Tag: ಆಪರೇಷನ್ ಕಮಲ

  • ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ- ಬಿಜೆಪಿಗೆ ಸುಮಲತಾ ಆಪ್ತ ಸಚ್ಚಿದಾನಂದ ಸೇರ್ಪಡೆ

    ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ- ಬಿಜೆಪಿಗೆ ಸುಮಲತಾ ಆಪ್ತ ಸಚ್ಚಿದಾನಂದ ಸೇರ್ಪಡೆ

    ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಆಪ್ತ ಇಂಡುವಾಳು ಸಚ್ಚಿದಾನಂದ ಬಿಜೆಪಿ (BJP) ಗೆ ಸೇರ್ಪಡೆಗೊಂಡರು. ಸಾವಿರಕ್ಕೂ ಹೆಚ್ಚು ಬೆಂಬಲಿಗರೊಡನೆ ತೆರಳಿ ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಚ್ಚಿದಾನಂದ (Sacchidananda) ಅವರು ಪಕ್ಷ ಸೇರ್ಪಡೆಗೊಂಡರು.

    ಈ ಕಾರ್ಯಕ್ರಮದಲ್ಲಿ ಸಚಿವರಾದ ಅಶ್ವಥ್ ನಾರಾಯಣ್ (Ashwath Narayan), ಗೋಪಾಲಯ್ಯ, ನಾರಯಣಗೌಡ, ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್, ಶಾಸಕರಾದ ಸತೀಶ್ ರೆಡ್ಡಿ, ರವಿಸುಬ್ರಹ್ಮಣ್ಯ ಭಾಗಿಯಾದರು. ಇದೇ ವೇಳೆ ಮಂಡ್ಯ ಜಿಲ್ಲೆಯ ಹಲವು ಮುಖಂಡರ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ನಡೆಯಿತು.

    ಪಕ್ಷ ಸೇರ್ಪಡೆಯಾದ ಬಳಿಕ ಮಾತನಾಡಿದ ಸಚ್ಚಿದಾನಂದ, ಪ್ರಧಾನಿ ನರೇಂದ್ರ ಮೋದಿ (Narendra Modi) ಯ ನಾಯಕತ್ವವನ್ನು ಒಪ್ಪಿ ನಾನು ಬಿಜೆಪಿ ಸೇರಿದ್ದೇನೆ. ಮುಂದೆ ವಿಧಾನಸಭೆಗೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸಿ ಕೊಡ್ತೀವಿ ಎಂದರು. ಇದನ್ನೂ ಓದಿ: ರಾಜಕಾರಣಿಗಳ ಮಧ್ಯೆ ರೌಡಿಶೀಟರ್ ಸೈಲೆಂಟ್ ಸುನೀಲನ ದರ್ಬಾರ್ – ಪೊಲೀಸರು ಗಪ್‍ಚುಪ್

    ಸಚ್ಚಿದಾನಂದ ಅವರು ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ಸಂಸದ ಚುನಾವಣೆಯಲ್ಲಿ ಸುಮಲತಾ ಪರ ನಿಂತು ಕಾಂಗ್ರೆಸ್‍ನಿಂದ ಉಚ್ಛಾಟನೆ ಮಾಡಲಾಯಿತು. ಇದೀಗ ಸಂಸದೆ ಸುಮಲತಾ ಒಪ್ಪಿಗೆ ಪಡೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಯಾವುದೇ ಪಕ್ಷದಲ್ಲಿದ್ದರು ಸಚ್ಚಿದಾನಂದ ಬೆಂಬಲಿಸುವುದಾಗಿ ಸುಮಲತಾ ಹೇಳಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಶಾಸಕರ ಖರೀದಿಗೆ BJPಯಿಂದ ಸಾವಿರಾರು ಕೋಟಿ ಆಮಿಷ- ಕಾಂಗ್ರೆಸ್

    ಶಾಸಕರ ಖರೀದಿಗೆ BJPಯಿಂದ ಸಾವಿರಾರು ಕೋಟಿ ಆಮಿಷ- ಕಾಂಗ್ರೆಸ್

    ಬೆಂಗಳೂರು: ತೆಲಂಗಾಣದಲ್ಲಿ ಆಪರೇಷನ್ ಕಮಲ (Operation Kamala) ಶುರುವಾಗಿದ್ದು, ತೆಲಂಗಾಣ ರಾಷ್ಟ್ರ ಸಮಿತಿ (TRS) ಶಾಸಕರನ್ನು ಖರೀದಿಸಲು ಬಿಜೆಪಿ (BJP) ಸಾವಿರಾರು ಕೋಟಿ ಆಮಿಷ ಒಡ್ಡಿದೆ ಎಂದು ಕಾಂಗ್ರೆಸ್ (Congress) ಗಂಭೀರ ಆರೋಪ ಮಾಡಿದೆ.

    ಈ ಕುರಿತು ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ (Congress), ಮೂಲಗಳ ಪ್ರಕಾರ ಆಪರೇಷನ್ ಕಮಲದ (Operation Kamala) ರೂವಾರಿಗಳು ಅಮಿತ್ ಶಾ (Amit Shah), ಬಿ.ಎಲ್ ಸಂತೋಷ್ ಹಾಗೂ ಜೆ.ಪಿ ನಡ್ಡಾ (JP Nadda). ಸಂಸ್ಕಾರ, ಚಾರಿತ್ರ್ಯ ಹಾಗೂ ನೈತಿಕ ರಾಜಕಾರಣದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿ.ಎಲ್.ಸಂತೋಷ್ ಮಾಡುವುದು ಮಾತ್ರ ಅನಾಚಾರ. ಆಪರೇಷನ್ ಕಮಲ ಯಾವ ಸಂಸ್ಕಾರ ಎಂದು ಪ್ರಶ್ನಿಸಿದೆ.

    ಟಿಆರ್‌ಎಸ್ (ತೆಲಂಗಾಣ ರಾಷ್ಟ್ರ ಸಮಿತಿ) ಶಾಸಕರನ್ನು ಖರೀದಿಸಲು ಸಾವಿರಾರು ಕೋಟಿ ಆಮಿಷ ಒಡ್ಡಲಾಗಿದೆ. ಬಿಜೆಪಿಯವರಿಗೆ ಇಷ್ಟೊಂದು ದುಡ್ಡು ಬರುವುದು ಎಲ್ಲಿಂದ? ಆಪರೇಷನ್ ಕಮಲಕ್ಕೆ ಪಿಎಂ ಕೇರ್ (PM Cares) ನಿಧಿ ಬಳಸಲಾಗುತ್ತಿದೆಯೇ ಅಥವಾ ಭ್ರಷ್ಟಾಚಾರದಿಂದ ಗಳಿಸಿದ ಹಣ ಬಳಕೆಯಾಗುತ್ತಿದೆಯೇ? ನಾ ಖಾವೂಂಗಾ, ನಾ ಖಾನೇದೂಂಗಾ ಎನ್ನುವ ಮೋದಿಯವರೆ (Narendra Modi), ಆಪರೇಷನ್ ಕಮಲದ ಹಣದ ಮೂಲ ಯಾವುದು ತಿಳಿಸುವಿರಾ? ಎಂದು ಕುಟುಕಿದೆ.

    ಈಗಾಗಲೇ ಹಲವು ರಾಜ್ಯಗಳಲ್ಲಿ ಆಪರೇಷನ್ ಕಮಲದ ಮೂಲಕ ಅಕ್ರಮವಾಗಿ ಅಧಿಕಾರಕ್ಕೇರಿರುವ ಬಿಜೆಪಿ (BJP) ಈಗ ತೆಲಂಗಾಣದಲ್ಲೂ ಅನಿಷ್ಟ ಪ್ರಯತ್ನಕ್ಕೆ ಕೈ ಹಾಕಿದೆ. ಆದರೆ ತೆಲಂಗಾಣದಲ್ಲಿ ಆಪರೇಷನ್ ಕಮಲ ಯಶಸ್ವಿಯಾಗಿಲ್ಲ. ಏಕೆಂದರೆ ಆಪರೇಷನ್ ಕಮಲ ಬಿಜೆಪಿಯ ಅನೈತಿಕ ಶಿಶು. ಬಿಜೆಪಿಯವರು ಪ್ರಜಾಪ್ರಭುತ್ವದ ರಕ್ಷಕರಾಗದೇ ಭಕ್ಷಕರಾಗುತ್ತಿದ್ದಾರೆ ಎಂದು ಕಿಡಿ ಕಾರಿದೆ.

    Live Tv
    [brid partner=56869869 player=32851 video=960834 autoplay=true]

  • ತೆಲಂಗಾಣದಲ್ಲಿ ಆಪರೇಷನ್ ಕಮಲಕ್ಕೆ ಯತ್ನ – ಅಮಿತ್ ಶಾರನ್ನು ಬಂಧಿಸಿ: ಮನೀಶ್ ಸಿಸೋಡಿಯಾ

    ತೆಲಂಗಾಣದಲ್ಲಿ ಆಪರೇಷನ್ ಕಮಲಕ್ಕೆ ಯತ್ನ – ಅಮಿತ್ ಶಾರನ್ನು ಬಂಧಿಸಿ: ಮನೀಶ್ ಸಿಸೋಡಿಯಾ

    ನವದೆಹಲಿ: ತೆಲಂಗಾಣ ರಾಷ್ಟ್ರ ಸಮಿತಿ (TRS) ಪಕ್ಷದ ಕೆಲವು ಶಾಸಕರಿಗೆ ಲಂಚ ನೀಡಿ ಅವರನ್ನು ಆಪರೇಷನ್ ಕಮಲಕ್ಕೆ (Operation Lotus) ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಬಂಧಿಸುವಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಆಗ್ರಹಿಸಿದ್ದಾರೆ.

    ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ಸರ್ಕಾರಗಳನ್ನು ಉರುಳಿಸಲು ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಈ ಎಲ್ಲಾ ಕಾರ್ಯಗಳಲ್ಲಿ ಅಮಿತ್ ಶಾ ಭಾಗಿಯಾಗಿದ್ದಾರೆ. ಈ ಹಿಂದೆ ದೆಹಲಿ, ಪಂಜಾಬ್ ಮತ್ತು ಇತರ ಎಂಟು ರಾಜ್ಯಗಳಲ್ಲಿ ಶಾಸಕರ ಖರೀದಿಗೆ ಬಿಜೆಪಿ (BJP) ಪ್ರಯತ್ನ ಪಟ್ಟಿತ್ತು. ಈ ಬಾರಿ ತೆಲಂಗಾಣದಲ್ಲಿ ಬಿಜೆಪಿಯ ಡರ್ಟಿ ಗೇಮ್ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ ಆರೋಪಿಸಿದ್ದಾರೆ. ಇದನ್ನೂ ಓದಿ: ಹೆಗಲ ಮೇಲೆ ಮೇಕೆ ಹೊತ್ತ ರಾಹುಲ್ – ಫೋಟೋ ವೈರಲ್

    ಬಿಜೆಪಿಗೆ ಸೇರಲು ಕೆಲವು ಟಿಆರ್‌ಎಸ್‌ ಶಾಸಕರಿಗೆ ಲಂಚ ನೀಡಲು ಪ್ರಯತ್ನಿಸುತ್ತಿರುವ ಮೂವರು ವ್ಯಕ್ತಿಗಳ ನಡುವಿನ ಸಂಭಾಷಣೆಯ ಆಡಿಯೋದಲ್ಲಿ ಒಬ್ಬಾತ ʼಶಾಹ್ ಜಿʼ ಎಂದು ಹೇಳುತ್ತಿದ್ದಾನೆ. ಈ ಬಗ್ಗೆ ತನಿಖೆಯಾಗಬೇಕು ಈ ವೇಳೆ ಸತ್ಯ ಹೊರಬರಲಿದೆ ಎಂದು ತಿಳಿಸಿದ್ದಾರೆ.

    ʼಶಾಹ್ ಜಿʼ ಎಂದು ಆಡಿಯೋದಲ್ಲಿ ಕರೆಯುತ್ತಿರುವುದು ಅಮಿತ್ ಶಾ ಬಗ್ಗೆ ಆಗಿದ್ದರೆ ಅಮಿತ್ ಶಾರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಯಾಕೆಂದರೆ ಒಬ್ಬ ದಲ್ಲಾಳಿ, ಶಾಸಕರೊಬ್ಬರನ್ನು ಖರೀದಿಸಲು ಹೋಗಿ ಸಿಕ್ಕಿಬಿದ್ದು, ದೇಶದ ಗೃಹ ಸಚಿವರ ಹೆಸರು ಅದರಲ್ಲಿ ಕೇಳಿ ಬಂದರೆ ಅದು ಇಡೀ ದೇಶಕ್ಕೆ ಅಪಾಯಕಾರಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ತೆಲಂಗಾಣದಲ್ಲಿ TRS ಶಾಸಕರ ಖರೀದಿಗೆ ಯತ್ನ- 15 ಕೋಟಿ ಜೊತೆ ನಾಲ್ವರು ವಶಕ್ಕೆ

    ಕೆಲದಿನಗಳ ಹಿಂದೆ ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ತೆಲಂಗಾಣದಲ್ಲಿ ಟಿಆರ್‌ಎಸ್‌ ಶಾಸಕರನ್ನು ಖರೀದಿಸಲು ಯತ್ನಿಸಿದ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಆಪರೇಷನ್ ಕಮಲಕ್ಕಾಗಿ 15 ಕೋಟಿ ರೂ. ತಂದ ಆರೋಪದ ಮೇಲೆ ಹಣದ ಸಮೇತ ನಾಲ್ವರನ್ನು ಹೈದರಾಬಾದ್‍ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು.

    Live Tv
    [brid partner=56869869 player=32851 video=960834 autoplay=true]

  • `ಆಪರೇಷನ್ ಕಮಲ’ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸಿ- ಸುಪ್ರೀಂಗೆ ಡಿಕೆಶಿ ಮನವಿ

    `ಆಪರೇಷನ್ ಕಮಲ’ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸಿ- ಸುಪ್ರೀಂಗೆ ಡಿಕೆಶಿ ಮನವಿ

    ಶಿವಮೊಗ್ಗ: ಬಿಜೆಪಿ (BJP) ಆಪರೇಷನ್ ಕಮಲದ (Operation Kamala) ವಿರುದ್ಧ ಸುಪ್ರೀಂಕೋರ್ಟ್ (Supreme Court) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಮನವಿ ಮಾಡಿದ್ದಾರೆ.

    ಶಿವಮೊಗ್ಗದಲ್ಲಿಂದು (Shivamogga) ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಲ್ಲೆಡೆ ಆಪರೇಷನ್ ಕಮಲ ನಡೆಯುತ್ತಿದೆ. ರಾಜ್ಯದಲ್ಲೂ ಆಪರೇಷನ್ ಕಮಲದ ಮೂಲಕವೇ ಸರ್ಕಾರ (Government) ಅಧಿಕಾರಕ್ಕೆ ಬಂದಿದೆ. ಇದು ತೆಲಂಗಾಣದಲ್ಲೂ ಬಹಿರಂಗವಾಗಿದೆ. ಆದ್ದರಿಂದ ಸುಪ್ರೀಂಕೋರ್ಟ್ (Supreme Court) ಸ್ವಯಂಪ್ರೇರಿತವಾಗಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಕೋರಿದ್ದಾರೆ. ಇದನ್ನೂ ಓದಿ: ನಮ್ಮದು 3 ಬಾಗಿಲು ಆದ್ರೆ, ಬಿಜೆಪಿ ಅವ್ರದ್ದು 12 ಬಾಗಿಲು: ಡಿಕೆಶಿ

    ತೆಲಂಗಾಣ ಕರ್ನಾಟಕದಲ್ಲೂ ಆಪರೇಷನ್ ಕಮಲ ನಡೆದಿದೆ. ಇದು ಮನಿ ಲ್ಯಾಂಡಿಂಗ್ ಕಾಯ್ದೆ ಅಡಿಯಲ್ಲಿ ಬರುತ್ತದೆ. ಪಿಎಂಎಲ್ ಆಕ್ಟ್ (PML ACT) ಅಡಿ ಬರುವುದರಿಂದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳೇ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಸತ್ಯಾಸತ್ಯಗಳನ್ನ ಕಂಡುಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮನೆಯವರಿಗೆ ಕರೆ ಮಾಡಿ ಆಟೋ ಡ್ರೈವರ್ ಆತ್ಮಹತ್ಯೆ

    ಆಪರೇಷನ್ ಕಮಲದಲ್ಲಿ ಕೋಟಿ-ಕೋಟಿ ಹಣ ಪತ್ತೆಯಾಗಿದ್ದು ಸುಮೋಟೋ ಪ್ರಕರಣದಿಂದ ಇದರ ಸತ್ಯಾಸತ್ಯತೆ ಬಯಲಿಗೆಳೆಯಬೇಕಿದೆ ಎಂದು ಕೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಪರೇಷನ್ ಕಮಲದ ಭೀತಿ – ವಿಶ್ವಾಸ ಮತಯಾಚಿಸಿದ ಸಿಎಂ ಅರವಿಂದ್ ಕೇಜ್ರಿವಾಲ್

    ಆಪರೇಷನ್ ಕಮಲದ ಭೀತಿ – ವಿಶ್ವಾಸ ಮತಯಾಚಿಸಿದ ಸಿಎಂ ಅರವಿಂದ್ ಕೇಜ್ರಿವಾಲ್

    ನವದೆಹಲಿ: ಆಮ್‌ ಆದ್ಮಿ ಪಕ್ಷದ ಶಾಸಕರ ಖರೀದಿಗೆ ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ ಎನ್ನುವ ಆರೋಪಗಳ ನಡುವೆ ಇಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ್ದಾರೆ.

    62 ಆಪ್ ಶಾಸಕರ ಪೈಕಿ 58 ಶಾಸಕರು ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ಪರವಾಗಿ ಮತ ಚಲಾಯಿಸಿದ್ದಾರೆ. 70 ಸದಸ್ಯರ ಬಲ ಹೊಂದಿರುವ ದೆಹಲಿ ವಿಧಾನಸಭೆಯಲ್ಲಿ ಎಎಪಿ 62, ಬಿಜೆಪಿ ಎಂಟು ಶಾಸಕರನ್ನು ಹೊಂದಿದೆ. ಇದನ್ನೂ ಓದಿ: ನಾಗರಿಕರ ದಾಳಿಗೆ ಸಂಚು ರೂಪಿಸಿದ್ದ ಇಬ್ಬರು ಉಗ್ರರ ಹತ್ಯೆ

    ತಮ್ಮ ಸರ್ಕಾರವನ್ನು ಉರುಳಿಸಲು ಪ್ರತಿಪಕ್ಷ ಬಿಜೆಪಿಯ ‘ಆಪರೇಷನ್ ಕಮಲ’ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ನಂತರ ಅರವಿಂದ್ ಕೇಜ್ರಿವಾಲ್ ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯವನ್ನು ಪ್ರಸ್ತಾಪಿಸಿದ್ದರು, ಈ ವೇಳೆ ಎಲ್ಲ ಶಾಸಕರು ಕೇಜ್ರಿವಾಲ್ ಪರ ಮತ ಚಲಾಯಿಸಿದ್ದಾರೆ.

    ವಿಶ್ವಾಸ ಮತಯಾಚನೆ ಬಳಿಕ ಮಾತನಾಡಿದ ಅವರು, ಬಿಜೆಪಿ ದೆಹಲಿಯಲ್ಲಿ ಒಬ್ಬ ಎಎಪಿ ಶಾಸಕರನ್ನೂ ಖರೀದಿಸಲು ಸಾಧ್ಯವಾಗಲಿಲ್ಲ. ನಮ್ಮಲ್ಲಿ 62 ಶಾಸಕರಿದ್ದಾರೆ. ಇಬ್ಬರು ದೇಶದಿಂದ ಹೊರಗಿದ್ದಾರೆ. ಒಬ್ಬರು ಜೈಲಿನಲ್ಲಿದ್ದಾರೆ. ನಾಲ್ಕನೇ ಸದಸ್ಯರು ಸದನದ ಸ್ಪೀಕರ್ ಆಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಮಾನ್ಯತೆ ಇಲ್ಲದ ಮದರಸಾಗಳ ಆದಾಯ ಪರಿಶೀಲಿಸಲು ಮುಂದಾದ ಯುಪಿ ಸರ್ಕಾರ

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರಪತಿ ಚುನಾವಣೆಯಲ್ಲೂ ಆಪರೇಷನ್‌ ಕಮಲದ ಸದ್ದು

    ರಾಷ್ಟ್ರಪತಿ ಚುನಾವಣೆಯಲ್ಲೂ ಆಪರೇಷನ್‌ ಕಮಲದ ಸದ್ದು

    ನವದೆಹಲಿ: ನಾಳೆ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಎನ್‍ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲ್ಲುವುದು ಬಹುತೇಕ ಖಚಿತವಾಗಿದೆ. ಆದರೆ ಈ ಚುನಾವಣೆಯಲ್ಲೂ ಆಪರೇಷನ್‌ ಕಮಲದ ಆರೋಪ ಕೇಳಿಬಂದಿದೆ.

    ಬಿಜೆಪಿ ನೇತೃತ್ವದ ಎನ್‍ಡಿಎ ಬಳಿ ಶೇ.60ಕ್ಕೂ ಹೆಚ್ಚು ಅಂದರೆ 6.67 ಲಕ್ಷಕ್ಕೂ ಹೆಚ್ಚು ಮತಗಳು ಇವೆ. ಮೂರು ಲಕ್ಷ ಚಿಲ್ಲರೆ ಮತಗಳನ್ನು ವಿಪಕ್ಷಗಳಲ್ಲಿ ಒಗ್ಗಟ್ಟು ಇಲ್ಲದ ಕಾರಣ ಯಶವಂತ್ ಸಿನ್ಹಾ ಸೋಲು ಬಹುತೇಕ ಖಚಿತವಾಗಿದೆ. ಅವರ ಬಳಿ ಮೂರು ಲಕ್ಷ ಚಿಲ್ಲರೇ ಮತಗಳಷ್ಟೇ ಇವೆ.

    ಪ್ರಮುಖವಾಗಿ ವಿಪಕ್ಷಗಳಲ್ಲಿನ ಬುಡಕಟ್ಟು ಸಮುದಾಯದ ಶಾಸಕರು, ಸಂಸದರಿಗೆ ಬಿಜೆಪಿ ಗಾಳ ಹಾಕಿದೆ ಎಂಬ ಆರೋಪ ಕೇಳಿ ಬಂದಿದೆ.  ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ಯಶವಂತ್‌ ಸಿನ್ಹಾ ಬಿಜೆಪಿ ಹಣ ಆಮಿಷವನ್ನು ಒಡ್ಡಿದೆ ಎಂಬ ಆರೋಪ ಮಾಡಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಮುರ್ಮು ಗೆಲ್ಲುವುದು ಪಕ್ಕಾ ಆಗಿರುವುದರಿಂದ ಬಿಜೆಪಿಯವರು ಫುಲ್ ಜೋಷ್‍ನಲ್ಲಿ ಇದ್ದಾರೆ. ಇದನ್ನೂ ಓದಿ: 75 ವರ್ಷಗಳ ಬಳಿಕ ಪಾಕ್‍ನಲ್ಲಿರುವ ಪೂರ್ವಜರ ಮನೆಗೆ ಭೇಟಿ ನೀಡಿದ ಭಾರತೀಯ ಮಹಿಳೆ

    ಇದೇ ಜೋಷ್‍ನಲ್ಲಿ ಎನ್‍ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಬಂಗಾಳದ ರಾಜ್ಯಪಾಲ ಜಗದೀಪ್ ಧನ್ಕರ್‌ ಅವರನ್ನು ಕಣಕ್ಕಿಳಿಸಿದೆ. ವಿಪಕ್ಷಗಳು ಇಂದು ಅಭ್ಯರ್ಥಿಯನ್ನು ಪ್ರಕಟಿಸುವ ಸಂಭವ ಇದೆ.

    Live Tv
    [brid partner=56869869 player=32851 video=960834 autoplay=true]

  • ಆಪರೇಷನ್ ದಕ್ಷಿಣ್ ಮೂಲಕ ಪ್ರಜಾಪ್ರಭುತ್ವ ಮುಕ್ತ ಭಾರತ ನಿರ್ಮಾಣವೇ ಬಿಜೆಪಿ ಗುರಿ: HDK

    ಆಪರೇಷನ್ ದಕ್ಷಿಣ್ ಮೂಲಕ ಪ್ರಜಾಪ್ರಭುತ್ವ ಮುಕ್ತ ಭಾರತ ನಿರ್ಮಾಣವೇ ಬಿಜೆಪಿ ಗುರಿ: HDK

    ಬೆಂಗಳೂರು: ಆಪರೇಷನ್ ದಕ್ಷಿಣ್ ಎಂಬ ಸ್ಲೋಗನ್ ಮೂಲಕ ಬಿಜೆಪಿ ಪಕ್ಷವು ಪ್ರಾದೇಶಿಕ ಪಕ್ಷಗಳನ್ನು ಸಂಪೂರ್ಣವಾಗಿ ಮೂಲೋತ್ಪಾಟನೆ ಮಾಡಿ, ಪ್ರತಿಪಕ್ಷ ಮತ್ತು ಪ್ರಜಾಪ್ರಭುತ್ವ ಮುಕ್ತ ಭಾರತ ನಿರ್ಮಾಣ ಮಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

    ಹೈದರಾಬಾದ್ ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಆಪರೇಷನ್ ದಕ್ಷಿಣ್ ಹೆಸರಿನಲ್ಲಿ ದಕ್ಷಿಣ ಭಾರತದಲ್ಲಿ ತನ್ನ ನೆಲೆಯನ್ನು ವಿಸ್ತರಿಸುವ ಬಿಜೆಪಿ ಆಕ್ರಮಣಶೀಲತೆಯನ್ನು ಮಾಜಿ ಸಿಎಂ ಕಟುವಾಗಿ ಟೀಕಿಸಿದ್ದಾರೆ. ಈ ಬಗ್ಗೆ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಮುಖ್ಯವಾಗಿ ಜೆಡಿಎಸ್ ಬಗ್ಗೆ ಮಾತನಾಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮೇಲೆ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ.

    ಜೆಡಿಎಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲವೆಂಬ ಸಿ.ಟಿ.ರವಿ ಅವರ ಹೇಳಿಕೆಗೆ ಸಿಡಿಮಿಡಿಗೊಂಡ ಹೆಚ್‌ಡಿಕೆ, ರವಿ ಅವರೇ, ಆಂತರಿಕ ಪ್ರಜಾಪ್ರಭುತ್ವ ಎಂದರೆ ನರೇಂದ್ರ ಮೋದಿ ಮುಂದೆ ಸತ್ತಸೊಂಟದವರಂತೆ ನಡುಬಗ್ಗಿಸಿ ತಲೆ ಅಲ್ಲಾಡಿಸುವುದಾ? ಜೀ-ಜೀ ಎನ್ನುತ್ತಾ ಜೀ ಹುಜೂರ್ ಎನ್ನುವುದಾ? 25 ಸಂಸದರ ಯೋಗ್ಯತೆ ಏನು? ಅವರಿಗೆಷ್ಟು ಸ್ವಾತಂತ್ರ‍್ಯ ಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಎಲ್ಲ ಆರೋಪಿಗಳಿಗೆ ನಮ್ಮ ಮಗನ ರೀತಿಯಲ್ಲಿಯೇ ಶಿಕ್ಷೆ ಕೊಡುತ್ತೇನೆ: ಹರ್ಷನ ತಾಯಿ

    ಆಪರೇಷನ್ ದಕ್ಷಿಣ್ ಬಗ್ಗೆ ಕಿಡಿಕಾರಿರುವ ಅವರು, ಇದು ಬಿಜೆಪಿಯ ಹೊಸ ಸ್ಲೋಗನ್. ಹೈದರಾಬಾದ್ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಭಾವನಾನ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು, ಜನರ ಮನಸ್ಸುಗಳನ್ನು ಒಡೆದು ರಾವಣ ರಾಜಕೀಯದ ವಿನಾಶಕಾರಿ ದಾರಿಗೆ ಹಿಡನ್ ಅಜೆಂಡಾ ಸಿದ್ಧ ಮಾಡಲಾಯಿತಾ? ಹೇಳಿ ಮಾನ್ಯ ಸಿ.ಟಿ.ರವಿ ಯವರೇ? ಎಂದು ವ್ಯಂಗ್ಯವಾಡಿದ್ದಾರೆ.

    ನೆಮ್ಮದಿಯ ಸಮಾಜಕ್ಕೆ ಕೋಮುವಿಷ ಪ್ರಾಶಣ ಮಾಡುವ ಇಂಜೆಕ್ಷನ್. ಧರ್ಮ, ದೇವರು, ಜಾತಿ, ಭಾಷೆ, ಆಚಾರ, ಆಹಾರ, ವ್ಯಾಪಾರಗಳನ್ನು ಎಳೆತಂದು, ಅಸಹಿಷ್ಣುತೆ ಸೃಷ್ಟಿಸಿ ಭಾರತವನ್ನು ಧರ್ಮದ ಆಧಾರದಲ್ಲಿ ಒಡೆದು ಹಾಕುವುದಾ? ಕರ್ನಾಟಕದ ನಂತರ ನಿಮ್ಮ ಮುಂದಿನ ಗುರಿ ದಕ್ಷಿಣ ಭಾರತ. ಹೌದಲ್ಲವೇ ಸಿ.ಟಿ.ರವಿಯವರೇ? ಎಂದು ಕುಟುಕಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಫೇಕ್ ವೀಡಿಯೋ ವೈರಲ್ – ಬಿಜೆಪಿ ಶಾಸಕರ ವಿರುದ್ಧ ಎಫ್‍ಐಆರ್

    ಆಪರೇಷನ್ ದಕ್ಷಿಣ್ ಅಂದರೆ, ಆಪರೇಷನ್ ಕಮಲದ ರಾಷ್ಟ್ರೀಕರಣ ಮತ್ತು ತುಷ್ಠೀಕರಣ. ಶಾಸಕರ ಖರೀದಿ, ಕುದುರೆ ವ್ಯಾಪಾರ, ಕರ್ನಾಟಕದ ನಂತರ ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರ ಪ್ರದೇಶಕ್ಕೂ ವಿಸ್ತರಿಸುವ ಡೋಂಗಿ ರಾಷ್ಟ್ರಪ್ರೇಮಿಗಳ ರಾಜಕಾರಣ. ದಕ್ಷಿಣದ ಮೇಲೆ ಆಪರೇಷನ್ ಕಮಲದ ದುರಾಕ್ರಮಣ ಹೌದಲ್ಲವೇ ಸಿ.ಟಿ.ರವಿಯವರೇ? ಎಂದು ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

    HDK

    ಆಪರೇಷನ್ ಕಮಲಕ್ಕೆ ಬ್ರ‍್ಯಾಂಡ್ ಅಂಬಾಸಿಡರ್ ಒಬ್ಬರು ಬೇಕಲ್ಲವೇ? ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರನ್ನೇ ಬ್ರ‍್ಯಾಂಡ್ ರಾಯಭಾರಿ ಮಾಡುತ್ತೀರಾ? ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಇದೂ ಚರ್ಚೆಗೆ ಬಂತಾ? ಮೋದಿ ಸಾಹೇಬರು ಒಪ್ಪಿದರಾ? ಎಷ್ಟಾದರೂ ನಿಮ್ಮ ಅಮಿತೋತ್ಸಾಹಕ್ಕೆ ಆಪರೇಷನ್ ಕಮಲವೇ ಕಾರಣ ಅಲ್ಲವೇ? ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮುಂಚೆನೇ ಹೇಳಿದ್ದೆ, ಯಾರು ಎಷ್ಟೇ ದೊಡ್ಡವರಿದ್ರೂ ಕ್ರಮ ತಗೋತೀವಿ ಅಂತ: ಸಿಎಂ

    ಆಪರೇಷನ್ ದಕ್ಷಿಣ್ ಅಂದರೆ, ಬಿಜೆಪಿ ಪರಿವಾರ ರಾಜಕಾರಣವನ್ನು ಮತ್ತಷ್ಟು ಬಲಪಡಿಸುವುದಾ? ಆಗ ಕಾಂಗ್ರೆಸ್ ಮುಕ್ತ ಭಾರತ ಈಗ ಪರಿವಾರಮುಕ್ತ ಭಾರತ ನಂತರ ಪ್ರತಿಪಕ್ಷ ಮುಕ್ತ ಭಾರತ ಮುಂದೆ ಸಂಪೂರ್ಣ ಪ್ರಜಾಪ್ರಭುತ್ವ ಮುಕ್ತ ಭಾರತ್ ನಿರ್ಮಾಣ ಇದಲ್ಲವೇ ನಿಮ್ಮ ಬಿಜೆಪಿಯ ಭವ್ಯಗುರಿ? ಉತ್ತರಿಸಿ ಎಂದು ಕುಮಾರಸ್ವಾಮಿ ಕಾಲೆಳೆದಿದ್ದಾರೆ.

    ದಕ್ಷಿಣದಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಶಕ್ತಿ. ಇಲ್ಲಿ ಹೆಜ್ಜೆ ಇಡಲು ಬಿಜೆಪಿಗೆ ಆಗುತ್ತಿಲ್ಲ. ಆಪರೇಷನ್ ಕಮಲದಿಂದ ಕರ್ನಾಟಕದಲ್ಲಿ ಅಧಿಕಾರ ಹಿಡಿದಿರಿ. ಒಡಿಶಾ, ತೆಲಂಗಾಣ, ಆಂಧ್ರ, ತಮಿಳುನಾಡು, ಕೇರಳದಲ್ಲಿ ನಿಮ್ಮ ಬೇಳೆ ಬೇಯಲಿಲ್ಲ. ಅದಕ್ಕೀಗ `ಪರಿವಾರ ಮುಕ್ತ ರಾಜಕೀಯ’ ಎಂದು ರಾಗ ತೆಗೆಯುತ್ತಿದ್ದೀರಿ. ಸತ್ಯ ಹೇಳಿ ಸಿ.ಟಿ.ರವಿಯವರೇ ಎಂದು ಕಿಡಿಕಾರಿದ್ದಾರೆ.

    ಪ್ರಾದೇಶಿಕ ಪಕ್ಷಗಳನ್ನು ಎದುರಿಸಲಾಗದ ಬಿಜೆಪಿ, ಈಗ ಪರಿವಾರ ಜಪ ಮಾಡುತ್ತಿದೆ. ಅಯ್ಯೋ ಪಾಪ ಮಹಾರಾಷ್ಟçದಲ್ಲಿ ಆಪರೇಷನ್ ಕಮಲ ಮಾಡಿ ನೀವು ಮುಖ್ಯಮಂತ್ರಿ ಮಾಡಿದ ಏಕನಾಥ್ ಶಿಂಧೆ ಅವರ `ಏಕಪರಿವಾರ ಪಾಲಿಟಿಕ್ಸ್’ ಗೊತ್ತಿರಲಿಲ್ಲವೇ? ಬೋಧನೆ ಒಂದು ಬೋಜನ ಇನ್ನೊಂದು ಛೇ, ಹೇಸಿಗೆ. ಯಡಿಯೂರಪ್ಪ ಮತ್ತು ಸನ್ಸ್, ರವಿ ಸುಬ್ರಹ್ಮಣ್ಯ-ತೇಜಸ್ವಿಸೂರ್ಯ, ಅಶೋಕ್-ರವಿ, ಸೋಮಣ್ಣ-ಅರುಣ್ ಸೋಮಣ್ಣ, ಲಿಂಬಾಳಿ-ರಘು, ವಿಶ್ವನಾಥ್-ವಾಣಿ ವಿಶ್ವನಾಥ್, ಶೆಟ್ಟರ್-ಪ್ರದೀಪ್ ಶೆಟ್ಟರ್, ನಿರಾಣಿ-ಹನುಮಂತ ನಿರಾಣಿ, ಜಿ.ಎಸ್.ಬಸವರಾಜು-ಜ್ಯೋತಿ ಗಣೇಶ್ ಮತ್ತು ಜಾರಕಿಹೊಳಿ, ಕತ್ತಿ, ಅಂಗಡಿ, ಉದಾಸಿ ಕುಟುಂಬಗಳು.. ಇದೆಲ್ಲಾ ಏನು? ಎಂದು ಅವರು ಕೇಳಿದ್ದಾರೆ.

    ಪರಿವಾರ ರಾಜಕಾರಣಕ್ಕೆ ಬಿಜೆಪಿ ಅತೀತವಲ್ಲ. ರಾಜ್ಯದ ಲೆಕ್ಕ ಕೊಟ್ಟಿದ್ದೇನೆ. ಭಾರತದ ಪಟ್ಟಿ ಕೊಡಲೇ? ಅಬ್ಬರ ಜಾಸ್ತಿ, ಅಭಿವೃದ್ಧಿ ನಾಸ್ತಿ. ಇದು ಬಿಜೆಪಿ ನೀತಿ. ಬಿಜೆಪಿ ಪಕ್ಷದ್ದು ಆಪರೇಷನ್ ದಕ್ಷಿಣ್ ಅಲ್ಲ, ಆ ಬಿಜೆಪಿ ಅಸ್ತಿತ್ವಕ್ಕೇ ಆಪರೇಷನ್ ಆಗುವ ಕಾಲ ಹತ್ತಿರದಲ್ಲೇ ಇದೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಪಾತ್ರವಿಲ್ಲ: ಶ್ರೀರಾಮುಲು

    ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಪಾತ್ರವಿಲ್ಲ: ಶ್ರೀರಾಮುಲು

    ಬಳ್ಳಾರಿ: ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಪಾತ್ರವಿಲ್ಲ. ನಾವೂ ಆಪರೇಷನ್ ಕಮಲ ಮಾಡುತ್ತಿಲ್ಲ ಎಂದು ಬಳ್ಳಾರಿಯಲ್ಲಿ ಉಸ್ತುವಾರಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವೂ ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡುತ್ತಾರೆ ಎನ್ನುವುದನ್ನು ಕೇಳಿದ್ದೇನೆ. ಈ ರೀತಿಯ ಹಲವಾರು ರಾಜಕೀಯ ಘಟನೆಗಳು ಬೇರೆ ಬೇರೆ ರಾಜ್ಯಗಳಲ್ಲಿ ನಡೆದಿವೆ. ಅಲ್ಲಿನ ಶಾಸಕರೇ ಆ ಸರ್ಕಾರದಲ್ಲಿ ಇರಲ್ಲ ಅಂದ ಮೇಲೆ ಅಘಾಡಿ ಸರ್ಕಾರ ಉಳಿಯುವ ಮಾತೇ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: 7 ಭ್ರೂಣಗಳ ಪತ್ತೆ ಪ್ರಕರಣ – ಭ್ರೂಣಗಳನ್ನು ಎಸೆದಿದ್ದ ಆಸ್ಪತ್ರೆ ಸೀಜ್ ಮಾಡಿದ DHO

    ಇದೇ ವೇಳೆ ಮನಸ್ಸು ಮಾಡಿದರೆ ಒಂದು ದಿನದ ಮಟ್ಟಿಗೆ ನಾನು ಸಿಎಂ ಆಗುತ್ತೇನೆ ಎಂಬ ಜನಾರ್ದನ ರೆಡ್ಡಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇದರ ಬಗ್ಗೆ ನೀವು ಜರ್ನಾದನ ರೆಡ್ಡಿ ಅವರನ್ನೇ ಕೇಳಬೇಕು. ಜರ್ನಾದನ ರೆಡ್ಡಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅದು ಅವರ ವೈಯಕ್ತಿಕ ಹೇಳಿಕೆ, ಅವರ ಹೇಳಿಕೆಗೂ ಹಾಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಷಕಂಟನಂತೆ ಮೋದಿ 19 ವರ್ಷಗಳಿಂದ ಗುಜರಾತ್ ಗಲಭೆ ನೋವನ್ನು ಸಹಿಸಿಕೊಂಡಿದ್ದಾರೆ: ಅಮಿತ್ ಶಾ

    ಮುಂಬರುವ ಚುನಾವಣೆಯಲ್ಲಿ ನಾನು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಅಂತ ಇನ್ನೂ ನಿರ್ಧಾರ ಮಾಡಿಲ್ಲ. ನನ್ನ ಸ್ಪರ್ಧೆ ಬಗ್ಗೆ ಪಕ್ಷ ನಿರ್ಧಾರ ಮಾಡುತ್ತದೆ. ಸದ್ಯಕ್ಕೆ ಸೇವೆ ಮಾಡುವ ಅವಕಾಶವನ್ನು ಭಗವಂತ ನೀಡಿದ್ದಾನೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆಗಿರುವೆ. ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುವೆ ಎಂದಿದ್ದಾರೆ.

    Live Tv

  • ಎದುರಾಳಿಗಳ ನಂಬರ್ ಎಷ್ಟೇ ಇರಲಿ, ಗೇಮ್ ನಮ್ಮದೇ: ಆಪರೇಷನ್ ಕಮಲದ ಸಂದೇಶ ಏನು!?

    ಎದುರಾಳಿಗಳ ನಂಬರ್ ಎಷ್ಟೇ ಇರಲಿ, ಗೇಮ್ ನಮ್ಮದೇ: ಆಪರೇಷನ್ ಕಮಲದ ಸಂದೇಶ ಏನು!?

    ಮುಂಬೈ: ಬಿಜೆಪಿ ಆಪರೇಷನ್ ಕಮಲದ ಚದುರಂಗದಾಟ ಮುಂದುವರಿದಿದೆ.‌ ಕರ್ನಾಟಕ ಆಪರೇಷನ್ ಕಮಲದ ತಂತ್ರಗಾರಿಕೆಯೇ ಮಹಾರಾಷ್ಟ್ರದಲ್ಲೂ ಮರುಕಳಿಸಿದೆ. ಕರ್ನಾಟಕದ ನಂಬರ್ 17 ಆಗಿದ್ರೆ, ಮಹಾರಾಷ್ಟ್ರದ ನಂಬರ್ 40 ತಲುಪುತ್ತಿದೆ. ಹಾಗಾದ್ರೆ ಮೋದಿ- ಶಾ ಜೋಡಿಯ ಆಪರೇಷನ್ ಅಸಲಿಯತ್ತು ಏನು? ಇನ್ ಸೈಡ್ ಸ್ಟೋರಿ ಇಲ್ಲಿದೆ ನೋಡಿ.

    ಒಂದು ಕಾಲ ಇತ್ತು. ಸರ್ಕಾರ ರಚನೆಗೆ ನಾಲ್ಕೈದು ಶಾಸಕರ ಕೊರತೆ ಇದ್ದರೆ ಹೇಗೆ ಅವರನ್ನ ಸೆಳೆಯೋದು? ಹೇಗೆ ಸರ್ಕಾರ ರಚನೆ ಮಾಡೋದು ಎಂಬ ಸರ್ಕಸ್ ದೊಡ್ಡಮಟ್ಟದಲ್ಲೇ ಇರ್ತಿತ್ತು. ಆದ್ರೆ ಈಗ ಚಿಟಿಕೆ ಹೊಡೆಯುವಷ್ಟರಲ್ಲಿ ನಂಬರ್ ಹೊಂದಿಸಬಹುದು ಎಂಬ ಮಟ್ಟಕ್ಕೆ ತಲುಪಿದೆ. ಅದೇ ಬಿಜೆಪಿ ಹೈಕಮಾಂಡ್ ಮಾಸ್ಟರ್ ಗೇಮ್ ಎನ್ನಲಾಗಿರುವ ಆಪರೇಷನ್ ಕಮಲ. ಎದುರಾಳಿಗಳ ನಂಬರ್ ಎಷ್ಟೇ ಇದ್ದರೂ ಆಟ ನಮ್ಮದೇ ಎಂಬ ರಾಜಕೀಯ ಸಂದೇಶ ರವಾನಿಸಿದೆ ಬಿಜೆಪಿ. ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ: ಉದ್ಧವ್‌ ಠಾಕ್ರೆ

    ಕರ್ನಾಟಕದಲ್ಲಿ 17 ಶಾಸಕರ ಆಪರೇಷನ್ ಮಾಡಿದ್ದ ಬಿಜೆಪಿ ಹೈಕಮಾಂಡ್, ಒಂದೆರಡು ಫೆಲ್ಯೂರ್ ಆಗಿ ಅಮೇಲೆ ಸಕ್ಸಸ್ ಆಗಿತ್ತು. ಕರ್ನಾಟಕದ ಆಪರೇಷನ್ ಕಮಲವೇ ಮಧ್ಯಪ್ರದೇಶಕ್ಕೆ ಮೆಟ್ಟಿಲಾಯ್ತು. ಈಗ ಮಹಾರಾಷ್ಟ್ರದ ಆಪರೇಷನ್ ಕಮಲಕ್ಕೆ ಮೆಟ್ಟಿಲಾಯ್ತಾ? ಎಂಬ ಚರ್ಚೆ ನಡೆಯುತ್ತಿದೆ. ಅಂದಹಾಗೆ ಶಿವಸೇನೆಯ 35 ರಿಂದ 40 ಶಾಸಕರಿಗೆ ಆಪರೇಷನ್ ಕಮಲ ನಡೆದಿದೆ ಎನ್ನಲಾಗ್ತಿದ್ದು, ಎಷ್ಟೇ ದೊಡ್ಡ ಸಂಖ್ಯೆ ಇದ್ದರೂ ನಾವು ಕೇರ್ ಮಾಡಲ್ಲ ಎಂಬ ಸಂದೇಶ ರವಾನಿಸಿದೆ ಎನ್ನಲಾಗಿದೆ. ದೇಶದಲ್ಲಿ ಗಟ್ಟಿ ಸರ್ಕಾರ ಇದ್ದರೆ ಯಾವ ರಾಜ್ಯದಲ್ಲಾದ್ರೂ ನಾವು ಅಧಿಕಾರ ಹಿಡಿಯುತ್ತೇವೆ. ಕೇಂದ್ರದಲ್ಲಿ 2024ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ವಿವಿಧ ರಾಜ್ಯಗಳಲ್ಲಿ ಆಪರೇಷನ್ ಕಮಲ ನಡೆಯುತ್ತಿದೆ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.

    ಅಂದಹಾಗೆ 2019 ಜುಲೈ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನ ಆಗುತ್ತೆ. ಅಂದು ಕರ್ನಾಟಕದಲ್ಲಿ ಆಪರೇಷನ್ ಕಮಲಕ್ಕೆ ಮುಂಬೈ ಸೇಫ್ ಜಾಗ‌ ಆಗಿತ್ತು. ಕರ್ನಾಟಕದ ಆಪರೇಷನ್ ಕಮಲದ ವೇಳೆ ಎರಡ್ಮೂರು‌ ಬ್ಯಾಚ್ ಮಾಡಿ ದೆಹಲಿ, ಅಹಮದಾಬಾದ್, ಮುಂಬೈಗೆ ಕಾಂಗ್ರೆಸ್- ಜೆಡಿಎಸ್ ಶಾಸಕರನ್ನ ಬಿಜೆಪಿ ಹೈಕಮಾಂಡ್ ಕಳುಹಿಸಿತ್ತು. ಬಳಿಕ ಮುಂಬೈನಲ್ಲಿ ಎಲ್ಲರನ್ನೂ ಗುಡ್ಡೆ ಹಾಕಿದ್ದ ಬಿಜೆಪಿ ಹೈಕಮಾಂಡ್ ಆಪರೇಷನ್ ಕಮಲ‌ ಸಕ್ಸಸ್ ಮಾಡಿಕೊಂಡಿತ್ತು. ಇದೀಗ ಮಹಾರಾಷ್ಟ್ರ ಆಪರೇಷನ್ ಕಮಲಕ್ಕೂ ಭರ್ಜರಿ ಸಿದ್ಧತೆ ಮಾಡಿರುವ ಬಿಜೆಪಿ ಹೈಕಮಾಂಡ್ ಸೂರತ್, ಅಹಮದಾಬಾದ್‌ನಿಂದ ಅಸ್ಸಾಂನ ಗುವಾಹಟಿಗೆ ಶಿವಸೇನಾ ರೆಬೆಲ್ಸ್ ಶಿಫ್ಟ್ ಮಾಡಿದೆ. ಅಸ್ಸಾಂನಲ್ಲೇ ಆಪರೇಷನ್ ಕಮಲದ ಶಿವಸೇನಾ ಶಾಸಕರನ್ನ ಇರಿಸಲು ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ MVA ಸರ್ಕಾರ ಪತನ? – ಶೀಘ್ರವೇ ಬಿಜೆಪಿ ಅಧಿಕಾರಕ್ಕೆ

    ಒಟ್ನಲ್ಲಿ ಮಹಾರಾಷ್ಟ್ರ ಆಪರೇಷನ್ ಕಮಲಕ್ಕೆ ಬಿಜೆಪಿ ಹೈಕಮಾಂಡ್ ಮಾಸ್ಟರ್ ಮೈಂಡ್ ಗೇಮ್ ಫಿಕ್ಸ್ ಮಾಡಿದ್ದು, ಕರ್ನಾಟಕದ ಆಪರೇಷನ್ ಮಹಾರಾಷ್ಟ್ರ ಆಪರೇಷನ್ ಕಮಲಕ್ಕೆ ಬಲ ತಂದುಕೊಡ್ತಾ? ಎಂಬ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿರೋದಂತೂ ಸತ್ಯ.

    Live Tv

  • ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ – ಸುಳಿವು ಬಿಟ್ಟುಕೊಟ್ಟ ಅಶ್ವಥ್ ನಾರಾಯಣ್

    ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ – ಸುಳಿವು ಬಿಟ್ಟುಕೊಟ್ಟ ಅಶ್ವಥ್ ನಾರಾಯಣ್

    ಹುಬ್ಬಳ್ಳಿ: ಕುಟುಂಬ ಪಕ್ಷಗಳ ನಿಲುವಿನಿಂದ ಬೇಸತ್ತು ಕೆಲವರು ಬಿಜೆಪಿಗೆ ಬರುತ್ತಾರೆ ಕಾದು ನೋಡಿ, ಪರಿಸ್ಥಿತಿಗೆ ಅನುಗುಣವಾಗಿ ಯಾರ‍್ಯಾರು ಬರುತ್ತಾರೆ ಎನ್ನುವುದು ಗೊತ್ತಾಗುತ್ತದೆ ಎಂದು ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲದ ಸುಳಿವನ್ನು ಸಚಿವ ಅಶ್ವಥ್ ನಾರಾಯಣ್ ಬಿಟ್ಟುಕೊಟ್ಟಿದ್ದಾರೆ.

    bjP

    ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ಬೇರೆ ಪಕ್ಷಗಳಿಗಿಂತ ಬಿಜೆಪಿಯಲ್ಲಿ ಉತ್ತಮ ಭವಿಷ್ಯವಿದೆ. ಅದೇ ರೀತಿ ಅವಕಾಶಗಳಿವೆ. ಹೀಗಾಗಿ ಇನ್ನೂ ಹಲವು ಜನ ಬಿಜೆಪಿಗೆ ಸೇರಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಸ್‍ಡಿಪಿಐ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಪೊಲೀಸರು

    ಇದೇ ವೇಳೆ ಉತ್ತರಪ್ರದೇಶದಲ್ಲಿನ ಹಿಂಸಾಚಾರ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ಒಂದು ಹೇಳಿಕೆಯನ್ನಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ. ಇದು ಸರಿಯಲ್ಲ. ದೇಶದ ಐಕ್ಯತೆ ವಿಚಾರದಲ್ಲಿ ಹಿಂಸಾಚಾರ ನಡೆಸುವುದು ಸರಿಯಲ್ಲ ಎಂದರು. ರಾಜ್ಯಸಭೆ ಚುನಾವಣೆಯಲ್ಲಿ ಗೆಲುವಿನಲ್ಲಿ ಎ ಟೀಂ, ಬಿ ಟೀಂ ಎನ್ನುವ ಪ್ರಶ್ನೆಯೇ ಇಲ್ಲ. ನಮ್ಮ ಸಂಖ್ಯಾಬಲ ಜಾಸ್ತಿ ಇದೆ. ಹೀಗಾಗಿ ಸಹಜವಾಗಿ ಗೆಲುವು ಸಿಕ್ಕಿದೆ ಎಂದಿದ್ದಾರೆ. ಇದನ್ನೂ ಓದಿ: ಜಮ್ಮು- ಕಾಶ್ಮೀರದಲ್ಲಿ ಎನ್‍ಕೌಂಟರ್ – ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಓರ್ವ ಹತ್ಯೆ