Tag: ಆನೆಕಲ್

  • ಪೊಲೀಸರ ಮೇಲೆ ದಾಳಿ – ಆರೋಪಿ ಕಾಲಿಗೆ ಗುಂಡೇಟು

    ಪೊಲೀಸರ ಮೇಲೆ ದಾಳಿ – ಆರೋಪಿ ಕಾಲಿಗೆ ಗುಂಡೇಟು

    ಆನೇಕಲ್: ಆರೋಪಿಯ ಕಾಲಿಗೆ ಪೊಲೀಸರು (Police) ಗುಂಡೇಟು ನೀಡಿ ಬಂಧಿಸಿದ ಘಟನೆ ಮಾಯಸಂದ್ರದ ಬಳಿ ನಡೆದಿದೆ.

    ಬೆಸ್ತಮಾನಹಳ್ಳಿ ಲೋಕೇಶ್ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ. ಈತ ರೌಡಿಶೀಟರ್ ಮನೋಜ್ ಎಂಬಾತನ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ. ಆರೋಪಿ ಊರಿಗೆ ಬರುತ್ತಿರುವ ಮಾಹಿತಿ ಮೇರೆಗೆ ಬಂಧಿಸಲು ಜಿಗಣಿ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಪೊಲೀಸರ ತಂಡ ತೆರಳಿತ್ತು.

    ಲೊಕೇಶ್ ಮಾಯಸಂದ್ರದ ಬಳಿ ನಿರ್ಮಾಣ ಆಗುತ್ತಿರುವ ರಸ್ತೆಯಲ್ಲಿ ಬರುತ್ತಿದ್ದ. ಈ ವೇಳೆ ಆತನಿಗೆ ಪೊಲೀಸರು ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆರೋಪಿ ಪೊಲೀಸರ ಮಾತನ್ನು ಲೆಕ್ಕಿಸದೆ ಪೊಲೀಸ್ ಸಿಬ್ಬಂದಿ ಚೆನ್ನಬಸವ ಎಂಬವರ ಮೇಲೆ ದಾಳಿ ಮಾಡಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್ ಮಂಜುನಾಥ್ ಲೋಕೇಶ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

    ಆರೊಪಿಯನ್ನು ಹಾಗೂ ಹಲ್ಲೆಗೊಳಗಾದ ಪೊಲೀಸ್‌ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಆನೇಕಲ್‌ನಲ್ಲಿ ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

    ಆನೇಕಲ್‌ನಲ್ಲಿ ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

    ಬೆಂಗಳೂರು: ವಿಷ ಸೇವಿಸಿ ಗಂಡ-ಹೆಂಡತಿ (Husband-Wife) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಬನ್ನೇರುಘಟ್ಟ ಜನತಾ ಕಾಲೋನಿಯಲ್ಲಿ ನಡೆದಿದೆ.

    ಪ್ರಭು (38), ಲಕ್ಕಮ್ಮ (30) ಮೃತ ದುರ್ದೈವಿಗಳು. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಘಟನೆ ನಡೆದಿದೆ. ಗಂಡ ಪ್ರಭು ಡ್ರೈವರ್ ಕೆಲಸ ಮಾಡುತ್ತಿದ್ದು, ಲಕ್ಕಮ್ಮ ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದರು. ಗಂಡ-ಹೆಂಡತಿ ವಾಸವಿದ್ದ ಮನೆಯಲ್ಲಿ ಕೆಟ್ಟ ವಾಸನೆ ಬರುತ್ತಿದ್ದರಿಂದ ಸ್ಥಳೀಯರು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಜೂನ್‌ 8 ರಂದು ಸಂಜೆ ನರೇಂದ್ರ ಮೋದಿ ಪ್ರಮಾಣವಚನ

    ದಂಪತಿ ಮೃತಪಟ್ಟು ಮೂರರಿಂದ ನಾಲ್ಕು ದಿನ ಕಳೆದಿರಬಹುದು ಎಂದು ಊಹಿಸಲಾಗಿದೆ. ವಿಶ್ವನಾಥ್ ಎಂಬವರ ಮನೆಯಲ್ಲಿ ದಂಪತಿ ಬಾಡಿಗೆಗಿದ್ದರು. ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: 24 ವರ್ಷಗಳ ನಂತ್ರ ಅಧಿಕಾರ ಕಳೆದುಕೊಂಡ ಬಿಜೆಡಿ- ನವೀನ್ ಪಟ್ನಾಯಕ್ ರಾಜೀನಾಮೆ

  • ಕೆರೆಯ ಮಣ್ಣು ಅಕ್ರಮ ಸಾಗಾಟ – ಗ್ರಾಮಸ್ಥರಿಂದ 50ಕ್ಕೂ ಹೆಚ್ಚು ಲಾರಿಗಳನ್ನು ತಡೆದು ಆಕ್ರೋಶ

    ಕೆರೆಯ ಮಣ್ಣು ಅಕ್ರಮ ಸಾಗಾಟ – ಗ್ರಾಮಸ್ಥರಿಂದ 50ಕ್ಕೂ ಹೆಚ್ಚು ಲಾರಿಗಳನ್ನು ತಡೆದು ಆಕ್ರೋಶ

    ಬೆಂಗಳೂರು: ಕೆರೆಯಿಂದ ಪ್ರತಿನಿತ್ಯ ಮಣ್ಣು ಸಾಗಿಸುತ್ತಿರುವುದರಿಂದ ಅತ್ತಿಬೆಲೆ – ಅನೆಕಲ್ (Anekal) ಮುಖ್ಯ ರಸ್ತೆ ಹಾಳಾಗುತ್ತಿದೆ ಎಂದು ಕರ್ಪೂರು ಗ್ರಾಮದ ಜನರು ಮಣ್ಣು ಸಾಗಿಸುತ್ತಿದ್ದ 50ಕ್ಕೂ ಹೆಚ್ಚು ಲಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕರ್ಪೂರು ಗ್ರಾಮದ ಕೆರೆಯಿಂದ (Lake) ರಸ್ತೆ ಅಭಿವೃದ್ಧಿಗೆ ಎಸ್‍ಎಸ್‍ಸಿ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಗುತ್ತಿಗೆದಾರ ಮಣ್ಣು ಸಾಗಿಸುತ್ತಿದ್ದು, ಲಾರಿ ಚಾಲಕರು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುತ್ತಿದ್ದಾರೆ. ಇದರಿಂದ ಗ್ರಾಮದ ರಸ್ತೆ ಹಾಳಾಗುತ್ತಿದೆ. ಅಲ್ಲದೇ ಅನುಮತಿಗಿಂತ ಹೆಚ್ಚಿನ ಮಣ್ಣು ತೆಗೆಯುತ್ತಿರುವುದರಿಂದ ಕೆರೆ ಸೇರಿದಂತೆ ಗ್ರಾಮದ ಪರಿಸರ ಹಾಳಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಶಿವರಾಜ್‌ಸಿಂಗ್‌ ರಾಜ್ಯ ರಾಜಕೀಯ ಅಂತ್ಯ – ಲೋಕಸಭೆಗೆ ಸ್ಪರ್ಧೆ?

    ಸಾವಿರಾರು ಲೋಡ್‍ಗಳಷ್ಟು ಮಣ್ಣನ್ನು ಸಾಗಿಸಲಾಗಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ಲಾರಿಗಳನ್ನು ತಡೆದು ಗ್ರಾಮದ ಕೆರೆಯ ಬಳಿಯೇ ನಿಲ್ಲಿಸಿದ್ದಾರೆ. ಇದನ್ನೂ ಓದಿ: SSLC, PUCಗೆ 3 ಪಬ್ಲಿಕ್ ಪರೀಕ್ಷೆ ಇರುತ್ತೆ – ಸಚಿವ ಮಧು ಬಂಗಾರಪ್ಪ

  • ಬೆಂಗ್ಳೂರಿನಲ್ಲಿ ಪಟಾಕಿ ಅಂಗಡಿಗೆ ಬೆಂಕಿ – 13 ಕಾರ್ಮಿಕರು ಸಜೀವ ದಹನ

    ಬೆಂಗ್ಳೂರಿನಲ್ಲಿ ಪಟಾಕಿ ಅಂಗಡಿಗೆ ಬೆಂಕಿ – 13 ಕಾರ್ಮಿಕರು ಸಜೀವ ದಹನ

    ಆನೇಕಲ್: ಇಲ್ಲಿನ ಅತ್ತಿಬೆಲೆಯಲ್ಲಿ ಪಟಾಕಿ ಅಂಗಡಿಗೆ (Firework Shop) ಬೆಂಕಿ ಬಿದ್ದಿದ್ದು, 13 ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.

    ದುರಂತಕ್ಕೀಡಾದ ಪಟಾಕಿ ಅಂಗಡಿಯಲ್ಲಿ 20 ಮಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕಾರ್ಮಿಕರು ಸಂಬಂಧಿಕರ ಗೋಳಾಟ ಹೇಳತೀರದಾಗಿದೆ. ಇದನ್ನೂ ಓದಿ: ಇಸ್ರೇಲ್, ಪ್ಯಾಲೆಸ್ಟೈನ್‌ ಮಧ್ಯೆ ಕಾದಾಟ ಯಾಕೆ? 6 ದಿನ ನಡೆದ ಯುದ್ಧದಲ್ಲಿ ಏನಾಯ್ತು? – ಇಲ್ಲಿದೆ ಪೂರ್ಣ ಮಾಹಿತಿ

    ಕ್ಯಾಂಟರ್‌ನಿಂದ ಪಟಾಕಿ ಅನ್‌ಲೋಡ್ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ದೀಪಾವಳಿಗಾಗಿ ಕೋಟ್ಯಂತರ ರೂಪಾಯಿ ವ್ಯವಹಾರ ಮಾಡುವ ಬಾಲಾಜಿ ದೊಡ್ಡ ಪಟಾಕಿ ಗೋಡೌನ್‌ನಿಂದ ಶುರುವಾದ ಬೆಂಕಿ, ಅಕ್ಕಪಕ್ಕದ ನಾಲ್ಕೈದು ಅಂಗಡಿಗಳಿಗೂ ವ್ಯಾಪಿಸಿದೆ. ನೋಡ ನೋಡುತ್ತಿದ್ದಂತೆ ಕ್ಯಾಂಟರ್, 2 ಬೊಲೆರೋ, 4 ಬೈಕ್ ಸುಟ್ಟು ಭಸ್ಮವಾಗಿವೆ.

    ಮಾಲೀಕ ನವೀನ್ ಅನ್ನುವವರಿಗೆ ಸುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ (Bengaluru Rural) ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಿಖರ ಕಾರಣ ತಿಳಿದು ಬಂದಿಲ್ಲ. ಪರಿಶೀಲನೆಗಾಗಿ ಎಫ್‌ಎಸ್‌ಎಲ್ ಟೀಂ ಸ್ಥಳಕ್ಕೆ ಭೇಟಿ ನೀಡಲಿದೆ. ಇನ್ನೂ ಮಳಿಗೆ ಲೈಸೆನ್ಸ್ ಬಗ್ಗೆಯೂ ಪರಿಶೀಲನೆ ಮಾಡುವುದಾಗಿ ಎಸ್ಪಿ ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಹತ್ಯೆ, ಮೋದಿ ಸ್ಟೇಡಿಯಂ ಸ್ಫೋಟ ಬೆದರಿಕೆ – ಮುಂಬೈ ಪೊಲೀಸರಿಗೆ ಸಂದೇಶ

    ಪ್ರತ್ಯಕ್ಷದರ್ಶಿ ಹೇಳುವಂತೆ ಪೇಪರ್‌ಗೆ ತೋಟದವರು ಬೆಂಕಿಯಿಟ್ಟಿದ್ದು, ಹಿಂದಿನಿಂದ ಬೆಂಕಿ ವ್ಯಾಪಿಸಿದೆ. ಇದೇ ಪಟಾಕಿ ಅಂಗಡಿ ದುರಂತಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಶನಿವಾರ ಮಧ್ಯಾಹ್ನ 3 ಗಂಟೆಗೆ ಸುಮಾರಿಗೆ ದುರಂತ ಸಂಭವಿಸಿದೆ. ಈ ಘಟನೆಯಿಂದಾಗಿ ಅತ್ತಿಬೆಲೆಯಿಂದ ಚಂದಾಪುರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅರೆನಗ್ನವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಆರ್‌ಟಿಐ ಕಾರ್ಯಕರ್ತನ ಶವ ಪತ್ತೆ

    ಅರೆನಗ್ನವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಆರ್‌ಟಿಐ ಕಾರ್ಯಕರ್ತನ ಶವ ಪತ್ತೆ

    ಬೆಂಗಳೂರು: ಅರೆನಗ್ನವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಆರ್‌ಟಿಐ ಕಾರ್ಯಕರ್ತನೊಬ್ಬನ (RTI Activist) ಶವ ಆನೆಕಲ್‍ನ (Anekal) ಜಿಗಣಿ ಸಮೀಪದ ಮಾದಪಟ್ಟಣದಲ್ಲಿ ಪತ್ತೆಯಾಗಿದೆ. ಆರ್‌ಟಿಐ ಕಾರ್ಯಕರ್ತನ ಧಿಡೀರ್ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಮೃತ ಕಾರ್ಯಕರ್ತನನ್ನು ಪ್ರದೀಪ್ (38) ಎಂದು ಗುರುತಿಸಲಾಗಿದೆ. ಕಾರಿನ ಶೆಡ್‍ನಲ್ಲಿ ಆತನ ದೇಹ ಅರೆನಗ್ನವಾಗಿ ಪತ್ತೆಯಾಗಿದೆ. ಶೆಡ್‍ನಲ್ಲಿದ್ದ ಕಬ್ಬಿಣದ ಪೈಪ್ ಒಂದಕ್ಕೆ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಇದನ್ನೂ ಓದಿ: ವಿವಾಹಿತ ಮಹಿಳೆ ಜೊತೆಗಿನ ಖಾಸಗಿ ವಿಡಿಯೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ – ಮಂಗಳೂರು ಮೂಲದ ವ್ಯಕ್ತಿ ಬಂಧನ

    ಶವ ಚೇರ್ ಮೇಲೆ ಇಳಿ ಬಿದ್ದಿದ್ದು, ಹಲವು ಅನುಮಾನಗಳಿಗೆ ಸಹ ಕಾರಣವಾಗಿದೆ. ಸ್ಥಳಕ್ಕೆ ಜಿಗಣಿ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ನಾಗಭೂಷಣ್ ಕಾರು ಅಪಘಾತ: ಕುಡಿದಿರಲಿಲ್ಲ, ಸ್ಟೇಶನ್ ಬೇಲ್ ನೀಡಲಾಗಿದೆ- ಡಿಸಿಪಿ ಪ್ರತಿಕ್ರಿಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಬ್ಬಂಟಿಯಾಗಿ ಸಾಗುವವರನ್ನು ಟಾರ್ಗೆಟ್ ಮಾಡುತ್ತಿದ್ದ ಕುಖ್ಯಾತ ಡಕಾಯಿತಿ ಗ್ಯಾಂಗ್ ಅರೆಸ್ಟ್

    ಒಬ್ಬಂಟಿಯಾಗಿ ಸಾಗುವವರನ್ನು ಟಾರ್ಗೆಟ್ ಮಾಡುತ್ತಿದ್ದ ಕುಖ್ಯಾತ ಡಕಾಯಿತಿ ಗ್ಯಾಂಗ್ ಅರೆಸ್ಟ್

    ಬೆಂಗಳೂರು: ಒಬ್ಬಂಟಿಯಾಗಿ ಸಾಗುವವರನ್ನು ಟಾರ್ಗೆಟ್ ಮಾಡಿ ಬೆದರಿಸಿ, ಚಿನ್ನಾಭರಣ ಮತ್ತು ನಗದು ದೋಚುತ್ತಿದ್ದ ಕುಖ್ಯಾತ ಡಕಾಯಿತಿ ಗ್ಯಾಂಗ್‌ವೊಂದನ್ನು (Dacoit Gang) ಸೂರ್ಯನಗರ (Suryanagar) ಪೊಲೀಸರು ಬಂಧಿಸಿದ್ದಾರೆ.

    ಸುನೀಲ್ ಹಾವೇರಿ (26), ಸರವಣ ಅಲಿಯಾಸ್ ಚಿಟ್ಟಿ (32), ಕಾಂತರಾಜ (27) ಬಂಧಿತ ಆರೋಪಿಗಳು. ಬೆಂಗಳೂರು (Bengaluru) ಹೊರವಲಯದ ಆನೆಕಲ್ (Anekal) ತಾಲೂಕಿನ ಸೂರ್ಯನಗರ ಪೇಸ್ – 2 ಬಳಿ ಡಕಾಯಿತರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ದೋಚಲು ಹೊಂಚು ಹಾಕುತ್ತಿದ್ದ ವೇಳೆ ಸೂರ್ಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ:  ಮದ್ವೆಯಾಗಲು ನಿರಾಕರಿಸಿದ್ದಕ್ಕೆ ಬಿಸಿನೀರು ಎರಚಿ ಬಿಯರ್ ಬಾಟ್ಲಿಯಿಂದ ಹಲ್ಲೆಗೈದ ಆಂಟಿ!

    ಡಕಾಯಿತರು ಮಾರಕಾಸ್ತ್ರಗಳಿಂದ ಜನರನ್ನು ಬೆದರಿಸಿ ಅವರಿಂದ ಮೊಬೈಲ್, ಚಿನ್ನಾಭರಣ ಹಾಗೂ ನಗದನ್ನು ದೋಚುತ್ತಿದ್ದರು. ಆರೋಪಿ ಸುನೀಲ್ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಕೇಸ್ ಆರೋಪಿಯಾಗಿದ್ದ. ಅಲ್ಲದೇ ಅತ್ತಿಬೆಲೆ ನಗರದ ಜೀವನ್ ಭೀಮಾ ನಗರ ಠಾಣಾ ವ್ಯಾಪ್ತಿಯಲ್ಲೂ ಕೊಲೆ ಯತ್ನ, ಡಕಾಯಿತಿ ಸೇರಿದಂತೆ ಹಲವು ಪ್ರಕರಣದ ಆರೋಪಿಯಾಗಿದ್ದ. ಇದನ್ನೂ ಓದಿ: ಗಾಣಗಾಪುರ ದತ್ತಾತ್ರೇಯನ ಸನ್ನಿಧಿಯಲ್ಲಿ ಪುಡಿರೌಡಿ ಅಟ್ಟಹಾಸ – ಭಕ್ತರ ತಲೆ ಮೇಲೆ ಕಾಲಿಟ್ಟು ದೌರ್ಜನ್ಯ

    ಇನ್ನೋರ್ವ ಆರೋಪಿ ಸರವಣ ಅಲಿಯಾಸ್ ಚಿಟ್ಟಿ ತಮಿಳುನಾಡಿನ ಹೊಸೂರಿನ ಹುಡ್ಕೋ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಕೇಸ್ ಆರೋಪಿಯಾಗಿದ್ದ. ಮತ್ತೊಬ್ಬ ಆರೋಪಿ ಕಾಂತರಾಜ್ ಡಕಾಯಿತಿ, ರಾಬರಿ ಕೇಸ್ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಸೂರ್ಯನಗರ ಪೊಲೀಸ್ ಠಾಣೆಯಲ್ಲಿಯೂ ಆರೋಪಿಯಾಗಿದ್ದ. ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈ ಮೂವರು ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಈ ಕುರಿತು ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಾವು ಕಚ್ಚಿ ಬಾಲಕಿ ಸಾವು

  • ಬಿಜೆಪಿ, ಕಾಂಗ್ರೆಸ್‌ ಮಧ್ಯೆ ನೇರ ಫೈಟ್ – ಆನೇಕಲ್ ಅಖಾಡ ಹೇಗಿದೆ?

    ಬಿಜೆಪಿ, ಕಾಂಗ್ರೆಸ್‌ ಮಧ್ಯೆ ನೇರ ಫೈಟ್ – ಆನೇಕಲ್ ಅಖಾಡ ಹೇಗಿದೆ?

    ಬೆಂಗಳೂರು: ಈ ಬಾರಿ ಆನೇಕಲ್ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಪಕ್ಷಗಳ ನಡುವೆ ಫೈಟ್ ಏರ್ಪಟ್ಟಿದ್ದು, ಬಿಎಸ್‍ಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಕಾಂಗ್ರೆಸ್ ಮತಗಳನ್ನು ವಿಭಜಿಸುವ ಸಾಧ್ಯತೆಯಿದೆ.

    ಇದಕ್ಕೂ ಮೊದಲು 18 ವರ್ಷ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ (A Narayanaswamy) ಆನೆಕಲ್ ಬಿಜೆಪಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನು ಹಾಲಿ ಶಾಸಕ ಶಿವಣ್ಣ ಬಿಜೆಪಿ ಭದ್ರಕೋಟೆಯನ್ನು ಭೇದಿಸಿ 10 ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

    ಅಭ್ಯರ್ಥಿಗಳ ಹೆಸರು:
    ಕಾಂಗ್ರೆಸ್ – ಬಿ.ಶಿವಣ್ಣ(ಹಾಲಿ ಶಾಸಕ)
    ಬಿಜೆಪಿ – ಹುಲ್ಲಹಳ್ಳಿ ಶ್ರೀನಿವಾಸ್
    ಜೆಡಿಎಸ್ – ಕೆ.ಪಿ.ರಾಜು
    ಬಿಎಸ್ಪಿ – ಡಾ.ಚಿನ್ನಪ್ಪ ವೈ ಚಿಕ್ಕಹಾಗಡೆ
    ಎಎಪಿ – ಮುನೇಶ್

    ಕಾಂಗ್ರೆಸ್ ಧನಾತ್ಮಕ ಅಂಶಗಳು: ಸಿದ್ದರಾಮಯ್ಯ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾವಿರ ಕೋಟಿ ಅನುದಾನ ಬಿಡುಗಡೆಯಾಗಿತ್ತು. ಬಿಜೆಪಿ ಕಡೆಯಿಂದ ಪ್ರಬಲ ಅಭ್ಯರ್ಥಿ ಘೋಷಣೆ ಮಾಡದಿರುವುದರಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಶಿವಣ್ಣನಿಗೆ ಲಾಭವಾಗುವ ಸಾಧ್ಯತೆ ಇದೆ. ಜೊತೆಗೆ ಬಿಜೆಪಿಯಲ್ಲಿ ಟಿಕೆಟ್ ಸಿಗದವರ ಭಿನ್ನಮತ ಸ್ಫೋಟ ಕಾಂಗ್ರೆಸ್‍ಗೆ ಸಹಾಯವಾಗುವ ಸಾಧ್ಯತೆಯಿದೆ.

    ಕಾಂಗ್ರೆಸ್ ಋಣಾತ್ಮಕ ಅಂಶಗಳು: ಕಳೆದ 5 ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳು ಯಾವುದು ಸಹ ಕ್ಷೇತ್ರದಲ್ಲಿ ನಡೆದಿಲ್ಲ. ಇದರ ಜೊತೆಗೆ ನಡೆದಿರುವ ಕಾಮಗಾರಿಗಳು ಕಳಪೆ ಮಟ್ಟದ ಕಾಮಗಾರಿಗಳು ಅನೇಕ ಮಂದಿ ಹಿರಿಯ ಮುಖಂಡರನ್ನು ಕಾಂಗ್ರೆಸ್‍ನ ಶಾಸಕ ಶಿವಣ್ಣ ಗಣನೆಗೆ ತೆಗೆದುಕೊಂಡಿಲ್ಲ ಎಂಬ ಆರೋಪಗಳು ಇವೆ. ಇದರಿಂದ ಸಾಕಷ್ಟು ಸಮಸ್ಯೆಗಳಾಗುವ ಸಾಧ್ಯತೆಯಿದೆ.

    ಜೆಡಿಎಸ್ ಪಕ್ಷದ ಅಭ್ಯರ್ಥಿ ಕಾಂಗ್ರೆಸ್ ಮತಗಳನ್ನು ಸೆಳೆದರೆ ಕಾಂಗ್ರೆಸ್ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ. ಬಿಎಸ್‍ಪಿ ಪಕ್ಷದ ಚಿನ್ನಪ್ಪ ಚಿಕ್ಕ ಆ ಕಡೆ ಸಹ ಮತಗಳನ್ನು ಸೆಳೆಯುವ ಎಲ್ಲಾ ರೀತಿಯ ಸಾಧ್ಯತೆಗಳು ಸಹ ಇವೆ. ಇದನ್ನೂ ಓದಿ: ನಮಗೆ ರಾಹುಲ್ ಗಾಂಧಿ ರಕ್ತದ ಬಗ್ಗೆ ಸಂಶಯವಿದೆ : ಕಟೀಲ್

    ಬಿಜೆಪಿ ಧನಾತ್ಮಕ ಅಂಶಗಳು: ಬಿಜೆಪಿ ಪಕ್ಷದಲ್ಲಿ ಇದಕ್ಕೂ ಮೊದಲು ಶಾಸಕರಾಗಿದ್ದ ನಾರಾಯಣಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳು ಮುನ್ನಡೆ ನೀಡುವ ಸಾಧ್ಯತೆ ಇದೆ. ಜೊತೆಗೆ ಕಾಂಗ್ರೆಸ್ ಶಾಸಕರಿಂದ ಈ ಬಾರಿ ಆಗದ ಅಭಿವೃದ್ಧಿ ಕಾರ್ಯಗಳು ಬಿಜೆಪಿಗೆ ಪ್ಲಸ್ ಆಗುತ್ತದೆ. ಇದನ್ನೂ ಓದಿ: ಡಿಕೆಶಿಗೆ ಸೋಲಿನ ಭಯ ಕಾಡ್ತಿದೆ, ಅದಕ್ಕಾಗಿ‌ ಮಾಟ-ಮಂತ್ರ ಮಾಡಿಸ್ತಿದ್ದಾರೆ: ಆರ್.ಅಶೋಕ್

    ಬಿಜೆಪಿ ಋಣಾತ್ಮಕ ಅಂಶಗಳು: ಶ್ರೀನಿವಾಸ್ ಕಣಕ್ಕಿಳಿಯುತ್ತಿರುವುದು ಸಾಕಷ್ಟು ಮಂದಿ ಬಿಜೆಪಿ ಆಕಾಂಕ್ಷಿಗಳಿಗೆ ಹಾಗೂ ಮುಖಂಡರಿಗೆ ಇಷ್ಟವಿಲ್ಲ. ಹಿರಿಯ ಮುಖಂಡರನ್ನು ಗಣನೆಗೆ ತೆಗೆದುಕೊಳ್ಳದೇ ಉಲ್ಲಹಳ್ಳಿ ಶ್ರೀನಿವಾಸ್ ಸಾಕಷ್ಟು ಬಾರಿ ಆಗೌರವ ತೋರಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಕೆಲವು ಆಕಾಂಕ್ಷಿಗಳು ಈಗಾಗಲೇ ಬಂಡಾಯ ಹೇಳುವ ಎಲ್ಲಾ ಸಾಧ್ಯತೆಗಳು ಸಹ ಕಾಣಿಸುತ್ತಿವೆ. ಇನ್ನು 2 ಬಾರಿ ಶಿವಣ್ಣನವರನ್ನು ಆಯ್ಕೆ ಮಾಡಿ ಬದಲಾವಣೆ ಬಯಸುವಂತಹ ಸಾರ್ವಜನಿಕರು ಬಿಜೆಪಿಗೆ ಮತ ಚಲಾಯಿಸುವಂತಹ ಸಾಧ್ಯತೆಗಳಿವೆ.

    ಯಾರ ವೋಟು ಎಷ್ಟು?:
    ಒಟ್ಟು ಮತದಾರರು: 3,48,102
    ಗಂಡು: 1,84,795
    ಹೆಣ್ಣು: 1,63,228
    ಇತರೆ: 79

    ಜಾತಿ ಲೆಕ್ಕಾಚಾರ:
    ಪರಿಶಿಷ್ಟ ಜಾತಿ ಮತ್ತು ಪಂಗಡ- 1,50,000
    ಒಕ್ಕಲಿಗ- 40,000
    ರೆಡ್ಡಿ- 44,500
    ಅಲ್ಪಸಂಖ್ಯಾತರು- 65,500
    ಕುರುಬ- 15,000
    ಬಲಜಿಗ- 12,000
    ಸವಿತಾ ಸಮಾಜ- 9,000
    ಲಿಂಗಾಯುತ- 12,000

  • ಗಂಡನನ್ನ ಬಿಟ್ಟು ಮತ್ತೊಬ್ಬನನ್ನ ಮದುವೆಯಾದ್ಳು, ಅವನಿಂದಲೇ ಕೊಲೆಯಾದ್ಳು

    ಗಂಡನನ್ನ ಬಿಟ್ಟು ಮತ್ತೊಬ್ಬನನ್ನ ಮದುವೆಯಾದ್ಳು, ಅವನಿಂದಲೇ ಕೊಲೆಯಾದ್ಳು

    ಆನೇಕಲ್: ಮದುವೆಯಾಗಿದ್ದರೂ (Marriage) ಗಂಡನಿಂದ ದೂರವಾಗಿದ್ದ ವಿವಾಹಿತೆಯೊಬ್ಬಳು ಮತ್ತೊಬ್ಬನನ್ನ ಮದುವೆಯಾಗಿ ರಾಜರೋಷವಾಗಿ ಓಡಾಡಿಕೊಂಡಿದ್ದಳು. ಕೊನೆಗೆ ಅವನಿಂದಲೇ ಕೊಲೆಯಾಗಿರುವ ಘಟನೆ ಆನೇಕಲ್ ತಾಲೂಕಿನ ಹೆಬ್ಬಗೋಡಿ (Hebbagodi) ವ್ಯಾಪ್ತಿಯಲ್ಲಿ ನಡೆದಿದೆ.

    ಬೆಂಗಳೂರು ನಗರ ಜಿಲ್ಲೆಯ ಆನೇಕಲ್ (Anekal) ತಾಲೂಕಿನ ಹೆಬ್ಬಗೋಡಿ ವ್ಯಾಪ್ತಿಯ ಸಿಂಗೇನ ಅಗ್ರಹಾರ ನಿರ್ಜನ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಮಂಜುಳಾ (32) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಕೊನೆಯದ್ದು ಅಂತ 92ನೇ ವಯಸ್ಸಿನಲ್ಲಿ ಪ್ಲಾನ್‌ ಮಾಡಿದ್ದ 5ನೇ ಮದುವೆ ರದ್ದುಪಡಿಸಿದ ಮುರ್ಡೋಕ್

    ಕೆಲ ದಿನಗಳ ಹಿಂದೆಯಷ್ಟೇ ಮಂಜುಳಾ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಇತ್ತೀಚೆಗೆ 2ನೇ ಪತಿ ನಾರಾಯಣ ಜೊತೆ ಹೊರಗೆ ಹೋಗಿದ್ದ ಮಂಜುಳಾ ಮತ್ತೆ ವಾಪಸ್ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡಿದ್ದ ಕುಟುಂಬಸ್ಥರು ಹೆಬ್ಬಗೋಡಿ ಠಾಣೆಯಲ್ಲಿ (Hebbagodi Police) ದೂರು ದಾಖಲಿಸಿದ್ದರು. ನಿರ್ಜನ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹ ದೊರೆತಾಗ ಗುರುತು ಪತ್ತೆಗಾಗಿ ಮಂಜುಳಾ ತಂಗಿ ಲಕ್ಷ್ಮಿಯನ್ನ ಕರೆಸಲಾಗಿತ್ತು. ಆಕೆ ಕಿವಿಯೋಲೆ, ಕೊರಳಲ್ಲಿದ್ದ ಸರ ನೋಡಿ ಗುರುತು ಪತ್ತೆಹಚ್ಚಿದ್ದಾರೆ. ಇದನ್ನೂ ಓದಿ: ಶೀಘ್ರವೇ ಬರಲಿದೆ ವಾಟ್ಸಪ್ ಚಾಟ್ ಲಾಕ್ ಮಾಡೋ ಹೊಸ ಫೀಚರ್

    ಮದುವೆಯಾಗಿದ್ದರೂ ಸಲುಗೆ ಬೆಳೆಸಿದ್ದ ಮಂಜುಳಾ: ಕಳೆದ 10 ವರ್ಷಗಳ ಹಿಂದೆ ಇಲ್ಲಿನ ಸಂಪಿಗೆನಗರದ ನಿವಾಸಿ ನಾರಾಯಣಪ್ಪ ಹಾಗೂ ಮಂಜುಳಾ ನಡುವೆ ಸ್ನೇಹ ಬೆಳೆದಿತ್ತು. ಮದುವೆಯಾಗಿದ್ದರೂ ಗಂಡನಿಂದ ದೂರವಾಗಿದ್ದ ಮಂಜುಳಾ ರಾಜಾರೋಷವಾಗಿ ನಾರಾಯಣಪ್ಪ ಜೊತೆಗೆ ಸಲುಗೆಯಿಂದ ಓಡಾಡಿಕೊಂಡಿದ್ದಳು. ಹಲವು ಬಾರಿ ಇವರಿಬ್ಬರ ಮಧ್ಯೆ ಕಿರಿಕ್‌ ಆದಾಗ ಠಾಣೆಯಲ್ಲೇ ನಾರಾಯಣಪ್ಪ ಮದುವೆ ಆಗಿದ್ದ. ಕೆಲ ದಿನಗಳವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆ ನಂತರ ದುಡ್ಡು ಕೊಡುವಂತೆ ನಾರಾಯಣಪ್ಪ, ಮಂಜುಳಾ ಜೊತೆ ಕಿರಿಕ್‌ ಮಾಡುತ್ತಿದ್ದ. ಅಲ್ಲದೇ ನಿನ್ನನ್ನ ಸುಟ್ಟುಹಾಕಿಬಿಡುತ್ತೇನೆ ಎಂದು ಸಂಬಂಧಿಕರ ಮಧ್ಯೆಯೇ ಬೆದರಿಕೆ ಹಾಕಿದ್ದ.

    ಕಳೆದ ಮಾರ್ಚ್‌ 29 ರಂದು ನಾರಾಯಣಪ್ಪ ಆಕ್ಟೀವಾದಲ್ಲಿ ಮಂಜುಳಾಳನ್ನ ಕರೆದುಕೊಂಡು ಹೋಗಿದ್ದನು, ಇದೇ ವೇಳೆ ಆಕೆಯನ್ನ ಕೊಲೆ ಮಾಡಿ, ನಿರ್ಜನ ಪ್ರದೇಶದಲ್ಲಿ ಸುಟ್ಟುಹಾಕಿದ್ದಾನೆ ಎನ್ನಲಾಗಿದೆ. ಕೆಲ ಗಂಟೆಗಳ ಬಳಿಕ ತಾನೊಬ್ಬನೆ ಮನೆಗೆ ಹಿಂದಿರುಗಿದ್ದಾನೆ ಎಂದು ತಿಳಿದುಬಂದಿದೆ. ಈಗಾಗಲೇ ನಾರಾಯಣಪ್ಪನನ್ನ ಬಂಧಿಸಿರುವ ಹೆಬ್ಬಗೋಡಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

  • ಪಿಡಿಓ ಅಧಿಕಾರಿ ಅಮಾನತು

    ಪಿಡಿಓ ಅಧಿಕಾರಿ ಅಮಾನತು

    ಆನೇಕಲ್: ವ್ಯಕ್ತಿಯೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ವಿವರವನ್ನು ನೀಡಲು ವಿಳಂಬ ಮಾಡಿದ ಹಿನ್ನೆಲೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಲಾಗಿರುವ ಘಟನೆ ಬೆಂಗಳೂರು ಹೊರವಲಯದ ಹೆನ್ನಾಗರದಲ್ಲಿ ನಡೆದಿದೆ.

    ಆನೇಕಲ್ ತಾಲೂಕಿನ ಹೆನ್ನಾಗರ ಗ್ರಾಪಂ ಅಭಿವೃದ್ಧಿ ಅಧಿಕಾರಿ ತುಳಸಿನಾಥ್ ಅಮಾನತುಗೊಂಡ ಅಧಿಕಾರಿ. ಬೆಂಗಳೂರು ನಗರ ಜಿಪಂ ಸಿಇಒ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಆನೇಕಲ್ ತಾಲೂಕು ಜಿಗಣಿ ಹೋಬಳಿ ಗ್ರಾಮದ ಹೆನ್ನಾಗರ ಗ್ರಾಪಂ ಪಿಡಿಓ ತುಳಸಿನಾಥ್ ಅವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ದಾಖಲೆಯನ್ನು ಕೇಳಿ ವೀರಭದ್ರಸ್ವಾಮಿ ಎಂಬುವವರು ಅರ್ಜಿ ಸಲ್ಲಿಸಿದ್ದರು. ಆದರೆ ದಾಖಲೆಯನ್ನು ನೀಡದೆ ಹಲವು ಬಾರಿ ಮಾಹಿತಿ ಕೇಳಿದರೂ ಸಹ ವಿಳಂಬ ಮಾಡಿದ್ದರು.

    ಕರ್ತವ್ಯಲೋಪ ವಿಚಾರದಲ್ಲಿ ಮಾಹಿತಿ ಹಕ್ಕು ಕಾಯ್ದೆ ಪ್ರಕರಣದಲ್ಲಿ ರಾಜ್ಯ ಮಾಹಿತಿ ಆಯುಕ್ತರು ಎಚ್. ಪಿ. ಸುಧಾಮ್‍ದಾಸ್ ಅವರ ಆದೇಶದಂತೆ ಜಿಪಂ ಸಂಗಪ್ಪ ಐಎಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಶಿಸ್ತುಕ್ರಮ ಜರುಗಿಸುವಂತೆ ಆದೇಶ ಮಾಡಿರುತ್ತಾರೆ. ಅದರಂತೆ ಜಿಲ್ಲಾ ಪಂಚಾಯಿತಿ ಅವರು ಆಯೋಗದ ಆದೇಶಕ್ಕೆ ಮಾನ್ಯತೆ ನೀಡಿ ಬೇಜವಾಬ್ದಾರಿಯಿಂದ ಮಾಹಿತಿ ಕೊಡದೆ ಮಾಹಿತಿ ಆಯೋಗದ ನೀತಿ-ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಇಂತಹ ಅಧಿಕಾರಿ ವಿರುದ್ಧ ಮಹತ್ವದ ಆದೇಶವಾಗಿದೆ. ಇದನ್ನೂ ಓದಿ: ಎದುರಾಳಿಗಳ ನಂಬರ್ ಎಷ್ಟೇ ಇರಲಿ, ಗೇಮ್ ನಮ್ಮದೇ: ಆಪರೇಷನ್ ಕಮಲದ ಸಂದೇಶ ಏನು!?

    Live Tv

  • ಜನಿಸಿದ ಕೆಲವೇ ನಿಮಿಷಗಳಲ್ಲಿ ಪುಟ್ಟ ಕಂದಮ್ಮನನ್ನು ರಸ್ತೆಗೆ ಎಸೆದ ತಾಯಿ

    ಜನಿಸಿದ ಕೆಲವೇ ನಿಮಿಷಗಳಲ್ಲಿ ಪುಟ್ಟ ಕಂದಮ್ಮನನ್ನು ರಸ್ತೆಗೆ ಎಸೆದ ತಾಯಿ

    ಆನೇಕಲ್: ನವಜಾತ ಶಿಶುವನ್ನು ಹೆತ್ತ ತಾಯಿಯೇ ರಸ್ತೆಗೆ ಎಸೆದು ಹೋಗಿದ್ದು, ಸ್ಥಳೀಯರು ಮಗುವಿನ ಅಳುವಿನ ಶಬ್ದ ಕೇಳಿ ರಕ್ಷಣೆ ಮಾಡಿರುವ ಘಟನೆ ಬನ್ನೇರುಘಟ್ಟ ರಸ್ತೆಯ ವಿವರ್ಸ್ ಕಾಲೋನಿಯಲ್ಲಿ ನಡೆದಿದೆ.

    ಮುಂಜಾನೆ ವಿವರ್ಸ್ ಕಾಲೋನಿಯ 5ನೇ ಕ್ರಾಸ್ ರಸ್ತೆ ಬದಿಯಲ್ಲಿ ಮಗುವಿನ ಅಳುವಿನ ಶಬ್ದ ಕೇಳಿಸಿಕೊಂಡ ನಿವಾಸಿಗಳು ಹೊರ ಬಂದು ನೋಡಿದಾಗ ರಕ್ತಸಿಕ್ತ ಸ್ಥಿತಿಯಲ್ಲಿ ಆಗಷ್ಟೇ ಜನಿಸಿದ ಮಗು ಪತ್ತೆಯಾಗಿದೆ. ಅಕ್ಕಪಕ್ಕದ ನಿವಾಸಿಗಳು ಮಗುವನ್ನು ರಕ್ಷಣೆ ಮಾಡಿದ್ದು, ಏರಿಯಾದ ಚೂಡಾಮಣಿ ಎಂಬ ಮಹಿಳೆ ರಕ್ತಸಿಕ್ತವಾಗಿದ್ದ ಮಗುವನ್ನು ಶುಚಿ ಮಾಡಿ ಸ್ನಾನ ಮಾಡಿಸಿದ್ದಾರೆ.

    ಇನ್ನೂ ಪ್ರಪಂಚವೇ ಅರಿಯದ ಹಸುಗೂಸುನ್ನು ರಸ್ತೆಗೆಸೆದಿರುವ ಹೆತ್ತಮ್ಮ ಅಪ್ರಾಪ್ತೆ ಇಲ್ಲವೇ ಅನೈತಿಕ ಸಂಬಂಧಕ್ಕೆ ಜನಿಸಿರುವ ಸಂಶಯ ವ್ಯಕ್ತವಾಗಿದ್ದು, ಪುಟ್ಟ ಕಂದನನ್ನು ರಸ್ತೆಯಲ್ಲಿ ಎಸೆದು ಹೋಗಿರುವ ನಿರ್ದಯಿ ತಾಯಿಯ ವಿರುದ್ಧ ಸ್ಥಳೀಯರು ಆಕ್ರೋಶವನ್ನು ಹೊರಹಾಕಿದರು. ಇದನ್ನೂ ಓದಿ: ಕೆಲಸದಲ್ಲಿ ತೃಪ್ತಿ ಇಲ್ಲ – ಡೆತ್ ನೋಟ್ ಬರೆದು ಪೊಲೀಸ್ ಆತ್ಮಹತ್ಯೆ

    ವಿಷಯ ತಿಳಿದು ಸ್ಥಳಕ್ಕೆ ಬಂದ ಕೋಣನಕುಂಟೆ ಪೊಲೀಸರು ಬೇಟಿ ನೀಡಿದ್ದಾರೆ. ಬಳಿಕ ಕಂದಮ್ಮನನ್ನ ರಕ್ಷಣೆ ಮಾಡಿದ ಮಹಿಳೆ ಚೂಡಾಮಣಿ ಮಗುವನ್ನು ಸಾಕಲು ನಮ್ಮ ಸುಪರ್ದಿಗೆ ನೀಡಿ ಎಂದು ಗೊಗರೆದ್ದಾರೆ. ಆದರೆ ಕೊಂಣನಕುಂಟೆ ಪೊಲೀಸರು ನವಜಾತ ಹೆಣ್ಣು ಮಗುವನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈಗಲೂ ಬೇಕಾದ್ರೆ ಅವಳನ್ನೇ ಮದುವೆ ಆಗ್ತೀನಿ: ಆ್ಯಸಿಡ್ ನಾಗನ ದುರಹಂಕಾರದ ಮಾತು