Tag: ಆನ್‌ಲೈನ್‌ ಆಟ

  • ಕುದುರೆ ರೇಸ್, ಆನ್‌ಲೈನ್‌ ಆಟ, ಕ್ಯಾಸಿನೋಗಳ ಮೇಲೆ ಶೇ.28 ಜಿಎಸ್‌ಟಿ

    ಕುದುರೆ ರೇಸ್, ಆನ್‌ಲೈನ್‌ ಆಟ, ಕ್ಯಾಸಿನೋಗಳ ಮೇಲೆ ಶೇ.28 ಜಿಎಸ್‌ಟಿ

    ನವದೆಹಲಿ: ಕುದುರೆ ರೇಸ್, ಆನ್‌ಲೈನ್‌ ಆಟ, ಕ್ಯಾಸಿನೋಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ (ಜಿಎಸ್‌ಟಿ) ಅಡಿಯಲ್ಲಿ ಶೇ. 28ರಷ್ಟು ತೆರಿಗೆ ವಿಧಿಸಲು ಸಚಿವರ ಸಮಿತಿಯು ಶಿಫಾರಸು ಮಾಡಿದೆ.

    ಕುದುರೆ ರೇಸ್, ಆನ್‌ಲೈನ್‌ ಆಟ, ಕ್ಯಾಸಿನೋಗಳ ಮೇಲೆ ಎಷ್ಟು ತೆರಿಗೆ ವಿಧಿಸಬೇಕು ಎಂಬುದನ್ನು ಪರಿಶೀಲಿಸಲು ಮೇಘಾಲಯದ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.

    ಮೇ 2 ರಂದು ಸಮಿತಿ ಸಭೆ ನಡೆಸಿತ್ತು. ಈಗ ಸಮಿತಿ ಶಿಫಾರಸು ಮಾಡಿದ್ದು ಈ ವರದಿಯನ್ನು ಜಿಎಸ್‌ಟಿ ಮಂಡಳಿಯ ಮುಂಬರುವ ಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳಲಿದೆ. ಇದನ್ನೂ ಓದಿ: ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಎಲೆಕ್ಷನ್- ಒಬಿಸಿ ಕೋಟಾಕ್ಕೆ ಸುಪ್ರೀಂ ಸಮ್ಮತಿ

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಒಂದೆರಡು ದಿನಗಳಲ್ಲಿ ಸಮಿತಿಯ ವರದಿಯನ್ನು ಸಲ್ಲಿಸಲಾಗುತ್ತದೆ ಎಂದು ಸಂಗ್ಮಾ ಅವರು ಟ್ವೀಟ್ ಮಾಡಿದ್ದಾರೆ.

    ಪ್ರಸ್ತುತ ಈಗ ಬೆಟ್ಟಿಂಗ್‌ ಅಥವಾ ಗ್ಯಾಬ್ಲಿಂಗ್‌ ಇರುವ ಆನ್‌ಲೈನ್‌ ಆಟಗಳಿಗೆ ಶೇ.28 ರಷ್ಟು ತೆರಿಗೆ, ಬೆಟ್ಟಿಂಗ್‌ ಅಥವಾ ಗ್ಯಾಬ್ಲಿಂಗ್‌ ಇಲ್ಲದ ಆನ್‌ಲೈನ್‌ ಆಟಗಳಿಗೆ ಶೇ.18 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಕುದುರೆ ರೇಸ್‌ಗಳ ಒಟ್ಟು ಬೆಟ್‌ ಮೌಲ್ಯದ ಮೇಲೆ ಶೇ.28 ರಷ್ಟು ತೆರಿಗೆ ವಿಧಿಸಲಾಗುತ್ತಿದೆ.