Tag: ಆಧ್ಯಾತ್ಮಿಕ

  • ಹಿಂದೂಗಳು 4 ಮಕ್ಕಳನ್ನು ಹೊಂದಿರಬೇಕು, ಇಬ್ಬರನ್ನು RSSಗೆ ಕೊಡಬೇಕು: ಋತಂಭರಾ

    ಹಿಂದೂಗಳು 4 ಮಕ್ಕಳನ್ನು ಹೊಂದಿರಬೇಕು, ಇಬ್ಬರನ್ನು RSSಗೆ ಕೊಡಬೇಕು: ಋತಂಭರಾ

    ಲಕ್ನೋ: ಈಗ ಪ್ರತಿ ಹಿಂದೂ ಪೋಷಕರು ಕನಿಷ್ಠ ನಾಲ್ಕು ಮಕ್ಕಳನ್ನು ಹೊಂದಿರಬೇಕು. ಅವರಲ್ಲಿ ಇಬ್ಬರನ್ನು ಆರ್‌ಎಸ್‌ಎಸ್ ಅಥವಾ ವಿಶ್ವಹಿಂದೂ ಪರಿಷತ್‌ಗೆ ಹಸ್ತಾಂತರಿಸಬೇಕು ಎಂದು ಆಧ್ಯಾತ್ಮಿಕ ಮುಖಂಡರಾದ ಸಾಧ್ವಿ ಋತಂಭರಾ ಕರೆ ನೀಡಿದ್ದಾರೆ.

    ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಶ್ವ ಹಿಂದೂ ಪರಿಷತ್ (VHP) ವತಿಯಿಂದ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ಪ್ರತಿಯೊಬ್ಬ ಹಿಂದೂ ಕನಿಷ್ಠ 4 ಮಕ್ಕಳನ್ನು ಹೊಂದಿರಬೇಕು. ಅವರಲ್ಲಿ ಇಬ್ಬರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ವಿಶ್ವ ಹಿಂದೂ ಪರಿಷತ್‌ಗೆ ಹಸ್ತಾಂತರಿಸಿದರೆ, ಅವರು ರಾಷ್ಟçತ್ಯಾಗಕ್ಕೆ ಕೊಡುಗೆ ನೀಡಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ 50ಜನ ಸಂತರು ಸ್ಪರ್ಧಿಸಲಿದ್ದಾರೆ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

    SADHVI

    ರಾಮೋತ್ಸವವನ್ನುದ್ದೇಶಿಸಿ ಮಾತನಾಡುತ್ತಾ, ರಾಮನ ಭಕ್ತನಾಗಲು, ರಾಮತ್ವವನ್ನು ಅಳವಡಿಸಿಕೊಳ್ಳಬೇಕು. ಏಕೆಂದರೆ ರಾಮನು ಅಜೇಯ ಪುರುಷತ್ವದ ಸಂಕೇತ. ರಾಜಕೀಯ ಪಕ್ಷಗಳು ಹಿಂದೂಗಳನ್ನು ವಿಭಜಿಸುತ್ತವೆ. ಆದರೆ ಶ್ರೀರಾಮನ ನಡವಳಿಕೆಯು ಇಡೀ ಸಮಾಜವನ್ನು ಒಂದುಗೂಡಿಸುತ್ತದೆ ಎಂದು ಅವರು ಹೇಳಿದರು.

    ಹೆಚ್ಚಿನ ಮಕ್ಕಳಿಗೆ ಜನ್ಮನೀಡಿ: ಅಖಿಲ ಭಾರತೀಯ ಸಂತ ಪರಿಷತ್ತಿನ ಹಿಮಾಚಲ ಪ್ರದೇಶ ಉಸ್ತುವಾರಿ ಯತಿ ಸತ್ಯದೇವಾನಂದ ಸರಸ್ವತಿ ಮಾತನಾಡಿ, ಹಿಂದೂಗಳು ಬಹುಸಂಖ್ಯಾತರಾಗಿರುವುದರಿಂದ ಭಾರತವು ಪ್ರಜಾಪ್ರಭುತ್ವ ರಾಷ್ಟçವಾಗಿದೆ. ಆದರೆ ಮುಸ್ಲಿಮರು ಯೋಜಿತ ರೀತಿಯಲ್ಲಿ ಅನೇಕ ಮಕ್ಕಳಿಗೆ ಜನ್ಮ ನೀಡುವ ಮೂಲಕ ತಮ್ಮ ಜನಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಭಾರತವು ಇಸ್ಲಾಮಿಕ್ ರಾಷ್ಟçವಾಗುವುದನ್ನು ತಪ್ಪಿಸಲು ಹಿಂದೂಗಳು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ದಲಿತರ ಓಲೈಕೆಗಾಗಿ SC, ST ಸಮಾವೇಶ ಮಾಡಿದ ರೇಣುಕಾಚಾರ್ಯ – ಮಹಿಳೆಯರೊಂದಿಗೆ ಸಖತ್ ಸ್ಟೆಪ್

    RAMANAVAMI
    ಸಾಂದರ್ಭಿಕ ಚಿತ್ರ

    ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಪೊಲೀಸರು ಸರಸ್ವತಿ ಅವರಿಗೆ ಪೊಲೀಸ್ ಕಾಯ್ದೆ- 2007ರ ಸೆಕ್ಷನ್ 64ರ (ಕೂಮುಪ್ರಚೋದನಕಾರಿ ಭಾಷಣ) ಅಡಿಯಲ್ಲಿ ನೋಟಿಸ್ ಜಾರಿಗೊಳಿಸಿದೆ. ಸೂಚನೆಯನ್ನು ಪಾಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿದೆ.

  • 5 ಬೆಸ್ಟ್ ಆಧ್ಯಾತ್ಮಿಕ ಟ್ಯಾಟೂ ಡಿಸೈನ್‍ಗಳು

    5 ಬೆಸ್ಟ್ ಆಧ್ಯಾತ್ಮಿಕ ಟ್ಯಾಟೂ ಡಿಸೈನ್‍ಗಳು

    ಆಧ್ಯಾತ್ಮಿಕ ಟ್ಯಾಟೂಗಳು ಟ್ರೆಂಡಿಂಗ್ ಲೋಕದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಸಾಮಾನ್ಯವಾಗಿ ಹಲವಾರು ಮಂದಿ ಹೆಸರು, ಹೂ, ಚಿಟ್ಟೆ, ಗೊಂಬೆ ಹೀಗೆ ಹಲವಾರು ವಿನ್ಯಾಸದ ಟ್ಯಾಟೂಗಳನ್ನು ಹಾಕಿಸಿಕೊಳ್ಳುವುದನ್ನು ನೋಡಿದ್ದೇವೆ. ಈ ಮಧ್ಯೆ ಕೆಲವರು ದೇವರ ಟ್ಯಾಟೂಗಳನ್ನು ಹಾಕಿಕೊಳ್ಳುತ್ತಾರೆ. ಈ ಟ್ಯಾಟೂಗಳು ಭಾರತದ ಸಾಂಸ್ಕೃತಿಕ ಹಾಗೂ ಧಾರ್ಮಿಕತೆಯನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಶಿವ ಕುರಿತ ಟ್ಯಾಟೂವನ್ನು ಮಹಿಳೆಯರು ಮತ್ತು ಪುರುಷರು ಹೆಚ್ಚಾಗಿ ಇಷ್ಟ ಪಡುತ್ತಾರೆ. ಜೊತೆಗೆ ಗಣೇಶನ ಟ್ಯಾಟೂ ಹೊಸ ಆರಂಭವನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಕೆಲವರು ಹೊಸ ಪ್ರಯಾಣವನ್ನು ಆರಂಭಿಸಲು ಬಯಸುವವರು ಗಣೇಶನ ಟ್ಯಾಟೂವನ್ನು ಬಹಳ ಹಾಕಿಸಿಕೊಳ್ಳುತ್ತಾರೆ.

    ಸಾಮಾನ್ಯವಾಗಿ ಹಿಂದೂಗಳು ಜೀವನ ಚಕ್ರವನ್ನು ಮತ್ತು ಪೂರ್ವಜನ್ಮದ ಕರ್ಮವನ್ನು ನಂಬುತ್ತಾರೆ. ಭಾರತದಲ್ಲಿ ಹೆಚ್ಚಾಗಿ ಹಿಂದೂಗಳಿದ್ದು, ಹಿಂದೂ ದೇವರ ಟ್ಯಾಟೂಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಅದರಲ್ಲಿ ಕೆಲವೊಂದು ಹಿಂದೂ ದೇವರ ಟ್ಯಾಟೂ ಡಿಸೈನ್‍ಗಳು ಈ ಕೆಳಗಿನಂತಿದೆ.

    ಗಣೇಶನ ಟ್ಯಾಟೂ
    ಗಣೇಶನ ಟ್ಯಾಟೂವನ್ನು ಕಪ್ಪು ಮತ್ತು ನೀಲಿ ಇಂಕ್ ಮೂಲಕ ವಿನ್ಯಾಸಗೊಳಿಸಿದರೆ ಬಹಳ ಸುಂದರವಾಗಿ ಕಾಣಿಸುತ್ತದೆ. ಈ ಚಿಕ್ಕ ಟ್ಯಾಟೂವನ್ನು ನಿಮ್ಮ ಕಾಲಿನ ಮೇಲೆ ಅಥವಾ ಕೈ ಮೇಲೆ ಹಾಕಿಸಿಕೊಳ್ಳಬಹುದು.

    ಕೃಷ್ಣನ ಟ್ಯಾಟೂ
    ಈ ಟ್ಯಾಟೂವನ್ನು ನೀಲಿ, ಕೆಂಪು ಮತ್ತು ಹಳದಿ ಬಣ್ಣದ ಮೂಲಕ ವಿನ್ಯಾಸಗೊಳಿಸಲಾಗಿದ್ದು, ಈ ಟ್ಯಾಟೂ ಹಾಕಲು 3 ಗಂಟೆಗಳ ಕಾಲ ಸಮಯಬೇಕಾಗುತ್ತದೆ.

    ಮಹಾಕಾಳಿ ಟ್ಯಾಟೂ
    ಸಾಮಾನ್ಯವಾಗಿ ಬ್ರೈಟ್ ಆಗಿ ಕಾಣಿಸುವ ಈ ಟ್ಯಾಟೂ ಬಹಳ ಪವರ್ ಫುಲ್ ಟ್ಯಾಟೂ ಎಂದೇ ಹೇಳಬಹುದು. ಈ ಟ್ಯಾಟೂವನ್ನು ಸಾಮಾನ್ಯವಾಗಿ ಹೆಚ್ಚಾಗಿ ಪುರುಷರು ಹಾಕಿಸಿಕೊಳ್ಳುತ್ತಾರೆ.

    ಶಿವನ ಟ್ಯಾಟೂ
    ನೀಲಿ ಇಂಕ್ ಮೂಲಕ ಈ ಟ್ಯಾಟೂವನ್ನು ವಿನ್ಯಾಸಗೊಳಿಸಲಾಗಿದ್ದು, ಎಲ್ಲರ ಮಧ್ಯೆ ಶಿವನ ಟ್ಯಾಟೂ ಬ್ರೈಟ್ ಆಗಿ ಎದ್ದು ಕಾಣಿಸುತ್ತದೆ. ಈ ಟ್ಯಾಟೂವನ್ನು ವಿನ್ಯಾಸಗೊಳಿಸಲು ಹೆಚ್ಚು ಸಮಯ ಬೇಕಾಗುತ್ತದೆ.

    ರಾಮನ ಟ್ಯಾಟೂ
    ಈ ಟ್ಯಾಟೂವಿನಲ್ಲಿ ರಾಮ ಬಾಣ ಬಿಡುತ್ತಿದ್ದು, ಇದನ್ನು ಕೆಂಪು, ನೀಲಿ, ಹಸಿರು ಬಣ್ಣವನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ.

  • ಜಾಗತಿಕ ಪೌರತ್ವ ರಾಯಭಾರಿಯಾದ ರವಿಶಂಕರ್ ಗುರೂಜಿ

    ಜಾಗತಿಕ ಪೌರತ್ವ ರಾಯಭಾರಿಯಾದ ರವಿಶಂಕರ್ ಗುರೂಜಿ

    ವಾಷಿಂಗ್ಟನ್: ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರನ್ನು ಅಮೆರಿಕ ನಾರ್ತ್ ಈಸ್ಟರ್ನ್ ಯುನಿವರ್ಸಿಟಿ ಸೆಂಟರ್ ಫಾರ್ ಸ್ಪಿರಿಚುವಲ್ ಡಯಲಾಗ್ ಮತ್ತು ಸರ್ವಿಸ್ ಗುರೂಜಿ ಅವರನ್ನು ತನ್ನ ಸಂಸ್ಥೆಯ ಜಾಗತಿಕ ಪೌರತ್ವ ರಾಯಭಾರಿ ಎಂದು ಗುರುತಿಸಿದೆ.

    ಅಫ್ಗಾನಿಸ್ತಾನ, ಬ್ರೆಜಿಲ್, ಕ್ಯಾಮರೂನ್, ಕೊಲಂಬಿಯಾ, ಭಾರತ, ಇಂಡೊನೇಷ್ಯಾ, ಇರಾಕ್, ಇಸ್ರೇಲ್, ಕಿನ್ಯಾ, ಕೊಸೊವೊ, ಲೆಬನಾನ್, ಮಾರಿಷಸ್, ಮೊರಾಕೊ, ನೇಪಾಳ, ಪಾಕಿಸ್ತಾನ, ರಷ್ಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಅಮೆರಿಕದಲ್ಲಿ ಸಂಘರ್ಷ ಪರಿಹಾರಕ್ಕಾಗಿ ಅವರು ಕೆಲಸ ಮಾಡಿದ್ದಾರೆ ಎಂದು ವಿಶ್ವವಿದ್ಯಾಲಯ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಆಧ್ಯಾತ್ಮಿಕ ಸಲಹೆಗಾರ ಅಲೆಕ್ಸಾಂಡರ್ ಡೆಲಿವರಿ ಕರ್ನ್ ಹೇಳಿದ್ದಾರೆ.

    ರವಿಶಂಕರ್ ಗೂರುಜಿ ಅವರು ಶಾಂತಿ ಸ್ಥಾಪಿಸಲು ಹಾಗೂ ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಗೌರವಿಸಲಾಗಿದೆ. ನಾವು ರವಿಶಂಕರ್ ಗುರೂಜಿ ಅವರಿಗೆ ಕೃತಜ್ಞರಾಗಿದ್ದೇವೆ. ಮಾನವೀಯ ಮೌಲ್ಯಗಳನ್ನು ಸಾಕಾರಗೊಳಿಸಿದ ಅತ್ಯುತ್ತಮ ವ್ಯಕ್ತಿಯ ಮೂಲಕ ನಾವು ಜಾಗತಿಕ ಪೌರತ್ವ ರಾಯಭಾರಿಯನ್ನು ಗುರುತಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ, ಎಂದು ಅಲೆಕ್ಸಾಂಡರ್ ಡೆಲಿವರಿ ಕರ್ನ್ ಹೇಳಿದ್ದಾರೆ.

  • ಖ್ಯಾತ ಉದ್ಯಮಿಯ 24 ವರ್ಷದ ಮಗಳಿಂದ ಸನ್ಯಾಸತ್ವ ಸ್ವೀಕಾರ

    ಖ್ಯಾತ ಉದ್ಯಮಿಯ 24 ವರ್ಷದ ಮಗಳಿಂದ ಸನ್ಯಾಸತ್ವ ಸ್ವೀಕಾರ

    ಯಾದಗಿರಿ: ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ, ಬಣ್ಣ ಬಣ್ಣದ ಬಟ್ಟೆ ತೊಟ್ಟು ತಮ್ಮಿಷ್ಟದಂತೆ ಜೀವನ ನಡೆಸುವುದು ಕಾಮನ್. ಆದರೆ ಇಲ್ಲೊಬ್ಬ ಯುವತಿ ಇದೆಲ್ಲವನ್ನು ಧಿಕ್ಕರಿಸಿ ಆಧ್ಯಾತ್ಮಿಕ ಜಗದತ್ತ ಮುಖ ಮಾಡಿದ್ದಾಳೆ.

    ಜಿಲ್ಲೆಯ ಸುರಪುರದ 24 ವರ್ಷದ ಯುವತಿ ಮೋನಿಕಾ ಗೃಹಸ್ಥಾಶ್ರಮ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದಾಳೆ. ಜೈನ್ ಧರ್ಮದವಳಾದ ಮೋನಿಕಾ B.Com ಸಹ ಓದಿದ್ದಾಳೆ. ಅಲ್ಲದೇ ಸುರಪುರ ಪಟ್ಟಣದ ಖ್ಯಾತ ಉದ್ಯಮಿಯಾಗಿರುವ ಭರತ್‍ಕುಮಾರ್ ಜೈನ್ ಅವರು ಸುಪುತ್ರಿಯಾಗಿದ್ದಾಳೆ. ಮೋನಿಕಾಳಿಗೆ ಬಾಲ್ಯದಿಂದಲೂ ಸನ್ಯಾಸತ್ವದ ಬಗ್ಗೆ ಒಲವು ಇದ್ದು, ಮನೆಯವರ ಒಪ್ಪಿಗೆ ಪಡೆದು ಈಗ ಸನ್ಯಾಸ ದೀಕ್ಷೆ ಸ್ವೀಕಾರ ಮಾಡಿದ್ದಾಳೆ.

    ಸದ್ಯಕ್ಕೆ ಸಾಂಕೇತಿಕವಾಗಿ ಸನ್ಯಾಸತ್ವ ಸ್ವೀಕರಿಸಿರುವ ಮೋನಿಕಾಳಿಗೆ ಮುಂದಿನ ತಿಂಗಳು ಫೆ.2 ರಂದು ರಾಜಸ್ಥಾನದಲ್ಲಿ ಅಧಿಕೃತವಾಗಿ ಸನ್ಯಾಸತ್ವ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಇಂದು ಸುರಪುರ ಪಟ್ಟಣದಲ್ಲಿ ಕಬಾಡಗೇರಾದಿಂದ ಶೆಟ್ಟಿಮೋಹಲ್ಲಾದ ಓಣಿಯ ಜೈನ ಮಂದಿರದವರೆಗೆ ತೆರೆದ ಕುದುರೆ ಸಾರೋಟದ ವಾಹನದಲ್ಲಿ ಅದ್ಧೂರಿಯಾಗಿ ದೀಕ್ಷಾರ್ಥಿ ಮೋನಿಕಾಳ ಮೆರವಣಿಗೆ ನಡೆಸಲಾಯಿತು.

    ದೀಕ್ಷಾರ್ಥಿ ಮೋನಿಕಾ ಮೆರವಣಿಗೆ ವೇಳೆ ವಿವಿಧ ವಸ್ತುಗಳನ್ನು ದಾನ ಮಾಡಿದರು. ಮೆರವಣಿಗೆ ಉದ್ದಕ್ಕೂ ಜೈನ್ ಮಹಿಳೆಯರು ನೃತ್ಯ ಮಾಡಿ ಮೋನಿಕಾಳಿಗೆ ಶುಭಕೋರಿದರು.