Tag: ಆಪರೇಷನ್ ಕಮಲ

  • ರಾಜಸ್ಥಾನದಲ್ಲಿ ಮತ್ತೆ ಆಪರೇಷನ್ ಕಮಲ ಭೀತಿ – ಕೈ ಶಾಸಕರು ರೆಸಾರ್ಟ್‍ಗೆ ಶಿಫ್ಟ್

    ರಾಜಸ್ಥಾನದಲ್ಲಿ ಮತ್ತೆ ಆಪರೇಷನ್ ಕಮಲ ಭೀತಿ – ಕೈ ಶಾಸಕರು ರೆಸಾರ್ಟ್‍ಗೆ ಶಿಫ್ಟ್

    ಜೈಪುರ: ರಾಜಸ್ಥಾನದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ಶುರುವಾಗಿದೆ. ರಾಜ್ಯಸಭೆ ಚುನಾವಣೆ ಹಿನ್ನೆಲೆ ರಾಜಸ್ಥಾನದ ಕಾಂಗ್ರೆಸ್ ಅಡ್ಡ ಮತದಾನದ ಭೀತಿಯಿಂದ ತನ್ನ ಶಾಸಕರನ್ನು ಉದಯಪುರದ ಹೋಟೆಲ್‍ಗೆ ಸ್ಥಳಾಂತರಿಸಲು ನಿರ್ಧರಿಸಿದೆ.

    ಜೂನ್ 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಮುನ್ನವೇ ಬಿಜೆಪಿ ಆಪರೇಷನ್ ಕಮಲ ಪ್ರಾರಂಭಿಸುತ್ತದೆ ಎಂಬ ಆತಂಕದಿಂದ ರಾಜಸ್ಥಾನದಲ್ಲಿರುವ ತನ್ನ ಶಾಸಕರನ್ನು ಉದಯಪುರದ ಹೋಟೆಲ್‍ಗೆ ಕಾಂಗ್ರೆಸ್ ಶಿಫ್ಟ್ ಮಾಡಲಿದೆ.

    ಜೈಪುರದ ಕ್ಲಾರ್ಕ್ ಹೋಟೆಲ್‍ನಲ್ಲಿ ನಡೆಯುತ್ತಿರುವ ತರಬೇತಿ ಶಿಬಿರ ಮುಗಿದ ನಂತರ ಗುರುವಾರ ಕಾಂಗ್ರೆಸ್ ತನ್ನ ಶಾಸಕರನ್ನು ಉದಯಪುರದ ಅರಾವಳಿ ರೆಸಾರ್ಟ್‍ಗೆ ಕರೆದೊಯ್ಯುವ ಸಾಧ್ಯತೆಯಿದೆ. ಅಲ್ಲದೆ ಪಕ್ಷೇತರ ಶಾಸಕರು ಮತ್ತು ಇತರ ಪಕ್ಷಗಳಿಗೆ ಸೇರಿದವರು ಹಾಗೂ ಆಡಳಿತ ಪಕ್ಷವನ್ನು ಬೆಂಬಲಿಸುವವರನ್ನು ಉದಯಪುರಕ್ಕೆ ಸ್ಥಳಾಂತರಿಸಲಾಗುವುದು ಎಂದು ಮೂಲಗಳು ಹೇಳಿವೆ.

    ಮತ್ತೊಂದೆಡೆ ಹರಿಯಾಣ ಕಾಂಗ್ರೆಸ್ ಶಾಸಕರನ್ನೂ ಜೈಪುರಕ್ಕೆ ಕರೆದೊಯ್ಯಲು ಸಿದ್ಧತೆ ನಡೆಸಲಾಗುತ್ತಿದೆ. ಈಗಾಗಲೇ ಜೈಸಲ್ಮೇರ್‍ನ ಸೂರ್ಯಗಢದಲ್ಲಿ 40 ಕೊಠಡಿಗಳನ್ನು ಬುಕ್ ಮಾಡಲಾಗಿದೆ. ನಾಳೆ ಬಿಜೆಪಿಯು ತನ್ನ ಶಾಸಕರನ್ನು ಹೊಟೇಲ್‍ಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ. ಇದನ್ನೂ ಓದಿ:  ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ – 2 ಬಾರಿ ಅಬಾರ್ಷನ್ ಮಾಡಿಸಿದ್ದ ರೇಖಾ

    bjp - congress

    ಬಲಾಬಲ ಹೇಗಿದೆ?
    ವಿಧಾನಸಭೆಯಲ್ಲಿ ಕಾಂಗ್ರೆಸ್ 108 ಶಾಸಕರ ಬಲವನ್ನು ಹೊಂದಿದ್ದು ನಾಲ್ಕು ಸ್ಥಾನಗಳ ಪೈಕಿ ಎರಡನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಅಭ್ಯರ್ಥಿ ಗೆಲ್ಲಲು 41 ಮತಗಳ ಅಗತ್ಯವಿದ್ದು 26 ಹೆಚ್ಚುವರಿ ಮತಗಳಿದ್ದು 3ನೇ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು 15 ಮತಗಳ ಕೊರತೆಯಿದೆ.

    ಬಿಜೆಪಿ 71 ಶಾಸಕರ ಬಲವನ್ನು ಹೊಂದಿದ್ದು 1 ಸ್ಥಾನವನ್ನು ಸುಲಭವಾಗಿ ಗೆಲ್ಲಲಿದೆ. ನಂತರ 30 ಹೆಚ್ಚುವರಿ ಮತಗಳಿವೆ. ಹೀಗಾಗಿ ಅಡ್ಡ ಮತದಾನ ಭೀತಿ ಕಾಂಗ್ರೆಸ್ಸಿಗಿದೆ. ಇದನ್ನೂ ಓದಿ:  ಅಮೆರಿಕದ ಆಸ್ಪತ್ರೆ ಆವರಣದಲ್ಲಿಯೇ ಗುಂಡಿನ ದಾಳಿ – ನಾಲ್ವರು ಸಾವು

    13 ಪಕ್ಷೇತರ ಶಾಸಕರ ಪೈಕಿ ಮಂಗಳವಾರ 10 ಮಂದಿ ಜೊತೆ ಸಿಎಂ ಗೆಹ್ಲೋಟ್ ಮಾತನಾಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.

  • ಅಶ್ವತ್ಥನಾರಾಯಣ ಪ್ರಯೋಗ ಫೇಲ್ಯೂರ್ – ಹೈಕಮಾಂಡ್ ಅಸಮಾಧಾನದಿಂದ ಏಕಾಂಗಿಯಾದ ಸಚಿವ

    ಅಶ್ವತ್ಥನಾರಾಯಣ ಪ್ರಯೋಗ ಫೇಲ್ಯೂರ್ – ಹೈಕಮಾಂಡ್ ಅಸಮಾಧಾನದಿಂದ ಏಕಾಂಗಿಯಾದ ಸಚಿವ

    ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ದೂರ ಇಟ್ಟು ಓಲ್ಡ್ ಮೈಸೂರು ಆಪರೇಷನ್ ಕಮಲ ನಡೆಯುತ್ತಿದೆ. ಡಿಸಿಎಂ ಆಗಿ ಅಶ್ವತ್ಥನಾರಾಯಣ ಪ್ರಯೋಗ ಮಾಡಿ ಹೈಕಮಾಂಡ್ ಫೇಲ್ಯೂರ್ ಆಗಿದೆ ಎಂಬ ಚರ್ಚೆ ಬಿಜೆಪಿಯಲ್ಲಿ ಜೋರಾಗಿದೆ.

    ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿ ಸಂಘಟನೆ ಮಾಡಲು ಅಶ್ವತ್ಥನಾರಾಯಣ ವಿಫಲ ಎಂಬ ವರದಿ ರವಾನೆಯಾಗಿದ್ದು, ಹೈಕಮಾಂಡ್ ಅಸಮಾಧಾನಗೊಂಡಿದೆ ಎನ್ನಲಾಗಿದೆ. ಹಾಗಾಗಿಯೇ ಅಶ್ವತ್ಥನಾರಾಯಣ ಬಿಟ್ಟು ಹಳೇ ಮೈಸೂರು ಭಾಗದಲ್ಲಿ ಅನ್ಯ ಪಕ್ಷಗಳ ನಾಯಕರ ಸೇರ್ಪಡೆಗೆ ಕಾರ್ಯತಂತ್ರ ನಡೆಯುತ್ತಿದೆ ಅಂತಾ ಮೂಲಗಳು ತಿಳಿಸಿವೆ.

    BASAVARAJ BOMMAI

     

    ಮೊನ್ನೆ ಸಿಎಂ ನೇತೃತ್ವದಲ್ಲಿ ನಡೆದ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲೂ ಅಶ್ವತ್ಥನಾರಾಯಣ ದೂರ ಇಟ್ಟಿದ್ದರು. ಬಹಿರಂಗವಾಗಿ ಅಬ್ಬರಿಸುವುದನ್ನು ಬಿಟ್ಟರೆ ಸಂಘಟನೆಗೆ ಶಕ್ತಿ ತರಲು ಸಾಧ್ಯ ಆಗಿಲ್ಲ ಎಂಬ ಅಸಮಾಧಾನ ಬಿಜೆಪಿ ಹೈಕಮಾಂಡ್ ಇದೆ ಎನ್ನಲಾಗಿದೆ. ಹೈಕಮಾಂಡ್ ಅಸಮಾಧಾನದ ಬೆನ್ನಲ್ಲೇ ಮೈಸೂರು ಭಾಗಗಳ ಪ್ರವಾಸಕ್ಕೆ ಅಶ್ವತ್ಥನಾರಾಯಣ ಕಸರತ್ತು ನಡೆಸುತ್ತಿದ್ದಾರೆ. ಹಾಗಾದರೆ ಇದ್ದಕ್ಕಿದ್ದಂತೆ ಸ್ಟಾರ್ ಆಗಿ ಡಿಸಿಎಂ ಪಟ್ಟ ಪಡೆದಿದ್ದ ಅಶ್ವತ್ಥನಾರಾಯಣ ಹೈಕಮಾಂಡ್ ಕಣ್ಣಲ್ಲಿ ಫೇಲ್ಯೂರ್ ಆಗಿದ್ದಾರಾ ಎಂಬ ಬಗ್ಗೆ ಬಿಜೆಪಿ ವಲಯದಲ್ಲಿ ಬಿಸಿ, ಬಿಸಿ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಪರಿಸರವಾದಿಗಳ ತೀವ್ರ ವಿರೋಧ

    ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಕಿತ್ತಾಟ ಶುರು ಆಗಿದೆಯಾ? ಅಶ್ವತ್ಥನಾರಾಯಣ ಒಂಟಿಯಾದಾರಾ ಎಂಬ ಪ್ರಶ್ನೆ ಹರಿದಾಡುತ್ತಿದೆ. ಅಶೋಕ್, ಸುಧಾಕರ್, ಯೋಗೇಶ್ವರ್ ಒಂದು ಗುಂಪು ಸೇರಿದ್ದು, ಹಳೇ ಮೈಸೂರು ಭಾಗದ ಸಂಘಟನೆಯಲ್ಲಿ ತ್ರಿಮೂರ್ತಿಗಳದ್ದೇ ಕಾರುಬಾರು ನಡೆಯುತ್ತಿದ್ದು, ಅಶ್ವತ್ಥನಾರಾಯಣ ಹೊರಗಿಟ್ಟು ಆಪರೇಷನ್ ಚಟುವಟಿಕೆಗಳು ಜೋರಾಗಿದೆ ಮತ್ತು ತ್ರಿಮೂರ್ತಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸಾಥ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಯುವತಿಯರೊಂದಿಗೆ ಕುಣಿದು ಕುಪ್ಪಳಿಸಿದ MLA ಗೋಪಾಲ್ ಮಂಡಲ್ – ವೀಡಿಯೋ ವೈರಲ್

    ಹಾಗಾದರೆ ಅಶ್ವತ್ಥನಾರಾಯಣ್ ಓವರ್ ಸ್ಮಾರ್ಟ್ ಬಿಜೆಪಿಯ ಇತರೆ ಒಕ್ಕಲಿಗ ನಾಯಕರನ್ನು ಕೆರಳಿಸುತ್ತಾರಾ? ಚೊಚ್ಚಲ ಬಾರಿಗೆ ಕ್ಯಾಬಿನೆಟ್ ಸೇರ್ಪಡೆ ಬೆನ್ನಲ್ಲೇ ಡಿಸಿಎಂ ಪಟ್ಟ ಗಿಟ್ಟಿಸಿದ ಅಶ್ವತ್ಥನಾರಾಯಣ ಈಗ ಒಂಟಿಯಾಗಿ ಏನು ಮಾಡುತ್ತಾರೆ ಎಂಬ ಕುತೂಹಲ ಮನೆ ಮಾಡಿದ್ದು, ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಿದೆ.

  • ಶನಿವಾರದಿಂದ್ಲೇ ಆಪರೇಷನ್ ಕಮಲ ಶುರು- ಮಂಡ್ಯದಲ್ಲಿ ಲಕ್ಷ್ಮೀ, ಅಶೋಕ್ ಜಯರಾಂ ಸೇರ್ಪಡೆ

    ಶನಿವಾರದಿಂದ್ಲೇ ಆಪರೇಷನ್ ಕಮಲ ಶುರು- ಮಂಡ್ಯದಲ್ಲಿ ಲಕ್ಷ್ಮೀ, ಅಶೋಕ್ ಜಯರಾಂ ಸೇರ್ಪಡೆ

    ಬೆಂಗಳೂರು: ಮುಂಬರುವ ಚುನಾವಣೆಗಾಗಿ ಶನಿವಾರದಿಂದ ಬಿಜೆಪಿಯ ಆಪರೇಷನ್ ಕಮಲ ಆರಂಭವಾಗುತ್ತಿದೆ. ಮಂಡ್ಯ, ಕೋಲಾರದಿಂದಲೇ ಆಪರೇಷನ್ ಕಮಲ ಆರಂಭವಾಗುತ್ತಿದ್ದು, ಮಂಡ್ಯ ಜೆಡಿಎಸ್‍ನ ಇಬ್ಬರು ಯುವ ಮುಖಂಡರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.

    ಮಂಡ್ಯದ ಲಕ್ಷ್ಮೀ ಅಶ್ವಿನ್‍ಗೌಡ, ಮಾಜಿ ಸಚಿವ ಎಸ್.ಡಿ.ಜಯರಾಮ್ ಪುತ್ರ ಅಶೋಕ್, ಕೋಲಾರದ ವರ್ತೂರ್ ಪ್ರಕಾಶ್, ಮಾಲೂರು ಮಂಜುನಾಥ್ ಕೂಡ ಕಮಲ ಹಿಡಿಯುತ್ತಿದ್ದಾರೆ. ನಾಳೆ ಸಂಜೆ 4 ಗಂಟೆಗೆ ನಡೆಯಲಿರುವ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಇವರೆಲ್ಲರೂ ಸಿಎಂ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲೇ ಬಿಜೆಪಿ ಪಾಳಯ ಸೇರಿಕೊಳ್ಳುತ್ತಿದ್ದಾರೆ.

     

    ಈಗಾಗಲೇ ಸಿಎಂ ಜೊತೆ ಈ ಬಗ್ಗೆ ಸಚಿವ ಮುನಿರತ್ನ ಮತ್ತು ಆರ್ ಅಶೋಕ್ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ‘ಆಪರೇಷನ್ ಕಮಲ’ಕ್ಕಾಗಿ 10 ಲಕ್ಷ ರೂಪಾಯಿ ಆಮಿಷ- ಸಿಎಂ ರಾಜಕೀಯ ಕಾರ್ಯದರ್ಶಿ ವಿರುದ್ಧ ದೂರು

    ‘ಆಪರೇಷನ್ ಕಮಲ’ಕ್ಕಾಗಿ 10 ಲಕ್ಷ ರೂಪಾಯಿ ಆಮಿಷ- ಸಿಎಂ ರಾಜಕೀಯ ಕಾರ್ಯದರ್ಶಿ ವಿರುದ್ಧ ದೂರು

    ಹಾಸನ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ವಿರುದ್ಧ ಹಾಸನ ಜಿಲ್ಲೆಯ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಅರಸೀಕೆರೆ ನಗರಸಭೆ ಸದಸ್ಯೆ ಕಲೈರಸಿ ಅವರು ದೂರು ನೀಡಿದ್ದಾರೆ.

    ಅರಸೀಕೆರೆ ನಗರಸಭೆಗೆ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದ ಏಳು ಜನ ಸದಸ್ಯರು ಜೆಡಿಎಸ್‍ಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನಂತರ ತಮ್ಮಬೆಂಬಲ ಬಿಜೆಪಿಗೆ ಇದೆ. ನಮಗೆ ಬೇರೆ ಆಸನ ವ್ಯವಸ್ಥೆ ಮಾಡಿ ಎಂದು ಡಿಸಿಗೆ ಮನವಿ ಮಾಡಿದ್ದರು. ಈ ವಿಚಾರವಾಗಿ ಯೂಟರ್ನ್ ಹೊಡೆದ ಕಲೈರಸಿ, ನನಗೆ ಹತ್ತು ಲಕ್ಷ ನೀಡಿ ಬಿಜೆಪಿಗೆ ಬೆಂಬಲ ನೀಡುವಂತೆ ಬೆದರಿಕೆ ಹಾಕಿದ್ದಾರೆ.

    ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ದೂರವಾಣಿಯಲ್ಲಿ ಬೆದರಿಕೆ ಹಾಕಿದ್ದಾರೆ. ಸಂತೋಷ್ ಆಪ್ತರಾದ ಸಿಖಂದರ್, ಹರ್ಷವರ್ಧನ್ ಎಂಬವರು ನಮ್ಮ ಮನೆಗೆ ಬಂದು 10 ಲಕ್ಷ ಹಣ ಇಟ್ಟು ಬಿಜೆಪಿಗೆ ಸಪೋರ್ಟ್ ಮಾಡುವಂತೆ ಬೆದರಿಕೆ ಹಾಕಿದ್ದಾರೆ. ಈ ವೇಳೆ ಜಾತಿನಿಂದನೆ ಕೂಡ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

    ಇದೇ ವಿಚಾರವಾಗಿ ನಿನ್ನೆ 10 ಲಕ್ಷ ಹಣದೊಂದಿಗೆ ಶಾಸಕರಾದ ರೇವಣ್ಣ ಮತ್ತು ಶಿವಲಿಂಗೇಗೌಡ ಜಂಟಿ ಸುದ್ದಿಗೋಷ್ಟಿ ನಡೆಸಿದ್ದರು. ಈ ಭವಿಷ್ಯದಲ್ಲಿ ಕೋರ್ಟ್ ಮೆಟ್ಟಿಲೇರುವುದಾಗಿಯೂ ಎಚ್ಚರಿಕೆ ನೀಡಿದ್ದರು.  ಇದನ್ನೂ ಓದಿ: ಹತ್ತು ಲಕ್ಷ ಹಣದೊಂದಿಗೆ ಸುದ್ದಿಗೋಷ್ಠಿ ನಡೆಸಿದ ಹೆಚ್‍ಡಿ.ರೇವಣ್ಣ, ಶಿವಲಿಂಗೇಗೌಡ

  • ಬಿಎಸ್‍ವೈ ಆಪರೇಷನ್ ಕಮಲದ ಪಿತಾಮಹ: ಶಾಸಕ ಭೀಮಾನಾಯ್ಕ್

    ಬಿಎಸ್‍ವೈ ಆಪರೇಷನ್ ಕಮಲದ ಪಿತಾಮಹ: ಶಾಸಕ ಭೀಮಾನಾಯ್ಕ್

    ವಿಜಯನಗರ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಆಪರೇಷನ್ ಕಮಲದ ಪಿತಾಮಹ ಇದ್ದಂತೆ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಸ್. ಭೀಮನಾಯ್ಕ್ ಹೇಳಿದ್ದಾರೆ.

    ದೇಶದಲ್ಲಿ ಜಾತಿಗಳ ಮಧ್ಯೆ ಕಲಹ ತಂದಿಟ್ಟು ಸಮಾಜದಲ್ಲಿನ ಸಹಬಾಳ್ವೆಗೆ ಬೆಂಕಿಯಿಟ್ಟು ಪೆಟ್ರೋಲ್ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಹೆಚ್ಚಳ ಮಾಡಿ ಶ್ರಮಿಕ ವರ್ಗವನ್ನು ತೆರಿಗೆ ಎಂಬ ಕೂಪಕ್ಕೆ ಸಿಲುಕಿಸಿದೆ ಎಂದು ಭೀಮನಾಯ್ಕ್‍ರವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ತೈಲ ಬೆಲೆ ಏರಿಕೆ ಖಂಡಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಳ್ಳಾರಿ ಜಿಲ್ಲೆಯ ಕೊಟ್ಟರು ಪಟ್ಟಣದ ಉಜ್ಜಿನಿ ರಸ್ತೆಯ ಪೆಟ್ರೋಲ್ ಬಂಕ್ ಮುಂದೆ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ನಂಬಿ ಮತ ಹಾಕಿದ ಎಲ್ಲಾ ಮತದಾರರಿಗೂ ತಮ್ಮ ತಮ್ಮ ಖಾತೆಗೆ 15 ಲಕ್ಷ ರೂ ಹಣ, ಎರಡು ಲಕ್ಷ ಕೋಟಿ ಉದ್ಯೋಗ ನೀಡದೇ ಸುಳ್ಳು ಭರವಸೆ ನೀಡಿ ದೇಶದ ಜನರಿಂದ ತೆರಿಗೆ ವಸೂಲಿ ಮಾಡುತ್ತಿದೆ ಎಂದು ಖಾರವಾಗಿ ನುಡಿದಿದ್ದಾರೆ.

    ಈಗಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಆಪರೇಷನ್ ಕಮಲದ ಪಿತಾಮಹ ಇದ್ದಂತೆ ಏಕೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸಿಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವಾಗ ನಮ್ಮ ಸಮ್ಮಿಶ್ರ ಸರ್ಕಾರದ 19 ಶಾಸಕರನ್ನು ಲಂಚ ಕೊಟ್ಟು ಖರೀದಿ ಮಾಡಿಕೊಂಡು ಕಳ್ಳದಾರಿಯಲ್ಲಿ ಬಂದು ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ ಎಂದರು. ಇದನ್ನೂ ಓದಿ:  ಈಶ್ವರಪ್ಪನವರಿಗೆ ಈಗ ಅರಿವಾಗುತ್ತಿರುವುದು ಆಶ್ಚರ್ಯ: ಆರ್.ವಿ.ದೇಶಪಾಂಡೆ

  • BSY ಆಡಿಯೋ ಪ್ರಕರಣ: ತನಿಖಾ ವರದಿಯಲ್ಲಿ ನ್ಯಾಯ ಸಿಗುವ ವಿಶ್ವಾಸವಿಲ್ಲ ಅಂದ್ರು ಕಂದಕೂರು

    BSY ಆಡಿಯೋ ಪ್ರಕರಣ: ತನಿಖಾ ವರದಿಯಲ್ಲಿ ನ್ಯಾಯ ಸಿಗುವ ವಿಶ್ವಾಸವಿಲ್ಲ ಅಂದ್ರು ಕಂದಕೂರು

    – ವಿಚಾರಣೆಗೆ ಹಾಜರಾದ ಶರಣಗೌಡ ಕಂದಕೂರು ಅಸಮಧಾನ

    ರಾಯಚೂರು: ಜಿಲ್ಲೆಯ ದೇವದುರ್ಗ ಪ್ರವಾಸಿ ಮಂದಿರದಲ್ಲಿ ನಡೆದ ಆಪರೇಷನ್ ಕಮಲ ಆಡಿಯೋ ಪ್ರಕರಣ ಹಿನ್ನೆಲೆ ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಪುತ್ರ ದೂರುದಾರ ಶರಣಗೌಡರನ್ನ ಇಂದು ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆಗೆ ಹಾಜರಾಗುವ ವೇಳೆ ಮಾತನಾಡಿರುವ ಶರಣೇಗೌಡ ನನಗೆ ನೂರಕ್ಕೆ ನೂರು ನ್ಯಾಯ ಸಿಗಲ್ಲ ಎಂಬ ವಿಶ್ವಾಸವಿದೆ. ಆದ್ರೂ ಪೊಲೀಸ್ ಅಧಿಕಾರಿಗಳ ಮೇಲೆ ವಿಶ್ವಾಸವಿದೆ ಅಂತ ಹೇಳಿದ್ದಾರೆ.

    ಜನಪ್ರತಿನಿಧಿಗಳ ಕೋರ್ಟ್ ನಿಂದ ಸಿಎಂ ಯಡಿಯೂರಪ್ಪ ವಿರುದ್ಧ ತನಿಖೆ ಮಾಡಬೇಕೆಂದು ಆದೇಶ ಬಂದ ಹಿನ್ನೆಲೆ ತನಿಖಾ ಅಧಿಕಾರಿಯಾಗಿ ರಾಯಚೂರು ಡಿವೈಎಸ್ ಪಿ ಯವರನ್ನ ನೇಮಕ ಮಾಡಿದ್ದಾರೆ. ಡಿವೈಎಸ್ ಪಿ ಶಿವನಗೌಡ ಪಾಟೀಲ್ ನೋಟಿಸ್ ನೀಡಿ ನಮಗೆ ಬರಲು ಹೇಳಿದ್ರು, ಇದರಿಂದಾಗಿ ಇಂದು ವಿಚಾರಣೆ ಬಂದಿದ್ದೇನೆ. ನಾವು ಮಾಡಿರುವ ಆಡಿಯೋ ಹಾಗೂ ನಮ್ಮ ಹೇಳಿಕೆಗಳು ಪಡೆದುಕೊಂಡಿದ್ದಾರೆ. ಒಬ್ಬ ಡಿವೈಎಸ್ ಪಿ ಸಿಎಂ ವಿರುದ್ಧ ಯಾವ ರೀತಿ ತನಿಖೆ ಮಾಡಲು ಆಗುತ್ತೆ. ಸಿಎಂ ಯಡಿಯೂರಪ್ಪ ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ನೀಡಬೇಕಾಗಿತ್ತು ಅಂತ ಶರಣಗೌಡ ಹೇಳಿದ್ದಾರೆ.

    ರಾಜೀನಾಮೆ ನೀಡದೆ ತನಿಖೆ ನಡೆಯುತ್ತಿರುವುದರಿಂದ ಮುಂದೆ ಏನಾಗುತ್ತೆ ಎಂಬುವುದು ನಮಗೆ ಗೊತ್ತು. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಬಿ ರಿಪೋರ್ಟ್ ಹಾಕಬಹುದು. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ವಕೀಲರ ಜೊತೆಗೆ ಈಗಾಗಲೇ ಮಾತುಕತೆ ಆಗಿದೆ. ಈ ತನಿಖಾ ವರದಿಯಲ್ಲಿ ನನಗೆ ನ್ಯಾಯ ಸಿಗಲ್ಲ ಎಂಬ ವಿಶ್ವಾಸವಿದೆ. ಸತ್ಯಕ್ಕೆ ನ್ಯಾಯ ಸಿಗದೇ ಇದ್ದಾಗ ಮುಂದೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಅಥವಾ ಇಡಿ ಇದೆ. ಆಡಿಯೋದಲ್ಲಿ ಎಲ್ಲವೂ ಇದ್ದು, ನ್ಯಾಯ ಸಿಗದೇ ಇದ್ದರೆ ಕಾನೂನು ಹೋರಾಟ ಮುಂದುವರಿಸುವುದಾಗಿ ಜೆಡಿಎಸ್ ಮುಖಂಡ ಶರಣಗೌಡ ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಅಸ್ತಿತ್ವ ನನ್ನ ಕೈಲಿದೆ: ಶರಣಗೌಡ

  • ಮಸ್ಕಿ ಫಲಿತಾಂಶಕ್ಕೆ ಮೊದಲೇ ಸೋಲು ಒಪ್ಪಿಕೊಂಡ ಪ್ರತಾಪ್ ಗೌಡ

    ಮಸ್ಕಿ ಫಲಿತಾಂಶಕ್ಕೆ ಮೊದಲೇ ಸೋಲು ಒಪ್ಪಿಕೊಂಡ ಪ್ರತಾಪ್ ಗೌಡ

    ಮಸ್ಕಿ: ಚುನಾವಣಾ ಮತ ಎಣಿಕೆಯ ಹಲಲು ಸುತ್ತುಗಳು ಬಾಕಿ ಇರುವಾಗಲೇ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಸೋಲು ಒಪ್ಪಿಕೊಂಡಿದ್ದಾರೆ.

    ನಮ್ಮವರೇ ನಮಗೆ ಮೋಸ ಮಾಡಿದರು. ಈ ಪರಿಸ್ಥಿತಿ ಕಾಂಗ್ರೆಸ್ ಗೆ ಅನುಕೂಲವಾಗಿದೆ. ಕ್ಷೇತ್ರದಲ್ಲಿ ನನ್ನ ಮೇಲೆ ವಿರೋಧಿ ಅಲೆ ಸೃಷ್ಟಿಯಾಗಿದೆ ಎಂದು ಪ್ರತಾಪ್ ಗೌಡ ಪಾಟೀಲ್ ದೂರಿದ್ದಾರೆ.

    9ನೇ ಸುತ್ತಿನ ಮತ ಏಣಿಕೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ಪಾಟೀಲ್ ತುರ್ವಿಹಾಳ 10,311 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಬಸನಗೌಡ ಪಾಟೀಲ್ 29,366 ಮತಗಳನ್ನು ಪಡೆದರೆ ಬಿಜೆಪಿಯ ಪ್ರತಾಪ ಗೌಡ ಪಾಟೀಲ್ 19,942 ಮತಗಳನ್ನು ಪಡೆದಿದ್ದಾರೆ.

    2018ರ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ಅವರು 60,387 ಮತಗಳನ್ನು ಪಡೆದಿದ್ದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ತುರ್ವಿಹಾಳ ಅವರಿಗೆ 60,174 ಮತಗಳು ಬಿದ್ದಿತ್ತು. 213 ಮತಗಳ ಅಂತರದಿಂದ ಪ್ರತಾಪ್ ಗೌಡ ಪಾಟೀಲ್ ಗೆದ್ದಿದ್ದರು. ನಂತರ ನಡೆದ ಆಪರೇಷನ್ ಕಮಲದಲ್ಲಿ ಅವರು ಕಾಂಗ್ರೆಸ್ ತೊರೆದು ಬಿಜೆಪಿಯನ್ನು ಸೇರಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ಕಾಂಗ್ರೆಸ್ ಸೇರಿದ್ದರು.

  • ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿ ಉಳಿದಿಲ್ಲ, ಬಿಜೆಪಿ ಈಗ ಅರಳುತ್ತಿದೆ – ನಾರಾಯಣಗೌಡ

    ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿ ಉಳಿದಿಲ್ಲ, ಬಿಜೆಪಿ ಈಗ ಅರಳುತ್ತಿದೆ – ನಾರಾಯಣಗೌಡ

    ಮಂಡ್ಯ: ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿ ಉಳಿದಿಲ್ಲ ಎಂದು ಸಚಿವ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ.

    ಮೈಸೂರಿನಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಸ್ಥಾನ ಗೆಲ್ಲುತ್ತಿದ್ದ ಬಿಜೆಪಿ ಗ್ರಾಮ ಪಂಚಾಯತಿಯಲ್ಲಿ 750-800 ಸ್ಥಾನ ಗೆದ್ದಿದೆ. ಇದನ್ನ ನೋಡಿದಾಗ ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ಗೊತ್ತಾಗುತ್ತೆ. ಮಂಡ್ಯದಲ್ಲಿ ಜೆಡಿಎಸ್ ಭದ್ರಕೋಟೆಯಾಗಿ ಉಳಿದಿಲ್ಲ ಎಂದರು.

    ಕೆಳ ಹಂತದಿಂದ ಪಕ್ಷ ಸಂಘಟಿಸುವ ಕೆಲಸ ನಡೆಯುತ್ತಿದೆ. ನಾನು ಈ ಬಗ್ಗೆ ಕಾಂಗ್ರೆಸ್ ಜೆಡಿಎಸ್ ಪಕ್ಷದ ನಾಯಕರನ್ನು ದೂರುವುದಿಲ್ಲ. ನಮ್ಮ ಪಕ್ಷದ ಬಲವರ್ಧನೆಗೆ ಬೇಕಾದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

    ಬಿಜೆಪಿಗೆ ಶಾಸಕ ಎಂ.ಶ್ರೀನಿವಾಸ್ ಸೆಳೆಯುವ ಯತ್ನ ನಡೆಯುತ್ತಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ನಾವು ಯಾರನ್ನೂ ಸೆಳೆಯುವ ಪ್ರಯತ್ನ ಮಾಡಿಲ್ಲ. ಒಂದಿಬ್ಬರು ಎಂಎಲ್‍ಎ ಬಿಟ್ಟರೆ ಉಳಿದವರು ನಮ್ಮ ಜೊತೆಗಿದ್ದಾರೆ. ಕೆಲವು ಸಿಕ್ರೇಟ್‍ಗಳನ್ನು ಬಹಿರಂಗವಾಗಿ ಹೇಳಲಾಗುವುದಿಲ್ಲ. ಬಿಜೆಪಿ ಮುನ್ನಡೆಸಲು ಜೊತೆಯಾಗಿ ಬಂದವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.

    ಸದ್ಯ ಜಿಲ್ಲೆಯಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆ ನಡೆಯುತ್ತಿವೆ. ಅದನ್ನು ನಾನು ಈಗ ಬಹಿರಂಗ ಪಡಿಸುವುದಿಲ್ಲ. ಈಗ ಹೇಳಿದರೆ ನೀವು ಅದರ ದಾರಿ ತಪ್ಪಿಸುತ್ತೀರಿ. ಹಾಗಾಗಿ ಎಲ್ಲವೂ ಒಳ್ಳೆಯದಾದ ನಂತರ ನಿಮ್ಮ ಬಳಿ ಹೇಳುತ್ತೇನೆ ಎಂದು ತಿಳಿಸುವ ಮೂಲಕ ಪರೋಕ್ಷವಾಗಿ ಆಪರೇಷನ್ ಕಮಲದ ಸುಳಿವು ನೀಡಿದರು.

  • ಚುನಾವಣೆಗೂ ಮುನ್ನ ಆಪರೇಷನ್‌ ಕಮಲ – ಬಿಜೆಪಿ ಸೇರಿದ ಕೈ ಅಭ್ಯರ್ಥಿ

    ಚುನಾವಣೆಗೂ ಮುನ್ನ ಆಪರೇಷನ್‌ ಕಮಲ – ಬಿಜೆಪಿ ಸೇರಿದ ಕೈ ಅಭ್ಯರ್ಥಿ

    ಮಂಗಳೂರು: ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಚುನಾವಣಾ ಕಾವು ಹೆಚ್ಚಾಗಿದ್ದು,ಎಲ್ಲೆಡೆ ಭರದ ಸಿದ್ದತೆ ನಡೆಯುತ್ತಿದೆ. ಇದರ‌ ನಡುವೆ ಕಾಂಗ್ರೆಸ್ ಬೆಂಬಲಿತ ಮಹಿಳಾ ಅಭ್ಯರ್ಥಿ ಚುನಾವಣೆ ನಡೆಯುವ ಮೊದಲೇ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದ ಅಚ್ಚರಿಯ ಘಟನೆ ಪುತ್ತೂರಿನಲ್ಲಿ‌ ನಡೆದಿದೆ.

    ಚುನಾವಣೆ ಬಂದಾಗ ಪಕ್ಷಾಂತರ ಆಗೋದು ಮಾಮೂಲಿ‌ ಆದರೂ ಇಲ್ಲಿ ಅಭ್ಯರ್ಥಿಯೇ ಪಕ್ಷಾಂತರ ಆಗುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಕ್ಷೇತ್ರಕ್ಕೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ಅನಿತಾ ಕೂವೆಂಜ ನಾಮಪತ್ರ ಸಲ್ಲಿಸಿದ್ದರು.

    ಕಳೆದ ತಾಲೂಕು ಪಂಚಾಯತ್ ಚುನಾವಣೆಯಲ್ಲೂ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಇದೀಗ ಕಾಂಗ್ರೆಸ್‌ ಬೆಂಬಲದಿಂದ ನಾಮಪತ್ರ ಸಲ್ಲಿಸಿದ್ದ ಅನಿತಾ ಚುನಾವಣೆ ನಡೆಯಲು ಇನ್ನೂ ಕೆಲ ದಿನ‌ ಬಾಕಿ ಇರುವಾಗಲೇ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರಿ ಕಾಂಗ್ರೆಸ್‌ ನಾಯಕರಿಗೆ ಶಾಕ್‌ ಕೊಟ್ಟಿದ್ದಾರೆ.

    ಇಂದು ಬಿಜೆಪಿಯ ಪುತ್ತೂರು ಕಚೇರಿಯಲ್ಲಿ ಕಾಣಿಸಿಕೊಂಡ ಅನಿತಾರನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಪಕ್ಷದ ಧ್ವಜ ನೀಡುವುದರ ಮೂಲಕ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಬರಮಾಡಿಕೊಂಡರು.

  • ಕಾಂಗ್ರೆಸ್ ಪಕ್ಷವನ್ನು ಯಾಕೆ ಸೋಲಿಸಿದ್ವಿಯೆಂದು ಜನ ಪರಿತಪಿಸುತ್ತಿದ್ದಾರೆ: ಸಿದ್ದರಾಮಯ್ಯ

    ಕಾಂಗ್ರೆಸ್ ಪಕ್ಷವನ್ನು ಯಾಕೆ ಸೋಲಿಸಿದ್ವಿಯೆಂದು ಜನ ಪರಿತಪಿಸುತ್ತಿದ್ದಾರೆ: ಸಿದ್ದರಾಮಯ್ಯ

    ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಯಾಕೆ ಸೋಲಿಸಿದ್ವಿ ಎಂದು ಜನರು ಪರಿತಪಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

    ಇಂದು ಆರಮನೆ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಯಾಕೆ ಸೋಲಿಸಿದ್ವಿ ಎಂದು ಜನ ಪರಿತಪಿಸುತ್ತಿದ್ದಾರೆ. ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ಮತ್ತೆ ತರಬೇಕು ಎಂದು ಚರ್ಚೆ ಶುರು ಆಗಿದೆ ಎಂದು ತಿಳಿಸಿದ್ದಾರೆ.

    ನಾವು 2018ರಲ್ಲಿ ಜೆಡಿಎಸ್‍ಗೆ ಬೆಂಬಲ ನೀಡಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಸಮ್ಮಿಶ್ರ ಸರ್ಕಾರ ಐದು ವರ್ಷಗಳ ಕಾಲ ಪೂರೈಸಲಿಲ್ಲ. ನಮ್ಮ ಮತ್ತು ಜೆಡಿಎಸ್ ಶಾಸಕರನ್ನು ಹಣದ ಆಸೆ ತೋರಿಸಿ ರಾಜೀನಾಮೆ ಕೊಡಿಸಿ ಆಪರೇಷನ್ ಕಮಲ ಮಾಡಿ ಕೋಟ್ಯಂತರ ರೂ. ಖರ್ಚು ಮಾಡಿದರು. ಒಬ್ಬ ಎಂಎಲ್‍ಎಗೆ 20 ರಿಂದ 25 ಕೋಟಿ ಖರ್ಚು ಮಾಡಿದರು. ಇದರಿಂದ ನಾವು ಆಪರೇಷನ್ ಕಮಲವನ್ನು ತಡೆಯಲು ಆಗಲಿಲ್ಲ ಎಂದಿದ್ದಾರೆ.

    ಶ್ರೀಮಾನ್ ಯಡಿಯೂರಪ್ಪ ಅವರಿಂದ ಆಪರೇಷನ್ ಕಮಲ ಅಂತ ಹೆಸರು ಬಂದಿದೆ. ಅದು 2008ರಲ್ಲಿ, ಆಗ ಅವರಿಗೆ ಬಹುಮತ ಇರಲಿಲ್ಲ ಆ ನಂತರ ಎಲೆಕ್ಷನ್‍ಗೆ ಹೋಗಿ ಅಲ್ಲಿ ಕೋಟಿ ಹಣ ಖರ್ಚು ಮಾಡಿ ಅಧಿಕಾರಕ್ಕೆ ಬಂದರು ಎಂದು ಸಿಎಂ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.