Tag: ಆನಂದ್ ಕುಮಾರ್

  • ವಿಜಯ್ ನಿರ್ದೇಶನದ ಚಿತ್ರದ ಮೂಲಕ ಹೊಸ ಹೀರೋ ಎಂಟ್ರಿ

    ವಿಜಯ್ ನಿರ್ದೇಶನದ ಚಿತ್ರದ ಮೂಲಕ ಹೊಸ ಹೀರೋ ಎಂಟ್ರಿ

    ಲ್ಫಾ ಮೆನ್ ಲವ್ ವೈಲೆನ್ಸ್’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಹೊಸ ಹೀರೋ ಹೇಮಂತ್ ಕಮಾರ್  (Hemanth Kumar)ಎಂಟ್ರಿಕೊಟ್ಟಿದ್ದಾರೆ. ಪಕ್ಕಾ ಮಾಸ್ ಸನಿಮಾ ಮೂಲಕ ಹೇಮಂತ್ ಕನ್ನಡ ಚಿತ್ರಾಭಿಮಾನಿಗಳ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಇಂದು ಶಿವರಾತ್ರಿ ಪ್ರಯುಕ್ತ ಆಲ್ಫಾ ಮೆನ್ ಲವ್ ವೈಲೆನ್ಸ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದೆ ಸಿನಿಮಾತಂಡ. ‘ಆಲ್ಫಾ ಮೆನ್ ಲವ್ ವೈಲೆನ್ಸ್’ ಆಕ್ಷನ್ ಸಿನಿಮಾ ಜೊತೆಗೆ ಅಪ್ಪ ಮತ್ತು ಮಗನ ಸ್ಟ್ರಾಂಗ್ ಎಮೋಷನ್ ಕೂಡ ಹೈಲೆಟ್.

    ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಹೊಸ ಹೀರೋನಾ ಪರಿಚಯ ಮಾಡುತ್ತಿದ್ದಾರೆ ನಿರ್ದೇಶಕ ವಿಜಯ್. ಈ ಮೊದಲು  ಗೀತ ಮತ್ತು ಹೊಯ್ಸಳ ಸಿನಿಮಾಗಳನ್ನು ಮಾಡಿ ಯಶಸ್ಸು ಕಂಡಿರುವ ನಿರ್ದೇಶಕ ವಿಜಯ್  (Vijay) ನಿರ್ದೇಶನದ 3ನೇ ಸಿನಿಮಾವಿದು.

    ಸದ್ಯ ಸಿನಿಮಾದ ಮೊದಲ ಲುಕ್ ರಿಲೀಸ್ ಆಗಿದ್ದು ನಾಯಕ ಹೇಮಂತ್ ರಗಡ್ ಗೆಟಪ್ ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ಸಿನಿಮಾದಲ್ಲಿ ಆಕ್ಷನ್ ಮತ್ತು ಕ್ರೈಮ್ ನ ನಭಯಾನಕಥೆ ಎಷ್ಟಿರುತ್ತೆ ಎನ್ನುವುದು ಪೋಸ್ಟರ್ ನೋಡಿದ್ರೆ ಗೊತ್ತಾಗುತ್ತಿದೆ.  ಇನ್ನು ಈ ಸಿನಿಮಾದಲ್ಲಿ ಮೂರು ಪಾತ್ರಗಳು ಡೋಮಿನೇಟ್ ಮಾಡುವುದರಿಂದ ಸಿನಿಮಾಗೆ ಆಲ್ಫಾ ಎಂದು ಟೈಟಲ್ ಇಡಲಾಗಿದೆ ಎನ್ನುತ್ತಾರೆ ನಿರ್ದೇಶಕ ವಿಜಯ್. ಆಲ್ಫಾ ಟೈಟಲ್ ಜೊತೆಗೆ ಮೆನ್ ಲವ್ ವೈಲನ್ಸ್ ಸಬ್ ಟೈಟಲ್ ಕೂಡ ಗಮನ ಸೆಳೆಯುತ್ತಿದೆ..

    ಈ ಸಿನಿಮಾ ಮೂಲಕ ಆನಂದ್ ಕುಮಾರ್ (Anand Kumar) ನಿರ್ಮಾಪಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ‘ಎಲ್ ಎ’ ಬ್ಯಾನರ್ ನಲ್ಲಿ ಆಲ್ಫಾ ಸಿನಿಮಾ ಮೂಡಿಬರುತ್ತಿದೆ. ಇನ್ನು ಹೀರೋ ಆಗಿ ಎಂಟ್ರಿ ಕೊಡುತ್ತಿರುವ ನಾಯಕ ಹೇಮಂತ್ ಕುಮಾರ್ ಈ ಸಿನಿಮಾಗಾಗಿ ಭರ್ಜರಿ ತಯಾರಿಮಾಡಿಕೊಂಡು ಬಂದಿದ್ದಾರೆ. ನಿರ್ದೇಶಕ ಮತ್ತು ನಟ ರಾಘು ಶಿವಮೊಗ್ಗ ಅವರ ಬಳಿ ಆಕ್ಟಿಂಗ್ ತಯಾರಿ ನಡೆಸಿದ್ದಾರೆ. ಅರ್ಜುನ್ ಅವರ ಜೊತೆ ಫೈಟ್ ಅಭ್ಯಾಸ ಮಾಡಿದ್ರೆ, ಭೂಷಣ್ ಅವರ ಪತ್ನಿ ಬಳಿ ಡಾನ್ಸ್ ಕಲಿತಿದ್ದಾರೆ. ನಟನೆ, ಫೈಟ್, ಡಾನ್ಸ್ ಜೊತೆಗೆ ಮಾರ್ಶಲ್ ಆರ್ಟ್ ಕಲಿತಿದ್ದಾರೆ ನಾಯಕ ಹೇಮಂತ್.

    ಈ ಸಿನಿಮಾದಲ್ಲಿ ಕಾರ್ತಿಕ್ ಅವರ ಡಿಒಪಿ, ಅನೂಪ್ ಸೀಳಿನ್ ಅವರ ಸಂಗೀತ ಮತ್ತು ಮಾಸ್ತಿ ಅವರ ಡೈಲಾಗ್ ಇರಲಿದೆ. ಹೇಮಂತ್ ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ, ಉಳಿದಂತೆ ಪಾತ್ರವರ್ಗ ಏನೆಲ್ಲ ಇರಲಿದೆ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.

  • ಸೂಪರ್ 30 ಆನಂದ್‍ಗೆ 50 ಸಾವಿರ ರೂ. ದಂಡ

    ಸೂಪರ್ 30 ಆನಂದ್‍ಗೆ 50 ಸಾವಿರ ರೂ. ದಂಡ

    – ಗುವಾಹಟಿ ಹೈಕೋರ್ಟ್ ಆದೇಶ
    – ವಿಚಾರಣೆಗೆ ಹಾಜರಾಗದ್ದಕ್ಕೆ ದಂಡ

    ಗುವಾಹಟಿ: ಸೂಪರ್ 30 ಸ್ಥಾಪಕ ಆನಂದ್ ಕುಮಾರ್ ಅವರಿಗೆ ಅಸ್ಸಾಂನ ಗುವಾಹಟಿ ಹೈಕೋರ್ಟ್ 50 ಸಾವಿರ ರೂ. ದಂಡ ವಿಧಿಸಿದೆ.

    ಐಐಟಿ-ಗುವಾಹಟಿಯ ನಾಲ್ಕು ವಿದ್ಯಾರ್ಥಿಗಳು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಸಂಬಂಧಿಸಿದಂತೆ ಇಂದು ಗುವಾಹಟಿ ಹೈಕೋರ್ಟಿನಲ್ಲಿ ವಿಚಾರಣೆ ಇತ್ತು. ಆದರೆ ಆನಂದ್ ಕುಮಾರ್ ಅವರು ಕೋರ್ಟಿಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರಿಗೆ 50 ಸಾವಿರ ರೂ. ದಂಡ ವಿಧಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಅಜಯ್ ಲಾಂಬಾ ಮತ್ತು ನ್ಯಾಯಮೂರ್ತಿ ಅಚಿಂತ್ಯ ಮಲ್ಲಾ ಬುಜೋರ್ ಬರುವ ಅವರನ್ನೊಳಗೊಂಡ ನ್ಯಾಯಪೀಠವು ಈ ದಂಡ ವಿಧಿಸಿದೆ. ಹಾಗೆಯೇ ನವೆಂಬರ್ 28ರಂದು ಮುಂದಿನ ವಿಚಾರಣೆಯ ದಿನಾಂಕವನ್ನು ನಿಗದಿಗೊಳಿಸಲಾಗಿದೆ.

    ನವೆಂಬರ್ 19 ರಂದು ಗುವಾಹಟಿ ಹೈಕೋರ್ಟ್ ಆನಂದ್ ಕುಮಾರ್ ಅವರನ್ನು ವೈಯಕ್ತಿಕವಾಗಿ ನವೆಂಬರ್ 26 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಹಿಂದಿನ ಆದೇಶದ ಹೊರತಾಗಿಯೂ ಕುಮಾರ್ ವಿಚಾರಣೆಗೆ ಹಾಜರಾಗಲಿಲ್ಲ. ಇದು ನ್ಯಾಯಾಧೀಶರ ಅಸಮಾಧಾನಕ್ಕೆ ಕಾರಣವಾಗಿದ್ದು, ಕೋರ್ಟಿಗೆ ಹಾಜರಾಗಿದ್ದ ಐದು ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಆನಂದ್ ಅವರು ತಲಾ 10 ಸಾವಿರ ರೂ.ಗಳನ್ನು ಪಾವತಿಸುವಂತೆ ನಿರ್ದೇಶಿಸಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.

    ಸೂಪರ್ 30 ಪಾಟ್ನಾ ಮೂಲದ ಸಂಸ್ಥೆಯಾಗಿದ್ದು, ಇಲ್ಲಿ ಆನಂದ್ ಕುಮಾರ್ ಅವರು ಬಡ ವಿದ್ಯಾರ್ಥಿಗಳನ್ನು ಐಐಟಿ ಪ್ರವೇಶ ಪರೀಕ್ಷೆಗೆ ಸಿದ್ಧಪಡಿಸುತ್ತಾರೆ. ಆದರೆ ಆನಂದ್ ಕುಮಾರ್ ಅವರು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದಾರೆ ಎಂಬುದು ತಪ್ಪು ಕಲ್ಪನೆ. ಅವರು 2008 ಬಳಿಕ ಸೂಪರ್ 30 ನಡೆಸುತ್ತಿಲ್ಲ ಎಂದು ಆರೋಪಿಸಿ ಐಐಟಿ ಗುವಾಹಟಿಯ ನಾಲ್ಕು ವಿದ್ಯಾರ್ಥಿಗಳು 2018ರ ಸೆಪ್ಟೆಂಬರ್ ನಲ್ಲಿ ಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿದ್ದರು.

    ವಿದ್ಯಾರ್ಥಿಗಳ ಅರ್ಜಿ ಆಧಾರದ ಮೇರೆಗೆ ಕೋರ್ಟ್ ಆನಂದ್ ಕುಮಾರ್ ಮತ್ತು ಹಿರಿಯ ಐಪಿಎಸ್ ಅಧಿಕಾರಿ ಅಭಯಾನಂದ್ ಅವರಿಗೆ 2018ರ ಸೆಪ್ಟೆಂಬರ್ ನಲ್ಲಿ ನೋಟಿಸ್ ನೀಡಿತ್ತು. ಯಾಕೆಂದರೆ 2002ರಲ್ಲಿ ಸೂಪರ್ 30 ಸಂಸ್ಥೆಯನ್ನು ಪ್ರಾರಂಭಿಸಿದಾಗ ಅಭಯಾನಂದ್ ಅವರು ಆನಂದ್ ಅವರಿಗೆ ಸಾಥ್ ಕೊಟ್ಟಿದ್ದರು.

    ಈ ನೋಟಿಸ್‍ಗೆ ಆನಂದ್ ಅವರು ಉತ್ತರಿಸಿ, ಕೋರ್ಟಿಗೆ ಹಾಜರಾಗದಿದ್ದರೂ ಅಭಯಾನಂದ್ ಅವರು ಈ ವರ್ಷದ ಜನವರಿಯಲ್ಲಿ ಅಫಿಡವಿಟ್ ಸಲ್ಲಿಸಿದ್ದರು. ಅದರಲ್ಲಿ ಮೊದಲು ಸೂಪರ್ 30 ನಡೆಯುತ್ತಿತ್ತು ಎನ್ನುವ ಬಗ್ಗೆ ಮಾಹಿತಿ ಇದೆ. ಆದರೆ 2008ರ ನಂತರ ಸೂಪರ್ 30 ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎನ್ನುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಕೋರ್ಟಿಗೆ ತಿಳಿಸಿದ್ದರು.

    2008ರ ನಂತರ ಆನಂದ್ ಕುಮಾರ್ ಯಾವುದೇ ಸೂಪರ್ 30 ತರಗತಿಗಳನ್ನು ನಡೆಸುತ್ತಿಲ್ಲ ಎಂಬುದು ಅರ್ಜಿದಾರ ವಿದ್ಯಾರ್ಥಿಗಳ ಆರೋಪವಾಗಿದೆ. ಅಲ್ಲದೆ ಸೂಪರ್ 30ಗೆ ಸೇರ್ಪಡೆಗೊಳ್ಳಲು ಬಡ ವಿದ್ಯಾರ್ಥಿಗಳು ಪಾಟ್ನಾಗೆ ಬರುತ್ತಾರೆ. ಆದರೆ ಅವರನ್ನು ಪಾಟ್ನಾದಲ್ಲಿರುವ ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್ ಕೋಚಿಂಗ್ ಇನ್‍ಸ್ಟಿಟ್ಯೂಟ್‍ಗೆ 33 ಸಾವಿರ ಶುಲ್ಕ ಪಡೆದು ಸೇರಿಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು.

    ಅಷ್ಟೇ ಅಲ್ಲದೆ ಈ ಇನ್‍ಸ್ಟಿಟ್ಯೂಟ್‍ನ ಕೆಲವು ವಿದ್ಯಾರ್ಥಿಗಳೊಂದಿಗೆ ಪ್ರತಿ ವರ್ಷ ಐಐಟಿ-ಜೆಇಇ ಫಲಿತಾಂಶಗಳು ಪ್ರಕಟವಾದ ನಂತರ ಆನಂದ್ ಕುಮಾರ್ ಮಾಧ್ಯಮಗಳ ಮುಂದೆ ಬರುತ್ತಾರೆ. ಪರೀಕ್ಷೆಯನ್ನು ಪಾಸ್ ಆದ ಸೂಪರ್ 30 ವಿದ್ಯಾರ್ಥಿಗಳು ಅವರೇ ಎಂದು ಹೇಳಿಕೊಳ್ಳುತ್ತಾರೆ. ಕಳೆದ ವರ್ಷ ಕೂಡ ಸೂಪರ್ 30ರ 26 ವಿದ್ಯಾರ್ಥಿಗಳು ಐಐಟಿ-ಜೆಇಇ ಪರೀಕ್ಷೆ ಪಾಸಾಗಿದ್ದಾರೆ ಎಂದು ಆನಂದ್ ಹೇಳಿದ್ದಾರೆ. ಆದರೆ ವಿದ್ಯಾರ್ಥಿಗಳ ಹೆಸರನ್ನು ಮಾತ್ರ ಅವರು ಬಿಡುಗಡೆ ಮಾಡಿಲ್ಲ ಎಂದು ದೂರಿದ್ದರು.