ಬೆಂಗಳೂರು: 110 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಇಸ್ರೋ ಆದಿತ್ಯ ಎಲ್1 (Aditya-L1) ನೌಕೆಯು 15 ಲಕ್ಷ ಕಿಮೀ ಕ್ರಮಿಸಿ ಅಂತಿಮ ಕಕ್ಷೆ ತಲುಪಿದೆ. ಈ ಮೂಲಕ ಸೂರ್ಯನ ಅಧ್ಯಯನಕ್ಕೆ ಇಸ್ರೋ ಸಜ್ಜಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC-SHAR) ಆದಿತ್ಯ-L1 ಏಳು ಪೇಲೋಡ್‌ಗಳೊಂದಿಗೆ ಉಡಾವಣೆಗೊಂಡಿತ್ತು. ಭೂಮಿಯಿಂದ ಸುಮಾರು 15 ಲಕ್ಷ ಕಿಮೀ ದೂರದಲ್ಲಿರುವ L1 ಪಾಯಿಂಟ್ ಕಡೆಗೆ ಭೂ ಕಕ್ಷೆಯಿಂದ ಬಾಹ್ಯಾಕಾಶ (Space) ನೌಕೆಯನ್ನು ಕಳುಹಿಸಿತ್ತು. ಶನಿವಾರ ಬೆಳಗ್ಗಿನಿಂದಲೇ ಹಾಲೋ ಆರ್ಬಿಟ್ ಅಳವಡಿಕೆಯ ಕಾರ್ಯವನ್ನು ಮುಂದುವರಿಸಿ ಲಗ್ರೇಂಜ್ ಪಾಯಿಂಟ್-1 ರಲ್ಲಿ ಇರಿಸಲು ಪ್ರಾರಂಭಿಸಿತ್ತು. ಅಂದುಕೊಂಡಂತೆ ಆದಿತ್ಯ ಎಲ್-1 ನೌಕೆಯು ನಿಗದಿತ ಕಕ್ಷೆ ತಲುಪಿದ್ದು, ದೊಡ್ಡ ಯಶಸ್ಸು ತಂದುಕೊಟ್ಟಿದೆ. 2023ರ ಚಂದ್ರಯಾನ-3 ಯಶಸ್ವಿ ಬಳಿಕ ಇಸ್ರೋ (ISRO) ಸ್ಥಾಪಿಸಿದ ಮಹತ್ವದ ಮೈಲುಗಲ್ಲು ಇದಾಗಿದೆ.
ಇನ್ಮುಂದೆ ಆದಿತ್ಯ L1 ನೌಕೆಯು ನಿಗದಿತ ಕಕ್ಷೆಯಲ್ಲಿ ನಿಂತು ಹಗಲು, ರಾತ್ರಿ ಹಾಗೂ ಗ್ರಹಣಗಳ ಅಡೆತಡೆ ಇಲ್ಲದೇ ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಲಿದೆ. ಸೂರ್ಯನಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಅಂತರಿಕ್ಷದ ವಾತಾವರಣದ ಮೇಲೆ ಅದರ ಪರಿಣಾಮವನ್ನು ಅಧ್ಯಯನ ನಡೆಸಲಿದೆ.
ಇಸ್ರೋದ ಮಹತ್ವದ ಸಾಧನೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಭಾರತ ಮತ್ತೊಂದು ಹೆಗ್ಗುರುತನ್ನು ಸೃಷ್ಟಿಸಿದೆ. ಭಾರತದ ಮೊದಲ ಸೌರ ವೀಕ್ಷಣಾಲಯ ಆದಿತ್ಯ-ಎಲ್1 ತನ್ನ ಗಮ್ಯಸ್ಥಾನವನ್ನು ತಲುಪಿದೆ. ಇದು ಅತ್ಯಂತ ಸಂಕೀರ್ಣ ಮತ್ತು ಸಂಕೀರ್ಣವಾದ ಬಾಹ್ಯಾಕಾಶ ಕಾರ್ಯಾಚರಣೆಗಳ ನಡುವೆ ಸಾಕ್ಷಾತ್ಕಾರದಲ್ಲಿ ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಅಸಾಧಾರಣ ಸಾಧನೆಯನ್ನು ದೇಶದ ಜನತೆಯೊಂದಿಗೆ ಸೇರಿ ಶ್ಲಾಘಿಸುತ್ತೇನೆ. ಜೊತೆಗೆ ಮಾನವ ಪ್ರಯೋಜನಗಳಿಗಾಗಿ ವಿಜ್ಞಾನದ ಅನ್ವೇಷಣೆಗಳನ್ನು ಮುಂದುವರಿಸುತ್ತೇವೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸೂರ್ಯನತ್ತ ಜಿಗಿದವರು ಯಾರ‍್ಯಾರು?
1960ರಲ್ಲಿ ಅಮೆರಿಕ ನಾಸಾ ಕೈಗೊಂಡಿದ್ದ ಪಯೋನಿರ್-5 ಮೊಟ್ಟ ಮೊಲದ ಸೂರ್ಯನ ಅನ್ವೇಷಣೆಯಾಗಿತ್ತು. ಈವರೆಗೆ ಒಟ್ಟು 14 ಬಾರಿ ಸೂರ್ಯನ ಅನ್ವೇಷಣೆಗಳನ್ನ ಕೈಗೊಂಡಿದೆ. ಅಮೆರಿಕ, ಜರ್ಮನಿ ಹಾಗೂ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಸೇರಿ ಒಟ್ಟು 22 ಬಾರಿ ಸೂರ್ಯನ ಕಾರ್ಯಾಚರಣೆ ನಡೆದಿದೆ
ಯಾವುದು ಹೇಗೆ ಕಾರ್ಯ ನಿರ್ವಹಿಸುತ್ತವೆ?
* ವಿಸಿಬಲ್ ಎಮಿಷನ್ ಲೈನ್ ಕರೊನಾಗ್ರಾಫ್ (VELC):
ಈ ಪೇಲೋಡ್ ಸೂರ್ಯನ ವಾತಾವರಣದ ಅತ್ಯಂತ ಹೊರಪದರವಾದ ಕರೊನಾದ ಚಿತ್ರಗಳನ್ನು ಸೆರೆಹಿಡಿಯುತ್ತದೆ.
* ಸೋಲಾರ್ ಅಲ್ಟ್ರಾವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ (SUIT):
ಈ ಪೇಲೋಡ್ ಸೂರ್ಯನ ವಾತಾವರಣದ ಒಂದು ಪದರವಾದ ಕ್ರೋಮೊಸ್ಪಿಯರ್ ಚಿತ್ರಗಳನ್ನ ತೆಗೆಯಲಿದೆ. ಈ ಕ್ರೋಮೊಸ್ಪಿಯರ್ ಎನ್ನುವುದು ಸೂರ್ಯನ ವಾತಾವರಣದಲ್ಲಿ ಫೋಟೊಸ್ಪಿಯರ್ ಮೇಲಿರುತ್ತದೆ.
* ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪಿರಿಮೆಂಟ್ (ASPEX):
ಈ ಪೇಲೋಡ್ ಸೋಲಾರ್ ವಿಂಡ್, ಅಂದರೆ ಚಾರ್ಜ್ ಹೊಂದಿರುವ ಕಣಗಳ ಚಲನೆಯನ್ನ ಅಳೆಯಲು ಬಳಕೆಯಾಗುತ್ತದೆ.
* ಪ್ಲಾಸ್ಮಾ ಅನಲೈಸರ್ ಪ್ಯಾಕೇಜ್ ಫಾರ್ ಆದಿತ್ಯ (PAPA):
ಈ ಪೇಲೋಡ್ ಸೂರ್ಯನ ಸುತ್ತಲೂ ಇರುವ ಪ್ಲಾಸ್ಮಾ ಅಥವಾ ಚಾರ್ಜ್ ಹೊಂದಿರುವ ಅನಿಲವನ್ನ ಅಳೆಯಲು ನೆರವಾಗುತ್ತದೆ.
* ಸೋಲಾರ್ ಲೋ ಎನರ್ಜಿ ಎಕ್ಸ್-ರೇ ಸ್ಪೆಕ್ಟೋಮೀಟರ್ (SOLEXS):
ಸೂರ್ಯನಿಂದ ಹೊರಬರುವ ಉತ್ಕೃಷ್ಟ ಶಕ್ತಿಯ ಎಕ್ಸ್-ರೇಗಳನ್ನು ಅಳೆಯುವ ಪೇಲೋಡ್ ಇದು.
* ಹೈ ಎನರ್ಜಿ ಎಲ್1 ಆರ್ಬಿಟಿಂಗ್ ಎಕ್ಸ್ ರೇ ಸೆಕ್ಟೋಮೀಟರ್ (HEL1OS):
ಈ ಪೇಲೋಡ್ ಸೂರ್ಯನಿಂದ ಹೊರಬರುವ ಹೈ ಎನರ್ಜಿ ಎಕ್ಸ್ ರೇ ಹೊರಸೂಸುವಿಕೆಯನ್ನು ಅಳೆಯುತ್ತದೆ.
* ಮ್ಯಾಗ್ನೆಟೊಮೀಟರ್:
ಸೂರ್ಯನ ಮತ್ತು ಸುತ್ತಮುತ್ತಲಿನ ಕಾಂತಕ್ಷೇತ್ರವನ್ನು ಅಳೆಯುವ ಪೇಲೋಡ್ ಇದು.
ನವದೆಹಲಿ: ಭೂಮಿಯಿಂದ ಸೂರ್ಯನತ್ತ (Sun) ಹೊರಟು ನಾಲ್ಕು ತಿಂಗಳ ಪೂರೈಸಿ, 15 ಲಕ್ಷ ಕಿ.ಮೀ ಕ್ರಮಿಸಿರುವ ಆದಿತ್ಯ ಎಲ್1 (Aditya-L1) ನೌಕೆಯನ್ನು ಇಂದು ಅದರ ನಿಗದಿತ ಕಕ್ಷೆಗೆ ಸೇರಿಸಲು ಇಸ್ರೋ (ISRO) ವಿಜ್ಞಾನಿಗಳು ಸಜ್ಜಾಗಿದ್ದಾರೆ.
ಕಳೆದ ವರ್ಷ ಸೆ.2ರಂದು ಆದಿತ್ಯ ಎಲ್1 ನೌಕೆಯನ್ನು ಇಸ್ರೋ ಉಡಾವಣೆ ಮಾಡಿತ್ತು. ಇದೀಗ 15 ಲಕ್ಷ ಕಿ.ಮೀ ಸಂಚರಿಸಿ ನಿಗದಿತ ಕಕ್ಷೆಯ ಬಳಿ ಸಮೀಪಿಸಿರುವ ಅದನ್ನು ಎಲ್1 ಪಾಯಿಂಟ್ ಎಂಬ ನಿರ್ವಾತ ಪ್ರದೇಶಕ್ಕೆ ಸೇರಿಸಲಾಗುತ್ತದೆ. ಉಪಗ್ರಹವನ್ನು ಸುಮಾರು ಸಂಜೆ 4 ಗಂಟೆಗೆ ಲ್ಯಾಗ್ರೇಂಜ್ ಪಾಯಿಂಟ್ 1 (L1) ಗೆ ಸೇರಿಸುವ ನಿರೀಕ್ಷೆಯಿದೆ. ಅಕಸ್ಮಾತ್ ಅದನ್ನು ಆ ಪ್ರದೇಶಕ್ಕೆ ಸೇರಿಸದೇ ಇದ್ದರೆ ಅದು ಸೂರ್ಯನೆಡೆಗೆ ಸಂಚರಿಸಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಇಂದು (ಶನಿವಾರ) ಇಸ್ರೋಗೆ ಮಹತ್ವದ ದಿನವಾಗಿದೆ. ಇದನ್ನೂ ಓದಿ: ಲಕ್ಷದ್ವೀಪಕ್ಕೆ ಮೋದಿ ಭೇಟಿ: ಮಾಲ್ಡೀವ್ಸ್‌ಗೆ ಬಿಗ್ ಶಾಕ್
ಎಲ್1 ಪಾಯಿಂಟ್ ಎಂಬುದು ಭೂಮಿಯಿಂದ ಸೂರ್ಯನಿಗಿರುವ ಒಟ್ಟು ದೂರದಲ್ಲಿ ನೂರನೇ ಒಂದರ ಭಾಗವಾಗಿದೆ. ಇಲ್ಲಿಂದ, ಹಗಲು, ರಾತ್ರಿ ಹಾಗೂ ಗ್ರಹಣಗಳ ಅಡೆತಡೆ ಇಲ್ಲದೇ ಆದಿತ್ಯ ಎಲ್1 ನೌಕೆಯು ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಲಿದೆ. ಸೂರ್ಯನಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಅಂತರಿಕ್ಷದ ವಾತಾವರಣದ ಮೇಲೆ ಅದರ ಪರಿಣಾಮವನ್ನು ಆದಿತ್ಯ ಎಲ್1 ಅಧ್ಯಯನ ನಡೆಸಲಿದೆ. ಆದಿತ್ಯ ಎಲ್1 ನಾಲ್ಕು ಪೆಲೋಡ್‍ಗಳನ್ನು ಹೊಂದಿದ್ದು, ಅಲ್ಲಿಂದ ನೇರವಾಗಿ ಇಸ್ರೋಗೆ ಮಾಹಿತಿ ರವಾನಿಸಲಿದೆ.
ಚಂದ್ರಯಾನ 3 ಯಶಸ್ವಿಯಾದ ಬಳಿಕ ಇದು ಇಸ್ರೋದ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಇದರ ಬೆನ್ನಲ್ಲೇ ಹೊಸವರ್ಷದ ಮೊದಲ ದಿನವೇ ಕಪ್ಪು ಕುಳಿಗಳ ಅಧ್ಯಯನಕ್ಕೆ ಎಕ್ಸ್‌ಪೋಸ್ಯಾಟ್ ಉಪಗ್ರಹದ ಉಡಾವಣೆಯನ್ನು ಇಸ್ರೋ ಯಶಸ್ವಿಯಾಗಿ ಮಾಡಿತ್ತು. ಇದನ್ನೂ ಓದಿ: ಮಸ್ಕ್‌ನ ಸ್ಪೇಸ್‍ಎಕ್ಸ್ ರಾಕೆಟ್‍ನಲ್ಲಿ ಶೀಘ್ರ ಇಸ್ರೋ ಉಪಗ್ರಹ ಉಡಾವಣೆ
– ಒಡಲಲ್ಲಿ ಜ್ವಾಲಾಮುಖಿ, ಹೊಳೆಯುವ ಗ್ರಹದ ಅಧ್ಯಯನ ಹೇಗೆ? – ಶುಕ್ರನ ಒಂದು ಹಗಲು, ಒಂದು ರಾತ್ರಿಗೆ ಬೇಕು 243 ದಿನ – ಭೂಮಿಯ ಸಹೋದರ ಗ್ರಹ ಶುಕ್ರನ ವೈಶಿಷ್ಟ್ಯತೆ ಏನು?
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲುಗೈಲ್ಲು ಸೃಷ್ಟಿಸುತ್ತಿದೆ. ಚಂದ್ರಯಾನ-3 (Chandrayaan-3), ಸೂರ್ಯಯಾನದಂಥ (Aditya L1) ಐತಿಹಾಸಿಕ ಕಾರ್ಯಾಚರಣೆ ಕೈಗೊಂಡು ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಇಸ್ರೋದ ಬಾಹ್ಯಾಕಾಶ ಸಾಧನೆಯನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಈ ಹೊತ್ತಿನಲ್ಲಿ ಇಸ್ರೋ ಮತ್ತೊಂದು ಕಾರ್ಯಾಚರಣೆಗೆ ಸಿದ್ಧವಾಗಿದೆ. ಅದೇ ಶುಕ್ರಯಾನ. ಚಂದ್ರಯಾನ-3, ಆದಿತ್ಯ ಎಲ್1 (ಸೂರ್ಯಯಾನ) ಯಶಸ್ಸಿನ ಬಳಿಕ ಮಾತನಾಡಿರುವ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ (S.Somanath), ಶುಕ್ರ ಅಧ್ಯಯನ ಮಿಷನ್ ಕೈಗೊಳ್ಳಲು ತಯಾರಾಗಿದ್ದೇವೆ ಎಂದು ಹೇಳಿದ್ದಾರೆ. ಅಂತರಗ್ರಹ ಯೋಜನೆಗಳನ್ನು ನಡೆಸಲು ನಾವು ಸಮರ್ಥರಿದ್ದೇವೆ ಎಂದೂ ಸಹ ತಿಳಿಸಿದ್ದಾರೆ.
ಶುಕ್ರ ಗ್ರಹ ವೈಶಿಷ್ಟ್ಯ ಏನು?
ಸೂರ್ಯನಿಗೆ ಅತಿ ಸಮೀಪದ ಎರಡನೇ ಗ್ರಹ ಶುಕ್ರ (Shukrayaan). ಸೂರ್ಯನನ್ನು ಒಂದು ಬಾರಿ ಪ್ರದಕ್ಷಿಣೆ ಹಾಕಲು 224.7 ದಿನಗಳನ್ನು ತೆಗೆದುಕೊಳ್ಳುತ್ತದೆ. ಅತ್ಯಂತ ಪ್ರಕಾಶಮಾನವಾದ ಗ್ರಹ ಇದು. ಮುಂಜಾನೆ ಮತ್ತು ಮುಸ್ಸಂಜೆಯಲ್ಲಿ ಚೆನ್ನಾಗಿ ಕಾಣುವ ಶುಕ್ರ ಗ್ರಹವನ್ನು ‘ಹಗಲು ನಕ್ಷತ್ರ’ ಮತ್ತು ‘ಸಂಜೆ ನಕ್ಷತ್ರ’ ಎಂದೂ ಕರೆಯಲಾಗುತ್ತದೆ. ಗಾತ್ರದಲ್ಲಿ ಭೂಮಿಯಷ್ಟೇ ಇದೆ. ತನ್ನ ಅಕ್ಷದ ಮೇಲೆ ಬುಧ ಗ್ರಹಕ್ಕಿಂತ ನಿಧಾನವಾಗಿ ಸುತ್ತುವ ಈ ಗ್ರಹದ ಒಂದು ದಿನ, ಭೂಮಿಯ 243 ದಿನಕ್ಕೆ ಸಮ. ಶುಕ್ರ ಗ್ರಹ ಭೂಮಿಯ ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತದೆ. ಇದರ ವಾತಾವರಣದಲ್ಲಿ ಇಂಗಾಲಾಮ್ಲ ಹೆಚ್ಚಾಗಿದೆ. ಹೀಗಾಗಿ ಈ ಗ್ರಹದಲ್ಲಿ ಜೀವಿಗಳು ಇಲ್ಲ. ಇದರ ಮೇಲ್ಮೈ ಸೀಸವನ್ನೂ ಕರಗಿಸಬಲ್ಲಷ್ಟು ಶಾಖದಿಂದ ಕೂಡಿದೆ. ವ್ಯಾಪಕವಾಗಿ ಜ್ವಾಲಾಮುಖಿಗಳು ಕಂಡುಬರುವ ಇದರ ಮೇಲ್ಮೈನಲ್ಲಿ ಇಂದಿಗೂ ಕೆಲವು ಜ್ವಾಲಾಮುಖಿಗಳು ಜೀವಂತವಾಗಿರಬಹುದು ಎಂದು ಅಧ್ಯಯನಯಗಳು ಹೇಳುತ್ತವೆ. ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ ಪತ್ತೆ ಹಚ್ಚಿದ ಚಂದ್ರಯಾನ-3
ಭುವಿಯ ಸಹೋದರ ಗ್ರಹ
ಭೂಮಿಯ ಅವಳಿ ಗ್ರಹ ಎಂದೇ ಗುರುತಿಸಿಕೊಂಡಿರುವುದು ಶುಕ್ರ ಗ್ರಹ. ಬರಿಗಣ್ಣಿಗೆ ಕಾಣುವ ಶುಕ್ರ ಹೆಚ್ಚು ಚಂದವಾದ ಗ್ರಹ. ಗಾತ್ರ ಮತ್ತು ಸಾಂಧ್ರತೆಯಲ್ಲಿ ಭೂಮಿಯನ್ನು ಹೋಲುತ್ತದೆ. ಆದ್ದರಿಂದಲೇ ಇದನ್ನು ಭೂಮಿಯ ಅವಳಿ ಗ್ರಹ ಎಂದು ಕರೆಯಲಾಗುತ್ತದೆ. ಶುಕ್ರ ಗ್ರಹ 95% ಇಂಗಾಲದ ಆಕ್ಸೈಡ್ ಹಾಗೂ ಸ್ವಲ್ಪ ರಂಜಕದ ಡೈಆಕ್ಸೈಡ್ ಹೊಂದಿದೆ. ಅತಿ ಹೆಚ್ಚಿನ ಸೂರ್ಯನ ಬೆಳಕನ್ನು ಪ್ರತಿಫಲಿಸುವುದರಿಂದ ಶುಕ್ರ ಹೆಚ್ಚು ಪ್ರಕಾಶಮಾನ ಗ್ರಹ ಎಂದು ಬಿಂಬಿತವಾಗಿದೆ. ಸೂರ್ಯನಿಂದ ಶುಕ್ರ 11 ಕೋಟಿ ಕಿ.ಮೀ ದೂರದಲ್ಲಿದೆ.
ಶುಕ್ರ ಅಧ್ಯಯನಕ್ಕೆ ಇಲ್ಲಿವರೆಗೆ ಕೈಗೊಂಡ ಮಿಷನ್‌ಗಳೆಷ್ಟು?
ಮಾನವ ಶುಕ್ರ ಗ್ರಹವನ್ನು ಕುತೂಹಲ ಕಣ್ಣಿನಿಂದ ನೋಡುತ್ತಿದ್ದಾನೆ. ಹೀಗಾಗಿ ಶುಕ್ರ ಗ್ರಹಕ್ಕೆ 40 ಕ್ಕೂ ಹೆಚ್ಚು ಬಾಹ್ಯಾಕಾಶ ಕಾರ್ಯಾಚರಣೆಗಳು ನಡೆದಿವೆ. ಪಕ್ಕಾ ಮಾಹಿತಿ ಅಂದ್ರೆ, ಇಲ್ಲಿವರೆಗೆ 46 ಬಾಹ್ಯಾಕಾಶ ನೌಕೆಗಳು ಶುಕ್ರನ ಅಧ್ಯಯನಕ್ಕಾಗಿ ಉಡಾವಣೆಗೊಂಡಿವೆ. ಜಪಾನ್‌ನ ಅಕಾಟ್ಸುಕಿ ಬಾಹ್ಯಾಕಾಶ ನೌಕೆ ಪ್ರಸ್ತುತ ಶುಕ್ರನ ಕಕ್ಷೆಯಲ್ಲಿ ಸುತ್ತುತ್ತಿದೆ. ಮುಂದಿನ ದಶಕದಲ್ಲಿ ಮೂರು ಹೊಸ ಮಿಷನ್‌ಗಳು ಪ್ರಾರಂಭವಾಗಲಿವೆ ಎಂದು ನಾಸಾ ತಿಳಿಸಿದೆ. ಇದನ್ನೂ ಓದಿ: ದ್ರವರೂಪದ ಚಿನ್ನ, ಬಾಹ್ಯಾಕಾಶದಲ್ಲಿ ವಾಸ್ತವ್ಯ, ಮಾನವ ಸಾಹಸಗಳಿಗೆ ಹಾದಿ ಮಾಡಿಕೊಡಲಿದೆ ಚಂದ್ರಯಾನ-3ರ ಯಶಸ್ಸು
ಶುಕ್ರಯಾನದ ಇತಿಹಾಸ ಏನು?
ಶುಕ್ರ ಗ್ರಹದ ಅಧ್ಯಯನಕ್ಕೆ ಜಗತ್ತಿನಲ್ಲೇ ಮೊಟ್ಟ ಮೊದಲ ಬಾರಿಗೆ ಸೋವಿಯತ್ ಒಕ್ಕೂಟ 1961 ರಲ್ಲಿ ಟ್ಯಾಝೆಲಿ ಸ್ಪುಟ್ನಿಕ್ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿತು. ಆದರೆ ಮಿಷನ್ ವಿಫಲವಾಯಿತು. ಬಳಿಕವು ಶುಕ್ರ ಗ್ರಹಕ್ಕೆ ಹಲವಾರು ಕಾರ್ಯಾಚರಣೆಗಳನ್ನು ನಡೆಸಲು ಮುಂದಾಗಿ ಸೋವಿಯತ್ ಒಕ್ಕೂಟ ಕೈಸುಟ್ಟುಕೊಂಡಿತು. ಈ ನಡುವೆ 1962 ರ ಜುಲೈ 22 ರಂದು ಮ್ಯಾರಿನರ್ 1 ನೌಕೆ ಉಡಾವಣೆ ಮಾಡಿ ವಿಫಲವಾಗಿದ್ದ ಅಮೆರಿಕದ ನಾಸಾ (NASA), ತನ್ನ ಎರಡನೇ ಪ್ರಯತ್ನದಲ್ಲೇ ಯಶಸ್ಸು ಕಂಡಿತು. ನಾಸಾ ಅದೇ ವರ್ಷದ ಆಗಸ್ಟ್ 27 ರಂದು ಹಾರಿಸಿದ್ದ ಮ್ಯಾರಿನರ್ 2 ನೌಕೆಯು 109 ದಿನಗಳ ನಂತರ ಶುಕ್ರನನ್ನು ಸಮೀಪಿಸಿತು. ಶುಕ್ರನ ಮೇಲ್ಮೈನಿಂದ 34,833 ಕಿ.ಮೀ ದೂರದಲ್ಲಿ ಹಾದುಹೋದ ವಿಶ್ವದ ಮೊಟ್ಟಮೊದಲ ಅಂತರಗ್ರಹ ಯಾತ್ರೆ ಇದಾಯಿತು.
ನಾಸಾದ ಮ್ಯಾರಿನರ್ 2 ನೌಕೆಯು 1962ರ ಡಿಸೆಂಬರ್ 14 ರಂದು ಶುಕ್ರನ ಹತ್ತಿರ ಹಾರಾಡಿದ ಮೊದಲ ಬಾಹ್ಯಾಕಾಶ ನೌಕೆಯಾಯಿತು. 42 ನಿಮಿಷಗಳ ಸ್ಕ್ಯಾನರ್‌ನಲ್ಲಿ ಸಂಗ್ರಹಿಸಿದ ಡೇಟಾವು, ಭೂಮಿಯ ನೆರೆಯ ಗ್ರಹವನ್ನು ನಾವು ಸಾಮಾನ್ಯವಾಗಿ ನೋಡುವ ದೃಷ್ಟಿಕೋನವನ್ನೇ ಬದಲಾಯಿತು. ಶುಕ್ರದ ಮೋಡ ಪದರಗಳು ತಣ್ಣಗಿದ್ದರೂ, ಅದರ ಮೇಲ್ಮೈ 425 ಡಿಗ್ರಿ ಸೆಲ್ಸಿಯಸ್ ತಾಪಮಾನದೊಂದಿಗೆ ಅತಿ ಬಿಸಿಯಾಗಿದೆ ಎಂದು ಮ್ಯಾರಿನರ್ 2 ನೌಕೆಯ ಮೈಕ್ರೋತರಂಗ ಮತ್ತು ರೇಡಿಯೋಮಾಪಕಗಳು ಕಂಡುಹಿಡಿದವು. ಈ ವಿಚಾರ ಬೆಳೆಕಿಗೆ ಬಂದ ನಂತರ ಶುಕ್ರ ಗ್ರಹದ ಮೇಲ್ಮೈನಲ್ಲಿ ಜೀವಿಗಳಿರಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಯಿತು.
ಶುಕ್ರನ ವಾಯುಮಂಡಲ ಹೇಗಿದೆ?
ವಿಫಲ ಯತ್ನಗಳಿಂದ ಕಂಗೆಟ್ಟಿದ್ದ ಸೋವಿಯತ್ ಒಕ್ಕೂಟ 1966ರಲ್ಲಿ ಉಡಾಯಿಸಿದ್ದ ವೆನೆರಾ 3 ನೌಕೆಯು ದೇಶದ ವಿಜ್ಞಾನಿಗಳಲ್ಲಿ ಭರವಸೆಯ ಬೆಳಕನ್ನು ಮೂಡಿಸಿತು. ಈ ನೌಕೆಯು ಶುಕ್ರ ಗ್ರಹದ ಮೇಲ್ಮೈನಲ್ಲಿ ಅಪ್ಪಳಿಸಿತು. ಆದರೆ ಭೂಮಿಯಲ್ಲದೇ ಇನ್ನೊಂದು ಗ್ರಹದ ಮೇಲ್ಮೈಯನ್ನು ತಲುಪಿದ ಮೊಟ್ಟಮೊದಲ ನೌಕೆ ಎಂದು ಹೆಸರು ಮಾಡಿತು. ಇದಾದ ನಂತರ ಮತ್ತೆ 1967 ರಲ್ಲಿ ರಷ್ಯಾ ಉಡಾಯಿಸಿದ ವೆನೆರಾ 4 ನೌಕೆ ಯಶಸ್ವಿಯಾಗಿ ಶುಕ್ರದ ವಾಯುಮಂಡಲವನ್ನು ಪ್ರವೇಶಿಸಿ ಹಲವಾರು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿತು. ಶುಕ್ರದ ವಾಯುಮಂಡಲವು 90 ರಿಂದ 95% ಇಂಗಾಲದ ಡೈಆಕ್ಸೈಡ್‌ನಿಂದ ಕೂಡಿದ್ದು, ಸುಮಾರು 500 ಡಿಗ್ರಿ ಸೆಲ್ಸಿಯಸ್‌ನಲ್ಲಿ ಮೇಲ್ಮೈ ತಾಪಮಾನ ಇದೆ ಎಂದು ಮಾಪನ ಮಾಡಿತು. ಇದು ನಾಸಾದ ಮ್ಯಾರಿನರ್ 2 ಮಾಪಿಸಿದ್ದಕ್ಕಿಂತ ಹೆಚ್ಚು ಎಂದು ತಿಳಿಸಿತು. ಇದಾದ ನಂತರ ರಷ್ಯಾ ಹಾಗೂ ಅಮೆರಿಕ ದೇಶಗಳು ಹಲವಾರು ಮಿಷನ್ ಕೈಗೊಂಡು ಶುಕ್ರ ಗ್ರಹದ ಅಧ್ಯಯನ ನಡೆಸಿವೆ. ಇದನ್ನೂ ಓದಿ: ಚಂದ್ರಯಾನ-3 ಲ್ಯಾಂಡರ್, ರೋವರ್‌ನಿಂದ ಸಿಗ್ನಲ್ ಸಿಗ್ತಿಲ್ಲ: ಇಸ್ರೋ
ಶುಕ್ರನ ಮೇಲೆ ರಷ್ಯಾ ಮೊದಲ ಲ್ಯಾಂಡಿಂಗ್
ಡಿಸೆಂಬರ್ 15, 1970 ರಂದು ಮಾನವರಹಿತ ಸೋವಿಯತ್ ಬಾಹ್ಯಾಕಾಶ ನೌಕೆ ವೆನೆರಾ 7 ಮತ್ತೊಂದು ಗ್ರಹದಲ್ಲಿ ಇಳಿದ ಮೊದಲ ಬಾಹ್ಯಾಕಾಶ ನೌಕೆಯಾಯಿತು. ಇದು ಶುಕ್ರದ ಮೇಲಿನ ವಾತಾವರಣದ ತಾಪಮಾನವನ್ನು ಅಳೆಯಿತು. ನೌಕೆಯು 23 ನಿಮಿಷಗಳವರೆಗೆ ಶುಕ್ರದ ತಾಪಮಾನದ ಮಾಹಿತಿಯನ್ನು ಕಳುಹಿಸಿತು. ಬೇರೊಂದು ಗ್ರಹದ ಮೇಲ್ಮೈನಿಂದ ಬಂದ ಮೊದಲ ದೂರಮಾಪಿತ ಮಾಹಿತಿ ಇದಾಗಿದೆ.
ಸೋವಿಯತ್ ಒಕ್ಕೂಟ, ಯುನೈಟೆಡ್ ಸ್ಟೇಟ್ಸ್, ಯುರೋಪಿಯನ್ ಬಾಹ್ಯಾಕಾಶ ಒಕ್ಕೂಟ, ಜಪಾನ್ ದೇಶಗಳು ಶುಕ್ರ ಗ್ರಹಕ್ಕೆ ಕಾರ್ಯಾಚರಣೆ ಕೈಗೊಂಡು ಗ್ರಹದ ವಾಯುಮಂಡಲ, ಮೇಲ್ಮೈ ಭೂವಿಜ್ಞಾನದ ವೈಜ್ಞಾನಿಕ ಅಧ್ಯಯನಗಳನ್ನು ನಡೆಸಿವೆ. ಶುಕ್ರ ಗ್ರಹಕ್ಕೆ ಸಂಬಂಧಿಸಿದ ಕುತೂಹಲಕಾರಿ ಅಂಶಗಳನ್ನು ಈ ದೇಶಗಳು ವಿಶ್ಲೇಷಿಸಿವೆ. ಈ ದೇಶಗಳ ಸಾಲಿಗೆ ಸೇರಲು ಭಾರತ ಕೂಡ ಸಜ್ಜಾಗಿದೆ. ಶುಕ್ರಯಾನ ಕೈಗೊಳ್ಳಲು ಭಾರತದ ಇಸ್ರೋ ಸಿದ್ಧತೆ ನಡೆಸುತ್ತಿದೆ.
ಆದಾಗ್ಯೂ, ಶುಕ್ರನನ್ನು ಅಧ್ಯಯನ ಮಾಡುವುದು ಸುಲಭದ ಸಾಧನೆಯಲ್ಲ. ತೀವ್ರವಾದ ಶಾಖ ಮತ್ತು ಗಾಳಿಯ ಒತ್ತಡದಿಂದಾಗಿ ಶುಕ್ರದ ಮೇಲ್ಮೈಯನ್ನು ಅನ್ವೇಷಿಸುವುದು ಕಷ್ಟಕರವಾಗಿದೆ. 1981 ರಲ್ಲಿ ಸೋವಿಯತ್ ಒಕ್ಕೂಟದ ವೆನೆರಾ 13 ಮಾಡಿದ ದಾಖಲೆಯನ್ನು ಯಾವುದೇ ಬಾಹ್ಯಾಕಾಶ ನೌಕೆಯು ಮಾಡಿಲ್ಲ. ಶುಕ್ರನ ಮೇಲ್ಮೈನಲ್ಲಿ ಉಳಿದಿದ್ದ ದೀರ್ಘಾವಧಿಯ ನೌಕೆ ಇದಾಗಿದೆ ನಾಸಾ ವೆಬ್‌ಸೈಟ್ ವಿವರಿಸುತ್ತದೆ. ನಾಸಾ 2031 ರಲ್ಲಿ ಶುಕ್ರನ ಅಧ್ಯಯನಕ್ಕೆ DAVINCI ಮಿಷನ್ ಕೈಗೊಳ್ಳುವ ಯೋಜನೆ ಹೊಂದಿದೆ. ಇದನ್ನೂ ಓದಿ: ಭೂಮಿ ಕಕ್ಷೆ ತೊರೆದ ಆದಿತ್ಯ ಎಲ್1 ನೌಕೆ – 110 ದಿನಗಳ ಸೂರ್ಯ ಯಾತ್ರೆ ಆರಂಭ
ಏನಿದು ಭಾರತದ ಶುಕ್ರಯಾನ-1?
ಶುಕ್ರಯಾನ-1 ಯೋಜನೆಯು ಶುಕ್ರನ ಅಧ್ಯಯನಕ್ಕೆ ಇಸ್ರೋ ಕೈಗೊಳ್ಳುತ್ತಿರುವ ಮೊದಲ ಮಿಷನ್ ಆಗಿದೆ. ಇದು ಸೌರವ್ಯೂಹದ ಅತ್ಯಂತ ಬಿಸಿಯಾದ ಗ್ರಹದ ಮೇಲ್ಮೈನಲ್ಲಿ ಏನಿದೆ ಎಂಬುದನ್ನು ಅಧ್ಯಯನ ಮಾಡಲಿದೆ. ಬಾಹ್ಯಾಕಾಶ ನೌಕೆಯು ಗ್ರಹವನ್ನು ಸುತ್ತುವ ಮೂಲಕ ಮೇಲ್ಮೈನಲ್ಲಿ ಆವರಿಸಿರುವ ಸಲ್ಫ್ಯೂರಿಕ್ ಆಸಿಡ್ ಮೋಡಗಳ ಅಡಿಯಲ್ಲಿನ ರಹಸ್ಯಗಳನ್ನು ಬಿಚ್ಚಿಡುವ ಕೆಲಸ ಮಾಡಲಿದೆ. ಮುಂದಿನ ವರ್ಷದ ಕೊನೆಯಲ್ಲಿ ಇಸ್ರೋ ಶುಕ್ರಯಾನ ನೌಕೆ ಉಡಾವಣೆ ಮಾಡುವ ನಿರೀಕ್ಷೆಯಿದೆ.
ನಾವು ಪರಿಕಲ್ಪನಾ ಹಂತದಲ್ಲಿ ಸಾಕಷ್ಟು ಕಾರ್ಯಾಚರಣೆಗಳನ್ನು ಹೊಂದಿದ್ದೇವೆ. ಶುಕ್ರಕ್ಕೆ ಮಿಷನ್ ಅನ್ನು ಈಗಾಗಲೇ ಕಾನ್ಫಿಗರ್ ಮಾಡಲಾಗಿದೆ. ಅದಕ್ಕಾಗಿ ಪೇಲೋಡ್‌ಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಶುಕ್ರ ಗ್ರಹದ ಮೇಲ್ಮೈ, ಭೂಮಿಯ 100 ಪಟ್ಟು ವಾತಾವರಣದ ಒತ್ತಡದೊಂದಿಗೆ ವಾತಾವರಣವನ್ನು ಹೊಂದಿದೆ. ಶುಕ್ರ ಮೇಲ್ಮೈ ಬಳಿ ಹೆಚ್ಚಿನ ವಾತಾವರಣದ ಒತ್ತಡಕ್ಕೆ ಕಾರಣಗಳು ಏನು ಎಂಬುದು ವಿಜ್ಞಾನಿಗಳಿಗೆ ತಿಳಿದಿಲ್ಲ. ಶುಕ್ರವನ್ನು ಆವರಿಸಿರುವ ದಟ್ಟವಾದ ಮೋಡಗಳು ಆಮ್ಲಗಳಿಂದ ತುಂಬಿವೆ. ಮೇಲ್ಮೈಯನ್ನು ಭೇದಿಸಲು ಸಹ ಸಾಧ್ಯವಿಲ್ಲ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.
ಶುಕ್ರ ಮಿಷನ್.. ಪಾಸ್ ಆಗಿದ್ದೆಷ್ಟು, ಫೇಲ್ ಆಗಿದ್ದೆಷ್ಟು?
1961 ರಿಂದ ಇದುವರೆಗೆ ಶುಕ್ರನ ಅಧ್ಯಯನಕ್ಕೆ ಕೈಗೊಂಡ ಮಿಷನ್‌ಗಳ ಪೈಕಿ ರಷ್ಯಾದ್ದೇ ಬಹುಪಾಲಿದೆ. ರಷ್ಯಾ ದೇಶ ಎನರ್ಜಿಯ ಸಂಸ್ಥೆ ನೇತೃತ್ವದಲ್ಲಿ ಶುಕ್ರನ ವೈಜ್ಞಾನಿಕ ಅಧ್ಯಯನಕ್ಕೆ 11 ಕಾರ್ಯಾಚರಣೆಗಳನ್ನು ಕೈಗೊಂಡಿತ್ತು. ದುರಾದೃಷ್ಟವಶಾತ್ ಎಲ್ಲ ಕಾರ್ಯಾಚರಣೆಗಳೂ ವಿಫಲವಾದವು. ಇದರ ಜೊತೆಗೆ ಲಾವೊಚ್ಕಿನ್ ಬಾಹ್ಯಾಕಾಶ ಸಂಸ್ಥೆಯಿಂದ 18 ಶುಕ್ರಯಾನ ಮಿಷನ್ ಕೈಗೊಳ್ಳಲಾಗಿತ್ತು. ಅದರಲ್ಲಿ 14 ಮಿಷನ್‌ಗಳ ಯಶಸ್ಸು ಕಂಡವು. 1 ಭಾಗಶಃ ಸಕ್ಸಸ್ ಆಯಿತು. ಉಳಿದಂತೆ 3 ಕಾರ್ಯಾಚರಣೆಗಳು ಫೇಲ್ ಆದವು.
ಇತ್ತ ಅಮೆರಿಕದ ನಾಸಾ ಶುಕ್ರನ ಅಧ್ಯಯನಕ್ಕೆ ಒಟ್ಟು 11 ಕಾರ್ಯಾಚರಣೆಗಳನ್ನ ಕೈಗೊಂಡಿತು. ಅದರಲ್ಲಿ 6 ಮಿಷನ್‌ಗಳು ಸಕ್ಸಸ್ ಆದವು. 1 ಕಾರ್ಯಾಚರಣೆ ವಿಫಲವಾಯಿತು. ಇನ್ನು 4 ಮಿಷನ್‌ಗಳು ಶುಕ್ರನ ಕಕ್ಷೆ ತಲುಪಿದ್ದು, ಈಗಲೂ ಕಾರ್ಯ ನಿರ್ವಹಿಸುತ್ತಿವೆ. ಯುರೋಪಿಯನ್ ಬಾಹ್ಯಾಕಾಶ ಒಕ್ಕೂಟ ಕೂಡ ಇದುವರೆಗೆ 3 ಕಾರ್ಯಾಚರಣೆಗಳನ್ನು ನಡೆಸಿದೆ. ಅದರಲ್ಲಿ 1 ಯಶಸ್ಸು ಕಂಡಿದೆ. ಇನ್ನೆರಡು ಮಿಷನ್‌ಗಳು ಶುಕ್ರನ ಕಕ್ಷೆ ತಲುಪಿದ್ದು, ಈಗಲೂ ಕಾರ್ಯನಿರ್ವಹಿಸುತ್ತಿವೆ. ಇದನ್ನೂ ಓದಿ: PublicTV Explainer: ಭಾರತೀಯ ವಿಜ್ಞಾನಿಗಳಿಂದ ‘ಏಲಿಯನ್ ಗ್ರಹ’ ಪತ್ತೆ – ಇಲ್ಲಿ ಅನ್ಯಗ್ರಹ ಜೀವಿಗಳು ಇವೆಯೇ?
ಜಪಾನ್ ದೇಶ ಜಾಕ್ಸಾ ಬಾಹ್ಯಾಕಾಶ ಸಂಸ್ಥೆಯಿಂದ 2 ಕಾರ್ಯಾಚರಣೆ ನಡೆಸಿತು. ಅದರಲ್ಲಿ ಒಂದು ಯಶಸ್ಸು ಕಂಡರೆ ಮತ್ತೊಂದು ಶುಕ್ರನ ಕಾರ್ಯ ನಿರ್ವಹಿಸುತ್ತಿದೆ. ಮತ್ತೆ ಯುನಿಸೆಕ್ ಸಂಸ್ಥೆಯಿಂದ ಕೈಗೊಂಡಿದ್ದ ಒಂದು ಕಾರ್ಯಾಚರಣೆ ವಿಫಲವಾಯಿತು.
ನವದೆಹಲಿ: ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಬಾಹ್ಯಾಕಾಶ-ಆಧಾರಿತ ಮಿಷನ್ ಆದಿತ್ಯ-ಎಲ್ 1 (Aditya L1) ಬಾಹ್ಯಾಕಾಶ ನೌಕೆಯು ಭೂಮಿಯ ಕಕ್ಷೆಯಿಂದ ಹೊರನಡೆದು, ಲಾಗ್ರೇಂಜ್ ಪಾಯಿಂಟ್ 1 (ಎಲ್ 1) ಕಡೆಗೆ ಹೆಜ್ಜೆ ಇಟ್ಟಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಟ್ರಾನ್ಸ್-ಲಗ್ರಾಂಜಿಯನ್ ಪಾಯಿಂಟ್ 1 (TL1I) ಕಕ್ಷೆ ಎತ್ತರಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿತು. L1 ಗೆ ಬಾಹ್ಯಾಕಾಶ ನೌಕೆಯ 110 ದಿನಗಳ ಪ್ರಯಾಣ ಈಗ ಆರಂಭಗೊಂಡಿದೆ. ಈ ಕುರಿತು ಇಸ್ರೋ, ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದೆ. ಇದನ್ನೂ ಓದಿ: ಇದು ಅಸಂಬದ್ಧ, ಪ್ರೇರಿತ- ಕೆನಡಾ ಆರೋಪ ತಿರಸ್ಕರಿಸಿದ ಭಾರತ
Aditya-L1 Mission:
Off to Sun-Earth L1 point!
The Trans-Lagrangean Point 1 Insertion (TL1I) maneuvre is performed successfully.
The spacecraft is now on a trajectory that will take it to the Sun-Earth L1 point. It will be injected into an orbit around L1 through a maneuver… pic.twitter.com/H7GoY0R44I
TL1I ಭೂಮಿಯಿಂದ ಸುಮಾರು 15 ಲಕ್ಷ ಕಿಮೀ ದೂರದಲ್ಲಿರುವ L1 ಪಾಯಿಂಟ್ ಕಡೆಗೆ ಭೂ ಕಕ್ಷೆಯಿಂದ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದೆ. ಆದಿತ್ಯ ನೌಕೆಯು ಈಗ ಸೂರ್ಯ-ಭೂಮಿ ಎಲ್1 ಪಾಯಿಂಟ್ ಕಡೆಗೆ ಪ್ರಯಾಣ ಆರಂಭಿಸಿದೆ.
ಬೆಂಗಳೂರು: ಸೂರ್ಯನ ಬ್ಯಾಹ್ಯ ವಾತಾವರಣ ಅಧ್ಯಯನಕ್ಕೆ ಭಾರತೀಯ ಬ್ಯಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ISRO) ಗಣೇಶ ಚತುರ್ಥಿ ಹಬ್ಬದಂದೇ ಗುಡ್‌ನ್ಯೂಸ್ ಕೊಟ್ಟಿದೆ. ಸೂರ್ಯ ಶಿಕಾರಿಗೆ ಭೂಮಿಯಿಂದ ಹೊರಟ ಆದಿತ್ಯ ಎಲ್-1 (Aditya-L1 Mission) ನೌಕೆ ಈಗಾಗಲೇ 4ನೇ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದೆ.
Aditya-L1 Mission:
Aditya-L1 has commenced collecting scientific data.
The sensors of the STEPS instrument have begun measuring supra-thermal and energetic ions and electrons at distances greater than 50,000 km from Earth.
ಸೂರ್ಯನ ಬಾಹ್ಯ ವಾತಾವರಣ ಅಧ್ಯಯನಕ್ಕೆ ಕಳುಹಿಸಿರುವ ಆದಿತ್ಯ-ಎಲ್1 ವೈಜ್ಞಾನಿಕ ದತ್ತಾಂಶಗಳನ್ನ ಸಂಗ್ರಹಿಸಲು ಪ್ರಾರಂಭಿಸಿದೆ. STEPS ಉಪಕರಣದ ಸಂವೇದಕಗಳು (ಸೆನ್ಸಾರ್‌ಗಳು) ಭೂಮಿಯಿಂದ 50,000 ಕಿಮೀಗಿಂತ ಹೆಚ್ಚಿನ ದೂರದಲ್ಲಿ ಸೂಪರ್-ಥರ್ಮಲ್ ಮತ್ತು ಶಕ್ತಿಯುತ ಅಯಾನುಗಳು (Energetic Ions) ಮತ್ತು ಎಲೆಕ್ಟ್ರಾನ್‌ಗಳನ್ನು ಅಳೆಯಲು ಪ್ರಾರಂಭಿಸಿದೆ. ಈ ಡೇಟಾವು ವಿಜ್ಞಾನಿಗಳಿಗೆ ಭೂಮಿಯ ಸುತ್ತಲಿನ ಕಣಗಳ ನಡವಳಿಕೆಯನ್ನ ವಿಶ್ಲೇಷಿಸಲು ಸಹಾಯ ಮಾಡುತ್ತದೆ. ಜೊತೆಗೆ ಅಂಕಿ ಅಂಶವು ಒಂದು ಘಟಕದಿಂದ ಸಂಗ್ರಹಿಸಲಾದ ಶಕ್ತಿಯುತ ಕಣ ಪರಿಸರದಲ್ಲಿ ವ್ಯತ್ಯಾಸಗಳನ್ನೂ ತೋರಿಸುತ್ತದೆ ಎಂದು ತಿಳಿಸಿದೆ.
ನವದೆಹಲಿ: ಸೂರ್ಯನ ಅಧ್ಯಯನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಉಡಾವಣೆ ಮಾಡಿರುವ ಆದಿತ್ಯ ಎಲ್1 (Aditya L1) ನೌಕೆಯನ್ನು ಮತ್ತೊಂದು ಕಕ್ಷೆಗೆ ಯಶಸ್ವಿಯಾಗಿ ಏರಿಸಲಾಗಿದೆ. ಕಕ್ಷೆ ಎತ್ತರಿಸುವ 3ನೇ ಪ್ರಕ್ರಿಯೆಯು ಯಶಸ್ವಿಯಾಗಿದೆ ಎಂದು ಇಸ್ರೋ ತಿಳಿಸಿದೆ.
ಯಶಸ್ವಿ ಕಾರ್ಯಾಚರಣೆಯ ನಂತರ, ಆದಿತ್ಯ ನೌಕೆಯು ಈಗ 296 ಕಿಮೀ x 71767 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಪರಿಭ್ರಮಣೆ ನಡೆಸುತ್ತಿದೆ. ಮುಂದಿನ ಕಾರ್ಯಾಚರಣೆಯನ್ನು ಸೆಪ್ಟೆಂಬರ್ 15 ರಂದು ಮುಂಜಾನೆ 2 ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಇಸ್ರೋ ತಿಳಿಸಿದೆ. ಇದನ್ನೂ ಓದಿ: ಪತ್ನಿ ಅಕ್ಷತಾ ಮೂರ್ತಿಯೊಂದಿಗೆ ಅಕ್ಷರಧಾಮ ದೇವಾಲಯಕ್ಕೆ ಬ್ರಿಟನ್ ಪ್ರಧಾನಿ ಭೇಟಿ
Aditya-L1 Mission:
The third Earth-bound maneuvre (EBN#3) is performed successfully from ISTRAC, Bengaluru.
ISRO’s ground stations at Mauritius, Bengaluru, SDSC-SHAR and Port Blair tracked the satellite during this operation.
ಸೂರ್ಯನನ್ನು ಅಧ್ಯಯನ ಮಾಡುವ ಇಸ್ರೋದ ಮಹತ್ವಾಕಾಂಕ್ಷೆಯ ಮಿಷನ್ ಸೆಪ್ಟೆಂಬರ್ 2 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಯಿತು.
ಬಾಹ್ಯಾಕಾಶ ನೌಕೆಯು 125 ದಿನಗಳ ನಂತರ L1 ಪಾಯಿಂಟ್‌ನಲ್ಲಿ ಉದ್ದೇಶಿತ ಕಕ್ಷೆಗೆ ಆಗಮಿಸುವ ನಿರೀಕ್ಷೆಯಿದೆ. ಇದಕ್ಕೂ ಮುನ್ನ ಆದಿತ್ಯ-ಎಲ್1 ಉಪಗ್ರಹ ಭೂಮಿ ಮತ್ತು ಚಂದ್ರನ ಅದ್ಭುತ ಚಿತ್ರಗಳನ್ನು ಹಂಚಿಕೊಂಡಿತ್ತು. ಇದನ್ನೂ ಓದಿ: ಮೊರಾಕ್ಕೋ ಭೀಕರ ಭೂಕಂಪ – ಸಾವಿನ ಸಂಖ್ಯೆ 2012ಕ್ಕೆ ಏರಿಕೆ
ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯು ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲಾಗ್ರೇಂಜ್ ಪಾಯಿಂಟ್ 1 ಅಥವಾ ಎಲ್-1 ಪಾಯಿಂಟ್‌ನಿಂದ ಸೂರ್ಯನನ್ನು ಅಧ್ಯಯನ ನಡೆಸಲಿದೆ. ISRO ಪ್ರಕಾರ, L1 ಬಿಂದುವಿನ ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾದ ಬಾಹ್ಯಾಕಾಶ ನೌಕೆಯು ಯಾವುದೇ ಗ್ರಹಣಗಳಿಲ್ಲದೆ ಸೂರ್ಯನನ್ನು ನಿರಂತರವಾಗಿ ವೀಕ್ಷಿಸುವ ಪ್ರಯೋಜನವನ್ನು ಹೊಂದಿದೆ. ಇದು ಸೌರ ಚಟುವಟಿಕೆಗಳನ್ನು ವೀಕ್ಷಿಸಲು ಹೆಚ್ಚಿನ ಪ್ರಯೋಜನವನ್ನು ಒದಗಿಸುತ್ತದೆ.
ನವದೆಹಲಿ: ಸೂರ್ಯನ ಬಾಹ್ಯ ವಾತಾವರಣ ಅಧ್ಯಯನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಕಳುಹಿಸಿರುವ ಆದಿತ್ಯ ಎಲ್1 ಬಾಹ್ಯಾಕಾಶ ನೌಕೆ (Aditya L1) ಎರಡನೇ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ ಎಂದು ಇಸ್ರೋ ತಿಳಿಸಿದೆ.
ಆದಿತ್ಯ ಎಲ್1 ನೌಕೆಯು ಸೆ.10 ರಂದು ರಾತ್ರಿ 2:30 ಕ್ಕೆ ಮೂರನೇ ಕಕ್ಷೆಯನ್ನು ಪ್ರವೇಶಿಸಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಸೆ.3 ರಂದು ನೌಕೆಯು ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಬದಲಾಯಿಸಿತ್ತು.
ಸೂರ್ಯನ ಅಧ್ಯಯನಕ್ಕಾಗಿ ‘ಆದಿತ್ಯ ಎಲ್1’ ಬಾಹ್ಯಾಕಾಶ ನೌಕೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಸ್ರೋ ಸೆ.2 ರಂದು ಉಡಾವಣೆ ಮಾಡಿತು. ಭಾರತದ ಮೊದಲ ಸೌರ ವೀಕ್ಷಣಾಲಯವನ್ನು ಸೂರ್ಯ ಮತ್ತು ಭೂಮಿ ನಡುವಿನ L1 ಪಾಯಿಂಟ್‌ನಲ್ಲಿ ಇರಿಸುವ ಮೂಲಕ ಸೂರ್ಯನ ಹೊರಗಿನ ವಾತಾವರಣ ಅಧ್ಯಯನ ಮಾಡುವ ಗುರಿಯನ್ನು ಈ ಮಿಷನ್ ಹೊಂದಿದೆ. ಇದನ್ನೂ ಓದಿ: Aditya L1 Launch: ಸೂರ್ಯ ಶಿಕಾರಿಗೆ ಹೊರಟ ಆದಿತ್ಯ
L1 ಎಂದರೆ ಲಾಗ್ರೆಂಜ್ ಪಾಯಿಂಟ್ 1. ಅಲ್ಲಿ ಬಾಹ್ಯಾಕಾಶ ನೌಕೆಯನ್ನು ನಿಲ್ಲಿಸಲಾಗುತ್ತದೆ. ISRO ಪ್ರಕಾರ, ಆದಿತ್ಯ-L1 ಭೂಮಿಯಿಂದ ಸರಿಸುಮಾರು 15 ಕಿ.ಮೀ ದೂರದಲ್ಲಿ ಸೂರ್ಯನ ಕಡೆಗೆ ನಿಂತು ಅಧ್ಯಯನ ನಡೆಸಲಿದೆ. ಈ ಪಾಯಿಂಟ್ ಭೂಮಿಯಿಂದ ಸೂರ್ಯನಿಗೆ ಇರುವ ದೂರದ 1% ಭಾಗದಷ್ಟಿದೆ.
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಆದಿತ್ಯ ಎಲ್1 (Aditya L1) ಯೋಜನೆಯಲ್ಲಿ ನೌಕೆಯನ್ನು ಭೂಮಿ ಸುತ್ತಲಿನ ಮೊದಲನೇ ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ.
ಬಾಹ್ಯಕಾಶದಲ್ಲಿ ನೌಕೆಯು ಸಾಮಾನ್ಯ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. 245 ಕಿಮೀ x 22459 ಕಿಮೀ ವ್ಯಾಪ್ತಿಯ ಹೊಸ ಕಕ್ಷೆಗೆ ನೌಕೆ ತಲುಪಿದೆ. ಸೆಪ್ಟೆಂಬರ್ 5 ರಂದು ಮಧ್ಯಾಹ್ನ 3 ಗಂಟೆಗೆ ಮತ್ತೊಂದು ಹಂತದಲ್ಲಿ ಫೈರಿಂಗ್ ನಡೆಸಲಾಗುವುದು ಎಂದು ಇಸ್ರೋ ಟ್ವೀಟ್ ಮಾಡಿ ತಿಳಿಸಿದೆ. ಇದನ್ನೂ ಓದಿ: ನಿದ್ರೆಗೆ ಜಾರಿದ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್
Aditya-L1 Mission:
The satellite is healthy and operating nominally.
The first Earth-bound maneuvre (EBN#1) is performed successfully from ISTRAC, Bengaluru. The new orbit attained is 245km x 22459 km.
ಸೂರ್ಯನ ಬಾಹ್ಯ ವಾತಾವರಣದ ಅಧ್ಯಯನಕ್ಕಾಗಿ ‘ಆದಿತ್ಯ ಎಲ್1’ ಬಾಹ್ಯಾಕಾಶ ನೌಕೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಸ್ರೋ ಸೆ.2 ರಂದು ಉಡಾವಣೆ ಮಾಡಿತು. ಭಾರತದ ಮೊದಲ ಸೌರ ವೀಕ್ಷಣಾಲಯವನ್ನು ಸೂರ್ಯ ಮತ್ತು ಭೂಮಿ ನಡುವಿನ L1 ಪಾಯಿಂಟ್‌ನಲ್ಲಿ ಇರಿಸುವ ಮೂಲಕ ಸೂರ್ಯನ ಹೊರಗಿನ ವಾತಾವರಣ ಅಧ್ಯಯನ ಮಾಡುವ ಗುರಿಯನ್ನು ಈ ಮಿಷನ್ ಹೊಂದಿದೆ.
L1 ಎಂದರೆ ಲಾಗ್ರೆಂಜ್ ಪಾಯಿಂಟ್ 1. ಅಲ್ಲಿ ಬಾಹ್ಯಾಕಾಶ ನೌಕೆಯನ್ನು ನಿಲ್ಲಿಸಲಾಗುತ್ತದೆ. ISRO ಪ್ರಕಾರ, ಆದಿತ್ಯ-L1 ಭೂಮಿಯಿಂದ ಸರಿಸುಮಾರು 15 ಕಿ.ಮೀ ದೂರದಲ್ಲಿ ಸೂರ್ಯನ ಕಡೆಗೆ ನಿಂತು ಅಧ್ಯಯನ ನಡೆಸಲಿದೆ. ಈ ಪಾಯಿಂಟ್ ಭೂಮಿಯಿಂದ ಸೂರ್ಯನಿಗೆ ಇರುವ ದೂರದ 1% ಭಾಗದಷ್ಟಿದೆ. ಇದನ್ನೂ ಓದಿ: ಚಂದ್ರ, ಸೂರ್ಯ ಮಿಷನ್ ಆಯ್ತು; ಇಸ್ರೋ ಮುಂದಿನ ಆಪರೇಷನ್ ಯಾವುದು?
ಶ್ರೀಹರಿಕೋಟಾ: ಇಡೀ ವಿಶ್ವವೇ ತುದಿಗಾಲಲ್ಲಿ ನಿಂತು ಕಾತುರದಿಂದ ಕಾಯುತ್ತಿದ್ದ ಚಂದ್ರಯಾನ-3 (Chandrayaan-3) ಯಶಸ್ವಿಯಾಗಿದೆ. ಈ ಬೆನ್ನಲ್ಲೆ ಈಗ ನಮ್ಮ ಇಸ್ರೋ (ISRO) ಸಂಸ್ಥೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಇದೀಗ ಶ್ರೀಹರಿಕೋಟಾದಲ್ಲಿ ಆದಿತ್ಯ ಎಲ್1 (Aditya L1) ಉಡಾವಣೆಯಾಗಿದೆ. ಈ ಮೂಲಕ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಭಾರತ ಇಂದು ಸಾಕ್ಷಿಯಾಯಿತು.
ಹೌದು. ಇಸ್ರೋ ಸಂಸ್ಥೆ ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ ಎಲ್-1 ಮಿಷನ್ ಅನ್ನು ಇಂದು ಸರಿಯಾಗಿ ಬೆಳಗ್ಗೆ 11.50 ಕ್ಕೆ ಶ್ರೀ ಹರಿಕೋಟಾದ ಸತೀಶ್ ಉಡಾವಣೆ ಕೇಂದ್ರದಿಂದ ಉಡಾವಣೆಯಾಗಿದೆ. ಈ ವೇಳೆ ಇಸ್ರೋ ಅಧ್ಯಕ್ಷ ಸೋಮನಾಥ್ ನೇತೃತ್ವದಲ್ಲಿ ವಿಜ್ಞಾನಿಗಳ ತಂಡ ಹಾಜರಿದ್ದರು. ಜೊತೆಗೆ ಆದಿತ್ಯ L1 ಉಡಾವಣೆಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಕೂಡ ಸಾಕ್ಷಿಯಾದರು. ಇಷ್ಟು ಮಾತ್ರವಲ್ಲದೆ ಅಪಾರ ಸಂಖ್ಯೆಯಲ್ಲಿ ಜನಸಾಗರವೇ ನೆರೆದಿತ್ತು.
ಆರಂಭದಲ್ಲಿ ಸೂರ್ಯಯಾನ ಶುರುವಾಗಿದ್ದು, ಕೇವಲ ಸೂರ್ಯನ ಅನ್ನೋ ಹೆಸರಲ್ಲಿ ಮಾತ್ರ. ಆ ಬಳಿಕ ಕೆಲವು ಅಧ್ಯಯನದ ನಂತರ ಎಲ್ 1 ಕಕ್ಷೆ ಹೋಗಲು ವಿಜ್ಞಾನಿಗಳ ತಂಡ ತೀರ್ಮಾನ ಮಾಡಿದ್ದು, ಅದರಂತೆ ಇಂದು ಯಶಸ್ವಿ ಉಡಾವಣೆ ಮಾಡಲಾಗಿದೆ. ಪಿಎಸ್‍ಎಲ್‍ವಿ ಸಿ 57 ಹೆಸರಿನ ಎಕ್ಸ್ಟ್ರಾ ಲಾರ್ಜ್ ರಾಕೆಟ್ ಬರೊಬ್ಬರಿ 1450 ಕೆ.ಜಿ ತೂಕವಿದ್ದು, ಒಟ್ಟು ಅಧ್ಯಯನಕ್ಕೆ ಬೇಕಾದ 7 ಉಪಕರಣಗಳನ್ನ ಹೊತ್ತೊಯ್ದಿದೆ. ಇದನ್ನೂ ಓದಿ: Aditya-L1: ಚಂದ್ರಯಾನ ಆಯ್ತು – ಈಗ ಸೂರ್ಯ ಸವಾರಿಯತ್ತ ಇಸ್ರೋ ಚಿತ್ತ
ಈ ಅಧ್ಯಯನದ ಪ್ರಮುಖ ಅಂಶ ಸೌರ ಚಟುವಟಿಕೆ ಮತ್ತು ಬಾಹ್ಯಕಾಶ ವಾತಾವರಣದ ಮೇಲಿನ ಪರಿಣಾಮವನ್ನ ಅಧ್ಯಯನ ಮಾಡೋದು. ಉಡಾವಣೆ ಬಳಿಕ ನಿರ್ದಿಷ್ಟ ಸ್ಥಳವಾದ ಎಲ್ 1 ಪಾಯಿಂಟ್ ತಲುಪೋಕೆ ಬರೊಬ್ಬರಿ 120 ದಿನಗಳನ್ನ ತೆಗೆದುಕೊಳ್ಳಲಿದೆ. ಕಕ್ಷೆಯನ್ನ ತಲುಪಿದ ಬಳಿಕ ರಾಕೆಟ್ ಹೊತ್ತೊಯ್ದ 8 ಉಪಕರಣಗಳ ಸ್ವಿಚ್ ಪ್ರೋಗ್ರಾಂಮಿಂಗ್ ಮೂಲಕ ತಮ್ಮ ಕಾರ್ಯವನ್ನ ಆರಂಭಿಸಲಿವೆ. ಮುಖ್ಯವಾಗಿ ಎಲ್ 1 ಕಕ್ಷೆಯಲ್ಲೇ ಇ ಎಲ್ಲಾ ಕಾರ್ಯಗಳು ಸರಾಗವಾಗಿ ಆಗೋದಕ್ಕೆ ಸಾಧ್ಯ ಇರೋದು. ಆ ಕಾರಣಕ್ಕೆ ಸದ್ಯ ಇಸ್ರೋ ಕೂಡ ಇದೇ ಪಾಯಿಂಟ್ ನ್ನ ಆಯ್ಕೆ ಮಾಡಿದೆ. ಇದನ್ನೂ ಓದಿ: ಆದಿತ್ಯ ಎಲ್ 1 ಉಡಾವಣೆಗೂ ಮುನ್ನ ತಿರುಪತಿಗೆ ಭೇಟಿ ನೀಡಿದ ಇಸ್ರೋ ಮುಖ್ಯಸ್ಥ
ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಈ ಕಕ್ಷೆಯಲ್ಲಿ, ಭೂಮಿ ಮತ್ತು ಸೂರ್ಯನ ಗುರುತ್ವಾಕರ್ಷಣೆಯ ಸಮನಾಗಿರುತ್ತದೆ. ಇಲ್ಲಿ ಯಾವುದೇ ಉಪಗ್ರಹ ನಿಯೋಜಿಸಿದರು ಯಾವುದೇ ಅಡ್ಡಿ ಆತಂಕ ಇರೋದಿಲ್ಲ. ಜೊತೆಗೆ ಗ್ರಹಣದಂತ ಅಡ್ಡಿ ಆತಂಕ ಇಲ್ಲದೆ ಅಧ್ಯಯನ ಸರಾಗವಾಗಿ ಸಾಗುವು ಮೂಲಕ ಹೆಚ್ಚು ಇಂಧನ ವ್ಯರ್ಥವಾಗದ ಕಾರಣ ಈ ಜಾಗ ಅಧ್ಯಯನಕ್ಕೆ ಸೂಕ್ತವಾಗಿದ್ದು, ಬರೊಬ್ಬರಿ ನಾಲ್ಕೂವರೆ ವರ್ಷಗಳ ಕಾಲ ಕಕ್ಷೆಯಲ್ಲಿ ಅಧ್ಯಯನ ನಡೆಸಲಿದೆ.
ಬೆಂಗಳೂರು: ಭಾರತಕ್ಕೆ ಗೌರವ ತರುವ ಕೆಲಸವನ್ನ ಕರ್ನಾಟಕದಿಂದ ಇಸ್ರೋ (ISRO) ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ರೋ ವಿಜ್ಞಾನಿಗಳು ಸಾಹಸ, ಪ್ರಯೋಗ ಎಲ್ಲ ಮಾಡುತ್ತಿದ್ದಾರೆ. ಇಸ್ರೋ ಕೈಗೊಂಡಿರುವ ಸೂರ್ಯಯಾನಕ್ಕೆ ಶುಭಕೋರುತ್ತೇನೆ. ಯಶಸ್ವಿಯಾಗಲಿ, ದೇಶದ ಜನ ಪ್ರಾರ್ಥನೆ ಮಾಡುತ್ತಿದ್ದಾರೆ. ಇಡೀ ವಿಶ್ವದಲ್ಲೇ ಇಸ್ರೋ ಶ್ರಮದ ಬಗ್ಗೆ ಮಾತಾಡುತ್ತಿದ್ದಾರೆ ಎಂದು ತಿಳಿಸಿದರು.
ಸೂರ್ಯಶಿಕಾರಿ: ಜುಲೈ 14 ರಂದು ಶ್ರೀಹರಿಕೋಟಾದ ಬಾಹ್ಯಾಕಾಶದಿಂದ ಉಡಾವಣೆಯಾಗಿದ್ದ ಚಂದ್ರಯಾನ-3 ಜಗತ್ತಿನೆಲ್ಲೆಡೆ ಸಂಚಲನ ಸೃಸ್ಠಿಸಿತ್ತು. ಸತತವಾಗಿ 41 ದಿನಗಳ ಕಾಲ ನಿರಂತರವಾಗಿ ಚಂದ್ರ ನತ್ತ ಕ್ರಮಿಸಿ ಚಂದ್ರನ ಅಂಗಳದಲ್ಲಿ ಇಳಿದು ಯಶಸ್ವಿ ಕಂಡಿತ್ತು. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಚಂದ್ರನ ದಕ್ಷಿಣ ಧ್ರುವವನ್ನು ತಲುಪುವಲ್ಲಿ ಸಕ್ಸಸ್ ಹೆಜ್ಜೆಯನ್ನಿಟ್ಟಿದ್ದು, ಲ್ಯಾಂಡರ್, ರೋವರ್ ಚಂದ್ರನ ಅಧ್ಯಯನದಲ್ಲಿ ತೊಡಗಿದ್ದು, ಇಡೀ ದೇಶವೆ ತನ್ನತ ತಿರುಗಿ ನೋಡುವಂತೆ ಮಾಡಿದೆ. ಇದನ್ನೂ ಓದಿ: ಸೂರ್ಯ ಶಿಕಾರಿಗೆ ಕೌಂಟ್‍ಡೌನ್- ಬೆಳಗ್ಗೆ 11:50ಕ್ಕೆ ಆದಿತ್ಯ ಎಲ್1 ಉಡಾವಣೆ
ಇದರ ಬೆನ್ನಲ್ಲೇ ಇಸ್ರೋ ಸಂಸ್ಥೆ ಮತ್ತೊಂದು ಮಹತ್ವದ ಕಾರ್ಯ ಕೈಗೊಂಡಿದ್ದು, ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ ಐ1 ಮಿಷನ್ ಲಾಂಚ್ ಮಾಡುತ್ತಿದೆ. ಇದಕ್ಕಾಗಿ ಈಗಾಗಲೇ ಕ್ಷಣಗಣನೆ ಪ್ರಾರಂಭವಾಗಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಜನ ಕಾಯುತ್ತಿದ್ದಾರೆ.