Tag: ಆನೆ ದಾಳಿ

  • ಆನೆ ದಾಳಿ ತಡೆಗೆ ಕಾಂಪಾ ಅನುದಾನ – ಡಾ. ಸಿ.ಎನ್.ಮಂಜುನಾಥ್ ಮನವಿ

    ಆನೆ ದಾಳಿ ತಡೆಗೆ ಕಾಂಪಾ ಅನುದಾನ – ಡಾ. ಸಿ.ಎನ್.ಮಂಜುನಾಥ್ ಮನವಿ

    ನವದೆಹಲಿ: ಬೆಂಗಳೂರು ಗ್ರಾಮಾಂತರ (Bengaluru Rural) ಕ್ಷೇತ್ರದಲ್ಲಿ ಆನೆಗಳ ಹಾವಳಿ ವ್ಯಾಪಕವಾಗಿದ್ದು, ಬ್ಯಾರಿಕೇಡ್ ಅಳವಡಿಕೆಗೆ ಕಾಂಪಾ (CAMPA) ನಿಧಿಯಿಂದ ವಿಶೇಷ ಅನುದಾನ ನೀಡಬೇಕು ಎಂದು ಸಂಸದ ಡಾ. ಸಿ.ಎನ್.ಮಂಜುನಾಥ್ (CN Manjunath) ಮನವಿ ಮಾಡಿಕೊಂಡರು.ಇದನ್ನೂ ಓದಿ: ಕಾಮನ್‌ ಮ್ಯಾನ್‌ಗೆ ಎದ್ದೇಳು ಅಂತ ಚಿವುಟುವ ಸಿನಿಮಾವಿದು- UI ಬಗ್ಗೆ ಡಾಲಿ ಮಾತು

    ಬನ್ನೇರುಘಟ್ಟ, ಸಾತನೂರು ಮತ್ತಿತರ ಕಡೆಗಳಲ್ಲಿ ಆನೆ ದಾಳಿಗಳಿಂದ ಮನುಷ್ಯರು ಮೃತಪಟ್ಟಿದ್ದಾರೆ. ಕೃಷಿಗೆ ಅಪಾರವಾದ ನಷ್ಟವಾಗಿದೆ. ಇದರಿಂದ ಬ್ಯಾರಿಕೇಡ್ ಅಳವಡಿಕೆಗೆ ಕಾಂಪಾ ನಿಧಿಯಿಂದ ವಿಶೇಷ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

    ಕಾಡು ಪ್ರಾಣಿಗಳ ದಾಳಿಯಿಂದ ಅರಣ್ಯ ಇಲಾಖೆಯವರು ಮೃತಪಟ್ಟರೆ 25 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ರೈತರಿಗೆ 15 ಲಕ್ಷ ರೂ.ಯಷ್ಟೇ ಪರಿಹಾರ ಒದಗಿಸಲಾಗುತ್ತದೆ. ಈ ತಾರತಮ್ಯ ಸರಿಯಲ್ಲ. ಪರಿಹಾರವನ್ನು 25 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

    ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಭರವಸೆ ನೀಡಿದರು.ಇದನ್ನೂ ಓದಿ: ನಬಾರ್ಡ್ ನೆರವು ಕಡಿತದಿಂದ ರೈತರಿಗೆ ಸಂಕಷ್ಟ – ಜಿ.ಕುಮಾರ್ ನಾಯಕ್ ಕಳವಳ

  • ಚಾಮರಾಜನಗರ| ಕಾಡಾನೆ ದಾಳಿಗೆ ಟೊಮೆಟೊ, ಬೀನ್ಸ್‌, ಬಾಳೆ ಬೆಳೆ ನಾಶ

    ಚಾಮರಾಜನಗರ| ಕಾಡಾನೆ ದಾಳಿಗೆ ಟೊಮೆಟೊ, ಬೀನ್ಸ್‌, ಬಾಳೆ ಬೆಳೆ ನಾಶ

    ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೆನ್ನವಡೆಯನಪುರ ಗ್ರಾಮದಲ್ಲಿ ಕಾಡಾನೆಗಳ ದಾಳಿಯಿಂದ 10 ಎಕರೆಗೂ ಹೆಚ್ಚು ಫಸಲು ನಾಶವಾಗಿರುವ ಘಟನೆ ನಡೆದಿದೆ.

    ಕುಮಾರ ಎಂಬವರಿಗೆ ಸೇರಿದ 2 ಎಕರೆ ಟೊಮೆಟೊ ಹಾಗೂ ಬೀನ್ಸ್, ಶಿವಪ್ಪ ಎಂಬವರಿಗೆ ಸೇರಿದ 2 ಎಕರೆ ಬಾಳೆ ಬೆಳೆ ಮತ್ತು ಸುತ್ತಮುತ್ತಲಿನ 10 ಎಕರೆ ಪ್ರದೇಶದ ಬೆಳೆಯನ್ನು ಆನೆಗಳು ತಿಂದು ತುಳಿದು ನಾಶಪಡಿಸಿವೆ.

    ಇಷ್ಟಾದರೂ ಬಂಡೀಪುರದ ಓಂಕಾರ ವಲಯದ ವಲಯಾರಣ್ಯಾಧಿಕಾರಿ ಇತ್ತ ತಲೆ ಹಾಕಿಲ್ಲ ಎಂದು ರೈತರು ಆರೋಪಿಸಿದ್ದಾರೆ.

  • ಮಂಚಹಳ್ಳಿ, ಕೋಟೆಕೆರೆಯಲ್ಲಿ ಆನೆ ದಾಳಿಗೆ ರೈತರ ಟೊಮೆಟೊ, ತೆಂಗು ನಾಶ

    ಮಂಚಹಳ್ಳಿ, ಕೋಟೆಕೆರೆಯಲ್ಲಿ ಆನೆ ದಾಳಿಗೆ ರೈತರ ಟೊಮೆಟೊ, ತೆಂಗು ನಾಶ

    ಚಾಮರಾಜನಗರ: ಆಹಾರ ಅರಸಿ ಬಂದ ಒಂಟಿ ಸಲಗವೊಂದು ಜಮೀನುಗಳಿಗೆ ಲಗ್ಗೆ ಇಟ್ಟು ಟೊಮೆಟೊ, ತೆಂಗನ್ನು ತುಳಿದು ತಿಂದು ನಾಶಪಡಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ, ಕೋಟೆಕೆರೆಯಲ್ಲಿ ನಡೆದಿದೆ.

    ಮಂಚಹಳ್ಳಿ ಗ್ರಾಮದ ಮಹೇಶ್, ಕೋಟೆಕೆರೆಯ ಮಾದೇಗೌಡ ಎಂಬವರಿಗೆ ಸೇರಿದ ಜಮೀನುಗಳಿಗೆ ಆನೆ ಲಗ್ಗೆ ಇಟ್ಟು ಫಸಲು ನಾಶ ಮಾಡಿದೆ. ಇದನ್ನೂ ಓದಿ: ಎರಡು ದಿನದಿಂದ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದ ಸೇತುವೆ

    ಮಹೇಶ್ ಅವರ ನಾಲ್ಕು ಎಕರೆ ಟೊಮೆಟೊ, ಮಾದೇಗೌಡ ಅವರಿಗೆ ಸೇರಿದ 3 ಎಕರೆ ಟೊಮೆಟೊ, ತೆಂಗಿನ ಮರಗಳನ್ನು ತುಳಿದು ನಾಶ ಮಾಡಿದೆ.

    ರೈತರಿಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ಕೊಡಬೇಕು. ದಾಳಿಯಾದ ಬಳಿಕ ಮಹಜರು ನಡೆಸಬೇಕು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡ ಮಹಾದೇವನಾಯಕ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಟೆಡ್ಡಿಬೇರ್ ವೇಷ ಧರಿಸಿ ದರ್ಶನ್ ನೋಡಲು ಬಂದ ಅಭಿಮಾನಿ

  • ಬೆಳೆ ನಾಶ ಮಾಡುತ್ತಿದ್ದಾಗ ಓಡಿಸಲು ಮುಂದಾದ ಯುವಕ ಆನೆ ದಾಳಿಗೆ ಬಲಿ

    ಬೆಳೆ ನಾಶ ಮಾಡುತ್ತಿದ್ದಾಗ ಓಡಿಸಲು ಮುಂದಾದ ಯುವಕ ಆನೆ ದಾಳಿಗೆ ಬಲಿ

    – ರೊಚ್ಚಿಗೆದ್ದ ಗ್ರಾಮಸ್ಥರು ಮಾಡಿದ್ದೇನು..?

    ಭೋಪಾಲ್:‌ ಆನೆ ದಾಳಿಗೆ ಯುವಕನೊಬ್ಬ ಬಲಿಯಾಗಿದ್ದು, ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಈ ಘಟನೆ ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಗುರುವಾರ ಸಂಜೆ ಜೈತಾರಿ ಅರಣ್ಯ ವ್ಯಾಪ್ತಿಯಲ್ಲಿ ಬೆಳೆ ನಾಶ ಮಾಡುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಓಡಿಸಲು ಮುಂದಾದಾಗ ಯುವಕನ ಮೇಲೆ ಆನೆ ದಾಳಿ (Elephant Attack in Madhyapradesh) ಮಾಡಿದೆ. ಪರಿಣಾಮ ಗಂಭೀರ ಗಾಯಗೊಂಡು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ನಡೆಯುತ್ತಿದ್ದಂತೆಯೇ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.

    ಸಿಟ್ಟಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಅಲ್ಲದೇ ಅವರ ವಾಹನಗಳನ್ನು ಜಖಂಗೊಳಿಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಸ್ಥಳಕ್ಕೆ ಪೊಲೀಸ್ ಪಡೆಗಳನ್ನು ರವಾನಿಸಲಾಗಿದೆ. ಇದನ್ನೂ ಓದಿ: ಕೇರಳದಲ್ಲಿ ಆನೆ ತುಳಿತಕ್ಕೆ ವ್ಯಕ್ತಿ ಬಲಿ; ಕರ್ನಾಟಕ ಸರ್ಕಾರದಿಂದ ಪರಿಹಾರ – ಈಶ್ವರ್‌ ಖಂಡ್ರೆ ಹೇಳಿದ್ದೇನು?

    ಸದ್ಯ ಅನುಪ್ಪುರ್ ಆನೆ ದಾಳಿ ಘಟನೆಯಲ್ಲಿ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ಸಿಎಂ ಮೋಹನ್ ಯಾದವ್ ಘೋಷಿಸಿದ್ದಾರೆ. ಇತ್ತೀಚೆಗೆ ಅನುಪ್ಪುರ್ ಜಿಲ್ಲೆಯಲ್ಲಿ ಆನೆಗಳ ದಾಳಿ ಪ್ರಕರಣ ಹೆಚ್ಚುತ್ತಿದೆ. ಕಾಡಾನೆಗಳು ಆಹಾರ ಅರಸಿ ನಾಡಿಗೆ ಬರುತ್ತಿದ್ದು, ಬೆಳೆ ಹಾಗೂ ಮನೆಗಳಿಗೆ ಹಾನಿ ಮಾಡುತ್ತಿವೆ. ಮಧ್ಯಪ್ರದೇಶದ ಶಾಹದೋಲ್ ವಿಭಾಗವು ಆನೆ ಮತ್ತು ಮನುಷ್ಯ ಸಂಘರ್ಷದ ಹೊಸ ಕೇಂದ್ರವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 25 ಮಂದಿ ಆನೆ ದಾಳಿಗೆ ಬಲಿಯಾಗಿದ್ದಾರೆ. 40-50 ಆನೆಗಳ ದೊಡ್ಡ ಹಿಂಡುಗಳು ಹಳ್ಳಿಗಳ ಬಳಿ ತಿರುಗಾಡುವುದನ್ನು ಗ್ರಾಮಸ್ಥರು ಆಗಾಗ್ಗೆ ಗಮನಿಸುತ್ತಾರೆ. ಆದರೆ ಈ ಸಂಬಂಧ ಸರ್ಕಾರ ಹಾಗೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

  • ಅಲ್ಲಿ ಆನೆ ತುಳಿದ್ರೆ 15 ಲಕ್ಷ ಕೊಡ್ತೀರಿ, ಇಲ್ಲಿ 5 ಲಕ್ಷ ನೀಡ್ತೀರಿ: ಹೆಚ್‍ಡಿಕೆ ಕೆಂಡಾಮಂಡಲ

    ಅಲ್ಲಿ ಆನೆ ತುಳಿದ್ರೆ 15 ಲಕ್ಷ ಕೊಡ್ತೀರಿ, ಇಲ್ಲಿ 5 ಲಕ್ಷ ನೀಡ್ತೀರಿ: ಹೆಚ್‍ಡಿಕೆ ಕೆಂಡಾಮಂಡಲ

    ಬೆಂಗಳೂರು: ಕೇರಳದಲ್ಲಿ ಆನೆ ದಾಳಿಗೆ (Elephant Attack in Kerala) ಬಲಿಯಾದ ವ್ಯಕ್ತಿಗೆ ಕರ್ನಾಟಕ ಸರ್ಕಾರದಿಂದ ಪರಿಹಾರ ನೀಡುವ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

    ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಸಿದ್ದರಾಮಯ್ಯ ಅವರ ಸಲಹೆಗಾರರು ಹೇಳಿದಂತೆ ಮಹಾನುಭಾವರು ಕೇರಳದ ಮೃತ ವ್ಯಕ್ತಿಗೆ 15 ಲಕ್ಷ ರೂಪಾಯಿ ಪರಿಹಾರ ಕೊಟ್ಟಿದ್ದಾರೆ. ಅದೇ ಇಲ್ಲಿ ಏನಾದರೂ ಆನೆ ತುಳಿದು ವ್ಯಕ್ತಿ ಮೃತಪಟ್ಟರೆ ಕೇವಲ 5 ಲಕ್ಷ ಕೊಡ್ತೀರಿ. ಅದಕ್ಕೂ ಕಚೇರಿಗೆ ಅಲೆಯಬೇಕು ಎಂದು ಕಿಡಿಕಾರಿದ್ದಾರೆ.

    ವಯನಾಡಿನ ಸಂಸದರು ಹೇಳಿದರು ಅಂತ ಸಿದ್ದರಾಮಯ್ಯನನವರು (Siddaramaiah) ನಮ್ಮ ತೆರಿಗೆ ನಮ್ಮ ಹಕ್ಕಿನ 15 ಲಕ್ಷ ರೂ. ಕೊಟ್ಟಿದ್ದಾರೆ. ನಮ್ಮ ತೆರಿಗೆಯಲ್ಲಿ ತೆಲಂಗಾಣದಲ್ಲಿ ಜಾಹೀರಾತು ಕೊಟ್ಟಿದ್ದರು. ನಮ್ಮ ತೆರಿಗೆ ನಮ್ಮ ಹಕ್ಕು ಅಂತ ದೆಹಲಿಗೆ ಹೋದವರು ಇಲ್ಲಿ ಈ ರೀತಿ ನಮ್ಮ ತೆರಿಗೆ ಹಣ ಖರ್ಚು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೆಚ್‍ಡಿಕೆ ಗರಂ ಆದರು. ಇದನ್ನೂ ಓದಿ: ಕೇರಳದಲ್ಲಿ ಆನೆ ತುಳಿತಕ್ಕೆ ವ್ಯಕ್ತಿ ಬಲಿ; ಕರ್ನಾಟಕ ಸರ್ಕಾರದಿಂದ ಪರಿಹಾರ – ಈಶ್ವರ್‌ ಖಂಡ್ರೆ ಹೇಳಿದ್ದೇನು?

    ನಾನೆಲ್ಲೂ ಸರ್ಕಾರ ಗ್ಯಾರಂಟಿಯಿಂದ ದಿವಾಳಿ ಅಂತ ಹೇಳಿಲ್ಲ. ನಮ್ಮ ರೈತರಿಗೆ 2 ಸಾವಿರ ರೂ. ಕೊಡ್ತಾರೆ, ಅವರಿಗೆ 15 ಲಕ್ಷ ರೂ. ಕೊಡ್ತಾರೆ. ಈ ನಡುವೆ ಕೇಂದ್ರದಿಂದ ಪರಿಹಾರವೇ ಬಂದಿಲ್ಲ ಅಂತ ಹೇಳ್ತಾರೆ. ಕನ್ನಡಿಗರಿಗೆ ಅನ್ಯಾಯ ಆಗಿದೆ ಅಂತಾರೆ. ಸಾವಿರ ಸಾರಿ ಸುಳ್ಳು ಹೇಳಿ ನಿಜ ಮಾಡುವ ರೀತಿ ಮಾಡಲು ಹೊರಟಿದ್ದಾರೆ. ರಾಷ್ಟ್ರದ ಹಲವು ಆರ್ಥಿಕ ತಜ್ಞರ ಜೊತೆ ಬಹಿರಂಗ ಚರ್ಚೆ ಮಾಡೋಣ. ಕೇಂದ್ರದಿಂದ ಅನ್ಯಾಯ ಆಗ್ತಿದೆ ಅಂತಾ ಹೇಳಿದ್ದೀರಿ. ಅನ್ಯಾಯ ಆಗಿದೆ ಅಂತ ಒಬ್ಬರು ಹೇಳಿದ್ರೆ ಅವರು ಹೇಳಿದ ಹಾಗೆ ಕೇಳೋಕೆ ಸಿದ್ಧ ಎಂದು ಸವಾಲೆಸೆದರು.

    ವೀರಾವೇಷದಿಂದ ಒಳಗೆ ಭಾಷಣ ಮಾಡ್ತಿರಬಹುದು, ಕನ್ನಡಿಗರಿಗೆ ಅನ್ಯಾಯ ಆಯ್ತು ಅಂತಾರೆ. ನಿಮ್ಮ ಸದಸ್ಯರು ಯಾಕೆ ಬೆಂಬಲ ಕೊಡಲಿಲ್ಲ. ತಮಟೆ ಹೊಡೆದು ಪ್ರತಿಭಟನೆ ಮಾಡಿದ್ರಲ್ಲವಾ?. ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿದ್ದಾರಲ್ಲ. ಇಲ್ಲಿ ಅನ್ಯಾಯ ಆಗಿದ್ರೆ ಅವರು ಬಾಯಿ ತೆಗೆಯಬೇಕಿತ್ತಲ್ಲವಾ ಎಂದು ಪ್ರಶ್ನಿಸಿದರು.

  • ನಾಗರಹೊಳೆ ಸಫಾರಿ ವಾಹನದ ಮೇಲೆ ಆನೆ ದಾಳಿ

    ನಾಗರಹೊಳೆ ಸಫಾರಿ ವಾಹನದ ಮೇಲೆ ಆನೆ ದಾಳಿ

    ಮೈಸೂರು: ಸಫಾರಿ ವಾಹನಗಳ‌ (Safari Vehicle) ಮೇಲೆ ಆನೆ ದಾಳಿ ನಡೆಸಲು ಮುಂದಾದ ಘಟನೆ ನಾಗರಹೊಳೆ ಅರಣ್ಯದಲ್ಲಿ (Nagarahole Forest ) ನಡೆದಿದೆ.

    ಹುಣಸೂರು ತಾಲೂಕಿನ‌ ನಾಗರಹೊಳೆ ಅರಣ್ಯ ಪ್ರದೇಶದ ಕುಟ್ಟ ರಸ್ತೆಯಲ್ಲಿ ಈ ಘಟನೆ ನಡೆದಿದ್ದುಸಫಾರಿಗೆ ತೆರಳಿದ್ದ ಪ್ರವಾಸಿಗರ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಇದನ್ನೂ ಓದಿ: ಮಳೆಯಿಂದ ಭಾರತ ಮಂಟಪದಲ್ಲಿ ನಿಂತಿದ್ದ ನೀರನ್ನು ಕೂಡಲೇ ತೆರವುಗೊಳಿಸಲಾಗಿತ್ತು: PIB

    ಮೊದಲಿಗೆ ಖಾಸಗಿ ವಾಹನ ನೋಡಿ‌ ಓಡಿ ಬಂದ ಆನೆ ನಂತರ ಸಫಾರಿ ವಾಹನದ ಮೇಲೆ ದಾಳಿಗೆ ಮುಂದಾಗಿದೆ. ಬಳಿಕ ಎದುರಿನಲ್ಲಿ ಮತ್ತೊಂದು ಸಫಾರಿ ವಾಹನದ ಬಳಿಗೂ ಓಡಿ ಬಂದಿದೆ. ವಾಹನವನ್ನು ಹಿಮ್ಮುಖವಾಗಿ ಚಲಿಸಿದ ಬಳಿಕ ಆನೆ ವಾಪಸ್‌ ಹೋಗಿದೆ.

     
    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾರ್ಗ ಮಧ್ಯೆ ಕೈಕೊಟ್ಟ ಅಂಬುಲೆನ್ಸ್ – ಆನೆ ದಾಳಿಯಿಂದ ಗಾಯಗೊಂಡಿದ್ದ ಶಾರ್ಪ್ ಶೂಟರ್ ಅರಣ್ಯ ಸಿಬ್ಬಂದಿ ಸಾವು

    ಮಾರ್ಗ ಮಧ್ಯೆ ಕೈಕೊಟ್ಟ ಅಂಬುಲೆನ್ಸ್ – ಆನೆ ದಾಳಿಯಿಂದ ಗಾಯಗೊಂಡಿದ್ದ ಶಾರ್ಪ್ ಶೂಟರ್ ಅರಣ್ಯ ಸಿಬ್ಬಂದಿ ಸಾವು

    ಹಾಸನ: ಭೀಮ ಆನೆಯಿಂದ ದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಅರಣ್ಯ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

    ಆಲೂರು ತಾಲೂಕಿನ ಹೊನ್ನವಳ್ಳಿ ಗ್ರಾಮದ ವೆಂಕಟೇಶ್ ಮೃತಪಟ್ಟ ಅರಣ್ಯ ಸಿಬ್ಬಂದಿ. ಗಾಯಗೊಂಡ ಕಾಡಾನೆ ಚಿಕಿತ್ಸೆ ವೇಳೆ ಈ ಯಡವಟ್ಟು ಆಗಿದೆ.

    ಹಳ್ಳಿಯೂರು ಬಳಿ ಗಾಯಗೊಂಡು ಭೀಮ ಆನೆ ನಿಂತಿತ್ತು. ಅದಕ್ಕೆ ಚಿಕಿತ್ಸೆ ನೀಡಲು ಅರಣ್ಯ ಸಿಬ್ಬಂದಿ ಮುಂದಾಗಿದ್ದರು. ಅರವಳಿಕೆ ಮದ್ದು ನೀಡಲು ವನ್ಯಜೀವಿ ವೈದ್ಯ ವಸೀಂ ಜೊತೆ ವೆಂಕಟೇಶ್ ತೆರಳಿದ್ದರು. ಈ ವೇಳೆ ಅರಣ್ಯ ಸಿಬ್ಬಂದಿ ವೆಂಕಟೇಶ್ ಮೇಲೆ ಆನೆ ದಾಳಿ ನಡೆಸಿತು.

    ಗಾಯಾಳು ವೆಂಕಟೇಶ್ ಅವರನ್ನು ಹಾಸನದ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಯಿತು. ಆಸ್ಪತ್ರೆಗೆ ಸಾಗಿಸುವಾಗ ಅಂಬುಲೆನ್ಸ್ ಕೈಕೊಟ್ಟಿತು. ನಂತರ ಅರಣ್ಯ ಇಲಾಖೆ ವಾಹನದಲ್ಲಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹಿಮ್ಸ್ ಆಸ್ಪತ್ರೆಯಲ್ಲಿ ವೆಂಕಟೇಶ್ ಮೃತಪಟ್ಟರು.

    ವೆಂಕಟೇಶ್ ಅವರು ಶಾರ್ಪ್ ಶೂಟರ್ ಆಗಿದ್ದರು. ಅರಿವಳಿಕೆ ನೀಡಿ ಹತ್ತಾರು ಆನೆಗಳನ್ನು ಸೆರೆ ಹಿಡಿಯುವಲ್ಲಿ ಇವರು ಎತ್ತಿದ ಕೈ ಆಗಿದ್ದರು. 1987 ರಲ್ಲಿ ಗುತ್ತಿಗೆ ಆಧಾರದ ಮೇಲೆ ಅರಣ್ಯ ಇಲಾಖೆಗೆ ಕೆಲಸಕ್ಕೆ ಸೇರಿದ್ದರು. 2019 ರ ವರೆಗೂ ಖಾಯಂ ಆಗದೆ ಗುತ್ತಿಗೆ ಆಧಾರದ ಮೇಲೆಯೇ ಕೆಲಸ ಮಾಡಿದ್ದರು. 2019 ರಲ್ಲಿ ವೆಂಕಟೇಶ್ ಅವರಿಗೆ ಅರಣ್ಯ ಇಲಾಖೆಯಿಂದ ಮುಕ್ತಿ ನೀಡಲಾಗಿತ್ತು. ಆದರೂ ಕಾಡಾನೆಗಳ ಸೆರೆ ಕಾರ್ಯಾಚರಣೆ ವೇಳೆ ವೆಂಕಟೇಶ್ ಅವರ ಪಾತ್ರ ಮುಖ್ಯವಾಗಿತ್ತು. ಹಾಗಾಗಿ ಪ್ರತಿ ಕಾರ್ಯಾಚರಣೆ ವೇಳೆ ವೆಂಕಟೇಶ್‌ರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಳಸಿಕೊಳ್ಳುತ್ತಿದ್ದರು.

    ಹುಲಿ, ಚಿರತೆ, ಕರಡಿ ಸೆರೆ ಕಾರ್ಯಾಚರಣೆಯಲ್ಲಿ ವೆಂಕಟೇಶ್‌ರದ್ದೆ ಪ್ರಮುಖ ಪಾತ್ರ. ನರಹಂತಕ ಕಾಡಾನೆಗಳನ್ನು ಅರrವಳಿಕೆ ಚುಚ್ಚುಮದ್ದು ನೀಡಿ ಕೆಡವುತ್ತಿದ್ದರು. ಕಾಡಾನೆಗಳ ಸ್ಥಳಾಂತರ, ರೇಡಿಯೋ ಕಾಲರ್ ಅಳವಡಿಕೆಯಲ್ಲಿ ವೆಂಕಟೇಶ್ ಬಹುಮುಖ್ಯ ಪಾತ್ರ ವಹಿಸುತ್ತಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆನೆ ದಾಳಿಗೆ ಇಬ್ಬರು ಸಾವು – ಆತಂಕದಲ್ಲಿ ಗಡಿ ಜಿಲ್ಲೆಯ ಜನ

    ಆನೆ ದಾಳಿಗೆ ಇಬ್ಬರು ಸಾವು – ಆತಂಕದಲ್ಲಿ ಗಡಿ ಜಿಲ್ಲೆಯ ಜನ

    ಕೋಲಾರ: ಆನೆ ದಾಳಿಗೆ (Elephant Attack) ಇಬ್ಬರು ಮೃತಪಟ್ಟಿರುವ ಘಟನೆ ಕೋಲಾರ (Kolar) ಹಾಗೂ ಆಂಧ್ರದ ಗಡಿ ಭಾಗದ ಚಿತ್ತೂರಲ್ಲಿ ಶುಕ್ರವಾರ ನಡೆದಿದೆ.

    ಆಂಧ್ರಪ್ರದೇಶಕ್ಕೆ (Andhra Pradesh) ಸೇರಿರುವ ಚಿತ್ತೂರಿನ ಪತಿಚೇನು ಗ್ರಾಮದ ಓರ್ವ ಮಹಿಳೆ ಹಾಗೂ ಸಪ್ಪನಿಕುಂಟಾ ಗ್ರಾಮದ ವ್ಯಕ್ತಿಯ ಮೇಲೆ ಆನೆ ದಾಳಿ ನಡೆಸಿದೆ. ದಾಳಿಗೆ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ಘಟನೆಯಿಂದ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ನಕ್ಸಲ್‌ ದಂಪತಿ ಮಗಳು 10 ನೇ ತರಗತಿ ಪಾಸ್‌; ಅಪ್ಪ-ಅಮ್ಮನ ಥರ ಆಗಲ್ಲ, ಡಾಕ್ಟರ್‌ ಆಗ್ತೀನಿ ಅಂದ್ಳು ಬಾಲಕಿ

    ಅರಣ್ಯ ಇಲಾಖೆಗೆ (Forest Department) ಆನೆಗಳ ಹಾವಳಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಆನೆಗಳ ಉಪಟಳದಿಂದಾಗಿ ಗಡಿ ಭಾಗದ ಎರಡು ರಾಜ್ಯಗಳ ಜನ ಕಂಗಾಲಾಗಿದ್ದಾರೆ. ಈ ಬಗ್ಗೆ ಇಲಾಖೆ ಸೂಕ್ತ ಕ್ರಮ ಕೈಗೊಂಡು ಆನೆಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಗಡಿ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯ ಕುರ್ಚಿಯಲ್ಲೇ ರಾಜಾರೋಷವಾಗಿ ಕುಳಿತು ಮದ್ಯಪಾನ- ವ್ಯಕ್ತಿ ಅರೆಸ್ಟ್

  • ಆನೆ ದಾಳಿಗೆ ಯುವತಿ ಸಾವು- ತಾಯಿಗೆ ಗಂಭೀರ ಗಾಯ

    ಆನೆ ದಾಳಿಗೆ ಯುವತಿ ಸಾವು- ತಾಯಿಗೆ ಗಂಭೀರ ಗಾಯ

    ದಾವಣಗೆರೆ: ಆನೆ ದಾಳಿಗೆ (Elephant Attack) ಯುವತಿಯೋರ್ವಳು ಮೃತಪಟ್ಟ ದುರ್ಘಟನೆ ಚನ್ನಗಿರಿಯ (Channagiri) ಸೋಮ್ಲಾಪುರ (Somlapura) ಗ್ರಾಮದಲ್ಲಿ ಶನಿವಾರ ನಡೆದಿದೆ. ಘಟನೆಯಲ್ಲಿ ಯುವತಿಯ ತಾಯಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ.

    ಗ್ರಾಮದ ಕವನ (17) ಮೃತ ಯುವತಿ ಎಂದು ತಿಳಿದುಬಂದಿದೆ. ಮುಂಜಾನೆ ತಾಯಿ ಮಂಜುಳಾ (42) ಅವರ ಜೊತೆಯಲ್ಲಿ ಯುವತಿ ಜಮೀನಿಗೆ ತೆರಳಿದ್ದಳು. ಜಮೀನಿನಲ್ಲಿ ಅವರೆಕಾಯಿ ಬಿಡಿಸುವ ವೇಳೆ ತಾಯಿ ಹಾಗೂ ಮಗಳ ಮೇಲೆ ಆನೆ ದಾಳಿ ನಡೆಸಿದೆ. ಇದನ್ನೂ ಓದಿ: ಮನೆಮುಂದೆ ನಿಲ್ಲಿಸಿದ್ದ ಕಾರನ್ನು ಹೆದ್ದಾರಿಗೆ ತಳ್ಳಿಕೊಂಡು ಬಂದ ಕಾಡಾನೆ

    ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕವನಾಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆದಿದೆ. ಆದರೆ ಯುವತಿ ದಾರಿ ಮಧ್ಯದಲ್ಲೇ ಸಾವನ್ನಪ್ಪಿದ್ದಾಳೆ. ಗಾಯಗೊಂಡಿರುವ ಮಂಜುಳಾ ಅವರಿಗೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶವಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ. ಇದನ್ನೂ ಓದಿ: ತೈವಾನ್ ಸುತ್ತ ಮತ್ತೆ ಮಿಲಿಟರಿ ತಾಲೀಮು ಪ್ರಾರಂಭಿಸಿದ ಚೀನಾ

  • ಕಡಬದಲ್ಲಿ ಕಾಡಾನೆ ದಾಳಿ – ಯುವತಿ ಸಹಿತ ಇಬ್ಬರ ಸಾವು

    ಕಡಬದಲ್ಲಿ ಕಾಡಾನೆ ದಾಳಿ – ಯುವತಿ ಸಹಿತ ಇಬ್ಬರ ಸಾವು

    ಮಂಗಳೂರು: ಕಾಡಾನೆ ದಾಳಿಗೆ (Elephant Attack) ಯುವತಿ (Young Woman) ಸಹಿತ ಇಬ್ಬರು ಸಾವನ್ನಪ್ಪಿದ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬ (Kadaba)ತಾಲೂಕಿನ ಮೀನಾಡಿ ಎಂಬಲ್ಲಿ ಈ ಘಟನೆ ನಡೆದಿದೆ. ಆನೆ ದಾಳಿಗೆ ರಂಜಿತಾ (21) ಹಾಗೂ ರಮೇಶ್ ರೈ (55) ಎಂಬುವವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮಡಿಕೇರಿ ಫರ್ನಿಚರ್ ಅಂಗಡಿಯಲ್ಲಿ ಅವಘಡ – 7 ಗಂಟೆ ಕಾರ್ಯಾಚರಣೆ ನಡೆಸಿದ್ರೂ ನಿಯಂತ್ರಣಕ್ಕೆ ಬಾರದ ಅಗ್ನಿ

    ರಂಜಿತಾ ಸ್ಥಳೀಯ ಪೇರಡ್ಕ ಹಾಲಿನ ಸೊಸೈಟಿಯಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಎಂದಿನಂತೆಯೇ ಮನೆಯಿಂದ ಸೊಸೈಟಿಗೆ ಹೋಗುತ್ತಿದ್ದ ವೇಳೆ ಕಾಡನೆಯೊಂದು ಏಕಾಏಕಿ ಈಕೆಯ ಮೇಲೆ ದಾಳಿ ನಡೆಸಿದೆ. ಇದೇ ವೇಳೆ ಸ್ಥಳದಲ್ಲಿದ್ದ ರಮೇಶ್ ರೈ ಎಂಬುವವರ ಮೇಲೆಯೂ ಆನೆ ದಾಳಿ ನಡೆಸಿದ್ದು, ರಮೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರಂಜಿತಾ ಅವರನ್ನು ನೆಲ್ಯಾಡಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರೋಹಿಣಿ ಬಗ್ಗೆ ಮಾತನಾಡೋದಕ್ಕೆ ರೂಪಾ ಯಾರು?: ಸುಧೀರ್ ರೆಡ್ಡಿ ಆಕ್ರೋಶ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k