Tag: ಆದಿತ್ಯ ಚೋಪ್ರಾ

  • ‘ಪಠಾಣ್ 2’ಗೆ ನಿರ್ಮಾಪಕ ಆದಿತ್ಯ ಚೋಪ್ರಾ ಚಿಂತನೆ

    ‘ಪಠಾಣ್ 2’ಗೆ ನಿರ್ಮಾಪಕ ಆದಿತ್ಯ ಚೋಪ್ರಾ ಚಿಂತನೆ

    ಶಾರುಖ್ ಖಾನ್ (Shah Rukh Khan) ನಟನೆಯ ಪಠಾಣ್ ಸಿನಿಮಾ ಏನೆಲ್ಲ ಗೊಂದಲಗಳ ನಡುವೆಯೂ ಸೂಪರ್ ಹಿಟ್ ಆಗಿತ್ತು. ಕೇಸರಿ ಬಿಕಿನಿ ವಿಚಾರವಾಗಿ ಹೊತ್ತಿಕೊಂಡಿದ್ದ ವಿವಾದದ ಬೆಂಕಿ, ಸಿನಿಮಾವನ್ನೂ ಮುಗಿಸಲಿದೆ ಎಂದು ಭವಿಷ್ಯ ನುಡಿಯಲಾಗಿತ್ತು. ಆದರೆ, ಅದೆಲ್ಲವನ್ನೂ ಮೀರಿ ಸಿನಿಮಾ ಗೆದ್ದಿತ್ತು. ಇದೀಗ ಪಠಾಣ್ ಸಿನಿಮಾ ಸೀಕ್ವೆಲ್ (Pathan 2)ಮಾಡಲು ನಿರ್ಮಾಪಕ ಆದಿತ್ಯ ಚೋಪ್ರಾ (Aditya Chopra) ಚಿಂತನೆ ನಡೆಸಿದ್ದಾರೆ. ಈ ಕುರಿತಂತೆ ಶಾರುಖ್ ಖಾನ್ ಜೊತೆ ಅವರು ಚರ್ಚೆ ಕೂಡ ಮಾಡಿದ್ದಾರಂತೆ.

    ಪಠಾಣ್  ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿತ್ತು. ಸಿನಿಮಾ ರಿಲೀಸ್ ಆಗಿ 27ನೇ ದಿನಕ್ಕೆ ಸಾವಿರ ಕೋಟಿ (Thousand Crore) ಕ್ಲಬ್ (Club) ಸೇರಿತ್ತು. ಆ ವರ್ಷದಲ್ಲಿ ರಿಲೀಸ್ ಆದ ಬಾಲಿವುಡ್ ಸಿನಿಮಾಗಳಲ್ಲಿ ಅತೀ ಹೆಚ್ಚು ಹಣ ಮಾಡಿದ ಚಿತ್ರ ಎನ್ನುವ ಹೆಗ್ಗಳಿಕೆಗೂ ಈ ಸಿನಿಮಾ ಪಾತ್ರವಾಗಿತ್ತು. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ಗೆ ಅಭಿಮಾನಿಗಳು ಫಿದಾ ಆಗಿದ್ದರು.

    ಪಠಾಣ್ ಸಿನಿಮಾದ ಹಾಡೊಂದು ವಿವಾದಕ್ಕೀಡಾದಾಗ ಈ ಸಿನಿಮಾವನ್ನು ಗೆಲ್ಲಿಸಲೇಬಾರದು ಎಂದು ಹಲವರು ಕರೆ ನೀಡಿದರು. ಪ್ರತಿಭಟನೆಗಳು ನಡೆದವು, ಬಾಯ್ಕಾಟ್ ಪಠಾಣ್ ಅಭಿಯಾನ ಶುರುವಾಯಿತು. ಚಿತ್ರಮಂದಿರಗಳ ಮೇಲೆ ದಾಳಿ ನಡೆದವು. ಸಿನಿಮಾದ ಪೋಸ್ಟರ್ ಹರಿದು ಹಾಕಲಾಯಿತು. ಪೋಸ್ಟರ್ ಸುಡಲಾಯಿತು. ಏನೆಲ್ಲ ಸಂಕಷ್ಟಗಳು ಎದುರಾದರೂ, ಪಠಾಣ್ ಮಾತ್ರ ಗೆಲುವು ಸಾಧಿಸಿತ್ತು.

    ಪಠಾಣ್ ಒಂದೊಳ್ಳೆ ಸಿನಿಮಾ. ಎಲ್ಲರ ಮೆಚ್ಚುಗೆಗೂ ಅದು ಪಾತ್ರವಾಗಲಿದೆ. ದೇಶಭಕ್ತಿ ಸಾರುವಂತಹ ಕಥೆಯನ್ನು ಇದು ಒಳಗೊಂಡಿದೆ ಎಂದು ಶಾರುಖ್ ಹೇಳಿದರೂ, ವಿರೋಧಿಗಳು ಮಾತ್ರ ಕೇಳಲಿಲ್ಲ. ಕೆಲವು ರಾಜ್ಯಗಳಲ್ಲಿ ಸಿನಿಮಾವನ್ನು ನಿಷೇಧ ಮಾಡುವಂತೆ ಒತ್ತಡ ತರಲಾಯಿತು. ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಿದರು. ಆದರೂ, ಪ್ರತಿಭಟನೆ ಮಾತ್ರ ನಿಲ್ಲಲಿಲ್ಲ.

     

    ಪಠಾಣ್ ಸಿನಿಮಾಗಾಗಿ ಇಡೀ ಬಾಲಿವುಡ್ ಒಂದಾಯಿತು. ಈ ಸಿನಿಮಾವನ್ನು ಗೆಲ್ಲಿಸುವ ಮೂಲಕ ಬಾಲಿವುಡ್ ಗೆಲ್ಲಿಸೋಣ ಎನ್ನುವ ಮಾತು ಕೇಳಿ ಬಂತು. ಹಾಗಾಗಿ ಶಾರುಖ್ ವಿರೋಧಿಗಳು ಕೂಡ ಈ ಸಿನಿಮಾವನ್ನು ಮೆಚ್ಚಿ ಮಾತನಾಡಿದರು. ಮೊದ ಮೊದಲು ತೆಗಳುತ್ತಿದ್ದವರು, ಆ ಮೇಲೆ ಸಿನಿಮಾ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದರು. ಇದೇ ಸಿನಿಮಾದ ಮುಂದುವರೆದ ಭಾಗವನ್ನು ಮಾಡಲು ಚಿತ್ರತಂಡ ಸಜ್ಜಾಗಿದೆ.

  • ‘ಟೈಗರ್ 3’ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್

    ‘ಟೈಗರ್ 3’ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್

    ಹುನಿರೀಕ್ಷಿತ ಟೈಗರ್ 3 (Tiger 3) ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಸಲ್ಮಾನ್ ಖಾನ್  (Salman Khan) ನಟನೆಯ ಆ್ಯಕ್ಷನ್ ಪ್ಯಾಕ್ಡ್ ಈ ಟ್ರೈಲರ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾ ರಿಲೀಸ್ ಆಗೋಕೆ ಇನ್ನೂ ಒಂದು ತಿಂಗ್ಳು. ಆದರೂ, ಸಿನಿಮಾ ನಾನಾ ಕಾರಣಗಳಿಂದಾಗಿ ಕ್ರೇಜ್ ಕ್ರಿಯೇಟ್ ಮಾಡಿದೆ. ದೀಪಾವಳಿಗೆ ಈ ಸಿನಿಮಾ ಭರ್ಜರಿ ಪಟಾಕಿ ಹಚ್ಚೋದಂತೂ ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

    ಸಾಲು ಸಾಲು ಸೋಲು ಕಂಡಿರುವ ಭಜರಂಗಿ ಭಾಯ್‌ಜಾನ್‌ಗೆ ಬಾಕ್ಸಾಫೀಸ್‌ನಲ್ಲಿ ಅಬ್ಬರದ ಗೆಲುವೊಂದು ಸಿಗದೇ ಅನೇಕ ವರ್ಷಗಳೇ ಉರುಳಿದೆ. ಒಂದು ಕಾಲದಲ್ಲಿ ಸಲ್ಲುಭಾಯ್ ಸಿನಿಮಾ ಅಂದ್ರೆ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಕಲೆಕ್ಷನ್ ಆಗುತ್ತಿತ್ತು. ಆದರೆ ಈಗ ಸೋತಲ್ಲೇ ಗೆಲ್ಲಲು ಸಲ್ಮಾನ್ ಯೋಚಿಸಿದಂತಿದೆ. ಹಿಂದಿನ ಏಕ್ ಥಾ ಟೈಗರ್ ಹಾಗೂ ಟೈಗರ್ ಜಿಂದಾ ಹೈ ಸಲ್ಮಾನ್‌ಗೆ ನಿರಾಸೆ ಮಾಡಿರಲಿಲ್ಲ. ಇದೀಗ ಅದಕ್ಕಿಂತಲೂ ಅಡ್ವಾನ್ಸ್ಡ್ ಆಗಿ ಬರುತ್ತಿದೆ ಟೈಗರ್ 3 ಸಿನಿಮಾ.

    ಟೈಗರ್ 3 ಟ್ರೈಲರ್ ರಿಲೀಸ್ ಆಗಿದೆ. ಬ್ಯಾಡ್ ಬಾಯ್ ಅಬ್ಬರಿಸಿದ್ದಾರೆ. ಟ್ರೈಲರ್‌ನಲ್ಲಿ ಭರಪೂರ ಆ್ಯಕ್ಷನ್ ದೃಶ್ಯಗಳು ಹೈಲೈಟ್ ಆಗಿವೆ. ಹೀಗಾಗಿ ನಿರೀಕ್ಷೆ ಹೆಚ್ಚಾಗಿದೆ. ಇದೇ ದೀಪಾವಳಿ ಹಬ್ಬಕ್ಕೆ ಟೈಗರ್ 3 ರಿಲೀಸ್ ಆಗ್ತಿದೆ.

     

    ಸಲ್ಮಾನ್ ಖಾನ್ ಜೊತೆ ಕತ್ರೀನಾ (Katrina Kaif) ಮತ್ತೆ ತೆರೆ ಹಂಚಿಕೊಂಡಿದ್ದಾರೆ. ನಿರ್ಮಾಪಕ ಆದಿತ್ಯಾ ಚೋಪ್ರಾ ಭರ್ಜರಿ ಬಂಡವಾಳ ಹೂಡಿದ್ದಾರೆ. ಸದ್ಯಕ್ಕಂತೂ ‘ಟೈಗರ್ 3’ ಟ್ರೈಲರ್ ನಿರೀಕ್ಷೆಯನ್ನಂತೂ ಹೆಚ್ಚಿಸಿದೆ. ಸಿನಿಮಾ ಹೇಗಿರುತ್ತೋ ನೋಡಬೇಕು ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನಗೆ ಗರ್ಭಪಾತವಾಗಿತ್ತು, 5 ತಿಂಗಳ ಮಗುವನ್ನು ಕಳೆದುಕೊಂಡೆ ಎಂದು ಕಣ್ಣೀರಿಟ್ಟ ರಾಣಿ ಮುಖರ್ಜಿ

    ನನಗೆ ಗರ್ಭಪಾತವಾಗಿತ್ತು, 5 ತಿಂಗಳ ಮಗುವನ್ನು ಕಳೆದುಕೊಂಡೆ ಎಂದು ಕಣ್ಣೀರಿಟ್ಟ ರಾಣಿ ಮುಖರ್ಜಿ

    ಬಾಲಿವುಡ್ (Bollywood) ನಟಿ ರಾಣಿ ಮುಖರ್ಜಿ (Rani Mukherjee) ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ. ತನಗೆ ಎರಡನೇ ಬಾರಿ ಗರ್ಭಪಾತವಾಗಿತ್ತು. 5 ತಿಂಗಳ ಮಗುವನ್ನು ಕಳೆದುಕೊಂಡೆ ಎಂದು ನಟಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಬೆಂಗಳೂರಿನ ಮಿಂಚುಳ್ಳಿ, ಬಿಕಿನಿಯಲ್ಲಿ ಬಳುಕುವ ಬಳ್ಳಿ ವೈಭವಿ ಜಗದೀಶ್

    ಇತ್ತೀಚೆಗೆ ಮೆಲ್ಬೋರ್ನ್ 2023ರ ಭಾರತೀಯ ಚಲನಚಿತ್ರೋತ್ಸವದಲ್ಲಿ ರಾಣಿ ಮುಖರ್ಜಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ಗರ್ಭಪಾತದ ಬಗ್ಗೆ ನಟಿ ರಿವೀಲ್ ಮಾಡಿದ್ದಾರೆ. 2020ರಲ್ಲಿ ತಾನು ಎರಡನೇ ಬಾರಿಗೆ ಗರ್ಭಿಣಿಯಾಗಿದ್ದೆ. ಆದರೆ ಐದು ತಿಂಗಳ ಗರ್ಭಾವಸ್ಥೆಯಲ್ಲಿ ನನ್ನ ಮಗುವನ್ನು ಕಳೆದುಕೊಂಡಿದ್ದೇನೆ. ಬಹುಶಃ ನಾನು ಈ ವಿಚಾರವನ್ನು ಇದೇ ಮೊದಲ ಬಾರಿಗೆ ಹೇಳುತ್ತಿದ್ದೇನೆ. ಇಂದಿನ ಜಗತ್ತಿನಲ್ಲಿ ನಿಮ್ಮ ಜೀವನದ ಪ್ರತಿಯೊಂದು ವಿಚಾರವನ್ನು ಸಾರ್ವಜನಿಕವಾಗಿ ಚರ್ಚೆ ಮಾಡುತ್ತಾರೆ. ಸಿನಿಮಾ ಪ್ರಚಾರ ಮಾಡಲು ಕೆಲವರು ವೈಯಕ್ತಿಕ ಅನುಭವದ ಬಗ್ಗೆ ಮಾತನಾಡುತ್ತಾರೆ. ಹೀಗಾಗಿ ನಾನು ಎಲ್ಲೂ ಈ ಬಗ್ಗೆ ಹೇಳಿರಲಿಲ್ಲ. ಇದೀಗ ಮೊದಲ ಬಾರಿಗೆ ಈ ಬಗ್ಗೆ ಮಾತನಾಡುತ್ತಿದ್ದೇನೆ.

    2020 ಅಂದ್ರೆ ಕೋವಿಡ್ ಇರುವ ಸಮಯವಾಗಿತ್ತು. 2020ರ ಕೊನೆಯಲ್ಲಿ ಗರ್ಭಾವಸ್ಥೆಯಲ್ಲಿದ್ದ ನಾನು ಮಗುವನ್ನು ಕಳೆದುಕೊಂಡೆ ಎಂದು ಕಣ್ಣೀರಿಟ್ಟಿದ್ದಾರೆ. ಎರಡನೇ ಮಗುವನ್ನು ಹೊಂದುವ ಕನಸು ಈಡೇರಲಿಲ್ಲ ಎಂದು ನಟಿ ಭಾವುಕರಾಗಿದ್ದಾರೆ.

    ನಿರ್ಮಾಪಕ ಆದಿತ್ಯ ಚೋಪ್ರಾ (Adithya Chopra) ಜೊತೆ ರಾಣಿ ಮುಖರ್ಜಿ 5 ವರ್ಷಗಳಿಂದ ಡೇಟ್ ಮಾಡುತ್ತಿದ್ದರು. 2014ರಲ್ಲಿ ಇಬ್ಬರ ವಿವಾಹವಾಯಿತು. 2015ರಲ್ಲಿ ಮುದ್ದು ಮಗಳಿಗೆ ನಟಿ ಜನ್ಮ ನೀಡಿದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]