Tag: ಆದಾಯ ತೆರಿಗೆ

  • ಟೆನಿಸ್ ಆಟಗಾರ್ತಿ ಸಾನಿಯಾಗೆ ಸೇವಾ ತೆರಿಗೆ ಇಲಾಖೆಯಿಂದ ಶಾಕ್

    ಹೈದರಾಬಾದ್: ಟೆನಿಸ್ ತಾರೆ, ಮೂಗುತಿ ಸುಂದರಿ ಸಾನಿಯಾ ಮಿರ್ಜಾಗೆ ಸೇವಾ ತೆರಿಗೆ ಇಲಾಖೆ ಶಾಕ್ ನೀಡಿದೆ.

    20 ಲಕ್ಷ ರೂ. ಸರ್ವಿಸ್ ಟ್ಯಾಕ್ಸ್ ಪಾವತಿ ಮಾಡದ ಸಾನಿಯಾ ಮಿರ್ಜಾಗೆ ಹೈದರಾಬಾದ್‍ನ ಸೇವಾ ತೆರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಫೆ.6ರಂದು ಸಮನ್ಸ್ ಜಾರಿ ಮಾಡಿದ್ದಾರೆ. ಇದೇ 16ರೊಳಗೆ ಖುದ್ದು ಅಥವಾ ಅವರ ಪ್ರತಿನಿಧಿಯಾಗಲಿ ಹಾಜರಾಗಿ ದಂಡ ಪಾವತಿಸುವಂತೆ ಸೂಚನೆ ನೀಡಿದ್ದಾರೆ.

    ಸಾನಿಯಾ ಮಿರ್ಜಾ 2014ರಲ್ಲಿ ತೆಲಂಗಾಣ ರಾಯಭಾರಿಯಾಗಿ ನೇಮಕವಾಗಿದ್ದರು. ರಾಯಭಾರಿಯಾಗಿದ್ದಕ್ಕೆ ತೆಲಂಗಾಣ ಸರ್ಕಾರ 1 ಕೋಟಿ ರೂ. ಹಣವನ್ನು ಬಹುಮಾನವಾಗಿ ನೀಡಿತ್ತು. ಈ ಬಹುಮಾನಕ್ಕೆ ಸೇವಾ ತೆರಿಗೆಯನ್ನು ಸಾನಿಯಾ ಪಾವತಿ ಮಾಡಿರಲಿಲ್ಲ. ಪಾವತಿ ಮಾಡದ ಹಿನ್ನೆಲೆಯಲ್ಲಿ ಸೇವಾ ತೆರಿಗೆ ಮತ್ತು ದಂಡ ಸೇರಿ ಒಟ್ಟು 20 ಲಕ್ಷ ರೂ. ಹಣವನ್ನು ಪಾವತಿ ಮಾಡುವಂತೆ ಇಲಾಖೆ ಸೂಚಿಸಿದೆ.

    ಅಷ್ಟೇ ಅಲ್ಲದೇ ನಮ್ಮ ಅನುಮತಿ ಇಲ್ಲದೇ ದೇಶವನ್ನು ಬಿಟ್ಟು ಹೊರಗಡೆ ತೆರಳುವಂತಿಲ್ಲ ಎಂದು ಇಲಾಖೆ ಸಾನಿಯಾ ಮಿರ್ಜಾಗೆ ಸೂಚಿಸಿದೆ.

  • ಸಿಎಂ ಆಪ್ತ, ಎಂಟಿಬಿ ನಾಗರಾಜ್ ನಿವಾಸದ ಮೇಲೆ ಐಟಿ ದಾಳಿ

    ಬೆಂಗಳೂರು: ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ, ಸಿಎಂ ಸಿದ್ದರಾಮಯ್ಯ ಆಪ್ತ ಎಂಟಿಬಿ ನಾಗರಾಜ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿರುವ ಶಾಸಕ ನಾಗರಾಜ್ ಮನೆ ಮತ್ತು ಅವರ ಸಂಬಂಧಿಕರಿಗೆ ಸೇರಿದ 2 ನಿವಾಸಗಳ ಮೇಲೂ ಐಟಿ ದಾಳಿ ನಡೆದಿದೆ. ಎರಡು ಕಾರುಗಳಲ್ಲಿ ಬಂದಿರುವ ಐಟಿ ಅಧಿಕಾರಿಗಳು ಬೆಳಗ್ಗೆ 5 ಗಂಟೆಯಿಂದ ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

    ನೋಟು ನಿಷೇಧವಾದ ಬಳಿಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳ ಯೋಜನಾಧಿಕಾರಿ ಜಯಚಂದ್ರ, ಕಾವೇರಿ ನೀರಾವರಿ ನಿಗಮ ನಿರ್ದೇಶಕ ಚಿಕ್ಕರಾಯಪ್ಪ, ಸಿಎಂ ಪುತ್ರ ರಾಕೇಶ್ ಸ್ನೇಹಿತ ರೋಹಿತ್ ಗೌಡ, ಚಕ್ರವರ್ತಿ, ರಾಮಲಿಂಗಂ ಸೇರಿ ಮೂವರು ಬಿಲ್ಡರ್ಸ್, ನಟ ದೊಡ್ಡಣ್ಣ ಅಳಿಯ ವೀರೇಂದ್ರ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು.

    ಅಷ್ಟೇ ಅಲ್ಲದೇ ಬೆಳಗಾವಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ನಿವಾಸ ಮತ್ತು ಬೆಂಗಳೂರಿನ ವಾಸವಿ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಮೇಲೆ ಐಟಿ ದಾಳಿ ನಡೆದಿತ್ತು.

  • ದೇಶದಲ್ಲಿ ಎಷ್ಟು ಜನ ತೆರಿಗೆ ಕಟ್ಟುತ್ತಿದ್ದಾರೆ? ಎಷ್ಟು ಕಂಪೆನಿಗಳು ಆದಾಯ ತೋರಿಸಿವೆ?

    ನವದೆಹಲಿ: ದೇಶದಲ್ಲಿ ಸಂಘಟಿತ ವಲಯದಲ್ಲಿ 4.2 ಕೋಟಿ ಉದ್ಯೋಗಿಗಳಿದ್ದು, ಇವರಲ್ಲಿ 1.74 ಕೋಟಿ ಮಂದಿ ವೇತನ ಆಧಾರಿತ ತೆರಿಗೆ ಸಲ್ಲಿಕೆ ಮಾಡುತ್ತಿದ್ದಾರೆ. ವ್ಯಕ್ತಿಗತ/ಸಂಸ್ಥೆಯ ರೂಪದಲ್ಲಿ 5.6 ಕೋಟಿ ಸಣ್ಣ ಉದ್ದಿಮೆಗಳಿದ್ದು, ಇದರಲ್ಲಿ 1.81 ಕೋಟಿ ಮಂದಿ ತೆರಿಗೆ ಸಲ್ಲಿಕೆ ಮಾಡುತ್ತಿದ್ದಾರೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

    ಮಾರ್ಚ್ 2014ರವರೆಗೆ 13.94 ಲಕ್ಷ ಕಂಪೆನಿಗಳು ನೋಂದಣಿಯಾಗಿದ್ದು, ಇದರಲ್ಲಿ 5.97 ಲಕ್ಷ ಕಂಪೆನಿಗಳು ತೆರಿಗೆಯನ್ನು ಪಾವತಿ ಮಾಡಿವೆ. 2.76 ಲಕ್ಷ ಕಂಪೆನಿಗಳು ನಷ್ಟ ಅಥವಾ ಶೂನ್ಯ ಆದಾಯ ತೋರಿಸಿವೆ. 2.85 ಲಕ್ಷ ಕಂಪನಿಗಳು 1 ಕೋಟಿ ರೂ.ಗಿಂತಲೂ ಕಡಿಮೆ ಆದಾಯ ತೋರಿಸಿದರೆ, 28,667 ಕಂಪೆನಿಗಳು 1 ಕೋಟಿಯಿಂದ 10 ಕೋಟಿ ರೂ. ಲಾಭ ತೋರಿಸಿವೆ. 7,781 ಕಂಪೆನಿಗಳು 10 ಕೋಟಿ ರೂ.ಗೂ ಅಧಿಕ ಲಾಭವಿದೆ ಎಂದು ತೋರಿಸಿವೆ.

    3.7 ಕೋಟಿ ಜನ ತೆರಿಗೆ ಮಾಹಿತಿ ಸಲ್ಲಿಸಿದ್ದು, 99 ಲಕ್ಷ ಜನ 2.50 ಲಕ್ಷ ರೂ.ಗಿಂತ ಕಡಿಮೆ ಆದಾಯ ತೋರಿಸಿದ್ದಾರೆ. 1.95 ಕೋಟಿ ಮಂದಿ  2.50 ಲಕ್ಷ ರೂ. – 5 ಲಕ್ಷ ರೂ ಆದಾಯ ತೋರಿಸಿದರೆ, 52 ಲಕ್ಷ ಮಂದಿ 5 ಲಕ್ಷ – 10 ಲಕ್ಷ ರೂ. ಆದಾಯ ತೋರಿಸಿದ್ದಾರೆ. 24 ಲಕ್ಷ ಮಂದಿ ತಮ್ಮ ಬಳಿ 10 ಲಕ್ಷ ರೂ.ಗಿಂತ ಅಧಿಕ ಆದಾಯವಿದೆ ಎಂದು ಪ್ರಕಟಿಸಿದ್ದಾರೆ.

    76 ಲಕ್ಷ ಮಂದಿ 5 ಲಕ್ಷ ಆದಾಯ ತೋರಿಸಿದ್ದು, ಇವರಲ್ಲಿ 56 ಲಕ್ಷ ವೇತನದಾರರು ಇದ್ದಾರೆ. 1.72 ಲಕ್ಷ ಮಂದಿ 50 ಲಕ್ಷಕ್ಕಿಂತ ಹೆಚ್ಚು ಆದಾಯ ತೋರಿಸಿದ್ದಾರೆ.

    ನ.8ರಿಂದ ಡಿ.30ರವರೆಗೆ 1.09 ಕೋಟಿ ಖಾತೆಗಳಲ್ಲಿ 2 ಲಕ್ಷದಿಂದ 80 ಲಕ್ಷ ರೂ.ವರೆಗೆ ಜಮೆಯಾಗಿದೆ. ಈ ಖಾತೆಗಳಲ್ಲಿ ಸರಾಸರಿ ಜಮೆ 5.03 ಲಕ್ಷ ರೂಪಾಯಿ ಆಗಿದೆ. 1.48 ಲಕ್ಷ ಖಾತೆಗಳಲ್ಲಿ ತಲಾ 80 ಲಕ್ಷ ರೂ.ಗಿಂತ ಅಧಿಕ ಮೊತ್ತ ಜಮೆಯಾಗಿದ್ದು, ಈ ಖಾತೆಗಳಲ್ಲಿ ಸರಾಸರಿ ಜಮೆ 3.31 ಕೋಟಿ ರೂ. ಆಗಿದೆ. ಕಳೆದ 5 ವರ್ಷಗಳಲ್ಲಿ 1.25 ಕೋಟಿ ಕಾರು ಮಾರಾಟವಾಗಿದೆ ಎನ್ನುವ ಅಂಶ ಬಜೆಟ್‍ನಲ್ಲಿದೆ.

  • ಬಜೆಟ್ 2017: ಆದಾಯ ತೆರಿಗೆ ಮಿತಿ ಹೇಗೆ?

    ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಮಂಡಿಸಿದ ಕೇಂದ್ರ ಬಜೆಟ್‍ನಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳನ್ನ ಘೋಷಿಸಿದ್ದಾರೆ.

    ನೋಟ್ ನಿಷೇಧವಾದ ಬಳಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಕನಿಷ್ಠ 4 ಲಕ್ಷಕ್ಕೆ ಏರಿಸಬಹುದು ಎನ್ನುವ ನಿರೀಕ್ಷೆ ಇತ್ತು.

    ಆದಾಯ ತೆರಿಗೆಗೆ ಯಾರಿಗೆ ಎಷ್ಟು?
    – 3 ಲಕ್ಷದಿಂದ 5 ಲಕ್ಷದ ಆದಾಯಕ್ಕೆ ಶೇ. 5ರಷ್ಟು ತೆರಿಗೆ ಕಡಿತ(ಕಳೆದ ಬಾರಿ ಶೇ. 10 ರಷ್ಟಿತ್ತು )
    – 5 ಲಕ್ಷದಿಂದ 10 ಲಕ್ಷಕ್ಕೆ – ಶೇ.20ರಷ್ಟು ತೆರಿಗೆ
    – 10 ಲಕ್ಷ ಮೇಲ್ಪಟ್ಟ ಆದಾಯಕ್ಕೆ – ಶೇ.30ರಷ್ಟು ತೆರಿಗೆ

    50 ಲಕ್ಷದಿಂದ 1 ಕೋಟಿ ವರೆಗಿನ ಆದಾಯಕ್ಕೆ ಶೇ.10 ಸರ್‍ಚಾರ್ಜ್ ಹೇರಿದರೆ, 1 ಕೋಟಿಗಿಂತ ಹೆಚ್ಚಿನ ಆದಾಯ ಹೊಂದಿದವರಿಗೆ ಈಗಿರುವ ಶೇ. 15 ಸರ್ಚಾರ್ಜ್ ಮುಂದುವರಿಯಲಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

    ಆದಾಯಕ್ಕೆ ತಕ್ಕಂತೆ  ಎಷ್ಟು ತೆರಿಗೆ ಕಟ್ಟಬೇಕು ಎಂಬ ಮಾಹಿತಿ ಇಲ್ಲಿದೆ: