Tag: ಆನಂದಪುರ

  • ತಾಜ್ ಮಹಲ್‍ಗೂ ಮುನ್ನವೇ ನಿರ್ಮಾಣವಾಗಿತ್ತು ಕರ್ನಾಟಕದಲ್ಲೊಂದು ಪ್ರೇಮಸೌಧ, ಚಂಪಕ ಸರಸಿ!

    ತಾಜ್ ಮಹಲ್‍ಗೂ ಮುನ್ನವೇ ನಿರ್ಮಾಣವಾಗಿತ್ತು ಕರ್ನಾಟಕದಲ್ಲೊಂದು ಪ್ರೇಮಸೌಧ, ಚಂಪಕ ಸರಸಿ!

    ಹಜಹಾನ್ ತನ್ನ ಪತ್ನಿ ಮುಮ್ತಾಜ್ ಮರಣದ ನಂತರ ಆಗ್ರಾದಲ್ಲಿ ತಾಜ್ ಮಹಲ್ ನಿರ್ಮಿಸಿದ್ದು ಎಲ್ಲರಿಗೂ ಗೊತ್ತಿದೆ. ತಾಜ್ ಮಹಲ್ ನಿರ್ಮಾಣವಾಗುವ ಸುಮಾರು 50ವರ್ಷಗಳ ಮೊದಲೇ ಕೆಳದಿಯ ನಾಯಕರೊಬ್ಬರು ತಮ್ಮ ಪ್ರೀತಿಯ ಮಡದಿಯ ಮರಣದ ನಂತರ ಆಕೆಯ ನೆನಪಿಗಾಗಿ ಸುಂದರ ಸ್ಮಾರಕವನ್ನು ನಿರ್ಮಿಸಿದ್ದು ಹಲವರಿಗೆ ತಿಳಿದಿಲ್ಲ. ಸುಮಾರು 450 ವರ್ಷಗಳ ಹಿಂದೆಯೇ ಶಿವಮೊಗ್ಗ ಜಿಲ್ಲೆಯ ಆನಂದಪುರ ಸಮೀಪದ ಮಲಂದೂರಿನಲ್ಲಿ ತನ್ನ ಪ್ರೀತಿಯ ಪತ್ನಿಯ ಮರಣದ ನಂತರ ಕೆಳದಿಯ  ಅರಸ ವೆಂಕಪ್ಪ ನಾಯಕ ಸುಂದರವಾದ ಕೊಳವನ್ನು ನಿರ್ಮಿಸಿದ್ದ.

    ದಟ್ಟ ಕಾಡಾಗಿದ್ದ ಮಲ್ಲಂದೂರಿನ ಮಧ್ಯ ಭಾಗದಲ್ಲಿ ನಿಸರ್ಗ ದತ್ತವಾದ ನೀರಿಗೆ ಚಂಪಕ ಕೊಳವನ್ನು (Champaka Sarasi) ನಿರ್ಮಿಸಿದ ಎಂಬ ಇತಿಹಾಸವಿದೆ. ಇದು ಸುಮಾರು 200 ಅಡಿ ಉದ್ದ, 200 ಅಡಿ ಅಗಲವಿದ್ದು, ಸುಮಾರು 50 ಅಡಿ ಅಳವಿದೆ. ಕೊಳದ ನಡುವೆ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.

    ಚಂಪಕ ಬಿಡಿಸಿದ ರಂಗೋಲಿಗೆ ಮನಸೋತ ಕೆಳದಿಯ ಅರಸ
    ಚಂಪಕ ರಾಣಿ ಕೆಳದಿ ರಾಜ ವೆಂಕಟಪ್ಪ ನಾಯಕರ ರಾಣಿ, ಅವಳು ಬಿಡಿಸುತ್ತಿದ್ದ ರಂಗೋಲಿ ನೋಡಿ ಅದರಿಂದ ಆಕರ್ಷಿತರಾಗಿ ಅವಳನ್ನ ಮೋಹಿಸಿ ಮದುವೆ ಆಗುತ್ತಾರೆ. ಸುಂದರಿ ಚಂಪಕ ಬೇರೆ ಜಾತಿಯವಳೆಂಬ ಕಾರಣದಿಂದ ಅವಳನ್ನ ಪಟ್ಟದ ರಾಣಿ ಪರಿವಾರ ವಿರೋಧಿಸುತ್ತದೆ. ಮುಂದೆ ಇದೇ ಪಟ್ಟದ ರಾಣಿ ಭದ್ರಮ್ಮಾಜಿ ಅನಾರೋಗ್ಯಕ್ಕೆ ಕಾರಣವಾಯಿತು. ಮು0ದೆ ಅವರ ಮರಣಕ್ಕೂ ಕಾರಣವಾಯಿತು ಎಂಬ ಮಾತಿದೆ. ಇದರಿಂದ ಇಡೀ ರಾಜ್ಯದ ಪ್ರಜೆಗಳು ಚಂಪಕಳನ್ನ ನಿಂದಿಸುತ್ತಾರೆ, ಚೆ0ಪಕ ನಾಯಕರನ್ನ ತಲೆ ಕೆಡಿಸಿದ್ದಾಳೆ ಎಂಬ ಆರೋಪ ಮಾಡುತ್ತಾರೆ. ಇದೇ ಕಾರಣಕ್ಕೆ ಆಕೆ ಆತ್ಮಹತ್ಯೆಗೆ ಶರಣಾಗುತ್ತಾಳೆ.

    ಚಂಪಕಾಳ ಮರಣದ ನಂತರ ಅರಸ, ಆಕೆಯ ನೆನಪು ಶಾಶ್ವತವಾಗಿ ಉಳಿಯಬೇಕೆ0ದು ಸುಂದರವಾದ ಕೊಳವನ್ನು ಕಲ್ಲಿನಲ್ಲಿ ಕಟ್ಟಿಸುತ್ತಾನೆ. ಕೊಳದ ಮಧ್ಯದಲ್ಲಿ ಈಶ್ವರ ದೇವಸ್ಥಾನ, ಅಲ್ಲಿಗೆ ಹೋಗಲು ಕಲ್ಲಿನ ಸಣ್ಣ ಸೇತುವೆ, ಕೊಳದ ಸುತ್ತು ಕಲ್ಲಿನ ಸೋಪಾನ, ಚಂಪಕಾಳ ಸಮಾಧಿ ಬಳಿ ಕಲ್ಲಿನಲ್ಲಿ ಸುಂದರವಾದ ಆನೆಯ ಶಿಲ್ಪಗಳು ಇದೆ.

    ಸಂಪಿಗೆಯ ಮರಗಳ ಕಾಡಿಂದ ಚಂಪಕ ಹೆಸರು?
    ಇಲ್ಲಿ ಹೆಚ್ಚು ಸಂಪಿಗೆ ಮರಗಳು ಇದ್ದ ಕಾರಣ ಚಂಪಕ ಸರಸು ಎಂದು ಹೆಸರು ಬಂದಿದೆ ಎಂದು ಸಹ ಹೇಳಲಾಗುತ್ತದೆ. ಕೊಳ ಮತ್ತು ಅದರ ವಿವಿಧ ಗುಣಲಕ್ಷಣಗಳ ಬಗ್ಗೆ ಮಾತನಾಡುವ ಅನೇಕ ಶಾಸನಗಳಿವೆ. ಲಿಂಗಾಯತ ಮಠದ ಕುರುಹುಗಳು ಸಹ ಇಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಬಹುದು. ಚಂಪಕ ಸರಸಿ ಎಂಬುದು ರಾಣಿಯ ಹೆಸರಲ್ಲ ಆದರೆ ಅದು ಇಲ್ಲಿರುವ ಮಠದ ಹೆಸರು ಎಂದು ಹೇಳುವ ಕೆಲವು ಐತಿಹಾಸಿಕ ಗ್ರಂಥಗಳೂ ಇವೆ. ಕ್ರಿ.ಶ.1592ರ ಶಾಸನವೊಂದು ರಾಜ ಹಿರಿಯ ವೆಂಕಟಪ್ಪ ನಾಯಕನು ಚಂಪಕ ಸರಸಿ ಮಠಕ್ಕೆ ಗ್ರಾಮವನ್ನು ದಾನವಾಗಿ ನೀಡಿದನೆಂಬ ಉಲ್ಲೇಖವಿದೆ.

    ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ಶಿಥಿಲಾವಸ್ಥೆಯಲ್ಲಿದ್ದ ಈ ಕೊಳವನ್ನು, ಚಿತ್ರನಟ ಯಶ್ ಅವರ ಯಶೋ ಮಾರ್ಗ ಸಂಸ್ಥೆಯ ಮೂಲಕ ಕೊಳ ಅಭಿವೃದ್ಧಿಪಡಿಸಲಾಗಿದೆ. ಸುಮಾರು 7 ತಿಂಗಳ ಕಾಲ ಕೆಲಸ ಮಾಡಿ ನವೀಕರಣ ಮಾಡಲಾಗಿದೆ.

    ಹೋಗುವುದು ಹೇಗೆ?
    ಚಂಪಕ ಸರಸಿಗೆ ಶಿವಮೊಗ್ಗದಿಂದ 50 ಕಿ.ಮೀ ಇದೆ. ಇಲ್ಲಿಗೆ ತಲುಪಲು ಅನಂದಪುರದ ವರೆಗೆ ಬಸ್ ಹಾಗೂ ರೈಲಿನ ವ್ಯವಸ್ಥೆ ಇದೆ. ಅನಂದಪುರದಿಂದ ಶಿಕಾರಿಪುರ ಮಾರ್ಗದ ಮಧ್ಯದಲ್ಲಿ ಬರುವ ಮಲಂದೂರಿನ ಮುಖ್ಯ ರಸ್ತೆಯಿಂದ ಒಳಗೆ ಅರ್ಧ ಕಿ.ಮೀ ದೂರದಲ್ಲಿ ಈ ಕೊಳ ಸಿಗುತ್ತದೆ.

  • ಆನಂದಪುರದಲ್ಲಿ ಅಪರೂಪದ ಮಿಥುನ ಶಿಲ್ಪಗಳು ಪತ್ತೆ- ಶಿವಮೊಗ್ಗಕ್ಕೆ ಶಿಲ್ಪಗಳು ಶಿಫ್ಟ್

    ಆನಂದಪುರದಲ್ಲಿ ಅಪರೂಪದ ಮಿಥುನ ಶಿಲ್ಪಗಳು ಪತ್ತೆ- ಶಿವಮೊಗ್ಗಕ್ಕೆ ಶಿಲ್ಪಗಳು ಶಿಫ್ಟ್

    ಶಿವಮೊಗ್ಗ: ಸಾಗರ ತಾಲೂಕಿನ ಆನಂದಪುರದ ಕೆರೆ ಏರಿ ಮೇಲೆ ಮಿಥುನ ಶಿಲ್ಪಗಳು ಪತ್ತೆಯಾಗಿವೆ. ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳು ಈ ಶಿಲ್ಪಗಳನ್ನು ಶಿವಮೊಗ್ಗದ ಶಿವಪ್ಪನಾಯಕನ ಕೋಟೆ ಆವರಣಕ್ಕೆ ತಂದಿರಿಸಿದ್ದಾರೆ.

    ಆನಂದಪುರಂನ ಗಾಣಿಗನ ಕೆರೆ ಮೇಲ್ಬಾಗದಲ್ಲಿ ಜೆಸಿಬಿಗಳಿಂದ ಚರಂಡಿ ಕಾಮಗಾರಿ ಮಾಡುತ್ತಿದ್ದ ವೇಳೆ ಈ ಶಿಲ್ಪಗಳು ದೊರೆತಿವೆ. ಇವುಗಳು ಕ್ರಿ.ಶ. 16ನೇ ಶತಮಾನದ ಕೆಳದಿ ಕಾಲದ್ದಾಗಿದ್ದು, 2 ಮೀಟರ್ ಉದ್ದ 80 ಸೆ.ಮೀ. ಅಗಲ ಇವೆ.

    ಫಲವಂತಿಕೆಯ ಸಂಕೇತವಾಗಿ ಇವುಗಳನ್ನು ಕೆಳದಿ ನಾಯಕರ ಕಾಲದಲ್ಲಿ ನಿರ್ಮಾಣ ಮಾಡಲಾಗುತಿತ್ತು. ಬಿತ್ತನೆ ಪೈರು ಮುಂತಾದ ಸಂದರ್ಭಗಳಲ್ಲಿ ಇಂತಹ ಶಿಲ್ಪಗಳನ್ನು ಪೂಜಿಸುವ ಪದ್ಧತಿ ಚಾಲ್ತಿಯಲ್ಲಿತ್ತು. ಸಾಮಾನ್ಯವಾಗಿ ಕೆರೆಯ ಮೇಲ್ಭಾಗದಲ್ಲಿ ಇವುಗಳನ್ನು ಸ್ಥಾಪಿಸಲಾಗುತ್ತಿತ್ತು ಎಂದು ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಶೇಜೇಶ್ವರ್ ತಿಳಿಸಿದ್ದಾರೆ.

    ಈ ರೀತಿಯ ಶಿಲ್ಪಗಳು ಇದುವರೆಗೆ ರಾಜ್ಯದ ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಮಾತ್ರ ಕಂಡು ಬಂದಿವೆ. ಈಗ ಪತ್ತೆಯಾಗಿರುವ ಶಿಲ್ಪಗಳನ್ನು ಜನರಿಂದ ಪೂಜೆ ಮಾಡಿರಬಹುದೆಂದು ಹೇಳಲಾಗಿದೆ. ಜೊತೆಗೆ ಕೆರೆ ಒತ್ತುವರಿ ವೇಳೆ ಶಿಲ್ಪಗಳು ಭೂಮಿಯಲ್ಲಿ ಮುಚ್ಚಿ ಹೋಗಿರಬಹುದು ಎಂದು ಶೇಜೇಶ್ವರ್ ಮಾಹಿತಿ ನೀಡಿದ್ದಾರೆ.