Tag: ಆದಿಪುರುಷ್

  • ʻಆದಿಪುರುಷ್‌ʼ ಸಿನಿಮಾದ ಹಿರಿಯ ನಟಿ ಆಶಾ ಶರ್ಮಾ ನಿಧನ

    ʻಆದಿಪುರುಷ್‌ʼ ಸಿನಿಮಾದ ಹಿರಿಯ ನಟಿ ಆಶಾ ಶರ್ಮಾ ನಿಧನ

    ʻಆದಿಪುರುಷ್‌ʼ (Adipurush) ಸಿನಿಮಾದಲ್ಲಿ ಡಾರ್ಲಿಂಗ್‌ ಪ್ರಭಾಸ್‌ ಜೊತೆ ನಟಿಸಿದ್ದ ಹಿರಿಯ ನಟಿ ಆಶಾ ಶರ್ಮಾ (Asha Sharma) (88) ಭಾನುವಾರ ನಿಧನರಾಗಿದ್ದಾರೆ.

    ಏಕ್ತಾ ಕಪೂರ್‌ ಅವರ ಹಿಟ್‌ ಶೋ ʻಕುಂಕುಮ್‌ ಭಾಗ್ಯʼ (Kumkum Bhagya) ಮೂಲಕ ಜನಪ್ರಿಯರಾಗಿದ್ದ ಹಿರಿಯ ನಟಿ 88‌ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಆಕೆಯ ಸಾವಿಗೆ ಇನ್ನೂ ಕಾರಣ ಬಹಿರಂಗಪಡಿಸಿಲ್ಲ.

    ಆಶಾ ಶರ್ಮಾ ನಿಧನಕ್ಕೆ ಸಿನಿ ಮತ್ತು ಟಿವಿ ಆರ್ಟಿಸ್ಟ್ಸ್ ಅಸೋಸಿಯೇಷನ್ ​​(CINTAA) ಎಕ್ಸ್‌ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಸಂತಾಪ ಸೂಚಿಸಿದೆ. ಜೊತೆಗೆ ಹಿರಿಯ ನಟಿ ಹೇಮಾ ಮಾಲಿನಿ, ಪ್ರೇಮ್ ಚೋಪ್ರಾ, ಅರುಣಾ ಇರಾನಿ ಮತ್ತು ನಿರುಪಾ ರಾಯ್ ಸೇರಿದಂತೆ ಬಾಲಿವುಡ್‌ನ ಹಿರಿಯ ನಟ-ನಟಿಯರು ಕಂಬನಿ ಮಿಡಿದಿದ್ದಾರೆ.

    ʻಕುಂಕುಮ್‌ ಭಾಗ್ಯʼ ಡ್ರಾಮಾ ಶೋ ಮೂಲಕ ಜನಪ್ರಿಯವಾಗಿದ್ದ ನಟಿ ಹೆಚ್ಚಾಗಿ ತಾಯಿ ಮತ್ತು ಅಜ್ಜಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕೊನೆಯದಾಗಿ ಪ್ರಭಾಸ್‌ ಹಾಗೂ ಕೃತಿ ಸನೋನ್‌ ನಟನೆಯ ʻಆದಿಪುರುಷ್‌ʼ ಸಿನಿಮಾದಲ್ಲಿ ʻಶಬರಿʼ ಪಾತ್ರ ನಿರ್ವಹಿಸಿದ್ದರು. ಇವರ ಪಾತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

  • ರಾಜಮೌಳಿ ‘ಮಹಾಭಾರತ’ ಮಾಡ್ತಾರೆ- ವಿಜಯೇಂದ್ರ ಪ್ರಸಾದ್ ಗುಡ್ ನ್ಯೂಸ್

    ರಾಜಮೌಳಿ ‘ಮಹಾಭಾರತ’ ಮಾಡ್ತಾರೆ- ವಿಜಯೇಂದ್ರ ಪ್ರಸಾದ್ ಗುಡ್ ನ್ಯೂಸ್

    ಪ್ರಭಾಸ್, ಕೃತಿ ಸನೋನ್ ನಟನೆಯ ‘ಆದಿಪುರುಷ್’ (Adipurush) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಚಿತ್ರದ ಬಗ್ಗೆ ಅಭಿಮಾನಿಗಳಿಂದ ಆಕ್ರೋಶ್ ವ್ಯಕ್ತವಾಗಿದೆ. ಆದಿಪುರುಷ್ ಬ್ಯಾನ್ ಮಾಡಿ ಅಂತಾ ಆಗ್ರಹ ಕೂಡ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಬಾಹುಬಲಿ, ಆರ್‌ಆರ್‌ಆರ್ ಖ್ಯಾತಿಯ ರಾಜಮೌಳಿ ಮಹಾಭಾರತವನ್ನ ಸಿನಿಮಾ ಮಾಡುವುದಾಗಿ ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್ ಸಿಹಿಸುದ್ದಿ ನೀಡಿದ್ದಾರೆ. ಇದನ್ನೂ ಓದಿ:ತಮಿಳಿನ ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ಮುಗಿಸಿದ ಶಿವಣ್ಣ

    ಬಾಹುಬಲಿಯಿಂದಾನೇ (Bahubali) ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಾಗೇ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳಿಗೂ ಪ್ಯಾನ್ ಇಂಡಿಯಾ ಇಮೇಜ್ ಸಿಕ್ಕಿದೆ. ಸಿನಿಮಾದಿಂದ ಸಿನಿಮಾಗೆ ರಾಜಮೌಳಿ (Rajamouli) ರೇಂಜ್ ಬದಲಾಗುತ್ತಲೇ ಇದೆ. ಈ ಮಧ್ಯೆ ರಾಜಮೌಳಿ ಮಹಾಭಾರತ ಸಿನಿಮಾ ಮಾಡುವ ಬಗ್ಗೆನೂ ಚರ್ಚೆ ಆರಂಭ ಆಗಿದೆ. ಇತ್ತೀಚೆಗಷ್ಟೇ ತೆರೆಕಂಡಿರೋ ಪೌರಾಣಿಕ ಸಿನಿಮಾ ಆದಿಪುರುಷ್ ಫ್ಲಾಪ್ ಆಗಿದೆ. ಇದೇ ಬೆನ್ನಲ್ಲೇ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಮಹಾಭಾರತದ ಬಗ್ಗೆ ಕೆಲವು ಆಸಕ್ತಿಕರ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ವಿಜಯೇಂದ್ರ ಪ್ರಸಾದ್ (Vijendra Prasad) ‘ಮಹಾಭಾರತ’ದ ಬಗ್ಗೆ ಹೇಳಿದ್ದೇನು?

    ರಾಜಮೌಳಿಗೆ ಸಿನಿಮಾಗಳಲ್ಲಿ ಸಾಹಸ ದೃಶ್ಯಗಳನ್ನು ಹೆಚ್ಚು ಇಷ್ಟ. ಹಾಗಾಗಿ ಕಥೆಯಲ್ಲಿ ಹೆಚ್ಚೆಚ್ಚು ಸಾಹಸ ದೃಶ್ಯಗಳನ್ನೇ ಸೃಷ್ಟಿ ಮಾಡುತ್ತೇನೆಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. ಹಾಗೇ ರಾಜಮೌಳಿ ಬಯಸಿದಂತೆ ಮಹಾಭಾರತ (Mahabharatha) ಸ್ಕ್ರಿಪ್ಟ್ ರೆಡಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದೇ ವೇಳೆ ಬಾಹುಬಲಿ ಸ್ಕ್ರಿಪ್ಟ್ ಮಾಡುವಾಗ ರಾಜಮೌಳಿ ತಂದೆ ಬಳಿ ಹೇಳಿಕೊಂಡ ಮಾತನ್ನು ನೆನಪಿಸಿಕೊಂಡಿದ್ದಾರೆ. ಬಾಹುಬಲಿ ಸ್ಕ್ರಿಪ್ಟ್ ಬರೆಯುತ್ತಿದ್ದಾಗ, ಒಂದು ರಾಜಮೌಳಿ ಬಂದು ನನ್ನ ಬಳಿ ಕೇಳಿದ್ದರು. ಅಪ್ಪ ನಾವ್ಯಾಕೆ ಈ ಸಿನಿಮಾ ಮಾಡುತ್ತಿದ್ದೇವೆ ಅಂತ ಗೊತ್ತಾ? ಅಂತ ಕೇಳಿದ್ದರು. ಆಗ ನಾನು ಯಾಕೆ ಎಂದು ಕೇಳಿದೆ. ಈ ಸಿನಿಮಾದಲ್ಲಿ ರಾಜರು, ಅರಮನೆಗಳು, ರಾಣಿಯರು, ಎದುರಾಳಿಗಳು ಹಾಗೆಯೇ ಅದ್ದೂರಿತನ ಎಲ್ಲವೂ ಇದೆ. ಈ ಸಿನಿಮಾ ಮೂಲಕ ಮುಂದಿನ ದಿನಗಳಲ್ಲಿ ನಾನು ಮಹಾಭಾರತವನ್ನು ಮಾಡಲು ಎಷ್ಟು ರೆಡಿಯಿದ್ದೇನೆ ಎಂದು ಪರೀಕ್ಷೆ ಮಾಡಿಕೊಳ್ಳಲು ಮಾಡುತ್ತಿದ್ದೇನೆ ಎಂದು ರಾಜಮೌಳಿ ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ.

    ‘ಬಾಹುಬಲಿ’ ಸಿನಿಮಾ ಮಾಡುವಾಗ ಈ ಸಿನಿಮಾ ಗೆದ್ದರೆ, ಮಹಾಭಾರತ ಸಿನಿಮಾ ಮಾಡುತ್ತೇನೆ ರಾಜಮೌಳಿ ಎಂದಿದ್ದರು ಎಂದು ವಿಜಯೇಂದ್ರ ಪ್ರಸಾದ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ದೇವರ ದಯೆಯಿಂದ ಆ ಸಿನಿಮಾ ಸಿನಿಮಾ ಆಗುತ್ತೆ. ರಾಜಮೌಳಿ ಸಿನಿಮಾ ಮಾಡುತ್ತಾರೆ ಎಂದು ರಾಜಮೌಳಿ ತಂದೆ ಅಪ್‌ಡೇಟ್ ನೀಡಿದ್ದಾರೆ.

    ಬಾಹುಬಲಿ, ಬಾಹುಬಲಿ 2, ಆರ್‌ಆರ್‌ಆರ್ ಸಿನಿಮಾಗಳನ್ನ ಕೊಟ್ಟಿರೋ ರಾಜಮೌಳಿ ಅವರ ಮಹಾಭಾರತ ಮಾಡುವ ಬಗ್ಗೆ ಸಿಹಿಸುದ್ದಿ ನೀಡಿರೋದು ಫ್ಯಾನ್ಸ್ಗೆ ಖುಷಿ ಕೊಟ್ಟಿದೆ. ಒಂದು ಸಿನಿಮಾಗೆ 3-4 ವರ್ಷ ಸಮಯ ಮೀಸಲಿಡುವ ರಾಜಮೌಳಿ ಅವರ ಸಿನಿಮಾ ಮೇಲಿನ ಪ್ರೀತಿ ಅಭಿಮಾನಿಗಳಿಗೆ ತಿಳಿದಿದೆ ಹಾಗಾಗಿ ‘ಮಹಾಭಾರತ’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ.

  • ರಾಮಾಯಣಕ್ಕೂ ‘ಆದಿಪುರುಷ್’ ಸಿನಿಮಾಗೂ ಸಂಬಂಧವಿಲ್ಲ- ವರಸೆ ಬದಲಿಸಿದ ಚಿತ್ರತಂಡ

    ರಾಮಾಯಣಕ್ಕೂ ‘ಆದಿಪುರುಷ್’ ಸಿನಿಮಾಗೂ ಸಂಬಂಧವಿಲ್ಲ- ವರಸೆ ಬದಲಿಸಿದ ಚಿತ್ರತಂಡ

    ಬಾಹುಬಲಿ ಪ್ರಭಾಸ್ (Bahubali Prabhas), ಕೃತಿ (Kriti Sanon) ನಟನೆಯ ‘ಆದಿಪುರುಷ್’ (Adipurush) ಜೂನ್ 16ಕ್ಕೆ ರಿಲೀಸ್ ಆಗಿದೆ. ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಬಗ್ಗೆ ಬಗೆ ಬಗೆಯ ರೀತಿಯಲ್ಲಿ ಚರ್ಚೆ ನಡೆಯುತ್ತಿದ್ದರೆ, ಚಿತ್ರತಂಡದ ಸಂಭಾಷಣೆಕಾರ ಮನೋಜ್ ಮುಂತಶೀರ್ ಅವರು ಇದೀಗ ಸಿನಿಮಾ ಬಗ್ಗೆ ವರಸೆ ಬದಲಿಸಿದ್ದಾರೆ. ರಾಮಾಯಣಕ್ಕೂ ಆದಿಪುರುಷ್ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಅಂತಾ ಹೇಳಿಕೆ ನೀಡಿದ್ದಾರೆ.

    ಓಂ ರಾವತ್ (Om Raut) ನಿರ್ದೇಶನದ ‘ಆದಿಪುರುಷ್’ ಸಿನಿಮಾಗೆ ಕೆಟ್ಟ ವಿಮರ್ಶೆ ವ್ಯಕ್ತವಾಗುತ್ತಿದೆ. ಈ ಸಿನಿಮಾದ ಹಲವು ಅಂಶಗಳನ್ನು ಟೀಕಿಸಲಾಗುತ್ತಿದೆ. ರಾಮಾಯಣವನ್ನು ಆಧರಿಸಿದ ಈ ಚಿತ್ರದಲ್ಲಿ ಪ್ರಭಾಸ್ ಅವರು ರಾಮನ ಪಾತ್ರ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಆಂಜನೇಯನಾಗಿ ದೇವದತ್ತ ನಾಗೆ ಅವರು ಅಭಿನಯಿಸಿದ್ದಾರೆ. ಲಕ್ಷ್ಮಣನ ಪಾತ್ರಕ್ಕೆ ಸನ್ನಿ ಸಿಂಗ್ ಅವರು ಬಣ್ಣ ಹಚ್ಚಿದ್ದಾರೆ. ಸೈಫ್ ಅಲಿ ಖಾನ್ ಅವರು ರಾವಣನಾಗಿ ಅಬ್ಬರಿಸಿದ್ದಾರೆ. ಆದರೆ ರಾಮಾಯಣವನ್ನು ತೋರಿಸಿದ ರೀತಿ ಸರಿಯಾಗಿಲ್ಲ ಎಂದು ಪ್ರೇಕ್ಷಕರು ತಕರಾರು ತೆಗೆದಿದ್ದಾರೆ. ಸೈಫ್‌ರನ್ನ ಮಾಡ್ರನ್ ರಾವಣನಂತೆ ತೋರಿಸಿರೋದು ಟ್ರೋಲ್ ಆಗುತ್ತಿದೆ. ಸಿನಿಮಾ ನೈಜವಾಗಿ ತೋರಿಸಿಲ್ಲ ಎಂದು ಟೀಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿನಿಮಾದ ಸಂಭಾಷಣೆಕಾರ ಮನೋಜ್ ಮುಂತಶೀರ್ ಅವರು ಮಾತು ಬದಲಾಯಿಸಿದ್ದಾರೆ. ಈ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ. ಇದನ್ನೂ ಓದಿ:ಕಾಲು ಮುರಿದುಕೊಂಡು ಫೋಟೋ ಶೇರ್ ಮಾಡಿದ ನಟ ಜಗ್ಗೇಶ್

    ಸೋಶಿಯಲ್ ಮೀಡಿಯಾದಲ್ಲಿ ‘ಆದಿಪುರುಷ್’ ಸಿನಿಮಾವನ್ನು ಟ್ರೋಲ್ ಮಾಡಲಾಗುತ್ತಿದೆ. ಪಾತ್ರಗಳನ್ನು ತೋರಿಸಿದ ರೀತಿ, ಗ್ರಾಫಿಕ್ಸ್ ಗುಣಮಟ್ಟ ಸೇರಿದಂತೆ ಅನೇಕ ವಿಚಾರಗಳನ್ನು ಜನರು ಟೀಕಿಸುತ್ತಿದ್ದಾರೆ. ಈ ನಡುವೆ ಸಂಭಾಷಣಕಾರ ಮನೋಜ್ ಮುಂತಶೀರ್ ಅವರು ನೀಡಿದ ಕೇಳಿಕೆ ಸೆನ್ಸೇಷನ್ ಕ್ರಿಯೆಟ್ ಮಾಡಿದೆ. ಇದನ್ನು ನಾನು ಮೊದಲೇ ಹೇಳಿದ್ದೇ ಮತ್ತು ಈಗಲೂ ಹೇಳುತ್ತೇನೆ. ಈ ಸಿನಿಮಾದ ಹೆಸರು ಆದಿಪುರುಷ್. ನಾವು ರಾಮಾಯಣವನ್ನು ಸಿನಿಮಾ ಮಾಡಿಲ್ಲ. ರಾಮಾಯಾಣಕ್ಕೂ ಆದಿಪುರುಷ್‌ ಸಿನಿಮಾಗೂ ಸಂಬಂಧವಿಲ್ಲ. ಅದರಿಂದ ತುಂಬ ಸ್ಫೂರ್ತಿ ಪಡೆದಿದ್ದೇವೆ. ಡಿಸ್‌ಕ್ಲೈಮರ್‌ನಲ್ಲೂ ನಾವು ಅದನ್ನೇ ಹೇಳಿದ್ದೇವೆ ಎಂದು ಮನೋಜ್ ಮುಂತಶೀರ್ ಹೇಳಿದ್ದಾರೆ.

    ಚಿತ್ರತಂಡದ ನಡೆಗೆ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಸಿನಿಮಾ ಕಂಟೆಂಟ್ ವಿಷ್ಯವಾಗಿ ಸುದ್ದಿಯಾಗೋದ್ದಕ್ಕಿಂತ ಟ್ರೋಲ್ ಮಚಾರವಾಗಿಯೇ ಭಾರಿ ಸದ್ದು ಮಾಡುತ್ತಿದೆ.

  • ಆಂಜನೇಯನಿಗಾಗಿ ಮೀಸಲಿಟ್ಟ ಸೀಟ್‌ನಲ್ಲಿ ಕುಳಿತು ‘ಆದಿಪುರುಷ್‌’ ಚಿತ್ರ ನೋಡಿದ ವ್ಯಕ್ತಿಗೆ ಬಿತ್ತು ಪೆಟ್ಟು

    ಆಂಜನೇಯನಿಗಾಗಿ ಮೀಸಲಿಟ್ಟ ಸೀಟ್‌ನಲ್ಲಿ ಕುಳಿತು ‘ಆದಿಪುರುಷ್‌’ ಚಿತ್ರ ನೋಡಿದ ವ್ಯಕ್ತಿಗೆ ಬಿತ್ತು ಪೆಟ್ಟು

    ಪ್ರಭಾಸ್- ಕೃತಿ ಸನೋನ್ (Kriti Sanon) ನಟನೆಯ ‘ಆದಿಪುರುಷ್’ ಸಿನಿಮಾ ಜೂನ್ 16ರಂದು ರಿಲೀಸ್ ಆಗಿದೆ. ನೆಚ್ಚಿನ ನಟ ಪ್ರಭಾಸ್ ನಟನೆಯ ಬಿಡುಗಡೆಯ ಸಂಭ್ರಮದ ನಡುವೆ ಅಹಿತಕರ ಘಟನೆವೊಂದು ನಡೆದಿದೆ. ಚಿತ್ರಮಂದಿರದಲ್ಲಿ ಆಂಜನೇಯನಿಗಾಗಿ ಮೀಸಲಿಟ್ಟ ಸೀಟ್‌ನಲ್ಲಿ ಆದಿಪುರುಷ್ ಚಿತ್ರ ವೀಕ್ಷಣೆ ಮಾಡಿದ್ದಕ್ಕಾಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಕುರಿತ ವೀಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ.‌ ಇದನ್ನೂ ಓದಿ:ನಟ ಸುದೀಪ್ ಪ್ರಚಾರಕ್ಕೆ ಬಾರದಂತೆ ತಡೆದದ್ದು ಸಿಎಂ ಸಿದ್ದು : ಪ್ರತಾಪ್ ಸಿಂಹ ಹೊಸ ಬಾಂಬ್

    ಬಾಹುಬಲಿ ಪ್ರಭಾಸ್ (Prabhas) , ಕೃತಿ ಅಭಿನಯದ ‘ಆದಿಪುರುಷ್’ (Adipurush) ಚಿತ್ರ ಕೊನೆಗೂ ತೆರೆಗೆ ಅಪ್ಪಳಿಸಿದೆ. ರಾಮಾಯಣ ಆಧಾರಿತ ಈ ಸಿನಿಮಾದಲ್ಲಿ ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್ ನಟಿಸಿದ್ದಾರೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಕಳಪೆ ವಿಎಕ್ಸ್ಎಫ್ ಎಂದು ಕಿಡಿಕಾರಿದ್ದಾರೆ. ಪ್ರತಿ ಚಿತ್ರಮಂದಿರದಲ್ಲೂ ಆಂಜನೇಯನಿಗಾಗಿ ಒಂದು ಸೀಟ್‌ನ ಮೀಸಲಿಡಲಾಗಿತ್ತು. ಅಭಿಮಾನಿಯೊಬ್ಬ ಖಾಲಿ ಬಿಟ್ಟಿದ್ದ ಸೀಟ್‌ನಲ್ಲಿ ಆದಿಪುರುಷ್ ಸಿನಿಮಾ ನೋಡಿದ್ದಾನೆ, ಇದನ್ನ ನೋಡಿದ ಇತರೆ ಅಭಿಮಾನಿಗಳು ಆ ವ್ಯಕ್ತಿಗೆ ಥಳಿಸಿದ್ದಾರೆ.

    ಪ್ರಭಾಸ್ ಸಿನಿಮಾ ಅನೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಟೆಕೆಟ್ ಸಿಗದೆ ಪರದಾಡುತ್ತಿದ್ದಾರೆ. ಚಿತ್ರಮಂದಿರಗಳು ತುಂಬಿದ ಕಾರಣ ಆಂಜನೇಯನಿಗೆ ಮೀಸಲಿಟ್ಟ ಆಸನದ ಮೇಲೆ ಕುಳಿತಿದ್ದಿದ್ದಕ್ಕಾಗಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಲಾಗಿದೆ. ಹೈದರಾಬಾದ್‌ನ ಭ್ರಮರಾಂಬ ಥಿಯೇಟರ್‌ನಲ್ಲಿ ಈ ಘಟನೆ ನಡೆದಿದೆ. ಚಿತ್ರಮಂದಿರ ಹೌಸ್‌ಫುಲ್ ಇದ್ದಿದ್ದರಿಂದ ವ್ಯಕ್ತಿಯರ‍್ವ ಹನುಮಂತನಿಗೆ ಕಾಯ್ದಿರಿಸಿದ ಸೀಟ್ ಮೇಲೆ ಕುಳಿತಿದ್ದಾನೆ. ಇದನ್ನು ಸಹಿಸದ ಉಳಿದವರು ಆತನಮೇಲೆ ದಾಳಿ ಮಾಡಲಾಗಿದೆ. ಕೆಲವರು ಈ ಹಲ್ಲೆಯನ್ನು ತಪ್ಪಿಸಲು ಪ್ರಯತ್ನಿಸಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ.

    ರಾಮನ ಆರಾಧನೆ ನಡೆದರೆ ಆ ಸ್ಥಳದಲ್ಲಿ ಆಂಜನೇಯ (Anjaneya) ಬರುತ್ತಾನೆ ಎಂಬುದು ಭಕ್ತರ ನಂಬಿಕೆ. ಆ ನಂಬಿಕೆ ಚಿತ್ರತಂಡಕ್ಕೂ ಇತ್ತು. ಹಾಗಾಗಿ ಪ್ರತಿ ಚಿತ್ರಮಂದಿರದಲ್ಲೂ ಒಂದು ಸೀಟ್ ಖಾಲಿ ಬೀಡಲಾಗಿತ್ತು. ಈ ಬಗ್ಗೆ ಹಿಂದೆಯೇ ಚಿತ್ರದ ನಿರ್ದೇಶಕ ಓಂ ರಾವತ್ ಹೇಳಿದ್ದರು.

  • ‘ಆದಿಪುರುಷ್’ ಸಿನಿಮಾ ರಿಲೀಸ್‌ಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಭಾಸ್

    ‘ಆದಿಪುರುಷ್’ ಸಿನಿಮಾ ರಿಲೀಸ್‌ಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಭಾಸ್

    ಬಾಹುಬಲಿ ಪ್ರಭಾಸ್ (Prabhas) ಸದ್ಯ ಬಹುನಿರೀಕ್ಷಿತ ‘ಆದಿಪುರುಷ್’ (Adipurush) ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ತೆರೆಗೆ ಬರುವ ಮುನ್ನ ಪ್ರಭಾಸ್ ತಿರುಪತಿ ತಿಮ್ಮಪ್ಪನ (Tirupati) ದರ್ಶನ ಪಡೆದಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ನಟ ಪ್ರಭಾಸ್, ಕೃತಿ ಸನೋನ್ ನಟನೆಯ ‘ಆದಿಪುರುಷ್’ ಇದೇ ಜೂನ್ 16ಕ್ಕೆ ಬೆಳ್ಳಿಪರದೆಯಲ್ಲಿ ಅಬ್ಬರಿಸಲು ಸಿದ್ಧವಾಗಿದೆ. ಈಗಾಗಲೇ ಚಿತ್ರದ ಪೋಸ್ಟರ್, ಟ್ರೈಲರ್‌ನಿಂದ ಹವಾ ಕ್ರಿಯೇಟ್ ಮಾಡಿದೆ. ಚಿತ್ರದ ಹಾಡುಗಳು ಕೂಡ ಗಮನ ಸೆಳೆದಿದೆ. ಸಾಕಷ್ಟು ಟೀಕೆಗಳ ನಡುವೆ ಚಿತ್ರ ತೆರೆಗೆ ಸಜ್ಜಾಗಿದೆ.

    ಪ್ರಭಾಸ್ ಅವರು ‘ಬಾಹುಬಲಿ 2’ (Bahubali 2) ಸಿನಿಮಾ ನಂತರ ನಟಿಸಿದ ಯಾವ ಚಿತ್ರ ಕೂಡ ಸಕ್ಸಸ್ ಕಾಣಲಿಲ್ಲ. ಸಾಲು ಸಾಲು ಸಿನಿಮಾ ಸೋಲುಗಳನ್ನ ಕಂಡಿರುವ ನಟನಿಗೆ ಈಗ ಗೆಲುವಿನ ಅವಶ್ಯಕತೆಯಿದೆ. ಆದಿಪುರುಷ್ ಯಶಸ್ಸಿನ ಮೇಲೆ ಇಡೀ ಚಿತ್ರತಂಡ – ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ:ಅಂಬಿ ಪುತ್ರನ ಮದುವೆ ಸಂಭ್ರಮದಲ್ಲಿ ಮಿಂಚಿದ ಯಶ್, ರಾಧಿಕಾ ಜೋಡಿ

    ಸದ್ಯ ‘ಆದಿಪುರುಷ್’ ಚಿತ್ರದ ಪ್ರೀ- ರಿಲೀಸ್ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ತಿರುಪತಿಯಲ್ಲಿ ಕಾರ್ಯಕ್ರಮ ಜರುಗಲು ವೇದಿಕೆ ಸಜ್ಜಾಗುತ್ತಿದೆ. ಜೂನ್ 6ರ ಸಂಜೆ ಪ್ರೀ ರಿಲೀಸ್ ಪ್ರೋಗ್ರಾಂ ನಡೆಯಲಿದೆ. ಈ ಮುನ್ನವೇ ನಟ ತಿರುಪತಿ ತಿಮ್ಮಪ್ಪನ ಸನ್ನಿಧಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

  • ‘ಆದಿಪುರುಷ್‌’ ಪೋಸ್ಟರ್‌ನಲ್ಲಿ ಮತ್ತೆ ಎಡವಟ್ಟು- ಚಿತ್ರತಂಡ ವಿರುದ್ಧ ಫ್ಯಾನ್ಸ್ ಗರಂ

    ‘ಆದಿಪುರುಷ್‌’ ಪೋಸ್ಟರ್‌ನಲ್ಲಿ ಮತ್ತೆ ಎಡವಟ್ಟು- ಚಿತ್ರತಂಡ ವಿರುದ್ಧ ಫ್ಯಾನ್ಸ್ ಗರಂ

    ಪ್ರಭಾಸ್, ಕೃತಿ ಸನೋನ್ (Kriti Sanon) ನಟನೆಯ ‘ಆದಿಪುರುಷ್’ ಸಿನಿಮಾ ಸದಾ ಒಂದಲ್ಲಾ ಒಂದು ಟೀಕೆಯ ಮೂಲಕ ಸದ್ದು ಮಾಡುತ್ತಲೇ ಇದೆ. ಪೋಸ್ಟರ್ ಅಥವಾ ಟ್ರೈಲರ್‌ನಲ್ಲಿ ಏನಾದರೂ ಎಡವಟ್ಟು ಮಾಡಿಕೊಳ್ಳುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಆದಿಪುರುಷ್ ಟೀಂ ಗುರಿಯಾಗುತ್ತಲೇ ಬಂದಿದೆ. ಪ್ರಸ್ತುತ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ಚಿತ್ರತಂಡ ಮತ್ತೆ ಎಡವಟ್ಟ ಮಾಡಕೊಂಡಿದ್ದಾರೆ. ಇದನ್ನೂ ಓದಿ:ನಟನೆಗೆ ಗುಡ್ ಬೈ ಹೇಳ್ತಾರಾ ರಜನಿಕಾಂತ್?

    ‘ಬಾಹುಬಲಿ’ (Bahubali) ಪ್ರಭಾಸ್ ಈ ಚಿತ್ರದಲ್ಲಿ ಇರುವ ಕಾರಣ, ಆದಿಪುರುಷ್ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಯನ್ನ ಅಭಿಮಾನಿಗಳು ಹೊಂದಿದ್ದಾರೆ. ಓಂ ರಾವತ್ ನಿರ್ದೇಶನದಲ್ಲಿ ‘ಆದಿಪುರುಷ್’ ಚಿತ್ರ ಮೂಡಿ ಬಂದಿದೆ. 400 ಕೋಟಿ ರೂಪಾಯಿ ಬಜೆಟ್‌ನಲ್ಲಿ ಚಿತ್ರ ಮೂಡಿ ಬಂದಿದೆ. ರಾಮನಾಗಿ ಪ್ರಭಾಸ್ (Prabhas), ಸೀತೆಯಾಗಿ ಕೃತಿ ಸನೋನ್, ರಾವಣನಾಗಿ ಸೈಫ್ ಅಲಿ ಖಾನ್ (Saif Ali Khan) ನಟಿಸಿದ್ದಾರೆ. ಜೂನ್ 16ಕ್ಕೆ ಚಿತ್ರ ತೆರೆಗೆ ಬರಲಿದೆ. ಶ್ರೀ ರಾಮನ ಹಾಡು ಇದೇ ಮೇ 20ಕ್ಕೆ ರಿಲೀಸ್‌ ಆಗಲಿದೆ.

    ‘ಆದಿಪುರುಷ್’ (Adipurush) ಸಿನಿಮಾ ರಿಲೀಸ್‌ಗೆ ಇನ್ನೊಂದು ತಿಂಗಳು ಬಾಕಿಯಿದೆ ಎಂದು ಹೇಳಿ ಚಿತ್ರತಂಡ ಹೊಸ ಪೋಸ್ಟರ್ ಹಂಚಿಕೊಂಡಿದೆ. ಆಗಸದಲ್ಲಿ ಹಾರುವ ಸಾಗುತ್ತಿರುವ ಹನುಮಂತನ ಬೆನ್ನೇರಿ ರಾವಣನ ಸೈನ್ಯದ ವಿರುದ್ಧ ಶ್ರೀರಾಮ ಬಾಣ ಪ್ರಯೋಗ ಮಾಡುತ್ತಿರುವ ದೃಶ್ಯ ಇದು. ಪೋಸ್ಟರ್ ಮೊದಲ ನೋಟದಲ್ಲೇ ಗಮನ ಸೆಳೆಯುತ್ತಿದೆ ಟ್ರೈಲರ್‌ನಲ್ಲಿ ಈ ಝಲಕ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದರು. ಈಗ ಪೋಸ್ಟರ್ ಕೂಡ ಸಖತ್ ಕಿಕ್ ಕೊಡ್ತಿದೆ. ಆದರೆ ಪೋಸ್ಟರ್‌ನಲ್ಲಿ ಕಟ್ಟಡ ಇರುವುದು ನೋಡಿ ಕೆಲವರು ಅಚ್ಚರಿಗೊಂಡಿದ್ದಾರೆ.

     

    View this post on Instagram

     

    A post shared by Adipurush (@adipurushmovieofficial)

    ಸಾಮಾನ್ಯವಾಗಿ ಗ್ರಾಫಿಕ್ ಡಿಸೈನರ್‌ಗಳು ಹೊಸ ಪೋಸ್ಟರ್ ಡಿಸೈನ್ ಮಾಡುವಾಗ ರೆಫರೆನ್ಸ್ಗೆ ಬೇರೆ ಯಾವುದಾದರೂ ಪೋಸ್ಟರ್ ಬಳಸುತ್ತಾರೆ. ಅದೇ ರೀತಿ ‘ಆದಿಪರುಷ್’ ಚಿತ್ರದ ಈ ಹೊಸ ಪೋಸ್ಟರ್‌ಗೂ ಯಾವುದೋ ಹಾಲಿವುಡ್ ಪೋಸ್ಟರ್ ತೆಗೆದುಕೊಂಡಿದ್ದಾರೆ. ಆದರೆ ಎಡಿಟ್ ಮಾಡುವ ವೇಳೆ ಒರಿಜಿನಲ್ ಪೋಸ್ಟರ್‌ನಲ್ಲಿದ್ದ ಕಟ್ಟಡವನ್ನು ತೆಗೆಯಲು ಮರೆತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ. ಇಷ್ಟು ದೊಡ್ಡ ಸಿನಿಮಾ ಪೋಸ್ಟರ್ ರಿಲೀಸ್ ಮಾಡುವಾಗ ಇದನ್ನೆಲ್ಲಾ ನೋಡಿಕೊಳ್ಳಬೇಕು. ರಾಮಾಯಣ ಕಾಲದಲ್ಲಿ ಆಧುನಿಕ ಕಾಲದ ಕಟ್ಟಡಗಳು ಹೇಗೆ ಬರೋಕೆ ಸಾಧ್ಯ. ಇದರಲ್ಲಿ ಏನಾದರೂ ಲಾಜಿಕ್ ಇದ್ಯಾ? ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

  • ಸೀತಾ ಮಾತೆಯಾಗಿ ಬಂದ ಕೃತಿ ಸನೋನ್- ಫಸ್ಟ್ ಲುಕ್ ಔಟ್

    ಸೀತಾ ಮಾತೆಯಾಗಿ ಬಂದ ಕೃತಿ ಸನೋನ್- ಫಸ್ಟ್ ಲುಕ್ ಔಟ್

    ಓಂ ರೌತ್‌ ನಿರ್ದೇಶನದ ‘ಆದಿಪುರುಷ್’ ಸಿನಿಮಾ ಶುರುವಾದಾಗಿನಿಂದ ಒಂದಲ್ಲಾ ಒಂದು ವಿವಾದಗಳಿಂದ ಸದ್ದು ಮಾಡುತ್ತಲೇ ಇದೆ. ಸದ್ಯ ಸೀತೆ ಆಗಿ ನಟಿಸಿರುವ ಕೃತಿ ಸನೋನ್ (Kriti Sanon) ಲುಕ್‌ನ್ನು ಆದಿಪುರುಷ್ ಟೀಂ ರಿವೀಲ್ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಛತ್ರಪತಿ ಶಿವಾಜಿಯ ಸೊಸೆ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಫೈನಲ್?‌

    ಪ್ರಭಾಸ್- ಕೃತಿ ಸನೋನ್ ನಟನೆಯ ‘ಆದಿಪುರುಷ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಹಿಂದೆ ಟೀಸರ್- ಪೋಸ್ಟರ್‌ಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಕಳಪೆ ಗ್ರಾಫಿಕ್ಸ್ ವರ್ಕ್ ನೋಡಿ ಚಿತ್ರದ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದರು. ಆದರೆ ಇದೀಗ ತಪ್ಪಿಲ್ಲದೇ ಸೀತಾ ಪಾತ್ರಧಾರಿ ಕೃತಿ ಸನೂನ್ ಫಸ್ಟ್ ಲುಕ್‌ನ ರಿವೀಲ್ ಮಾಡಲಾಗಿದೆ.

     

    View this post on Instagram

     

    A post shared by Kriti (@kritisanon)

    ಸೀತೆ ಬೈತಲೆಗೆ ಕುಂಕುಮ, ಕೈಯಲ್ಲಿ ಬಳೆ ಧರಿಸಿ ಸುಂದರವಾಗಿ ಸೀತೆ ಲುಕ್‌ನಲ್ಲಿ ಕೃತಿ ಸನೋನ್ ಎಂಟ್ರಿ ಕೊಟ್ಟಿದ್ದಾರೆ. ನಟಿಯ ಸೀತೆಯ ಲುಕ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೊದಲಿಗೆ ಪ್ರಭಾಸ್ ಶ್ರೀರಾಮನಾಗಿ ಬಿಲ್ಲು ಬಾಣ ಹಿಡಿದು ನಿಂತಿರುವ ಚಿತ್ರ ಕಾಣುತ್ತದೆ. ನಂತರ ನಿಧಾನವಾಗಿ ಸೀತಾ ಮಾತೆಯ ದರ್ಶನವಾಗುತ್ತದೆ. ಸೀತಾ ಮಾತೆಯ ಎರಡು ಪೋಸ್ಟರ್ ಚಿತ್ರತಂಡ ಹಂಚಿಕೊಂಡಿದೆ.

     

    View this post on Instagram

     

    A post shared by Kriti (@kritisanon)

    400 ಕೋಟಿ ರೂಪಾಯಿಗೂ ಅಧಿಕ ಬಜೆಟ್‌ನ ‌’ಆದಿಪುರುಷ್’ ಚಿತ್ರದಲ್ಲಿ ಶ್ರೀರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್, ರಾವಣನಾಗಿ ಸೈಫ್ ಅಲಿ ಖಾನ್ (Saif Ali Khan) ನಟಿಸಿದ್ದಾರೆ. ಜೂನ್ 16ರಂದು ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ‘ಆದಿಪುರುಷ್’ ಸಿನಿಮಾ ತೆರೆ ಕಾಣಲಿದೆ.

  • ಪ್ರಭಾಸ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ`ಆದಿಪುರುಷ್’ ಟೀಮ್

    ಪ್ರಭಾಸ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ`ಆದಿಪುರುಷ್’ ಟೀಮ್

    `ಬಾಹುಬಲಿ’ ಸೂಪರ್ ಸ್ಟಾರ್ ಪ್ರಭಾಸ್ (Prabhas), ಕೃತಿ ಸನೂನ್‌  (Kriti Sanon) ನಟನೆಯ `ಆದಿಪುರುಷ್’ ಸಿನಿಮಾದ ರಿಲೀಸ್‌ ಡೇಟ್ ಫಿಕ್ಸ್‌ ಆಗಿದೆ. ಈ ಕುರಿತು ಅಧಿಕೃತವಾಗಿ ನಿರ್ದೇಶಕ ಓಂ ರೌತ್‌ ತಿಳಿಸಿದ್ದಾರೆ. ಈ ಮೂಲಕ ಪ್ರಭಾಸ್‌ ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

    ನಟ ಪ್ರಭಾಸ್‌ಗೆ ದೇಶಾದ್ಯಂತ ಫ್ಯಾನ್ಸ್ ಇದ್ದಾರೆ. ನೆಚ್ಚಿನ ನಟನ ಸಿನಿಮಾಗಾಗಿ ಕಾದು ನೋಡುವ ಬಹುದೊಡ್ಡ ವರ್ಗವೇ ಇದೆ. `ಆದಿಪುರುಷ್’ (Adipurush) ಚಿತ್ರಕ್ಕಾಗಿ ಕಾಯ್ತಿರುವ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಈ ವರ್ಷವೇ ವಾರಿಸು, ತುನಿವು ಜೊತೆ `ಆದಿಪುರುಷ್’ ಚಿತ್ರ ತೆರೆಕಾಣಬೇಕಿತ್ತು. ಚಿತ್ರದ ಟೀಸರ್‌ಗೆ ಕಳಪೆ ಎಂದು ನೆಟ್ಟಿಗರಿಂದ ಉತ್ತರ ಬಂದ್ಮೇಲೆ ರಿಲೀಸ್ ಡೇಟ್ ಮುಂದಕ್ಕೆ ಹಾಕಲಾಗಿತ್ತು. ಈಗ ರಿಲೀಸ್‌ ಬಗ್ಗೆ ಹೊಸ ಅಪ್‌ಡೇಟ್‌ ಸಿಕ್ಕಿದೆ.

    `ಆದಿಪುರುಷ್’ ಸಿನಿಮಾದ ಟೀಸರ್‌ಗೆ ಕಳಪೆ ಗ್ರಾಫಿಕ್ಸ್ ವರ್ಕ್ ನೋಡಿ, ನೆಟ್ಟಿಗರಿಂದ ಚಿತ್ರತಂಡಕ್ಕೆ ಭಾರಿ ಟೀಕೆ ಎದುರಿಸಿತ್ತು. ಹಾಗಾಗಿ ಒಂದಿಷ್ಟು ಬದಲಾವಣೆಯೊಂದಿಗೆ ಬರುತ್ತೇವೆ ಎಂದು ತಿಳಿಸಿದ್ದರು. ಅದರಂತೆಯೇ ಈಗ ಜೂನ್‌ 16, 2023ರಲ್ಲಿ ಸಿನಿಮಾ ರಿಲೀಸ್‌ ಆಗಲಿದೆ ಎಂದು ನಿರ್ದೇಶಕ ಓಂ ರೌತ್‌ ತಿಳಿಸಿದ್ದಾರೆ. ಇದನ್ನೂ ಓದಿ: ಕೆ.ಎಲ್ ರಾಹುಲ್- ಅಥಿಯಾ ಶೆಟ್ಟಿ ಮನೆಯಲ್ಲಿ ಮದುವೆ ಸಂಭ್ರಮ

    ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಓಂ ರೌತ್ ಚಿತ್ರ ಜೂನ್ 16ರಂದೇ ಬಿಡುಗಡೆಯಾಗಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಜ.17ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಓಂ ರೌತ್ `ಆದಿಪುರುಷ್’ ರಿಲೀಸ್‌ಗೆ ಇನ್ನು 150 ದಿನಗಳು ಬಾಕಿ ಇದೆ ಎಂದು ಪೋಸ್ಟರ್ ಹಂಚಿಕೊಳ್ಳುವ ಮೂಲಕ ಚಿತ್ರ ಜೂನ್ 16ಕ್ಕೆ ತೆರೆ ಕಾಣಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ. 3ಡಿ ರೂಪದಲ್ಲಿ ಸಿನಿಮಾ ತೆರೆಗೆ ಬರಲಿದೆ. ಈ ಅಪ್‌ಡೇಟ್‌ ಕೇಳಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚಿತ್ರತಂಡದ ಎಡವಟ್ಟು: `ಆದಿಪುರುಷ್’ ರಿಲೀಸ್ ಡೇಟ್ ಮುಂದಕ್ಕೆ

    ಚಿತ್ರತಂಡದ ಎಡವಟ್ಟು: `ಆದಿಪುರುಷ್’ ರಿಲೀಸ್ ಡೇಟ್ ಮುಂದಕ್ಕೆ

    `ಬಾಹುಬಲಿ’ (Bahubali)  ಖ್ಯಾತಿಯ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾ `ಆದಿಪುರುಷ್'(Adipurush) ಸಿನಿಮಾಗಾಗಿ ಎದುರು ನೋಡುತ್ತಿರುವ ಫ್ಯಾನ್ಸ್‌ಗೆ ಇದು ನಿಜಕ್ಕೂ ಬ್ಯಾಡ್ ನ್ಯೂಸ್. ಆದಿಪುರುಷ್ ಚಿತ್ರತಂಡ ಎಡವಟ್ಟಿನಿಂದ ಸದ್ಯ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಈ ಕುರಿತು ಸ್ವತಃ ಚಿತ್ರದ ನಿರ್ದೇಶಕ ಓಂ ರಾವತ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

    ರಾಮಾಯಣದ ಕಥೆಯನ್ನಿಟ್ಟುಕೊಂಡು `ಆದಿಪುರುಷ್’ ಸಿನಿಮಾ ಮಾಡಲಾಗಿದೆ. ರಾಮನಾಗಿ ಪ್ರಭಾಸ್ ನಟಿಸಿದ್ರೆ, ನಾಯಕಿಯಾಗಿ ಕೃತಿ ಸನೂನ್ ನಟಿಸಿದ್ದಾರೆ. ಇನ್ನೂ ಪ್ರಭಾಸ್ ಮುಂದೆ ರಾವಣನಾಗಿ ಸೈಫ್ ಆಲಿ ಖಾನ್ ಅಬ್ಬರಿಸಿದ್ದಾರೆ. ಸದ್ಯ ಈ ಚಿತ್ರದ ರಿಲೀಸ್ ಮುಂದಕ್ಕೆ ಹೋಗಿದೆ. ಈ ಚಿತ್ರದ ಟೀಸರ್ ನೋಡಿ ಕಳಪೆ ಗ್ರಾಫಿಕ್ಸ್ ಎಂದು ನೆಟ್ಟಿಗರು ಟೀಕೆ ಮಾಡಿದ್ದರು. ಹಾಗಾಗಿ ಚಿತ್ರತಂಡ ಮುಂಬರುವ ಜೂನ್‌ 16ಕ್ಕೆ ರಿಲೀಸ್‌ ಮಾಡಲು ನಿರ್ಧರಿಸಿದೆ. ಪ್ರಭಾಸ್‌ ಮತ್ತು ಕೃತಿ ಸನೂನ್‌ ಸಿನಿಮಾ ಮುಂದಿನ ವರ್ಷ 2023ಕ್ಕೆ ತೆರೆಗೆ ಅಪ್ಪಳಿಸಲಿದೆ.

    `ಆದಿಪುರುಷ್’ ಚಿತ್ರದ ಟೀಸರ್ ಅ. 2ರಂದು ಅಯೋಧ್ಯೆಯಲ್ಲಿ ರಿಲೀಸ್ ಆಗಿತ್ತು. ಟೀಸರ್ ನೋಡಿದ ಫ್ಯಾನ್ಸ್, ಕಳಪೆ ಗ್ರಾಫಿಕ್ಸ್ ಎಂದು ಟ್ರೋಲ್ ಮಾಡಿದ್ದರು. ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಅವರ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದ ಫ್ಯಾನ್ಸ್‌ಗೆ ಆದಿಪುರುಷ್ ಟೀಸರ್ ನೋಡಿ ನಿರಾಸೆ ಆಗಿತ್ತು. ಇದೀಗ ಈ ಎಲ್ಲಾ ವಿಚಾರಗಳನ್ನ ಯೋಚಿಸಿ, ಒಂದೊಳ್ಳೆ ಬದಲಾವಣೆಯ ಮೂಲಕ ಬರಲು ತಂಡ ನಿರ್ಧರಿಸಿದೆ. ಇದನ್ನೂ ಓದಿ:ಸ್ಕ್ರಿಪ್ಟ್ ಚಿಂದಿಯಾಗಿದೆ, ಕಂಬ್ಯಾಕ್ ಚಿತ್ರದ ಬಗ್ಗೆ ರಮ್ಯಾ ರಿಯಾಕ್ಷನ್

    ಇನ್ನೂ ಪ್ರಭಾಸ್ ನಟನೆ ಆದಿಪುರುಷ್ ಸಿನಿಮಾ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ. ಈ ಕುರಿತು ನಿರ್ದೇಶಕ ಓಂ ರಾವತ್ ಸೋಷಿಯಲ್ ಮೀಡಿಯಾ ಮೂಲಕ ಅಪ್‌ಡೇಟ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಆದಿಪುರುಷ್’ ಸಿನಿಮಾ ಟೀಮ್ ಮೇಲೆ ಬಿತ್ತು ಕೇಸ್: ಅ.27ಕ್ಕೆ ವಿಚಾರಣೆ ನಿಗದಿ

    ‘ಆದಿಪುರುಷ್’ ಸಿನಿಮಾ ಟೀಮ್ ಮೇಲೆ ಬಿತ್ತು ಕೇಸ್: ಅ.27ಕ್ಕೆ ವಿಚಾರಣೆ ನಿಗದಿ

    ಪ್ರಭಾಸ್ (Prabhas) ನಟನೆಯ ‘ಆದಿಪುರುಷ್’ (Adipurush) ಸಿನಿಮಾ ನಾನಾ ಕಾರಣಗಳಿಂದಾಗಿ ಸದ್ದಾಗುತ್ತಿದೆ. ಗ್ರಾಫಿಕ್ಸ್ ಕಾರಣದಿಂದಾಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರೆ, ಪಾತ್ರಗಳ ಆಯ್ಕೆ ಮತ್ತು ಅದರ ಪೋಷಣೆಯ ಕಾರಣದಿಂದಾಗಿ ಹಿಂದೂಗಳ ಕಣ್ಣು ಕೆಂಪಾಗಿಸಿದೆ. ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ಟೀಸರ್ ರಿಲೀಸ್ ಮಾಡುವ ಮೂಲಕ ಹಿಂದೂಗಳನ್ನು ತಮ್ಮತ್ತ ಸೆಳೆದುಕೊಳ್ಳುವ ಪ್ಲ್ಯಾನ್ ಉಲ್ಟಾ ಆಗಿದೆ. ಹಾಗಾಗಿ ಸಿನಿಮಾ ವಿವಾದಕ್ಕೆ ಕಾರಣವಾಗಿದೆ.

    ಆದಿಪುರುಷ್ ಸಿನಿಮಾದಲ್ಲಿ ರಾಮ, ಸೀತೆ, ಆಂಜನೇಯ, ರಾವಣ ಸೇರಿದಂತೆ ಹಲವು ಪಾತ್ರಗಳನ್ನು ಕೆಟ್ಟದ್ದಾಗಿ ಬಿಂಬಿಸಲಾಗಿದೆ ಎನ್ನುವುದು ಚಿತ್ರತಂಡದ ಮೇಲಿನ ಆರೋಪ. ಇದೀಗ ಅದು ಕೇವಲ ಆರೋಪವಾಗಿ ಉಳಿದುಕೊಂಡಿಲ್ಲ. ಕಾನೂನು ಸಮರಕ್ಕೂ ರೆಡಿಯಾಗಿದೆ. ನಟ ಪ್ರಭಾಸ್ , ಸೈಫ್ ಅಲಿಖಾನ್ (Saif Ali Khan) ಹಾಗೂ ನಿರ್ದೇಶಕ ಓಂ ರಾವತ್ (Om Rawat) ಸೇರಿ ಚಿತ್ರತಂಡದ ಐವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಇದನ್ನೂ ಓದಿ:ತಮಿಳು ಬಿಗ್ ಬಾಸ್‌ಗೆ ಕಾಲಿಟ್ಟ ಕನ್ನಡತಿ ರಚಿತಾ ಮಹಾಲಕ್ಷ್ಮಿ

    ಆದಿಪುರುಷ್ ಸಿನಿಮಾದಲ್ಲಿ ರಾಮ, ರಾವಣ ಸೇರಿದಂತೆ ಹಲವು ಪಾತ್ರಗಳನ್ನು ನೈಜವಾಗಿ ತೋರಿಸಿಲ್ಲ. ಆ ಪಾತ್ರಗಳಿಗೆ ಅವಮಾನ ಮಾಡಲಾಗಿದೆ ಎಂದು ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ದೂರು ಸಲ್ಲಿಸಿದ್ದಾರೆ. ಈ ಸಂಬಂಧ ದೂರು ಸ್ವೀಕರಿಸಿರುವ ನ್ಯಾಯಾಲಯವು (Court) ಅಕ್ಟೋಬರ್ 27ರಂದು ವಿಚಾರಣೆ ನಡೆಸಲು ದಿನಾಂಕ ನಿಗದಿ ಮಾಡಿದೆ. ಈ ಹಿಂದೆಯೂ ದೆಹಲಿಯಲ್ಲೂ ಮತ್ತೊಂದು ದೂರು ಚಿತ್ರತಂಡದ ವಿರುದ್ಧ ದಾಖಲಾಗಿತ್ತು.

    ಐನೂರು ಕೋಟಿಗೂ ಅಧಿಕ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಿದ್ದು, 3 ಡಿಯಲ್ಲೂ ಈ ಚಿತ್ರವನ್ನು ನೋಡಬಹುದಾಗಿದೆ. ಗ್ರಾಫಿಕ್ಸ್ ಕಳಪೆಯಾಗಿಲ್ಲ, ಅದು 3 ಡಿ ತಂತ್ರಜ್ಞಾನದಲ್ಲಿ ಮೂಡಿ ಬಂದಿರುವುದರಿಂದ ಮಸುಕಾಗಿ ಕಾಣಿಸುತ್ತಿದೆ ಎಂದು ಮೊನ್ನೆಯಷ್ಟೇ ನಿರ್ದೇಶಕರು ಸ್ಪಷ್ಟನೆ ಕೊಟ್ಟಿದ್ದರು. ಆ ಪಾತ್ರಗಳ ಪೋಷಣೆಯನ್ನು ಯಾಕೆ ಆ ರೀತಿಯಲ್ಲಿ ಚಿತ್ರಿಸಿದ್ದಾರೆ ಎನ್ನುವುದನ್ನು ಕೋರ್ಟನಲ್ಲಿ ನಿರ್ದೇಶಕರು ಹೇಳಬೇಕಿದೆ. ಅಲ್ಲದೇ, ಎಲ್ಲವನ್ನೂ ಸರಿ ಮಾಡಿಕೊಂಡೇ ಚಿತ್ರವನ್ನು ರಿಲೀಸ್ ಮಾಡಬೇಕಿದೆ.

    Live Tv
    [brid partner=56869869 player=32851 video=960834 autoplay=true]