Tag: ಆನೆ ಮರಿ

  • ಗಂಡು ಮರಿಗೆ ಜನ್ಮ ನೀಡಿದ ಗಜಪಡೆಯ ಸದಸ್ಯೆ ಲಕ್ಷ್ಮಿ

    ಗಂಡು ಮರಿಗೆ ಜನ್ಮ ನೀಡಿದ ಗಜಪಡೆಯ ಸದಸ್ಯೆ ಲಕ್ಷ್ಮಿ

    ಮೈಸೂರು: ದಸರಾ (Mysuru Dasara) ಮೆರವಣಿಗೆಯಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಬಂದಿರೋ ಗಜಪಡೆಯ ಸದಸ್ಯೆ 22 ವರ್ಷದ ಲಕ್ಷ್ಮಿ (Lakshmi) ನಿನ್ನೆ(ಮಂಗಳವಾರ) ಗಂಡು ಮರಿಗೆ ಜನ್ಮ ನೀಡಿದೆ.

    ದಸರಾ ವೇಳೆ ಗಜಪಡೆಯ ಸದಸ್ಯೆ ಮರಿ ಹಾಕುತ್ತಿರುವ ಎರಡನೇ ಪ್ರಸಂಗವಿದು. ಲಕ್ಷ್ಮಿಯ ಪುತ್ರನನ್ನು ಕಂಡು ಗಜಪಡೆಯ ಮಾವುತರು, ಕಾವಾಡಿಗಳು, ಅರಣ್ಯಾಧಿಕಾರಿಗಳು ಖುಷಿಯಾಗಿದ್ದಾರೆ. 15 ವರ್ಷಗಳ ಹಿಂದೆ ದಸರಾ ಗಜಪಡೆಯ ಸದಸ್ಯೆಯಾಗಿ ಬಂದಿದ್ದ ಸರಳ ಆನೆ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಆ ಮರಿಗೆ ಚಾಮುಂಡಿ (Chamundi) ಎಂದು ಹೆಸರಿಡಲಾಗಿತ್ತು.

    ಲಕ್ಷ್ಮಿ ಆನೆ 2017 ರಲ್ಲಿ ಮೊದಲ ಬಾರಿಗೆ ನಾಡಹಬ್ಬದ ಮೆರವಣಿಗೆಗೆ ಕಾಡಿ ನಿಂದ ನಾಡಿಗೆ ಬಂದಿತ್ತು. ಆಗ ಸಿಡಿಮದ್ದಿನ ಶಬ್ದಕ್ಕೆ ಲಕ್ಷ್ಮಿ ಬೆಚ್ಚುತ್ತಿದ್ದ ಕಾರಣ ಮೆರವಣಿಗೆಯಲ್ಲಿ ಭಾಗವಹಿಸಲಿಲ್ಲ. ಈಗ ಎರಡನೇ ಬಾರಿಗೆ ಲಕ್ಷ್ಮಿಯನ್ನು ನಾಡಹಬ್ಬದ ಮೆರವಣಿಗೆಗೆ ಕರೆಸಲಾಗಿದೆ. ಮೊನ್ನೆ ನಡೆದ ಸಿಡಿಮದ್ದಿನ ತಾಲೀಮಿನ ವೇಳೆ ಶಬ್ಧಕ್ಕೆ ಬೆಚ್ಚದ್ದೆ ನಿಂತು ಕೊಂಡಿತ್ತು. ಇದನ್ನೂ ಓದಿ: ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಈ ಬಾರಿ ದಸರಾ ಉದ್ಘಾಟನೆ – ಸಿಎಂ

    ನಿನ್ನೆ ಮಧ್ಯಾಹ್ನ ಲಕ್ಷ್ಮಿ ವರ್ತನೆಯಲ್ಲಿ ಬದಲಾವಣೆ ಕಂಡಿತ್ತು. ಆಗ ವೈದ್ಯರು ಆನೆಯನ್ನು ಪರೀಕ್ಷಿಸಿದ್ದಾಗ ಲಕ್ಷ್ಮಿ ತುಂಬು ಗರ್ಭಿಣಿ ಎಂಬುದು ಗೊತ್ತಾಗಿದೆ. ತಕ್ಷಣ ಲಕ್ಷ್ಮಿಯನ್ನು ಸುಸಜ್ಜಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ನಿನ್ನೆ ರಾತ್ರಿ 8.10ಕ್ಕೆ ಲಕ್ಷ್ಮಿ ಗಂಡು ಮರಿಗೆ ಜನ್ಮ ನೀಡಿದ್ದಾಳೆ. ಈ ಮರಿಗೆ ಗಣಪತಿ (Ganapathi) ಎಂದು ನಾಮಕರಣ ಮಾಡಲು ಚಿಂತನೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ತಾಯಿ ಕಳೆದುಕೊಂಡ ನೋವಲ್ಲಿ ಏಕಾಂಗಿಯಾಗಿ ಅಲೆಯುತ್ತಿದ್ದ ಆನೆ ಮರಿ ರಕ್ಷಣೆ

    ತಾಯಿ ಕಳೆದುಕೊಂಡ ನೋವಲ್ಲಿ ಏಕಾಂಗಿಯಾಗಿ ಅಲೆಯುತ್ತಿದ್ದ ಆನೆ ಮರಿ ರಕ್ಷಣೆ

    ರಾಮನಗರ: ತಾಯಿ ಆನೆಯನ್ನು ಕಳೆದುಕೊಂಡ ನೋವಲ್ಲಿ ಏಕಾಂಗಿಯಾಗಿ ಅಲೆಯುತ್ತಿದ್ದ ಆನೆ ಮರಿಯನ್ನು ಕನಕಪುರದ ಕೊಂಡನಗುಂದಿಗೆ ರೈತರು ರಕ್ಷಣೆ ಮಾಡಿದ್ದಾರೆ.

    ಸಂಗಮ ವಲಯಾರಣ್ಯದ ಕುದುರೆ ಹಾದಿಯಲ್ಲಿ ಬರುವಾಗ ತಾಯಿಯಾನೆ ಕಾಲುಜಾರಿ ಸಾವನ್ನಪ್ಪಿತ್ತು. ಅನಾಥವಾದ ಮರಿ ಮೂರು ದಿನಗಳಿಂದ ಕಾಡಿನಲ್ಲಿ ಅಲೆದು ಅಲೆದು ಸುಸ್ತಾಗಿತ್ತು. ಇದನ್ನು ಹಸು ಮೇಯಿಸಲು ಹೋದವರು ಗಮನಿಸಿ ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಗಣಪತಿ ಶೋಭಾಯಾತ್ರೆ ವೇಳೆ ರಾಷ್ಟ್ರೀಯ ಲಾಂಛನಕ್ಕೆ ಅಪಮಾನ

    ತಾಯಿಗಾಗಿ ಕಣ್ಣೀರಿಟ್ಟು ನಿತ್ರಾಣ ಸ್ಥಿತಿಯಲ್ಲಿದ್ದ ಆನೆ ಮರಿಗೆ ಹಾಲು, ಆಹಾರ ನೀಡಿ ಮೈತೊಳೆದು ರಾತ್ರಿಯಿಡಿ ಆರೈಕೆ ಮಾಡಿದ್ದಾರೆ. ಸ್ವಲ್ಪ ಚೇತರಿಸಿಕೊಂಡ ಮೇಲೆ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸದ್ಯ ಆನೆ ಮರಿಗೆ ಮುತ್ತತ್ತಿ ಚೆಕ್ ಪೋಸ್ಟ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಮಕ್ಕಳಂತೆ ಚೆಲ್ಲಾಟವಾಡುತ್ತಾ ಕಾಲ ಕಳೆಯುತ್ತಿರುವ ಮರಿ ಆನೆಯನ್ನ ಕಂಡು ಮಕ್ಕಳು ಸಂತಸ ವ್ಯಕ್ತಪಡಿಸಿದ್ದಾರೆ. ಆನೆ ಮರಿ ಜತೆಗೆ ಆಟವಾಡಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ACB ರದ್ದು ತೀರ್ಪಿನ ಅನುಷ್ಠಾನ‌ ಮಾಡಿ ಸರ್ಕಾರದಿಂದ ಆದೇಶ

    Live Tv
    [brid partner=56869869 player=32851 video=960834 autoplay=true]

  • ಶಾಲೆಗೆ ಬಂದು ಮಕ್ಕಳೊಂದಿಗೆ ಆಟ ಆಡಿದ ಮರಿಯಾನೆ

    ಶಾಲೆಗೆ ಬಂದು ಮಕ್ಕಳೊಂದಿಗೆ ಆಟ ಆಡಿದ ಮರಿಯಾನೆ

    ಚಾಮರಾಜನಗರ: ತಾಯಿಯಿಂದ ತಪ್ಪಿಸಿಕೊಂಡ ಆನೆ ಮರಿಯೊಂದು ಶಾಲೆಗೆ ಬಂದು ಮಕ್ಕಳೊಂದಿಗೆ ಆಟ ಆಡಿರುವ ಅಪರೂಪದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಪುರಾಣಿ ಪೋಡಿನ ವಸತಿ ಶಾಲೆಯಲ್ಲಿ ನಡೆದಿದೆ.

    ಬಿಳಿಗಿರಿರಂಗನಬೆಟ್ಟ ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ ಗಂಡು ಮರಿಯಾನೆ ಪುರಾಣಿ ಪೋಡಿನ ವಸತಿ ಶಾಲೆಗೆ ಬಂದಿದೆ. ಆನೆ ಕಂಡದ್ದೇ ತಡ, ಖುಷಿಗೊಂಡ ಮಕ್ಕಳು ಆನೆ ಮರಿಯೊಂದಿಗೆ ಆಡಿ ನಲಿದಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ನಿನ್ನೆ ದಾಖಲೆ ಮಳೆ- ಸೆಪ್ಟೆಂಬರ್‌ನಲ್ಲೇ ಭಾರೀ ಮಳೆ ಯಾಕೆ?

    ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರಿಂದ ಯಳಂದೂರು ವಲಯದ ಸಿಬ್ಬಂದಿ ಬಂದು ಗಸ್ತು ತಿರುಗಿದ್ದಾರೆ. ಈ ವೇಳೆ ತಾಯಿ ಆನೆ ಘೀಳಿಡುತ್ತಿದ್ದುದನ್ನು ಗಮನಿಸಿ, ಈರಣ್ಣ ಕಟ್ಟೆ ಪೋಡಿನ ಬಳಿ ಮರಿಯಾನೆ ತಾಯಿಯನ್ನು ಸೇರುವಂತೆ ಮಾಡಿದ್ದಾರೆ. ಇದನ್ನೂ ಓದಿ: ತೇಲುವ ಫ್ರೀಜರ್ ಸಹಾಯದಿಂದ 11 ದಿನ ಸಮುದ್ರದಲ್ಲೇ ಜೀವ ಉಳಿಸಿಕೊಂಡ

    Live Tv
    [brid partner=56869869 player=32851 video=960834 autoplay=true]

  • ಎಷ್ಟೇ ಎಬ್ಬಿಸಿದರೂ ಎಚ್ಚರಗೊಳ್ಳದ ಆನೆಮರಿಗೆ ತಾಯಿ ಮಾಡಿದ್ದೇನು ಗೊತ್ತಾ?

    ಎಷ್ಟೇ ಎಬ್ಬಿಸಿದರೂ ಎಚ್ಚರಗೊಳ್ಳದ ಆನೆಮರಿಗೆ ತಾಯಿ ಮಾಡಿದ್ದೇನು ಗೊತ್ತಾ?

    ಪ್ರೇಗ್ ಮೃಗಾಲಯದ ಆನೆಯೊಂದರ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ವೀಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ರಮೇಶ್ ಪಾಂಡೆ ಅವರು ತಮ್ಮ ಟ್ವಿಟ್ಟರ್  ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಈ ವೀಡಿಯೋಗೆ ಒಂದು ಚಿಕ್ಕ ಕಥೆಯ ರೂಪದಲ್ಲಿ ಕ್ಯಾಪ್ಷನ್ ಕೂಡ ಹಾಕಿದ್ದಾರೆ.

    ಆನೆಯ ಮರಿ ದಿನವಿಡೀ ಸಂತೋಷದಿಂದ ಆಟವಾಡಿ ಮೃಗಾಲಯದಲ್ಲಿ ಚಿಕ್ಕ ನಿದ್ರೆಗೆ ಜಾರಿತು. ಕೊಂಚ ಸಮಯದ ಬಳಿಕ ಆನೆ ಮರಿ ಮಲಗಿದ್ದನ್ನು ಕಂಡು ಅದರ ತಾಯಿ ಎಚ್ಚರಿಸಿಲು ಪ್ರಯತ್ನಿಸಿದೆ. ಆದರೆ ಗಾಢ ನಿದ್ರೆಗೆ ಜಾರಿದ್ದ ಆನೆಮರಿ ಎದ್ದೇಳಲೇ ಇಲ್ಲ. ಇದರಿಂದ ಆತಂಕಗೊಂಡ ಆನೆ ಮೃಗಾಲಯದ ಸಿಬ್ಬಂದಿ ಸಹಾಯ ಪಡೆದಿದೆ.

    ಮೃಗಾಲಯದ ಸಿಬ್ಬಂದಿ ಆನೆ ಮರಿ ಬಳಿ ಬಂದು ಎಚ್ಚರಗೊಳಿಸಿದ್ದಾರೆ. ಆಗ ಎಚ್ಚರಗೊಂಡ ಆನೆ ಕಣ್ಣು ಬಿಟ್ಟು ಎದ್ದು ಓಡಿ ಹೋಗಿ ತನ್ನ ತಾಯಿಯನ್ನು ತಬ್ಬಿಕೊಳ್ಳುತ್ತದೆ ಎಂದು ರಮೇಶ್ ಪಾಂಡೇ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದುಮಾಡುತ್ತಿದ್ದು, ಈವರೆಗೂ ಸುಮಾರು 2 ಲಕ್ಷ ವಿವ್ಸ್ ಪಡೆದುಕೊಂಡಿದೆ. ಅಲ್ಲದೆ ಆನೆಯ ಬುದ್ದಿವಂತಿಕೆ ಮತ್ತು ಸಾಮಾಜಿಕ ಪ್ರಜ್ಞೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಧರ್ಮಸ್ಥಳದ ಮುದ್ದು ಆನೆಮರಿಗೆ ಶಿವಾನಿ ಹೆಸರಿಟ್ಟ ಧರ್ಮಾಧಿಕಾರಿ ಮೊಮ್ಮಗಳು

    ಧರ್ಮಸ್ಥಳದ ಮುದ್ದು ಆನೆಮರಿಗೆ ಶಿವಾನಿ ಹೆಸರಿಟ್ಟ ಧರ್ಮಾಧಿಕಾರಿ ಮೊಮ್ಮಗಳು

    ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹುಟ್ಟಿದ ಆನೆ ಮರಿಗೆ ಇಂದು ನಾಮಕರಣ ಮಾಡಲಾಯಿತು. ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮೊಮ್ಮಗಳು ಮಾನ್ಯ, ಶಿವಾನಿ ಹೆಸರು ಘೋಷಿಸುವ ಮೂಲಕ ನಾಮಕರಣ ಮಾಡಿದರು.

    ಶ್ರೀಕ್ಷೇತ್ರದ ಆನೆ ಲಕ್ಷ್ಮೀ ಕಳೆದ ಜುಲೈ1 ರಂದು ಹೆಣ್ಣು ಮರಿಗೆ ಜನ್ಮ ನೀಡಿತ್ತು. ಹೀಗಾಗಿ ಮರಿಯ ನಾಮಕರಣ ಇಂದು ತುಲಾ ಲಗ್ನ ಮುಹೂರ್ತದಲ್ಲಿ ನಡೆಯಿತು. ವೀರೇಂದ್ರ ಹೆಗ್ಗಡೆಯವರು ಆನೆ ಮರಿಗೆ ಶ್ರೀ ದೇವರ ಪ್ರಸಾದ ನೀಡಿ, ಗಂಟೆ ಕಟ್ಟುವ ಮೂಲಕ ವಿಧಿ ನೆರವೇರಿಸಿದರು. ಇದೇ ವೇಳೆ ಆನೆಯ ಮಾವುತ ಕೃಷ್ಣ ಅವರಿಗೆ ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಸನ್ಮಾನ ಮಾಡಿದರು.

    ನಾಮಕರಣ ಸಮಾರಂಭದಲ್ಲಿ ಹೇಮಾವತಿ ವಿ ಹೆಗ್ಗಡೆ, ಡಿ ಹರ್ಷೇಂದ್ರ  ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ ಯಶೋವರ್ಮ, ಸೋನಿಯಾ ವರ್ಮಾ, ಅಮಿತ್, ಶ್ರದ್ಧಾ ಅಮಿತ್, ವೀರು ವಿ ಶೆಟ್ಟಿ, ದೇವಳದ ಶ್ರೀ ದೇವಳದ ಪಾರುಪತ್ಯಗಾರ ಪಿ ಲಕ್ಷ್ಮೀನಾರಾಯಣ ರಾವ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

  • ರಸ್ತೆ ಬದಿ ಅನುಮಾನಾಸ್ಪದವಾಗಿ ಮೃತಪಟ್ಟ ಆನೆ ಮರಿ

    ರಸ್ತೆ ಬದಿ ಅನುಮಾನಾಸ್ಪದವಾಗಿ ಮೃತಪಟ್ಟ ಆನೆ ಮರಿ

    – ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡು

    ಕೋಲಾರ: ಆನೆ ಹಿಂಡಿನಲ್ಲಿದ್ದ ಪುಟ್ಟ ಆನೆ ಮರಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಾಮಸಮುದ್ರಂನಿಂದ ಬಲಮಂದೆಗೆ ತೆರಳುವ ಮಾರ್ಗ ಮಧ್ಯೆ ರಸ್ತೆ ಬದಿಯಲ್ಲಿ ಆನೆ ಮರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದೆ.

    ಕಳೆದ ರಾತ್ರಿ ತಮಿಳುನಾಡಿನ ಕೃಷ್ಣಗಿರಿಯಿಂದ ಜಿಲ್ಲೆಯ ಗಡಿಗೆ ಆಗಮಿಸಿರುವ 20 ಆನೆಗಳ ಹಿಂಡಿನಲ್ಲಿದ್ದ ಮರಿ ಇದಾಗಿದ್ದು, ರಸ್ತೆ ದಾಟುವ ವೇಳೆ ಕಾಲ್ತುಳಿತದಿಂದ ಮೃತಪಟ್ಟಿದೆಯಾ ಅಥವಾ ಅಪರಿಚಿತ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿರಬಹುದಾ ಎಂಬ ಅನುಮಾನ ಎದ್ದಿದೆ. ಅಲ್ಲದೆ ಪುಟ್ಟ ಮರಿಯಾದ್ದರಿಂದ ಪ್ರಸವದ ವೇಳೆ ಸಾವನ್ನಪ್ಪಿರುವ ಶಂಕೆಯೂ ಎದುರಾಗಿದೆ.

    ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಕಾಮಸಮುದ್ರ ಅರಣ್ಯ ಪ್ರದೇಶದಲ್ಲಿ 20ಕ್ಕೂ ಹೆಚ್ಚು ಆನೆಗಳ ಹಿಂಡು ಬೀಡುಬಿಟ್ಟಿದೆ.

  • ನನಗೂ ಸ್ಲಿಪ್ಪರ್ ಬೇಕೆಂದು ಹಠ ಹಿಡಿದ ಆನೆ ಮರಿ-ವಿಡಿಯೋ ನೋಡಿ

    ನನಗೂ ಸ್ಲಿಪ್ಪರ್ ಬೇಕೆಂದು ಹಠ ಹಿಡಿದ ಆನೆ ಮರಿ-ವಿಡಿಯೋ ನೋಡಿ

    ಥೈಲ್ಯಾಂಡ್: ಆನೆ ಮರಿಯೊಂದು ತನ್ನ ಮಾವುತನ ಕಾಲಿನಲ್ಲಿರುವ ಚಪ್ಪಲಿ ತನಗೆ ಬೇಕೆಂದು ಹಠ ಹಿಡಿದು ಕೊನೆಗೆ ಅದು ಹಾಕಿಕೊಳ್ಳುವ ಪ್ರಯತ್ನ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಥೈಲ್ಯಾಂಡ್ ನ ಎಲಿಫೆಂಟ್ ನೇಚರ್ ಪಾರ್ಕ್ ನಲ್ಲಿ `ಸೇವ್ ಎಲಿಫೆಂಟ್ ಫೌಂಡೇಶನ್’ ಅಡಿಯಲ್ಲಿ ಆನೆಗಳನ್ನು ಸಾಕಲಾಗುತ್ತಿದೆ. ಈ ಫೌಂಡೇಶನ್ ಮೂಲಕ ಏಷ್ಯಾದ ಆನೆಗಳನ್ನು ರಕ್ಷಣೆ ಮಾಡಲಾಗುತ್ತಿದೆ. ಆನೆಗಳು ಅತಿಯಾದ ಬುದ್ಧಿವಂತಿಕೆಯನ್ನು ಹೊಂದಿರುತ್ತವೆ. ಅದಕ್ಕೆ ಉದಾಹರಣೆ ಎಂಬಂತೆ ಈ ಪುಟ್ಟ ಆನೆ ಮರಿ ಸ್ಲಿಪ್ಪರ್ ಹಾಕಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ.

    ಆನೆ ಮರಿ ಮೊದಲಿಗೆ ತನ್ನ ಕೇರ್ ಟೇಕರ್ ಪಾದದಲ್ಲಿರುವ ಸ್ಲಿಪ್ಪರ್ ನ್ನು ತನ್ನ ಸೊಂಡಿಲಿನ ಸಹಾಯದಿಂದ ಪಡೆಯಲು ಪ್ರಯತ್ನ ಮಾಡುತ್ತದೆ. ಕೊನೆಗೆ ಕೇರ್ ಟೇಕರ್ ಸ್ವತಃ ತನ್ನ ಸ್ಲಿಪ್ಪರ್ ಅನ್ನು ಆನೆ ಮರಿಗೆ ಕೊಡುತ್ತಾನೆ. ತನಗೆ ಸಿಕ್ಕ ಸ್ಲಿಪ್ಪರ್ ಹಾಕಿಕೊಳ್ಳುವುದಕ್ಕಾಗಿ ತನಗೆ ಅನುಕೂಲವಾಗುವ ಹಾಗೆ ಧರಿಸಲು ಎಲ್ಲ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ತನ್ನ ಮುಂಗಾಲಿಗೆ ಸ್ಲಿಪ್ಪರ್ ಹಾಕಿಕೊಳ್ಳಲು ನೋಡುತ್ತದೆ. ಆದರೆ ಅದು ಸಾಧ್ಯವಾಗಲ್ಲ, ಮತ್ತೆ ತನ್ನ ಹಿಂಗಾಲುಗಳಿಗೆ ಸಹ ಸ್ಲಿಪ್ಪರ್ ಹಾಕಿಕೊಳ್ಳಲು ಸಹ ಪ್ರಯತ್ನ ಮಾಡಿದರೂ ಅದು ಸಹ ಸಾಧ್ಯವಾಗಲ್ಲ. ಕೊನೆಗೆ ತನ್ನ ಸೊಂಡಿಲಿನಿಂದ ಸ್ಲಿಪ್ಪರ್ ಆ ಕಡೆಯಿಂದ ಈ ಕಡೆಗೆ ತೆಗೆದುಕೊಂಡು ಓಡಾಡುತ್ತದೆ.

    ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ಸೇವ್ ಎಲಿಫೆಂಟ್ ಫೌಂಡೇಶನ್ ಆನೆಗಳನ್ನು ರಕ್ಷಿಸಿ ಎಂಬ ಮನವಿಯನ್ನು ಮಾಡಿಕೊಂಡಿದೆ.

     

  • ವಿಡಿಯೋ: ಬಂಡೆಯೊಂದರ ಹಳ್ಳದಲ್ಲಿ ಬಿದ್ದ ಆನೆಮರಿಯ ರಕ್ಷಣೆ

    ವಿಡಿಯೋ: ಬಂಡೆಯೊಂದರ ಹಳ್ಳದಲ್ಲಿ ಬಿದ್ದ ಆನೆಮರಿಯ ರಕ್ಷಣೆ

    ಬೆಂಗಳೂರು: ರಾತ್ರಿ ಕಾಡಿನಿಂದ ಬಂದ ಆನೆಗಳ ಗುಂಪಿನಿಂದ ಬೇರ್ಪಟ್ಟು ಬಂಡೆಯ ಕಂದಕದಲ್ಲಿ ಬಿದ್ದಿದ್ದ ಮೂರು ವರ್ಷದ ಆನೆಮರಿಯನ್ನು ರಕ್ಷಿಸಲಾಗಿದೆ.

    ಕರ್ನಾಟಕ ಮತ್ತು ತಮಿಳುನಾಡಿನ ಗಡಿ ಪ್ರದೇಶದ ತಳಿ ಗ್ರಾಮದ ಹುಲಿಬಂಡೆ ಎಂಬ ಅರಣ್ಯದಲ್ಲಿ ಆನೆಮರಿ ಕಂದಕಕ್ಕೆ ಬಿದ್ದಿತ್ತು. ತಳಿ ಗ್ರಾಮದ ಸುತ್ತಮುತ್ತ ಸಾವಿರಾರು ಎಕರೆ ಅರಣ್ಯ ಪ್ರದೇಶವಿದೆ. ಈ ಅರಣ್ಯ ಭಾಗದಲ್ಲಿ ಹೆಚ್ಚಾಗಿ ಆನೆಗಳು ವಾಸವಾಗಿವೆ.

    ಇದನ್ನೂ ಓದಿ: ವೀಡಿಯೋ: ಕಬ್ಬಿಣದ ಕಂಬಿಯ ಕೆಳಗೆ ಸಿಲುಕಿದ್ದ ಆನೆಯ ರಕ್ಷಣೆ

    ನೀರಿಗಾಗಿ ಹುಡಕಾಡುತ್ತಾ ಬಂಡೆಯ ಬಳಿಯ ಕೆರೆಗೆ ಆನೆಗಳು ಬಂದಿದ್ದು, ಈ ವೇಳೆ ಗುಂಪಿನಲ್ಲಿದ್ದ ಪುಟ್ಟ ಆನೆಮರಿ ಬಂಡೆಯ ಕಂದಕದಲ್ಲಿ ಬಿದ್ದಿರಬಹುದು ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ. ಸದ್ಯ ಆನೆಮರಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಮೇಲಕ್ಕೆತ್ತಿದ್ದಾರೆ. ಆನೆಮರಿಯನ್ನು ಸುರಕ್ಷಿತವಾಗಿ ಮತ್ತೆ ಆನೆಗಳ ಗುಂಪಿಗೆ ಸೇರಿಸಲಾಗಿದೆ.

    https://www.youtube.com/watch?v=beE9fKUxjWU