Tag: ಆದಾರ್ ಪೂನಾವಾಲ

  • ಓಮಿಕ್ರಾನ್ ವಿರುದ್ಧ ಲಸಿಕೆ – 6 ತಿಂಗಳ ಒಳಗಾಗಿ ಸಿಗಲಿದೆ ಎಂದ ಆದಾರ್ ಪೂನಾವಾಲ

    ಓಮಿಕ್ರಾನ್ ವಿರುದ್ಧ ಲಸಿಕೆ – 6 ತಿಂಗಳ ಒಳಗಾಗಿ ಸಿಗಲಿದೆ ಎಂದ ಆದಾರ್ ಪೂನಾವಾಲ

    ಪುಣೆ: ಕೊರೊನಾ ರೂಪಾಂತರಿ ಬಿಎ5 ಓಮಿಕ್ರಾನ್ ವೈರಸ್ ವಿರುದ್ಧ ಹೋರಾಡಲು ನಿರ್ದಿಷ್ಟ ಲಸಿಕೆ ತಯಾರಿಸಲು ನೋವಾವ್ಯಾಕ್ಸ್‌ನೊಂದಿಗೆ ಸೀರಂ ಇನ್ಸಿಟ್ಯೂಟ್ ಕೆಲಸ ಮಾಡುತ್ತಿದೆ ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಸೀರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಆದಾರ್ ಪೂನಾವಾಲ ಹೇಳಿದ್ದಾರೆ.

     

    ವಿಶೇಷವಾಗಿ ಓಮಿಕ್ರಾನ್ ಸೋಂಕಿನ ವಿರುದ್ಧ ಹೋರಾಟ ನಡೆಸಲು ಲಸಿಕೆಯನ್ನು ತಯಾರು ಮಾಡಲಾಗುತ್ತಿದೆ. 6 ತಿಂಗಳಲ್ಲಿ ಈ ಲಸಿಕೆ ಪ್ರಯೋಗಿಕವಾಗಿ ಅನುಮೋದನೆ ಪಡೆದು ಬರುವ ನಿರೀಕ್ಷೆ ಇದೆ. ಈಗಾಗಲೇ ಓಮಿಕ್ರಾನ್ ವೈರಸ್ ವಿರುದ್ಧ ಪರಿಣಾಮಕಾರಿಯಾಗಿರುವ ಮಾಡೆರ್ನಾ ಲಸಿಕೆಗೆ ಬ್ರಿಟನ್ ಅನುಮೋದನೆ ನೀಡಿತ್ತು. ಈ ಲಸಿಕೆ ಓಮಿಕ್ರಾನ್ ತಳಿ ಮತ್ತು ಮೂಲ ರೂಪದ ವಿರುದ್ಧ ಪರಿಣಾಮಕಾರಿಯಾಗಿದೆ. ಈ ಲಸಿಕೆ ಬೂಸ್ಟರ್ ಡೋಸ್‍ನಂತೆ ಕಾರ್ಯನಿರ್ವಹಿಸಲಿದೆ. ಇದೀಗ ನಮ್ಮ ದೇಶಕ್ಕೂ ಓಮಿಕ್ರಾನ್ ವಿರುದ್ಧ ನಿರ್ದಿಷ್ಟ ಲಸಿಕೆ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಮೋದಿ, ಶಾ ಜೊತೆ ಗಂಗೂಲಿ ಚರ್ಚೆ – ರಾಜಕೀಯ ಇನ್ನಿಂಗ್ಸ್‌ ಆಡ್ತಾರಾ ದಾದಾ?

    ಇದೀಗ ತಯಾರು ಮಾಡುತ್ತಿರುವ ಲಸಿಕೆಗೆ ಭಾರತದ ಔಷಧಿ ನಿಯಂತ್ರಕ ಅನುಮೋದನೆ ಕೊಟ್ಟ ಬಳಿಕ ಲಸಿಕೆ ಮಾರುಕಟ್ಟೆಗೆ ಬರಲಿದೆ. ಭಾರತದಲ್ಲಿ ಪ್ರತ್ಯೇಕವಾಗಿ ಕ್ಲಿನಿಕಲ್ ಪ್ರಯೋಗದ ಅಗತ್ಯವಿದೆಯೇ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನೋವಾವ್ಯಾಕ್ಸ್ ಪ್ರಯೋಗ ನಡೆಯುತ್ತಿದೆ. ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಇದು ಅಮೆರಿಕದ ಔಷಧ ನಿಯಂತ್ರಕ ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆ ಇದೆ. ದೆಹಲಿ ಸೇರಿದಂತೆ ದೇಶದ ಇತರ ಹಲವು ರಾಜ್ಯಗಳಲ್ಲಿ ಓಮಿಕ್ರಾನ್‍ಗಿಂತಲು ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿವೆ. ಓಮಿಕ್ರಾನ್ ಕೂಡ ತುಂಬಾ ಅಪಾಯಕಾರಿಯಾಗಿದ್ದು, ಈ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನೆಹರೂವನ್ನು ನೆನಪಿಸಿಕೊಂಡ ಮೋದಿಗೆ ನಮಸ್ಕಾರ ಹೇಳುತ್ತೇನೆ: ಡಿಕೆಶಿ

    ಲಸಿಕೆ ಪಡೆದರೆ, ಸೋಂಕು ತಗುಳಿದರೂ ಸಾವಿನ ಪ್ರಮಾಣ ಕಡಿಮೆ ಹಾಗಾಗಿ ಲಸಿಕೆಯೊಂದೇ ಸೋಂಕಿಗೆ ರಾಮಬಾಣವಾಗಿದೆ. ಪ್ರತಿಯೊಬ್ಬರು ಲಸಿಕೆಯನ್ನು ಸರಿಯಾಗಿ ಪಡೆದುಕೊಳ್ಳಿ ಈ ಮೂಲಕ ಸೋಂಕಿನ ವಿರುದ್ಧ ಹೋರಾಡೋಣ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನೀವು ಮನಸ್ಸು ಬದಲಾಯಿಸುವಿರಿ ಎಂಬ ನಂಬಿಕೆ ಇದೆ – ಲಸಿಕೆ ಬಗ್ಗೆ ಜೊಕೊವಿಕ್‍ಗೆ ಪೂನಾವಾಲ ಸಂದೇಶ

    ನೀವು ಮನಸ್ಸು ಬದಲಾಯಿಸುವಿರಿ ಎಂಬ ನಂಬಿಕೆ ಇದೆ – ಲಸಿಕೆ ಬಗ್ಗೆ ಜೊಕೊವಿಕ್‍ಗೆ ಪೂನಾವಾಲ ಸಂದೇಶ

    ಮುಂಬೈ: ಕೊರೊನಾ ಲಸಿಕೆ ಪಡೆಯಲು ನಿರಾಕರಿಸಿ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್‍ಸ್ಲಾಂ ಆಡುವ ಅವಕಾಶ ಕಳೆದುಕೊಂಡಿದ್ದ ವಿಶ್ವ ನಂಬರ್ 1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್‍ಗೆ ಲಸಿಕೆ ಬಗ್ಗೆ ಸೀರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಆದಾರ್ ಪೂನಾವಾಲ ವಿಶೇಷ ಸಂದೇಶ ರವಾನಿಸಿದ್ದಾರೆ.

    ಕೊರೊನಾ ಲಸಿಕೆ ಪಡೆಯಲು ಬಯಸದ ಜೊಕೊವಿಕ್ ಫ್ರೆಂಚ್ ಓಪನ್, ವಿಂಬಲ್ಡನ್ ಸೇರಿದಂತೆ ಪ್ರತಿಷ್ಠಿತ ಟೆನಿಸ್ ಟೂರ್ನಿಗಳಿಂದ ಹೊರಗುಳಿಯುತ್ತಿದ್ದಾರೆ. ಈವರೆಗೆ ಲಸಿಕೆ ಪಡೆಯಲು ಒಪ್ಪದ ಜೊಕೊವಿಕ್‍ಗೆ ಆದಾರ್ ಪೂನಾವಾಲ ಟ್ವಿಟ್ಟರ್‌ನಲ್ಲಿ ತಾವು ಟೆನಿಸ್ ಆಡುವ ವೀಡಿಯೋ ಮೂಲಕ ವಿಶೇಷ ಸಂದೇಶ ರವಾನಿಸಿದ್ದಾರೆ.  ಇದನ್ನೂ ಓದಿ: ನೊವಾಕ್ ಜೊಕೊವಿಕ್ ವೀಸಾ 2ನೇ ಬಾರಿ ರದ್ದು – 3 ವರ್ಷ ಆಸ್ಟ್ರೇಲಿಯಾಗೆ ಪ್ರವೇಶವಿಲ್ಲ

    ಲಸಿಕೆ ಪಡೆಯದೆ ಇರುವ ನಿಮ್ಮ ವೈಯಕ್ತಿಕ ವಿಚಾರವನ್ನು ನಾನು ಗೌರವಿಸುತ್ತೇನೆ. ನಿಮ್ಮ ಆಟವನ್ನು ನಾನು ತುಂಬಾ ಇಷ್ಟ ಪಡುತ್ತೇನೆ. ನೀವು ಮನಸ್ಸು ಬದಲಾಯಿಸುವಿರಿ ಎಂಬ ನಂಬಿಕೆ ಇದೆ. ಈ ಮೂಲಕ ಇನ್ನೊಂದು ಗ್ರ್ಯಾನ್‍ಸ್ಲಾಂ ಪ್ರಶಸ್ತಿ ಗೆಲ್ಲುವ ಅವಕಾಶ ನಿಮ್ಮದಾಗಬಹುದು ಎಂದಿದ್ದಾರೆ. ಇದನ್ನೂ ಓದಿ: ಡೆಲ್ಲಿ To ಲಂಡನ್ ಬಸ್ ಟೂರ್ – 70 ದಿನಗಳಲ್ಲಿ 18 ದೇಶ ಸುತ್ತುವ ಅವಕಾಶ

    ಜೊಕೊವಿಕ್ ಈಗಾಗಲೇ 20 ಗ್ರ್ಯಾನ್‍ಸ್ಲಾಂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ಓಪನ್ ಗೆಲ್ಲುವ ಅವಕಾಶ ಜೊಕೊವಿಕ್‍ಗೆ ಇತ್ತು ಆದರೆ ಲಸಿಕೆ ಪಡೆಯದ ಕಾರಣ ಆಸ್ಟ್ರೇಲಿಯಾ ವೀಸಾ ರದ್ದಾಗಿತ್ತು. ಇವರ ಅನುಪಸ್ಥಿತಿಯಲ್ಲಿ ರಫೇಲ್ ನಡಾಲ್ 21ನೇ ಗ್ರ್ಯಾನ್‍ಸ್ಲಾಂ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಿದ್ದಾರೆ.