ಬಾಲಿವುಡ್ (Bollywood)ನ ಹೆಸರಾಂತ ನಟಿ ಸೋನಂ ಕಪೂರ್ ಅಚ್ಚರಿಯ ಸಂಗತಿಯೊಂದನ್ನು ಬಹಿರಂಗಗೊಳಿಸಿದ್ದಾರೆ. ತಾಯಿಯಾದ ನಂತರ ಅವರ ತೂಕ ಹೆಚ್ಚಾಗಿತ್ತು. ಈಗ 20 ಕೆಜಿ ತೂಕವನ್ನು ಇಳಿಸಿಕೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ಮೂಲಕ ಮತ್ತೆ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಕುರಿತು ಸುಳಿವು ನೀಡಿದ್ದಾರೆ.

ಮೊನ್ನೆಯಷ್ಟೇ ಸೋನಂ ಕಪೂರ್ (Sonam Kapoor) ದಾಂಪತ್ಯ ಜೀವನಕ್ಕೆ ಕಾಲಿಟ್ಟು 5 ವರ್ಷಗಳಾಗಿವೆ. ಈ ಖುಷಿಯ ಸಂದರ್ಭದ ವೇಳೆ ಮೊದಲ ಬಾರಿಗೆ ಮಗ ವಾಯು (Vayu) ಮುಖವನ್ನ ನಟಿ ರಿವೀಲ್ ಮಾಡುವ ಮೂಲಕ ಅಭಿಮಾನಿಗಳ ಖುಷಿ ಇಮ್ಮಡಿಗೊಳಿಸಿದ್ದರು.

ಇಷ್ಟು ದಿನ ಮಗ ವಾಯು ಮುಖ ಎಲ್ಲೂ ಕಾಣದಂತೆ ಕ್ಯಾಮೆರಾ ಕಣ್ಣಿಂದ ದೂರ ಇಟ್ಟಿದ್ದರು ಸೋನಂ. ಆಲಿಯಾ ಭಟ್ ಅವರಂತೆಯೇ ಮಗನ ಫೋಟೋ ಎಲ್ಲೂ ರಿವೀಲ್ ಮಾಡಿರಲಿಲ್ಲ. ತಮ್ಮ ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಗ ವಾಯು ಫೋಟೋ ರಿವೀಲ್ ಮಾಡಿದ್ದರು. ಅಭಿಮಾನಿಗಳಿಗೆ ಸೋನಂ ಮಗುವಿಗೆ ಶುಭ ಹಾರೈಸಿದ್ದರು.
‘ಸಾವರಿಯಾ’ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ಸೋನಂ ಕಪೂರ್ ಅವರು ‘ಐ ಹೇಟ್ ಲವ್ ಸ್ಟೋರಿ’ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. 2018ರಲ್ಲಿ ಉದ್ಯಮಿ ಆನಂದ್ ಅಹುಜಾ (Anand Ahuja) ಜೊತೆ ಸೋನಂ ಮದುವೆಯಾದರು. ಇದೀಗ ಮಗ ವಾಯು ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.












ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟಿ ಸೋನಮ್ ಕಪೂರ್, ಮೇ ೮ರಂದು 2018ರಲ್ಲಿ ಆನಂದ್ ಅಹುಜಾ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ತಾಯ್ತನದ ಖುಷಿಯಲ್ಲಿರುವ ಸೋನಮ್‌ಗೆ ಬೇಬಿ ಶವರ್ ಕಾರ್ಯಕ್ರಮ ಮಾಡಲು ತಂದೆ ಅನಿಲ್ ಕಪೂರ್ ದಂಪತಿ ಭರ್ಜರಿ ಪ್ಲ್ಯಾನ್ ಮಾಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಅದ್ದೂರಿಯಾಗಿ ಈವೆಂಟ್ ಮಾಡಲು ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಇದನ್ನೂ ಓದಿ:
2018ರಲ್ಲಿ ಸೋನಮ್ ಅವರ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿದ್ದರು. ಈಗ ಬೇಬಿ ಶವರ್ ಕಾರ್ಯಕ್ರಮವನ್ನ ಇನ್ನು ಗ್ರ್ಯಾಂಡ್ ಆಗಿ ಆಯೋಜಿಸಲು ಭರ್ಜರಿ ತಯಾರಿ ನಡೆಯುತ್ತಿದೆ. ವಿದೇಶದಲ್ಲಿ ಪತಿ ಜತೆ ನೆಲೆಸಿರುವ ಸೋನಮ್‌ಗೆ, ಇತ್ತೀಚೆಗಷ್ಟೇ ಪತಿ ಆನಂದ್ ಅಹುಜಾ ಕುಟುಂಬದವರು ಬೇಬಿ ಶವರ್ ಕಾರ್ಯಕ್ರಮ ಮಾಡಲಾಗಿತ್ತು.










ಪ್ರಸ್ತುತ ಸೋನಂ ಮತ್ತು ಆನಂದ್ ಮುಂಬೈನಲ್ಲಿದ್ದಾರೆ. ಸೋನಂ ಆನಂದ್ ಅವರ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಆಕೆ ತನ್ನ ತಂದೆ ಅನಿಲ್ ಕಪೂರ್ ಮನೆಯಲ್ಲಿದ್ದಾರೆ.