Tag: ಆದಾಯ ತೆರಿಗೆ

  • 7 ಲಕ್ಷ ಆದಾಯಕ್ಕೆ ತೆರಿಗೆ ವಿನಾಯಿತಿ – ಈಗ ಅಧಿಕೃತ ಜಾರಿ

    7 ಲಕ್ಷ ಆದಾಯಕ್ಕೆ ತೆರಿಗೆ ವಿನಾಯಿತಿ – ಈಗ ಅಧಿಕೃತ ಜಾರಿ

    ನವದೆಹಲಿ: ಬಜೆಟ್‌ನಲ್ಲಿ (Union Budget 2023) 7 ಲಕ್ಷ ರೂ. ವೈಯಕ್ತಿಕ ಆದಾಯಕ್ಕೆ (Personal Income) ತೆರಿಗೆ ವಿನಾಯಿತಿಯನ್ನು ಘೋಷಿಸಿದ್ದ ಸರ್ಕಾರ ಈಗ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ಮಾಡಿ ಈ ಪ್ರಸ್ತಾಪವನ್ನು ಅಧಿಕೃತವಾಗಿ ಜಾರಿ ಮಾಡಿದೆ.

    ಈ ಸಂಬಂಧ ಹಣಕಾಸು ಸಚಿವಾಲಯ (Finance Ministry) ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಈ ವಿಷಯವನ್ನು ಅಧಿಕೃತವಾಗಿ ತಿಳಿಸಿದೆ. ಆದಾಯ ತೆರಿಗೆ ಕಾಯ್ದೆ (Income Tax Act) 2023 ಸೆಕ್ಷನ್‌ 87ಕ್ಕೆ ತಿದ್ದುಪಡಿ ಮಾಡಿ ವಾರ್ಷಿಕ ಬಜೆಟ್​ನಲ್ಲಿ ಪ್ರಕಟಿಸಿದ ಘೋಷಣೆಯನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದೆ.  ಇದನ್ನೂ ಓದಿ: Ayodhya Ram Mandir: ರಾಮನೂರಿನಲ್ಲಿ ತಲೆಎತ್ತಲಿದೆ 7 ಸ್ಟಾರ್‌ ಸಸ್ಯಹಾರಿ ಹೋಟೆಲ್‌

    ಆದಾಯ 7 ಲಕ್ಷ ರೂಪಾಯಿಯ ತನಕ ಇದ್ದಲ್ಲಿ ಇನ್ನು ಮುಂದೆ ಆದಾಯ ತೆರಿಗೆ ಸಲ್ಲಿಸುವಾಗ ಕಟ್ಟಿರುವ ತೆರಿಗೆಯನ್ನು ರಿಬೇಟ್​ ಅಥವಾ ವಾಪಸ್​ ಪಡೆದುಕೊಳ್ಳುವ ಅವಕಾಶ ಲಭ್ಯವಿರುತ್ತದೆ. ಈ ಹಿಂದೆ 5 ಲಕ್ಷ ರೂ. ತನಕ ಆದಾಯ ಇದ್ದವರಿಗೆ ಈ ವಿನಾಯಿತಿ ನೀಡಲಾಗುತ್ತಿತ್ತು. 2023ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈ ಅವಕಾಶವನ್ನು 7 ಲಕ್ಷ ರೂ. ಆದಾಯ ಇರುವವರಿಗೂ ವಿಸ್ತರಿಸಿದ್ದರು.

     

  • ಐಟಿ ದಾಳಿಯಲ್ಲಿ 290 ಕೋಟಿ ರೂ. ಜಪ್ತಿ – ಎಣಿಸಿದಷ್ಟು ಹೆಚ್ಚುತ್ತಲೇ ಇದೆ ಹಣ

    ಐಟಿ ದಾಳಿಯಲ್ಲಿ 290 ಕೋಟಿ ರೂ. ಜಪ್ತಿ – ಎಣಿಸಿದಷ್ಟು ಹೆಚ್ಚುತ್ತಲೇ ಇದೆ ಹಣ

    ನವದೆಹಲಿ: ಕಳೆದ ಎರಡು ದಿನಗಳಿಂದ ಆದಾಯ ತೆರಿಗೆ ಇಲಾಖೆಯು (Income Tax Department) ಒಡಿಶಾ ಮತ್ತು ಜಾರ್ಖಂಡ್‌ನ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ (BDPL) ಕಚೇರಿ ಮತ್ತು ಕಂಪನಿಗೆ ಸಂಪರ್ಕ ಹೊಂದಿದ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿ ಭಾರೀ ಪ್ರಮಾಣದ ಹಣ ವಶಕ್ಕೆ ಪಡೆದಿದೆ. ಇದು ದೇಶದ ಅತಿದೊಡ್ಡ ಐಟಿ ದಾಳಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    ಆದಾಯ ತೆರಿಗೆ ಇಲಾಖೆಯು ಕಳೆದ ಎರಡು ದಿನಗಳಿಂದ 3 ರಾಜ್ಯಗಳಲ್ಲಿ ನಡೆಸಿದ ದಾಳಿಯಲ್ಲಿ ಈವರೆಗೆ ಕನಿಷ್ಠ 290 ಕೋಟಿ ರೂ.ಗಳಷ್ಟು ನಗದು ಹಣವನ್ನು ಜಪ್ತಿಮಾಡಿದೆ. ಐಟಿ ಅಧಿಕಾರಿಗಳಿಗೆ ಇನ್ನೂ ಹೆಚ್ಚಿನ ಸ್ಥಳಗಳಲ್ಲಿ ನಗದು ಬಚ್ಚಿಟ್ಟಿರುವ ಬಗ್ಗೆ ಗುಪ್ತಚರ ಮಾಹಿತಿ ದೊರೆತಿದ್ದು, ನಗದಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಶತ್ರು ಸೇನೆಗಳಿಂದ ರಕ್ಷಣೆಗೆ ಮಾಸ್ಟರ್‌ ಪ್ಲ್ಯಾನ್‌ – ಫೈಟರ್‌ ಜೆಟ್‌ಗಳಿಗೆ ಶೀಘ್ರವೇ ಬರಲಿದೆ ಡಿಜಿಟಲ್‌ ನಕ್ಷೆ

    ಒಡಿಶಾ, ಜಾರ್ಖಂಡ್‌, ಪಶ್ಚಿಮ ಬಂಗಾಳ ಮೂಲದ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ (BDPL) ಕಚೇರಿಗಳ ಮೇಲೆ ತೆರಿಗೆ ಇಲಾಖೆ ದಾಳಿ ನಡೆಸಿದೆ. ಈಗಾಗಲೇ ಮೂರು ರಾಜ್ಯಗಳ ಅನೇಕ ಕಡೆ ದಾಳಿ ನಡೆಸಿದ್ದು, ಜಪ್ತಿ ಮಾಡಲಾದ ಹಣದ ಪ್ರಮಾಣ 290 ಕೋಟಿ ರೂ.ಗೆ ಏರಿಕೆಯಾಗಿದೆ. ಇನ್ನೂ ಮೂರು ಸ್ಥಳಗಳಲ್ಲಿ 7 ಕೊಠಡಿಗಳಲ್ಲಿರುವ 9 ಲಾಕರ್‌ಗಳನ್ನು ಪರಿಶೀಲಿಸಬೇಕಾಗಿದೆ. ನಗದು ಹಣವನ್ನು ಬೀರು ಸೇರಿದಂತೆ ಇನ್ನಿತರ ಪೀಠೋಪಕರಣಗಳ ಒಳಗೆ ತುಂಬಿರುವುದು ಗುಪ್ತಚರ ಮಾಹಿತಿಗಳಿಂದ ಪತ್ತೆಯಾಗಿದೆ. ಹಾಗಾಗಿ ಇನ್ನೂ ನೋಟು ಎಣಿಕೆ ಕಾರ್ಯ ನಡೆಯುತ್ತಿದ್ದು, ಚಿನ್ನಾಭರಣಗಳೂ ಸಿಗುವ ಸಾಧ್ಯತೆಗಳಿವೆ. ಜೊತೆಗೆ ದಾಳಿ ನಡೆಸಬೇಕಾದ ಇನ್ನಷ್ಟು ಸ್ಥಳಗಳ ಬಗ್ಗೆಯೂ ಮಾಹಿತಿ ಪಡೆದಿದ್ದೇವೆ ಎಂದು ಐಟಿ ಅಧಿಕಾರಿ ಮೂಲಗಳು ತಿಳಿಸಿವೆ.

    ಗುರುವಾರ (ಡಿ.7) ಆದಾಯ ತೆರಿಗೆ ಇಲಾಖೆಯು ಒಡಿಶಾ ಮತ್ತು ಜಾರ್ಖಂಡ್‌ನ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ ಕಚೇರಿ ಮತ್ತು ಕಂಪನಿಗೆ ಸಂಪರ್ಕ ಹೊಂದಿದ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿ 200 ಕೋಟಿ ರೂ.ಗಳಷ್ಟು ಹಣವನ್ನು ಜಪ್ತಿ ಮಾಡಲಾಗಿತ್ತು. ಭಾರೀ ಪ್ರಮಾಣದಲ್ಲಿ ನೋಟುಗಳ ಸಂಖ್ಯೆ ಇದ್ದ ಕಾರಣ ನೋಟು ಎಣಿಸುವ ಯಂತ್ರಗಳು ಕೆಲಸ ಮಾಡುವುದನ್ನೇ ನಿಲ್ಲಿಸಿದ್ದವು.

    2019 ರಿಂದ 2021ರ ಹಣಕಾಸು ವರ್ಷದಲ್ಲಿ ಕಂಪನಿ ಕಡಿಮೆ ಆದಾಯ ತೋರಿಸಿತ್ತು. ಲೆಕ್ಕ ಪತ್ರದಲ್ಲಿ ತೋರಿಸಲಾದ ಅನುಮಾನಾಸ್ಪದ ಇತರ ಪಾವತಿಗಳ ಬಗ್ಗೆ ಈಗ ಐಟಿ ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ಠಾಣೆಯಲ್ಲಿ ಸರ್ವೀಸ್ ರಿವಾಲ್ವರ್ ಕ್ಲೀನ್ ಮಾಡ್ತಿದ್ದಾಗ ಮಹಿಳೆಗೆ ಗುಂಡೇಟು – ಸ್ಥಿತಿ ಗಂಭೀರ

  • ಮದ್ಯ ಕಂಪನಿಯ ಮೇಲೆ ಐಟಿ ದಾಳಿ – 200 ಕೋಟಿ ಜಪ್ತಿ,  ನೋಟು ಎಣಿಕೆ ಮಾಡಿ ಮಾಡಿ ಕೈಕೊಟ್ಟ ಯಂತ್ರಗಳು

    ಮದ್ಯ ಕಂಪನಿಯ ಮೇಲೆ ಐಟಿ ದಾಳಿ – 200 ಕೋಟಿ ಜಪ್ತಿ, ನೋಟು ಎಣಿಕೆ ಮಾಡಿ ಮಾಡಿ ಕೈಕೊಟ್ಟ ಯಂತ್ರಗಳು

    ನವದೆಹಲಿ: ಆದಾಯ ತೆರಿಗೆ ಇಲಾಖೆಯು (Income Tax Department) ಒಡಿಶಾ ಮತ್ತು ಜಾರ್ಖಂಡ್‌ನ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ (BDPL) ಕಚೇರಿ ಮತ್ತು ಕಂಪನಿಗೆ ಸಂಪರ್ಕ ಹೊಂದಿದ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿ ಭಾರೀ ಪ್ರಮಾಣದ ಹಣವನ್ನು ವಶಕ್ಕೆ ಪಡೆದಿದೆ.

    ಇಲ್ಲಿಯವರೆಗೆ 200 ಕೋಟಿ ರೂ. ಹಣವನ್ನು ಜಪ್ತಿ ಮಾಡಲಾಗಿದೆ. ಭಾರೀ ಪ್ರಮಾಣದಲ್ಲಿ ನೋಟುಗಳ ಸಂಖ್ಯೆ ಇದ್ದ ಕಾರಣ ನೋಟು ಎಣಿಸುವ ಯಂತ್ರಗಳು ಕೆಲಸ ಮಾಡುವುದನ್ನು ನಿಲ್ಲಿಸಿವೆ ಎಂದು ಐಟಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮತ್ತೆ ನಂದಿನಿ ಹಾಲಿನ ದರ ಏರಿಕೆ ಸಾಧ್ಯತೆ

    ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಬಿಡಿಪಿಎಲ್ ಸೇರಿದ ಕೋಲ್ಕತ್ತಾ ಮತ್ತು ರಾಂಚಿಯಲ್ಲಿನ ನೋಂದಾಯಿತ ಕಚೇರಿಗಳು ಸೇರಿದಂತೆ ಬೌಧ್, ಬೋಲಂಗಿರ್, ರಾಯ್‌ಗಢ ಮತ್ತು ಸಂಬಲ್‌ಪುರದಲ್ಲಿನ ಡಿಸ್ಟಿಲರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿಗಳನ್ನು ನಡೆಸಲಾಗಿತ್ತು.  ನಿರ್ದೇಶಕರು ಮತ್ತು ವ್ಯವಸ್ಥಾಪಕ ನಿರ್ದೇಶಕರ ನಿವಾಸಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಒಡಿಶಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಿಡಿಪಿಎಲ್‌ ಒಡಿಶಾದಾದ್ಯಂತ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಹಲವು ಸ್ಥಳಗಳಲ್ಲಿ ದಾಳಿ ನಡೆಯುತ್ತಿದ್ದು, ತೆರಿಗೆ ವಂಚನೆಯ ನಿಖರ ಮೊತ್ತ ಇನ್ನೂ ಬಹಿರಂಗವಾಗಿಲ್ಲ.

    2019 ರಿಂದ 2021 ರ ಹಣಕಾಸು ವರ್ಷದಲ್ಲಿ ಕಂಪನಿ ಕಡಿಮೆ ಆದಾಯ ತೋರಿಸಿತ್ತು. ಲೆಕ್ಕ ಪತ್ರದಲ್ಲಿ ತೋರಿಸಲಾದ ಅನುಮಾನಾಸ್ಪದ ಇತರ ಪಾವತಿಗಳ ಬಗ್ಗೆ ಈಗ ಐಟಿ ತನಿಖೆ ನಡೆಸುತ್ತಿದೆ.

  • ಗುತ್ತಿಗೆದಾರ ಅಂಬಿಕಾಪತಿಯ ಸಾವಿನ ಬಗ್ಗೆ ಕೂಲಂಕುಷ ತನಿಖೆಯಾಗಬೇಕು: ಯತ್ನಾಳ್‌ ಆಗ್ರಹ

    ಗುತ್ತಿಗೆದಾರ ಅಂಬಿಕಾಪತಿಯ ಸಾವಿನ ಬಗ್ಗೆ ಕೂಲಂಕುಷ ತನಿಖೆಯಾಗಬೇಕು: ಯತ್ನಾಳ್‌ ಆಗ್ರಹ

    ಬೆಂಗಳೂರು: ಗುತ್ತಿಗೆದಾರ ಅಂಬಿಕಾಪತಿಯ (Ambikapathy) ಸಾವಿನ ಬಗ್ಗೆಯೂ ಕೂಲಂಕುಷವಾಗಿ ತನಿಖೆಯಾಗಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಆಗ್ರಹಿಸಿದ್ದಾರೆ.

    ಈ ಸಂಬಂಧ ಎಕ್ಸ್‌ನಲ್ಲಿ ಬರೆದ ಅವರು, ಆದಾಯ ತೆರಿಗೆ ಇಲಾಖೆಗೆ (Income Tax Department) ಪ್ರಕರಣದ ಕುರಿತು ಹೇಳಿಕೆ ನೀಡಿದ್ದ ಅಂಬಿಕಾಪತಿ ಯಾರ ಹೆಸರುಗಳನ್ನೂ ಹೇಳಿದ್ದಾರೋ, ಆ ಹಣ ಯಾರದ್ದು ಎಂದು ಹೇಳಿದ್ದರೋ ಎಂಬ ಅಂಶವು ತನಿಖೆಯಲ್ಲಿ ಬಯಲಾಗಬೇಕಿದೆ ಎಂದಿದ್ದಾರೆ.  ಇದನ್ನೂ : ಕಾಂಗ್ರೆಸ್ ಆರು ತಿಂಗಳಲ್ಲಿ ನೆಲ ಕಚ್ಚುವ ಪರಿಸ್ಥಿತಿ ತಲುಪಲಿದೆ: ಪ್ರಹ್ಲಾದ್ ಜೋಶಿ

    ಗುತ್ತಿಗೆದಾರ ಅಂಬಿಕಾಪತಿ ಸಾವು ಸಹಜವಲ್ಲವೆಂದಿರುವ ಕೆಂಪಣ್ಣನವರ (Kempanna) ಹೇಳಿಕೆಯನ್ನು ಸರ್ಕಾರ ಹಾಗೂ ಮಾಧ್ಯಮಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.

    ಅಂಬಿಕಾಪತಿ ಮನೆಯಲ್ಲಿ 40 ಕೋಟಿ ಹಣ ಆದಾಯ ತೆರಿಗೆ ದಾಳಿಯ ವೇಳೆ ಸಿಕ್ಕಿತ್ತು. ಈ ಹಣ ಸರ್ಕಾರ ಪ್ರಭಾವಿ ಮಂತ್ರಿ ಹಾಗು ಒಬ್ಬ ಪ್ರಭಾವಿ ರಾಜಕಾರಣಿಯ ಮಗನಿಗೆ ಸೇರಿದ್ದು ಎಂಬ ಸುದ್ದಿಯೂ ಇದೆ. ಇದಕ್ಕೆ ಸಾಕ್ಷಿಯಾಗಿ ಆ ಪ್ರಭಾವಿ ರಾಜಕಾರಣಿ ಮಗನ ಆಪ್ತ ಸಹಾಯಕನನ್ನು ಆದಾಯ ತೆರಿಗೆ ಇಲಾಖೆ ವಿಚಾರಣೆಗೆ ಒಳಪಡಿಸಿತ್ತು ಎಂದು ಬರೆದಿದ್ದಾರೆ.

    ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿದ್ದ ಅಂಬಿಕಾಪತಿ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ನವೆಂಬರ್‌ 27 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅಕ್ಟೋಬರ್‌ನಲ್ಲಿ ಅಂಬಿಕಾಪತಿ ನಿವಾಸಕ್ಕೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಐಟಿ ರೇಡ್ (IT Raid) ವೇಳೆ ಅಂಬಿಕಾಪತಿ ಮನೆಯಲ್ಲಿ ಬರೋಬ್ಬರಿ 44 ಕೊಟಿ ರೂ. ಪತ್ತೆಯಾಗಿತ್ತು.

     

  • ರೇಡ್ ಪಾಲಿಟಿಕ್ಸ್ ಆರೋಪಕ್ಕೆ ಕೌಂಟರ್‌ – ಬಿಜೆಪಿಗೆ ಶಾಕ್‌ ನೀಡಲು ಕಾಂಗ್ರೆಸ್‌ ತಯಾರಿ

    ರೇಡ್ ಪಾಲಿಟಿಕ್ಸ್ ಆರೋಪಕ್ಕೆ ಕೌಂಟರ್‌ – ಬಿಜೆಪಿಗೆ ಶಾಕ್‌ ನೀಡಲು ಕಾಂಗ್ರೆಸ್‌ ತಯಾರಿ

    ಬೆಂಗಳೂರು: ರೇಡ್ ಪಾಲಿಟಿಕ್ಸ್ (Raid Politics) ಆರೋಪ ಪ್ರತ್ಯಾರೋಪದ ನಡುವೆ ಕೌಂಟರ್ ಅಸ್ತ್ರ ಜೋರಾಗಿದೆ. ಮೆಡಿಕಲ್ ಹಗರಣ (Medical Corruption), ಬಿಟ್ ಕಾಯಿನ್ ಹಗರಣದ (Bit Coin Corruption) ತನಿಖೆಯ ಶಾಕ್ ನೀಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಈಗ ಲಭ್ಯವಾಗಿದೆ.

    ರೇಡ್ ಪಾಲಿಟಿಕ್ಸ್ ಜಾಸ್ತಿಯಾದ್ರೆ ಟಕ್ಕರ್ ನೀಡಲು ಕಾಂಗ್ರೆಸ್‌ (Congress) ಪಾಳಯ ಸಿದ್ದತೆ ಮಾಡಿಕೊಂಡಿದೆ. ರಾಜ್ಯದಲ್ಲಿ ಐಟಿ ರೇಡ್ (Income Tax Raid) ದಿನ ಕಳೆದಂತೆ ಜೋರಾಗುತ್ತಿದ್ದು, ಅಕ್ರಮವಾಗಿ ಸಿಕ್ಕ ಹಣದ ಮೂಲ ಕಾಂಗ್ರೆಸ್ ಎಂಬ ಆರೋಪವನ್ನು ಬಿಜೆಪಿ (BJP) ನಾಯಕರು ಮಾಡುತ್ತಿದ್ದಾರೆ.   ಇದನ್ನೂ ಓದಿ: ಚಂದ್ರಯಾನ-3ರ ಬಳಿಕ ಇಸ್ರೋ ತಂತ್ರಜ್ಞಾನ ಬಯಸಿದ ನಾಸಾ: ಸೋಮನಾಥ್

     
    ಯಾವುದೇ ದಾಖಲೆ ಇಲ್ಲದೆ ಮಾಡುತ್ತಿರುವ ಆರೋಪ ರಾಜಕೀಯ ಎನ್ನುವುದು ಕೈ ಪಾಳಯದ ವಾದ. ಆದರೆ ಐಟಿ ರೇಡ್ ಮಾತ್ರ ರಾಜಕೀಯ ಕಾರಣಕ್ಕಾಗಿಯೇ ಆಗುತ್ತಿವೆ ಎಂದು ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದೆ.

    ಈ ಆರೋಪಕ್ಕೆ ಪ್ರತಿಯಾಗಿ ರಾಜ್ಯ ಮಟ್ಟದ ತನಿಖೆಗಳ ಚುರುಕುಗೊಳಿಸಿ ಬಿಸಿ ಮುಟ್ಟಿಸಲು ಕಾಂಗ್ರೆಸ್‌ ಮುಂದಾಗಿದೆ. ಮೆಡಿಕಲ್ ಹಗರಣ ಅಥವಾ ಬಿಟ್ ಕಾಯಿನ್‌ನಂತ ಹಗರಣಗಳ ತನಿಖೆ ಚುರುಕಾದರೆ ಸಹಜವಾಗಿಯೇ ಬಿಜೆಪಿಗೆ ಕೌಂಟರ್ ಮಾಡಬಹುದು. ಇಂತಹದೊಂದು ಲೆಕ್ಕಾಚಾರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿದ್ದು, ಐಟಿ ದಾಳಿ ಕೌಂಟರ್‌ಗೆ ಸ್ಥಳೀಯ ತನಿಖೆಗಳನ್ನ ಚುರುಕುಗೊಳಿಸುವ ಸಲಹೆ ನೀಡುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್‌ ಟಿವಿಗೆ ಸಿಕ್ಕಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಎಂ, ಡಿಸಿಎಂ ಗುತ್ತಿಗೆದಾರರ ಮನೆಯಲ್ಲಿ ಸಿಕ್ಕ ಕಂತೆಕಂತೆ‌ ನೋಟಿನ ಬಗ್ಗೆ ತನಿಖೆ ಮಾಡಿಸಲಿ: ಹೆಚ್‌ಡಿಕೆ

    ಸಿಎಂ, ಡಿಸಿಎಂ ಗುತ್ತಿಗೆದಾರರ ಮನೆಯಲ್ಲಿ ಸಿಕ್ಕ ಕಂತೆಕಂತೆ‌ ನೋಟಿನ ಬಗ್ಗೆ ತನಿಖೆ ಮಾಡಿಸಲಿ: ಹೆಚ್‌ಡಿಕೆ

    – ಸತ್ಯ ಮುಚ್ಚಿಟ್ಟರೆ ಶಿವ ಮೆಚ್ಟುತ್ತಾನೆಯೇ?
    – ಸಿಕ್ಕಿಬಿದ್ದಿರುವ ಕನಕ ಮಹಾಲಕ್ಷ್ಮೀ ಬಗ್ಗೆ ಸತ್ಯ ಹೇಳಬೇಕಲ್ಲವೇ?

    ಬೆಂಗಳೂರು: ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡನಂತೆ. ಕಳ್ಳನ ಮನಸ್ಸು ಹುಳ್ಳುಳ್ಳಗೆ. ಈ ಗಾದೆಮಾತುಗಳು ಯಾರಿಗೆ ಅನ್ವಯ ಆಗುತ್ತವೋ ಇಲ್ಲವೋ ಗೊತ್ತಿಲ್ಲ. ಡಿಕೆ ಸಹೋದರರಿಗಂತೂ ಕರಾರುವಕ್ಕಾಗಿ ಅನ್ವಯಿಸುತ್ತವೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ವ್ಯಂಗ್ಯವಾಡಿದ್ದಾರೆ.

    ಕುಮಾರಸ್ವಾಮಿ ಅವರು ಆದಾಯ ತೆರಿಗೆ (Income Tax) ಇಲಾಖೆಯ ಪ್ರತಿನಿಧಿಯೇನೂ ಅಲ್ಲ ಎಂದಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DK Shivakumar) ಅವರ ಹೇಳಿಕೆ ಹತಾಶೆಯ ಹೇಳಿಕೆಯಷ್ಟೇ. ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದ ಇಡುಗಂಟು ಡಿಕೆಶಿ ಅವರದ್ದು ಎಂದು ನಾನು ಹೇಳಿದ್ದೇನೆಯೇ? ನಗದು ಅಭಿವೃದ್ಧಿ ಇಲಾಖೆ ಎಂದರೆ ಅವರದ್ದೇನಾ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ಅಂಬಿಕಾಪತಿ, ಸಂತೋಷ್‌ ಕೃಷ್ಣಪ್ಪ ರಾಜ್ಯದ ನಂ 1, ನಂ 2 ಅವರ ಬೇನಾಮಿಗಳು: ಸಿಟಿ ರವಿ

    ಹೆಚ್‌ಡಿಕೆ ಹೇಳಿದ್ದೇನು?
    ಶಿವಕುಮಾರ್‌ ತಿಹಾರ್‌ ಜೈಲಿನ ವಿಷಯವನ್ನೂ ಪ್ರಸ್ತಾಪ ಮಾಡಿದ್ದಾರೆ. ಆದರೆ ತಿಹಾರಿಗೆ ಹೋಗುವ ಭಯ ಅಥವಾ ಗ್ಯಾರಂಟಿ ಸ್ವತಃ ಅವರಿಗೇ ಇದೆ ಎನ್ನುವುದು ನನ್ನ ಸ್ಪಷ್ಟ ಅನುಮಾನ. ಇಲ್ಲದಿದ್ದರೆ ಅವರು ಇಷ್ಟು ತೀವ್ರವಾಗಿ ನನ್ನ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯವಿರಲಿಲ್ಲ. ಅಂದಹಾಗೆ ನಾನು ಐಟಿ ಪ್ರತಿನಿಧಿಯೂ ಅಲ್ಲ, ಇಡಿ ಉದ್ಯೋಗಿಯೂ ಅಲ್ಲ. ಒಬ್ಬ ಹುಲು ಮಾನವನಷ್ಟೇ. ಕೆಲವರ ಭ್ರಮೆಗಳಿಗೆ ನಾನೇನು ಮಾಡಲಿ?

    40% ಕಮೀಷನ್ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಇವರಲ್ಲವೇ? ಆದರೆ, ಇವರ ಪರ್ಸಂಟೇಜ್‌ ಬಗ್ಗೆಯೇ ಹೇಳಿದರೆ ಕೋಪ ಬರುತ್ತದೆ. ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದ ಆ ಕಪ್ಪು ಹಣ ಯಾರದ್ದು? ಆ ಗುತ್ತಿಗೆದಾರ ಯಾರ ಪರಮಾಪ್ತ ಎನ್ನುವುದು ಜಗಜ್ಜಾಹೀರು. ಹೀಗಿದ್ದ ಮೇಲೆ ಸತ್ಯ ಮುಚ್ಚಿಟ್ಟರೆ ಶಿವ ಮೆಚ್ಟುತ್ತಾನೆಯೇ?

    ಮಾತೆತ್ತಿದರೆ ತನಿಖೆ, ಆಯೋಗ ಎಂದು ಜಪಿಸುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಈಗ ಗುತ್ತಿಗೆದಾರರ ಮನೆಗಳಲ್ಲಿ ಕಂತೆಕಂತೆಯಾಗಿ ಸಿಕ್ಕಿಬಿದ್ದಿರುವ ಕನಕ ಮಹಾಲಕ್ಷ್ಮೀ ಬಗ್ಗೆ ಸತ್ಯ ಹೇಳಬೇಕಲ್ಲವೇ? ಎಷ್ಟೇ ಆಗಲಿ, ಒಬ್ಬರು ಸಿದ್ದಪುರುಷರು! ಇನ್ನೊಬ್ಬರು ಸತ್ಯಪುರುಷರು! ಸತ್ಯಕ್ಕೆ ಸಮಾಧಿ ಕಟ್ಟುವ ಬದಲು ತನಿಖೆ ಮಾಡಿಸಲಿ. ಅದು ಯಾವ ತನಿಖೆ ಎಂದು ಅವರೇ ಬಾಯಿ ಬಿಟ್ಟು ಹೇಳಲಿ. #ಪರ್ಸಂಟೇಜ್_ಪಟಾಲಂ

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Breaking: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ 15 ಕಡೆ IT ದಾಳಿ

    Breaking: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ 15 ಕಡೆ IT ದಾಳಿ

    ಬೆಂಗಳೂರು: ನಗರದ 15ಕ್ಕೂ ಹೆಚ್ಚು ಕಡೆ ಇಂದು (ಅ.15) ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ (IT Officers) ದಾಳಿ ನಡೆದಿದೆ.

    ನಗರದ ಪ್ರಮುಖ ಉದ್ಯಮಿಗಳು (Businessman), ಜ್ಯುವೆಲರಿ ಶಾಪ್‌ಗಳ ಮೇಲೆ IT ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತದಲ್ಲಿ ಗಾಯಗೊಂಡಿದ್ದ ಯುವಕ ದುರ್ಮರಣ- ಸಾವಿನ ಸಂಖ್ಯೆ 16ಕ್ಕೆ ಏರಿಕೆ

    ಬೆಂಗಳೂರಿನ ಸರ್ಜಾಪುರ ಬಳಿಯ ಮುಳ್ಳೂರು, ಆರ್‌ಎಂವಿ ಎಕ್ಸ್ಟೆಕ್ಷನ್‌, ಬಿಇಎಲ್ ಸರ್ಕಲ್, ಮಲ್ಲೇಶ್ವರಂ, ಡಾಲರ್ಸ್ ಕಾಲೋನಿ ಸೇರಿದಂತೆ 15ಕ್ಕೂ ಹೆಚ್ಚು ಕಡೆ ದಾಳಿ ನಡೆದಿದೆ. ಇದನ್ನೂ ಓದಿ: ರಾಜ್ಯದಲ್ಲಿ ತೀವ್ರಗೊಂಡ ವಿದ್ಯುತ್ ಅಭಾವ- ಸರ್ಕಾರದಿಂದ ಸದ್ದಿಲ್ಲದೇ ಲೋಡ್ ಶೆಡ್ಡಿಂಗ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2013ರಲ್ಲೇ ಮೃತಪಟ್ಟ ಶಿಕ್ಷಕಿ ಹೆಸರಿಗೆ 7 ಕೋಟಿ ತೆರಿಗೆ ನೋಟಿಸ್‌ – ಕುಟುಂಬಸ್ಥರು ಶಾಕ್‌!

    2013ರಲ್ಲೇ ಮೃತಪಟ್ಟ ಶಿಕ್ಷಕಿ ಹೆಸರಿಗೆ 7 ಕೋಟಿ ತೆರಿಗೆ ನೋಟಿಸ್‌ – ಕುಟುಂಬಸ್ಥರು ಶಾಕ್‌!

    ಭೋಪಾಲ್:‌ ಮಧ್ಯಪ್ರದೇಶದ (Madhya Pradesh) ಸರ್ಕಾರಿ ಶಾಲಾ ಶಿಕ್ಷಕರೊಬ್ಬರ ಹೆಸರಿಗೆ 7 ಕೋಟಿ ರೂ. ತೆರಿಗೆ ನೋಟಿಸ್‌ (Tax Notice) ಬಂದಿದೆ. ನೋಟಿಸ್‌ ಕಂಡು ಶಿಕ್ಷಕಿಯ ಕುಟುಂಬಸ್ಥರೇ ದಿಗ್ಭ್ರಮೆಗೊಂಡಿದ್ದಾರೆ. ಏಕೆಂದರೆ 2013ರಲ್ಲೇ ಆ ಶಿಕ್ಷಕಿ ಸಾವನ್ನಪ್ಪಿದ್ದಾರೆ. ನೋಟೀಸ್‌ ಕೋಡ 2017-18ರ ಮೌಲ್ಯಮಾಪನಕ್ಕೆ ಸಂಬಂಧಿಸಿದ್ದಾಗಿದೆ.

    ಶಿಕ್ಷಕಿ (Teacher) ಕುಟುಂಬದವರು ಮಾತ್ರವಲ್ಲ, ಆದಿವಾಸಿಗಳ ಪ್ರಾಬಲ್ಯ ಹೆಚ್ಚಾಗಿರುವ ಬೇತುಲ್‌ ಜಿಲ್ಲೆಯ 44 ಮಂದಿಗೆ 1 ರಿಂದ 10 ಕೋಟಿ ರೂ.ಗಳ ವರೆಗೆ ತೆರಿಗೆ ನೋಟೀಸ್‌ ಬಂದಿದೆ ಎಂದು ಆದಾಯ ತೆರಿಗೆ ಇಲಾಖೆ (Income Tax Department) ಮೂಲಗಳು ತಿಳಿಸಿವೆ. ಇದನ್ನೂ ಓದಿ: 88% ರಷ್ಟು 2 ಸಾವಿರ ರೂ. ನೋಟುಗಳು ಬ್ಯಾಂಕಿಗೆ ವಾಪಸ್ ಆಗಿವೆ: ಆರ್‌ಬಿಐ

    ಉಷಾ ಸೋನಿ ಎಂಬವರು ಪಟಖೇಡ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಕಳೆದ ಜುಲೈ 26 ರಂದು ಆಕೆಯ ಕುಟುಂಬಕ್ಕೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್‌ ಬಂದಿದ್ದು, 7.55 ಕೋಟಿ ತೆರಿಗೆ ಪಾವತಿಗೆ ಆದೇಶ ನೀಡಿತ್ತು. ನಂತರ ಅವರ ಮಗ ಪವನ್‌ ಸೋನಿ ʻನನ್ನ ತಾಯಿ 2013ರ ನವೆಂಬರ್‌ 16ರಂದೇ ದೀರ್ಘಕಾಲಿಕ ಅನಾರೋಗ್ಯದಿಂದ ನಿಧನರಾದರು. ಅಲ್ಲದೇ ಈ ನೋಟಿಸ್‌ 2017-18ರ ಮೌಲ್ಯ ಮಾಪನಕ್ಕೆ ಸಂಬಂಧಿಸಿದ್ದಾಗಿದೆ. ದಾಖಲೆಯಲ್ಲಿ ನ್ಯಾಚುರಲ್‌ ಕಾಸ್ಟಿಂಗ್‌ ಕಂಪನಿ ಎಂದು ಉಲ್ಲೇಖಿಸಲಾಗಿದೆ. ಅದು ಇನ್ನೂ ಖರೀದಿ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.

    ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ನನ್ನ ತಾಯಿಯ ಪ್ಯಾನ್‌ಕಾರ್ಡ್‌ ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ನೋಟಿಸ್‌ ಬಗ್ಗೆ ನಮಗೇನು ತಿಳಿದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ವಿಶ್ವ ನಾಯಕರೂ ಮೋದಿಯನ್ನ ʻಬಾಸ್‌ʼ ಅಂತಾರೆ – ಮಹಾರಾಷ್ಟ್ರ ಸಿಎಂ ಶ್ಲಾಘನೆ

    ಅಲ್ಲದೇ ಕಬ್ಬಣದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ತಿಂಗಳಿಗೆ 5 ರಿಂದ 7 ಸಾವಿರ ರೂ. ಸಂಪಾದಿಸುವ ನಿತಿನ್‌ ಜೈನ್‌ ಎಂಬ ವ್ಯಕ್ತಿಗೆ 1.26 ಕೋಟಿ ರೂ. ತೆರಿಗೆ ಬಂದಿರೋದನ್ನ ಕಂಡು ಆಘಾತಕ್ಕೊಳಗಾಗಿದ್ದಾರೆ. ಅವರು ಆದಾಯ ತೆರಿಗೆ ಖಾತೆ ತೆರೆಯಲು ಹೋದಾಗ, ತಮಿಳುನಾಡಿನ ಕುರ್ಟಾಲಂನಲ್ಲಿ ಅವರ ಹೆಸರಲ್ಲಿ ಖಾತೆ ಇರುವುದು ಕಂಡುಬಂದಿದೆ. 2014-15ರಲ್ಲಿ ಅವರ ಹೆಸರಿನಲ್ಲಿ ಖಾತೆ ತೆರೆಯಲಾಗಿದ್ದು, ಇದೇ ಖಾತೆಯಲ್ಲಿ ದೊಡ್ಡ ಪ್ರಮಾಣದ ವಹಿವಾಟು ನಡೆದಿದೆ. ಈ ಕಾರಣಕ್ಕಾಗಿ ನಿತೀಶ್‌ ಜೈನ್‌ಗೆ ನೋಟಿಸ್‌ ಬಂದಿರುವುದಾಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 12ನೇ ತರಗತಿ ಓದಿ ದಿನಕ್ಕೆ 10 ಕೋಟಿ ಸಂಪಾದನೆ – ಸೈಬರ್ ಕಿರಾತಕರು ಅಂದರ್

    12ನೇ ತರಗತಿ ಓದಿ ದಿನಕ್ಕೆ 10 ಕೋಟಿ ಸಂಪಾದನೆ – ಸೈಬರ್ ಕಿರಾತಕರು ಅಂದರ್

    ಮುಂಬೈ: ಪೊಲೀಸರಂತೆ ನಟಿಸಿ ದಿನವೊಂದಕ್ಕೆ 5 ರಿಂದ 10 ಕೋಟಿ ರೂ. ದೋಚುತ್ತಿದ್ದ ಸೈಬರ್ ಕ್ರೈಮ್ ಜಾಲವನ್ನು(Cybercriminals) ಮುಂಬೈ (Mumbai) ಪೊಲೀಸರು ಬಯಲಿಗೆಳೆದಿದ್ದಾರೆ.

    12ನೇ ತರಗತಿ ಓದಿ, ಉತ್ತಮ ತಾಂತ್ರಿಕ ಜ್ಞಾನ  (Technical Knowledge) ಹೊಂದಿದ್ದ ಮಾಸ್ಟರ್ ಮೈಂಡ್ (Mastermind) ಶ್ರೀನಿವಾಸ್ ರಾವ್ ದಾಡಿ (49) ಎಂಬಾತನನ್ನು ಬಂಗೂರ್ ನಗರ ಪೊಲೀಸ್ ಠಾಣೆಯ ತಂಡವು ಹೈದರಾಬಾದ್‍ನ ಹೋಟೆಲ್‍ನಲ್ಲಿ ಬಂಧಿಸಿದೆ. ಅಲ್ಲದೆ ಆತನ ಗ್ಯಾಂಗ್ ಸದಸ್ಯರಾದ ಥಾಣೆಯ ಇಬ್ಬರು ಮತ್ತು ಕೋಲ್ಕತ್ತಾದ (Kolkata) ನಾಲ್ವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಕೇಂದ್ರದ ಮಾಜಿ ನೌಕರನ ಮನೆ ಮೇಲೆ ಸಿಬಿಐ ದಾಳಿ – 20 ಕೋಟಿ ವಶ

    ಆರೋಪಿಗಳು ದಾಡಿ ಹೆಸರಿನ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವಂತೆ ನಟಿಸುತ್ತಿದ್ದರು. ಟೆಲಿಗ್ರಾಮ್ ಅಪ್ಲಿಕೇಶನ್ ಮೂಲಕ ಮಾತ್ರ ಸಂವಹನ ನಡೆಸುತ್ತಿದ್ದರು. ಅಲ್ಲದೆ ಎನಿಡೆಸ್ಕ್ ಅಪ್ಲಿಕೇಷನ್‍ಗಳನ್ನು ಸಹ ಬಳಸಿದ್ದರು. ಅವರು ಬಳಸಿದ 40 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದು, ಬಂಧಿತರಿಂದ 1.5 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆರೋಪಿಗಳು ಜನರನ್ನು ಸಂಪರ್ಕಿಸಿ ಕೋರಿಯರ್ ಮೂಲಕ ತಮ್ಮ ರಿಯಲ್ ಎಸ್ಟೇಟ್ ಕಛೇರಿಗೆ ದಾಖಲೆಗಳನ್ನು ಕಳಿಸುವಂತೆ ಹೇಳುತ್ತಿದ್ದರು. ಅದರಲ್ಲೂ ಹೆಚ್ಚಾಗಿ ಮಹಿಳೆಯರನ್ನು ಇವರು ಟಾರ್ಗೆಟ್ ಮಾಡುತ್ತಿದ್ದರು. ಅಲ್ಲದೆ ತಮಗೆ ಕಳುಹಿಸಿದ ಕೊರಿಯರ್‍ನಲ್ಲಿ ಪೊಲೀಸರು ಡ್ರಗ್ಸ್ ಅಥವಾ ಶಸ್ತ್ರಾಸ್ತ್ರಗಳನ್ನು ಪತ್ತೆ ಮಾಡಿದ್ದಾರೆ ಎಂದು ಹೆದರಿಸುತ್ತಿದ್ದರು. ಭಯಭೀತರಾದವರಿಂದ ಬ್ಯಾಂಕ್ ಅಥವಾ ಆದಾಯ ತೆರಿಗೆ (Income Tax) ಸಂಬಂಧಿತ ವಿವರಗಳನ್ನು ಪಡೆದು ಖಾತೆಯಲ್ಲಿದ್ದ ಹಣ ಕದಿಯುತ್ತಿದ್ದರು ಎಂದು ಉಪ ಪೊಲೀಸ್ ಆಯುಕ್ತ ಅಜಯ್ ಕುಮಾರ್ ಬನ್ಸಾಲ್ ತಿಳಿಸಿದ್ದಾರೆ.

    ದರೋಡೆಕೋರರು ಕದ್ದ ಎಲ್ಲಾ ಹಣ ಶ್ರೀನಿವಾಸ್ ರಾವ್ ನಿರ್ವಹಿಸುತ್ತಿದ್ದ ಬ್ಯಾಂಕ್ ಖಾತೆಗಳಿಗೆ ಸೇರುತ್ತಿತ್ತು. ನಂತರ ಆತ ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ (Cryptocurrency) ಪರಿವರ್ತಿಸಿ ಚೀನಾದ ಪ್ರಜೆಗೆ ವರ್ಗಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಕರಣದ ತನಿಖೆಗಾಗಿ, ನಗರ ಪೊಲೀಸ್ ತಂಡಗಳು ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಜಾಖರ್ಂಡ್, ಹರಿಯಾಣ ಮತ್ತು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಗ್ಯಾಂಗ್‍ನ ಸಹಚರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪೊಲೀಸರೆಂದು ಯಾಮಾರಿಸಿ ವಿದೇಶಿ ಪ್ರಜೆಯ ಹಣ ದೋಚಿದ ದುಷ್ಕರ್ಮಿಗಳು

  • ಬಿಜೆಪಿ ಅಭ್ಯರ್ಥಿಯಿಂದ ಮತದಾರರಿಗೆ ಹಣ ಹಂಚಿಕೆ ಆರೋಪ – 1.54 ಕೋಟಿ ರೂ. ಜಪ್ತಿ

    ಬಿಜೆಪಿ ಅಭ್ಯರ್ಥಿಯಿಂದ ಮತದಾರರಿಗೆ ಹಣ ಹಂಚಿಕೆ ಆರೋಪ – 1.54 ಕೋಟಿ ರೂ. ಜಪ್ತಿ

    ಬೆಳಗಾವಿ: ಮತದಾರರಿಗೆ ಹಂಚುವ ಸಲುವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 1.54 ಕೋಟಿ ರೂ. ಹಣವನ್ನು ಚುನಾವಣಾ ಅಧಿಕಾರಿಗಳು (Election Officers) ಜಪ್ತಿಪಡಿಸಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗ (Ramadurga) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ರಾಮದುರ್ಗ ಬಿಜೆಪಿ (BJP) ಅಭ್ಯರ್ಥಿ ಚಿಕ್ಕರೇವಣ್ಣ ಬುಧವಾರ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ (Nomination Papers) ಸಲ್ಲಿಸಿದ್ದಾರೆ. ಅವರ ಬೆಂಬಲಿಗರು ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂದು ಆರೋಪ ಹೊರಿಸಲಾಗಿತ್ತು. ರಾಮದುರ್ಗ ತುರನೂರು ಬಳಿ ಹಣ ಹಂಚಿಕೆ ಮಾಡುತ್ತಿದ್ದು, ಹಣ ಹಂಚುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ದಿಢೀರ್‌ ಬೆಳವಣಿಗೆ – ಕನಕಪುರದಿಂದ ಡಿಕೆ ಸುರೇಶ್‌ ನಾಮಪತ್ರ ಸಲ್ಲಿಕೆ 

    ಈ ಖಚಿತ ಮಾಹಿತಿಯ ಮೇರೆಗೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದು, ಸೂಕ್ತ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 1.54 ಕೋಟಿ ರೂ. ಹಣವನ್ನು ಜಪ್ತಿ ಮಾಡಿದ್ದಾರೆ. ಅಲ್ಲದೇ ಕಾರು ಚಾಲಕನನ್ನು ಬಂಧಿಸಿದ್ದಾರೆ. ಹಣವನ್ನು (Money) ವಶಕ್ಕೆ ಪಡೆದುಕೊಂಡ ಬಳಿಕ ಈ ಪ್ರಕರಣವನ್ನು ಆದಾಯ ತೆರಿಗೆ (Income Tax) ಇಲಾಖೆಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಲಿಂಗಾಯತರನ್ನು ಸಿಎಂ ಮಾಡುತ್ತೇವೆ ಎಂದು ಕಾಂಗ್ರೆಸ್ ಘೋಷಣೆ ಮಾಡಲಿ : ಸೋಮಣ್ಣ ಸವಾಲು