Tag: ಆದಿಕೇಶವಲು

  • ಉದ್ಯಮಿ ಆದಿಕೇಶವಲು ಮಗ ಶ್ರೀನಿವಾಸ್‍ಗೆ ನ್ಯಾಯಾಂಗ ಬಂಧನ

    ಉದ್ಯಮಿ ಆದಿಕೇಶವಲು ಮಗ ಶ್ರೀನಿವಾಸ್‍ಗೆ ನ್ಯಾಯಾಂಗ ಬಂಧನ

    ಬೆಂಗಳೂರು: ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಖ್ಯಾತ ಉದ್ಯಮಿ ಆದಿಕೇಶವಲು ಮಗ ಶ್ರೀನಿವಾಸ್ ಅವರನ್ನು ಬಂಧಿಸಲಾಗಿದೆ.

    ಈ ಹಿನ್ನೆಲೆಯಲ್ಲಿ ಎನ್‍ಸಿಬಿ ಇಂದು ನ್ಯಾಯಾಧೀಶರ ಮುಂದೆ ಶ್ರೀನಿವಾಸ್ ಅವರನ್ನು ಹಾಜರುಪಡಿಸಿದೆ. ಈ ಹಿನ್ನೆಲೆಯಲ್ಲಿ ಉದ್ಯಮಿ ಆದಿಕೇಶವಲು ಮಗ ಶ್ರೀನಿವಾಸ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಪಾರ್ಟ್‍ಮೆಂಟ್‌ವೊಂದರಲ್ಲಿ ಪಾರ್ಟಿ ಮಾಡುವಾಗ ಶ್ರೀನಿವಾಸ್ ನಾಯ್ಡು ಸಿಕ್ಕಿಬಿದ್ದಿದ್ದರು. ಈ ಸಮಯದಲ್ಲಿ ಮಾದಕ ವಸ್ತು ದೊರಕಿತ್ತು. ನಂತರ ಅಪಾರ್ಟ್‌ಮೆಂಟ್‍ನಿಂದ ಎನ್‍ಸಿಬಿ ಮನೆಗೆ ಕರೆದುಕೊಂಡು ಬಂದಿದ್ದರು. ಸದಾಶಿವನಗರ ಮನೆಯಲ್ಲೂ ಎನ್‍ಸಿಬಿ ದಾಳಿ ನಡೆಸಿತ್ತು. ಎನ್‍ಸಿಬಿ ನಿನ್ನೆ ತಡರಾತ್ರಿ ವಶಕ್ಕೆ ಪಡೆದು ವಿಚಾರಣೆ ಮಾಡಿತ್ತು. ಇದನ್ನೂ ಓದಿ: ಕಾಂಗ್ರೆಸ್ ತೊರೆದ ಕಪಿಲ್ ಸಿಬಲ್- ರಾಜ್ಯಸಭೆಗೆ SPಯಿಂದ ನಾಮಪತ್ರ ಸಲ್ಲಿಕೆ

    ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಶೇರ್ ಹೋಲ್ಡರ್ ಆಗಿರುವ ಉದ್ಯಮಿ ಶ್ರೀನಿವಾಸ್ ಅವರ ವಿರುದ್ಧ ಮಾದಕ ವಸ್ತು ವ್ಯಸನದ ಆರೋಪವಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಬಂಧಿಸಲಾಗಿದೆ ಎಂದು ಉನ್ನತ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ‌ ಇದನ್ನೂ ಓದಿ: ಸಿಇಟಿ ಪರೀಕ್ಷೆಗೂ ಹಿಜಬ್ ನಿಷೇಧ – ಕೆಇಎ

  • ಅಪಘಾತದ ಬಗ್ಗೆ ನಟರಾದ ದಿಗಂತ್, ಪ್ರಜ್ವಲ್ ಹೇಳಿದ್ದು ಹೀಗೆ

    ಅಪಘಾತದ ಬಗ್ಗೆ ನಟರಾದ ದಿಗಂತ್, ಪ್ರಜ್ವಲ್ ಹೇಳಿದ್ದು ಹೀಗೆ

    ಬೆಂಗಳೂರು: ಬುಧವಾರ ಮಧ್ಯರಾತ್ರಿ ನಗರದ ಸೌತ್ ಎಂಡ್ ಸರ್ಕಲ್ ನಲ್ಲಿ ನಡೆದ ಅಪಘಾತದ ವೇಳೆ ಕಾರಿನಲ್ಲಿ ಸ್ಯಾಂಡಲ್‍ವುಡ್ ನಟರಾದ ದಿಗಂತ್ ಮತ್ತು ಪ್ರಜ್ವಲ್ ದೇವರಾಜ್ ಇದ್ದರು ಎನ್ನಲಾಗಿತ್ತು. ಈ ಕುರಿತು ಇಬ್ಬರು ನಟರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

    ನನಗೂ ಘಟನೆಗೂ ಯಾವುದೇ ಸಂಬಂಧವಿಲ್ಲ. ನಾನು ಕಳೆದ ಆರು ದಿನಗಳಿಂದ ಗೋವಾದಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ನಟ ಪ್ರಜ್ವಲ್ ದೇವರಾಜ್ ಉತ್ತರಿಸಿದ್ದಾರೆ. ಇನ್ನೂ ದಿಗಂತ್ ನಾನು ಕನಕಪುರದಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದೆನೆ. ಆಕ್ಸಿಡೆಂಟ್ ವಿಚಾರವಾಗಿ ನಮ್ಮ ಹೆಸರನ್ನು ತಪ್ಪಾಗಿ ತಿಳಿದು ಸೇರಿಸಲಾಗಿದೆ. ನಮಗೂ ಈ ಅಪಘಾತಕ್ಕೂ ಯಾವುದೇ ಸಂಬಂಧವಿಲ್ಲ. ಇಂತಹ ಸುಳ್ಳು ಆರೋಪಗಳನ್ನು ಹಬ್ಬಿಸುವುದರಿಂದ ನಮಗೂ, ನಮ್ಮ ಕುಟುಂಬ ಸದಸ್ಯರಿಗೂ ಬೇಸರವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

    ನಗರದ ಸೌತ್ ಎಂಡ್ ಸರ್ಕಲ್‍ನಲ್ಲಿ ನಡೆದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಅದಿಕೇಶವಲುರ ಮೊಮ್ಮಗನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

    ಈ ಕುರಿತು ಹೇಳಿಕೆ ನೀಡಿರುವ ಓಮ್ನಿ ವ್ಯಾನ್ ಚಾಲಕ ಕೈಸರ್, ಸೌತ್ ಎಂಡ್ ಸರ್ಕಲ್ ಬಳಿ ನಮ್ಮ ಗಾಡಿಗೆ ವೇಗವಾಗಿ ಕಾರು ಡಿಕ್ಕಿ ಹೊಡೆಯಿತು. ಇದರಿಂದ ನಮ್ಮ ಗಾಡಿ ಪಲ್ಟಿಯಾಗಿತ್ತು. ನಂತರ ತಮಗೇ ಪ್ರಜ್ಞೆ ಬರುವ ವೇಳೆಗೆ ಆರೋಪಿಗಳೆಲ್ಲರು ಸ್ಥಳದಿಂದ ಪರಾರಿಯಾಗಿದ್ರು. ಒಬ್ಬ ಮಾತ್ರ ಜನರ ಕೈಗೆ ಸಿಕ್ಕಿ ಹಾಕಿಕೊಂಡಿದ್ದ. ನಂತರ ನಾವು ಆಸ್ಪತ್ರಗೆ ಹೋದೆವು. ನಮ್ಮ ಕಾರಿನಲ್ಲಿ ಮೂರು ಮಕ್ಕಳು ಸೇರಿದಂತೆ 7 ಜನರು ಪ್ರಯಾಣಿಸುತ್ತಿದ್ದೆವು ಎಂದು ಹೇಳಿದ್ದಾರೆ.

    ತನಿಖೆ ಆರಂಭಿಸಿದ ಪೊಲೀಸರು ಕಾರು ಚಾಲಕ ಉದ್ಯಮಿ ಮೊಮ್ಮಗ ವಿಷ್ಣು ವಿರುದ್ಧ, ಐಪಿಸಿ ಸೆಕ್ಷನ್ 269-ರ್ಯಾಷ್ ಡ್ರೈವ್ ಮತ್ತು ಕಾರಿನಲ್ಲಿ ಪತ್ತೆಯಾಗಿದ್ದ ಗಾಂಜಾ ಸಂಬಂಧವಾಗಿ ಐಪಿಸಿ ಸೆಕ್ಷನ್ 337ರ ಅಡಿ ಮಾದಕ ವಸ್ತು ಕಳ್ಳ ಸಾಗಾಟ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್‍ವೊಂದಲ್ಲಿ ಪಾರ್ಟಿ ಮಾಡಿಕೊಂಡು ಡ್ರಗ್ಸ್ ಸೇವಿಸಿ ಕಾರಿನಲ್ಲಿ ಹೈಸ್ಪೀಡ್‍ನಲ್ಲಿ ಬರುವಾಗ ಸೌತ್ ಎಂಡ್ ಸರ್ಕಲ್ ನಲ್ಲಿ ಸಿಕ್ಕ ಸಿಕ್ಕವರು, ವಾಹನಗಳು, ಡಿವೈಡರ್‍ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಬಿಬಿಎಂಪಿ ಬೋರ್ಡ್, ಫುಟ್‍ಪಾತ್‍ಗೆ ಹಾಕಿದ್ದ ಕಬ್ಬಿಣದ ಗ್ರಿಲ್‍ಗಳೇ ಮುರ್ಕೊಂಡು ಹೋಗಿವೆ.. ಕಾರಿನ ಒಳಗಿದ್ದ ಏರ್‍ಬ್ಯಾಗ್‍ಗಳೆಲ್ಲಾ ಓಪನ್ ಆಗಿವೆ. ಸಾರ್ವಜನಿಕರು ವಿಷ್ಣುಗೆ ಸಿಕ್ಕಾಪಟ್ಟೆ ಥಳಿಸಿದ್ದಾರೆ ಎನ್ನಲಾಗಿದೆ. ಗಾಡಿ ಓಡಿಸುತ್ತಿದ್ದ ವಿಷ್ಣುಗೆ ಗಾಯವಾಗಿದ್ದು, ಸದ್ಯ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    https://www.youtube.com/watch?v=8gvdg-2uq8M

    https://www.youtube.com/watch?v=bqI6_sjMD1c

    https://www.youtube.com/watch?v=XkSGJRHTDEw