Tag: ಆನಂದ್ ಮಹೀಂದ್ರ

  • ಅಂಕೋಲಾ ಬಸ್ ನಿಲ್ದಾಣದಲ್ಲಿ ಕಸ ಸ್ವಚ್ಛ ಮಾಡಿದ ಹಾಲಕ್ಕಿ ಮಹಿಳೆಯನ್ನು ಹೊಗಳಿದ ಆನಂದ್ ಮಹೇಂದ್ರ

    ಅಂಕೋಲಾ ಬಸ್ ನಿಲ್ದಾಣದಲ್ಲಿ ಕಸ ಸ್ವಚ್ಛ ಮಾಡಿದ ಹಾಲಕ್ಕಿ ಮಹಿಳೆಯನ್ನು ಹೊಗಳಿದ ಆನಂದ್ ಮಹೇಂದ್ರ

    ಕಾರವಾರ: ಅಂಕೋಲಾ (Ankola) ಬಸ್ ನಿಲ್ದಾಣದಲ್ಲಿ (Bus Stand) ಕಸ ಸ್ವಚ್ಛ ಮಾಡಿದ ಹಾಲಕ್ಕಿ ಮಹಿಳೆಯನ್ನು (Woman) ಮಹೇಂದ್ರ ಕಂಪನಿ ಮಾಲೀಕ ಆನಂದ್ ಮಹೇಂದ್ರ (Anand Mahindra) ಹೊಗಳಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ (Uttara Kannada) ಅಂಕೋಲಾದ ಬಸ್ ನಿಲ್ದಾಣದಲ್ಲಿ ಹಾಲಕ್ಕಿ ಮಹಿಳೆಯರು ಕವಳೆ ಹಣ್ಣು, ನೇರಳೆ ಹಣ್ಣು ಮುಂತಾದ ಕಾಡು ಹಣ್ಣುಗಳನ್ನು ಜೀವನ ನಿರ್ವಹಣೆಗಾಗಿ ಮಾರುವುದನ್ನು ಕಾಣುತ್ತೇವೆ. ಈ ಹಣ್ಣುಗಳನ್ನು ಎಲೆಗಳಲ್ಲಿ ಸುರುಳಿ ಮಾಡಿ ಅದರಲ್ಲಿ ತುಂಬಿ ಕೊಡುತ್ತಾರೆ. ಬಸ್‌ನಲ್ಲಿ ಕುಳಿತ ಪ್ರಯಾಣಿಕರು ಹಣ್ಣುಗಳನ್ನು ತಿಂದು ಎಲೆಗಳನ್ನು ಕಿಟಕಿಯಿಂದ ಎಸೆಯುವುದು ಮಾಮೂಲಿ. ಆದರೆ ಇಲ್ಲೊಬ್ಬ ಪರಿಸರ ಪ್ರೇಮಿ ಹಾಲಕ್ಕಿ ಮಹಿಳೆಯೊಬ್ಬಳು ಪ್ರಯಾಣಿಕರು ಎಸೆದ ಎಲೆಗಳನ್ನು ತಂದು ಕಸದ ಬುಟ್ಟಿಗೆ ಹಾಕುವ ಮೂಲಕ ತನಗೆ ದಿನದ ತುತ್ತು ನೀಡುವ ಅಂಕೋಲಾ ಬಸ್ ನಿಲ್ದಾಣವನ್ನು ಸ್ವಚ್ಛವಾಗಿಡಲು ಪ್ರಯತ್ನಿಸಿದ್ದಾಳೆ.

    ಹಾಲಕ್ಕಿ ಮಹಿಳೆಯ ಈ ಸ್ವಚ್ಛ ಪರಿಸರದ ಪ್ರೇಮವು ಎಲ್ಲರ ಮೆಚ್ಚುಗೆಗೆ ಕಾರಣವಾಗುತ್ತಿದೆ. ಮಹಿಳೆಯು ಸ್ವಚ್ಛಗೊಳಿಸುತ್ತಿರುವ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಹ ಹರಿದಾಡಿದ್ದು, ಮಹೇಂದ್ರ ಕಂಪನಿಯ ಮಾಲೀಕ ಆನಂದ್ ಮಹೇಂದ್ರ ಅವರು ಈ ವೀಡಿಯೋವನ್ನು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಯಾವುದೇ ಕಾರಣಕ್ಕೂ ಗೆಲ್ಲಲ್ಲ: HDK

    ಸದ್ದಿಲ್ಲದೇ ಸ್ಪಚ್ಛ ಭಾರತದ ಪ್ರಯತ್ನವನ್ನು ಸಹಕಾರಗೊಳಿಸುವ ಹೀರೋಗಳು ಇವರು. ಇವರ ಕಾರ್ಯಗಳನ್ನು ಗಮನಿಸದಿರುವುದು, ಶ್ಲಾಘಿಸದೇ ಇರುವುದು ವಿಪರ್ಯಾಸ ಎಂದು ಟ್ವೀಟ್‌ ಮಾಡಿದ್ದಾರೆ. ಈ ವೀಡಿಯೋ ಹಂಚಿಕೊಂಡಿದ್ದ ಆದರ್ಶ ಹೆಗಡೆ ಎಂಬುವವರ ಬಳಿ ಇವರ ಸಂಪರ್ಕ ಸಿಗಬಹುದೇ ಎಂದು ಆನಂದ್ ಮಹೇಂದ್ರ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರದ ಒಳ ಮೀಸಲಾತಿ ವಿರುದ್ಧ ಹೋರಾಟ: ಸಿ.ಎಸ್‌.ದ್ವಾರಕನಾಥ್‌

  • ಆನಂದ್ ಮಹಿಂದ್ರಾ ಜೊತೆ `ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ರಾಮ್ ಚರಣ್

    ಆನಂದ್ ಮಹಿಂದ್ರಾ ಜೊತೆ `ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ರಾಮ್ ಚರಣ್

    ರಾಜಮೌಳಿ (Rajamouli)  ನಿರ್ದೇಶನದ `ಆರ್‌ಆರ್‌ಆರ್’ (RRR) ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಈ ಚಿತ್ರದ `ನಾಟು ನಾಟು’ (Naatu Naatu) ಸಾಂಗ್ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟು ಹಾಕಿದೆ. ಹೀಗಿರುವಾಗ ಖ್ಯಾತ ಉದ್ಯಮಿ ಆನಂದ್ ಮಹಿಂದ್ರಾ (Anand Mahindra) ಕೂಡ ನಾಟು ನಾಟು ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ವಿಶೇಷ ಅಂದ್ರೆ ಸಾಂಗ್ ಸ್ಟೆಪ್ ರಾಮ್‌ ಚರಣ್ (Ram Charan) ಅವರೇ ಹೇಳಿಕೊಟ್ಟಿದ್ದಾರೆ. ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಕಳೆದ ವರ್ಷ ರಿಲೀಸ್ ಆದ `ಆರ್‌ಆರ್‌ಆರ್’ ಸಿನಿಮಾದ ಹವಾ ಇನ್ನೂ ಕಮ್ಮಿಯಾಗಿಲ್ಲ. ಚಿತ್ರದ ನಾಟು ನಾಟು ಸಾಂಗ್‌ನಲ್ಲಿ ಜ್ಯೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಜಬರ್‌ದಸ್ತ್ ಆಗಿ ಡ್ಯಾನ್ಸ್ ಮಾಡಿದ್ದರು. ಈ ಸಾಂಗ್‌ನ ಸಂಗೀತ ನಿರ್ದೇಶಕ ಕೀರವಾಣಿ ಅವರು ʻನಾಟು ನಾಟುʼ ಹಾಡಿಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಕೂಡ ಗೆದ್ದಿದ್ದರು.

    ಇದೀಗ ಉದ್ಯಮಿ ಆನಂದ್ ಮಹಿಂದ್ರ ಮತ್ತು ನಟ ರಾಮ್ ಚರಣ್ ಇಬ್ಬರೂ ಹೈದರಾಬಾದ್‌ನಲ್ಲಿ ಭೇಟಿಯಾಗಿದ್ದಾರೆ. ಈವೆಂಟ್ ಒಂದರಲ್ಲಿ ಭಾಗಿಯಾಗಿದ್ದ ರಾಮ್ ಚರಣ್ ಮತ್ತು ಆನಂದ್ ಇಬ್ಬರೂ ಉತ್ತಮ ಸಮಯ ಕಳೆದಿದ್ದಾರೆ. ಆಗ `ನಾಟು ನಾಟು’ ಡಾನ್ಸ್ ಮಾಡಿದ್ದಾರೆ. ಆನಂದ್ ಮಹೀಂದ್ರಾ ಅವರು ವೀಡಿಯೋ ಹಂಚಿಕೊಂಡು ರಾಮ್ ಚರಣ್ ಜೊತೆ `ನಾಟು ನಾಟು’ ಹಾಡಿನ ಬೇಸಿಕ್  ಸ್ಟೆಪ್ ಕಲಿತೆ. ಧನ್ಯವಾದಗಳು ಮತ್ತು ಆಸ್ಕರ್‌ಗೆ ಶುಭವಾಗಲಿ ನನ್ನ ಗೆಳೆಯ ಎಂದು ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿರುವ ವಿಚಾರ ನಿಜಾನಾ? ಸ್ಪಷ್ಟನೆ ನೀಡಿದ ರಶ್ಮಿಕಾ ಮಂದಣ್ಣ

    ಆನಂದ್ ಮಹೀಂದ್ರಾ ಅವರ ಟ್ವೀಟ್‌ಗೆ ರಾಮ್ ಚರಣ್ ಕೂಡ ಪ್ರತಿಕ್ರಿಯೆ ನೀಡಿ, ಆನಂದ್ ಮಹೀಂದ್ರಾ ಅವರೇ ನೀವು ನನಗಿಂತ ವೇಗವಾಗಿ ಡಾನ್ಸ್ ಮಾಡುತ್ತೀರಿ. ಅದ್ಭುತವಾದ ಫನ್ ಕ್ಷಣವಾಗಿತ್ತು. `ಆರ್‌ಆರ್‌ಆರ್’ ತಂಡಕ್ಕೆ ಶುಭಕೋರಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ. ಇಬ್ಬರ ಮಾತುಕತೆ, ಡಾನ್ಸ್ ವಿಡಿಯೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಹೀಂದ್ರಾ ಶೂಟ್‍ನಲ್ಲಿ ತಾಳ್ಮೆ ಕಳೆದುಕೊಂಡ ಅಜಯ್ ದೇವಗನ್!

    ಮಹೀಂದ್ರಾ ಶೂಟ್‍ನಲ್ಲಿ ತಾಳ್ಮೆ ಕಳೆದುಕೊಂಡ ಅಜಯ್ ದೇವಗನ್!

    ಮುಂಬೈ: ಬಾಲಿವುಡ್ ಸ್ಟಾರ್ ನಟ ಮತ್ತು ಮಹೀಂದ್ರಾ ಗ್ರೂಪ್‍ನ ರಾಯಭಾರಿ ಅಜಯ್ ದೇವಗನ್ ಶೂಟಿಂಗ್ ಸಮಯದಲ್ಲಿ ತಾಳ್ಮೆಯನ್ನು ಕಳೆದುಕೊಂಡಿದ್ದಾರೆ.

    ಮಹೀಂದ್ರಾ ಟ್ರಕ್ ಮತ್ತು ಬಸ್ ತಯಾರಿಕಾ ವಿಭಾಗದ ರಾಯಭಾರಿ ಅಜಯ್ ದೇವಗನ್ ಅವರನ್ನು ಒಳಗೊಂಡ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೋದಲ್ಲಿ, ಜಾಹೀರಾತನ್ನು ಚಿತ್ರೀಕರಿಸುವಾಗ ಅಜಯ್ ದೇವಗನ್ ಸಿಟ್ಟು ಮಾಡಿಕೊಳ್ಳುವ ರೀತಿಯಲ್ಲಿಯೇ ಸ್ಕ್ರಿಪ್ಟ್ ಮಾಡಲಾಗಿತ್ತು. ಇದನ್ನೂ ಓದಿ:  1.35 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಶ್ರೀಮಂತ ಪಾಟೀಲ್

    ವೀಡಿಯೋದಲ್ಲಿ ಏನಿದೆ?
    ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ, ಅಜಯ್ ‘ಯೆ ಬಾರ್ ಬಾರ್ ಸ್ಕ್ರಿಪ್ಟ್ ಕ್ಯೂನ್ ಬದಲ್ ರಹೇ ಹೋ?(ಸ್ಕ್ರಿಪ್ಟ್ ಏಕೆ ನಿರಂತರವಾಗಿ ಬದಲಾಯಿಸಲಾಗುತ್ತಿದೆ?) ಎಂದು ಸಿಟ್ಟಾಗಿ ಶೂಟಿಂಗ್ ವೇಳೆ ಗರಂ ಆಗಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆಗ ಶೂಟಿಂಗ್‍ನಲ್ಲಿದ್ದ ಒಬ್ಬರು ಸ್ಕ್ರಿಪ್ಟ್ ಕೇವಲ ನಾಲ್ಕು ಬಾರಿ ಬದಲಾಯಿಸಲಾಗಿದೆ ಎಂದು ಪ್ರತಿಕ್ರಿಯಿಸುತ್ತಾರೆ. ಆಗ ಅಜಯ್ ನಿಟ್ಟುಸಿರು ಬಿಡುತ್ತಾರೆ. ವೀಡಿಯೋ ನಂತರ ‘ವೀಕ್ಷಿಸುತ್ತಿರಿ’ ಇನ್ನೂ ಹೆಚ್ಚು ಬರಲಿದೆ ಎಂದು ಬರೆದುಕೊಳ್ಳಲಾಗಿದೆ.

    ಈ ಮೂಲಕ ಮಹೀಂದ್ರ ಗ್ರೂಪ್ ಅಜಯ್ ಸಿಟ್ಟಾಗುವ ರೀತಿಯಲ್ಲಿಯೇ ಸ್ಕ್ರಿಪ್ಟ್ ಮಾಡಿದ್ದು, ಇದನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬುದು ಈ ಮೂಲಕ ತಿಳಿಯುತ್ತೆ. ಈ ವೀಡಿಯೋ ಶೇರ್ ಮಾಡಿದ ಅವರು, ಮಹೀಂದ್ರಾ ಟ್ರಕ್ ಬಸ್ ಚಿತ್ರೀಕರಣದಲ್ಲಿ ಅಜಯ್ ದೇವಗನ್ ಅವರು ತಮ್ಮ ಶಾಂತತೆಯನ್ನು ಕಳೆದುಕೊಂಡಿದ್ದಾರೆ ಎಂದು ನನಗೆ ತಿಳಿಸಲಾಯಿತು. ಕೊನೆಗೆ ಇದು ತಮಾಷೆಗಾಗಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಹೊಸ ರೀತಿಯ ಪ್ರಚಾರದ ವೀಡಿಯೋ ನೋಡಿದ ನೆಟ್ಟಿಗರು ಒಂದು ನಿಮಿಷ ಶಾಕ್ ಆಗಿದ್ದು, ಪೂರ್ತಿ ವೀಡಿಯೋ ನೋಡಿದ ಮೇಲೆ ಇದನ್ನು ಪ್ರಚಾರಕ್ಕೆ ಮಾಡಿದ್ದಾರೆ ಎಂಬುದು ತಿಳಿದುಬರುತ್ತೆ. ನೆಟ್ಟಿಗರು, ‘ಜಾಹೀರಾತು ಮಾಡಲು ಉತ್ತಮ ಮಾರ್ಗ’ ಎಂದು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ಇಂದಿರಾನಗರ ಕಾ ಗುಂಡಾ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ

    ಈ ಟ್ವೀಟ್ ರೀ-ಟ್ವೀಟ್ ಮಾಡಿ ಅಜಯ್, ಈ ಶೂಟ್ ಅದ್ಭುತವಾಗಿತ್ತು ಎಂದು ಬರೆದುಕೊಂಡಿದ್ದಾರೆ.

  • ಶೂ ಪಾಲಿಶ್ ಮಾಡ್ತಿದ್ದ ಯುವಕ ಈಗ ‘ಇಂಡಿಯನ್ ಐಡಲ್’

    ಶೂ ಪಾಲಿಶ್ ಮಾಡ್ತಿದ್ದ ಯುವಕ ಈಗ ‘ಇಂಡಿಯನ್ ಐಡಲ್’

    -ಯುವ ಪ್ರತಿಭೆ ಹಾಡಿಗೆ ಆನಂದ್ ಮಹೀಂದ್ರ ಫಿದಾ

    ಮುಂಬೈ: ಶೂ ಪಾಲಿಶ್ ಮಾಡಿಕೊಂಡು ಜೀವನ ನಡೆಸುತ್ತಿದ್ದ ಪಂಜಾಬ್‍ನ ಭಟಿಂಡಾದ ಯುವಕ ಸನ್ನಿ ಹಿಂದೂಸ್ತಾನಿ ಈಗ ‘ಇಂಡಿಯನ್ ಐಡಲ್’ ಆಗಿ ಹೊರಹೊಮ್ಮಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಇಂಡಿಯನ್ ಐಡಲ್ 11ನೇ ಆವೃತ್ತಿ’ ಸ್ಪರ್ಧೆಯಲ್ಲಿ ಸನ್ನಿ ಗೆದ್ದು ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಸನ್ನಿ ಅವರ ಮಧುರ ಧ್ವನಿ, ಪ್ರತಿಭೆಗೆ ಮಹೀಂದ್ರ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರ ಫಿದಾ ಆಗಿದ್ದು, ಸನ್ನಿ ಹಾಡಿದ ಹಾಡನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ಶೂ ಪಾಲಿಶ್ ಮಾಡಿ ಜೀವನ ನಡೆಸುತ್ತಿದ್ದ ಸನ್ನಿ ಸಂಗೀತ ಶಿಕ್ಷಕರ ಮೂಲಕ ಕಲಿತವರಲ್ಲ. ಹೀಗಿದ್ದರೂ ಸನ್ನಿಗೆ ಹಾಡುವುದು ಎಂದರೆ ಅಚ್ಚುಮೆಚ್ಚು. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಛಲ ಸನ್ನಿಯಲ್ಲಿತ್ತು. ಆದರೆ ಸನ್ನಿ ಅವರಿಗೆ ಬಡತನ ಕಾಡುತ್ತಿತ್ತು. ಕಡುಬಡತನದ ನಡುವೆಯೂ ಸನ್ನಿ ತಮ್ಮ ಛಲ ಬಿಡದೇ ಹಾಡಿ ಈಗ ಇಂಡಿಯನ್ ಐಡಲ್ ಆಗಿದ್ದಾರೆ.

    ಸನ್ನಿ ತಂದೆ ಬೂಟ್ ಪಾಲಿಶ್ ಮಾಡಿ ಸಂಸಾರ ನಡೆಸುತ್ತಿದ್ದರು. ಅವರು ಕೂಡ ಉತ್ತಮ ಹಾಡುಗಾರರಾಗಿದ್ದರು. ಸಂಗೀತ ಕಲಿಯದಿದ್ದರೂ ಆಗಾಗ ಮದುವೆ ಮನೆಗಳಲ್ಲಿ ಹಾಡಿ ಸ್ವಲ್ಪ ಹಣ ಗಳಿಸುತ್ತಿದ್ದರು. ಇತ್ತ ಸನ್ನಿ ತಾಯಿ ಬೀದಿ ಬೀದಿಯನ್ನು ಸುತ್ತಿ ಆಕಾಶ ಬುಟ್ಟಿಗಳನ್ನು ಮಾರಾಟ ಮಾಡಿಕೊಂಡು ದುಡಿಯುತ್ತಿದ್ದರು. ಆದರೆ ಕಾಶ್ಮೀರ ಪ್ರವಾಹದ ಸಂದರ್ಭದಲ್ಲಿ ಸನ್ನಿ ತಮ್ಮ ತಂದೆಯನ್ನು ಕಳೆದುಕೊಂಡರು. ತಂದೆ ಮೃತಪಟ್ಟ ಬಳಿಕ ಸನ್ನಿ ಕೂಡ ಬೂಟ್ ಪಾಲಿಶ್ ಮಾಡುತ್ತಾ ಕುಟುಂಬಕ್ಕೆ ಆಸರೆಯಾದರು. ಆದರೆ ಕಡುಬಡತನದಲ್ಲಿ ಸಂಗೀತದ ಮೇಲಿದ್ದ ಅವರ ಪ್ರೀತಿ, ಒಲವು ಕಿಂಚಿತ್ತು ಕಡಿಮೆ ಆಗಿರಲಿಲ್ಲ. ಪ್ರತಿಭೆ, ಛಲವಿದ್ದರೆ ಎಷ್ಟೇ ಕಷ್ಟವಾದರೂ ಸಾಧನೆ ಮಾಡಬಹುದು ಎನ್ನುವುದನ್ನ ಸನ್ನಿ ಸಾಭೀತು ಮಾಡಿದ್ದಾರೆ. ಅದೆಷ್ಟೋ ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದಾರೆ.

    ಸನ್ನಿ ಇಂಡಿಯನ್ ಐಡಲ್ ಟ್ರೋಫಿ ಜೊತೆಗೆ 25 ಲಕ್ಷ ರೂ. ನಗದು, 1 ಕಾರನ್ನು ಬಹುಮಾನವಾಗಿ ಗಳಿಸಿದ್ದಲ್ಲದೇ, ಟಿ ಸಿರೀಸ್ ಸಂಸ್ಥೆಯಲ್ಲಿ ಹಾಡುವ ಕಾಂಟ್ರಾಕ್ಟ್ ಕೂಡ ಪಡೆದುಕೊಂಡಿದ್ದಾರೆ. ಸನ್ನಿ ಪ್ರತಿಭೆಗೆ ಇಡೀ ಭಾರತವೇ ಮನಸೋತಿದೆ. ಇತ್ತ ಆನಂದ್ ಮಹೀಂದ್ರ ಕೂಡ ಸನ್ನಿ ಹಾಡಿಗೆ ಫಿದಾ ಆಗಿ ಅವರ ಹಾಡಿನ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ನಟ ಕುನಾಲ್ ಖೇಮು, ಅಜಯ್ ದೇವಗನ್, ನಟಿ ಕಾಜೋಲ್ ಹಾಗೂ ಕಾರ್ಯಕ್ರಮದ ಜಡ್ಜ್ ಹಿಮೇಶ್ ರೇಶ್ಮಿಯಾ ಸೇರಿದಂತೆ ಅನೇಕರು ಸನ್ನಿ ಧ್ವನಿಗೆ ಮನಸೋತಿದ್ದಾರೆ.