Tag: ಆನೆ ದಂತ

  • ಬೆಡ್‌ಶೀಟ್‌ನಲ್ಲಿ ಆನೆ ದಂತ ಸಾಗಾಟ, ಮೂವರು ಅರೆಸ್ಟ್‌, ಓರ್ವ ಪರಾರಿ

    ಬೆಡ್‌ಶೀಟ್‌ನಲ್ಲಿ ಆನೆ ದಂತ ಸಾಗಾಟ, ಮೂವರು ಅರೆಸ್ಟ್‌, ಓರ್ವ ಪರಾರಿ

    ಚಾಮರಾಜನಗರ: ಕಾರಿನಲ್ಲಿ ಆನೆ ದಂತ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಂಚಾರಿ ಅರಣ್ಯ ದಳದ ಪೊಲೀಸರು ಬಂಧಿಸಿದ್ದಾರೆ.

    ಚಿಕ್ಕಮಗಳೂರು ಮೂಲದ ಪ್ರೀತಮ್(31), ಜಗದೀಶ್(21), ಪುನೀತ್(28) ಬಂಧನಕ್ಕೆ ಒಳಗಾದರೆ ಹೇಮಂತ್ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಮೇಕೆದಾಟು ಯೋಜನೆ ವಿರೋಧಿಸಿ ಪ್ರಧಾನಿಗೆ ಸ್ಟಾಲಿನ್ ಪತ್ರ

    ಬೆಡ್ ಶಿಟ್‌ನಲ್ಲಿ ಆನೆ ದಂತ ಸುತ್ತಿಕೊಂಡು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಕಾರನ್ನು ಅಡ್ಡ ಹಾಕಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಬಂಧಿತರಿಂದ ಆನೆ ದಂತ, ಕಾರು, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಆನೆ ದಂತ ಮಾರಾಟಕ್ಕೆ ಯತ್ನ – ಕೈ ಶಾಸಕನ ಆಪ್ತ ಅರೆಸ್ಟ್

    ಆನೆ ದಂತ ಮಾರಾಟಕ್ಕೆ ಯತ್ನ – ಕೈ ಶಾಸಕನ ಆಪ್ತ ಅರೆಸ್ಟ್

    ಚಿಕ್ಕಮಗಳೂರು: ಆನೆ ದಂತಗಳನ್ನು ಮಾರಾಟ ಮಾಡಲು ಕಾರಿನಲ್ಲಿ ಸಾಗಿಸುವ ವೇಳೆ ಪೊಲೀಸರು ಮಾಲಿನ ಸಮೇತ ನಾಲ್ವರನ್ನು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.

    ಜಿಲ್ಲೆಯ ಶೃಂಗೇರಿ ತಾಲೂಕಿನ ಶಬರೀಶ್, ವಿಜಯ್, ಯೋಗೀಶ್, ಮಧೂಸೂದನ್ ಬಂಧಿತ ಆರೋಪಿಗಳು. ಇವರು ಆನೆ ದಂತ ಹಾಗೂ ಐದು ಲಕ್ಷ ನಗದಿನೊಂದಿಗೆ ಸೆಲೆರಿಯೋ ಕಾರಿನಲ್ಲಿ ಚಿಕ್ಕಮಗಳೂರಿಗೆ ಆಗಮಿಸುವಾಗ ಗ್ರಾಮಾಂತರ ಪೊಲೀಸರು ಮೂಗ್ತಿಹಳ್ಳಿಯಲ್ಲಿ ಬಂಧಿಸಿದ್ದಾರೆ.

    ಆರೋಪಿ ಶಬರೀಶ್ ಶೃಂಗೇರಿ ವಿಧಾನಸಭಾ ಕ್ಷೇತ್ರದ ಐಟಿ ಸೆಲ್ ಮುಖ್ಯಸ್ಥ ಹಾಗೂ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡರ ಆಪ್ತನಾಗಿದ್ದಾನೆ. ಕಾರಿನಲ್ಲಿ ಐದು ಲಕ್ಷ ನಗದು ಸಿಕ್ಕಿದ್ದು, ಶೃಂಗೇರಿಯ ಗಾಂಧಿ ಮೈದಾನದಲ್ಲಿ ಪ್ರವಾಸಿ ವಾಹನಗಳ ಪಾರ್ಕಿಂಗ್‍ಗೆ ಪಟ್ಟಣ ಪಂಚಾಯಿತಿ ಹರಾಜು ನಡೆಸಿತ್ತು. ಆ ಹರಾಜಿನಲ್ಲಿ ಶಬರೀಶ್ ಕೂಡ ಪಾಲ್ಗೊಂಡಿದ್ದ. ನಿನ್ನೆ ನಡೆದ ಹರಾಜಿನಲ್ಲಿ ವಾಹನ ಪಾರ್ಕಿಂಗ್ ಗುತ್ತಿಗೆ ಬೇರೆಯವರಿಗೆ ಆಗಿದ್ದು, ಆ ಐದು ಲಕ್ಷ ಹಣ ಹಾಗೂ ಎರಡು ಆನೆ ದಂತದೊಂದಿಗೆ ಶಬರೀಶ್ ಚಿಕ್ಕಮಗಳೂರಿಗೆ ಆಗಮಿಸುವಾಗ ಪೊಲೀಸರ ಬಲೆಗೆ ಬಿದಿದ್ದಾನೆ ಎನ್ನಲಾಗಿದೆ.

    ಚಿಕ್ಕಮಗಳೂರಿನಲ್ಲಿ ಜಿಲ್ಲಾ ಉತ್ಸವ ನಡೆಯುತ್ತಿದೆ. ಪೊಲೀಸರು ಬಂದೋಬಸ್ತ್ ನಲ್ಲಿ ಬ್ಯುಸಿ ಇರುತ್ತಾರೆ. ಸುಲಭವಾಗಿ ಸಾಗಿಸಬಹುದು ಅಥವಾ ಮಾರಾಟ ಮಾಡಬಹುದು ಎಂದು ಬಂದ ನಾಲ್ವರು ಮಾಲಿನ ಸಮೇತ ಪೊಲೀಸರು ಅತಿಥಿಯಾಗಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆನೆ ದಂತದ ಆಸೆಗೆ ಬಿದ್ದು ಮೂವರು ಜೈಲು ಪಾಲು

    ಆನೆ ದಂತದ ಆಸೆಗೆ ಬಿದ್ದು ಮೂವರು ಜೈಲು ಪಾಲು

    ಹಾಸನ: ಆನೆ ದಂತವನ್ನು ಕದ್ದು ಸಾಗಿಸಲು ಹೋಗಿ ಮೂವರು ಆರೋಪಿಗಳು ಜೈಲು ಸೇರಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕಾಡುಮನೆ ಎಸ್ಟೇಟ್‍ನಲ್ಲಿ ನಡೆದಿದೆ.

    ಅಸ್ಸಾಂ ಮೂಲದ ಗುರುಪ್ರಸಾದ್, ಸಿಲಾಸ್ ಬರ್ಲ್ ಮತ್ತು ಉಣಿಲ್ ಆನೆಯನ್ನು ಕೊಂದ ಆರೋಪಿಗಳು. ಆನೆ ದಂತ ಕದ್ದ ಆರೋಪದಲ್ಲಿ ಸಕಲೇಶಪುರ ಆರ್‍ಎಫ್‍ಓ ರವೀಂದ್ರ ನೇತೃತ್ವದ ತಂಡ ಮೂವರನ್ನು ಬಂಧಿಸಿದೆ.

    ಆಕಸ್ಮಿಕವಾಗಿ ಸತ್ತ ಆನೆಯಿಂದ ಮೂವರು ಆರೋಪಿಗಳು ದಂತ ಕಿತ್ತಿದ್ದರು. ಅಲ್ಲದೆ ಆನೆಯ ದಂತವನ್ನು ಅಸ್ಸಾಂಗೆ ಕೊಂಡೊಯ್ಯಲು ಸಿದ್ಧತೆ ನಡೆಸಿದ್ದರು. ಮೂವರು ಆರೋಪಿಗಳು ಕಾಡುಮನೆ ಎಸ್ಟೇಟ್‍ನಲ್ಲಿ ಕೆಲಸ ಮಾಡುತ್ತಿದ್ದು, ಆನೆ ದಂತ ಕಿತ್ತ ನಂತರ ಆನೆಯನ್ನು ಭೂಮಿಯಲ್ಲಿ ಹೂಳಲು ಯತ್ನಿಸಿದ್ದರು.

    ಮೂವರು ಆರೋಪಿಗಳ ನಡೆಯಲ್ಲಿ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ದಂತದ ಸಮೇತ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

  • 30 ಲಕ್ಷ ರೂ. ಮೌಲ್ಯದ ಆನೆ ದಂತ ಸಾಗಿಸುತ್ತಿದ್ದ ಇಬ್ಬರ ಬಂಧನ

    30 ಲಕ್ಷ ರೂ. ಮೌಲ್ಯದ ಆನೆ ದಂತ ಸಾಗಿಸುತ್ತಿದ್ದ ಇಬ್ಬರ ಬಂಧನ

    – ಎರಡು ಆನೆ ದಂತ ವಶಕ್ಕೆ ಪಡೆದ ಅಧಿಕಾರಿಗಳು

    ಮಂಗಳೂರು: ಆನೆ ದಂತ ಕಳವು ಮಾಡಿ ಮಾರುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಪುತ್ತೂರು ಅರಣ್ಯ ಸಂಚಾರ ದಳವು ಇಬ್ಬರನ್ನು ಬಂಧಿಸಿದೆ.

    ಮಡಿಕೇರಿ ನಿವಾಸಿ ದಿನೇಶ್ ಹಾಗೂ ಸಕಲೇಶಪುರದ ನಿವಾಸಿ ಕುಮಾರ್ ಬಂಧಿತ ಆರೋಪಿಗಳು. ಪುತ್ತೂರು ಅರಣ್ಯ ಸಂಚಾರ ದಳದ ಅಧಿಕಾರಿಗಳು ಇಂದು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಬಂಧಿತರಿಂದ ಸುಮಾರು 30 ಲಕ್ಷ ರೂ. ಮೌಲ್ಯದ ಎರಡು ಆನೆಯ ದಂತಗಳನ್ನು ವಶಕ್ಕೆ ಪಡೆಯಲಾಗಿದೆ.

    ಆರೋಪಿಗಳು ಓಮ್ನಿ ಕಾರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಪುದುಬೆಟ್ಟು ಪ್ರದೇಶದಲ್ಲಿ ಸಕಲೇಶಪುರದಿಂದ ಧರ್ಮಸ್ಥಳ ಮಾರ್ಗವಾಗಿ ಸಾಗುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು, ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಕಾರಿನಲ್ಲಿ 30 ಲಕ್ಷ ರೂ. ಬೆಲೆಬಾಳುವ ಎರಡು ಆನೆ ದಂತ ಪತ್ತೆಯಾಗಿವೆ.

    ಬಂಧಿತ ದಿನೇಶ್ ಹಾಗೂ ಕುಮಾರ್ ಆನೆ ದಂತ ಹಾಗೂ ಅವುಗಳನ್ನು ಸಾಗಿಸಲು ಬಳಸಿದ ಮಾರುತಿ ಓಮ್ನಿ ಕಾರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು, ಆನೆಗಳನ್ನು ಕೊಂದು ಅದರ ದಂತವನ್ನು ಕದ್ದು ಮಾರುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದಾರೆ. ಈ ಹಿಂದೆಯೂ ಇದೇ ರೀತಿ ಆನೆ ದಂತಗಳನ್ನು ಮಾರಾಟ ಮಾಡಿರುವ ಶಂಕೆಯಿಂದ ಅಧಿಕಾರಿಗಳು ಮತ್ತಷ್ಟು ವಿಚಾರಣೆ ನಡೆಸಿದ್ದಾರೆ.

  • ಗ್ರಾಹಕರಂತೆ ವೇಷಹಾಕಿ ವನ್ಯಜೀವಿಗಳ ಬೇಟೆಗಾರರ ಬಂಧನ: 16.5 ಕೆ.ಜಿ. ಜಿಂಕೆಗಳ ಕೊಂಬು ವಶ

    ಗ್ರಾಹಕರಂತೆ ವೇಷಹಾಕಿ ವನ್ಯಜೀವಿಗಳ ಬೇಟೆಗಾರರ ಬಂಧನ: 16.5 ಕೆ.ಜಿ. ಜಿಂಕೆಗಳ ಕೊಂಬು ವಶ

    ಚಿಕ್ಕಮಗಳೂರು: ಸಿನಿಮೀಯ ರೀತಿಯಲ್ಲಿ ಗ್ರಾಹಕರಂತೆ ಹೋಗಿ, ಕಾಡು ಪ್ರಾಣಿಗಳನ್ನು ಬೇಟಿ ಆಡುತ್ತಿದ್ದ ಆರು ಜನರ ತಂಡವನ್ನು ತರೀಕೆರೆ ತಾಲೂಕಿನ ಲಕ್ಕವಳ್ಳಿ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

    ಭಾನುವಾರ ಮಾಹಿತಿ ದೊರೆತಿದ್ದು, ಶಿವಮೊಗ್ಗದ ಸತೀಶ್, ಗಾಜನೂರಿನ, ತರೀಕೆರೆ ತಾಲೂಕಿನ ಉಪ್ಪಾರ ಬಸವಣ ಹಳ್ಳಿಯ ಸಹೋದರರಾದ ರವಿ ಹಾಗೂ ಲಕ್ಷ್ಮಣ ಬಂಧಿತ ಆರೋಪಿಗಳಾಗಿದ್ದು, ಉಳಿದ ಇಬ್ಬರ ಬಗ್ಗೆ ಇನ್ನು ಮಾಹಿತಿ ದೊರೆತಿಲ್ಲ ಎಂದು ವಲಯ ಅರಣ್ಯಾಧಿಕಾರಿ ಕಾಂತರಾಜು ತಿಳಿಸಿದ್ದಾರೆ.

    ಸುಮಾರು ದಿನಗಳಿಂದ ಆರೋಪಿಗಳು ಜಾಲದ ಬಗ್ಗೆ ಮಾಹಿತಿ ದೊರೆತಿತ್ತು. ಆದರೆ ಬಂಧಿಸಲು ಸಾಧ್ಯವಾಗಿರಲಿಲ್ಲ. ಭಾನುವಾರ ಖಚಿತ ಮಾಹಿತಿ ದೊರೆಯಿತು. ಹೀಗಾಗಿ ಗ್ರಾಹಕರಂತೆ ಮಾರುವೇಷ ಹಾಕಿಕೊಂಡು ಅರಣ್ಯ ಇಲಾಖೆ ಪೊಲೀಸ್ ಸಿಬ್ಬಂದಿ ತಂಡ ದಾಳಿ ಮಾಡಿದ ಪರಿಣಾಮ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದರು.

    ಬಂಧಿತ ಆರೋಪಿಗಳಿಂದ 4 ಕೆ.ಜಿ. ಆನೆದಂತ, 11 ಕೆ.ಜಿ. ಚಿಪ್ಪು ಹಂದಿಯ ಚಿಪ್ಪು, 16.5 ಕೆ.ಜಿ. ಜಿಂಕೆಗಳ ಕೊಂಬು ಹಾಗೂ 4.5 ಕೆ.ಜಿ. ಕಾಡು ಕೋಣಗಳ ಕೊಂಬುಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಹಿಂದೆ ದೊಡ್ಡ ಜಾಲವಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

    ಬಂಧಿತರು ಕಾಡು ಪ್ರಾಣಿಗಳ ದೇಹದ ಬೆಲೆಬಾಳುವ ವಸ್ತುಗಳನ್ನು ವಿದೇಶಕ್ಕೆ ಮಾರಾಟ ಮಾಡುತ್ತಿದ್ದರು. ಹೀಗಾಗಿ ಭದ್ರಾ ಹುಲಿ ಅಭಯಾರಣ್ಯ ಸೇರಿದಂತೆ ಮಲೆನಾಡು ಭಾಗದ ಕಾಡುಗಳಲ್ಲಿ ವನ್ಯಜೀವಿಗಳನ್ನ ಭೇಟಿಯಾಡುತ್ತಿದ್ದರು. ಅಲ್ಲದೇ ಅವರ ಬಳಿ ಇನ್ನು ಹೆಚ್ಚಿನ ಪ್ರಾಣಿಗಳ ಚರ್ಮ, ಕೊಂಬು, ಮೂಳೆ, ದಂತಗಳಿವೆ ಎನ್ನುವ ಸಂದೇಹ ವ್ಯಕ್ತವಾಗಿದ್ದು, ತನಿಖೆ ಪ್ರಾರಂಭಿಸಿದ್ದಾರೆ.

    ಆನೆ ದಂತಗಳನ್ನು ಏನು ಮಾಡುತ್ತಾರೆ?
    ಆನೆ ದಂತಗಳನ್ನು ಹಣ ಪಡೆದು ಮಾರಾಟ ಮಾಡುವುದುನ್ನು ಕಾನೂನಿನಲ್ಲಿ ನಿಷೇಧಿಸಲಾಗಿದೆ. ಹೀಗಾಗಿ ಅರಣ್ಯ ಇಲಾಖೆ ದಾಳಿ ವೇಳೆ ಸಿಕ್ಕಿದ ಆನೆ ದಂತಗಳನ್ನು ರಕ್ಷಣಾ ಇಲಾಖೆಗೆ ನೀಡುತ್ತದೆ. ಕೆಲವು ದಂತಗಳನ್ನು ಸಂಶೋಧನೆ ಮಾಡಲು ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತದೆ. ಯಾರಿಗೂ ಮಾರಾಟ ಮಾಡಲು ಅನುಮತಿ ಇಲ್ಲದ ಕಾರಣ ದಂತಗಳನ್ನು ಸುಡಲಾಗುತ್ತದೆ.