Tag: ಆದಿತ್ಯ ಎಲ್-1

  • Aditya-L1: ಆದಿತ್ಯ ನೌಕೆ 4ನೇ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿ – ಮುಂದಿನ ಹಂತ ‘ಭೂಮಿಯಿಂದ ಬೀಳ್ಕೊಡುಗೆ’

    Aditya-L1: ಆದಿತ್ಯ ನೌಕೆ 4ನೇ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿ – ಮುಂದಿನ ಹಂತ ‘ಭೂಮಿಯಿಂದ ಬೀಳ್ಕೊಡುಗೆ’

    ನವದೆಹಲಿ: ಸೂರ್ಯನ (Sun) ಬಾಹ್ಯ ವಾತಾವರಣ ಅಧ್ಯಯನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಕಳುಹಿಸಿರುವ ಆದಿತ್ಯ-ಎಲ್1 (Aditya L1) ನೌಕೆಯನ್ನು ಮತ್ತೊಂದು ಕಕ್ಷೆಗೆ ಯಶಸ್ವಿಯಾಗಿ ಏರಿಸಲಾಗಿದೆ. 4ನೇ ಕಕ್ಷೆ ಬದಲಾವಣೆ ಪ್ರಕ್ರಿಯೆಯು ಯಶಸ್ವಿಯಾಗಿದೆ ಎಂದು ಇಸ್ರೋ ತಿಳಿಸಿದೆ.

    ಗುರುವಾರ ಮಧ್ಯರಾತ್ರಿ 2 ಗಂಟೆಗೆ ಕಕ್ಷೆ ಬದಲಾವಣೆ ಯಶಸ್ವಿಯಾಗಿ ನೆರವೇರಿಸಲಾಗಿದೆ. ಆದಿತ್ಯ ನೌಕೆ ಈಗ ಭೂಮಿಯಿಂದ 256 ಕಿ.ಮೀ x 121973 ಕಿ.ಮೀ ಎತ್ತರದ ಕಕ್ಷೆಯಲ್ಲಿ ಪರಿಭ್ರಮಣ ನಡೆಸುತ್ತಿದೆ ಎಂದು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಇಸ್ರೋ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: Aditya-L1: ಮತ್ತೊಂದು ಎತ್ತರದ ಕಕ್ಷೆ ಸೇರಿದ ಆದಿತ್ಯ ನೌಕೆ – ಸೂರ್ಯನಿಗೆ ಇನ್ನಷ್ಟು ಹತ್ತಿರ

    ಭೂಮಿಯ ಪರಿಭ್ರಮಣೆಯಲ್ಲಿರುವ ಆದಿತ್ಯ ಎಲ್‌1 ನೌಕೆಯನ್ನು ಭೂಮಿಯಿಂದ ಲಗ್ರಾಂಜಿಯನ್ ಪಾಯಿಂಟ್‌ 1 (ಎಲ್‌ 1) ಬಿಂದುವಿಗೆ ರವಾನಿಸುವ ಮುಂದಿನ ಪ್ರಕ್ರಿಯೆ ಸೆ.19 ರ ಮಧ್ಯರಾತ್ರಿ 2 ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

    ಚಂದ್ರಯಾನ-3 ಯಶಸ್ಸಿನ ಬಳಿಕ ಸೂರ್ಯನ ಅಧ್ಯಯನಕ್ಕೆ ಇಸ್ರೋ ಆದಿತ್ಯ-ಎಲ್‌1 ಬಾಹ್ಯಾಕಾಶ ನೌಕೆಯನ್ನು ಸೆ.2 ರಂದು ಉಡಾವಣೆ ಮಾಡಿತ್ತು. ನೌಕೆಯು ಸೆ.10 ರಂದು ಮೂರನೇ ಕಕ್ಷೆ ಬದಲಾವಣೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿತ್ತು. ಇದನ್ನೂ ಓದಿ: Aditya L1: ತೆಗೆದ ಭೂಮಿ, ಚಂದ್ರನ ಚಿತ್ರವನ್ನು ಹಂಚಿಕೊಂಡ ಇಸ್ರೋ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Aditya L1: ತೆಗೆದ ಭೂಮಿ, ಚಂದ್ರನ ಚಿತ್ರವನ್ನು ಹಂಚಿಕೊಂಡ ಇಸ್ರೋ

    Aditya L1: ತೆಗೆದ ಭೂಮಿ, ಚಂದ್ರನ ಚಿತ್ರವನ್ನು ಹಂಚಿಕೊಂಡ ಇಸ್ರೋ

    ನವದೆಹಲಿ: ಭಾರತದ (India) ಮಹತ್ವಾಕಾಂಕ್ಷೆಯ ಆದಿತ್ಯ-ಎಲ್1 (Aditya -L1) ನೌಕೆ ಬಾಹ್ಯಾಕಾಶದಿಂದ ಭೂಮಿ ಮತ್ತು ಚಂದ್ರನ ಚಿತ್ರಗಳನ್ನು ಸೆರೆಹಿಡಿದಿದೆ. ಈ ಚಿತ್ರವನ್ನು ಇಸ್ರೋ (ISRO) ಹಂಚಿಕೊಂಡಿದೆ.

    ಆದಿತ್ಯ-ಎಲ್1 ಉದ್ದೇಶಿತ ಕಕ್ಷೆಯನ್ನು ತಲುಪಿದ ನಂತರ ದಿನಕ್ಕೆ 1,440 ಚಿತ್ರಗಳನ್ನು ಕಳುಹಿಸುವ ನಿರೀಕ್ಷೆಯಿದೆ. ಈ ಮೂಲಕ ಭಾರತದ ಬಾಹ್ಯಾಕಾಶ ಸಂಶೋಧನಾ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಆದಿತ್ಯ-ಎಲ್1 ತೆರೆಯಲಿದೆ. ಈ ಮೂಲಕ ಹೆಚ್ಚು ಆಕರ್ಷಕ ಚಿತ್ರಗಳು ಮತ್ತು ಮೌಲ್ಯಯುತ ಮಾಹಿತಿಯನ್ನು ಒದಗಿಸುವ ನಿರೀಕ್ಷೆಯಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Aditya L1: ಎರಡನೇ ಕಕ್ಷೆ ಯಶಸ್ವಿಯಾಗಿ ಪ್ರವೇಶಿಸಿದ ಆದಿತ್ಯ ನೌಕೆ

    ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಸೆಪ್ಟೆಂಬರ್ 2 ರಂದು ಆದಿತ್ಯ-ಎಲ್1ನ್ನು ಉಡಾವಣೆ ಮಾಡಲಾಯಿತು. ಇದು ಭಾರತದ ಮೊದಲ ಸೂರ್ಯನ ಅಧ್ಯಯನದ ಮಿಷನ್ ಆಗಿದೆ. ಇದು ಭೂಮಿಯ ಎರಡು ಸುತ್ತು ಸುತ್ತಿ ಮುಗಿಸಿದೆ. ಮುಂಬರುವ ದಿನಗಳಲ್ಲಿ ಭೂಮಿಯ ಕಕ್ಷೆಯಿಂದ ತನ್ನ ಗುರಿಯಾದ ಸೂರ್ಯನೆಡೆಗೆ ಸಾಗಲಿದೆ. ಸುಮಾರು 15,00,000 ಕಿಲೋಮೀಟರ್ ದೂರದಲ್ಲಿ ಇರಲಿದ್ದು ಅಲ್ಲಿಂದಲೇ ಸೂರ್ಯನನ್ನು ಅಧ್ಯಯನ ನಡೆಸಲಿದೆ.

    ಆದಿತ್ಯ ಎಲ್-1 ಸೂರ್ಯನ ವರ್ಣಗೋಳ ಮತ್ತು ಕರೋನಾ ಸೇರಿದಂತೆ ವಿವಿಧ ಅಂಶಗಳ ಅಧ್ಯಯನಕ್ಕೆ ವಿನ್ಯಾಸಗೊಳಿಸಲಾದ ಏಳು ಪೆಲೋಡ್‍ಗಳನ್ನು ಒಯ್ಯುತ್ತಿದೆ. ಸೌರ ಸ್ಫೋಟ ಮತ್ತು ಬಾಹ್ಯಾಕಾಶ ಹವಾಮಾನದ ಮೇಲೆ ಅವುಗಳ ಪ್ರಭಾವದ ಬಗ್ಗೆ ಮಾಹಿತಿ ಕಲೆ ಹಾಕಲಿದೆ. ಈ ಮಿಷನ್ ನೇರವಾಗಿ ನೈಜ ಸಮಯದಲ್ಲಿ ಡೇಟಾವನ್ನು ಒದಗಿಸುವ ಶಕ್ತಿಹೊಂದಿದೆ. ಇದನ್ನೂ ಓದಿ: Aditya L1: ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಆದಿತ್ಯ ನೌಕೆ – ಸೂರ್ಯನತ್ತ ಮತ್ತೊಂದು ಹೆಜ್ಜೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆದಿತ್ಯ L1 ಮಿಷನ್‍ನ ಯಶಸ್ವಿ ಉಡಾವಣೆಗೆ ರಾಜ್ಯಪಾಲ ಅಭಿನಂದನೆ

    ಆದಿತ್ಯ L1 ಮಿಷನ್‍ನ ಯಶಸ್ವಿ ಉಡಾವಣೆಗೆ ರಾಜ್ಯಪಾಲ ಅಭಿನಂದನೆ

    ಬೆಂಗಳೂರು: ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್1 (Aditya L1 ಮಿಷನ್‍ನ ಯಶಸ್ವಿ ಉಡಾವಣೆಗೊಳಿಸಿದ ಇಸ್ರೋ ತಂಡಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಅಭಿನಂದಿಸಿದ್ದಾರೆ.

    ಇಸ್ರೋ ಅಧ್ಯಕ್ಷ ಸೋಮನಾಥ್  (Somanath) ಅವರಿಗೆ ಅಭಿನಂದನೆ ಪತ್ರ ಬರೆದಿದ್ದು, ಚಂದ್ರಯಾನ-3 ರ ಯಶಸ್ವಿ ಮಿಷನ್ ನಂತರ, ಇಸ್ರೋ ಆದಿತ್ಯ-ಎಲ್ 1 ಮಿಷನ್ ಅನ್ನು ಯೋಜಿಸಿ ಯಶಸ್ವಿಯಾಗಿ ಪ್ರಾರಂಭಿಸಿದೆ. ಇದು ಸೂರ್ಯನನ್ನು ಅಧ್ಯಯನ ಮಾಡಲು ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ಮಿಷನ್ ಆಗಿದೆ ಎಂದು ತಿಳಿದುಕೊಳ್ಳಲು ಅಪಾರ ಸಂತೋಷವಾಗಿದೆ.

    ಇಸ್ರೋದ (ISRO) ಅಸಾಧಾರಣ ಸಾಧನೆಗಳು ನಮ್ಮ ಸಮಾಜದಲ್ಲಿ ವೈಜ್ಞಾನಿಕ ಮನೋಭಾವವನ್ನು ಬಲಪಡಿಸುತ್ತದೆ ಮತ್ತು ನಮ್ಮ ಯುವಕರಿಗೆ ವೈಜ್ಞಾನಿಕ ಪ್ರಯತ್ನದ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಲು ಸ್ಫೂರ್ತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಇದನ್ನೂ ಓದಿ: ಆದಿತ್ಯ ಎಲ್-1 ಯಶಸ್ವಿ ಉಡಾವಣೆ – ಇಸ್ರೋ ವಿಜ್ಞಾನಿಗಳಿಗೆ ಮೋದಿ ಅಭಿನಂದನೆ

    ಈ ಮಿಷನ್ ಸೌರ ಚಟುವಟಿಕೆಗಳನ್ನು ಮತ್ತು ಬಾಹ್ಯಾಕಾಶದ ಮೇಲೆ ಅದರ ಪರಿಣಾಮವನ್ನು ವೀಕ್ಷಿಸಲು ಹೆಚ್ಚಿನ ಪ್ರಯೋಜನವನ್ನು ಒದಗಿಸುತ್ತದೆ. ಈ ಅಸಾಧಾರಣ ಯಶಸ್ಸು ಬ್ರಹ್ಮಾಂಡದ ರಹಸ್ಯಗಳನ್ನು ಅನ್ಲಾಕ್ ಮಾಡಲು ಪಟ್ಟುಬಿಡದೆ ವೈಜ್ಞಾನಿಕ ಜ್ಞಾನವನ್ನು ಅನುಸರಿಸುತ್ತಿರುವ ನಮ್ಮ ವಿಜ್ಞಾನಿಗಳ ಸಮರ್ಪಣೆ ಮತ್ತು ಬದ್ಧತೆಗೆ ಕಾರಣವಾಗಿದೆ.

    ಅಮೃತ ಕಾಲದ ಸಮಯದಲ್ಲಿ ಭಾರತಕ್ಕೆ ಕೀರ್ತಿ ತರುವ ಪ್ರಯತ್ನಗಳಲ್ಲಿ ನೀವು ಮತ್ತು ನಿಮ್ಮ ತಂಡವು ಅತ್ಯುತ್ತಮವಾಗಿರಲಿ ಎಂದು ನಾನು ಬಯಸುತ್ತೇನೆ. ಭಾರತವನ್ನು ಹೆಮ್ಮೆಪಡುವಂತೆ ಮಾಡುವ ಸಮರ್ಪಣೆ ಮತ್ತು ಸಾಧನೆಗಾಗಿ ಮತ್ತೊಮ್ಮೆ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆದಿತ್ಯ ಎಲ್-1 ಯಶಸ್ವಿ ಉಡಾವಣೆ – ಇಸ್ರೋ ವಿಜ್ಞಾನಿಗಳಿಗೆ ಮೋದಿ ಅಭಿನಂದನೆ

    ಆದಿತ್ಯ ಎಲ್-1 ಯಶಸ್ವಿ ಉಡಾವಣೆ – ಇಸ್ರೋ ವಿಜ್ಞಾನಿಗಳಿಗೆ ಮೋದಿ ಅಭಿನಂದನೆ

    ಬೆಂಗಳೂರು: ಚಂದ್ರಯಾನ-3 (Chandrayaan-3) ಯಶಸ್ವಿಯಾದ ಬೆನ್ನಲ್ಲೇ ಇಸ್ರೋ (ISRO) ಮತ್ತೊಂದು ಮಹತ್ತರವಾದ ಸಾಧನೆ ಮಾಡಿದ್ದು, ಸೂರ್ಯನ ಅಧ್ಯನಕ್ಕಾಗಿ ಆದಿತ್ಯ ಎಲ್-1 (Aditya L-1) ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

    ಇಸ್ರೋ ಸಂಸ್ಥೆ ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ ಎಲ್-1 ಮಿಷನ್ ಅನ್ನು ಶನಿವಾರ ಬೆಳಗ್ಗೆ 11.50ಕ್ಕೆ ಶ್ರೀ ಹರಿಕೋಟಾದ ಸತೀಶ್ ಉಡಾವಣೆ ಕೇಂದ್ರದಿಂದ ಉಡಾವಣೆ ಮಾಡಿತು. ಇಸ್ರೋ ವಿಜ್ಞಾನಿಗಳ ಈ ಅಭೂತಪೂರ್ವ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಟ್ವೀಟ್ (Tweet) ಮೂಲಕ ಅಭಿನಂದನೆ ತಿಳಿಸಿದ್ದಾರೆ. ಇದನ್ನೂ ಓದಿ: Aditya L1 ಮಿಷನ್ ಯಶಸ್ವಿ: ಇಸ್ರೋ ಅಧ್ಯಕ್ಷ

    ಟ್ವೀಟ್‌ನಲ್ಲಿ ಏನಿದೆ?
    ಚಂದ್ರಯಾನ-3 ಯಶಸ್ಸಿನ ನಂತರ ಭಾರತ ತನ್ನ ಬಾಹ್ಯಾಕಾಶ ಯಾನವನ್ನು ಮುಂದುವರಿಸಿದೆ. ಭಾರತದ ಮೊದಲ ಸೌರ ಮಿಷನ್, ಆದಿತ್ಯ ಎಲ್-1ನ ಯಶಸ್ವಿ ಉಡಾವಣೆಗಾಗಿ ಇಸ್ರೋ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಅಭಿನಂದನೆಗಳು. ಇದನ್ನೂ ಓದಿ: Aditya L1 Launch: ಸೂರ್ಯ ಶಿಕಾರಿಗೆ ಹೊರಟ ಆದಿತ್ಯ

    ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಬ್ರಹ್ಮಾಂಡದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ನಮ್ಮ ದಣಿವರಿಯದ ವೈಜ್ಞಾನಿಕ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಬರೆದು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವಿಚಿತ್ರಾತಿ ವಿಚಿತ್ರಗಳ ಉರಿ ಉಂಡೆ ನಮ್ಮ ಸೂರ್ಯ: ಡಾ. ಎಪಿ ಭಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Aditya L1 ಮಿಷನ್ ಯಶಸ್ವಿ: ಇಸ್ರೋ ಅಧ್ಯಕ್ಷ

    Aditya L1 ಮಿಷನ್ ಯಶಸ್ವಿ: ಇಸ್ರೋ ಅಧ್ಯಕ್ಷ

    – ಮೋದಿ, ಇಸ್ರೋ ಟೀಂಗೆ ಸಚಿವ ಧನ್ಯವಾದ

    ಶ್ರೀಹರಿಕೋಟಾ: ಇಂದು ಬೆಳಗ್ಗೆ 11.50ಕ್ಕೆ ಆಂಧ್ರಪ್ರದೇಶದ (Andhrapradesh) ಶ್ರೀಹರಿಕೋಟಾದಿಂದ (Sriharikota) ಸೂರ್ಯ ಶಿಕಾರಿಗೆ ಹೊರಟ ಆದಿತ್ಯ ಎಲ್ 1 (Aditya L1) ಮಿಷನ್ ಯಶಸ್ವಿಯಾಗಿದೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ತಿಳಿಸಿದ್ದಾರೆ.

    ಮಿಷನ್ ಯಶಸ್ವಿ ಬಗ್ಗೆ ಘೋಷಣೆ ಮಾಡಿದ ಅವರು, ಯಶಸ್ವಿಯಾಗಿ ಆದಿತ್ಯ ಎಲ್1 ಆರ್ಬಿಟ್ ಗೆ ಇನ್ ಸರ್ಟ್ ಮಾಡಲಾಗಿದೆ ಎಂದರು. ಇದೇ ವೇಳೆ ಆದಿತ್ಯ ಐ1 ಟೀಂಗೆ ಸೋಮನಾಥ್ (S Somanath) ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: Aditya L1 Launch: ಸೂರ್ಯ ಶಿಕಾರಿಗೆ ಹೊರಟ ಆದಿತ್ಯ

    ಈ ಸಂದರ್ಭದಲ್ಲಿ ಚಂದ್ರಯಾನದ (Chandrayaan-3) ಬಗ್ಗೆ ಮಾಹಿತಿ ನೀಡಿದ ಸೋಮನಾಥ್, ಚಂದ್ರಯಾನದ ಲ್ಯಾಂಡರ್, ರೋವರ್ ಇನ್ನೂ ಯಶಸ್ವಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿವೆ. ಗುಡ್ ನ್ಯೂಸ್ ಅಂದ್ರೆ ರೋವರ್ 100 ಮೀಟರ್ ವರೆಗೂ ಸಂಚಾರ ಮಾಡಿದೆ. ಚಂದ್ರಯಾನದ ಅಧ್ಯಯನ ಯಶಸ್ವಿಯಾಗಿ ಮುಂದುವರಿದಿದೆ ಎಂದರು.

    ಇತ್ತ ಸಚಿವ ಜೀತೇಂದ್ರ ಸಿಂಗ್ ಅವರು ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ಪ್ರಧಾನಿ ಮೋದಿ ಹಾಗೂ ಇಸ್ರೋ ವಿಜ್ಞಾನಿಗಳಿಗೆ ಧನ್ಯವಾದ ಹೇಳ್ತೀನಿ. ಇಸ್ರೋ ವಿಜ್ಞಾನಿಗಳು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ದೇಶಕ್ಕಾಗಿ ಕೆಲಸ ಮಾಡಿದ್ದಾರೆ. ಚಂದ್ರಯಾನ ಯಶಸ್ವಿ ಬಳಿಕ ಆದಿತ್ಯ ಎಲ್‌ 1 ಯಶಸ್ವಿಯಾಗಿದೆ. ಈ ಸಾಧನೆ ವಿಶ್ವದ ಗಮನ ಸೆಳೆದಿದೆ. ಆದಿತ್ಯ ಎಲ್‌ 1ಗೆ ಉಪಕರಣ ಸಿದ್ಧ ಮಾಡಿಕೊಂಡ ವಿವಿಧ ಸಂಸ್ಥೆಗಳಿಗೆ ಧನ್ಯವಾದಗಳು ಎಂದು ಅವರು ಹೇಳಿದರು.

    ಒಟ್ಟಿನಲ್ಲಿ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸೂರ್ಯಯಾನ ಯಶಸ್ವಿಯಾಗುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಿದ್ದು, ಭಾರತೀಯರ ಕನಸು ನನಸಾಗಿದೆ. ಇನ್ನು ಮುಂದೆ ಆದಿತ್ಯ ಎಲ್‌ 1 125 ದಿನ ತನ್ನ ಜರ್ನಿ ನಡೆಸಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆದಿತ್ಯ ಎಲ್ 1 ಉಡಾವಣೆಗೂ ಮುನ್ನ ತಿರುಪತಿಗೆ ಭೇಟಿ ನೀಡಿದ ಇಸ್ರೋ ಮುಖ್ಯಸ್ಥ

    ಆದಿತ್ಯ ಎಲ್ 1 ಉಡಾವಣೆಗೂ ಮುನ್ನ ತಿರುಪತಿಗೆ ಭೇಟಿ ನೀಡಿದ ಇಸ್ರೋ ಮುಖ್ಯಸ್ಥ

    ತಿರುಪತಿ: ಚಂದ್ರಯಾನ-3ರ ಯಶಸ್ವಿಯ ಬೆನ್ನಲ್ಲೇ ಸೂರ್ಯನ ಮೇಲೆ ಅಧ್ಯಯನ ನಡೆಸಲು ಆದಿತ್ಯ ಎಲ್ 1 (Aditya L-1) ಮಿಷನ್ ಉಡಾವಣೆಗೆ ಇಸ್ರೋ (ISRO) ಸಜ್ಜಾಗಿದೆ. ಬಾಹ್ಯಾಕಾಶಕ್ಕೆ ನೌಕೆಯನ್ನು ಕಳುಹಿಸಲು ಕ್ಷಣಗಣನೆ ಪ್ರಾರಂಭವಾಗಿದ್ದು, ಇದರ ಯಶಸ್ಸಿಗಾಗಿ ಇಸ್ರೋ ಮುಖ್ಯಸ್ಥರಾದ ಎಸ್ ಸೋಮನಾಥ್ (S Somnath) ಅವರು ತಿರುಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಆದಿತ್ಯ ಎಲ್ 1 ಉಡಾವಣೆಗೂ ಮುನ್ನ ಶುಕ್ರವಾರ ತಿರುಪತಿಯ ಬಾಲಾಜಿ ದೇವಾಲಯಕ್ಕೆ ಭೇಟಿ ನೀಡಿ ಎಸ್ ಸೋಮನಾಥ್ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇಸ್ರೋವಿನ ಮುಂದಿನ ಮಿಷನ್ ಬಗ್ಗೆ ಮಾಹಿತಿ ನೀಡಿದ್ದಾರೆ. ಚಂದ್ರಯಾನ-3 ಮಿಷನ್‌ನ ವೈಜ್ಞಾನಿಕ ಪ್ರಯೋಗಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾಳೆ ಆದಿತ್ಯ ಎಲ್ 1 ಉಡಾವಣೆ – ಸೂರ್ಯನ ಅಧ್ಯಯನಕ್ಕೆ ಹೇಗೆ ಸಿದ್ಧವಾಗಿದೆ ಇಸ್ರೋ?

    ಆದಿತ್ಯ ಎಲ್ 1 ಶನಿವಾರ ಬೆಳಗ್ಗೆ 11:50ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ. ಈ ಕಾರ್ಯಾಚರಣೆಯು ಗಮ್ಯ ಸ್ಥಾನವನ್ನು ತಲುಪಲು 125 ದಿನಗಳನ್ನು ತೆಗೆದುಕೊಳ್ಳಲಿದೆ. ಬಳಿಕ ಸೂರ್ಯನ ಮೇಲೆ ಅಧ್ಯಯನ ನಡೆಸಲಿದೆ ಎಂದು ಈ ಹಿಂದೆ ಎಸ್ ಸೋಮನಾಥ್ ತಿಳಿಸಿದ್ದಾರೆ. ಇದನ್ನೂ ಓದಿ: ಸೆ.11ಕ್ಕೆ ಬೆಂಗಳೂರು ಬಂದ್ – ಸರ್ಕಾರದ ವಿರುದ್ಧ ಸಿಡಿದ ಖಾಸಗಿ ಸಾರಿಗೆ ಒಕ್ಕೂಟ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಳೆ ಆದಿತ್ಯ ಎಲ್ 1 ಉಡಾವಣೆ – ಸೂರ್ಯನ ಅಧ್ಯಯನಕ್ಕೆ ಹೇಗೆ ಸಿದ್ಧವಾಗಿದೆ ಇಸ್ರೋ?

    ನಾಳೆ ಆದಿತ್ಯ ಎಲ್ 1 ಉಡಾವಣೆ – ಸೂರ್ಯನ ಅಧ್ಯಯನಕ್ಕೆ ಹೇಗೆ ಸಿದ್ಧವಾಗಿದೆ ಇಸ್ರೋ?

    – ಸೂರ್ಯಯಾನದಿಂದ ಲಾಭವೇನು?

    ನವದೆಹಲಿ: ಚಂದ್ರಯಾನ-3 ರ ಯಶಸ್ಸಿನ ನಂತರ ಭಾರತವು ಸೂರ್ಯಯಾನ ಆದಿತ್ಯ ಎಲ್-1 (Aditya L-1) ಅನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಇಂದಿನಿಂದ ಆದಿತ್ಯ-ಎಲ್1 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಬೆಳಗ್ಗೆ 11:50 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ನೌಕೆ ಉಡಾವಣೆಯಾಗಲಿದೆ.

    ಇಸ್ರೋ (ISRO) ಈ ಹೊಸ ಯೋಜನೆ ಬಗೆಗೆ ಕೇವಲ ಭಾರತ ಮಾತ್ರವಲ್ಲದೇ ಇಡೀ ವಿಶ್ವದಲ್ಲಿ ಆಸಕ್ತಿ ಹೆಚ್ಚಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ತಿಳಿಸಿದ್ದಾರೆ. ಸಾಕಷ್ಟು ಸವಾಲುಗಳ ಮಧ್ಯೆ ಉಡಾವಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿಗೆ ಎಂದು ಅವರು ಹೇಳಿದ್ದಾರೆ.

    ಮಾಹಿತಿಗಳ ಪ್ರಕಾರ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯನ್ನು ಸೌರ ಕರೋನ (ಸೂರ್ಯನ ಹೊರಗಿನ ಪದರಗಳು) ದೂರದ ವೀಕ್ಷಣೆಗಾಗಿ ಮತ್ತು ಎಲ್-1ನಲ್ಲಿ (ಲಾಗ್ರಾಂಜಿಯನ್ ಪಾಯಿಂಟ್ -1) ಸೌರ ಮಾರುತದ ಸ್ಥಳ ವೀಕ್ಷಣೆಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಎಲ್-1 ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ. ದೂರದಲ್ಲಿದ್ದು, ಇದೊಂದು ಕಷ್ಟಕರ ಯೋಜನೆಯೂ ಆಗಿದೆ.

    ಏನಿದು ಎಲ್1 ಪಾಯಿಂಟ್?
    ಸೂರ್ಯನ ಗುರುತ್ವಾಕರ್ಷಣೆ ಹಾಗೂ ಭೂಮಿಯ ಗುರುತ್ವಾಕರ್ಷಣೆ ಸಮ ಪ್ರಮಾಣದಲ್ಲಿ ಇರುವ 5 ಸ್ಥಳಗಳು ಭೂಮಿಯ ಕಕ್ಷೆಯಲ್ಲಿ ಸಿಗುತ್ತವೆ. ಇದನ್ನು ಲಾಗ್ರಾಂಜಿಯನ್ ಪಾಯಿಂಟ್ ಎಂದು ಕರೆಯಲಾಗುತ್ತದೆ. ಈ ಪೈಕಿ ಲಾಗ್ರಾಂಜಿಯನ್ ಪಾಯಿಂಟ್ 1ರಲ್ಲಿ ಭಾರತದ ಸೌರ ಅಧ್ಯಯನ ಉಪಗ್ರಹ ನಿಲ್ಲಲಿದೆ. ಬಾಹ್ಯಾಕಾಶಕ್ಕೆ ಕಳುಹಿಸಲಾಗುವ ವಸ್ತುಗಳು ಸ್ಥಳದಲ್ಲಿಯೇ ಇರುವಂತೆ ಮಾಡಲಾಗುತ್ತದೆ

    ಈ ಮಿಷನ್‌ನಿಂದ ಏನು ಪ್ರಯೋಜನ?
    ಇಸ್ರೋ ಪ್ರಕಾರ, ಸೂರ್ಯನು ನಮಗೆ ಹತ್ತಿರದ ನಕ್ಷತ್ರ. ಇದು ನಕ್ಷತ್ರಗಳ ಅಧ್ಯಯನದಲ್ಲಿ ನಮಗೆ ಹೆಚ್ಚು ಸಹಾಯ ಮಾಡುತ್ತದೆ. ಇದರಿಂದ ಪಡೆದ ಮಾಹಿತಿಯು ಇತರ ನಕ್ಷತ್ರಗಳು, ನಮ್ಮ ನಕ್ಷತ್ರಪುಂಜ ಮತ್ತು ಅನೇಕ ರಹಸ್ಯಗಳು ಮತ್ತು ಖಗೋಳಶಾಸ್ತ್ರದ ನಿಯಮಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಸೂರ್ಯನು ನಮ್ಮ ಭೂಮಿಯಿಂದ ಸುಮಾರು 15 ಕೋಟಿ ಕಿ.ಮೀ. ದೂರದಲ್ಲಿದ್ದಾನೆ. ಆದಿತ್ಯ ಎಲ್-1 ಈ ದೂರದಲ್ಲಿ ಕೇವಲ ಒಂದು ಪ್ರತಿಶತವನ್ನು ಮಾತ್ರ ಕ್ರಮಿಸುತ್ತಿದೆ. ಇದು ಸೂರ್ಯನ ಬಗ್ಗೆ ಅಂತಹ ಅನೇಕ ಮಾಹಿತಿಯನ್ನು ನೀಡುತ್ತದೆ. 4 ತಿಂಗಳುಗಳ ಕಾಲ ಉಪಗ್ರಹ ಕ್ರಮಿಸಿ, ಕಾಯಾಚರಣೆ ನಡೆಸಲಿದೆ. ಇದು 5 ವರ್ಷ ಆಯಸ್ಸನ್ನು ಹೊಂದಿದೆ.

    ಆದಿತ್ಯ ಎಲ್-1ನಲ್ಲಿ ಯಾವ ಸಲಕರಣೆಗಳನ್ನು ಬಳಸಲಾಗಿದೆ?
    ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC): ಈ ಸಾಧನವನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಬೆಂಗಳೂರು) ಅಭಿವೃದ್ಧಿಪಡಿಸಿದೆ. ಇದು ಸೂರ್ಯನ ಕರೋನಾ ಮತ್ತು ಅದು ಹೊರ ಸೂಸುವ ಕಿರಣಗಳಲ್ಲಿನ ಬದಲಾವಣೆಗಳನ್ನು ಅಧ್ಯಯನ ಮಾಡುತ್ತದೆ.

    ಸೌರ ಅಲ್ಟ್ರಾ-ವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ (SUIT): ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಅಂತರ-ವಿಶ್ವವಿದ್ಯಾಲಯದಿಂದ (ಪುಣೆ) ನಿರ್ಮಿಸಲಾಗಿದೆ. ಇದು ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಚಿತ್ರಗಳನ್ನು ತೆಗೆದುಕೊಳ್ಳುತ್ತದೆ. ಇವುಗಳು ನೇರಳಾತೀತ ವ್ಯಾಪ್ತಿಯಲ್ಲಿರುವ ಛಾಯಾಚಿತ್ರಗಳಾಗಿವೆ. ಈ ಬೆಳಕು ಬಹುತೇಕ ಅಗೋಚರವಾಗಿರುತ್ತದೆ. ಇದನ್ನೂ ಓದಿ: One Nation, One Election – ಮಾಜಿ ರಾಷ್ಟ್ರಪತಿ ಕೋವಿಂದ್‌ ನೇತೃತ್ವದಲ್ಲಿ ಸಮಿತಿ ರಚನೆ

    Solex ಮತ್ತು Hal1OS: ಸೋಲಾರ್ ಲೋ-ಎನರ್ಜಿ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (ಸೋಲೆಕ್ಸ್) ಮತ್ತು ಹೈ-ಎನರ್ಜಿ ಎಲ್-1 ಆರ್ಬಿಟಿಂಗ್ ಸೂರ್ಯನ ಎಕ್ಸ್- ಕಿರಣಗಳ ಅಧ್ಯಯನ ಮಾಡಲಿವೆ. ಮ್ಯಾಗ್ನೆಟೋಮೀಟರ್ (MAG) ಅನ್ನು ಬೆಂಗಳೂರಿನ ಎಲೆಕ್ಟ್ರೋ ಆಪ್ಟಿಕ್ಸ್ ಸಿಸ್ಟಮ್ಸ್ ಲ್ಯಾಬೋರೇಟರಿ (ಬೆಂಗಳೂರು) ಅಭಿವೃದ್ಧಿಪಡಿಸಿದೆ. ಇದು ಎಲ್-1 ಕಕ್ಷೆಯ ಸುತ್ತ ಇರುವ ಅಂತರಗ್ರಹ ಕಾಂತಕ್ಷೇತ್ರವನ್ನು ಅಳೆಯುತ್ತದೆ.

    ಆಸ್ಪೆಕ್ಸ್ ಮತ್ತು ಪಾಪಾ: ಅಹಮದಾಬಾದ್‌ನ ಭೌತಿಕ ಸಂಶೋಧನಾ ಪ್ರಯೋಗಾಲಯವು ಆದಿತ್ಯ ಸೌರ ಮಾರುತ ಕಣದ ಪ್ರಯೋಗವನ್ನು (SPEX) ಅಭಿವೃದ್ಧಿಪಡಿಸಿದೆ ಮತ್ತು ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯ, ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಆದಿತ್ಯ (PAPA) ಪ್ಲಾಸ್ಮಾ ವಿಶ್ಲೇಷಕ ಪ್ಯಾಕೇಜ್ ಅನ್ನು ಅಭಿವೃದ್ಧಿಪಡಿಸಿದೆ. ಸೌರ ಮಾರುತವನ್ನು ಅಧ್ಯಯನ ಮಾಡುವುದು ಮತ್ತು ಶಕ್ತಿಯ ವಿತರಣೆಯನ್ನು ಅರ್ಥಮಾಡಿಕೊಳ್ಳುವುದು ಇವುಗಳ ಕೆಲಸವಾಗಿದೆ. ಇದನ್ನೂ ಓದಿ: ಎಲ್ಲಾ ಸಚಿವರಿಗೆ ಕಾರು ಭಾಗ್ಯ – 33 ಮಂದಿಗೆ ಸಿಗಲಿದೆ ಇನ್ನೋವಾ ಹೈಕ್ರಾಸ್‌ ಹೈಬ್ರಿಡ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೆಪ್ಟೆಂಬರ್ 2ಕ್ಕೆ ‘ಆದಿತ್ಯ-ಎಲ್1’ ಉಡಾವಣೆ – ಏನಿದರ ವಿಶೇಷ?

    ಸೆಪ್ಟೆಂಬರ್ 2ಕ್ಕೆ ‘ಆದಿತ್ಯ-ಎಲ್1’ ಉಡಾವಣೆ – ಏನಿದರ ವಿಶೇಷ?

    ನವದೆಹಲಿ: ಚಂದ್ರಯಾನ-3 (Chandrayaan-3) ಯೋಜನೆಯ ಯಶಸ್ಸಿನ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸೂರ್ಯನನ್ನು ಅಧ್ಯಯನ ಮಾಡಲು ಸೆಪ್ಟೆಂಬರ್ 2 ರಂದು ಸೂರ್ಯ ಮಿಷನ್‌ನ ಉಡಾವಣೆಗೆ ತಯಾರಿ ನಡೆಸುತ್ತಿದೆ. ಈಗಾಗಲೇ ‘ಆದಿತ್ಯ-ಎಲ್1’ (Aditya L-1) ಬಾಹ್ಯಾಕಾಶ ನೌಕೆಯನ್ನು ಶ್ರೀಹರಿಕೋಟಾಗೆ (Sriharikota) ಕಳುಹಿಸಿ ಕೊಡಲಾಗಿದೆ ಎಂದು ಮೂಲಗಳು ಹೇಳಿವೆ.

    ಆದಿತ್ಯ-ಎಲ್1 ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಸೂರ್ಯನ ಹೊರಗಿನ ಪದರಗಳು (ಕರೋನಾ) ಮತ್ತು ಎಲ್-1 (ಸೂರ್ಯ-ಭೂಮಿಯ ಲಗ್ರಾಂಜಿಯನ್ ಪಾಯಿಂಟ್) ಅಧ್ಯಯನ ಮಾಡಲಿದೆ. ಇದಕ್ಕಾಗಿ ಬಾಹ್ಯಾಕಾಶ ನೌಕೆಯು ದ್ಯುತಿಗೋಳ, ವರ್ಣಗೋಳ (ಸೂರ್ಯನ ಗೋಚರ ಮೇಲ್ಮೈಗಿಂತ ಸ್ವಲ್ಪ ಮೇಲೆ) ಮತ್ತು ಸೂರ್ಯನ ಹೊರಗಿನ ಪದರವನ್ನು (ಕರೋನಾ) ವಿವಿಧ ತರಂಗ ಬ್ಯಾಂಡ್‌ಗಳಲ್ಲಿ ವೀಕ್ಷಿಸಲು ಸಹಾಯ ಮಾಡುವ ಏಳು ಪೇಲೋಡ್‌ಗಳನ್ನು ಒಯ್ಯುತ್ತದೆ. ಇದನ್ನೂ ಓದಿ: ಸೋಲಾರ್ ಮಿಷನ್ ‘ಆದಿತ್ಯ’ ಸೆಪ್ಟೆಂಬರ್‌ನಲ್ಲಿ ಲಾಂಚ್‍ಗೆ ಸಿದ್ಧ: ಇಸ್ರೋ ಅಧ್ಯಕ್ಷ

    ಆದಿತ್ಯ-ಎಲ್1 ರಾಷ್ಟ್ರೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಿದ್ದವಾಗಿರುವ ಸ್ವದೇಶಿ ಪ್ರಯತ್ನವಾಗಿದೆ. ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ ಪೇಲೋಡ್‌ನ ನಿರ್ಮಾಣದ ಪ್ರಮುಖ ಸಂಸ್ಥೆಯಾಗಿದೆ. ಪುಣೆಯ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಅಂತರ-ವಿಶ್ವವಿದ್ಯಾನಿಲಯ ಕೇಂದ್ರವೂ ಸೌರ ನೇರಳಾತೀತ ಇಮೇಜರ್ ಪೇಲೋಡ್ ಅನ್ನು ಮಿಷನ್‌ಗಾಗಿ ಅಭಿವೃದ್ಧಿಪಡಿಸಿದೆ. ಇದನ್ನೂ ಓದಿ: ಕರ್ನಾಟಕದಿಂದ ಪಾಠ ಕಲಿತ ಬಿಜೆಪಿ ಹೈಕಮಾಂಡ್ – ಮಧ್ಯಪ್ರದೇಶದಲ್ಲಿ ಮಾಡಿದ ಬದಲಾವಣೆ ಏನು?

    ಕ್ರೋಮೋಸ್ಪಿಯರ್ ಕೀಗಳು ಮತ್ತು ಎಕ್ಸ್-ರೇ ಪೇಲೋಡ್‌ಗಳನ್ನು ಬಳಸಿಕೊಂಡು ಸೂರ್ಯನ ಜ್ವಾಲೆಗಳನ್ನು ಮೇಲ್ವಿಚಾರಣೆ ಮಾಡಿ ಮಾಹಿತಿಯನ್ನು ಒದಗಿಸುತ್ತದೆ. ಪಾರ್ಟಿಕಲ್ ಡಿಟೆಕ್ಟರ್ ಮತ್ತು ಮ್ಯಾಗ್ನೆಟೋಮೀಟರ್ ಪೇಲೋಡ್ ಚಾರ್ಜ್ಡ್ ಕಣಗಳು ಮತ್ತು ಎಲ್-1 ಸುತ್ತ ಹೊರಗಿನ ಕಕ್ಷೆಯನ್ನು ತಲುಪುವ ಕಾಂತಕ್ಷೇತ್ರದ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಇದನ್ನೂ ಓದಿ: ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಭಾರತ ವಿಶ್ವಕ್ಕೇ ತನ್ನ ಸಾಮರ್ಥ್ಯ ತೋರಿಸಿದೆ- ಮೋದಿ

    ಆದಿತ್ಯ ಎಲ್1 ಎರಡು ವಾರಗಳ ಹಿಂದೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಇಸ್ರೋದ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. ಸೆಪ್ಟೆಂಬರ್ 2 ರಂದು ಉಡಾವಣೆಯಾಗುವ ಸಾಧ್ಯತೆ ಇದೆ ಎಂದು ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಹ್ಯಾಕಾಶ ನೌಕೆಯನ್ನು ಸೂರ್ಯ-ಭೂಮಿಯ ಬಾಹ್ಯ ಕಕ್ಷೆಯಲ್ಲಿ ಇರಿಸಲು ಯೋಜಿಸಲಾಗಿದೆ. ಉಪಗ್ರಹವು ಯಾವುದೇ ಗ್ರಹಣ ಅಥವಾ ರಹಸ್ಯವಿಲ್ಲದೇ ಸೂರ್ಯನನ್ನು ನಿರಂತರವಾಗಿ ವೀಕ್ಷಿಸುವ ಹೆಚ್ಚಿನ ಪ್ರಯೋಜನವನ್ನು ಹೊಂದಿದೆ. ಇದನ್ನೂ ಓದಿ: ಕಾವೇರಿ ನದಿ ನೀರು ವಿವಾದ: ತಮಿಳುನಾಡು ಮನವಿಗೆ ಆದೇಶ ನೀಡಲು ಸುಪ್ರೀಂ ನಕಾರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]