Tag: ಆಪರೇಶನ್ ಕಮಲ

  • ಮುಖ್ಯಮಂತ್ರಿ ಯಾರಾಗಬೇಕೆಂದು ಜನ ನಿರ್ಧರಿಸ್ತಾರೆ, ನಾನೇ ಸಿಎಂ ಆಗ್ತೀನಿ ಅಂತ ಕೂರೋಕೆ ಆಗುತ್ತಾ – ಎಚ್‍ಡಿಕೆ ವಿರುದ್ಧ ಸಿದ್ದು ವ್ಯಂಗ್ಯ

    ಮುಖ್ಯಮಂತ್ರಿ ಯಾರಾಗಬೇಕೆಂದು ಜನ ನಿರ್ಧರಿಸ್ತಾರೆ, ನಾನೇ ಸಿಎಂ ಆಗ್ತೀನಿ ಅಂತ ಕೂರೋಕೆ ಆಗುತ್ತಾ – ಎಚ್‍ಡಿಕೆ ವಿರುದ್ಧ ಸಿದ್ದು ವ್ಯಂಗ್ಯ

    ಕೊಪ್ಪಳ: ಮುಖ್ಯಮಂತ್ರಿ ಯಾರಾಗಬೇಕೆಂದು ಜನ ತೀರ್ಮಾನಿಸುತ್ತಾರೆ. ಅದನ್ನು ಬಿಟ್ಟು ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಕೂರುವುದಕ್ಕೆ ಆಗುತ್ತಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

    KUMARASWAMY

    ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಸಿಎಂ ಆಗುತ್ತೇನೆ ಎಂಬ ಹೇಳಿಕೆ ವಿಚಾರವಾಗಿ ಕೊಪ್ಪಳ ತಾಲೂಕಿನ ಬಸಾಪೂರ ಬಳಿ ಇರುವ ಖಾಸಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಯಾರಾಗಬೇಕೆಂದು ಜನರು ನಿರ್ಧರಿಸುತ್ತಾರೆ. ಅದನ್ನು ಬಿಟ್ಟು ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಕೂರುವುದಕ್ಕೆ ಆಗುತ್ತಾ? ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಯಾವ ಸ್ಥಾನಕ್ಕೆ ಹೋಗಿದೆ. ಅಂತಹ ಪಾರ್ಟಿ ಅಧಿಕಾರಕ್ಕೆ ಬರತ್ತಾ? ಜೆಡಿಎಸ್ ಒಂದು ರಾಷ್ಟ್ರೀಯ ಪಕ್ಷ ಅಲ್ಲ. ಹಾಗಾಗಿ ಜೆಡಿಎಸ್‍ನ ಕೆಲವರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ಅವರು ಯಾರು ಅಂತ ಹೇಳುವುದಿಲ್ಲ. ಪಾಪ ಕುಮಾರಸ್ವಾಮಿ ಮತ್ತೆ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಪಾಪ ಹೇಳಿಕೊಳ್ಳಲಿ ಬಿಡಿ. ಬೇಡ ಅಂದವರ ಯಾರು? ಅವರು ಯಾವ ಮೂಲದಿಂದ ಮುಖ್ಯಮಂತ್ರಿ ಆಗುತ್ತಾರೆ ಗೊತ್ತಿಲ್ಲ. ರಾಜನಾಗುತ್ತೇನೆ ಎಂದು ಹೇಳಿಕೊಳ್ಳಲಿ. ಆದರೆ ಅದನ್ನು ಜನರು ತೀರ್ಮಾನಿಸುತ್ತಾರೆ ಎಂದು ಟಾಂಗ್ ನೀಡಿದ್ದಾರೆ.

    ಆಪರೇಷನ್ ಕಮಲ ಪ್ರಜಾಪ್ರಭುತ್ವಕ್ಕೆ ಮಾರಕ. ಇವರೆಲ್ಲ ಪ್ರಜಾಪ್ರಭುತ್ವದ ಬಗ್ಗೆ ಬಹಳ ಮಾತನಾಡುತ್ತಾರೆ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ತಂದಿದ್ದು ಪ್ರಜಾ ಪ್ರಭುತ್ವಕ್ಕೆ ಮಾರಕ ಅಂತಾರೆ. ಹಾಗಾದರೆ ಇವರು ಮಾಡುತ್ತಿರುವುದೇನು? ಮಧ್ಯ ಪ್ರದೇಶ ಸರ್ಕಾರ ಕಿತ್ತು ಹಾಕಿದವರು ಯಾರು? ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಕಿತ್ತು ಹಾಕಿದವರು ಯಾರು? ಆಪರೇಶನ್ ಕಮಲ ಶುರು ಮಾಡಿದವರೇ ಅವರು. ಆಪರೇಶನ್ ಕಮಲಕ್ಕೆ ಪಾಪದ ಹಣ ಖರ್ಚು ಮಾಡುತ್ತಿದ್ದಾರೆ. ಒಬ್ಬ ಶಾಸಕನಿಗೆ 25 ರಿಂದ 30 ಕೋಟಿ ಹಣ ನೀಡುತ್ತಾರೆ, ಇದೆಲ್ಲವೂ ಲೂಟಿ ಮಾಡಿರುವ ಹಣವಾಗಿದೆ. ಸರ್ಕಾರದಲ್ಲಿ 40 ಪರ್ಸೆಂಟ್ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    bjP

    ಸಂಜಯ್ ರಾವತ್‍ಗೆ ಇಡಿ ನೋಟಿಸ್ ನೀಡಿರುವ ವಿಚಾರವಾಗಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಇಡಿ ಛೂ ಬಿಡುತ್ತಿದ್ದಾರೆ. ಸುಮ್ಮನೆ ರಾಹುಲ್ ಗಾಂಧಿಗೆ ತೊಂದರೆ ಕೊಡಲಿಲ್ವಾ? ವಿಚಾರಣೆ ಮಾಡಿ ನಾನು ಬೇಡ ಎಂದು ಹೇಳುವುದಿಲ್ಲ. ಆದರೆ ವಿಚಾರಣೆ ಮಾಡುವುದಕ್ಕೆ ಕೇಸ್ ಇರಬೇಕು ಅಲ್ಲವಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:  ಮಹಾರಾಷ್ಟ್ರದಲ್ಲಿ ಇರೋದು ಮೂರಾಬಟ್ಟೆ ಸರ್ಕಾರ: ಕಾರಜೋಳ

    ದಲಿತ ಮುಖ್ಯಮಂತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದಲಿತರನ್ನು ಮುಖ್ಯಮಂತ್ರಿ ಮಾಡುವುದು ಕಾಂಗ್ರೆಸ್ ಪಾರ್ಟಿ. ಹಿಂದೆನೂ ಮಾಡಿದ್ದೇವೆ, ಮುಂದೆ ಶಾಸಕರನ್ನು ಕೇಳಿಕೊಂಡು ಹೈಕಮಾಂಡ್ ತೀರ್ಮಾನ ಮಾಡತ್ತದೆ. ನಮ್ಮನ್ನು ಕೇಳುವುದಕ್ಕೆ ಬಿಜೆಪಿಯವರು ಯಾರು? ಅವರ ಏನು ಮಾಡುತ್ತಾರೆ ಎನ್ನುವುದನ್ನು ಮೊದಲು ಹೇಳಿ. ಬಿಜೆಪಿ ದಲಿತರನ್ನು ಸಿಎಂ ಮಾಡುತ್ತೇವೆ ಎಂದು ಹೇಳಲಿನೋಡೋಣ ಎಂದು ಸವಾಲೊಡ್ಡಿದ್ದಾರೆ. ಇದನ್ನೂ ಓದಿ: ಭಾರತೀಯ ಉಕ್ಕು ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿ. ಕೃಷ್ಣಮೂರ್ತಿ ವಿಧಿವಶ

    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ವಿಚಾರವಾಗಿ ಮಾತನಾಡಿದ ಅವರು, ಉಮೇಶ್ ಕತ್ತಿ ಹಿ ಈಸ್ ಫೂಲ್. ಅವನು ಕನ್ನಡ ದ್ರೋಹಿ. ಏಕೀಕರಣ ಆಗಿದ್ದು ಯಾವ ಉದ್ದೇಶಕ್ಕೆ? ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಅಂತ ಮಾತಾಡುವುದು ಕನ್ನಡಿಗರಿಗೆ ಮಾಡುವ ದ್ರೋಹ ಎಂದು ಹರಿಹಾಯ್ದಿದ್ದಾರೆ.

    ಬಿಜೆಪಿ ಸರ್ಕಾರ ಅನೈತಿಕ ಸರ್ಕಾರ, ಭ್ರಷ್ಟಾಚಾರ ಜಾಸ್ತಿ ಆಗಿದೆ. ನಾವು 150 ಸೀಟ್ ಗೆಲ್ಲಬೇಕು ಅಂದುಕೊಂಡಿದ್ದೇವೆ. ಸಿಂಪಲ್ ಮೆಜಾರಿಟಿಗೆ ಎಷ್ಟು ಬೇಕೋ ಅಷ್ಟು ನಾವೇ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

    Live Tv

  • ಆಪರೇಶನ್ ಕಮಲಕ್ಕೆ ದುಡ್ಡು ಕೊಡಬೇಕು ಅನ್ನೋದನ್ನ ಒಪ್ಪಿಕೊಂಡ ಸಚಿವ ಈಶ್ವರಪ್ಪ

    ಆಪರೇಶನ್ ಕಮಲಕ್ಕೆ ದುಡ್ಡು ಕೊಡಬೇಕು ಅನ್ನೋದನ್ನ ಒಪ್ಪಿಕೊಂಡ ಸಚಿವ ಈಶ್ವರಪ್ಪ

    ಕೊಪ್ಪಳ: ರಾಜ್ಯದಲ್ಲಿ ನಾಲ್ಕು ಬಾರಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಆದರೆ ನಮ್ಮ ಗ್ರಹಚಾರ ಸರಿ ಇಲ್ಲ. ನಾಲ್ಕು ಬಾರಿ ನಮಗೆ ಪೂರ್ಣ ಬಹುಮತ ಸಿಗಲಿಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

    ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ನಿನ್ನೆ ನಡೆದ ವಿಧಾನ ಪರಿಷತ್ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಈಶ್ವರಪ್ಪ, ಜನ ಆಡಳಿತ ಮಾಡಿ ಅಂತಾರೆ. ಆದರೆ ಒಂದು ಕಡಿಮೆ, ನಾಲ್ಕು ಕಡಿಮೆ ಸ್ಥಾನ ಬರತ್ತೆ. ನಾಲ್ಕು ಬಾರಿಯೂ ನಮ್ಮ ಗ್ರಹಚಾರ ಹಾಗೆ ಇತ್ತು ಎಂದರು.

    ಇದೇ ವೇಳೆ ಆಪರೇಶನ್ ಕಮಲಕ್ಕೆ ದುಡ್ಡು ಕೊಡಬೇಕು ಅನ್ನೋದನ್ನ ಒಪ್ಪಿಕೊಂಡ ಸಚಿವರು, ನಾಲ್ಕು ಬಾರಿ, ಅವನ್ಯಾವನೋ ಕರಕೊಂಡ ಬಾ, ಅವನಿಗೆ ದುಡ್ಡು ಕೊಡು ಇದೆ ಆಯ್ತು ಎಂದು ಹೇಳುವ ಮೂಲಕ ಪರೋಕ್ಷವಾಗಿ ಆಪರೇಶನ್ ಕಮಲಕ್ಕೆ ದುಡ್ಡು ಕೊಡಬೇಕೆಂದು ಒಪ್ಪಿಕೊಂಡರು. ಆದರೆ ಈ ಬಾರಿ ಹಾಗಾಗಲ್ಲ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಅನೇಕ ಕಡೆ ಓಡಾಡಿದ್ದೇನೆ. ಕಾಂಗ್ರೆಸ್ ಗೆ ಅಭ್ಯರ್ಥಿಗಳಿಲ್ಲ ಎಂದರು. ಇದನ್ನೂ ಓದಿ: ಹೋರಿ ತಿವಿದು ನಾಲ್ಕೈದು ಮಂದಿಗೆ ಗಾಯ- ಇಬ್ಬರು ಗಂಭೀರ

    MONEY

    ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆಯೋ ದುಡ್ಡಿನ ವ್ಯವಹಾರ, ಯಾವ ಚುನಾವಣೆಲ್ಲೂ ನಡೆಯಲ್ಲ. ಮುಕ್ಕಾಲು ಪಾಲು ಚುನಾವಣೆಯಲ್ಲಿ ದುಡ್ಡಿನದ್ದೇ ವ್ಯವಹಾರ ನಡೆಯುತ್ತದೆ. ನಾನು ಸುಳ್ಳು ಹೇಳಲ್ಲ. ನಿಮಗೆ ಹಣ ಯಾರು ಕೊಡ್ತಾರೆ, ತಗೋರಿ, ಅವರು ನಮ್ಮ ಹಣ ನಮಗೆ ಕೊಡ್ತಾರೆ ಅಷ್ಟೇ ಅಂದ್ರು. ಆದರೆ ವೋಟ್ ಹಾಕೋದು ನಿಮಗೆ ಬಿಟ್ಟಿದ್ದು, ಇದಕ್ಕೆ ಕೃಷ್ಣನ ತಂತ್ರ ಎಂದು ಸಚಿವ ಈಶ್ವರಪ್ಪ ಹೇಳಿದ್ರು.

  • ಆಪರೇಷನ್ ಕಮಲದ ಬಗ್ಗೆ ಪರಂ ಹೇಳಿಕೆ ವಿರುದ್ಧ ಅಶೋಕ್ ಕಿಡಿ

    ಆಪರೇಷನ್ ಕಮಲದ ಬಗ್ಗೆ ಪರಂ ಹೇಳಿಕೆ ವಿರುದ್ಧ ಅಶೋಕ್ ಕಿಡಿ

    ಬೆಂಗಳೂರು: ರಾಜ್ಯಪಾಲರು ಸೇರಿ ಎಲ್ಲ ನಾಯಕರೂ ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದಾರೆ ಎಂಬ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿಕೆಗೆ ಮಾಜಿ ಡಿಸಿಎಂ ಆರ್. ಅಶೋಕ್ ಕಿಡಿಕಾರಿದ್ದಾರೆ.

    ಈ ಬಗ್ಗೆ ಮಾತನಾಡಿದ ಅಶೋಕ್, ಪರಮೇಶ್ವರ್ ರಂತೆ ಜವಾಬ್ದಾರಿ ಇರುವಂತಹ ಕಾಂಗ್ರೆಸ್ ನಾಯಕರು ಸಾಂವಿಧಾನಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯಪಾಲರ ಬಗ್ಗೆ ಯಾವುದೇ ಮಾಹಿತಿ, ಯಾವುದೇ ಸಾಕ್ಷ್ಯಾಧಾರ ಇಲ್ಲದೆ ಅವರ ಸ್ಥಾನಕ್ಕೆ ಅಗೌರವ ತರುವಂತಹ ಕೆಲಸ ಪರಮೇಶ್ವರ್ ಅವರಿಗೆ ಶೋಭೆ ತರುವುದಿಲ್ಲ. ರಾಜೀನಾಮೆ ನೀಡಿದ ಶಾಸಕರು ಸ್ಪೀಕರ್ ರನ್ನು ಭೇಟಿ ಮಾಡಲು ಹೋಗಿದ್ದಾರೆ. ಆದರೆ ಸ್ಪೀಕರ್ ಇರದ ಕಾರಣ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ನೀಡಿದ್ದೇವೆ ಎಂದು ಹೇಳಿದ್ದಾರೆ ಎಂದರು. ಇದನ್ನೂ ಓದಿ: ರಾಜ್ಯಪಾಲರು ಸೇರಿ ಎಲ್ಲ ನಾಯಕರೂ ಆಪರೇಷನ್ ಕಮಲದಲ್ಲಿ ಭಾಗಿ: ಪರಮೇಶ್ವರ್

    ಶಾಸಕರು ಕದ್ದುಮುಚ್ಚಿ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರಾ ಎಂದು ನಾನು ಪರಮೇಶ್ವರ್ ಅವರನ್ನು ಪ್ರಶ್ನಿಸಲು ಇಷ್ಟಪಡುತ್ತೇನೆ. ಶಾಸಕರು ಸಾರ್ವಜನಿಕವಾಗಿಯೇ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ನಿಮ್ಮ ಸರ್ಕಾರ ನೇಮಕ ಮಾಡಿದ ಪೊಲೀಸ್ ಕಮಿಷನರ್ ಅವರನ್ನು ಎದುರಿಗೆ ಕೂರಿಸಿಕೊಂಡು ಕಾಫಿ, ಸ್ನ್ಯಾಕ್ಸ್ ಕೊಡುವುದು ಸಾಮಾನ್ಯ. ಇವರು ಹೋದಾಗ ಕಾಫಿ ಕೊಟ್ಟರೆ ಅದು ಸರಿ. ಆದರೆ ಶಾಸಕರಿಗೆ ಕೊಟ್ಟರೆ ನಿಮಗೆ ಹೊಟ್ಟೆ ಉರಿ ಆಗುವುದಾದರೆ ನಿಮ್ಮ ತರಹ ಕದ್ದುಮುಚ್ಚಿ ಭೇಟಿ ಮಾಡುವ ಸ್ಥಾನ ಅದಲ್ಲ ಎಂದರು.

    ರಾಜ್ಯಪಾಲರ ಬಗ್ಗೆ ನೀವು ಕೊಟ್ಟ ಹೇಳಿಕೆ ಸರಿಯಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ರಾಜ್ಯಪಾಲರ ಕಚೇರಿಯನ್ನು ಎಷ್ಟು ದುರ್ಬಳಕೆ ಮಾಡಿಕೊಂಡಿದ್ದೀರಾ ಎಂಬುದು ಈಗ ಬಹಿರಂಗವಾಗಿದೆ. ನಿಮ್ಮ ಚಾಳಿಗೆ ನಾವು ಬರುವುದಿಲ್ಲ. ನಮಗೆ ಆದಂತಹ ಜವಾಬ್ದಾರಿ ಇದೆ. ಹಾಗಾಗಿ ನಾವು ಯಾವುದೇ ಕಾರಣಕ್ಕೂ ರಾಜ್ಯಪಾಲರ ಕಚೇರಿಯನ್ನು ರಾಜಕೀಯ ಕೇಂದ್ರವಾಗಿ ನಾವು ಮಾಡಲ್ಲ. ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲ್ಲ. ನೀವು ಮಾಡಿರುವಂತಹ ಅನುಭವದ ಬಗ್ಗೆ ನಮ್ಮ ಮೇಲೆ ಆಪಾದನೆ ಮಾಡುವುದು ಸರಿಯಲ್ಲ ಎಂದು ಅಶೋಕ್ ತಿರುಗೇಟು ನೀಡಿದ್ದಾರೆ.

    ಪರಮೇಶ್ವರ್ ಹೇಳಿದ್ದೇನು?
    ರಾಜ್ಯಪಾಲರೂ ಸೇರಿದಂತೆ ಎಲ್ಲ ಬಿಜೆಪಿ ಮುಖಂಡರು ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ವಿಶೇಷ ವಿಮಾನದ ಮೂಲಕ ಶಾಸಕರನ್ನು ಮುಂಬೈನ ರೆಸಾರ್ಟ್ ಗೆ ಕಳುಹಿಸಲಾಗಿದೆ. ಇದರ ಅರ್ಥ ಏನು, ಇಷ್ಟೆಲ್ಲ ಆದರೂ ಸಹ ನಮಗೆ ಸಂಬಂಧವಿಲ್ಲ ಅವರು ಏನಾದರೂ ಮಾಡಿಕೊಳ್ಳಲಿ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಇದು ಹೇಗೆ ಸಾಧ್ಯ, ಅವರೇ ಆಪರೇಷನ್ ಮಾಡುತ್ತಿರುವುದು. ಬಿಜೆಪಿಯವರೇ ಸರ್ಕಾರವನ್ನು ಅಸ್ಥಿರ ಹಾಗೂ ಕುದುರೆ ವ್ಯಾಪಾರ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

  • ಎಲ್ರೂ ಒಟ್ಟಾಗಿರಿ ಆಪರೇಷನ್ ಕಮಲ ಜೋರಾಗಿ ನಡೀತಿದೆ ಹುಷಾರ್ ಎಂದಿದ್ದಾರೆ ಸಿಎಂ: ಜಿಟಿಡಿ

    ಎಲ್ರೂ ಒಟ್ಟಾಗಿರಿ ಆಪರೇಷನ್ ಕಮಲ ಜೋರಾಗಿ ನಡೀತಿದೆ ಹುಷಾರ್ ಎಂದಿದ್ದಾರೆ ಸಿಎಂ: ಜಿಟಿಡಿ

    ಬೆಂಗಳೂರು: ಎಲ್ಲರೂ ಒಟ್ಟಾಗಿ ಇರಿ, ಆಪರೇಷನ್ ಕಮಲ ಜೋರಾಗಿ ನಡೆಯುತ್ತಿದೆ ಹುಷಾರ್ ಅಂತ ಸಿಎಂ ಹೇಳಿದ್ದಾರೆ ಎಂದು ಜಿ.ಟಿ ದೇವೇಗೌಡರು ಹೇಳಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಿಟಿಡಿ, ಸರ್ಕಾರ ಗಟ್ಟಿಯಾಗಿದೆ. ನೀವು ಎಲ್ಲರೂ ಒಟ್ಟಾಗಿ ಇರಿ. ಬಿಜೆಪಿ ಅವರು ಮೂವರು ಶಾಸಕರನ್ನು ಕರೆದುಕೊಂಡು ಹೋಗಿದ್ದಾರೆ. ಈಗ ಮತ್ತೆ ಕರೆದುಕೊಂಡು ಹೋಗಲು ಪ್ರಯತ್ನ ಮಾಡುತ್ತಿದ್ದಾರೆ. ನೀವು ಎಲ್ಲರೂ ಕೂಡ ಒಗ್ಗಟಾಗಿ ಇರಿ. ನಾವು ಸರ್ಕಾರ ಉಳಿಸೋಣ. ನೀವು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

    ಕೆ.ಸಿ ವೇಣುಗೋಪಾಲ್, ಸಿದ್ದರಾಮಯ್ಯ, ದೇವೇಗೌಡರು, ಸಿಎಂ, ಡಿ.ಕೆ ಶಿವಕುಮಾರ್, ಪರಮೇಶ್ವರ್, ಎಂ.ಬಿ ಪಾಟೀಲ್ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಅವರು ಎಲ್ಲರೂ ಸೇರಿ ಮೂರು ಗಂಟೆಗಳ ಕಾಲ ಸುದೀರ್ಘ ಚರ್ಚೆ ಮಾಡಿದ್ದಾರೆ. ಹೋಗಿರುವ ಎಲ್ಲ ಶಾಸಕರ ಜೊತೆ ಮಾತನಾಡಿ ಎಲ್ಲವನ್ನು ಸರಿ ಮಾಡಿಕೊಳ್ಳುತ್ತೇವೆ. ಹಿರಿಯ ಸಚಿವರು ರಾಜೀನಾಮೆ ಕೊಡಬಹುದು. ಮಂತ್ರಿ ಮಾಡಿಲ್ಲ ಅಸಾಮಾಧಾನ ಮಾಡಿಕೊಂಡವರಿಗೆ ಮಂತ್ರಿ ಸ್ಥಾನ ಕೊಟ್ಟು ಸರ್ಕಾರ ಉಳಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ನಾಯಕರು ಮಾತನಾಡಿದ್ದಾರೆ ಎಂದರು.

    ನಮ್ಮ ಪಕ್ಷದ ಮೂವರು ಶಾಸಕರ ಬಗ್ಗೆ ನಾವು ನೋಡಿಕೊಳ್ಳುತ್ತೇವೆ. ಎಲ್ಲರೂ ಒಟ್ಟಾಗಿ ಇರಿ ಎಂಬ ಸಂದೇಶವನ್ನು ನೀಡಿದ್ದಾರೆ. ಮೂವರು ಶಾಸಕರ ಬಗ್ಗೆ ನಾನೇ ನೋಡಿಕೊಳ್ಳುತ್ತೇನೆ ಎಂದು ಸಿಎಂ ಹೇಳಿದ್ದಾರೆ. ನೀವು ಎಲ್ಲರೂ ಬೇಕಾದರೆ ಒಟ್ಟಿಗೆ ಉಪಾಹಾರಕ್ಕೆ ಸೇರಿ ಎರಡು ದಿನ ಎಲ್ಲರೂ ಒಟ್ಟಾಗಿ ಇರಿ. ನನ್ನದೇನು ಅಭ್ಯಂತರ ಇಲ್ಲ ಎಂದು ಸಿಎಂ ಹೇಳಿದ್ದಾರೆ. ಸಿಎಂಗೆ ಆತಂಕ ಇಲ್ಲ. ಅದರ ಬಗ್ಗೆ ನೀವು ಯೋಚನೆ ಮಾಡಬೇಡಿ. ನಮ್ಮ ಸರ್ಕಾರ ಮುಂದುವರಿಯುತ್ತದೆ ಎಂದು ಜಿಟಿಡಿ ಹೇಳಿದ್ದಾರೆ.

    ವಿಶ್ವನಾಥ್ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಅವರು ಯಾಕೆ ಪಕ್ಷ ಬಿಟ್ಟು ಹೋಗಿದ್ದಾರೆ ಎನ್ನುವ ಚರ್ಚೆ ಇಲ್ಲ. ಅದೆಲ್ಲವನ್ನೂ ನನಗೆ ಬಿಟ್ಟು ಬಿಡಿ. ಅದರ ಬಗ್ಗೆ ನೀವು ಮಾತನಾಡಬೇಡಿ. ಹಿರಿಯ ಸಚಿವರಿಗೆ ರಾಜೀನಾಮೆ ಕೊಡಿಸಬೇಕೆಂಬುದು ಕಾಂಗ್ರೆಸ್ – ಜೆಡಿಎಸ್ ಪಕ್ಷದಲ್ಲಿ ಮಾತನಾಡುತ್ತಿದ್ದಾರೆ. ಸರ್ಕಾರ ಉಳಿಸಿ, ನಾವು ಎಲ್ಲ ತ್ಯಾಗಕ್ಕೂ ಸಿದ್ಧವಿದ್ದೇವೆ. ನೀವೇ ಸಿಎಂ ಆಗಿ ಮುಂದುವರಿಯಬೇಕು. ಈ ಸರ್ಕಾರ ಉಳಿಸಿ ಎಂದು ಸಚಿವರು ಹೇಳುತ್ತಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

    ನಾವು ಇಂದು ಮಧ್ಯಾಹ್ನ ಊಟದ ಸಮಯದಲ್ಲಿ ಎಲ್ಲರೂ ಸೇರಿ ಚರ್ಚೆ ನಡೆಸುತ್ತೇವೆ. ನಂತರ ನೀವೇ ಮಾತನಾಡಿ ಎಂದು ಸಿಎಂ ಹೇಳಿದ್ದಾರೆ. ಈ ಪಕ್ಷ ಕಟ್ಟುವ ಕೆಲಸ ನನ್ನದು. ನನ್ನ ಕೆಲಸವನ್ನು ನನಗೆ ಬಿಟ್ಟುಬಿಡಿ. ನಾನು ಪಕ್ಷ ಕಟ್ಟುತ್ತೇನೆ, ಸರ್ಕಾರ ನಡೆಸುವುದನ್ನು ಸಿಎಂ ಮಾಡುತ್ತಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದ್ದಾರೆ ಎಂದು ಜಿ.ಟಿ ದೇವೇಗೌಡ್ರು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ.

  • ಮತ್ತೆ ಮೋದಿ ಹೊಗಳಿ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಜಿಟಿಡಿ

    ಮತ್ತೆ ಮೋದಿ ಹೊಗಳಿ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಜಿಟಿಡಿ

    ಮೈಸೂರು: ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಮೈಸೂರಿನಲ್ಲಿ ಸಚಿವ ಜಿ.ಟಿ.ದೇವೇಗೌಡ ಮೋದಿ ಅವರನ್ನು ಹೊಗಳುವ ಮೂಲಕ ತಿರುಗೇಟು ನೀಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಸಚಿವ ಜಿಟಿಡಿ, ಸರ್ಕಾರ ರಚನೆಯಾದ ಪ್ರಾರಂಭದಲ್ಲಿ ಬಿಜೆಪಿ ಅವರು ಆಪರೇಶನ್ ಕಮಲ ಮಾಡುತ್ತಿದ್ದರು. ಆದರೆ ಕೇಂದ್ರದಲ್ಲಿ ಮೋದಿ ಅಧಿಕಾರ ಸ್ವೀಕರಿಸಿದ ಬಳಿಕ ಬಿಜೆಪಿಯವರು ಆಪರೇಶನ್ ಕಮಲ ಮಾಡುವುದನ್ನು ನಿಲ್ಲಿಸಿದ್ದಾರೆ. ನಾನು ಸೋಮವಾರ ನೀಡಿದ್ದ ಹೇಳಿಕೆಗೆ ಈಗಲೂ ಬದ್ಧ ಹಾಗೂ ಮುಂದೆಯೂ ಬದ್ಧನಾಗಿಯೇ ಇರುತ್ತೇನೆ. ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಬೇಡಿ ಎಂದು ಸಚಿವ ಜಿ.ಟಿ ದೇವೇಗೌಡ ಮನವಿ ಮಾಡಿಕೊಂಡರು.

    ಸರ್ಕಾರ ಸುಭದ್ರವಾಗಿದೆ. ಕರ್ನಾಟಕದಲ್ಲಿ ಸಿಎಂ 4 ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ. ನರೇಂದ್ರ ಮೋದಿ ಕೇಂದ್ರದಲ್ಲಿ 5 ವರ್ಷ ಆಡಳಿತ ನಡೆಸುತ್ತಾರೆ. ಈ ಹಿಂದೆ ರಾಜೀವ್ ಗಾಂಧಿ ಅವರಿದ್ದಾಗ ಇಲ್ಲಿ ರಾಮಕೃಷ್ಣ ಹೆಗಡೆ ಇದ್ದರು. ಹಾಗೆಯೇ ನಮ್ಮಲ್ಲೂ ಕೂಡ ಯಾರು ಏನೇ ಮಾಡಿದರೂ ಸಿಎಂ ಕರ್ನಾಟಕದ ಮುಖ್ಯಮಂತ್ರಿ ಆಗಿರುತ್ತಾರೆ. ಮೋದಿ ಭಾರತದ ಪ್ರಧಾನಿ ಆಗಿರುತ್ತಾರೆ. ಜನ ರಾಷ್ಟ್ರಕ್ಕೆ ಹಾಗೂ ರಾಜ್ಯಕ್ಕೆ ಬೇರೆ ತೀರ್ಪು ಕೊಟ್ಟಿದ್ದಾರೆ. ಇದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಗರ ಪ್ರದಕ್ಷಿಣೆ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಯತ್ನಿಸುತ್ತಿದೆ. ಆದರೆ, ಇದು ಸಾಧ್ಯವಿಲ್ಲ ಇಬ್ಬರು ರಾಜೀನಾಮೆ ನೀಡಿದರೆ ಸರ್ಕಾರ ಬಿದ್ದು ಹೋಗಲ್ಲ. ಇಬ್ಬರ ಮನವೊಲಿಸುವ ಕಾರ್ಯ ನಡೆದಿದೆ. ಆಪರೇಷನ್ ಕಮಲದ ಹಿಂದೆ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕೈವಾಡವಿದೆ ಎಂದು ಮಂಗಳವಾರ ಸಿದ್ದರಾಮಯ್ಯ ಆರೋಪಿಸಿದ್ದರು.