Tag: ಆನ್ ಲೈನ್ ಶಾಪಿಂಗ್

  • 2ನೇ ಬಾರಿ ಮೋಸ ಹೋದ ಗ್ರಾಹಕ- ಮೊಬೈಲ್ ಬುಕ್ ಮಾಡಿದ್ರೆ ಬಂದಿದ್ದು ಬರೀ ಬಾಕ್ಸ್ ಮಾತ್ರ!

    2ನೇ ಬಾರಿ ಮೋಸ ಹೋದ ಗ್ರಾಹಕ- ಮೊಬೈಲ್ ಬುಕ್ ಮಾಡಿದ್ರೆ ಬಂದಿದ್ದು ಬರೀ ಬಾಕ್ಸ್ ಮಾತ್ರ!

    ಬೆಳಗಾವಿ: ಪ್ರತಿಷ್ಠಿತ ಆನ್ ಲೈನ್ ಕಂಪನಿಯಿಂದ ವ್ಯಕ್ತಿಯೊಬ್ಬರು ಎರಡನೇ ಬಾರಿ ಮೋಸ ಹೋದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆದಿದೆ.

    ಕುಡಚಿ ಪಟ್ಟಣ ನಿವಾಸಿ ವರ್ಧಮಾನ ಬಾಲೋಜಿ ಎಂಬವರು ಫ್ಲಿಪ್‍ಕಾರ್ಟ್ ಮೂಲಕ್ ಲೆನೊವೊ ನೋಟ್ ಮೊಬೈಲ್ ಫೋನ್ ಬುಕ್ ಮಾಡಿದ್ದರು. ಆದ್ರೆ ಇದೀಗ ಅವರಿಗೆ ಕಂಪೆನಿಯಿಂದ ಮೊಬೈಲ್ ಬದಲು ಖಾಲಿ ಇರುವ ಲೆನೊವೊ ಕಂಪನಿಯ ಬಾಕ್ಸ್ ಮಾತ್ರ ಬಂದಿದೆ.

    ಈ ಮೊದಲು ವರ್ಧಮಾನ ಅವರು ಮೊಬೈಲ್ ಬುಕ್ ಮಾಡಿ ಇದೇ ರೀತಿ ಮೋಸ ಹೋಗಿದ್ದರು. ಹೀಗಾಗಿ ಈ ಬಾರಿ ಅವರು ಆನ್ ಲೈನ್ ಮೂಲಕ ಬಂದಿದ್ದ ಪ್ಯಾಕ್ ತೆರೆಯುವಾಗ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಪ್ಯಾಕ್ ಬಿಚ್ಚಿದಾಗ ಪಾರ್ಸೆಲ್ ನಲ್ಲಿ ಕೇವಲ ಖಾಲಿ ಬಾಕ್ಸ್ ಮಾತ್ರ ಇದ್ದಿದ್ದು ಕಂಡುಬಂದಿದೆ.

    ಹಣ ನೀಡಿಯೇ ಪಾರ್ಸೆಲ್ ಪಡೆದಿದ್ದ ವರ್ಧಮಾನ ಅವರು ಈ ಬಾರಿಯೂ ಮೊಬೈಲ್ ಸಿಗದೇ ಮೋಸ ಹೋಗಿದ್ದಾರೆ. ಸದ್ಯ ಆನ್‍ಲೈನ್ ಕಂಪನಿ ಮಾಡಿರುವ ಮೋಸಕ್ಕೆ ವರ್ಧಮಾನ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತು ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.