Tag: ಆನಂದ್ ಮಹಿಂದ್ರಾ

  • ಭಾರತೀಯ ಸೇನೆಗಾಗಿ ಮಹಿಂದ್ರಾ ಗ್ರೂಪ್‍ನಿಂದ ನೂತನ ಶಸ್ತ್ರಸಜ್ಜಿತ ವಾಹನ ನಿರ್ಮಾಣ

    ಭಾರತೀಯ ಸೇನೆಗಾಗಿ ಮಹಿಂದ್ರಾ ಗ್ರೂಪ್‍ನಿಂದ ನೂತನ ಶಸ್ತ್ರಸಜ್ಜಿತ ವಾಹನ ನಿರ್ಮಾಣ

    ನವದೆಹಲಿ: ಭಾರತೀಯ ಸಶಸ್ತ್ರ ಪಡೆಗಾಗಿ ವಿಶೇಷವಾಗಿ ತಯಾರಿಸಲಾದ ಆರ್ಮರ್ಡ್ ಲೈಟ್ ಸ್ಪೆಷಲಿಸ್ಟ್ ವೆಹಿಕಲ್‍ನ್ನು ಸೇನೆಗೆ ನೀಡಲಾಗುತ್ತಿದೆ ಎಂದು ಮಹೀಂದ್ರಾ ಗ್ರೂಪ್‍ನ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

    ಈ ನೂತನ ವಾಹನವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಲಘು ಶಸ್ತ್ರಸಜ್ಜಿತ ವಿಶೇಷ ವಾಹನವಾಗಿದೆ. ಅಲ್ಲದೇ ಇದು ಹೆಚ್ಚುವರಿ ಬಾರವನ್ನು ಹೊರುವ ಸಾಮರ್ಥ್ಯ ಹೊಂದಿದೆ. ನಮ್ಮ ದೇಶದ ಎಲ್ಲಾ ಭೂ ಭಾಗಗಳಲ್ಲಿ ಹಾಗೂ ಮರುಭೂಮಿಯಲ್ಲಿ ಕಾರ್ಯ ನಿರ್ವಹಿಸಲು ಈ ವಾಹನ ಸೂಕ್ತವಾಗಿದೆ. ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶಗಳಲ್ಲಿ ಗಸ್ತು ತಿರುಗಲು, ವಿಶೇಷ ಪಡೆಗಳ ಕ್ಷಿಪ್ರ ಕಾರ್ಯಾಚರಣೆಗಳಿಗೆ ಇದು ಸೂಕ್ತವಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ವಿದ್ಯುತ್ ದರ ಏರಿಕೆ ಖಂಡಿಸಿ ಜೂನ್ 22ಕ್ಕೆ ಕರ್ನಾಟಕ ಬಂದ್‌ಗೆ ಕರೆ

    ಶಸ್ತ್ರಸಜ್ಜಿತ ವಾಹನಗಳ ವೀಡಿಯೊವನ್ನು ಹಂಚಿಕೊಂಡಿರುವ ಆನಂದ್ ಮಹಿಂದ್ರಾ ಅವರು, ವಾಹನದ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಎಲ್ಲಾ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ ನಮ್ಮ ಸೇನೆಗಾಗಿ ಹೆಮ್ಮೆಯಿಂದ ನಿರ್ಮಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

    ಸುಖವಿಂದರ್ ಹೇಯರ್ ಅವರ ತಂಡ ಈ ವಾಹನವನ್ನು ಯಶಸ್ವಿಯಾಗಿ ಸಿದ್ಧಪಡಿಸಿದೆ. ಈ ಮೂಲಕ ದೇಶದ ಭದ್ರತಾ ವ್ಯವಸ್ಥೆಗೆ ಸಂಸ್ಥೆ ಅಮೂಲ್ಯ ಕೊಡುಗೆ ನೀಡಿದೆ ಎಂದು ಅವರು ಟ್ವೀಟ್‍ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಮೀನು ಹಿಡಿಯಲು ತೆರಳಿದ್ದ ಮೂವರು ಬಾಲಕರು ನೀರುಪಾಲು

  • ಅವಮಾನಿಸಿದ್ದ ರೈತನ ಮನೆಗೆ ಹೊಸ ಗೂಡ್ಸ್ ಜೀಪ್ ಕಳುಹಿಸಿ ಶುಭಕೋರಿದ ಮಹೀಂದ್ರಾ

    ಅವಮಾನಿಸಿದ್ದ ರೈತನ ಮನೆಗೆ ಹೊಸ ಗೂಡ್ಸ್ ಜೀಪ್ ಕಳುಹಿಸಿ ಶುಭಕೋರಿದ ಮಹೀಂದ್ರಾ

    ತುಮಕೂರು: ವಾಹನ ಖರೀದಿಗೆ ಮಹೀಂದ್ರಾ ಶೋ ರೂಂಗೆ ಬಂದು ಅವಮಾನಕ್ಕೊಳಗಾದ ರೈತನ ಮನೆಗೆ ಇದೀಗ ಮಹೀಂದ್ರ ಗೂಡ್ಸ್ ವಾಹನ ಬಂದಿದೆ. ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹಿಂದ್ರಾ ಅವರು ಟ್ವೀಟ್ ಮಾಡಿ ರೈತನಿಗೆ ಶುಭ ಕೋರಿದ್ದಾರೆ.

    ರೈತ ಕೆಂಪೇಗೌಡಗೆ ಕಂಪನಿ ವಾಹನ ಡೆಲಿವರಿ ಮಾಡಿದೆ. ಈ ಕುರಿತು ಸ್ವತಃ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ರೈತ ಕೆಂಪೇಗೌಡರು ಮಹಿಂದ್ರಾ ಗೂಡ್ಸ್ ವಾಹನ ಖರೀದಿ ಮಾಡಿದ್ದಾರೆ. ಇಂದು ಮಹೀಂದ್ರಾ ಆಟೋಮೋಟಿವ್, ಕೆಂಪೇಗೌಡರಿಗೆ ವಾಹನ ಡೆಲಿವರಿ ನೀಡಿದೆ. ಈ ಬಗ್ಗೆ ರೈತ ಕೆಂಪೇಗೌಡರ ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 165 ಕೋಟಿ ಡೋಸ್ ವ್ಯಾಕ್ಸಿನ್ ನೀಡಿದ ಭಾರತ

    ಟ್ವೀಟ್‍ನಲ್ಲಿ ಏನಿದೆ?: ಜನವರಿ 21ರಂದು ನಮ್ಮ ಡೀಲರ್ ಬಳಿ ಕೆಂಪೇಗೌಡ ಮತ್ತು ಆತನ ಸ್ನೇಹಿತರು ಬಂದಾಗ ನಡೆದ ಘಟನೆಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ನಾವು ಭರವಸೆ ನೀಡಿದಂತೆ ಘಟನೆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಮಹೀಂದ್ರಾ ಆಯ್ಕೆ ಮಾಡಿದ್ದಕ್ಕಾಗಿ ನಾವು ಕೆಂಪೇಗೌಡರಿಗೆ ಧನ್ಯವಾದ ಅರ್ಪಿಸುತ್ತೇವೆ. ನಾವು ಅವರನ್ನು ಮಹೀಂದ್ರಾ ಕುಟುಂಬಕ್ಕೆ ಸ್ವಾಗತಿಸುತ್ತೇವೆ ಎಂದು ಟ್ವೀಟ್ ಮಾಡಲಾಗಿದೆ.

    ನಡೆದಿದ್ದೇನು?: ಹೆಬ್ಬೂರು ಹೋಬಳಿಯ ರಾಮನಪಾಳ್ಯ ನಿವಾಸಿ ಯುವರೈತ ಕೆಂಪೇಗೌಡ, ತುಮಕೂರಿನ ರಾಮನಪಾಳ್ಯದಲ್ಲಿ ಮಹೀಂದ್ರಾ ಶೋ ರೂಂಗೆ ವಾಹನ ಖರೀದಿಗೆ ಹೋಗಿದ್ದರು. ಯುವಕನ ವೇಷಭೂಷಣ ನೋಡಿ ಶೋರೂಂನಲ್ಲಿ ಅವಮಾನ ಮಾಡಿದ್ದರು. ಬೊಲೆರೋ ಗೂಡ್ಸ್ ವಾಹನ ಖರೀದಿಸಲು ಶೋರೂಂಗೆ ಬಂದಿದ್ದ ರೈತನಿಗೆ ಅವಮಾನ ಮಾಡಲಾಗಿತ್ತು.

    ಹತ್ತು ರೂಪಾಯಿ ದುಡ್ಡು ಕೊಡುವ ಯೋಗ್ಯತೆ ಇಲ್ಲ ಎಂದು ಸೇಲ್ಸ್ ಏಜೆಂಟ್, ಕೆಂಪೇಗೌಡರನ್ನು ಅವಮಾನಿಸಿದ್ದರು. ಅವಮಾನಿಸಿದ್ದನ್ನೇ ಸವಾಲಾಗಿ ಸ್ವೀಕರಿಸಿದ ಕೆಂಪೇಗೌಡ ಒಂದು ಗಂಟೆಯಲ್ಲಿ ಹತ್ತು ಲಕ್ಷ ರೂಪಾಯಿ ದುಡ್ಡು ತಂದು ವಾಹನ ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ ಶೋರೂಂ ಸೇಲ್ಸ್ ಏಜೆಂಟ್ ಮಾತ್ರ ವಾಹನ ನೀಡದೇ, ಎರಡು ಮೂರು ದಿನದಲ್ಲಿ ವಾಹನ ನೀಡುತ್ತೇವೆ ಎಂದು ಹೇಳಿದ್ದರು. ಇದೀಗ ಆನಂದ್ ಮಹೀಂದ್ರಾ ಅವರು ಗೋಡ್ಸ್ ಗಾಡಿಯನ್ನು ರೈತನ ಮನೆಗೆ ತಲುಪಿಸಿದ್ದಾರೆ.

  • ಶೋರೂಮ್‍ನಲ್ಲಿ ರೈತನಿಗೆ ಅವಮಾನ – ಆನಂದ್ ಮಹಿಂದ್ರಾ ಹೇಳಿದ್ದೇನು?

    ಶೋರೂಮ್‍ನಲ್ಲಿ ರೈತನಿಗೆ ಅವಮಾನ – ಆನಂದ್ ಮಹಿಂದ್ರಾ ಹೇಳಿದ್ದೇನು?

    ನವದೆಹಲಿ: ಇತ್ತೀಚೆಗೆ ಕರ್ನಾಟಕದ ರೈತನೊಬ್ಬ ಬೊಲೆರೋ ಪಿಕ್‍ಅಪ್ ಟ್ರಕ್ ಖರೀದಿಸಲು ಶೋರೂಮ್‍ಗೆ ಹೋಗಿದ್ದಾಗ ಅಲ್ಲಿನ ಸೇಲ್ಸ್‍ಮ್ಯಾನ್ ರೈತನಿಗೆ ಅವಮಾನ ಮಾಡಿದ್ದಾಗಿ ಸುದ್ದಿಯಾಗಿತ್ತು. ಇದೀಗ ಕೈಗಾರಿಕೋದ್ಯಮಿ ಆನಂದ್ ಮಹಿಂದ್ರಾ ಈ ವಿಚಾರವಾಗಿ ಸಂದೇಶ ನೀಡಿದ್ದಾರೆ.

    ಮಂಗಳವಾರ ಸಾರ್ವಜನಿಕ ಪ್ರತಿಕ್ರಿಯೆಯಲ್ಲಿ ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುವ ಮಹತ್ವದ ಬಗ್ಗೆ ಆನಂದ್ ಮಹಿಂದ್ರಾ ಒತ್ತಿ ಹೇಳಿದ್ದಾರೆ. ಮಹಿಂದ್ರಾ ಕಂಪನಿಯ ಮುಖ್ಯ ಉದ್ದೇಶ ಸಮುದಾಯ ಹಾಗೂ ಎಲ್ಲಾ ಪಾಲುದಾರರನ್ನು ಹೆಚ್ಚಿಸಲು ಅನುವು ಮಾಡಿ ಕೊಡುವುದು. ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುವುದು ಒಂದು ಪ್ರಮುಖ ಮೌಲ್ಯವಾಗಿದೆ ಎಂದು ಮಹಿಂದ್ರಾ ಸಿಇಒ ವಿಜಯ್ ನಕ್ರಾ ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ – ಮಾ.28 ರಿಂದ ಆರಂಭ

    ಈ ಕುರಿತು ವಿಜಯ್ ನಕ್ರಾ, ಆನಂದ್ ಮಹಿಂದ್ರಾ ಅವರ ಸಂದೇಶವನ್ನು ತಿಳಿಸಿದ್ದು ಘಟನೆಯ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

    ಕಳೆದ ವಾರ ತುಮಕೂರು ಮೂಲದ ರೈತನೊಬ್ಬ ಬೊಲೆರೋ ಪಿಕ್‍ಅಪ್ ಟ್ರಕ್ ಖರೀದಿಸಲು ಶೋರೂಮ್‍ಗೆ ತೆರಳಿದ್ದ. ಆದರೆ ಶೋರೂಮ್‍ನ ಸೇಲ್ಸ್‍ಮ್ಯಾನ್ 10 ಲಕ್ಷ ರೂ.ಯ ಕಾರ್ ಅನ್ನು ಖರೀದಿಸಲು 10 ರೂ. ನಿನ್ನ ಬಳಿ ಇಲ್ಲ ಎಂದು ವ್ಯಂಗ್ಯ ಮಾಡಿದ್ದ. ಇದನ್ನು ರೈತ ಸವಾಲಾಗಿ ತೆಗೆದುಕೊಂಡು ಕೇವಲ ಒಂದು ಗಂಟೆಯಲ್ಲಿ 10 ಲಕ್ಷ ರೂ. ಯೊಂದಿಗೆ ಶೋರೂಮ್‍ಗೆ ಮರಳಿದ್ದ. ಇದನ್ನೂ ಓದಿ: ಸಾಲ ವಸೂಲಿಯಲ್ಲೂ ಗುರು ರಾಘವೇಂದ್ರ ಬ್ಯಾಂಕ್ ವಂಚನೆ: ಎಎಪಿ ಆರೋಪ

    ಆಕ್ರೋಶಗೊಂಡಿದ್ದ ರೈತನ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಟ್ವಿಟ್ಟರ್‍ನಲ್ಲಿ ಮಹಿಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹಿಂದ್ರಾಗೆ ಟ್ಯಾಗ್ ಮಾಡಲಾಗಿತ್ತು.

  • ಇಂಟರ್ ನೆಟ್ ಸೆನ್ಷನಲ್ ಅಜ್ಜಿಗೆ ಗುಡ್ ನ್ಯೂಸ್ ನೀಡಿದ ಆನಂದ್ ಮಹಿಂದ್ರಾ

    ಇಂಟರ್ ನೆಟ್ ಸೆನ್ಷನಲ್ ಅಜ್ಜಿಗೆ ಗುಡ್ ನ್ಯೂಸ್ ನೀಡಿದ ಆನಂದ್ ಮಹಿಂದ್ರಾ

    ಬೆಂಗಳೂರು: ಮಂಗಳವಾರ ನಡೆದ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿ ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್ ಗೆ ಎಂಟ್ರಿ ನೀಡಿದೆ. ಪಂದ್ಯದಷ್ಟೇ ಹೆಚ್ಚು ಜನರ ಮೆಚ್ಚುಗೆಗೆ ಪಾತ್ರವಾದ 87 ವರ್ಷದ ಚಾರುಲತಾ ಪಟೇಲ್ ಒಂದೇ ದಿನದಲ್ಲಿ ಭಾರತೀಯರ ಫೇವರೇಟ್ ಆಗಿದ್ದಾರೆ. ಇದೀಗ ಮಹಿಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹಿಂದ್ರಾ. ಭಾರತದ ಮುಂದಿನ ಎಲ್ಲ ಪಂದ್ಯಗಳ ಟಿಕೆಟ್ ಉಚಿತವಾಗಿ ನೀಡುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಆನಂದ್ ಮಹಿಂದ್ರಾ ಟ್ವೀಟ್:
    ಕ್ರಿಕೆಟ್ ಪಂದ್ಯ ನೋಡೋದು ನನ್ನ ಹವ್ಯಾಸವಲ್ಲ. ಆದ್ರೆ ಟಿವಿ ಆನ್ ಮಾಡಿದಾಗ ಅಜ್ಜಿಯನ್ನು ನೋಡಿದೆ. ಮ್ಯಾಚ್ ವಿನ್ನರ್ ರೀತಿಯಲ್ಲಿ ಅಜ್ಜಿ ಕಾಣುತ್ತಿದ್ದರು ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಪ್ರತಿಕ್ರಿಯಿಸಿದ ಮಹಿಳೆ, ಯಾಕೆ ನೀವು ಅಜ್ಜಿಗೆ ಸ್ಪಾನ್ಸರ್ ಮಾಡಬಾರದು ಎಂದು ಪ್ರಶ್ನೆ ಮಾಡಿದ್ದರು. ಮಹಿಳೆ ಟ್ವೀಟ್ ಗೆ ಉತ್ತರಿಸಿದ ಆನಂದ್ ಮಹಿಂದ್ರಾ, ಕೊನೆಯ ಓವರ್ ನಲ್ಲಿ ಮಾತ್ರ ಪಂದ್ಯ ನೋಡಿದೆ. ಮುಂದಿನ ಪಂದ್ಯಗಳಲ್ಲಿಯೂ ಭಾರತ ಹೀಗೆ ಆಡಲಿ ಎಂದು ಹಾರೈಸುತ್ತೇನೆ. ಸಮಿಫೈನಲ್ ಮತ್ತು ಫೈನಲ್ ಪಂದ್ಯದಲ್ಲಿಯೂ ಸ್ಫೂರ್ತಿದಾಯಕ ಅಜ್ಜಿ ಸ್ಟೇಡಿಯಂನಲ್ಲಿರಲಿ ಎಂಬುವುದು ನನ್ನ ಆಸೆ. ಹಾಗಾಗಿ ಭಾರತದ ಮುಂದಿನ ಪಂದ್ಯಗಳಿಗೆ ನಾನು ಅಜ್ಜಿಗೆ ಉಚಿತವಾಗಿ ಟಿಕೆಟ್ ನೀಡುತ್ತೇನೆ ಎಂದಿದ್ದಾರೆ.

    ಮತ್ತೊಂದು ಟ್ವೀಟ್ ನಲ್ಲಿ ಆ ಅಜ್ಜಿ ಯಾರು ಎಂಬುದನ್ನು ಪತ್ತೆ ಮಾಡಿ. ನಾನು ಕೊಟ್ಟ ಮಾತಿನಂತೆ ಇನ್ನುಳಿದ ಭಾರತ ತಂಡ ಆಡುವ ಪಂದ್ಯಗಳಿಗೆ ಟಿಕೆಟ್ ನೀಡುತ್ತೇನೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

    ಯಾರು ಈ ಅಜ್ಜಿ?
    ನಾನು ಭಾರತದಲ್ಲಿ ಹುಟ್ಟಿಲ್ಲ. ತಾಂಜಾನೀಯಾದಲ್ಲಿ ಜನಿಸಿದರೂ ನನ್ನ ಪೋಷಕರು ಭಾರತದಲ್ಲಿದ್ದರು. ಹೀಗಾಗಿ ನಾನು ನನ್ನ ದೇಶದ ಬಗ್ಗೆ ಹೆಮ್ಮೆಯಿದೆ. ಅಲ್ಲದೆ ನಾನು ದಶಕಗಳಿಂದ ಕ್ರಿಕೆಟ್ ವೀಕ್ಷಿಸುತ್ತಿದ್ದೇನೆ. ನಾನು ಆಫ್ರಿಕಾದಲ್ಲಿ ಇದ್ದಾಗ ನಾನು ಪಂದ್ಯ ವೀಕ್ಷಿಸುತ್ತಿದೆ. ಬಳಿಕ 1975ರಲ್ಲಿ ನಾನು ಇಲ್ಲಿಗೆ ಬಂದೆ. ನನಗೆ ಕೆಲಸಗಳಿದ್ದ ಕಾರಣ ಪಂದ್ಯ ವೀಕ್ಷಿಸಲು ಸಮಯ ಇರುತ್ತಿರಲಿಲ್ಲ. ನಾನು ಟಿವಿಯಲ್ಲೇ ಪಂದ್ಯ ವೀಕ್ಷಿಸುತ್ತಿದೆ. ಕಳೆದ 20 ವರ್ಷದ ಹಿಂದೆ ನಾನು ವೃತ್ತಿಯಿಂದ ನಿವೃತ್ತಿ ಪಡೆದೆ. ಈ ನಡುವೆ ನನಗೆ ಕೆಲಸ ಇಲ್ಲ. ಹಾಗಾಗಿ ನನಗೆ ಕ್ರಿಕೆಟ್‍ನಲ್ಲಿ ಆಸಕ್ತಿ ಇದೆ. ಕ್ರಿಕೆಟ್ ವೀಕ್ಷಿಸಲು ಅವಕಾಶ ಸಿಕ್ಕಿದ್ದಕ್ಕೆ ನಾನು ತುಂಬಾ ಲಕ್ಕಿ ಎಂದು ಚಾರುಲತಾ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ನಾನು ತುಂಬಾ ಧಾರ್ಮಿಕ ವ್ಯಕ್ತಿ ಹಾಗೂ ನಾನು ದೇವರನ್ನು ತುಂಬಾ ನಂಬುತ್ತೇನೆ. ಗಣೇಶನನ್ನು ನಾನು ಪ್ರಾರ್ಥನೆ ಮಾಡಿದರೆ ಅದು ನಿಜವಾಗುತ್ತದೆ. ಭಾರತ ತಂಡ ಈ ಬಾರಿ ಪಕ್ಕಾ ವಿಶ್ವಕಪ್ ಗೆಲ್ಲುತ್ತದೆ. ಮಾಜಿ ಕ್ರಿಕೆಟಿಗ ಕಪಿಲ್ ದೇವ್ ನಾಯಕತ್ವದಲ್ಲಿ 1983ರಲ್ಲಿ ಭಾರತ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದಾಗ ನಾನು ಮೈದಾನದಲ್ಲೇ ಇದ್ದೆ. ಅವರು ವಿಶ್ವಕಪ್ ಗೆದ್ದಾಗ ನನಗೆ ತುಂಬಾ ಹೆಮ್ಮೆ ಆಯಿತು. ಅಲ್ಲದೆ ನಾನು ಖುಷಿಯಿಂದ ಡ್ಯಾನ್ಸ್ ಮಾಡಿದ್ದೆ. ಇಂದು ಭಾರತ ತಂಡ ಬಾಂಗ್ಲಾದೇಶವನ್ನು ಸೋಲಿಸಿದರೆ, ಡ್ಯಾನ್ಸ್ ಮಾಡುವುದಾಗಿ ನಾನು ನನ್ನ ಮೊಮ್ಮಗಳ ಬಳಿ ಹೇಳಿದೆ ಎಂದು ಹೇಳಿದರು.