Tag: ಆನಂದ್ ಗುರೂಜಿ

  • ಹರಿದ್ವಾರದಿಂದ ತಂದ ಪವಿತ್ರ ಗಂಗಾಜಲ 2 ಸಾವಿರ ಶಿವ ದೇವಾಲಯಗಳಿಗೆ ವಿತರಣೆ

    ಹರಿದ್ವಾರದಿಂದ ತಂದ ಪವಿತ್ರ ಗಂಗಾಜಲ 2 ಸಾವಿರ ಶಿವ ದೇವಾಲಯಗಳಿಗೆ ವಿತರಣೆ

    ಬೆಂಗಳೂರು: ಬಳೆಪೇಟೆಯಲ್ಲಿರುವ ಅತೀ ಪುರಾತನ ದೇವಾಲಯ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ಹರಿದ್ವಾರದಿಂದ ತಂದ ಗಂಗಾಜಲವನ್ನು 2 ಸಾವಿರ ಶಿವ ದೇವಾಲಯ ಅಭಿಷೇಕಕ್ಕೆ ಮತ್ತು ಲಕ್ಷಾಂತರ ಭಕ್ತರಿಗೆ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

    ಗಂಗಾಜಲ ವಿತರಣಾ ಉದ್ಘಾಟನೆಯನ್ನು ಮಹರ್ಷಿ ಆನಂದ್ ಗುರೂಜಿಯವರು, ಮಾಜಿ ಸಚಿವರಾದ ಮಾಲೂರು ಎಸ್.ಎನ್.ಕೃಷ್ಣಯ್ಯ ಶೆಟ್ಟಿರವರು ನೆರವೇರಿಸಿದರು. ಮಾಜಿ ಶಾಸಕ ಪ್ರಕಾಶ್ ಮತ್ತು ಬಿ.ಜೆ.ಪಿ.ಮುಖಂಡರು, ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ನನಗೆ ಸ್ಥಳಾಂತರ ಬೇಡ, ಮದ್ದುಗುಂಡುಗಳು ಬೇಕು – ಅಮೆರಿಕ ಆಫರ್ ತಿರಸ್ಕರಿಸಿದ ಉಕ್ರೇನ್ ಅಧ್ಯಕ್ಷ

    ಇದೇ ವೇಳೆ ಮಹರ್ಷಿ ಆನಂದ್ ಗುರೂಜಿಯವರು ಮಾತನಾಡಿ, ಸಕಲ ಸಂಕಷ್ಟಗಳ ನಿವಾರಣೆ ಶಿವಾನುಗ್ರಹ ಮುಖ್ಯ. ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಹರಿದ್ವಾರದಿಂದ ಗಂಗಾಜಲ ತರಿಸಿ, ಭಕ್ತರಿಗೆ ನೀಡಲಾಗುತ್ತಿದೆ. ಗಂಗಾ ಸ್ನಾನ ತುಂಗಾಪಾನ ಎನ್ನುವಂತೆ ಜನರು ಕಾಶಿಗೆ ಭೇಟಿ ನೀಡಬೇಕು. ರಾಜ್ಯದಲ್ಲಿ ಜಲಕ್ಷಾಮ ಬರದಿರಲಿ ಎಂದು ಗಂಗಾಪೂಜೆ, ಗಂಗಾರತಿ ಪೂಜೆ ನೆರವೆರಿಸಲಾಗಿದೆ. ಸರ್ವೇ ಜನಃ ಸುಖಿನೋ ಭವಂತು ಮಹಾಶಿವರಾತ್ರಿ ದಿನ ಶಿವನ ಧ್ಯಾನ ಮಾಡಿ ನಿಮ್ಮ ಸಂಕಷ್ಟಗಳು ನಿವಾರಣೆಯಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಶಾಂತಿಯುತವಾಗಿ ಬಿಕ್ಕಟ್ಟು ಪರಿಹರಿಸಿಕೊಳ್ಳಿ: ಉಕ್ರೇನ್‌, ರಷ್ಯಾಗೆ ತಾಲಿಬಾನ್‌ ಸಲಹೆ

    ಮಾಲೂರು ಕೃಷ್ಣಯ್ಯ ಶೆಟ್ಟಿರವರು ಮಾತನಾಡಿ, ನಾನು ಮುಜರಾಯಿ ಸಚಿವನಾಗಿದ್ದಾಗ 2008ರಿಂದ ರಾಜ್ಯದ ಜನತೆಗೆ ಕೊಟ್ಟ ಮಾತಿನ ಪ್ರಕಾರ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕೂಡ ಹರಿದ್ವಾರದಿಂದ ಪವಿತ್ರ ಗಂಗಾಜಲವನ್ನು ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ರಾಜ್ಯದ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಗಂಗಾಜಲ ನೀಡಲಾಗುತ್ತದೆ. ಮುಜರಾಯಿ ಇಲಾಖೆಯವರು ಜಿಲ್ಲಾಧಿಕಾರಿಗಳಿಂದ ಗಂಗಾಜಲವನ್ನು ಸ್ವೀಕರಿಸಿ ಜಿಲ್ಲೆಯ ದೇವಾಲಯಗಳಿಗೆ ತಲುಪಿಸುತ್ತಾರೆ. ರಾಜ್ಯದ ಪುರಾತನ ಶಿವನ ದೇವಾಲಯಗಳಿಗೆ ಸರಿ ಸುಮಾರು 3,000 ದೇವಾಲಯಗಳಲ್ಲಿ ಶಿವನ ಮೂರ್ತಿಗೆ ಅಭಿಷೇಕ ಮತ್ತು ತೀರ್ಥ ವಿನಿಯೋಗಕ್ಕಾಗಿ ಎಲ್ಲಾ ಭಕ್ತಾದಿಗಳಿಗೆ ಪವಿತ್ರ ಗಂಗಾಜಲ ತಲುಪಿಸುವ ಉದ್ದೇಶದಿಂದ ಎಲ್ಲಾ ಜಿಲ್ಲೆಗಳಿಗೆ ಸುಮಾರು 28 ವಾಹನಗಳಲ್ಲಿ ಸರಬರಾಜು ಮಾಡಲಾಗುತ್ತದೆ. ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಶಿವಾಲಯಗಳಿಗೆ ಹಾಗೂ ಖಾಸಗಿ ಒಡೆತನದಲ್ಲಿರುವ ಶಿವನ ದೇವಸ್ಥಾನಗಳಿಗೆ ಸರಬರಾಜು ಮಾಡಲಾಗುತ್ತಿದೆ. ಹಿಂದೂವಾಗಿ ಹುಟ್ಟಿ, ಹಿಂದೂಗಳ ಸೇವೆ ಮಾಡುವ ಪುಣ್ಯ ನನ್ನದು ಎಂದರು.

  • ನಾಳೆ ಈ ವರ್ಷದ ಕೊನೆಯ ಚಂದ್ರ ಗ್ರಹಣ – ಒಳಿತು, ಕೆಡುಕುಗಳು ಏನು?

    ನಾಳೆ ಈ ವರ್ಷದ ಕೊನೆಯ ಚಂದ್ರ ಗ್ರಹಣ – ಒಳಿತು, ಕೆಡುಕುಗಳು ಏನು?

    ಬೆಂಗಳೂರು: ನಾಳೆ ಕಾರ್ತಿಕ ಗ್ರಹಣ ನಡೆಯಲಿದೆ. ವರ್ಷದ ಕೊನೆಯ ಚಂದ್ರ ಗ್ರಹಣದತ್ತ ಜನರ ಚಿತ್ತ ನೆಟ್ಟಿದೆ. ಹೀಗಾಗಿ ಈಗ ಗ್ರಹಣ ಒಳಿತೋ? ಕೆಡುಕೋ ಎಂಬುದರ ಬಗ್ಗೆ ಆನಂದ್ ಗುರೂಜಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

    ಕಾರ್ತಿಕ ಹುಣ್ಣಿಮೆ ವರ್ಷದ ಕೊನೆಯ ಗ್ರಹಣ ತುಂಬಾ ವಿಶೇಷವಾಗಿದೆ. ಕೆಲವರು ಗ್ರಹಣ ಇದೆ ಅಂತಾರೆ, ಮತ್ತೆ ಕೆಲವೊಬ್ಬರು ಇಲ್ಲ ಎನ್ನುತ್ತಾರೆ. ಮಧ್ಯಾಹ್ನವಾದರೂ ಕೂಡಾ ಚಂದ್ರಗೆ ಗ್ರಹಣ ಹಿಡಿಯಲಿದೆ ಆದರೆ ನಮ್ಮ ದೇಶದಲ್ಲಿ ಗ್ರಹಣ ಗೋಚರವಾಗುವುದಿಲ್ಲ. ಅಮೆರಿಕಾದಲ್ಲಿ ಗ್ರಹಣ ಕಾಣುತ್ತದೆ

    ಪ್ರಕೃತಿ ಮೇಲೆ ಗ್ರಹಣದ ಪರಿಣಾಮ:
    ಚಂದ್ರನಿಗೆ ಕೆಲವು ಸಂಕಷ್ಟಗಳು ಇರುತ್ತವೆ ಮತ್ತು ಪ್ರಕೃತಿಯಲ್ಲಿ ಕೆಲವೊಂದಿಷ್ಟು ವೈಪರಿತ್ಯಗಳು ಆಗಲಿದೆ. ಈ ಗ್ರಹಣವು ನೈಸರ್ಗಿಕವಾಗಿ ಅನೇಕ ಬದಲಾವಣೆಗಳನ್ನು ಉಂಟುಮಾಡುತ್ತದೆ. ಗ್ರಹಣವು ಸಮಸ್ಯೆಯನ್ನು ಹೊತ್ತು ಬರುತ್ತದೆ. ವರ್ಷದ ಕಡೆಯ ಗ್ರಹಣ ಇದಾಗಿದೆ. ಹೀಗಾಗಿ ಎಚ್ಚರಿಕೆವಹಿಸಬೇಕಾಗಿರುವುದು ಅಗತ್ಯವಾಗಿದೆ.

    ಯಾರು ಎಚ್ಚರದಲ್ಲಿರಬೇಕು?
    ಗೃಹಿಣಿಯರು ತುಂಬಾ ಎಚ್ಚರಿಕೆಯಿಂದ ಇರಬೇಕು. ಗರ್ಭಿಣಿಯರು ಹೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಗ್ರಹಣದಿಂದಾಗಿ ವಿಶೇಷ ಗುಣ ಉಳ್ಳವರು, ಪ್ರಮುಖರನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದ್ದಾರೆ.

    ಏನು ಮಾಡಬೇಕು:
    ಕೊರೋನಾ ಎರಡನೇ ಅಲೆ ಅಷ್ಟು ತೀವ್ರವಾಗಿರಲ್ಲ. ಆದರೂ ಎಚ್ಚರಿಕೆ ವಹಿಸಬೇಕು. ಯೋಗ, ಧ್ಯಾನ ಮಾಡುವುದರ ಜೊತೆ ಗ್ರಹಣದ ವೇಳೆ ಚಂದ್ರಶೇಖರ ಮತ್ತು ಶಿವನನ್ನು ಆರಾಧಿಸಬೇಕು. ಗ್ರಹಣದ ಬಳಿಕ ಶಿವ ದೇವಾಲಯಕ್ಕೆ ಹೋಗಬೇಕು.

  • ವಿಡಿಯೋ: ಆನಂದ್ ಗುರೂಜಿ ನಿವಾಸದ ಮೇಲೆ ಮಾಂಸದ ತುಂಡು, ಬಿಯರ್ ಬಾಟಲ್ ಎಸೆದ ಕಿಡಿಗೇಡಿಗಳು!

    ವಿಡಿಯೋ: ಆನಂದ್ ಗುರೂಜಿ ನಿವಾಸದ ಮೇಲೆ ಮಾಂಸದ ತುಂಡು, ಬಿಯರ್ ಬಾಟಲ್ ಎಸೆದ ಕಿಡಿಗೇಡಿಗಳು!

    ಬೆಂಗಳೂರು: ಮಹರ್ಷಿ ಆನಂದ್ ಗುರೂಜಿ ಮನೆ ಮೇಲೆ ದುಷ್ಕರ್ಮಿಗಳು ಬಿಯರ್ ಬಾಟಲಿ ಮತ್ತು ಮಾಂಸದ ತುಂಡನ್ನು ಎಸೆದಿರುವ ಘಟನೆ ನಡೆದಿದೆ.

    ಬನಶಂಕರಿ ಮೂರನೇ ಹಂತದ ಕಾಮಾಕ್ಯ ಬಡವಾಣೆಯಲ್ಲಿರುವ ಆನಂದ್ ಗುರುಜಿ ನಿವಾಸದ ಮೇಲೆ ದುಷ್ಕರ್ಮಿಗಳು ಬಿಯರ್ ಬಾಟಲಿ ಮತ್ತು ಮಾಂಸದ ತುಂಡನ್ನು ಎಸೆದಿದ್ದಾರೆ. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನೆಯ ಮೇಲೆ ಮತ್ತು ಬಾಗಲಿಗೆ ಬಿಯರ್ ಬಾಟಲಿ ಒಡೆದು ಮಾಂಸ ಎಸೆದು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯ ಆನಂದ್ ಗುರುಜಿ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಗೋವಿನ ಬಗ್ಗೆ ಆನಂದ್ ಗುರೂಜಿಯ ವಿಶೇಷ ಕಾರ್ಯಕ್ರಮ ನಾಳೆ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಹಿನ್ನಲೆಯಲ್ಲಿ ದುಷ್ಕರ್ಮಿಗಳು ಈ ರೀತಿಯ ಕೃತ್ಯವೆಸಗಿರಬಹುದು ಅಂತ ಆನಂದ್ ಗುರೂಜಿ ಶಂಕೆ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    https://www.youtube.com/watch?v=gwXEy-dY6SA&feature=youtu.be