Tag: ಆಧಾರ್ ಪೂನಾವಾಲಾ

  • ಕೋವಿಶೀಲ್ಡ್ ಬಳಕೆಗೆ ಅನುಮತಿ – ಪೂನಾವಾಲಾ ಮೊದಲ ಪ್ರತಿಕ್ರಿಯೆ

    ಕೋವಿಶೀಲ್ಡ್ ಬಳಕೆಗೆ ಅನುಮತಿ – ಪೂನಾವಾಲಾ ಮೊದಲ ಪ್ರತಿಕ್ರಿಯೆ

    ನವದೆಹಲಿ: ಕೋವಿಶೀಲ್ಡ್ ಬಳಕೆಗೆ ಅನುಮತಿ ನೀಡಿದ ಕುರಿತು ಸೀರಂ ಇನ್‍ಸ್ಟಿಟ್ಯೂಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದಾರ್ ಪೂನಾವಾಲಾ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ವ್ಯಾಕ್ಸಿನ್ ಕಂಡು ಹಿಡಿಯುವಲ್ಲಿ ಸೀರಂ ತಂಡದ ಶ್ರಮಗಳು ಇಂದಿಗೆ ಒಂದು ಹಂತಕ್ಕೆ ತಲುಪಿವೆ. ಇನ್ನೂ ಕೆಲ ದಿನಗಳಲ್ಲಿ ಸೀರಂ ಅಭಿವೃದ್ಧಿ ಪಡಿಸಿರುವ ಕೋವಿಶೀಲ್ಡ್ ಭಾರತದಲ್ಲಿ ತುರ್ತು ಬಳಕೆಗೆ ಬಳಸಬಹುದು ಎಂದಿದ್ದಾರೆ.

    ಆಕ್ಸ್‌ಫರ್ಡ್‌  ವಿಶ್ವವಿದ್ಯಾಲಯ ಮತ್ತು ಫಾರ್ಮಾ ಪ್ರಮುಖ ಅಸ್ಟ್ರಾಜೆನಿಕಾ ಸಹಭಾಗಿತ್ವದಲ್ಲಿ ಸೀರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಟ್ ಲಸಿಕೆಯನ್ನು ಅಭಿವೃದ್ದಿ ಪಡಿಸಿದೆ. ಇದು ಕೊರೊನಾ ವೈರಸ್ ವಿರುದ್ಧ ಸುರಕ್ಷಿತ ಮತ್ತು ಪರಿಣಾಮಕಾರಿ ಹೋರಾಡುತ್ತದೆ. ಮುಂಬರುವ ವಾರಗಳಲ್ಲಿ ಲಸಿಕೆ ಹೊರಬರಲು ಸಿದ್ಧವಾಗಿದೆ ಎಂದು ಆದಾರ್ ಪೂನಾವಾಲಾ ಮಾಹಿತಿ ನೀಡಿದ್ದಾರೆ.

    ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕ ಸೀರಂ ಸಂಸ್ಥೆಯ ಸಿಇಒ ಆದಾರ್ ಪೂನಾವಾಲಾ ಮೊದಲ 50 ಮಿಲಿಯನ್ ಡೋಸ್‍ಗಳಲ್ಲಿ ಹೆಚ್ಚಿನವು ಭಾರತಕ್ಕೆ ನೀಡಲಾಗುತ್ತದೆ ಎಂದು ಈಗಾಗಲೇ ತಿಳಿಸಿದ್ದರು. ಕೋವಿಶೀಲ್ಡ್ ಹೊರತು ಪಡಿಸಿ ಭಾರತ್ ಬಯೋಟಿಕ್ ಕೋವ್ಯಾಕ್ಸಿನ್‍ನನ್ನು ನಿರ್ಬಂಧಿತ ಬಳಕೆಗೆಂದು ಅನುಮತಿ ನೀಡಲಾಗಿದೆ.