Tag: ಆದಿಲಕ್ಷ್ಮಿ

  • ಕಾರು, ಟ್ರಕ್ ಟೈರ್‌ಗೆ ಪಂಕ್ಚರ್ ಹಾಕುವ 2ಮಕ್ಕಳ ತಾಯಿ

    ಕಾರು, ಟ್ರಕ್ ಟೈರ್‌ಗೆ ಪಂಕ್ಚರ್ ಹಾಕುವ 2ಮಕ್ಕಳ ತಾಯಿ

    ಹೈದರಾಬಾದ್: ಮಹಿಳೆ ರಾಜಕೀಯ, ಸಿನಿಮಾ, ಕ್ರೀಡೆ ಹೀಗೆ ಹಲವು ರಂಗದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದೀಗ ತೆಲಂಗಾಣದ ಮಹಿಳೆಯೊಬ್ಬರು ಕಾರು, ಟ್ರಕ್‍ಗಳ ಟೈರ್‌ಗಳನ್ನು ಜೋಡಿಸುವುದು ಮತ್ತು ಪಂಕ್ಚರ್ ಹಾಕುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಆದಿಲಕ್ಷ್ಮಿ ಅವರು ತೆಲಂಗಾಣದ ಯೆಡಲಪಲ್ಲಿ ನಿವಾಸಿಯಾಗಿದ್ದಾರೆ. ಮಹಿಳೆಯರು ಇಚ್ಛಾಶಕ್ತಿ, ದೃಢಸಂಕಲ್ಪ, ಕಠಿಣ ಪರಿಶ್ರಮದಿಂದ ಯಾವುದೇ ಕೆಲಸ ಮಾಡಬಲ್ಲರು ಎಂಬುದನ್ನು ಸಾಧಿಸಲು ಹೊರಟಿರುವ ದಿಟ್ಟ ಮಹಿಳೆಯಾಗಿದ್ದಾರೆ.

    31ರ ಹರೆಯದ ಆದಿಲಕ್ಷ್ಮಿ ಅವರು ಪತಿ ಭದ್ರಮ್‍ಗೆ ಆಟೋಮೊಬೈಲ್ ರಿಪೇರಿ ಅಂಗಡಿಯನ್ನು ನಡೆಸಲು ಸಹಾಯ ಮಾಡುತ್ತಿದ್ದಾರೆ. ಕೊತಗುಡೆಂ ಪಟ್ಟಣದ ಸಮೀಪವಿರುವ ಸುಜಾತಾ ನಗರದಲ್ಲಿರುವ ಸಣ್ಣ ಗ್ಯಾರೇಜ್‍ನಲ್ಲಿ ಮೋಟಾರ್ ಸೈಕಲ್‍ಗಳಷ್ಟೇ ಅಲ್ಲ ಕಾರುಗಳು, ಟ್ರ್ಯಾಕ್ಟರ್ ಮತ್ತು ಟ್ರಕ್‍ಗಳ ಟೈರ್‌ಗಳನ್ನು ಸರಿಪಡಿಸುತ್ತಾರೆ. ಕಳೆದ ಐದು ವರ್ಷಗಳಿಂದ ಗಾಡಿಗೆ ಪಂಕ್ಚರ್ ಹಾಕುವುದು ಟೈರ್‌ಗಳನ್ನು ಬದಲಾಯಿಸುವ ಕೆಲಸ ಮಾಡುತ್ತಾ ಪತಿಗೆ ಸಹಾಯವಾಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದನ್ನೂ ಓದಿ: ಸೇನೆಗೆ ತಯಾರಿ – ಕೆಲಸ ಮುಗಿಸಿ ಪ್ರತಿದಿನ 10 ಕಿಮೀ ಓಡಿಕೊಂಡೇ ಮನೆಗೆ ಹೋಗ್ತಾನೆ!

    ಈ ಕುರಿತಗಾಗಿ ಮಾತನಾಡಿದ ಆದಿಲಕ್ಷ್ಮಿ ಅವರು, ಮಹಿಳೆ ಟೈರನ್ನು  ಸರಿಪಡಿಸುತ್ತಾರೆ ಎನ್ನುವುದನ್ನು ಅಂಗಡಿಗೆ ಬರುವ ಜನರು ನಂಬುತ್ತಿರಲಿಲ್ಲ. ನಂತರ ಇವರ ಕೆಲಸವನ್ನು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ತೆಲಂಗಾಣದ ಮೊದಲ ಮಹಿಳಾ ಮೆಕ್ಯಾನಿಕ್ ಆಗಿರುವುದು ಸುಲಭದ ಪ್ರಯಾಣವಾಗಿರಲಿಲ್ಲ. ಮೊದಲು ಪಂಕ್ಚರ್ ಹಾಕುವುದನ್ನು ಕಲಿತುಕೊಂಡೆ, ನಂತರ ನನ್ನ ಪತಿಗೆ ಸಹಾಯ ಮಾಡಲು ಪ್ರಾರಂಭಿಸಿದೆ. ತನ್ನ ಪತಿ ಪಂಕ್ಚರ್ ಹಾಕಲು ಬೇರೆ ಕಡೆ ಹೋದಾಗ ನಾನು ಅಂಗಡಿಯನ್ನು ನೋಡಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಶಾಸಕನ ಮೊಮ್ಮಗ’ ಎನ್ನುವುದೇ ಬೈಕ್ ನಂಬರ್ ಪ್ಲೇಟ್!

    ಮಹಿಳೆಯರು ಮಾಡಲಾಗದ ಕೆಲಸವಿಲ್ಲ, ಧೈರ್ಯ ಮಾತ್ರ ಬೇಕು. ಯಾವುದೇ ಕೆಲಸವನ್ನು ಸವಾಲಾಗಿ ಸ್ವೀಕರಿಸಬೇಕು. ಇತರ ಮಹಿಳೆಯರು ನನಗಿಂತ ಉತ್ತಮವಾಗಿ ಮಾಡಬಹುದು ಎಂದು ನಾನು ಭಾವಿಸುತ್ತೇನೆ. ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಅವರನ್ನು ಪೊಲೀಸ್ ಅಧಿಕಾರಿಯನ್ನಾಗಿ ಮಾಡಲು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೋಲಿಸಲು 25 ವರ್ಷಗಳ ಬಳಿಕ ಒಂದಾದ ಸಹೋದರರು

    ತೆಲಂಗಾಣ ರಾಷ್ಟ್ರ ಸಮಿತಿ (TRS) ನಾಯಕಿ ಮತ್ತು ಶಾಸಕಿ ಕೆ.ಕವಿತಾ ಅವರು ಆದಿಲಕ್ಷ್ಮಿ ಅವರಿಗೆ ಸಹಾಯ ಹಸ್ತ ನೀಡಲು ಮುಂದೆ ಬಂದರು. ಅವಳ ಕೆಲಸವನ್ನು ಸುಲಭಗೊಳಿಸಲು ಇತರ ಕೆಲವು ಸಂಸ್ಥೆಗಳು ಅವಳ ಯಂತ್ರಗಳನ್ನು ದಾನ ಮಾಡಿದ್ದಾರೆ. ಆದಿಲಕ್ಷ್ಮಿ ಅವರಿಗೆ ಶಾಲೆಗೆ ಹೋಗುವ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಈ ಕುಟುಂಬಕ್ಕೆ ಪಡಿತರ ಚೀಟಿ ನೀಡಬೇಕು. ವಸತಿ ಯೋಜನೆಯಡಿ ಮನೆ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.