Tag: ಆನಂದ ಮಾಮನಿ

  • ಮಣ್ಣಲ್ಲಿ ಮಣ್ಣಾದ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ

    ಮಣ್ಣಲ್ಲಿ ಮಣ್ಣಾದ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ

    ಬೆಳಗಾವಿ: ಸವದತ್ತಿ ಶ್ರೀರೇಣುಕಾ ಯಲ್ಲಮ್ಮನ ಕ್ಷೇತ್ರದ ಶಾಸಕ,  ವಿಧಾನ ಸಭೆ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ (Ananda Mamani) ಅವರ ಅಂತ್ಯಕ್ರಿಯೆಯನ್ನು (Funeral) ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿಸಲಾಯಿತು.

    ಬೆಳಗಾವಿ (Belgavi) ಜಿಲ್ಲೆಯ ಸವದತ್ತಿ (Savadatti) ಪಟ್ಟಣದ ಹೊರವಲಯದಲ್ಲಿರುವ ಯಡ್ರಾವಿ ರಸ್ತೆಯಲ್ಲಿರುವ ಚಂದ್ರಮಾ ಫಾರ್ಮ್ ಹೌಸ್‍ನಲ್ಲಿ ತಮ್ಮ ತಂದೆ ಚಂದ್ರಶೇಖರ ಮಾಮನಿ ಸಮಾಧಿ ಪಕ್ಕದಲ್ಲಿ, ಆನಂದ ಮಾಮನಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ವೇಳೆ ಆನಂದ ಮಾಮನಿ ಇಬ್ಬರು ಧರ್ಮಪತ್ನಿಯರು, ಮಕ್ಕಳು ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದರು. ಇದರ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಸಿ.ಸಿ.ಪಾಟೀಲ್, ಶಂಕರಪಾಟೀಲ್, ಮನೇನಕೊಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಹೇಶ್ ತೆಂಗಿನಕಾಯಿ, ಕಾಂಗ್ರೆಸ್ ಮುಖಂಡ ಎನ್.ಎಚ್.ಕೋನರೆಡ್ಡಿ ಸೇರಿದಂತೆ ಇತರ ರಾಜಕೀಯ ಮುಖಂಡರು, ವಿವಿಧ ಮಠಾಧೀಶರು ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದರು.  ಇದನ್ನೂ ಓದಿ: ಆನಂದ ಮಾಮನಿ ನಿಧನ- ಕಿತ್ತೂರು ಉತ್ಸವ ನಾಳೆಗೆ ಮುಂದೂಡಿಕೆ

    ಇದಕ್ಕೂ ಮೊದಲು ಸವದತ್ತಿ ಪಟ್ಟಣದ ರಾಮಾಪೂರ ಸೈಟ್‍ನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಇದಾದ ಬಳಿಕ ಆನಂದ ಮಾಮನಿ ಅವರ ಪಾರ್ಥಿವ ಶರೀರವನ್ನು ಸವದತ್ತಿ ಪಟ್ಟಣದ ವಿವಿಧ ಓಣಿ, ಗಲ್ಲಿಗಳಲ್ಲಿ ಅಂತಿಮ ಯಾತ್ರೆ ನಡೆಸಲಾಗಿತ್ತು.  ಇದನ್ನೂ ಓದಿ: ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ವಿಧಿವಶ

    Live Tv
    [brid partner=56869869 player=32851 video=960834 autoplay=true]

  • ಆನಂದ ಮಾಮನಿ ನಿಧನ- ಕಿತ್ತೂರು ಉತ್ಸವ ನಾಳೆಗೆ ಮುಂದೂಡಿಕೆ

    ಆನಂದ ಮಾಮನಿ ನಿಧನ- ಕಿತ್ತೂರು ಉತ್ಸವ ನಾಳೆಗೆ ಮುಂದೂಡಿಕೆ

    ಬೆಳಗಾವಿ: ಡೆಪ್ಯೂಟಿ ಸ್ಪೀಕರ್ (Deputy Speaker) ಆನಂದ ಮಾಮನಿ (Anand Mamani) ವಿಧಿವಶ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಮೂರು ದಿನಗಳ ನಡೆಯುವ ಐತಿಹಾಸಿಕ ಕಿತ್ತೂರು ಉತ್ಸವವನ್ನು (Kittur Utsav) ನಾಳೆಗೆ ಮುಂದೂಡಿಕೆ ಮಾಡಲಾಗಿದೆ ಎಂದು ಬೆಳಗಾವಿ (Belagavi) ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

    ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಅ.23 ರಿಂದ 25ರವರೆಗೆ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ಆಯೋಜನೆ ಮಾಡಲಾಗಿತ್ತು. ಆದರೆ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಇಂದು ನಡೆಯಬೇಕಿದ್ದ ಕಿತ್ತೂರು ಉತ್ಸವ ಹಾಗೂ ಇಂದಿನ ಕಾರ್ಯಕ್ರಮಗಳನ್ನು ನಾಳೆಗೆ ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ತಾಲೂಕು ಕ್ರೀಡಾಂಗಣದಲ್ಲಿ ಅಂತಿಮ ದರ್ಶನ: ಆನಂದ ಮಾಮನಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸವದತ್ತಿ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿಯ ರಾಮಾಪುರ ಸೈಟ್ ಬಳಿಯ ತಾಲೂಕು ಕ್ರೀಡಾಂಗಣದಲ್ಲಿ ಕುಟುಂಬಸ್ಥರಿಗೆ ಹಾಗೂ ವಿಐಪಿಗಳಿಗೆ ಪ್ರತ್ಯೇಕ ಪೆಂಡಾಲ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸದ್ಯ ಆನಂದ ಮಾಮನಿ ಪಾರ್ಥಿವ ಶರೀರ ಸವದತ್ತಿ ತಲುಪಿದ್ದು, ರಾಮಾಪುರ ಸೈಟ್‍ನಲ್ಲಿರುವ ಅವರ ನಿವಾಸಕ್ಕೆ ಆಗಮಿಸಿದ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.

    ಕುಟುಂಬಸ್ಥರಿಂದ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿ ಅಂತಿಮ ದರ್ಶನ ಸ್ಥಳಕ್ಕೆ ಸ್ಥಳಾಂತರ ಮಾಡಿದರು. ಮಧ್ಯಾಹ್ನ 3 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಂತಿಮ ದರ್ಶನದ ಬಳಿಕ ಸವದತ್ತಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಆನಂದ ಮಾಮನಿ ಚಂದ್ರಮಾ ಫಾರ್ಮಹೌಸ್‍ನಲ್ಲಿ ವೀರಶೈವ ಲಿಂಗಾಯತ ಧರ್ಮದ ವಿಧಿ-ವಿಧಾನದಂತೆ ಅಂತ್ಯಕ್ರಿಯೆ ನೆರವೇರಲಿದ್ದು, ತಾಲೂಕು ಕ್ರೀಡಾಂಗಣದತ್ತ ಆನಂದ ಮಾಮನಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ವಿಧಿವಶ

    ಶಾಸಕ ಆನಂದ ಮಾಮನಿ ಮೊದಲ ಪತ್ನಿ ರೇಖಾ, ಎರಡನೇ ಪತ್ನಿ ರತ್ನಾ ಸವದತ್ತಿ ಪಟ್ಟಣದ ಆನಂದ ಮಾಮನಿ ಅವರ ನಿವಾಸಕ್ಕೆ ಆಗಮಿಸಿದರು. ಬೆಂಗಳೂರಿನಿಂದ ಸವದತ್ತಿಯ ರಾಮಾಪುರ ಸೈಟ್‍ನಲ್ಲಿರುವ ನಿವಾಸಕ್ಕೆ ಆಗಮಿಸಿದ್ದು, ಕಣ್ಣೀರಿಡುತ್ತಾ ಇಬ್ಬರು ಪತ್ನಿಯರು ಮನೆಯೊಳಗೆ ತೆರಳಿದ್ದರು. ಇದೇ ವೇಳೆ ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಬೆಡಸೂರಮಠದ ಅಜ್ಜಯ್ಯ ಸ್ವಾಮೀಜಿ ಸಹ ಆಗಮಿಸಿದ್ದಾರೆ. ಇದನ್ನೂ ಓದಿ: ಒಂದೂವರೆ ವರ್ಷದ ಅವಧಿಯಲ್ಲಿ ಮೂವರು ಪ್ರಭಾವಿ ಬಿಜೆಪಿ ನಾಯಕರ ನಿಧನ

    Live Tv
    [brid partner=56869869 player=32851 video=960834 autoplay=true]

  • ಶೀಘ್ರದಲ್ಲೇ ಜನಸೇವೆಗೆ ಬರುತ್ತೇನೆ- ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಮಾಮನಿ!

    ಶೀಘ್ರದಲ್ಲೇ ಜನಸೇವೆಗೆ ಬರುತ್ತೇನೆ- ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಮಾಮನಿ!

    ಬೆಳಗಾವಿ: ಇತ್ತೀಚೆಗಷ್ಟೇ ತಮ್ಮ ಆರೋಗ್ಯದ ಬಗ್ಗೆ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಆನಂದ ಮಾಮನಿ (Ananda Mamani) ಅವರು, ಶೀಘ್ರದಲ್ಲೇ ಗುಣಮುಖವಾಗಿ ಜನ ಸೇವೆಗೆ ಬರುತ್ತೇನೆ, ಯಾರೂ ಆತಂಕಪಡಬೇಡಿ. ಊಹಾಪೋಹಗಳಿಗೆ ಕಿವಿಗೊಡಬೇಡಿ ನಾನು ಚೆನ್ನಾಗಿದ್ದೇನೆ ಎಂದಿದ್ದರು.

    ಇದಲ್ಲದೇ ಕಳೆದ ಎರಡು ದಿನಗಳ ಹಿಂದಷ್ಟೇ ತಮ್ಮ ದೊಡ್ಡಪ್ಪನ ಸಾವಿಗೆ ಸಂತಾಪವನ್ನ ಆನಂದ ಮಾಮನಿ ಸೂಚಿಸಿದ್ದರು. ತಮ್ಮ ಹೆಸರಿನಲ್ಲಿರುವ ಟ್ವಿಟ್ಟರ್ (Twitter) ಖಾತೆಯಿಂದ ದುಃಖ ವ್ಯಕ್ತಪಡಿಸಿದ್ದರು. ನನ್ನ ದೊಡ್ಡಪ್ಪ ಕರಬಸಪ್ಪ ಮಲ್ಲಿಕಾರ್ಜುನಪ್ಪ ಮಾಮನಿ ಅವರು ಲಿಂಗೈಕ್ಯರಾಗಿದ್ದಾರೆಂದು ತಿಳಿಸಲು ವಿಷಾದವೆನಿಸುತ್ತಿದೆ. (ಅ.21ರಂದು)ಇಂದು ಮಧ್ಯಾಹ್ನ 2 ಗಂಟಗೆ ಗಂಟೆಗೆ ಸವದತ್ತಿ ಪಟ್ಟಣದ ಕೆಂಚಲಾರಕೊಪ್ಪ ತೋಟದ ಜಮೀನಿನಲ್ಲಿ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ನೇರವೇರಿಸಲಾಗುವುದು ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದರು.

    ಕುಟುಂಬಸ್ಥರಿಂದ 30 ವರ್ಷ ಅಧಿಕಾರ: ಆನಂದ ಮಾಮನಿ ಕುಟುಂಬಸ್ಥರು ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ 6 ಬಾರಿ ಗೆದ್ದು ಜನ ಸೇವೆ ಮಾಡಿದ್ದಾರೆ. ಆನಂದ ಮಾಮನಿ ತಂದೆ ಚಂದ್ರಶೇಖರ ಮಾಮನಿ 1998ರಲ್ಲಿ ವಿಧಾನಸಭೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದೀಗ ತಂದೆಯ ನಿಭಾಯಿಸಿದ್ದ ಹುದ್ದೆ ಪಡೆದುಕೊಳ್ಳುವಲ್ಲಿ ಆನಂದ ಮಾಮನಿ ಯಶಸ್ವಿಯಾಗಿದ್ದಾರೆ. ಚಂದ್ರಶೇಖರ್ ಮಾಮನಿ 1985 ಪಕ್ಷೇತರ ಹಾಗೂ 1994ರಲ್ಲಿ ಜನತಾ ದಳದಿಂದ ಜಯಗಳಿಸಿದ್ದರು. ನಂತರ 1999ರಲ್ಲಿ ಗಂಗೂತಾಯಿ ಮಾಮನಿ ಸಹ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು. ಇದನ್ನೂ ಓದಿ: ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ವಿಧಿವಶ

    ಸವದತ್ತಿ ಬಿಜೆಪಿ ಶಾಸಕ, ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ (18-01-1966) ರಂದು ಜನಿಸಿದ್ದರು. ತಂದೆ ಚಂದ್ರಶೇಖರ್ ಮಾಮನಿ ಹಾಗೂ ತಾಯಿ ಗಂಗಮ್ಮ ಮಾಮನಿ ಅವರ ಸುಪುತ್ರರಾಗಿದ್ದ ಆನಂದ ಮಾಮನಿ ಅವರಿಗೆ ಪತ್ನಿ ರತ್ನಾ ಆನಂದ ಮಾಮನಿ ಹಾಗೂ ಇಬ್ಬರು ಮಕ್ಕಳಿದ್ದರು. 15 ವರ್ಷದ ಚೇತನಾ ಮಾಮನಿ ಹೆಣ್ಣು ಮಗು ಹಾಗೂ 13 ವರ್ಷದ ಚಿನ್ಮಯ ಮಾಮನಿ ಗಂಡು ಮಗ ಇದ್ದು ಆನಂದ ಮಾಮನಿಯವರು ಬಿಕಾಂ ಪದವೀಧರರಾಗಿದ್ದರು.

    2000, 2002 ರಲ್ಲಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿದ್ದರು. 2005, 2008ರಲ್ಲಿ ಸವದತ್ತಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅದರ ಜೊತೆಗೆ 2004ರಿಂದ ಜೆಡಿಎಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಬಳಿಕ ಬದಲಾದ ರಾಜಕೀಯ ಸನ್ನಿವೇಶ 2008ರಲ್ಲಿ ಬಿಜೆಪಿ ಸೇರ್ಪಡೆಯಾಗಿ 2008ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಮೊದಲ ಬಾರಿ ಶಾಸಕರಾಗಿ ಸವದತ್ತಿ ವಿಧಾನಸಭೆ ಮತಕ್ಷೇತ್ರಕ್ಕೆ ಆಯ್ಕೆ ಆಗಿದ್ದರು.

    ನಂತರ 2013ರಲ್ಲಿ ಮತ್ತೆ ಬಿಜೆಪಿ (BJP) ಯಿಂದ ಎರಡನೇ ಬಾರಿಗೆ ಶಾಸಕರಾಗಿ ಹಾಗೂ 2018ರಲ್ಲಿ ಮತ್ತೆ ಮೂರನೇ ಬಾರಿಗೆ ಶಾಸಕರಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಸವದತ್ತಿ ಮತಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದ್ದರು. ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ವಿಧಾನಸಭಾ ಡೆಪ್ಯುಟಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆನಂದ ಮಾಮನಿ ನಿಧನ ನಾಡಿಗೆ ತುಂಬುಲಾರದ ನಷ್ಟ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ವಿಧಿವಶ

    ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ವಿಧಿವಶ

    ಬೆಳಗಾವಿ: ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ (Aanand Mamani) (56) ವಿಧಿವಶರಾಗಿದ್ದಾರೆ.

    ಮಧ್ಯರಾತ್ರಿ 12.02ಕ್ಕೆ ಮಣಿಪಾಲ್ ಆಸ್ಪತ್ರೆ (manipal Hospital) ಯಲ್ಲಿ ಕೊನೆಯುಸಿರುಳೆದಿದ್ದಾರೆ. ಲಿವರ್ ಕ್ಯಾನ್ಸರ್, ಜಾಂಡೀಸ್‍ನಿಂದ ಬಳಲುತ್ತಿದ್ದ ಮಾಮನಿಯವರು ಚೆನ್ನೈನಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ಶಿಫ್ಟ್ ಆಗಿದ್ದರು.

    ಜೆಡಿಎಸ್ (JDS) ಮೂಲಕ ರಾಜಕೀಯ ಪ್ರವೇಶಿಸಿ 2008ರಲ್ಲಿ ಬಿಜೆಪಿ (BJP) ಸೇರ್ಪಡೆಯಾಗಿದ್ದರು. 2008ರಿಂದ ಸತತವಾಗಿ 3 ಬಾರಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದು, ಹ್ಯಾಟ್ರಿಕ್ ಗೆಲುವಿನ ಮೂಲಕ ಸವದತ್ತಿ ಕ್ಷೇತ್ರದಲ್ಲಿ ಇತಿಹಾಸ ಸೃಷ್ಠಿಸಿದ್ದರು. 2020ರ ಮಾರ್ಚ್‍ನಲ್ಲಿ ಡೆಪ್ಯೂಟಿ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು. ಇವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

    ಇತ್ತ ಮಾಮನಿ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ರಾತ್ರೋರಾತ್ರಿ ಅಂತಿಮ ದರ್ಶನ ಪಡೆದಿದ್ದಾರೆ. ಮಣಿಪಾಲ್ ಆಸ್ಪತ್ರೆಗೆ ಆಗಮಿಸಿ ಸ್ನೇಹಿತನ ಅಂತಿಮ ದರ್ಶನ ಪಡೆದರು.ಮಾಮನಿ ಪಾರ್ಥಿವ ಶರೀರ ಕಂಡು ಸಿಎಂ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದನ್ನೂ ಓದಿ: ಸಾರ್ವಜನಿಕರ ಕೈಗೆ ತಗ್ಲಾಕೊಂಡ ಮೊಬೈಲ್ ಕಳ್ಳ – ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ರು

    ಬಳಿಕ ಮಾತನಾಡಿದ ಅವರು, ಚಿಕ್ಕ ವಯಸ್ಸಲ್ಲೇ ರಾಜಕೀಯಕ್ಕೆ ಬಂದ್ರು. ನನ್ನೊಂದಿಗೆ ಬಿಜೆಪಿ ಸೇರಿದ್ರು. ಸವದತ್ತಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸಂಜೆ 4 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯುತ್ತದೆ ಎಂದರು.

    ಮಾಮನಿ ನಿಧನಕ್ಕೆ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು

    ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು

    ಬೆಳಗಾವಿ: ವಿಧಾನಸಭೆಯ ಉಪ ಸಭಾಪತಿ ಹಾಗೂ ಶಾಸಕ ಆನಂದ ಮಾಮನಿ (Anand Mamani) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕಳೆದ ಕೆಲ ದಿನಗಳಿಂದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಆನಂದ ಮಾಮನಿ ಅವರನ್ನು ನಿನ್ನೆ ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಮಾಮನಿ ಆಪ್ತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸರ್ಕಾರದ ಡಬಲ್ ಗೇಮ್ ಬಯಲು – ಕೈ ಪ್ರಭಾವಿ ನಾಯಕ ಜಾರ್ಜ್ ಒತ್ತುವರಿ ಕಾಟಾಚಾರಕ್ಕೆ ತೆರವು

    ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಆನಂದ ಮಾಮನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆನಂದ ಮಾಮನಿ ಆರೋಗ್ಯ ಸ್ಥಿರವಾಗಿದೆ. ವಿಶ್ರಾಂತಿಗೆ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

    ತಡರಾತ್ರಿ ಆನಂದ ಮಾಮನಿಗೆ ಕರೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಆರೋಗ್ಯ ವಿಚಾರಿಸಿದರು. ಮಾಮನಿಯವರು ಚೇತರಿಸಿಕೊಳ್ಳುತ್ತಿದ್ದು, ಇನ್ನೆರಡು ದಿನಗಳಲ್ಲಿ ಬೆಂಗಳೂರಿಗೆ ವಾಪಸ್‌ ಆಗಲಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ನಾಯಿ ಸಾಕುವ ವಿಚಾರಕ್ಕೆ ಜಗಳ- ತಾಯಿ, ಮಗಳು ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

  • ತೆರೆದ ಸಭೆಯಲ್ಲಿ 5 ಲಕ್ಷ ಪರಿಹಾರ ಕೊಡ್ತೇವೆಂದ 3 ಶಾಸಕರಿಗೆ ಎಚ್ಚರಿಕೆ ನೀಡಿದ ಶಿವಾಚಾರ್ಯ ಸ್ವಾಮೀಜಿ

    ತೆರೆದ ಸಭೆಯಲ್ಲಿ 5 ಲಕ್ಷ ಪರಿಹಾರ ಕೊಡ್ತೇವೆಂದ 3 ಶಾಸಕರಿಗೆ ಎಚ್ಚರಿಕೆ ನೀಡಿದ ಶಿವಾಚಾರ್ಯ ಸ್ವಾಮೀಜಿ

    ಬೆಳಗಾವಿ(ಚಿಕ್ಕೋಡಿ): ತೆರೆದ ಸಭೆಯಲ್ಲೇ ಮೂವರು ಶಾಸಕರಿಗೆ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಹುಕ್ಕೇರಿಯ ಶ್ರೀಮಠದ ದಸರಾ ಉತ್ಸವ ಉದ್ದೇಶಿಸಿ ಮಾತನಾಡುವಾಗ ಸ್ವಾಮೀಜಿ ಎಚ್ಚರಿಸಿದ್ದಾರೆ.

    ಹಿರೇಮಠದ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಸ್ವಾಮೀಜಿ ಅವರು ಹುಕ್ಕೇರಿಯಲ್ಲಿ ಬಿದ್ದು ಹೋದ ಮನೆಗಳಿಗೆ ಪರಿಹಾರ ನೀಡಲು ಮುಂದಾಗಿದ್ದ ಸಂಸ್ಥೆಯ ಕುರಿತು ಮಾತನಾಡುತ್ತಿದ್ದರು. ಒಂದು ಮನೆಗೆ 1 ಲಕ್ಷ ರೂ., ಇನ್ನೊಂದು ಮನೆಗೆ 1 ಲಕ್ಷ 20 ಸಾವಿರ ಪರಿಹಾರ ನೀಡಲು ಸಂಸ್ಥೆಯೊಂದು ಮುಂದೆ ಬಂದಿದೆ ಎಂದು ಸ್ವಾಮೀಜಿ ಅವರು ಹೇಳುತ್ತಿದ್ದಂತೆ ಶಾಸಕ ಉಮೇಶ್ ಕತ್ತಿ ಮಧ್ಯೆ ಪ್ರವೇಶಿಸಿದರು. ನಾವು 5 ಲಕ್ಷ ಪರಿಹಾರ ನೀಡುತ್ತೇವೆ ಎಂದು ಹೇಳಿಕೆ ನೀಡಿದರು. ಆಗ ಉಮೇಶ್ ಕತ್ತಿ ಮಾತಿಗೆ ಶಾಸಕ ಆನಂದ ಮಾಮನಿ ಮತ್ತು ದುರ್ಯೋಧನ ಐಹೊಳೆ ಕೂಡ ದನಿಗೂಡಿಸಿದರು. ಇಲ್ಲ ಇಲ್ಲ ಅದರಲ್ಲಿ ಎರಡು ಮಾತಿಲ್ಲ ಎಂದ ಮೂವರು ಶಾಸಕರು ಹೇಳಿದರು.

    ಶಾಸಕರ ಮಾತಿಗೆ ಸ್ವಾಮೀಜಿ ಅವರು ನಗುತ್ತಾ ‘ಕೊಡ್ತಿರಿಲ್ಲಪ್ಪಾ ಮತ್ತ ನನ್ನ ಫಜೀತಿ ಮಾಡಬ್ಯಾಡ್ರಿ’ ಎಂದು ಶಾಸಕರಿಗೆ ಟಾಂಗ್ ಕೊಟ್ಟರು. ಸ್ವಾಮೀಜಿ ಮಾತಿಗೆ ಇಲ್ಲ ಇಲ್ಲ ಖಂಡಿತವಾಗಿಯೂ ಕೊಡುತ್ತೇವೆ ಎಂದು ಮೂವರು ಬಿಜೆಪಿ ಶಾಸಕರು ಹೇಳಿದರು. ಆಗ ಹೇಳಿದ ಹಾಗೆ ಪರಿಹಾರ ಕೊಡಲಿಲ್ಲವೆಂದರೆ ವಿಧಾನಸೌಧ ಮತ್ತು ಸಂಸತ್ತಿನವರೆಗೂ ನಾವು ಬರುತ್ತೇವೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು. ಇಂತಹ ಸ್ವಾರಸ್ಯಕರ ಘಟನೆಗೆ ಹುಕ್ಕೇರಿಯ ಹಿರೇಮಠದ ದಸರಾ ಉತ್ಸವ ಸಾಕ್ಷಿಯಾಯಿತು.