Tag: ಆನ್ ಲೈನ್

  • ವಿದೇಶಿ ಹುಡುಗಿಯರ ಫೋಟೋ ತೋರಿಸಿ ವಂಚನೆ: ಮಂಗಳೂರಿನ ಇಬ್ಬರು ಅರೆಸ್ಟ್

    ವಿದೇಶಿ ಹುಡುಗಿಯರ ಫೋಟೋ ತೋರಿಸಿ ವಂಚನೆ: ಮಂಗಳೂರಿನ ಇಬ್ಬರು ಅರೆಸ್ಟ್

    ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ವಿದೇಶಿ ಹುಡುಗಿಯರ ಫೋಟೋ ತೋರಿಸಿ ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು ಇಬ್ಬರನ್ನು ಮಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

    ಎಕ್ಕೂರಿನ ಕುಲದೀಪ್, ಫರಂಗಿಪೇಟೆಯ ಕೀರ್ತನ್ ಬಂಧಿತ ಆರೋಪಿಗಳು. ಸಾಮಾಜಿಕ ಜಾಲತಾಣದಲ್ಲಿ ವಿದೇಶಿ ಹುಡುಗಿಯರ ಫೋಟೋ ತೋರಿಸಿ ಆಮಿಷ ಒಡ್ಡುತ್ತಿದ್ದ ಎನ್‍ಆರ್‍ಐ ತಂಡವು ಹೆಚ್ಚಾಗಿ ಶ್ರೀಮಂತರನ್ನು ಟಾರ್ಗೆಟ್ ಮಾಡುತ್ತಿದ್ದರು.

    ಮುಂಗಡವಾಗಿ ಆಗಿ 300 ಡಾಲರ್(ಅಂದಾಜು 31 ಸಾವಿರ ರೂ.) ಪೂರೈಸಿದರೆ ಸಪ್ಲೈಮಾಡುವ ಭರವಸೆ ನೀಡುತ್ತಿದ್ದರಿಂದ ಕೆಲವರು ಹಣ ಕಳಿಸುತ್ತಿದ್ದರು. ಹೀಗಾಗಿ ಈ ತಂಡದ ಸದಸ್ಯರು ತಾವು ಫಾರಿನ್ ಏಜನ್ಸಿ ಅಂತಾ ಹೇಳಿಕೊಂಡು ಆನ್ ಲೈನಲ್ಲಿ ಹಣ ಕಳುಹಿಸಲು ಹೇಳುತ್ತಿದ್ದರು. ಒಂದಷ್ಟು ಹಣ ಪಾವತಿಸಿದ ಬಳಿಕ ಸಂಪರ್ಕ ಕಡಿತಗೊಳಿಸಿ ಮೋಸ ಮಾಡುತ್ತಿದ್ದರು.

    ಒಂದೂವರೆ ವರ್ಷದಿಂದ ಈ ಮೋಸದ ಜಾಲ ನಡೆಯುತ್ತಿದ್ದರೂ ಮರ್ಯಾದೆಗೆ ಅಂಜಿ ಯಾರೂ ದೂರು ನೀಡಿರಲಿಲ್ಲ. ಹೀಗಾಗಿ ಈ ತಂಡದಲ್ಲಿ ಇನ್ನೂ ಮೂವರಿದ್ದು ತಲೆಮರೆಸಿಕೊಂಡಿದ್ದಾರೆ. ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಗ್ಗದ ದರದಲ್ಲಿ ಮೊಬೈಲ್ ಸಿಗುತ್ತೆ ಅಂತಾ ಬುಕ್ ಮಾಡಿದ್ರು, ಪಾರ್ಸಲ್‍ನಲ್ಲಿ ಬಂದ ವಸ್ತು ನೋಡಿ ದಂಗಾದ್ರು!

    ಅಗ್ಗದ ದರದಲ್ಲಿ ಮೊಬೈಲ್ ಸಿಗುತ್ತೆ ಅಂತಾ ಬುಕ್ ಮಾಡಿದ್ರು, ಪಾರ್ಸಲ್‍ನಲ್ಲಿ ಬಂದ ವಸ್ತು ನೋಡಿ ದಂಗಾದ್ರು!

    ಮೈಸೂರು: ಕಡಿಮೆ ಬೆಲೆಗೆ ಮೊಬೈಲ್ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ವಂಚಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಮೈಸೂರಿನ ಸರಸ್ವತಿಪುರಂನ ಮಂಗಲರಾಂ ವಂಚನೆಗೊಳಗಾದ ವ್ಯಕ್ತಿ. ಅಗ್ಗದ ದರದಲ್ಲಿ ಮೊಬೈಲ್ ಸಿಗಲಿದೆ ಎಂಬ ಆಸೆಯಿಂದ ಆನ್ ಲೈನ್ ಮೂಲಕ ಬುಕ್ ಮಾಡಿದ್ದ ವ್ಯಕ್ತಿ ಪಾರ್ಸಲ್‍ನಲ್ಲಿ ಬಂದ ವಸ್ತುಗಳನ್ನ ನೋಡಿ ದಂಗಾಗಿದ್ದಾರೆ.

    ಇತ್ತೀಚೆಗೆ ಇವರಿಗೆ ಕರೆ ಮಾಡಿದ್ದ ವ್ಯಕ್ತಿ 3,500 ರೂಪಾಯಿಗೆ ಮೊಬೈಲ್ ನೀಡುವುದಾಗಿ ಹೇಳಿ, ಆನ್‍ಲೈನ್ ನಲ್ಲಿ ಬುಕ್ ಮಾಡುವಂತೆ ಹೇಳಿದ್ದ. ಇದನ್ನ ನಂಬಿ ಮಂಗಲರಾಂ ಹಣ ಕೊಟ್ಟು ಬುಕ್ ಮಾಡಿದ್ದರು. ಆದರೆ ಶನಿವಾರ ಬಂದ ಪಾರ್ಸಲ್ ತೆಗೆದು ನೋಡಿದಾಗ ಅದರಲ್ಲಿ ಒಂದು ಸೀರೆ, ಲಕ್ಷ್ಮಿ ಹಾಗೂ ಆಮೆಯ ಪುಟ್ಟ ಮೂರ್ತಿ ಇರುವುದನ್ನು ಕಂಡು ಹೌಹಾರಿದ್ರು.

    ಬಳಿಕ ತಮಗೆ ಕರೆ ಮಾಡಿದ್ದ ವ್ಯಕ್ತಿಗೆ ಮಂಗಲರಾಂ ಮತ್ತೆ ಸಂಪರ್ಕಿಸಲು ಪ್ರಯತ್ನಿಸಿದಾಗ ಕರೆ ಸ್ವೀಕರಿಸಿದ ವ್ಯಕ್ತಿಯಿಂದ ಅಸಮರ್ಪಕ ಉತ್ತರ ಬಂದಿದೆ. ಆ ಬಳಿಕ ಕರೆ ಮಾಡಿದರೆ ನಾಟ್ ರೀಚಬಲ್ ಬರ್ತಾ ಇತ್ತು. ಇದರಿಂದ ತಾವು ಮೋಸ ಹೋಗಿರುವುದನ್ನು ತಿಳಿದ ಮಂಗಲರಾಂ ಕಂಗಾಲಾಗಿದ್ದಾರೆ.

    ಈ ಸಂಬಂಧ ಪೊಲೀಸರಿಗೆ ದೂರು ನೀಡಲು ಮಂಗಲರಾಂ ಚಿಂತಿಸಿದ್ದಾರೆ.

     

  • ರೆಸಾರ್ಟ್‍ಗಳಲ್ಲಿ ಸಂದರ್ಶನ, ಕೆಲಸ ಕೊಡ್ತೀನಿ ಅಂತಾ ಮಂಚಕ್ಕೆ ಕರೆದ ಕಾಮುಕ ಅರೆಸ್ಟ್!

    ರೆಸಾರ್ಟ್‍ಗಳಲ್ಲಿ ಸಂದರ್ಶನ, ಕೆಲಸ ಕೊಡ್ತೀನಿ ಅಂತಾ ಮಂಚಕ್ಕೆ ಕರೆದ ಕಾಮುಕ ಅರೆಸ್ಟ್!

    ಬೆಂಗಳೂರು: ಕೆಲಸ ಕೊಡಿಸೋ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನೊಬ್ಬನನ್ನು ಯಶವಂತಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಾರವಾರದ ಅನಂತನಾಥ್ ಹೆಬ್ಬಾರ್ ಅಲಿಯಾಸ್ ದಿನೇಶ್ ಗೌಡ ಬಂಧಿತ ಕಾಮುಕ.

    ನಡೆದಿದ್ದೇನು?: ಕಾಮುಕ ದಿನೇಶ್ ಆನ್ ಲೈನ್ ನಲ್ಲಿ ವಾರ್ಷಿಕ 10 ಲಕ್ಷ ಪ್ಯಾಕೇಜ್ ಉದ್ಯೋಗದ ಆಫರ್ ನೀಡುತ್ತಿದ್ದನು. ಬಳಿಕ ಮಹಿಳೆಯರಂತೆ ಧ್ವನಿ ಬದಲಾಯಿಸಿ ಫೋನಿನಲ್ಲಿ ಮಾತನಾಡುತ್ತಿದ್ದನು. ಇತ್ತ ಮದುವೆಯ ನಂತ್ರ ಉದ್ಯೋಗ ಹರಸಿ ಬೆಂಗಳೂರಿಗೆ ಬಂದಿದ್ದ ಉತ್ತರ ಪ್ರದೇಶ ಮೂಲದ ದಂಪತಿ ಆನ್ ಲೈನ್ ಮೂಲಕ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸ್ವೀಕರಿಸಿದ ಕಾಮುಕ ಸಂದರ್ಶನಕ್ಕೆ ಬರುವಂತೆ ಮಹಿಳೆಗೆ ಕರೆ ಮಾಡಿದ್ದನು. ಅಲ್ಲದೇ ಖಾಸಗಿ ಹೋಟೆಲ್‍ನಲ್ಲಿ ಸಂದರ್ಶನ ಇದೆ ಒಬ್ಬರೇ ಬರಬೇಕು ಅಂತಾ ಕೂಡ ಹೇಳಿದ್ದನು.

    ರಾಮನಗರ ಬಳಿಯಿರುವ ಪ್ರತಿಷ್ಠಿತ ರೆಸಾರ್ಟ್ ನಲ್ಲಿ ಸಂದರ್ಶನಕ್ಕಾಗಿ ಮಹಿಳೆ ಬಂದಾಗ, ಸಂದರ್ಶನ ಯಾವ ರೀತಿ ಇರುತ್ತದೆ ಎಂದು ವಿವರಿಸುತ್ತೇನೆ ಎಂದು ಕೊಠಡಿಗೆ ಕರೆದಿದ್ದ. ಅಲ್ಲದೇ ಕೊಠಡಿಯಲ್ಲಿ ಲೈಂಗಿಕ ಕ್ರಿಯೆಗೆ ಯತ್ನಿಸಿದ್ದನು. ಇದಕ್ಕೆ ಮಹಿಳೆ ಪ್ರತಿರೋಧ ತೋರಿದಾಗ ಅಸಾಮಿ ಮತ್ತು ಬರುವ ಮಾತ್ರೆ ಹಾಕಿ ಜ್ಯೂಸ್ ಕೊಟ್ಟ. ಕೂಡಲೇ ಕಾಮುಕನ ಚಲನವಲನ ಅರಿತ ಮಹಿಳೆ ಗಂಡನಿಗೆ ಫೋನ್ ಮಾಡಿದ್ದಳು. ತಕ್ಷಣವೇ ಮಹಿಳೆಯ ಗಂಡ ಹಾಗೂ ಸಿಬ್ಬಂದಿಗಳು ಹೋಟೆಲ್‍ಗೆ ದಾಳಿ ಮಾಡಿದ್ದಾರೆ. ದಾಳಿ ನಡೆಸುತ್ತಿದ್ದಂತೆ ಕಾಮುಕ ದಿನೇಶ್ ಪರಾರಿಯಾಗಿದ್ದನು.

    ಇದನ್ನೂ ಓದಿ: ಕೆಲಸಕ್ಕೆ ಅರ್ಜಿ ಹಾಕುವ ಮುನ್ನ ಈ ಸುದ್ದಿ ಓದಿ

    ಈ ಬಗ್ಗೆ ದಂಪತಿ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಸದ್ಯ ಆರೋಪಿ ದಿನೇಶ್ ನನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಇದೇ ರೀತಿ ಇಬ್ಬರು ಯುವತಿಯರ ಮೇಲೆ ದೌರ್ಜನ್ಯ ಎಸಗಿರುವ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.