Tag: ಆನಂದ್ ರಾಮ್

  • ದುಬಾರಿ ಕಾರು ಖರೀದಿಸಿದ ನಿರ್ದೇಶಕ ಸಂತೋಷ್ ಆನಂದ್ ರಾಮ್

    ದುಬಾರಿ ಕಾರು ಖರೀದಿಸಿದ ನಿರ್ದೇಶಕ ಸಂತೋಷ್ ಆನಂದ್ ರಾಮ್

    ಬೆಂಗಳೂರು: ಸ್ಯಾಂಡಲ್‍ವುಡ್ ಸೆಲಬ್ರೆಟಿಗಳು ಸದ್ಯ ದುಬಾರಿ ಕಾರುಗಳನ್ನು ಖರೀದಿಸುವಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ನಟ ಶೈನ್ ಶೆಟ್ಟಿ, ನಟಿ ಮೇಘಾ ಶೆಟ್ಟಿ ದುಬಾರಿ ಕಾರುಗಳನ್ನು ಖರೀದಿಸುವ ಮೂಲಕ ಸಖತ್ ಸೌಂಡ್ ಮಾಡಿದ್ದರು. ಇದೀಗ ಇದೇ ಸಾಲಿನ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಸೇರ್ಪಡೆಗೊಂಡಿದ್ದಾರೆ.

    Santhosh Anand Ram

    ಹೌದು, ನಿರ್ದೇಶಕ ಆನಂದ್ ರಾಮ್ ದುಬಾರಿ ಬೆಲೆಯ ಕಾರನ್ನು ಖರೀದಿಸಿದ್ದಾರೆ. ಸದ್ಯ ಇದೇ ಖುಷಿಯಲ್ಲಿರುವ ಆನಂದ್ ಕಾರಿನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ರೆ ದೇವರು ಒಳ್ಳೆದು ಮಾಡಲ್ಲ: ಪುನೀತ್ ರಾಜ್‍ಕುಮಾರ್

    Santhosh Anand Ram

    ತಂದೆ, ತಾಯಿ, ಪತ್ನಿ, ಮಗು, ಸೇರಿದಂತೆ ಇಡೀ ಕುಟುಂಬದೊಂದಿಗೆ ವೈಟ್ ಫೀಲ್ಡ್‍ನಲ್ಲಿರುವ ಶೋ ರೂಮ್‍ಗೆ ಹೋಗಿ ಸಂತೋಷ್ ಆನಂದ್ ರಾಮ್ ಬಿಎಂಡಬ್ಲೂ 520ಡಿ ಕಾರಿನ್ನು ಖರೀದಿಸಿದ್ದಾರೆ. ಅಲ್ಲದೇ ಕಾರಿನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಇನ್ ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಬಿಎಂಡಬ್ಲೂ 520ಡಿಗೆ ಮನೆಗೆ ಸ್ವಾಗತ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    Santhosh Anand Ram

    ಒಟ್ಟಾರೆ ಒಬ್ಬರ ನಂತರ ಮತ್ತೊಬ್ಬ ತಾರೆಯರು ಕಾರುಗಳನ್ನು ಖರೀದಿಸುತ್ತಿದ್ದು, ಸ್ಯಾಂಡಲ್‍ವುಡ್‍ನಲ್ಲಿ ಒಂದು ರೀತಿ ಕಾರುಗಳು ಹಬ್ಬನೇ ಶುರುವಾಗಿದೆ ಎಂದು ಹೇಳಬಹುದು. ಇದನ್ನೂ ಓದಿ:ಇಂದು ಸಪ್ತಪದಿ ತುಳಿಯಲಿರೋ ‘ರಾಜಕುಮಾರ’ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್

    ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ಸಂತೋಷ್ ಆನಂದ್ ರಾಮ್‍ಗೆ ಈ ಸಿನಿಮಾ ಸಖತ್ ಹಿಟ್ ತಂದು ಕೊಟ್ಟಿತು. ಅಲ್ಲದೇ ಈ ಸಿನಿಮಾ ಸ್ಯಾಂಡಲ್‍ವುಡ್ ಗಲ್ಲಾ ಪೆಟ್ಟಿಗೆಯಲ್ಲಿ ಧೂಳ್ ಎಬ್ಬಿಸಿತು. ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಸಿನಿಮಾ ಕೂಡ ಸಕ್ಸಸ್ ತಂದು ಕೊಡುವುದರ ಜೊತೆಗೆ ಫ್ಯಾಮಿಲಿ ಪ್ರೇಕ್ಷಕರ ಮನಗೆದ್ದಿತು. ನಂತರ ಇತ್ತೀಚೆಗೆ ಯುವರತ್ನ ಸಿನಿಮಾಕ್ಕೆ ಬಿಡುಗಡೆಯಾಗಿತ್ತು. ಆದರೆ ಕೊರೊನಾ ಕಾರಣದಿಂದ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿತ್ತು. ನಂತರ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಯಿತು.