Tag: ಆನಂದ್

  • ದೇವರಕೊಂಡ ಸಹೋದರನ ಸಿನಿಮಾಗೆ ಕ್ಲ್ಯಾಪ್- ಶುಭ ಕೋರಿದ ರಶ್ಮಿಕಾ

    ದೇವರಕೊಂಡ ಸಹೋದರನ ಸಿನಿಮಾಗೆ ಕ್ಲ್ಯಾಪ್- ಶುಭ ಕೋರಿದ ರಶ್ಮಿಕಾ

    ನಂದ್ ದೇವರಕೊಂಡ ಮತ್ತು ವೈಷ್ಣವಿ ಚೈತನ್ಯ (Vaishnavi Chaitanya) ಮತ್ತೆ ಹೊಸ ಸಿನಿಮಾಗಾಗಿ ಒಂದಾಗಿದ್ದಾರೆ. ‘ಬೇಬಿ’ (Baby) ಜೋಡಿಯ ಹೊಸ ಚಿತ್ರಕ್ಕೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕ್ಲ್ಯಾಪ್ ಮಾಡುವ ಮೂಲಕ ತಂಡಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ:ರೆಡ್ಡಿ ಮಗನ ಸಿನಿಮಾದಲ್ಲಿ ಶ್ರೀಲೀಲಾ- 3 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ನಟಿ

    ವಿಜಯ್ ದೇವರಕೊಂಡ (Vijay Devarakonda) ಸಹೋದರ ಆನಂದ್ (Anand Devarakonda) ಸಿನಿಮಾಗೆ ರಶ್ಮಿಕಾ ಸಾಥ್ ನೀಡಿದ್ದಾರೆ. ಆನಂದ್ ಮತ್ತು ವೈಷ್ಣವಿ ನಟನೆಯ ಹೊಸ ಸಿನಿಮಾದ ಮುಹೂರ್ತ ಇಂದು (ಮೇ 15) ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಈ ಸಿನಿಮಾಗೆ ರಶ್ಮಿಕಾ ಕ್ಲ್ಯಾಪ್ ಮಾಡಿ ಟೀಮ್‌ಗೆ ವಿಶ್ ಮಾಡಿದ್ದಾರೆ.‌ ಇದನ್ನೂ ಓದಿ:ನನ್ನನ್ನು ಜಗಲಿಯಲ್ಲಿ ಬಿಟ್ಟು ಮನೆಗೆ ಬೀಗ ಹಾಕ್ಕೊಂಡು ಬಿಗ್ ಬಾಸ್‌ಗೆ ಹೋಗಿದ್ದಳು- ಚೈತ್ರಾ ಕುಂದಾಪುರ ತಂದೆ ಕಿಡಿ

    2023ರಲ್ಲಿ ತೆರೆಕಂಡ ‘ಬೇಬಿ’ ಸಿನಿಮಾ ಸೂಪರ್ ಸಕ್ಸಸ್ ಕಂಡಿತ್ತು. ಮತ್ತೆ ಅದೇ ಜೋಡಿ ಜೊತೆಯಾಗಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಈ ಸಿನಿಮಾವನ್ನು ಆದಿತ್ಯ ಹಾಸನ್ ನಿರ್ದೇಶನ ಮಾಡಿದ್ದಾರೆ. ಸಿತಾರಾ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

    ‘ಬೇಬಿ’ ಚಿತ್ರದ ಮೂಲಕ ತ್ರಿಕೋನ ಪ್ರೇಮಕಥೆ ತೋರಿಸಿದ್ದರು. ಆನಂದ್ ದೇವರಕೊಂಡ ಮತ್ತು ವೈಷ್ಣವಿ ಹೊಸ ಸಿನಿಮಾ ಯಾವ ಜಾನರ್ ಕಥೆ ಹೇಳಲು ಹೊರಟಿದ್ದಾರೆ ಎಂಬುದನ್ನು ನೋಡಲು ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ.

  • ಸುಕೇಶ್-ಜಾಕ್ವೆಲಿನ್ ಲವ್ ಸ್ಟೋರಿ ಸಿನಿಮಾ : ಏನೆಲ್ಲ ವಿಷಯಗಳಿವೆ ಗೊತ್ತಾ?

    ಸುಕೇಶ್-ಜಾಕ್ವೆಲಿನ್ ಲವ್ ಸ್ಟೋರಿ ಸಿನಿಮಾ : ಏನೆಲ್ಲ ವಿಷಯಗಳಿವೆ ಗೊತ್ತಾ?

    ಹುಕೋಟಿ ವಂಚನೆ ಆರೋಪದಲ್ಲಿ ಜೈಲು ಪಾಲಾಗಿರುವ, ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್‌ (Sukesh Chandrasekhar) ಮತ್ತು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಲವ್‌ಸ್ಟೋರಿ (Love Story) ಕುರಿತು ಸಿನಿಮಾ (Cinema) ಮಾಡುವುದಾಗಿ ಹಿಂದಿ ನಿರ್ದೇಶಕ ಆನಂದ್ ಎನ್ನುವವರು ಘೋಷಿಸಿದ್ದಾರೆ. ಈ ಸಂಬಂಧ ಅವರು ಜೈಲಿನಲ್ಲಿರುವ ಸುಕೇಶ್ ಅವರನ್ನೂ ಭೇಟಿ ಮಾಡಿ ಬಂದಿದ್ದಾರೆ.

    ಸುಕೇಶ್ ಮತ್ತು ಜಾಕ್ವೆಲಿನ್ ಡೇಟಿಂಗ್ ವಿಚಾರ ಹಲವು ತಿಂಗಳಿಂದ ನಡೆಯುತ್ತಿದ್ದರೂ, ಅದು ಬೆಳಕಿಗೆ ಬಂದಿದ್ದು ಸುಕೇಶ್ ಬಂಧನವಾದ ನಂತರ. ವಂಚನೆಯ ಹಣವನ್ನು ಈತ ಯಾರಿಗೆಲ್ಲ ಖರ್ಚು ಮಾಡಿದ್ದಾನೆ ಎಂದು ತನಿಖೆಗೆ ಇಳಿದಾಗ ಅದರಲ್ಲಿ ಜಾಕ್ವೆಲಿನ್ ಹೆಸರು ಪತ್ತೆಯಾಗಿತ್ತು. ಹಲವು ದುಬಾರಿ ವಸ್ತುಗಳನ್ನು ಈಕೆಗೆ ಸುಕೇಶ್ ನೀಡಿದ್ದಾನೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದರು. ಇದನ್ನೂ ಓದಿ: ಪವನ್ ಕಲ್ಯಾಣ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಆರ್.ಚಂದ್ರು

    ತಾನು ಸುಕೇಶ್‌ನನ್ನು ಭೇಟಿಯಾಗಿದ್ದು ಕಡಿಮೆ. ಆತ ನನಗೇನೂ ಕೊಡಿಸಿಲ್ಲ ಎಂದು ಜಾಕ್ವೆಲಿನ್ ಹೇಳಿಕೊಂಡಿದ್ದರೂ, ತಾನು ಆತನನ್ನು ಪ್ರೀತಿಸುತ್ತಿಲ್ಲ ಎಂದು ಪದೇ ಪದೇ ಹೇಳಿಕೆ ಕೊಡುತ್ತಿದ್ದರೂ, ಸುಕೇಶ್ ಮಾತ್ರ ಅದನ್ನು ಒಪ್ಪುತ್ತಿಲ್ಲ. ಈಗಲೂ ಜಾಕ್ವೆಲಿನ್‌ಳನ್ನು ಪ್ರೀತಿಸುತ್ತಿದ್ದೇನೆ ಎಂದು ಜೈಲಿನಿಂದಲೇ ಸಂದೇಶ ಕಳುಹಿಸುತ್ತಿದ್ದಾನೆ. ಅಲ್ಲದೇ ಪ್ರೇಮಿಗಳ ದಿನದಂದು ಅವನು ವಿಶ್ ಮಾಡಿದ್ದ.

    ಸುಕೇಶ್ ಮತ್ತು ಜಾಕ್ವೆಲಿನ್ ಪ್ರೇಮ ಎಂಥದ್ದು, ಇಬ್ಬರೂ ಪ್ರೀತಿಸುತ್ತಿದ್ದರಾ? ಉಡುಗೊರೆ ವಿನಿಮಯದ ಕಥೆ ಏನು? ಹೀಗೆ ಹತ್ತು ಹಲವು ಸಂಗತಿಗಳನ್ನು ಇಟ್ಟುಕೊಂಡು ಆನಂದ್ ಎನ್ನುವವರು ಹಿಂದಿಯಲ್ಲಿ ಸಿನಿಮಾ ಮಾಡಲಿದ್ದಾರಂತೆ. ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸ ನಡೆದಿದೆ ಎಂದು ಹೇಳಲಾಗುತ್ತಿದೆ.

  • ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸೋನಂ ಕಪೂರ್: ತಾತನಾದ ಅನಿಲ್ ಕಪೂರ್

    ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸೋನಂ ಕಪೂರ್: ತಾತನಾದ ಅನಿಲ್ ಕಪೂರ್

    ಬಾಲಿವುಡ್ ನಟಿ ಸೋನಂ ಕಪೂರ್ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ಸೋನಂ ಕಪೂರ್ ಅವರೇ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ನಾನು ಗಂಡು ಮಗುವಿನ ತಾಯಿಯಾಗಿದ್ದೇನೆ. ನನ್ನ ಮಡಿಲಲ್ಲಿ ಪುಟ್ಟ ಕಂದ ಆಡುತ್ತಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಸೋನಂ ತಾಯಿ ಸುನೀತಾ ಕಪೂರ್ ಕೂಡ ಮಗಳಿಗೆ ಅಭಿನಂದಿಸಿ ಇನ್ಸ್ಟಾದಲ್ಲಿ ಪೋಸ್ಟ್ ಹಾಕಿದ್ದಾರೆ.

    ನಾವು ನಮ್ಮ ಸುಂದರ ಕುಟುಂಬಕ್ಕೆ ಗಂಡು ಮಗುವನ್ನು ಹೃದಯದಿಂದ ಸ್ವಾಗತಿಸಿದ್ದೇವೆ. ಈ ಪ್ರಯಾಣದಲ್ಲಿ ನಮ್ಮ ಬೆಂಬಲಕ್ಕೆ ನಿಂತ ವೈದ್ಯರಿಗೆ, ದಾದಿಯರಿಗೆ, ಸ್ನೇಹಿತರಿಗೆ ಮತ್ತು ಕುಟುಂಬದ ಎಲ್ಲ ಸದಸ್ಯರಿಗೂ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಸೋನಂ ಮತ್ತು ಪತಿ ಆನಂದ್ ದಂಪತಿ ಕೂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೂಲಕ ಅನಿಲ್ ಕಪೂರ್ ತಾತನಾಗಿರುವ ಕುರಿತು ಸಂತಸ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:ತನ್ನನ್ನು ತಾನೇ ಮದುವೆಯಾದ ಕಿರುತೆರೆ ನಟಿ ಕಾನಿಷ್ಕಾ ಸೋನಿ

    ಸೋನಂ ಪ್ರೆಗ್ನೆಂಟ್ ಆಗುತ್ತಿದ್ದಂತೆಯೇ ಅದನ್ನು ಬೇಬಿ ಬಂಪ್ ಫೋಟೋದ ಮೂಲಕ ತಿಳಿಸಿದ್ದರು. ಹಲವು ಬಾರಿ ಬೇಬಿ ಬಂಪ್ ಫೋಟೋಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಲ್ಲದೇ, ಅನಿಲ್ ಕಪೂರ್ ಕೂಡ ತಾವು ತಾತನಾಗುತ್ತಿರುವ ವಿಷಯವನ್ನೂ ಸಂಭ್ರಮದಿಂದಲೇ ಹೇಳಿಕೊಂಡಿದ್ದರು. ಇದೀಗ ಸೋನಂ ಗಂಡು ಮಗುವಿನ ತಾಯಿ ಆಗುವ ಮೂಲಕ ಕುಟುಂಬದ ಸಂತಸವನ್ನು ಇಮ್ಮಡಿಗೊಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಪುಷ್ಪ ಪಾರ್ಟ್ 10’ ಸಿನಿಮಾಗೆ ನಟ ಮಾಸ್ಟರ್ ಆನಂದ್ ಮಗಳು ಹೀರೋಯಿನ್

    ‘ಪುಷ್ಪ ಪಾರ್ಟ್ 10’ ಸಿನಿಮಾಗೆ ನಟ ಮಾಸ್ಟರ್ ಆನಂದ್ ಮಗಳು ಹೀರೋಯಿನ್

    ಭಾರತೀಯ ಸಿನಿಮಾ ರಂಗದಲ್ಲಿ ಎಲ್ಲೆಲ್ಲೂ ‘ಪುಷ್ಪ’ ಚಿತ್ರದ್ದೇ ಹಾವಳಿ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ಈ ಸಿನಿಮಾ ಚಿತ್ರಕಥೆಗಿಂತಲೂ ಹೆಚ್ಚು ಫೇಮಸ್ ಆಗಿದ್ದ ಅದರ ಹಾಡುಗಳ ಮೂಲಕ. ಅದರಲ್ಲೂ ‘ಸಾಮಿ.. ಸಾಮಿ’ ಸಾಂಗ್ ದಾಖಲೆಯ ರೀತಿಯಲ್ಲಿ ರೀಚ್ ಆಯಿತು. ರೀಲ್ ನಲ್ಲಂತೂ ಮಿಲಿಯನ್ ಗಟ್ಟಲೇ ವಿಡಿಯೋ ಹರಿದಾಡಿತು. ಹೀಗಿತ್ತು ಚಿತ್ರದ ಹವಾ. ಇದನ್ನೂ ಓದಿ : ಪುನೀತ್ ಹುಟ್ಟುಹಬ್ಬಕ್ಕೆ ಹೊಸ ಸಾಂಗ್: ಒಂದಾಯಿತು ‘ಗೊಂಬೆ ಹೇಳತೈತೆ’ ಕಾಂಬಿನೇಷನ್

    ‘ಪುಷ್ಪ’ ಗೆಲುವಿನ ಹಿನ್ನೆಲೆಯಲ್ಲಿ ಶೀಘ್ರವಾಗಿ  ‘ಪುಷ್ಪ 2’ ಚಿತ್ರ ಕೂಡ ಸೆಟ್ಟೇರಲಿದೆ ಎನ್ನುವ ಮಾಹಿತಿ ಇದೆ. ಅದಕ್ಕೂ ಮೊದಲು ಕನ್ನಡದಲ್ಲಿ ‘ಪುಷ್ಪ 10’ ಸುದ್ದಿ ಹರಿದಾಡುತ್ತಿದೆ. ಅದೇನು ಅಂತ ನಟ ಸೃಜನ್ ಲೋಕೇಶ್ ಹೇಳಿದ್ದಾರೆ ಓದಿ. ಇದನ್ನೂ ಓದಿ : ಕಿರುತೆರೆಯ ನಟ, ನಿರ್ದೇಶಕ ರವಿಕಿರಣ್ ಪುತ್ರ ಸಿನಿಮಾಗೆ ರಂಗಕ್ಕೆ ಎಂಟ್ರಿ

    ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಮ್ಮಮ್ಮ ಸೂಪರ್ ಸ್ಟಾರ್’ ಶೋನಲ್ಲಿ ತನ್ನ ಪಟಾಕಿ ಮಾತುಗಳ ಮೂಲಕವೇ ಫೇಮಸ್ ಆಗಿರುವ ಚೂಟಿ ಹುಡುಗಿ ವಂಶಿಕಾ. ಈಕೆ ನಟ ಮಾಸ್ಟರ್ ಆನಂದ್ ಅವರ ಪುತ್ರಿ. ಈ ಶೋನಲ್ಲಿ ಜಡ್ಜ್ ಆಗಿದ್ದಾರೆ ನಟ ಸೃಜನ್ ಲೋಕೇಶ್. ಈ ಶೋನಲ್ಲೇ ‘ಪುಷ್ಪ 10’ ಸಿನಿಮಾದ ಕುರಿತು ಪ್ರಸ್ತಾಪ ಆಗಿದೆ. ಇದನ್ನೂ ಓದಿ : ಪೂಜಾ ಹೆಗ್ಡೆ ಅವಕಾಶ ಕಿತ್ತುಕೊಂಡ ರಶ್ಮಿಕಾ ಮಂದಣ್ಣ

    ಈ ವಾರದ ಎಪಿಸೋಡ್ ನಲ್ಲಿ ವಂಶಿಕಾ ‘ಪುಷ್ಪ’ ಸಿನಿಮಾದ ಫೇಮಸ್ ಸಾಂಗ್ ‘ಸಾಮಿ.. ಸಾಮಿ..’ಗೆ ಡಾನ್ಸ್ ಮಾಡಿದರು. ಅದು ಥೇಟ್ ರಶ್ಮಿಕಾ ಮಂದಣ್ಣ ಹಾಕಿರುವ ರೀತಿಯಲ್ಲೇ ಸ್ಟೆಪ್ ಹಾಕಿದರು. ಅದನ್ನು ಕಂಡ ಸೃಜನ್ ಲೋಕೇಶ್ ‘ವಂಶಿಕಾ.. ಪುಷ್ಪ 10 ನಲ್ಲಿ ನೀನೇ ಹೀರೋಯಿನ್, ಫಿಕ್ಸ್’ ಎಂದು ಕೊಂಡಾಡಿದರು. ಎಲ್ಲರೂ ಚಪ್ಪಾಳೆ ತಟ್ಟಿ ಆ ಮಗುವಿಗೆ ಪ್ರೋತ್ಸಾಹ ನೀಡಿದ್ದು ವಿಶೇಷವಾಗಿತ್ತು. ಇದನ್ನೂ ಓದಿ : ಚಕ್ಡಾ ಎಕ್ಸ್ ಪ್ರೆಸ್ ಸಿನಿಮಾಗಾಗಿ ಅನುಷ್ಕಾ ಬೌಲಿಂಗ್ ಪ್ರಾಕ್ಟಿಸ್

    ಪ್ರತಿ ಎಪಿಸೋಡ್ ನಲ್ಲೂ ಒಂದಲ ಒಂದು ವಿಶೇಷತೆಯನ್ನು ಪ್ರದರ್ಶಿಸುವ ವಂಶಿಕಾ, ಈ ಬಾರಿಯಂತೂ ಸಖತ್ ಮನರಂಜನೆ ಕೊಟ್ಟರು. ಒಂದು ರೀತಿಯಲ್ಲಿ ಆ ಕಾರ್ಯಕ್ರಮಕ್ಕೆ ಹೆಚ್ಚು ರಂಗು ತುಂಬುತ್ತಿರುವುದೇ ವಂಶಿಕಾ ಎನ್ನುವಷ್ಟರ ಮಟ್ಟಿ ಆ ಶೋವನ್ನು ಆಕೆ ಆವರಿಸಿಕೊಂಡಿದ್ದಾರೆ.

  • ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ

    ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ

    ಬೆಂಗಳೂರು: ಪೀಣ್ಯದಲ್ಲಿ ರೌಡಿಶೀಟರೊಬ್ಬನ ಭೀಕರ ಹತ್ಯೆಯಾಗಿದೆ. ಜೆ.ಸಿ ಆನಂದ್ (36) ಕೊಲೆಯಾದ ರೌಡಿಶೀಟರ್.

    ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನೆಲಗದರನಹಳ್ಳಿಯ ಶಿವಪುರ ಬಳಿ ಈತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಘಟನೆ ರಾತ್ರಿ 8 ಗಂಟೆ ಸಮಯದಲ್ಲಿ ನಡೆದಿದೆ.

    ಪೀಣ್ಯ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ ಕೊಲೆಯಾದ ಆನಂದ್, ಕಳೆದ ಮೂರು ದಿನಗಳಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಇದೀಗ ಐದಾರು ಜನ ಬೈಕ್ ನಲ್ಲಿ ಬಂದು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆಗೈದು ಎಸ್ಕೇಪ್ ಆಗಿದ್ದಾರೆ.

    ಸ್ಥಳಕ್ಕೆ ಪೀಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಹೀನಾಯ ಸೋಲು – ಪಾಕಿಸ್ತಾನಕ್ಕೆ 10 ವಿಕೆಟ್ ಜಯ

  • ಪರಂ ಅಣ್ಣನ ಮಗನಿಂದಲೇ ಮೆಡಿಕಲ್ ಸೀಟ್ ಬ್ಲಾಕ್ ಅಕ್ರಮ

    ಪರಂ ಅಣ್ಣನ ಮಗನಿಂದಲೇ ಮೆಡಿಕಲ್ ಸೀಟ್ ಬ್ಲಾಕ್ ಅಕ್ರಮ

    – ಬಂದ ಹಣವನ್ನು ಸಿನಿಮಾದಲ್ಲಿ ಹೂಡಿಕೆ
    – ಖಾದರ್ ಭೇಟಿಗೆ ಅವಕಾಶ ನೀಡದ ಐಟಿ ಅಧಿಕಾರಿಗಳು

    ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ಅವರ ಅಣ್ಣನ ಮಗ ಸೀಟ್ ಬ್ಲಾಕ್ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಹೌದು. ಪರಮೇಶ್ವರ್ ಸಹೋದರ ಶಿವಪ್ರಸಾದ್ ಅವರ ಮಗ ಆನಂದ್ ನೇತೃತ್ವದಲ್ಲೇ ಸೀಟ್ ಬ್ಲಾಕ್ ದಂಧೆ ನಡೆಯುತಿತ್ತು. ಸರ್ಕಾರಕ್ಕೆ ಮರೆಮಾಚಿ ಅಕ್ರಮವಾಗಿ ಮೆಡಿಕಲ್ ಸೀಟ್ ಹಂಚಿಕೆ ಮಾಡುತ್ತಿದ್ದ ಆನಂದ್ ಬಂದ ಹಣವನ್ನು ಸಿನಿಮಾದಲ್ಲಿ ಹೂಡಿಕೆ ಮಾಡುತ್ತಿದ್ದರು ಎಂಬ ಆರೋಪ ಈಗ ಬಂದಿದೆ. ಇದನ್ನು ಓದಿ: ಇಬ್ಬರು ವಿದ್ಯಾರ್ಥಿಗಳಿಂದಾಗಿ ಪರಮೇಶ್ವರ್ ಮೇಲೆ ದಾಳಿ – ಸೀಟ್ ಬ್ಲಾಕ್ ಹೇಗೆ ಮಾಡಲಾಗುತ್ತೆ?

    ಅಕ್ರಮವಾಗಿ ಮೆಡಿಕಲ್ ಸೀಟು ಹಂಚಿಕೆಯಾಗುತ್ತಿರುವುದನ್ನು ಕಂಡು ಹಣ ನೀಡಲು ಸಾಧ್ಯವಾಗದ ಪೋಷಕರು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದರು. ಈ ಕಾರಣಕ್ಕಾಗಿಯೇ ಪರಮೇಶ್ವರ್ ನಿವಾಸದ ಮೇಲೆ ದಾಳಿ ನಡೆದಿದ್ದು, ಆನಂದ್ ಅವರನ್ನು ಐಟಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

    ಎಕೆ 56 ಸಿನಿಮಾದಲ್ಲೂ ಆನಂದ್ ಹೀರೋ ಆಗಿ ನಟಿಸಿದ್ದರು. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಸಿನಿಮಾ 2012ರಲ್ಲಿ ತೆರೆ ಕಂಡಿತ್ತು.

    ವಿಚಾರಣೆ ಮುಂದುವರಿಕೆ:
    ಸದಾಶಿವನಗರ ಮನೆಯಲ್ಲೇ ನಾಲ್ಕು ಮಂದಿ ಐಟಿ ಅಧಿಕಾರಿಗಳು ಠಿಕಾಣಿ ಹೂಡಿದ್ದು ಇಂದು ಮತ್ತೆ ವಿಚಾರಣೆ ನಡೆಸುತ್ತಿದ್ದಾರೆ. ಮಧ್ಯರಾತ್ರಿ 12.30ರ ವರೆಗೂ ವಿಚಾರಣೆ ನಡೆಸಿ ಪರಮೇಶ್ವರ್ ನಿವಾಸದಲ್ಲೇ ಈ ಅಧಿಕಾರಿಗಳು ನಿದ್ದೆ ಮಾಡಿದ್ದರು.

    ಮೊದಲ ದಿನ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಕಲೆ ಹಾಕಿದ್ದರು. ರಾತ್ರಿ ನಾಲ್ಕು ಜನರನ್ನು ಬಿಟ್ಟು ಉಳಿದ ಅಧಿಕಾರಿಗಳು ವಾಹನದಲ್ಲಿ ತೆರಳಿದ್ದರು. ಇಂದು ಮತ್ತೆ 5 ಮಂದಿ ಅಧಿಕಾರಿಗಳು ಪರಮೇಶ್ವರ್ ನಿವಾಸಕ್ಕೆ ಆಗಮಿಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನು ಓದಿ: ಗ್ರಾಮ ಪಂಚಾಯತ್ ತೆರಿಗೆ ಕಟ್ಟದ ಪರಮೇಶ್ವರ್

    ಭೇಟಿಗೆ ಅವಕಾಶವಿಲ್ಲ: ಮಾಜಿ ಸಚಿವ ಯುಟಿ ಖಾದರ್ ಅವರು ಇಂದು ಬೆಳಗ್ಗೆ ಪರಮೇಶ್ವರ್ ಅವರನ್ನು ಭೇಟಿ ಮಾಡಲು ಸದಾಶಿವನಗರಕ್ಕೆ ಆಗಮಿಸಿದ್ದರು. ಆದರೆ ಅಧಿಕಾರಿಗಳು ಭೇಟಿಗೆ ಅವಕಾಶ ನೀಡಲಿಲ್ಲ.

    ಬೆಂಬಲಿಗರಿಂದ ಪೂಜೆ: ರಾಜಾರಾಜೇಶ್ವರಿ ನಗರದ ದೇವಸ್ಥಾನದಲ್ಲಿ ಪರಮೇಶ್ವರ್ ಅಭಿಮಾನಿಗಳು ಇಂದು ವಿಶೇಷ ಪೂಜೆ ಮಾಡಿದ್ದರು. ಕಾಂಗ್ರೆಸ್ ಮುಖಂಡ ರಾಜ್ ಕುಮಾರ್ ಮತ್ತು ತಂಡದವರು ವಿಶೇಷ ಪೂಜೆ ಮಾಡಿಸಿದ್ದರು. ಬೆಂಬಲಿಗರು ತಂದ ಪೂಜೆಯ ಪ್ರಸಾದವನ್ನು ಪರಮೇಶ್ವರ್ ಅವರಿಗೆ ನೀಡಲು ಅನುಮತಿ ನೀಡಲಾಯಿತು.

  • ಕೊಡಗಿನ ಪ್ರಕೃತಿ ಮಡಿಲಲ್ಲಿ ‘ಆನಂದ್’ ಚಿತ್ರದ ಶೂಟಿಂಗ್

    ಕೊಡಗಿನ ಪ್ರಕೃತಿ ಮಡಿಲಲ್ಲಿ ‘ಆನಂದ್’ ಚಿತ್ರದ ಶೂಟಿಂಗ್

    ಮಡಿಕೇರಿ: ಸುಂದರ ಪ್ರಕೃತಿಯ ಮಡಿಲು ಕೊಡಗಿನ ಪರಿಸರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಆನಂದ್’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

    ಪಿ.ವಾಸು ನಿರ್ದೇಶನದಲ್ಲಿ, ಯೋಗಿ ದ್ವಾರಕೀಶ್ ನಿರ್ಮಾಪಕರಾಗಿರುವ ಚಿತ್ರದ ಹಾಡು ಹಾಗೂ ಫೈಟಿಂಗ್ ಸೀನ್ ಅನ್ನು ಕೊಡಗಿನ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಿಸಲಾಗುತ್ತಿದೆ. ಕೊಡಗಿನ ಮಲೆನಾಡಿನ ಕಲ್ಲು ಕ್ವಾರಿ ಹಾಗೂ ಕೊಯನಾಡಿನ ಅರಣ್ಯ ಪ್ರದೇಶದಲ್ಲಿ ಡ್ರಿಲ್ಲಿಂಗ್ ಫೈಟ್ ಸೀನ್‍ಗಳನ್ನು ಸೆರೆಹಿಡಿಯಲಾಗುತ್ತಿದೆ.

    ಸಿನಿಮಾದಲ್ಲಿ ಶಿವಣ್ಣಗೆ ರಚಿತಾ ರಾಮ್ ನಾಯಕಿ ನಟಿಯಾಗಿದ್ದು, ಚಿತ್ರಕ್ಕೆ ಗುರುಕಿರಣ್ ಮ್ಯೂಸಿಕ್ ನೀಡಿದ್ದಾರೆ. ಉಳಿದಂತೆ ಸಾಧು ಕೋಕಿಲ, ರಂಗಾಯಣ ರಘು, ಸುಹಾಸಿನಿ, ಅನಂತ್ ನಾಗ್ ಸೇರಿದಂತೆ 35ಕ್ಕೂ ಅಧಿಕ ಕಲಾವಿದರು ನಟಿಸಿದ್ದಾರೆ. ಮ್ಯೂಸಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಈಗಾಗಲೇ ರಾಜ್ಯದ ವಿವಿಧೆಡೆ 67 ದಿನ ಚಿತ್ರದ ಶೂಟಿಂಗ್ ಮುಗಿದಿದೆ. ಕೊಡಗಿನಲ್ಲಿ 6 ದಿನ ಚಿತ್ರೀಕರಣ ನಡೆದಿದೆ. ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯಲಿದೆ.

    ಎರಡು ದಿನದಿಂದ ಶೂಟಿಂಗ್ ನಡೆಯುತ್ತಿದೆ. ಇಲ್ಲಿನ ವಾತಾವರಣ ತುಂಬಾ ಚೆನ್ನಾಗಿದೆ. ಕುಟುಂಬದೊಂದಿಗೆ ಕುಳಿತು ನೋಡುವಂತಹ ಸಿನಿಮಾವಾಗಿದ್ದು, ನಾನು ಇಂದಿನಿಂದ ಚಿತ್ರೀಕರಣಕ್ಕೆ ಭಾಗಿಯಾಗಿದ್ದೇನೆ. ಕೊಡಗು ನನಗೆ ಇಷ್ಟವಾದ ಸ್ಥಳವಾಗಿದೆ. ಸಿನಿಮಾದ ಎಲ್ಲ ಕಲಾವಿದರ ಪಾತ್ರವೂ ಚೆನ್ನಾಗಿ ಮೂಡಿ ಬಂದಿದೆ  ಎಂದು ಶಿವಣ್ಣ ಹೇಳಿದ್ದಾರೆ.

  • ಅಣ್ಣ ಸಂಪಾದಿಸಿದ ಜನರ ಸಂಖ್ಯೆ ಕಂಡು ಭಾವುಕರಾದ ಗುರು ಸಹೋದರ

    ಅಣ್ಣ ಸಂಪಾದಿಸಿದ ಜನರ ಸಂಖ್ಯೆ ಕಂಡು ಭಾವುಕರಾದ ಗುರು ಸಹೋದರ

    – ತಿಥಿ ಕಾರ್ಯಕ್ಕೆ ಬರುವಂತೆ ಮನವಿ

    ಮಂಡ್ಯ: ನನ್ನ ಅಣ್ಣ ಇಷ್ಟೊಂದು ಜನ ಸಂಪಾದಿಸಿದ್ದಾನೆ ಎಂದು ಗೊತ್ತಿರಲಿಲ್ಲ ಎಂದು ಆನಂದ್ ಅವರು ಸಹೋದರ ಹುತಾತ್ಮ ಯೋಧ ಗುರು ಅವರನ್ನು ನೆನೆಪಿಸಿಕೊಂಡು ಭಾವುಕರಾದ್ರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅಣ್ಣನ ಅಂತಿಮ ದರ್ಶನಕ್ಕೆ ಎಲ್ಲರಿಗೂ ಅವಕಾಶ ಸಿಗಲಿಲ್ಲ. ಚಿತೆಯ ಮೇಲೆ ಮಲಗಿಸಿದಾಗ ಕೊನೆಯದಾಗಿ ನಮಗೆ ಮಾತ್ರ ಮುಖ ದರ್ಶನಕ್ಕೆ ಅವಕಾಶ ಮಾಡಿಕೊಟ್ರು. ಆದ್ರೆ ಗುರುವಿಗೆ ಹೆಣ್ಣುಕೊಟ್ಟ ಅತ್ತೆ ಮಾವನಿಗೂ ಮುಖ ದರ್ಶನಕ್ಕೆ ಅವಕಾಶ ಸಿಗಲಿಲ್ಲ ಅಂದ್ರು.

    ಈ ಬಗ್ಗೆ ನೆಂಟರಿಸ್ಟರು ದುಃಖಪಟ್ಟರು. ಮನೆಯ ಹಿರಿಮಗನ ಮುಖ ದರ್ಶನ ಕೊನೆಗೂ ಆಗಲಿಲ್ಲ ಎಂದು ಕಂಬನಿ ಮಿಡಿದು ನಿನ್ನೆಯ ಸನ್ನಿವೇಶ ನೆನದು ದುಃಖಿಸಿದ್ರು. ಇದೇ ವೇಳೆ ಹನ್ನೊಂದನೇ ದಿನಕ್ಕೆ ತಿಥಿ ಕಾರ್ಯ ಇದೆ. ಎಲ್ರೂ ಬನ್ನಿ ಎಂದು ಆನಂದ್ ಮನವಿ ಮಾಡಿದ್ರು.

    ಅಪಾರ ಜನಸಾಗರದ ಕಣ್ಣೀರ ವಿದಾಯದೊಂದಿಗೆ ಹುತಾತ್ಮ ಯೋಧ ಗುರು ಅವರು ಶನಿವಾರ ರಾತ್ರಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಗುರು ಇಲ್ಲದ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ. 3 ದಿನಗಳಿಂದ ರೋಧಿಸಿ ರೋಧಿಸಿ ಸುಸ್ತಾಗಿದ್ದ ಕಲಾವತಿ, ನಿದ್ದೆಯಲ್ಲೂ ಪತಿಯನ್ನೇ ಕನವರಿಸ್ತಿದ್ದಾರೆ. ಅವರ ಮನೆ, ರಸ್ತೆಗಳು ಬಿಕೋ ಅಂತಿದೆ. ಆ ಗ್ರಾಮದ ಜನರಲ್ಲೂ ಏನೋ ಒಂದನ್ನು ಕಳೆದುಕೊಂಡ ಭಾವನೆ ಕಾಡ್ತಿದೆ. ಈ ನಡ್ವೆ, ಬೆಳ್ಳಂಬೆಳಗ್ಗೆಯೇ ಗುಡಿಗೆರೆ ಕಾಲೊನಿ ನಿವಾಸಕ್ಕೆ ಮಿಲಿಟರಿ ಅಧಿಕಾರಿಗಳು ಭೇಟಿ ಕೊಟ್ಟು, ಹುತಾತ್ಮರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

    ಅಂತ್ಯಕ್ರಿಯೆ ಬಳಿಕ ಅತ್ತೆ, ಮಾವ ಅಂದ್ರೆ ಕಲಾವತಿ ತಂದೆ-ತಾಯಿ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥ ಅತ್ತೆ ಜಯಮ್ಮ, ಮಾವ ಶಿವಣ್ಣಗೆ ಮದ್ದೂರಿನ ಕೆಎಂ ದೊಡ್ಡಿಯಲ್ಲಿರುವ ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

    https://www.youtube.com/watch?v=B9rOIgx736A

    https://www.youtube.com/watch?v=m1D69xXhDFA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv