Tag: ಆನ್ ಲೈನ್ ಕ್ಲಾಸ್

  • ಆನ್‍ಲೈನ್ ಕ್ಲಾಸ್‍ಗಾಗಿ 2 ಕಿ.ಮೀ ದೂರದಲ್ಲಿ ತಾವೇ ಕ್ಲಾಸ್ ರೂಂ ರೆಡಿ ಮಾಡಿದ ವಿದ್ಯಾರ್ಥಿಗಳು..!

    ಆನ್‍ಲೈನ್ ಕ್ಲಾಸ್‍ಗಾಗಿ 2 ಕಿ.ಮೀ ದೂರದಲ್ಲಿ ತಾವೇ ಕ್ಲಾಸ್ ರೂಂ ರೆಡಿ ಮಾಡಿದ ವಿದ್ಯಾರ್ಥಿಗಳು..!

    ಉಡುಪಿ: ಮಾಹಾಮಾರಿ ಕೊರೊನಾ ವೈರಸ್ ಕಾಟದಿಂದ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಆನ್ ಲೈನ್ ಕ್ಲಾಸ್ ಮುಂದುವರಿದಿದ್ದು, ಇದಿರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರದಾಡುವುದನ್ನು ನಾವು ದಿನನಿತ್ಯ ಕೇಳುತ್ತಿರುತ್ತೇವೆ. ಅಂತೆಯೇ ಇದೀಗ ಉಡುಪಿಯಲ್ಲಿ ಕೂಡ ನೆಟ್ ವರ್ಕ್ ಗಾಗಿ ವಿದ್ಯಾರ್ಥಿಗಳು ಮರ ಹತ್ತಬೇಕಾದ ಪರಿಸ್ಥಿತಿ ಎದುರಾಗಿದೆ.

    ಹೌದು. ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮಡಾಮಕ್ಕಿ ಸಮೀಪದ ಹಂಜ ಎಂಬ ಹಳ್ಳಿಯಯಲ್ಲಿ ಮಕ್ಕಳು ಆನ್ ಲೈನ್ ಪಾಠ ಕೇಳಲು ಮರದ ಮೇಲೆ ಕ್ಲಾಸ್ ರೂಮೊಂದನ್ನು ರೆಡಿ ಮಾಡಿದ್ದಾರೆ. ಶಾಲೆಯಿಂದ ಆನ್ ಲೈನ್ ಪಾಠ ನಡೆಯುತ್ತದೆ. ವೀಡಿಯೋ, ನೋಟ್ಸ್‍ಗಳನ್ನು ಅಪ್ಲೋಡ್ ಮಾಡುತ್ತಾರೆ. ಆದರೆ ಮಕ್ಕಳಿಗ ಮನೆಯಲ್ಲಿ ನೆಟ್ ವರ್ಕ್ ಸಿಗದ ಕಾರಣ ಎರಡು ಕಿಲೋಮೀಟರ್ ಎತ್ತರ ಪ್ರದೇಶಕ್ಕೆ ಬಂದು ಪಾಠ ಕೇಳುತ್ತಿದ್ದಾರೆ.

    ಈ ವ್ಯಾಪ್ತಿಯಲ್ಲಿ ಸುಮಾರು 55 ಮನೆಗಳಿವೆ. ಸುಮಾರು 500 ಜನ ವಾಸಿಸುತ್ತಿದ್ದಾರೆ. 40-50 ಮಕ್ಕಳಿಎ ಸಮಸ್ಯೆ ಆಗಿದೆ. ವರ್ಕ್ ಫ್ರಂ ಹೋಮ್ ಅಂತ ಬಂದ ಉದ್ಯೋಗಿಗಳಿಗೂ ಕಷ್ಟವಾಗಿದೆ. ಬೆಟ್ಟದ ಮೇಲೆ ಒಂದೆರಡು ಕಡೆ ಮರದ ಮೇಲೆ ಶೆಡ್ ಗಳನ್ನು ಪೋಷಕರೇ ನಿರ್ಮಿಸಿ ಕೊಟ್ಟಿದ್ದಾರೆ. ಫೋನ್ ಟವರ್ ಹಾಕಿ ಎಂಬ ಬೇಡಿಕೆ ಬಹುಕಾಲದಿಂದ ಇದ್ದರೂ ಅದಕ್ಕೆ ಈವರೆಗೆ ಫಲಸಿಕ್ಕಿಲ್ಲ. ಇದನ್ನೂ ಓದಿ: ಆನ್‍ಲೈನ್ ಕ್ಲಾಸ್‍ಗಾಗಿ ಮಳೆಯನ್ನೂ ಲೆಕ್ಕಿಸದೆ ಗುಡ್ಡ ಹತ್ತಿ ಕುಳಿತ ವಿದ್ಯಾರ್ಥಿಗಳು

    ಕೆಲ ದಿನಗಳ ಹಿಂದೆಯಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮೊಗ್ರದ ಬಳ್ಳಕ ವಿದ್ಯಾರ್ಥಿನಿ ಫೋಟೋವೊಂದು ಭಾರೀ ಸದ್ದು ಮಾಡಿತ್ತು. ಮಳೆ ನಡುವೆಯೂ ಆನ್‍ಲೈನ್ ಕ್ಲಾಸ್‍ಗಾಗಿ ವಿದ್ಯಾರ್ಥಿಗಳು ಗುಡ್ಡ ಏರಿ ಕುಳಿತುಕೊಂಡಿದ್ದು, ಪೋಷಕರು ಛತ್ರಿ ಹಿಡಿದು ಪೋಷಕರು ಸಹಕಾರ ನೀಡಿರುವುದು ಫೋಟೋದಲ್ಲಿ ಸ್ಪಷ್ಟವಾಗಿತ್ತು.

  • ದಯವಿಟ್ಟು ಪರೀಕ್ಷೆ ಮುಂದೂಡಿ – ಅಳಲು ತೋಡಿಕೊಂಡ ಫಾರ್ಮಸಿ ವಿದ್ಯಾರ್ಥಿಗಳು

    ದಯವಿಟ್ಟು ಪರೀಕ್ಷೆ ಮುಂದೂಡಿ – ಅಳಲು ತೋಡಿಕೊಂಡ ಫಾರ್ಮಸಿ ವಿದ್ಯಾರ್ಥಿಗಳು

    ಬೆಂಗಳೂರು: ನಿಗದಿ ಮಾಡಲಾಗಿರುವ ಪರೀಕ್ಷೆಗಳನ್ನು ಮುಂದೂಡುವಂತೆ ರಾಜೀವ್ ಗಾಂಧಿ ಆರೋಗ್ಯ ವಿವಿ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

    ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಫಾರ್ಮಸಿ ಎರಡನೇ ವರ್ಷದ ಪರೀಕ್ಷೆ ಘೋಷಣೆ ಮಾಡಿದೆ. ಆದರೆ ವಿದ್ಯಾಥಿಗಳು ಮಾತ್ರ ನಮಗೆ ಆನ್ ಲೈನ್ ಕ್ಲಾಸ್ ಅರ್ಥವಾಗುತ್ತಿಲ್ಲ ಎಕ್ಸಾಂಗಳನ್ನು ಮುಂದೂಡಿ ಎಂದು ಹೇಳುತ್ತಿದ್ದಾರೆ.

    ಕೋವಿಡ್ ಹರಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳು ನಡೆದಿತ್ತು. ಈ ಆನ್‍ಲೈನ್ ತರಗತಿ ಅರ್ಥವಾಗಿಲ್ಲ. ಹೀಗಾಗಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಅಥವಾ ಫೇಲ್ ಆಗುವ ಸಾಧ್ಯತೆಯಿದೆ ಎಂದು ಹೇಳಿ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿದ್ದಾರೆ.

    ಈಗಾಗಲೇ ಮೆಡಿಕಲ್ ಕೋರ್ಸ್ ಪರೀಕ್ಷೆ ಮುಂದೂಡಿಕೆ ಆಗಿದೆ. ಹೀಗಿರುವಾಗ ನಮಗೆ ಮಾತ್ರ ಪರೀಕ್ಷೆ ಯಾಕೆ ಎಂದು ಪ್ರಶ್ನಿಸಿರುವ ವಿದ್ಯಾರ್ಥಿಗಳು ಆಫ್‍ಲೈನ್ ತರಗತಿ ಮಾಡಿದ ಬಳಿಕ ಪರೀಕ್ಷೆ ನಡೆಸಿ ಎಂದು ಹೇಳಿದ್ದಾರೆ.

    ವಿದ್ಯಾರ್ಥಿಗಳು ಪರೀಕ್ಷೆಗೆ ಬರಬೇಕಾದರೆ ಸಾರ್ವಜನಿಕ ಸಾರಿಗೆಗಳನ್ನು ಬಳಸಬೇಕಾಗುತ್ತದೆ. ಕೋವಿಡ್ ಸಮಯದಲ್ಲಿ ಸಾರ್ವಜನಿಕ ಸಾರಿಗೆ ಬಳಸಲು ಭಯವಾಗುತ್ತದೆ. ಹೀಗಾಗಿ ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

  • ನೆಚ್ಚಿನ ವಿದ್ಯಾರ್ಥಿ ಭೇಟಿಯಾಗಲು 125 ಕಿ.ಮೀ ಕ್ರಮಿಸಿದ ಟೀಚರ್!

    ನೆಚ್ಚಿನ ವಿದ್ಯಾರ್ಥಿ ಭೇಟಿಯಾಗಲು 125 ಕಿ.ಮೀ ಕ್ರಮಿಸಿದ ಟೀಚರ್!

    – ಆನ್‍ಲೈನ್ ಕ್ಲಾಸಿಗೆ ಗೈರಾಗ್ತಿದ್ದ ವಿದ್ಯಾರ್ಥಿ
    – ಶಿಕ್ಷಕಿ ಕಂಡು ವಿದ್ಯಾರ್ಥಿ ಅಚ್ಚರಿ

    ತಿರುವನಂತಪುರಂ: ಶಿಕ್ಷಕಿಯೊಬ್ಬರು ತನ್ನ ನೆಚ್ಚಿನ ವಿದ್ಯಾರ್ಥಿಯನ್ನು ಭೇಟಿಯಾಗಲು ಬರೋಬ್ಬರಿ 125 ಕಿ.ಮೀ ಕ್ರಮಿಸಿದ ಘಟನೆಯೊಂದು ಕೇರಳದ ಮರಯೂರ್ ಎಂಬಲ್ಲಿ ನಡೆದಿದೆ.

    ಕೋಥಮಂಗಲಂ ಮಾರ್ ಬೆಸಿಲ್ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕಿ ಪ್ರೀತಿ ಎನ್ ಕುರಿಯಾಕೋಸ್ ಅವರು ಏಕಾಏಕಿ ಭೇಟಿ ಮೂಲಕ ವಿದ್ಯಾರ್ಥಿಯನ್ನು ಅಚ್ಚರಿಗೆ ಒಳಪಡಿಸಿದ್ದಾರೆ.

    ಕೊರೊನಾ ವೈರಸ್ ನಿಂದಾಗಿ ವಿದ್ಯಾರ್ಥಿಗಳಿಗೆ ಎಲ್ಲೆಡೆ ಆನ್‍ಲೈನ್ ತರಗತಿಗಳನ್ನು ನಡೆಸಲಾಗುತ್ತಿತ್ತು. ಈ ವೇಳೆ ಪ್ರೀತಿ ಅವರ ನೆಚ್ಚಿನ ವಿದ್ಯಾರ್ಥಿ ಪ್ರತಿದಿನ ಗೈರಾಗುತ್ತಿದ್ದನು. ಹೀಗಾಗಿ ಶಿಕ್ಷಕಿ ಆ ವಿದ್ಯಾರ್ಥಿಯನ್ನು ಭೇಟಿ ಮಾಡಲು ಪ್ರಯತ್ನಿಸಿದರು. ಅಲ್ಲದೆ ಮರೂರಿನಲ್ಲಿರುವ ವಿದ್ಯಾರ್ಥಿ ನಿವಾಸಕ್ಕೆ ತೆರಳಲು 125 ಕಿ.ಮೀ ಪ್ರಯಾಣಿಸಿದ್ದಾರೆ.

    ಪ್ರೀತಿ ಅವರು ಹಿಂದಿ ಶಿಕ್ಷಕಿಯಾಗಿದ್ದರು. ತಿಂಗಳುಗಳ ಹಿಂದೆ ಆನ್‍ಲೈನ್ ತರಗತಿಗಳು ಪ್ರಾರಂಭವಾಗಿದ್ದರೂ, ಮರಯೂರ್‍ನ 10 ನೇ ತರಗತಿ ವಿದ್ಯಾರ್ಥಿ ಅವರಿಗೆ ಹಾಜರಾಗುತ್ತಿರಲಿಲ್ಲ. ಪ್ರತಿ ಬಾರಿಯೂ ತನ್ನ ಕ್ಲಾಸಿಗೆ ಗೈರಾಗುತ್ತಿದ್ದರಿಂದ ವಿದ್ಯಾರ್ಥಿಯ ಹಿನ್ನೆಲೆಯನ್ನು ಶಿಕ್ಷಕಿ ಕಲೆಹಾಕಿದ್ದಾರೆ. ವಿದ್ಯಾರ್ಥಿ ಅನ್‍ಲೈನ್ ತರಗತಿಗೆ ಹಾಜರಾಗಲು ಎದರಿಸುವ ಸಮಸ್ಯೆ ಬಗ್ಗೆ ಅರಿತುಕೊಂಡರು. ವಿದ್ಯಾರ್ಥಿಗೆ ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಬೇಕಾದ ಸೌಲಭ್ಯಗಳಿಲ್ಲ. ಅಲ್ಲದೆ ಪಠ್ಯಪುಸ್ತಕಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಅವರು ತಿಳಿದುಕೊಂಡರು. ಹೀಗಾಗಿ ಶಿಕ್ಷಕಿ ವಿದ್ಯಾರ್ಥಿಯನ್ನು ವೈಯಕ್ತಿಕವಾಗಿ ಭೇಟಿಯಾಗಲು ತೀರ್ಮಾನಿಸಿದರು. ಅಂತೆಯೇ ಭೇಟಿಗೆ ತೆರಳಿ ಮನೆಮುಂದೆ ನಿಂತಿದ್ದನ್ನು ನೋಡಿ ವಿದ್ಯಾರ್ಥಿ ಆಶ್ವರ್ಯಗೊಳಗಾದನು.

    ಭೇಟಿ ವೇಳೆ ಶಿಕ್ಷಕಿ, ವಿದ್ಯಾರ್ಥಿಗೆ ತಾವು ತಂದಿದ್ದ ಹೊಸ ಮೊಬೈಲ್ ಫೋನ್ ಹಾಗೂ ಓದಲು ಬೇಕಾದ ಅಗತ್ಯ ವಸ್ತುಗಳನ್ನು ವಿದ್ಯಾರ್ಥಿಗೆ ನೀಡಿದರು. ಯಾವುದೇ ಹಣದ ಅಪೇಕ್ಷೆ ಇಲ್ಲದೆ ಪ್ರೀತಿಯಿಂದಲೇ ಈ ಎಲ್ಲಾ ವಸ್ತುಗಳನ್ನು ಶಿಕ್ಷಕಿ ತಮ್ಮ ವಿದ್ಯಾರ್ಥಿಗೆ ನೀಡಿದ್ದಾರೆ. ಕಾಂತಲೂರು ಪಂಚಾಯ್ತಿಯ ಪಥಡಿಪಾಲಂ ನಿವಾಸಿಯಾಗಿರುವ ವಿದ್ಯಾರ್ಥಿ, ಬೆಸಿಲ್ ಶಾಲೆ ಬಳಿ ಇರುವ ಅನಾಥಾಶ್ರಮದಲ್ಲಿ ಓದಿಗಾಗಿ ಆಶ್ರಯ ಪಡೆದಿದ್ದನು. ಆದರೆ ಕೊರೊನಾ ಎಂಬ ಸಾಂಕ್ರಾಮಿಕ ರೋಗದಿಂದಾಗಿ ಅದು ಮುಚ್ಚಿತ್ತು.

    ಶಾಲೆಯ ದಾಖಲೆ ಪತ್ರಗಳಲ್ಲಿ ನಮೂದಾಗಿದ್ದ ಒಂದು ನಂಬರಿನಿಂದ ನಾನು ವಿದ್ಯಾರ್ಥಿಯನ್ನು ಸಂಪರ್ಕ ಮಾಡಿದೆ. ಆದರೆ ಆ ನಂಬರ್ ಬೇರೆ ಯಾರಿಗೋ ಹೋಯಿತು. ನಂತರ ಮರಯೂರ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವ ನನ್ನ ಹಳೆಯ ಗೆಳೆಯ ಹೆಚ್ಚುವರಿ ಎಸ್‍ಐ ಎಂಎಂ ಶಮೀರ್ ಅವರ ಸಹಾಯವನ್ನು ಕೋರಿದೆ. 3-4 ದಿನಗಳ ಬಳೀಕ ಅವರು ನನಗೆ ವಿದ್ಯಾರ್ಥಿ ಹಾಗೂ ಆತನ ಕುಟುಂಬವನ್ನು ಪತ್ತೆ ಹಚ್ಚಿ ತಿಳಿಸಿದರು ಎಂದು ಪ್ರೀತಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

    ಸಹಪಾಠಿ ಪೊಲೀಸ್ ಅಧಿಕಾರಿ ಕೂಡ ವಿದ್ಯಾರ್ಥಿಯ ಬಗ್ಗೆ ಮಾಹಿತಿ ಕೇಳಿದಾಗ, ಆನ್ ಲೈನ್ ತರಗತಿಗೆ ಹಾಜರಾಗಲೆಂದು ವಿದ್ಯಾರ್ಥಿಯ ತಂದೆ ಮೊಬೈಲ್ ಕೊಡಿಸಿದ್ದರು. ಆದರೆ ಆತನಿಗೆ ನೆಟ್ ವರ್ಕ್ ಸಮಸ್ಯೆ ಎದುರಾಗಿದ್ದರಿಂದ ತರಗತಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮೊಬೈಲ್ ಅನ್ನು ವಾಪಸ್ ಅಂಗಡಿಗೆ ನೀಡಿರುವ ಕುರಿತು ತಿಳಿದುಬಂತು. ಈ ವಿಚಾರವನ್ನು ಕೂಡ ಅಧಿಕಾರಿ ಶಿಕ್ಷಕಿ ಬಳಿ ತಿಳಿಸಿದ್ದಾರೆ.

    ಇಷ್ಟೆಲ್ಲ ಸಮಸ್ಯೆಗಳನ್ನು ಅರಿತ ಶಿಕ್ಷಕಿ, ಒಂದು ನಿಮಿಷನೂ ತಡಮಾಡದೇ ಹೊಸ ಮೊಬೈಲ್ ಖರೀದಿಸಿ, ನೋಟ್ ಬುಕ್ಸ್, ಪಠ್ಯಪುಸ್ತಕ, ಸ್ಕೂಲ್ ಬ್ಯಾಗ್, ಪೆನ್, ಮಾಸ್ಕ್ ಗಳು ಹಾಗೂ ಅಗತ್ಯ ವಸ್ತುಗಳನ್ನು ಹಿಡಿದುಕೊಂಡು ವಿದ್ಯಾರ್ಥಿಯ ಮನೆಯತ್ತ ಪ್ರಯಾಣ ಬೆಳೆಸಿ, ಆತನ ಕೈಗೆ ಹಸ್ತಾಂತರ ಮಾಡಿದರು. ಈ ವೇಳೆ ಶಿಕ್ಷಕಿಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿರುವ ವಿದ್ಯಾರ್ಥಿ, ಚೆನ್ನಾಗಿ ಓದಿ ಒಳ್ಳೆಯ ಅಂಕ ಗಳಿಸುವುದಾಗಿ ಭರವಸೆ ನೀಡಿದ್ದಾನೆ.

  • ಪಿಯುಸಿವರೆಗೂ ಆನ್‍ಲೈನ್ ಶಿಕ್ಷಣ ರದ್ದಾಗಬೇಕು: ಸಿದ್ದರಾಮಯ್ಯ ಸಲಹೆ

    ಪಿಯುಸಿವರೆಗೂ ಆನ್‍ಲೈನ್ ಶಿಕ್ಷಣ ರದ್ದಾಗಬೇಕು: ಸಿದ್ದರಾಮಯ್ಯ ಸಲಹೆ

    ಮೈಸೂರು: ಪಿಯುಸಿವರೆಗೂ ಆನ್ ಲೈನ್ ಶಿಕ್ಷಣ ರದ್ದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಸಲಹೆ ನಿಡಿದ್ದಾರೆ.

    ನಗರದಲ್ಲಿ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೊದಲಿನಿಂದಲೂ ಆನ್ ಲೈನ್ ಶಿಕ್ಷಣ ಪದ್ಧತಿಗೆ ವಿರೋಧ ಮಾಡುತ್ತಿದ್ದೇನೆ. ಇದೀಗ ಸರ್ಕಾರ 5ನೇ ತರಗತಿವರೆಗೆ ಆನ್ ಲೈನ್ ಶಿಕ್ಷಣ ರದ್ದು ಮಾಡಿದೆ. ಇದು ಸರಿಯಾದ ಕ್ರಮ ಅಲ್ಲ. ನನ್ನ ಪ್ರಕಾರ ಪಿಯುಸಿವರೆಗೂ ಆನ್ ಲೈನ್ ಶಿಕ್ಷಣ ರದ್ದಾಗಬೇಕು ಎಂದರು.

    ಮಕ್ಕಳಿಗೆ ನೇರವಾಗಿ ತರಗತಿಯಲ್ಲೇ ಭೋದನೆ ಮಾಡಬೇಕು. ಆ ಕಾರಣಕ್ಕಾಗಿ ಅಕ್ಟೋಬರ್‍ವರೆಗೆ ಶಾಲೆ ತೆರೆಯಬಾರದು ಎಂದು ಸರ್ಕಾರಕ್ಕೆ ಸಲಹೆಯಿತ್ತರು. ಇದೇ ವೇಳೆ ಖಾಸಗಿ ಶಾಲೆಗಳ ಶುಲ್ಕ ಕಡಿಮೆ ಮಾಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಚಾರವನ್ನು ಸರ್ಕಾರ ತೀರ್ಮಾನ ಮಾಡಬೇಕು ಎಂದರು.

    ಪಬ್ಲಿಕ್ ಟಿವಿ ಕಳೆದ ಒಂದು ವಾರದಿಂದ ಆನ್‍ಲೈನ್ ಕ್ಲಾಸ್ ಸಮಸ್ಯೆಯ ಕುರಿತು ವಿಸ್ತೃತ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿ ನಿರ್ಧಾರ ಪ್ರಕಟಿಸಿದ್ದಾರೆ. ಎಲ್‍ಕೆಜಿ, ಯುಕೆಜಿ ಹಾಗೂ ಸಿಬಿಎಸ್‍ಸಿ ಸೇರಿದಂತೆ ಎಲ್ಲಾ ಮಾದರಿಯ ಶಾಲೆಗಳ 1ರಿಂದ 5ನೇ ತರಗತಿವರೆಗೂ ಆನ್‍ಲೈನ್ ಕ್ಲಾಸ್ ರದ್ದುಗೊಳಿಸಿ ಸರ್ಕಾರ ಮಹತ್ವದ ಆದೇಶ ನೀಡಿದೆ.

    ಇತ್ತ ಕೆಲ ಖಾಸಗಿ ಶಾಲೆಗಳು ಆನ್‍ಲೈನ್ ಕ್ಲಾಸ್ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಪಡೆಯುತ್ತಿದ್ದ ಬಗ್ಗೆಯೂ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದರಿಂದ ಕೂಡ ಎಚ್ಚೆತ್ತುಕೊಂಡ ಸರ್ಕಾರ ಪ್ರಮುಖ ನಿರ್ಧಾರ ಕೈಗೊಂಡಿದೆ. ಆನ್‍ಲೈನ್ ಕ್ಲಾಸ್ ಹೆಸರಿನಲ್ಲಿ ಹೆಚ್ಚು ಶುಲ್ಕ ತೆಗೆದುಕೊಳ್ಳುವ ಹಾಗಿಲ್ಲ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.