Tag: ಆಪರೇಶನ್ ಥಿಯೇಟರ್

  • ಆಪರೇಷನ್ ಥಿಯೇಟರ್‌ನಲ್ಲಿ ನರ್ಸ್‌ಗೆ ಕಿಸ್ ಮಾಡಿದ ವೈದ್ಯ: ವಿಡಿಯೋ ವೈರಲ್

    ಆಪರೇಷನ್ ಥಿಯೇಟರ್‌ನಲ್ಲಿ ನರ್ಸ್‌ಗೆ ಕಿಸ್ ಮಾಡಿದ ವೈದ್ಯ: ವಿಡಿಯೋ ವೈರಲ್

    ಉಜ್ಜೈನಿ: ವೈದ್ಯನೊಬ್ಬ ಆಪರೇಷನ್ ಥಿಯೇಟರ್‌ನಲ್ಲೇ ನರ್ಸ್‌ಗೆ ಕಿಸ್ ಮಾಡಿದ ಘಟನೆಯೊಂದು ಮಧ್ಯಪ್ರದೇಶದ ಉಜ್ಜೈನಿಯ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯ ನರ್ಸ್‌ಗೆ ಕಿಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ.

    49 ವರ್ಷದ ಸಿವಿಲ್ ಸರ್ಜನ್‍ನ ವರ್ತನೆಯಿಂದ ಆತನನ್ನು ಕೆಲಸದಿಂದ ವಜಾ ಮಾಡಲಾಗಿದ್ದು, ಘಟನೆ ಬಗ್ಗೆ ವಿವರಣೆ ನೀಡಬೇಕೆಂದು ಆತನಿಗೆ ನೋಟಿಸ್ ಜಾರಿ ಮಾಡಿದ್ದೇನೆ ಎಂದು ಜಿಲ್ಲಾಧಿಕಾರಿ ಶಶಾಂಕ್ ಮಿಶ್ರಾ ತಿಳಿಸಿದ್ದಾರೆ.

    ಡಿವಿಶನಲ್ ಕಮಿಷನರ್ ಈ ಘಟನೆ ಬಗ್ಗೆ ವಿಚಾರಣೆ ನಡೆಸುತ್ತಾರೆ. ವೈದ್ಯ, ನರ್ಸ್‌ಗೆ ಕಿಸ್ ಮಾಡುತ್ತಿರುವ ವಿಡಿಯೋ ಆಸ್ಪತ್ರೆಯಲ್ಲೇ ತೆಗೆದಿರುವುದೋ ಇಲ್ಲವೋ ಎನ್ನುವುದು ಖಚಿತವಾಗಿಲ್ಲ ಎಂದು ಜಿಲ್ಲಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಮೋಹನ್ ಮಾಳವಿಯಾ ತಿಳಿಸಿದ್ದಾರೆ.

    ನರ್ಸಿಂಗ್ ಸ್ಟಾಫ್ ವಾಟ್ಸಪ್ ಗ್ರೂಪಿನಲ್ಲಿ ಈ ಅಸಭ್ಯ ವಿಡಿಯೋ ಬಂತು ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ. ಈ ವಿಡಿಯೋ ಆಕಸ್ಮಿಕವಾಗಿ ಗ್ರೂಪಿನಲ್ಲಿ ಸೆಂಡ್ ಆಯ್ತೇ ಅಥವಾ ಉದ್ದೇಶಪೂರ್ವಕವಾಗಿಯೇ ಸೆಂಡ್ ಮಾಡಿದ್ದಾರಾ ಎನ್ನುವುದರ ಬಗ್ಗೆ ಜಿಲ್ಲಾಧಿಕಾರಿ ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊಬೈಲ್ ಟಾರ್ಚ್ ಲೈಟ್ ಬಳಸಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು: ವಿಡಿಯೋ ವೈರಲ್

    ಮೊಬೈಲ್ ಟಾರ್ಚ್ ಲೈಟ್ ಬಳಸಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು: ವಿಡಿಯೋ ವೈರಲ್

    ಪಾಟ್ನಾ: ಆಪರೇಷನ್ ಥಿಯೇಟರ್ ನಲ್ಲಿ ಪವರ್ ಕಟ್ ಆದ ಹಿನ್ನಲೆಯಲ್ಲಿ ಮಹಿಳೆಯೊಬ್ಬರಿಗೆ ಟಾರ್ಚ್ ಲೈಟ್‍ನಲ್ಲೇ ಶಸ್ತ್ರಚಿಕಿತ್ಸೆ ಮಾಡಿದ ಘಟನೆ ಬಿಹಾರದ ಸಹಸ್ರಾದ ಸದಾರ್ ಆಸ್ಪತ್ರೆಯಲ್ಲಿ ನಡೆದಿದೆ.

    ಟಾರ್ಚ್ ಲೈಟಿನಲ್ಲಿ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿರೋ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಅವರ ಸುತ್ತಮುತ್ತ ಹಲವು ಜನ ಸುತ್ತುವರಿದು ಸ್ಟಿಚಸ್ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೇ ವೈದ್ಯರು ಬಿಳಿ ಬಟ್ಟೆ ಧರಿಸುವ ಬದಲು ಖಾಕಿ ಉಡುಪನ್ನು ಧರಿಸಿದ್ದಾರೆ.

    ವರದಿಗಳ ಪ್ರಕಾರ ಈ ಆಸ್ಪತ್ರೆಯಲ್ಲಿ ಜನರೇಟರ್ ಸೌಲಭ್ಯ ಇಲ್ಲದ ಕಾರಣ ಮೊಬೈಲ್ ಫೋನ್ ಟಾರ್ಚ್‍ನಲ್ಲೇ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆದು ಕೆಲವು ದಿನಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಈ ಹಿಂದೆ ಉತ್ತರಪ್ರದೇಶದ ಉನಾವೊ ಜಿಲ್ಲೆಯಲ್ಲಿ 32 ರೋಗಿಗಳಿಗೆ ಇದೇ ರೀತಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು ಎಂದು ವರದಿಯಾಗಿದೆ.