Tag: ಆಧಾರ ಕಾರ್ಡ್

  • ರಾಜ್ಯದ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಕಡ್ಡಾಯ: ಕೃಷ್ಣಭೈರೇಗೌಡ

    ರಾಜ್ಯದ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಕಡ್ಡಾಯ: ಕೃಷ್ಣಭೈರೇಗೌಡ

    ಬೆಂಗಳೂರು: ರಾಜ್ಯದ ಸಬ್‌ ರಿಜಿಸ್ಟರ್ ಕಚೇರಿಗಳಲ್ಲಿ (Sub-Registrar Office) ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್ ಕಡ್ಡಾಯ. ನಿಮ್ಮ ಯಾವುದಾದರೊಂದು ದಾಖಲೆ ಇರಲೇಬೇಕು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ನಾನು ಫೀಲ್ಡಿಗೆ ಹೋದಾಗ ಎಲ್ಲರೂ ಕೇಳಿದ್ದಾರೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಸಚಿವರು, ಶಾಸಕರು ಕೂಡ ಸಲಹೆ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddarmaiah) ಅವರು ಇದಕ್ಕೆ ಸೂಚನೆ ನೀಡಿದ್ದಾರೆ. ಅದರಂತೆಯೇ ಎಲ್ಲಾ ಕಡೆಯಲ್ಲಿಯೂ ಈ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇವೆ ಎಂದಿದ್ದಾರೆ.ಇದನ್ನೂ ಓದಿ: ಜಸ್ಟಿಸ್ ಹೇಮಾ ವರದಿಯಲ್ಲಿಯ ಹೆಸರು ಬಹಿರಂಗ ಪಡಿಸಿ: ಪೃಥ್ವಿರಾಜ್ ಸುಕುಮಾರನ್

    ವಂಚನೆ ಪ್ರಕರಣಗಳನ್ನು ತಪ್ಪಿಸಲು ಆಧಾರ್ ಅಥವಾ ಈ ಮೂರನ್ನು ಒಳಗೊಂಡ ಯಾವುದಾದರೊಂದು ದಾಖಲೆಯನ್ನು ಕೊಡಬೇಕು. ಇದು ಒಂದು ವ್ಯವಸ್ಥೆ ಮೇಲೆ ನಂಬಿಕೆ ಇಡುವಂತೆ ಮಾಡುತ್ತದೆ. ಸಕಾರಾತ್ಮಕವಾಗಿ ಸಾರ್ವಜನಿಕರು ಸಹಕಾರ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

    ಆಧಾರ್ ಜೋಡಣೆ ಮಾಡುವುದರಿಂದ ನಡೆಯುವ ವಂಚನೆಗಳನ್ನು ಕಡಿಮೆಗೊಳಿಸಬಹುದು. ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಜನರಿಗೆ ಸುಲಲಿತವಾಗಿ ಕೆಲಸವಾಗುವ ರೀತಿಯಲ್ಲಿ ಹೆಜ್ಜೆ ಇಡುತ್ತಿದ್ದೇವೆ. ಜೊತೆಗೆ ನೊಂದಣಿ ವ್ಯವಸ್ಥೆಯಲ್ಲಿ ಮತ್ತಷ್ಟು ಬದಲಾವಣೆ ತರುತ್ತಿದ್ದೇವೆ.ಇದನ್ನು ಓದಿ: ಟಾರ್ಚ್ ಹಾಕಿ ತಡಕಾಡೋದು ಸಿಎಂಗೆ ಶೋಭೆಯಲ್ಲ – ಶಿಶುಪಾಲನಂತೆ ತಪ್ಪಿನ ಮೇಲೆ ತಪ್ಪು ಮಾಡ್ತಿದ್ದೀರಿ: ಹೆಚ್‌ಡಿಕೆ ಎಚ್ಚರಿಕೆ

    ನಕಲಿ ವೈಯಕ್ತಿಕ ದಾಖಲೆಯನ್ನು ಸೃಷ್ಟಿಸಿ, ರಿಜಿಸ್ಟರ್ ಮಾಡಿಕೊಂಡು ವಂಚನೆ ಮಾಡುತ್ತಿದ್ದಾರೆ. ಈ ರೀತಿ ವ್ಯವಸ್ಥಿತವಾಗಿ ಜಮೀನುಗಳನ್ನು ದರೋಡೆ ಮಾಡುವ ಕೆಲಸ ನಡೆಯುತ್ತಿದೆ. ಈ ತರಹದ ವಂಚನೆಗಳನ್ನು ತಡೆಗಟ್ಟಲು ವ್ಯಾಪಕ ದೂರುಗಳು ಈಗಾಗಲೇ ಬಂದಿವೆ. ರಾಜ್ಯದ ಎಲ್ಲಾ ಸಬ್ ರಿಜಿಸ್ಟರ್ ಕಚೇರಿಗಳಲ್ಲೂ ಕಾವೇರಿ-2 (Kaveri-2) ಜಾರಿಗೊಳಿಸಲಾಗಿದೆ. ಅಪಾಂಯ್ಟ್‌ಮೆಂಟ್‌ ಸಿಸ್ಟಮ್ ಸರಿಯಾಗಿ ಪಾಲಿಸದೇ ಇರುವುದರಿಂದ ಇಷ್ಟು ದಿನ ಜನ ಜಂಗುಳಿ ಇರುತ್ತಿತ್ತು. ಈಗ ಅಪಾಂಯ್ಟ್‌ಮೆಂಟ್‌ ಸಿಸ್ಟಮ್ ಕಡ್ಡಾಯ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

  • ಆಧಾರ್ ಕಾರ್ಡ್ ನೆಪದಲ್ಲಿ ಆಸ್ತಿ ಲಪಟಾಯಿಸಿ ಬೀದಿಗೆ ತಳ್ಳಿದ ಮೊಮ್ಮಗಳು!

    ಆಧಾರ್ ಕಾರ್ಡ್ ನೆಪದಲ್ಲಿ ಆಸ್ತಿ ಲಪಟಾಯಿಸಿ ಬೀದಿಗೆ ತಳ್ಳಿದ ಮೊಮ್ಮಗಳು!

    ದಾವಣಗೆರೆ: ಮೊಮ್ಮಗಳೊಬ್ಬಳು ಆಧಾರ್ ಕಾರ್ಡ್ ಮಾಡಿಸುವ ನೆಪದಲ್ಲಿ ಆಸ್ತಿ ಲಪಟಾಯಿಸಿ ವೃದ್ಧೆಯನ್ನು ಹೊರ ಹಾಕಿರುವ ಅಮಾನವೀಯ ಘಟನೆ ದಾವಣಗೆರೆಯ ಕೊಂಡಜ್ಜಿ ರಸ್ತೆಯ ವಿಜಯನಗರದಲ್ಲಿ ನಡೆದಿದೆ.

    ಮಳಿಯಮ್ಮ(80) ಬೀದಿಗೆ ಬಿದ್ದ ನತದೃಷ್ಟ ವೃದ್ಧೆಯಾಗಿದ್ದು, ಇವರನ್ನು ನೇತ್ರಾವತಿ ಬೀದಿಗೆ ತಳ್ಳಿದ ಪಾಪಿ ಮೊಮ್ಮಗಳು. ಮಳಿಯಮ್ಮಗೆ ನಾಲ್ಕು ಜನ ಮಕ್ಕಳಿದ್ದು ಅವರಲ್ಲಿ ಎರಡು ಗಂಡು, ಎರಡು ಹೆಣ್ಣುಮಕ್ಕಳು ಇದ್ದಾರೆ. ನೇತ್ರಾವತಿ ಕೊನೆಯ ಮಗಳ ಮಗಳಾಗಿದ್ದು, ವೃದ್ಧೆಗೆ ಆಸರೆಯಾಗಿದ್ದ ಆಸ್ತಿಯನ್ನು ವಶಪಡಿಸಿಕೊಂಡು ಹೊರ ಹಾಕಿದ್ದಾಳೆ.

    ಆಧಾರ್ ಕಾರ್ಡ್ ಮಾಡಿಸುವುದಾಗಿ ಹೇಳಿ ರಿಜಿಸ್ಟರ್ ಅಫೀಸ್ ಗೆ ಕರೆದುಕೊಂಡು ಹೋಗಿ, ಆಸ್ತಿ ಲಪಟಾಯಿಸಿ ಮಳಿಯಮ್ಮಳನ್ನು ಬೀದಿಗೆ ಬಿಟ್ಟಿದ್ದಾರೆ. ಸದ್ಯ ದೇವಸ್ಥಾನವೇ ವೃದ್ಧೆಗೆ ಆಸರೆಯಾಗಿದ್ದು, ಅಜ್ಜಿಗೆ ಅಕ್ಕ ಪಕ್ಕ ಮನೆಯವರೇ ಊಟ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಅಜ್ಜಿ ಪರಿಸ್ಥಿತಿಯನ್ನು ಪ್ರಶ್ನಿಸಿದ್ರೆ ರೌಡಿಗಳನ್ನು ಬಿಟ್ಟು ಅಕ್ಕ-ಪಕ್ಕ ಮನೆಯವರ ಮೇಲೂ ಹಲ್ಲೆ ನಡೆಸುತ್ತಿದ್ದಾಳೆ. ಸದ್ಯಕ್ಕೆ ವೃದ್ಧಾಪ್ಯ ವೇತನದ ಆಸರೆಯಿಂದ ಈ ಹಿರಿಜೀವ ಜೀವನ ಸಾಗಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv