಡಿಸುತ್ತಿದೆ: ಕಟೀಲ್ ವ್ಯಂಗ್ಯ

    ಯಾಕೆ ಈ ಸಮೀಕ್ಷೆ?:
    ಈಗಾಗಲೇ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ಸಿನ ಮುಂದಿನ ಸಿಎಂ ಅಭ್ಯರ್ಥಿ ಎಂದು ಬಿಂಬಿತರಾಗಿದ್ದಾರೆ. ಆದ್ರೆ ಕಾಂಗ್ರೆಸ್ ನಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಬಣ ಇದನ್ನ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಾಯಕರು ಮುಂದಿನ ಸಿಎಂ ಬಗ್ಗೆ ಹೇಳಿಕೆ ನೀಡುತ್ತಿರುತ್ತಾರೆ. ಆದ್ದರಿಂದ ಸಿಎಂ ಕನಸು ಕಾಣುತ್ತಿರುವ ಡಿ.ಕೆ.ಶಿವಕುಮಾರ್ ತಮ್ಮ ಬೆಂಬಲಕ್ಕೂ ಪ್ರಬಲವಾದ ಶಾಸಕರ ಬಣ ಇರಬೇಕು ಎಂಬ ಉದ್ದೇಶದಿಂದ ಆಪರೇಷನ್ ಕಾಂಗ್ರೆಸ್‍ಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅಸ್ತಿತ್ವಕ್ಕಾಗಿ ಗುದ್ದೆತ್ತುಗಳಾದ ಜೋಡೆತ್ತುಗಳು

    ಕೆಲ ದಿನಗಳ ಹಿಂದೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮಿಷನ್ 123 ಅಡಿಯಲ್ಲಿ ಕೆಲಸ ಮಾಡಲಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಈಗ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಕುಂದಿಸಲು ಈಗಿನಿಂದಲೇ ಡಿ.ಕೆ.ಶಿವಕುಮಾರ್ ಮುಂದಾಗಿರೋದು ದಳಪತಿಗೆ ಶಾಕ್ ನೀಡಿದಂತಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಜೋಡೆತ್ತು ಗುದ್ದು – ಮಾಜಿ ಸಿಎಂ ಬೆನ್ನಿಗೆ ನಿಂತ ಡಿಕೆಶಿ

  • ಮತ್ತೆ ರೆಸಾರ್ಟ್ ರಾಜಕಾರಣ ಶುರು – ಬೆಂಗಳೂರಿಗೆ ಬರ್ತಿದ್ದಾರೆ ಗುಜರಾತ್ ‘ಕೈ’ ಶಾಸಕರು

    ಮತ್ತೆ ರೆಸಾರ್ಟ್ ರಾಜಕಾರಣ ಶುರು – ಬೆಂಗಳೂರಿಗೆ ಬರ್ತಿದ್ದಾರೆ ಗುಜರಾತ್ ‘ಕೈ’ ಶಾಸಕರು

    ಬೆಂಗಳೂರು: ಕರ್ನಾಟಕದ ಜನರು ಮತ್ತೊಂದು ರೆಸಾರ್ಟ್ ರಾಜಕಾರಣಕ್ಕೆ ಸಾಕ್ಷಿಯಾಗಬೇಕಿದೆ. ಈ ಹಿಂದೆ ಹಲವಾರು ಬಾರಿ ರಾಜ್ಯದ ರಾಜಕೀಯ ಪಕ್ಷಗಳ ರೆಸಾರ್ಟ್ ರಾಜಕಾರಣ ನೋಡಿದ್ದ ಜನರು ಇಂದು ಮಧ್ಯರಾತ್ರಿಯಿಂದ ಗುಜರಾತ್ ಕಾಂಗ್ರೆಸ್ ಶಾಸಕರ ರೆಸಾರ್ಟ್ ರಾಜಕಾರಣವನ್ನು ನೋಡಬೇಕಿದೆ.

    ಗುಜರಾತ್ ನಲ್ಲಿ ಶಾಸಕರ ಪಕ್ಷಾಂತರ ಪರ್ವಕ್ಕೆ ಕಾಂಗ್ರೆಸ್ ಬೆಚ್ಚಿ ಬಿದ್ದಿದೆ. ರಾಜ್ಯಸಭಾ ಚುನಾವಣೆ ವೇಳೆ ಕುದುರೆ ವ್ಯಾಪಾರ ನಡೆಯಬಹುದು ಎಂಬ ಭಯದಿಂದ ಗುಜರಾತ್ ನ 17 ಶಾಸಕರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಈಗಾಗಲೇ ಕಾಂಗ್ರೆಸ್ ನ 6 ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಬೆಂಗಳೂರಿನ ರೆಸಾರ್ಟ್ ವೊಂದರಲ್ಲಿ 17 ಶಾಸಕರು ಆಗಮಿಸಲಿದ್ದು, ಇಂದು ರಾತ್ರಿ 1.30ರ ವೇಳೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ. ಅಲ್ಲಿಂದ ಎಲ್ಲರೂ ನೇರವಾಗಿ ಬೆಂಗಳೂರು ಹೊರವಲಯದಲ್ಲಿರುವ ರೆಸಾರ್ಟ್ ಗೆ ಆಗಮಿಸಲಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ 45 ಶಾಸಕರು ಬರುತ್ತಾರೆ ಎನ್ನಲಾಗಿದ್ದರೂ ಸದ್ಯಕ್ಕೆ 17 ಶಾಸಕರಿಗೆ ಮಾತ್ರ ವಿಮಾನ ಟಿಕೆಟ್ ಬುಕ್ ಆಗಿದೆ.

    ಪಕ್ಷಾಂತರ ಪರ್ವ ಆರಂಭವಾಗಿರುವ ಹಿನ್ನೆಲೆಯಲ್ಲಿ ಶಾಸಕರನ್ನು ಮುಂಬೈ ಅಥವಾ ಕರ್ನಾಟಕಕ್ಕೆ ಕಳುಹಿಸಲು ನಿರ್ಧರಿಸಲಾಗಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುವ ಕಾರಣ ಬೆಂಗಳೂರು ಸೇಫ್ ಎಂಬ ಕಾರಣಕ್ಕೆ 17 ಶಾಸಕರನ್ನು ಕರ್ನಾಟಕಕ್ಕೆ ಕಳುಹಿಸುತ್ತಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ.

    ಗುಜರಾತ್ ನಿಂದ ಅಹಮದ್ ಪಟೇಲ್ ರಾಜ್ಯಸಭೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದು ಇವರನ್ನು ಹೇಗಾದರೂ ಮಾಡಿ ಗೆಲ್ಲಿಸಲೇಬೇಕು ಎಂದು ಪಣತೊಟ್ಟು ಕಾಂಗ್ರೆಸ್ ಹೈಕಮಾಂಡ್ ರೆಸಾರ್ಟ್ ರಾಜಕೀಯದ ಮೊರೆ ಹೋಗಿದೆ.

     ಇದನ್ನೂ ಓದಿ: ಕಾಂಗ್ರೆಸ್ಸಿಗೆ ಈಗ ಗುಜರಾತ್‍ನಲ್ಲಿ ಕೈ ಶಾಸಕರಿಂದಲೇ ಶಾಕ್