Tag: ಆಧ್ಯಾ ಆನಂದ್

  • ‘ಬಾಂಬೆ ಬೇಗಮ್ಸ್’ ನೆಟ್‍ಫ್ಲಿಕ್ಸ್ ಸರಣಿಯಲ್ಲಿ ಕನ್ನಡತಿ ಆಧ್ಯಾ ಆನಂದ್

    ‘ಬಾಂಬೆ ಬೇಗಮ್ಸ್’ ನೆಟ್‍ಫ್ಲಿಕ್ಸ್ ಸರಣಿಯಲ್ಲಿ ಕನ್ನಡತಿ ಆಧ್ಯಾ ಆನಂದ್

    ಕಾರವಾರ: ಮಾರ್ಚ್ 8ರ ಮಹಿಳಾ ದಿನದಂದು ನೆಟ್‍ಫ್ಲಿಕ್ಸ್ ನಲ್ಲಿ ಬಿಡುಗಡೆಗೊಳ್ಳಲಿರುವ ‘ಬಾಂಬೆ ಬೇಗಮ್ಸ್’ ಸರಣಿಯಲ್ಲಿ ಕನ್ನಡತಿಯೊಬ್ಬರು ಕಾಣಿಸಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಫೆ.15 ರಂದು ಬಾಂಬೆ ಬೇಗಮ್ಸ್ ಸಿರೀಸ್‍ನ ಟ್ರೈಲರ್ ಬಿಡುಗಡೆಗೊಂಡಿದೆ. ಸಿಂಗಾಪುರದ ಹಲವು ಜಾಹೀರಾತು, ಚಲನಚಿತ್ರ, ಕಿರುಚಿತ್ರ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದ ಉತ್ತರ ಕನ್ನಡ ಜಿಲ್ಲೆ ಮೂಲದ ಆಧ್ಯಾ ಆನಂದ್, ‘ಶಾಯ್ ಇರಾನಿ’ಯಾಗಿ ಈ ಸರಣಿಯಲ್ಲಿ ನಟಿಸಿದ್ದಾರೆ. ‘ಬಾಂಬೆ ಬೇಗಮ್ಸ್’ ಮೂಲಕ ಇವರು ಈಗ ಭಾರತದಲ್ಲೂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

    ಬಾಲಿವುಡ್ ನಿರ್ದೇಶಕಿ ಅಲಂಕೃತ ಶ್ರೀವಾಸ್ತವ ಅವರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ‘ಬಾಂಬೆ ಬೇಗಮ್ಸ್’ ಸರಣಿಯ ಕಥೆಯು ಆಧುನಿಕ ಮುಂಬೈನ ಐವರು ವಿವಿಧ ಕ್ಷೇತ್ರದ ಮಹಿಳೆಯರ ಸುತ್ತ ಹೆಣೆದುಕೊಂಡಿದೆ. ಪೂಜಾ ಭಟ್, ಶಹಾನಾ ಗೋಸ್ವಾಮಿ, ಅಮೃತಾ ಸುಭಾಷ್, ಪ್ಲಬಿತಾ ಬೋರ್‍ಠಾಕೂರ್ ಸೇರಿದಂತೆ ಐವರು ಮುಖ್ಯ ಭೂಮಿಕೆಯ ‘ಬೇಗಮ್ಸ್’ಗಳ ಪೈಕಿ ಕನ್ನಡತಿ ಆಧ್ಯಾ ಆನಂದ್ ಕೂಡ ಒಬ್ಬರಾಗಿದ್ದು, ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

    ಸಿಂಗಾಪುರದಲ್ಲಿ ನೆಲೆಸಿರುವ ಉತ್ತರ ಕನ್ನಡ ಮೂಲದ ಪ್ರಿಯಾ ನಾಯಕ ಹಾಗೂ ಆನಂದ್ ನಾಯಕ ಅವರ ಪುತ್ರಿಯಾಗಿರುವ ಆಧ್ಯಾ ಹುಟ್ಟಿದ್ದು ಮಡಿಕೇರಿಯಲ್ಲಾದರೂ ಬೆಳೆದಿದ್ದು ಸಿಂಗಾಪುರದಲ್ಲಿ. ತನ್ನ 7ನೇ ವಯಸ್ಸಿನಲ್ಲೇ ಆ್ಯಕ್ಟಿಂಗ್, ಮಾಡೆಲಿಂಗ್, ಡ್ಯಾನ್ಸಿಂಗ್ ಹಾಗೂ ಬ್ಯಾಡ್ಮಿಂಟನ್‍ನಲ್ಲಿ ಆಸಕ್ತಿ ತೋರಿದ ಈಕೆ, ಸಿಂಗಾಪುರ್ಲ ರಂಗಭೂಮಿ ತರಬೇತಿ ಹಾಗೂ ಬಾಲಿವುಡ್ ನ ಅನುಪಮ್ ಖೇರ್ ಮತ್ತು ಅತುಲ್ ಮೊಂಗಿಯಾ ಅವರ ಇನ್ ಸ್ಟಿಟ್ಯೂಟ್ ನಲ್ಲೂ ತರಬೇತಿ ಪಡೆದಿದ್ದಾರೆ. ಪ್ರತಿಷ್ಠಿತ ಕೇನ್ ಇಂಟನ್ರ್ಯಾಷನಲ್ ಫಿಲಂ ಫೆಸ್ಟಿವಲ್- 2017ರಲ್ಲಿ ಪ್ರದರ್ಶನ ಕಂಡಿದ್ದ ‘ಎ ಯೆಲ್ಲೋ ಬರ್ಡ್’ ಸಿನೇಮಾ, ‘ಒನ್ ಅವರ್ ಟು ಡೇಲೈಟ್’, ‘ಸ್ಕೈಸಿಟಿ’ಯಂಥ ಕಿರುಚಿತ್ರಗಳಲ್ಲಿ ಕೂಡ ನಟಿಸಿದ್ದರು.

    ಸೋನಿ ಟಿವಿಯ ಸೂಪರ್ ಡ್ಯಾನ್ಸ್ ಸಿಂಗಾಪುರದ ವಿಜೇತೆಯಾಗಿರುವ ಇವರು ಸಿಂಗಾಪುರ್‍ನಲ್ಲಿ ‘ವ್ಹೂಪೀಸ್ ವಲ್ರ್ಡ್’ ಸೀಸನ್ 1, 2, 3, 4, ‘ಲಯನ್ ಮಮ್ಸ್’ 2, 3, ‘ವಲ್ರ್ಡ್ ವಿಜ್ಜ್ ಸ್ಲೈಮ್ ಪಿಟ್’, ‘ಮೆನಂತು ಇಂಟನ್ರ್ಯಾಷನಲ್’ 2 ಸೇರಿದಂತೆ ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಕಿರುತೆರೆ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಈಕೆ ಝೀ ಟಿವಿಯ ಪ್ರಪ್ರಥಮ ಜೂನಿಯರ್ ನಿರೂಪಕಿಯಾಗಿ ನಡೆಸಿಕೊಟ್ಟಿದ್ದ ‘ಬ್ರೈನ್ ಬೂಸ್ಟರ್ಸ್’ ಕಾರ್ಯಕ್ರಮವು 18 ದೇಶಗಳಲ್ಲಿ ಎರಡು ಸೀಸನ್‍ಗಳಲ್ಲಿ ಪ್ರಸಾರ ಕಂಡಿವೆ.

    ನಟನೆ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿನ ಅಪ್ರತಿಮ ಸಾಧನೆಗೆ ಇವರಿಗೆ ಸಿಂಗಾಪುರ್‍ನ ಸಿಂಗ್ಟೆಲ್‍ನಿಂದ 2018ರಲ್ಲಿ ಯುವ ಸಾಧಕಿ ಪ್ರಶಸ್ತಿ, ಸಿಂಗಾಪುರ್‍ನಲ್ಲಿ ನಡೆದ ಅಂತರರಾಷ್ಟ್ರೀಯ ಕನ್ನಡ ಸಾಂಸ್ಕøತಿಕ ಹಬ್ಬದಲ್ಲಿ ಸಿಂಗಾರ ಪುರಸ್ಕಾರಕ್ಕೆ 2016ರಲ್ಲೇ ಭಾಜನಳಾಗಿದ್ದಾರೆ. ಅಲ್ಲದೇ, ಸಿಂಗಾಪುರದಲ್ಲಿ ನಡೆದ ಅತಿ ಹೆಚ್ಚು ‘ಮಾಡೆಲ್ಸ್ ವಾಕಿಂಗ್ ರನ್ ವೇ’ನಲ್ಲಿ ಭಾಗವಹಿಸಿದ್ದಕ್ಕಾಗಿ ‘ಏಷ್ಯಾ ಬುಕ್ ಆಫ್ ರೆಕಾಡ್ರ್ಸ್’ ಮತ್ತು ‘ಗಿನ್ನೆಸ್ ಬುಕ್ ಆಫ್ ರೆಕಾಡ್ರ್ಸ್’ ಅನ್ನು ಕೂಡ ಹೊಂದಿದ್ದಾರೆ.

    ಸುಮಾರು 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ‘ಬಾಂಬೆ ಬೇಗಮ್ಸ್’ ಆಡಿಷನ್‍ನಲ್ಲಿ ಕೊನೆಗೂ ಆಯ್ಕೆಗೊಂಡು ಅವಕಾಶ ಪಡೆದುಕೊಂಡಿರುವ ಕನ್ನಡತಿ ಆಧ್ಯಾ, ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳ ಜ್ಞಾನ ಹೊಂದಿದ್ದು, ಕನ್ನಡ ಚಿತ್ರಗಳಲ್ಲೂ ನಟಿಸುವ ಅಭಿಲಾಶೆ ಹೊಂದಿದ್ದಾರೆ.