ಚೆನ್ನೈ/ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಐಎಡಿಎಂಕೆ ನಾಯಕರ ನಿವಾಸ, ಜಯಾ ಟಿವಿ ಕಚೇರಿ ಸೇರಿದಂತೆ ಸೇರಿದಂತೆ ಒಟ್ಟು 187 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಶಶಿಕಲಾ ಸಂಬಂಧಿ ನಟರಾಜನ್, ಶಶಿಕಲಾ ಸೋದರ ಸೊಸೆ ಕೃಷ್ಣಪ್ರಿಯ, ಜಯಾ ಟಿವಿ, ಶಶಿಕಲಾ ಒಡೆತನದ ಜಾನ್ ಥಿಯೇಟರ್ ಕಾರ್ಯಾಲಯ, ಜಯಲಲಿತಾ ಅವರ ಕೊಡನಾಡು ಎಸ್ಟೇಟ್, ಬೆಂಗಳೂರಿನ ಶಶಿಕಲಾ ಆಪ್ತ ಮುರುಗೇಶ್ ಪಾಳ್ಯದಲ್ಲಿರುವ ಅಣ್ಣಾ ಡಿಎಂಕೆಯ ನಾಯಕ ಪುಗಳೇಂದಿ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
12ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಬೆಳಗ್ಗೆ 6 ಗಂಟೆಗೆ ಜಯಾ ಟಿವಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ದೆಹಲಿ ಸೇರಿದಂತೆ ಒಟ್ಟು 187 ಕಡೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಹಲವಾರು ಶೆಲ್ ಕಂಪೆನಿಗಳು ಹುಟ್ಟು ಹಾಕಿದ ಆರೋಪ ಜಯಾ ಟಿವಿ ಸಮೂಹದ ಮೇಲಿದೆ. ಆದಾಯದ ಮೂಲ ತೋರಿಸಿದೇ ಶೆಲ್ ಕಂಪೆನಿಗಳು ಹುಟ್ಟು ಹಾಕಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ನೋಟ್ ಬ್ಯಾನ್ ಬಳಿಕ ಭಾರೀ ಪ್ರಮಾಣದಲ್ಲಿ ಹಣವನ್ನು ನಕಲಿ ಕಂಪೆನಿಗಳ ಹೆಸರಿನಲ್ಲಿ ಹೂಡಿರುವ ಆರೋಪ ಜಯಾ ಟಿವಿ ಸಮೂಹದ ಮೇಲಿದೆ. ಜಯಾ ಟಿವಿ ನೆಟ್‍ವರ್ಕ್ ನ್ಯೂಸ್ ಚಾನೆಲ್, ಎಂಟರ್ ಟೈನ್‍ಮೆಂಟ್ ವಾಹಿನಿ ಮತ್ತು ಮೂವಿ ವಾಹಿನಿಯನ್ನು ಹೊಂದಿದೆ.
ಪ್ರಸ್ತುತ ಈಗ ಜಯಾ ಟಿವಿ ನಿಯಂತ್ರಣವನ್ನು ಶಶಿಕಲಾ ಸೋದರ ಸಂಬಂಧಿ ಟಿಟಿವಿ ದಿನಕರನ್ ಅವರ ಸಹೋದರ ದಿವಕರನ್ ಹೊಂದಿದ್ದಾರೆ.
ಜಯಲಲಿತಾ ಮುಖ್ಯಮಂತ್ರಿ ಆಗಿದ್ದ ವೇಳೆ ಜಯಾಟಿವಿ ಸರ್ಕಾರದ ಮುಖವಾಣಿಯಾಗಿ ಕೆಲಸ ಮಾಡುತಿತ್ತು. ಮುಖ್ಯಮಂತ್ರಿ ಪಳನಿಸ್ವಾಮಿ ಶಶಿಕಲಾ ವಿರುದ್ಧ ಬಂಡಾಯ ಎದ್ದ ಬಳಿಕ ಜಯಾ ಟಿವಿಯಲ್ಲಿ ಸರ್ಕಾರ ವಿರೋಧಿ ಸುದ್ದಿಗಳು ಹೆಚ್ಚು ಪ್ರಸಾರವಾಗುತ್ತಿದೆ.
ಕೊಡನಾಡಿನಲ್ಲಿರುವ ಎಸ್ಟೇಟ್ 900 ಎಕರೆಯದ್ದಾಗಿದ್ದು ಇಲ್ಲಿನ ರಾಜವೈಭವದ ಅರಮನೆಯಂತಹ ಬೃಹತ್ ಬಂಗಲೆಯಲ್ಲಿ ಜಯಲಲಿತಾ ಆಗಾಗ ಬಂದು ವಿಶ್ರಾಂತಿ ಪಡೆದು ಹೋಗುತ್ತಿದ್ದರು. ನಿಧನಕ್ಕೆ ಮುನ್ನ ಕೆಲವು ವರ್ಷಗಳ ಹಿಂದಿನಿಂದಲೇ ಜಯಾ ಈ ಬಂಗಲೆಯಲ್ಲಿ ವಿಶ್ರಾಂತಿ ಹಾಗೂ ಚಿಕಿತ್ಸೆ ಪಡೆಯುತ್ತಿದ್ದರು.
ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಪ್ರಕರಣದಲ್ಲಿ ಶಶಿಕಲಾ ದೋಷಿಯಾಗಿದ್ದು, ಪ್ರಸ್ತುತ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
AIADMK Karnataka in-charge, Pugazhendi's house being raided by Income Tax department in Bengaluru's Domlur pic.twitter.com/0d67gjIEgK
– ದ್ವಾರಕನಾಥ ಗುರೂಜಿ ನಿವಾಸದಲ್ಲಿ ತನಿಖೆ ಅಂತ್ಯ
– ಡಿಕೆಶಿ ಮಾವನ ಮನೆಯಲ್ಲಿ 3ನೇ ದಿನವೂ ಪರಿಶೀಲನೆ
ಬೆಂಗಳೂರು/ಮೈಸೂರು: ಇಂಧನ ಸಚಿವ ಡಿ.ಕೆ ಶಿವಕುಮಾರ್‍ಗೆ ಈ ಬಾರಿ ವರಮಹಾಲಕ್ಷ್ಮೀ ಐಟಿ ಸಂಕಟ ತಂದೊಡ್ಡಿದ್ದಾಳೆ. ಸತತ ಮೂರನೇ ದಿನವೂ ಡಿಕೆಶಿ ಮನೆಯಲ್ಲಿ ಐಟಿ ಶೋಧ ನಡೆಯುತ್ತಿದೆ.
ಬೆಳ್ಳಂಬೆಳಗ್ಗೆ ಐದು ಅಧಿಕಾರಿಗಳ ತಂಡ ಡಿಕೆಶಿ ಮನೆಗೆ ಆಗಮಿಸಿದ್ದಾರೆ. ವಿವಿಧೆಡೆ ನಡೆಸಿದ್ದ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ಡಿಕೆಶಿ ವಿಚಾರಣೆ ನಡೆಸಲಿದ್ದಾರೆ. ಈಗಾಗಲೇ ವಿವಿಧ ಬ್ಯಾಂಕ್ ಖಾತೆಗಳ ಡಿಟೈಲ್ಸ್ ಹಾಗೂ ವಿದೇಶದ ಬ್ಯಾಂಕ್ ಅಕೌಂಟ್‍ಗೆ ಟ್ರಾನ್ಸ್‍ಫರ್ ಆಗಿರುವ ಮಾಹಿತಿಗಳನ್ನು ಐಟಿ ಅಧಿಕಾರಿಗಳು ಕಲೆ ಹಾಕಿದ್ದಾರೆ. ಈ ಎಲ್ಲಾ ದಾಖಲಾತಿಗಳನ್ನು ಡಿಕೆಶಿ ಮುಂದಿಟ್ಟು ವಿಚಾರಣೆ ನಡೆಸಲಿದ್ದಾರೆ.
ಡಿಕೆಶಿ ಮಾವ ತಿಮ್ಮಯ್ಯ ನಿವಾಸದಲ್ಲೂ ಕೂಡ ಸತತ 3ನೇ ದಿನವೂ ಐಟಿ ಶೋಧ ಮುಂದುವರೆದಿದೆ. ಬರೋಬ್ಬರಿ 40 ಗಂಟೆಗಳ ಬಳಿಕ ಗುರುವಾರ ರಾತ್ರಿ 10.30ಕ್ಕೆ ತಾತ್ಕಾಲಿಕವಾಗಿ ಆಪರೇಷನ್ ಸ್ಥಗಿತಗೊಳಿಸಲಾಗಿತ್ತು. ರಾತ್ರಿ ತಿಮ್ಮಯ್ಯ ನಿವಾಸದಲ್ಲಿ ಐಟಿ ಅಧಿಕಾರಿಯೊಬ್ಬರು ಹಾಗೂ ಇಬ್ಬರು ಪೇದೆಗಳು ವಾಸ್ತವ್ಯ ಹೂಡಿದ್ರು.
ತಿಮ್ಮಯ್ಯ ಅವರ ಮನೆ ಹೊರಗೆ ಎಂದಿನಂತೆ ಪೊಲೀಸ್ ಕಾವಲು ಹಾಕಲಾಗಿದೆ. ಗುರುವಾರ ತಿಮ್ಮಯ್ಯ ಕುಟುಂಬ ಮತ್ತು ಆಪ್ತ ಎಡ್ವಿನ್‍ರನ್ನು ವಿಚಾರಣೆಗೆ ಒಳಪಡಿಸಿದ್ದ ಐಟಿ ಅಧಿಕಾರಿಗಳು, 60 ಲಕ್ಷ ನಗದು ವಶಪಡಿಸಿಕೊಂಡಿದ್ದರು.
ಈ ನಡುವೆ ಡಿಕೆ ಶಿವಕುಮಾರ್ ಆಪ್ತರನ್ನ ಐಟಿ ಅಧಿಕಾರಿಗಳು ಟಾರ್ಗೆಟ್ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅವರ ಆಪ್ತ ವಿನಯ್ ಕಾರ್ತಿಕ್ ಹಾಗೂ ಚಾರ್ಟೆಡ್ ಅಕೌಂಟೆಂಟ್ ಚಂದ್ರಶೇಖರ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಅತ್ತ ಡಿಕೆ ಶಿವಕುಮಾರ್ ಆಪ್ತರಾದ ದ್ವಾರಕನಾಥ ಗುರೂಜಿ ಅವರ ಆರ್‍ಟಿ ನಗರದ ಮೇಲೆ ಮೇಲಿನ ದಾಳಿ ಮಧ್ಯರಾತ್ರಿ ಮುಕ್ತಾಯವಾಗಿದೆ. ದಾಖಲೆಗಳನ್ನ ಮಧ್ಯರಾತ್ರಿ ಅಧಿಕಾರಿಗಳು ಕೊಂಡೊಯ್ದಿದ್ದಾರೆ. ಇನ್ನು ಶರ್ಮಾ ಟ್ರಾವೆಲ್ಸ್ ಮಾಲೀಕ ಸುರೇಶ್ ಶರ್ಮಾ ಮನೆಯಲ್ಲೂ ತಪಾಸಣೆ ನಡೆಸಿದ್ದಾರೆ. ಸದಾಶಿವನಗರದಲ್ಲಿರುವ ಸುರೇಶ್ ಶರ್ಮಾ ನಿವಾಸದ ಮೇಲೆ ದಾಳಿ ನಡೆಸಿ ಹಲವು ದಾಖಲೆ ಪತ್ರಗಳನ್ನು ಸೀಜ್ ಮಾಡಿದ್ದಾರೆ.
ಇದೇ ವೇಳೆ, ಗ್ಲೋಬಲ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಕೇರ್ ಟೇಕರ್ ನಂದೀಶ್ ಮನೆ ಮೇಲೂ ದಾಳಿ ನಡೆದಿದ್ದು, ಸುಮಾರು 11 ಕೆಜಿ ಚಿನ್ನಾಭರಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಜೊತೆಗೆ ರಾಜರಾಜೇಶ್ವರಿನಗರದಲ್ಲಿರುವ ಡಿಕೆ ಶಿವಕುಮಾರ್ ಅವರ ಒಡೆತನದ ಇಂಟರ್‍ನ್ಯಾಷನಲ್ ಹಿಲ್ ವ್ಯೂವ್ ಶಾಲೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಡಿಕೆಶಿ ನಿವಾಸದ ಮೇಲೆ ನಡೆದ ಐಟಿ ದಾಳಿ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ನಡುಕ ಹುಟ್ಟಿಸಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಬಿಜೆಪಿ ಸಂಸದರ ಸಭೆ ಕರೆದಿದ್ದಾರೆ. ಬೆಳಗ್ಗೆ 8.30ಕ್ಕೆ ಉಪಹಾರ ಕೂಟ ನೆಪದಲ್ಲಿ ಸಭೆ ಕರೆದಿದ್ದು ರಾಜ್ಯದ ಬೆಳವಣಿಗೆ ಕುರಿತು ಸಂಸದರಿಂದ ಮಾಹಿತಿ ಪಡೆಯಲಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮ ಮತ್ತು ಪ್ರತ್ಯೇಕ ನಾಡ ಧ್ವಜ ವಿವಾದ, ಮಂಗಳೂರು ಕೋಮು ಗಲಭೆ ವಿಚಾರದಲ್ಲಿ ರಾಜ್ಯ ಬಿಜೆಪಿಗೆ ಆದ ಡ್ಯಾಮೇಜ್ ಸರಿಪಡಿಸಿಕೊಳ್ಳಲು ಸಂಸದರ ಸಮ್ಮುಖದಲ್ಲಿ ಮೋದಿ ಪ್ಲ್ಯಾನ್ ರೂಪಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.