ಆನೇಕಲ್: ಶನಿವಾರ ಬೆಳ್ಳಂಬೆಳಗ್ಗೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಸಂಘದ (Industrial Association) ಅಧ್ಯಕ್ಷರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ (IT Raid) ನಡೆದಿದೆ.
-ಹುಬ್ಬಳಿ- ಧಾರವಾಡದಲ್ಲಿ ಸಿಬಿಬಿ ಪೊಲೀಸರ ಮಿಂಚಿನ ಕಾರ್ಯಾಚರಣೆ -ಉದ್ಯಮಿ ರಮೇಶ್ ಬೊಣಗೇರಿ ಮನೆಯಲ್ಲಿ ಕೋಟಿ ಕೋಟಿ ಹಣ ಕಂಡು ಪೊಲೀಸರೇ ಶಾಕ್
ಹುಬ್ಬಳಿ: ರಾಜ್ಯದಲ್ಲಿ ಬಿಜೆಪಿ (BJP) ಶಾಸಕ ವಿರೂಪಾಕ್ಷಪ್ಪನ ಮಗನ ಮನೆಯಲ್ಲಿ 8 ಕೋಟಿಗೂ ಹೆಚ್ಚು ಹಣ ಸಿಕ್ಕ ಬೆನ್ನಲ್ಲೇ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ (Hubballi) ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿಯವರೆಗೆ ಹಣದ ಆದಾಯದ ಮೂಲ ಮಾತ್ರ ಬಯಲಿಗೆ ಬಂದಿಲ್ಲ. ಉದ್ಯಮಿ ರಮೇಶ್ ರಸಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟ ವ್ಯಾಪಾರಿಯಾಗಿದ್ದಾನೆ. ಜೊತೆಗೆ ರಾಜ್ಯ ಸರ್ಕಾರದ (Government Of Karnataka) ಕೃಷಿ ಇಲಾಖೆಗೂ ಸಹ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಸರಬರಾಜು ಮಾಡುತ್ತಿದ್ದಾನೆ. ಶನಿವಾರ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 3 ಕೋಟಿ ರೂ.ಗಳನ್ನ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಬ್ಲಿಂಕ್ ಸಿನಿಮಾದಲ್ಲಿ ಗಾಯಕಿ ಚೈತ್ರಾ ಆಚಾರ್: ದೇವಕಿ ಝಲಕ್ ರಿಲೀಸ್
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅಶೋಕ್ ನಗರ ಪೊಲೀಸರು, ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಆದಾಯ ತೆರಿಗೆ ಅಧಿಕಾರಿಗಳು ಸಿಸಿಬಿ ಪೊಲೀಸರ ಜೊತೆಗೆ ಸೇರಿ ಹಣ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ ಹಣದ ಮೂಲ ಅಪರಾಧದ ಹಿನ್ನೆಲೆ ಹೊಂದಿದ್ದರೆ, ಉದ್ಯಮಿ ರಮೇಶ್ ಬಂಧನವಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ (Lokayukta) ದಾಳಿಯ ಬೆನ್ನಲ್ಲೇ ಹುಬ್ಬಳಿ-ಧಾರವಾಡ ಸಿಸಿಬಿ ಪೊಲೀಸರು ಈ ಮಹತ್ವದ ಪ್ರಕರಣ ಬಯಲಿಗೆಳೆದಿದ್ದಾರೆ. ಅಧಿಕಾರಿಗಳಿಗೆ ಪೊಲೀಸ್ ಆಯುಕ್ತ ರಮಣಗುಪ್ತಾ ಅಭಿನಂದನೆ ಸಲ್ಲಿಸಿ, 25 ಸಾವಿರ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.
ನವದೆಹಲಿ: ಟೀಕೆ ವ್ಯಕ್ತವಾದರೂ ದೆಹಲಿ, ಮುಂಬೈನಲ್ಲಿರುವ ಬಿಬಿಸಿ (BBC) ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ (Income Tax Department) ಸತತ ಎರಡನೇ ದಿನವೂ ಸಮೀಕ್ಷೆ (Survey) ನಡೆಸಿದೆ.
ಮಂಗಳವಾರ ತಡರಾತ್ರಿಯವರೆಗೂ ಶೋಧ ಕಾರ್ಯ ನಡೆಸಿದ್ದ ಐಟಿ ಅಧಿಕಾರಿಗಳು ಮತ್ತೆ ಇಂದು ಬೆಳಗ್ಗೆಯೇ ದಾಖಲೆಗಳ ಪರಿಶೀಲನೆಗೆ ಇಳಿದಿದ್ದರು. ದೆಹಲಿ, ಮುಂಬೈನ ಬಿಬಿಸಿ ಕಚೇರಿಯಲ್ಲಿ ಐಟಿ ಅಧಿಕಾರಿಗಳು ಇದ್ದಾರೆ. ನಡೆಸುತ್ತಿರುವ ಪರಿಶೀಲನೆಗೆ ನಾವು ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದೇವೆ. ಶೀಘ್ರವೇ ಎಲ್ಲವೂ ಸಹಜ ಸ್ಥಿತಿಗೆ ಬರಲಿದೆ ಎಂದು ಬಿಬಿಸಿ ಹೇಳಿದೆ.
ಇದು ದಾಳಿಯಲ್ಲ ಸಮೀಕ್ಷೆ ಎಂದು ಐಟಿ ಇಲಾಖೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಇದು ಬಿಬಿಸಿಯ ವ್ಯಾಪಾರ ವಹಿವಾಟುಗಳಿಗೆ ಸಂಬಂಧಿಸಿದ್ದಾಗಿದೆ. ಸಂಸ್ಥೆಯ ಪ್ರಮೋಟರ್ಸ್, ನಿರ್ದೇಶಕರ ಮನೆ ಮೇಲೆ ದಾಳಿ ನಡೆಸಿಲ್ಲ. ಅಂತಾರಾಷ್ಟ್ರೀಯ ತೆರಿಗೆ, ಸಂಬಂಧಿ ಕಂಪನಿಗಳಿಗೆ ಹಣ ವರ್ಗಾವಣೆಗೆ ಸಂಬಧಿಸಿದಂತೆ ಈ ಸಮೀಕ್ಷೆ ಮಾಡುತ್ತಿದ್ದೇವೆ. ಈ ಹಿಂದೆ ಕಳಿಸಿದ ನೋಟಿಸ್‍ಗಳಿಗೆ ಬಿಬಿಸಿ ಸ್ಪಂದಿಸದ ಹಿನ್ನೆಲೆಯಲ್ಲಿ ಸರ್ವೇ ನಡೆಸಿದ್ದೇವೆ ಎಂದು ಐಟಿ ಇಲಾಖೆ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಎಚ್‌ಡಿಕೆ ಹೇಳಿಕೆ ಬೆನ್ನಲ್ಲೇ ಶೃಂಗೇರಿಗೆ ಭೇಟಿ ನೀಡಲಿದ್ದಾರೆ ನಡ್ಡಾ
ಐಟಿ ಇಲಾಖೆಯ ಈ ನಡೆಗೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಸಿಪಿಜೆ, ರಿಪೋರ್ಟಸ್ ವಿತೌಟ್ ಬಾರ್ಡರ್ಸ್, ಆಮ್ನೇಸ್ಟಿ ಇಂಟರ್‍ನ್ಯಾಷನಲ್ ಸಂಸ್ಥೆಗಳು ಖಂಡಿಸಿವೆ.
ಅಮೆರಿಕ ಪ್ರತಿಕ್ರಿಯಿಸಿ ಪತ್ರಿಕಾ ಸ್ವಾತಂತ್ರ್ಯದ ಪರ ಬ್ಯಾಟ್ ಮಾಡಿದೆ. ಆದರೆ ಬಿಬಿಸಿ ಮೇಲಿನ ಈ ದಾಳಿ ಪ್ರಜಾಪ್ರಭುತ್ವ ಸ್ಪೂರ್ತಿಗೆ ವಿರುದ್ಧವಾಗಿದೆಯೇ ಎಂಬ ಪ್ರಶ್ನೆಗೆ ವಿದೇಶಾಂಗ ಇಲಾಖೆ ಪ್ರತಿನಿಧಿ ನೆಡ್ ಪ್ರೈಸ್ ಅಳೆದುತೂಗಿ ಉತ್ತರ ನೀಡಿದ್ದಾರೆ. ಈ ಶೋಧದ ಹಿಂದಿನ ಸತ್ಯ ಏನೆಂಬುದು ನಮಗೆ ಗೊತ್ತಿದೆ. ಆದರೆ ಇದರ ಬಗ್ಗೆ ತೀರ್ಪು ನೀಡುವ ಸ್ಥಿತಿಯಲ್ಲಿ ನಾವಿಲ್ಲ ಎಂದು ಹೇಳಿದ್ದಾರೆ. ನೆಡ್ ಪ್ರೈಸ್ ಮಾತು ಚರ್ಚೆಗೆ ಗ್ರಾಸವಾಗಿದೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ದೆಹಲಿಯ ಛತ್ತರ್‌ಪುರದಲ್ಲಿರುವ ಫಾರ್ಮ್‌ಹೌಸ್‌ಗಾಗಿ ಹೀರೋ ಮೋಟೋಕಾರ್ಪ್ 1,000 ಕೋಟಿ ರೂ.ಗೂ ಹೆಚ್ಚು ಬೋಗಸ್ ಖರ್ಚು ಹಾಗೂ 100 ಕೋಟಿ ರೂ.ಗೂ ಹೆಚ್ಚು ನಗದು ವಹಿವಾಟು ನಡೆಸಿದೆ ಎಂದು ಆದಾಯ ತೆರಿಗೆ ಇಲಾಖೆಯ ತನಿಖೆ ವೇಳೆ ಪತ್ತೆ ಮಾಡಿದೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಪ್ತ ಉಮೇಶ್ ಸೇರಿದಂತೆ ನೀರಾವರಿ, ಪಿಡಬ್ಲ್ಯೂಡಿ ಇಲಾಖೆಯ ಕ್ಲಾಸ್ 1 ಕಂಟ್ರಾಕ್ಟರ್ ಗಳಾದ ಉಪ್ಪಾರ, ಅರವಿಂದ್, ಸೋಮಶೇಖರ್ ಮೇಲೆ ಈ ತಿಂಗಳ ಆರಂಭದಲ್ಲಿ ಐಟಿ ನಡೆಸಿದ್ದ ರೇಡ್‍ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಐಟಿ ರೇಡ್ ವೇಳೆ ಸಿಕ್ಕಿದ್ದ 750 ಕೋಟಿ ರೂಪಾಯಿ ಮೌಲ್ಯದ ಸಂಪತ್ತಿನಲ್ಲಿ 150 ಕೋಟಿಯಷ್ಟೇ ಸಕ್ರಮ. ಉಳಿದ 600 ಕೋಟಿ ಬೇನಾಮಿ ಅನ್ನೋದು ಖಚಿತವಾಗಿದೆ. ದಾಳಿ ವೇಳೆ ಪತ್ತೆಯಾಗಿದ್ದ 750 ಕೋಟಿ ಅಕ್ರಮ ಆಸ್ತಿ ಕುರಿತು ತನಿಖೆಯ ವೇಳೆ 30ಕ್ಕೂ ಹೆಚ್ಚು ಗುತ್ತಿಗೆದಾರರನ್ನು ಕರೆಸಿ ಐಟಿ ಇಲಾಖೆ ವಿಚಾರಣೆ ನಡೆಸಿದೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಓಲೈಕೆಗಾಗಿ ಕೈ, ದಳ ನಾಯಕರು RSS ಕುರಿತು ಟೀಕೆ ಮಾಡ್ತಿದ್ದಾರೆ: ಬಿ.ವೈ.ವಿಜಯೇಂದ್ರ
ವಿಚಾರಣೆ ವೇಳೆ 600 ಕೋಟಿಗೆ ಲೆಕ್ಕ ತೋರಿಸುವಲ್ಲಿ ಗುತ್ತಿಗೆದಾರರು ವಿಫಲರಾಗಿದ್ದಾರೆ. ಕೇವಲ 150 ಕೋಟಿಗೆ ದಾಖಲೆ ಒದಗಿಸುವಲ್ಲಿ ಗುತ್ತಿಗೆದಾರರು ಸಫಲರಾಗಿದ್ದಾರೆ. ಶೀಘ್ರವೇ ಆಸ್ತಿ ಅಸೆಸ್ಮೆಂಟ್ ಟೀಂಗೆ ತನಿಖಾ ತಂಡದ ವರದಿ ಸಲ್ಲಿಕೆ ಮಾಡಿದ್ದು, ಮತ್ತೊಮ್ಮೆ ಗುತ್ತಿಗೆದಾರರನ್ನು ವಿಚಾರಣೆಗೆ ಒಳಪಡಿಸಲಿದೆ. ಈ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಈ 600 ಕೋಟಿ ಅಕ್ರಮ ಸಂಪತ್ತು ಯಾರದು ಅಂತ ತನಿಖೆ ಚುರುಕುಗೊಳಿಸಲು ಮುಂದಾಗಿದೆ. ಈ ಮಧ್ಯೆ ಯಡಿಯೂರಪ್ಪ ಮಾತ್ರ ಉಮೇಶ್ ಮೇಲಿನ ಐಟಿ ರೇಡ್‍ಗೂ ನನಗೂ ಸಂಬಂಧ ಇಲ್ಲ ಅಂದಿದ್ದಾರೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ದ್ವಂದ್ವ ನೀತಿ: ಹೆಚ್‍ಡಿಕೆ ತರಾಟೆ
– ಜಲಸಂಪನ್ಮೂಲ, ಹೆದ್ದಾರಿ ಕಾಮಗಾರಿಯಲ್ಲಿ ಅಕ್ರಮ – ಕ್ಲಾಸ್ ಒನ್ ಗುತ್ತಿಗೆದಾರರಿಂದ ಬೋಗಸ್ ಬಿಲ್
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಆಪ್ತ ಗುತ್ತಿಗೆದಾರರ ಮೇಲೆ ನಡೆದಿದ್ದ ಆದಾಯ ತೆರಿಗೆ ದಾಳಿ ವೇಳೆ 750 ಕೋಟಿ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದೆ.
ಜಲಸಂಪನ್ಮೂಲ ಮತ್ತು ಹೆದ್ದಾರಿ ಕಾಮಗಾರಿಯಲ್ಲಿ ಅಕ್ರಮ ನಡೆದಿದ್ದು, ಬೋಗಸ್ ಖರೀದಿ ಮತ್ತು ಕಾರ್ಮಿಕರ ಹೆಸರಲ್ಲಿ ಅಕ್ರಮ ನಡೆದಿದೆ. ಮೂರು ಬೃಹತ್ ಗುತ್ತಿಗೆದಾರರ ಕಂಪನಿಗಳಲ್ಲಿ ಅಪಾರ ನಗ-ನಗದು ಸೇರಿ ಒಟ್ಟು 750 ಕೋಟಿ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಐಟಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
40 ಮಂದಿ ಹೆಸರಲ್ಲಿ ಬೋಗಸ್ ಉಪ ಗುತ್ತಿಗೆ ನೀಡಲಾಗಿದ್ದು, ಈ 40 ಮಂದಿಯೂ ಅಕ್ರಮ ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ಯಡಿಯೂರಪ್ಪ ಆಪ್ತರಿಗೆ ಸಂಕಷ್ಟ ಫಿಕ್ಸ್ ಎಂದು ಹೇಳಲಾಗುತ್ತಿದೆ.
ಶೀಘ್ರವೇ ಭ್ರಷ್ಟರ ವಿಚಾರಣೆಯನ್ನು ಐಟಿ ಇಲಾಖೆ ಶುರು ಮಾಡಿಕೊಳ್ಳಲಿದೆ. ಕಳೆದ ವಾರ ಕ್ಲಾಸ್ ಒನ್ ಕಂಟ್ರಾಕ್ಟರ್ ಡಿ ವೈ ಉಪ್ಪಾರ್ ಕಂಪನಿ, ಗುತ್ತಿಗೆದಾರ ಸೋಮಶೇಖರ್, ರಾಹುಲ್ ಎಂಟರ್‍ಪ್ರೈಸಸ್ ಮನೆಗಳ ಮೇಲೆ ಐಟಿ ದಾಳಿ ನಡೆಸಿತ್ತು. ಅಲ್ಲದೆ ಯಡಿಯೂರಪ್ಪ, ವಿಜಯೇಂದ್ರಗೆ ಆಪ್ತನಾಗಿದ್ದ ಬಿಎಂಟಿಸಿ ಡ್ರೈವರ್ ಉಮೇಶ್ ಮನೆ ಮೇಲೂ ದಾಳಿ ಆಗಿತ್ತು. ನಾಲ್ಕು ರಾಜ್ಯಗಳ ಒಟ್ಟು 47 ಕಡೆಗಳಲ್ಲಿ ಐಟಿ ಇಲಾಖೆ ದಾಳಿ ನಡೆಸಿತ್ತು.
3 ಕಂಪನಿಗಳಿಂದ 750 ಕೋಟಿ ಅಕ್ರಮ
ಜಲಸಂಪನ್ಮೂಲ, ಹೆದ್ದಾರಿ ಕಾಮಗಾರಿಯಲ್ಲಿ 3 ಬೃಹತ್ ಗುತ್ತಿಗೆದಾರರಿಂದ ಭಾರೀ ಅಕ್ರಮ ನಡೆದಿದೆ. 3 ಕಂಪನಿಗಳ ಪೈಕಿ 750 ಕೋಟಿ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ. ಈ ಪೈಕಿ ಒಂದೇ ಕಂಪನಿಯಿಂದ 487 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.
ಆರೋಪ ಏನು?
ಜಲಸಂಪನ್ಮೂಲ, ಹೆದ್ದಾರಿ ಕಾಮಗಾರಿ ಉಪ ಗುತ್ತಿಗೆಯಲ್ಲಿ ಅಕ್ರಮ ನಡೆದಿದೆ. ಕಾರ್ಮಿಕರ ಹೆಸರಲ್ಲಿ ಬೋಗಸ್ ವೆಚ್ಚ ತೋರಿಸಲಾಗಿದೆ. 40 ಮಂದಿ ಹೆಸರಲ್ಲಿ ಬೋಗಸ್ ಉಪ ಗುತ್ತಿಗೆ ನೀಡಲಾಗಿದೆ. ಕ್ಲಾಸ್ ಒನ್ ಗುತ್ತಿಗೆದಾರರಿಂದ 382 ಕೋಟಿ ಅಕ್ರಮ ನಡೆದಿದ್ದು ಕಾರ್ಮಿಕರ ಹೆಸರಲ್ಲಿ 382 ಕೋಟಿ ವಂಚಿಸಲಾಗಿದೆ. ಅಸ್ತಿತ್ವದಲ್ಲಿಲ್ಲದ ಕಂಪನಿ ಜೊತೆಗೆ 105 ಕೋಟಿ ವ್ಯವಹಾರ ನಡೆದಿದೆ. ಇದನ್ನೂ ಓದಿ: ಮನೆಯಲ್ಲಿ ಐದು ಸದಸ್ಯರಿದ್ದರೂ ಒಂದೇ ಮತ ಪಡೆದ ಬಿಜೆಪಿ ಅಭ್ಯರ್ಥಿ
ಐಟಿ ದಾಳಿ ವೇಳೆ ಸಿಕ್ಕಿದ್ದೇನು?
ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ 4.69 ಕೋಟಿ ರೂಪಾಯಿ ನಗದು, 8.67 ಕೋಟಿ ರೂಪಾಯಿ ಚಿನ್ನಾಭರಣ, ಚಿನ್ನದ ಗಟ್ಟಿ ವಶ ಪಡಿಸಲಾಗಿದೆ. 29.83 ಲಕ್ಷ ಮೊತ್ತದ ಬೆಳ್ಳಿ ವಸ್ತುಗಳು ಸಿಕ್ಕಿವೆ.
ಮುಂಬೈ: ಬಾಲಿವುಡ್ ನಟ ಸೋನು ಸೂದ್ ಅವರ ಮನೆ, ಕಚೇರಿ ಸೇರಿದಂತೆ ಅವರಿಗೆ ಸಂಬಂಧಿಸಿದ ಅನೇಕ ಕಡೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಇತ್ತೀಚೆಗಷ್ಟೇ ದಾಳಿ ನಡೆಸಿದ್ದರು. ಈ ಸಮೀಕ್ಷೆ ನಂತರ ಸೋನು ಸೂದ್ ಮೌನ ಮುರಿದಿದ್ದಾರೆ.
ಇತ್ತೀಚೆಗಷ್ಟೇ ಸೋನು ಸೂದ್‍ರವರ ಮುಂಬೈ, ಲಕ್ನೋ, ಕಾನ್ಪುರ, ಜೈಪುರ, ದೆಹಲಿ ಮತ್ತು ಗುರುಗ್ರಾಮದಲ್ಲಿರುವ ಆಸ್ತಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಸಮೀಕ್ಷೆ ನಡೆಸಿತ್ತು. ಈ ಕುರಿತಂತೆ ಸೋನು ಸೂದ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ನಿಮ್ಮ ಕಥೆಯನ್ನು ನೀವು ಯಾವಾಗಲೂ ಹೇಳಬೇಕಾಗಿಲ್ಲ. ಅದಕ್ಕೆ ಸಮಯ ಬರುತ್ತದೆ. ನಾನು ನನ್ನ ಸಂಪೂರ್ಣ ಶಕ್ತಿ ಹಾಗೂ ಹೃದಯದಿಂದ ಭಾರತದ ಜನರ ಸೇವೆ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದೇನೆ. ನನ್ನ ಫೌಂಡೇಶನ್‍ನಲ್ಲಿರು ಪ್ರತಿ ಒಂದು ರೂಪಾಯಿಯನ್ನು ಅಮೂಲ್ಯವಾದಂತಹ ಜೀವವನ್ನು ಉಳಿಸಲು ಮತ್ತು ಅಗತ್ಯವಿರುವವರಿಗೆ ತಲುಪಿಸಲು ಕಾಯುತ್ತಿದ್ದೇನೆ. ಇದನ್ನೂ ಓದಿ: ನೀವು ಇಲ್ಲದೇ ನನ್ನ ಬದುಕಿನಲ್ಲಿ ಖಾಲಿತನ ಉಂಟಾಗಿದೆ: ಸೋನು ಸೂದ್
ಅನೇಕ ವೇಳೆ ಮಾನವೀಯ ಕಾರ್ಯಗಳಿಗೆ ಹಣ ದಾನ ಮಾಡಲು ಬ್ರ್ಯಾಂಡ್‍ಗಳಿಗೆ ಜಾಹೀರಾತು ನೀಡುವ ಮೂಲಕ ಪ್ರೋತ್ಸಾಹಿಸಿದ್ದೇನೆ. ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ನೀವು ಒಳ್ಳೆಯದನ್ನು ಮಾಡಿದರೆ ಒಳ್ಳೆಯದೇ ಆಗುತ್ತದೆ. ಎಲ್ಲವೂ ಉತ್ತಮ ರೀತಿಯಲ್ಲಿಯೇ ಮುಕ್ತಾಯವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಸೋನು ಸೂದ್: ಆದಾಯ ತೆರಿಗೆ ಇಲಾಖೆ
ಬೆಂಗಳೂರು: ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಂಗಳೂರು ಇನ್ ಫ್ಯಾಂಟ್ರೀ ರಸ್ತೆಯಲ್ಲಿ ಆದಾಯ ತೆರಿಗೆ ಇಲಾಖೆಯ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಅದೇ ಸ್ಥಳದಲ್ಲಿ ಶಿಲಾನ್ಯಾಸದ ಫಲಕವನ್ನು ಸಚಿವರು ಅನಾವರಣ ಮಾಡಿದರು. ಬೆಂಗಳೂರು ಕೇಂದ್ರ ಲೋಕಸಭಾಕ್ಷೇತ್ರದ ಮಾನ್ಯ ಸಂಸತ್ ಸದಸ್ಯ ಪಿ.ಸಿ. ಮೋಹನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇಲ್ಲಿ ನಿರ್ಮಾಣವಾಗಲಿರುವ ಆದಾಯ ತೆರಿಗೆ ಇಲಾಖೆಯ ಕಚೇರಿ ಕಟ್ಟಡವು ನೆಲಮಹಡಿ ಮತ್ತು 18 ಮಹಡಿಗಳನ್ನು ಮತ್ತು ನೆಲಮಾಳಿಗೆಯಲ್ಲಿ ವಾಹನ ನಿಲುಗಡೆಯ ಸೌಲಭ್ಯ ಒಳಗೊಂಡಿರುತ್ತದೆ. ಕಟ್ಟಡವು ಗರಿಷ್ಠ ನೈಸರ್ಗಿಕ ಬೆಳಕನ್ನು ಬಳಸಿಕೊಳ್ಳುತ್ತದೆ ಮತ್ತು ಗೃಹ ಶ್ರೇಯಾಂಕ Iಗಿ ಅನುಗುಣವಾಗಿರುತ್ತದೆ. ಈ ಕಟ್ಟಡವು ವಿದ್ಯುತ್ ಉತ್ಪಾದನೆಗೆ ಸೌರ ಫಲಕಗಳನ್ನು ಒಳಗೊಂಡಿರುತ್ತದೆ ಮತ್ತು ಮಳೆ ನೀರು ಕೊಯ್ಲು ವ್ಯವಸ್ಥೆಯಿಂದ ವಿನ್ಯಾಸಿತವಾಗಿದೆ. ಇದನ್ನೂ ಓದಿ: ನಿಗದಿತ ಅವಧಿಯ ಒಳಗೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣವಾಗುತ್ತೆ: ಸಿ.ಸಿ.ಪಾಟೀಲ್
ಎರಡು ಕೊಳಾಯಿ ವ್ಯವಸ್ಥೆಯೊಂದಿಗೆ ಮರುಬಳಕೆಯ ನೀರನ್ನು ಕೈತೋಟಕ್ಕೆ ಬಳಸಲಾಗುತ್ತದೆ. ಮ್ಯಾಗ್ನೆಟಿಕ್ ಫಿಲ್ಟರ್ ಸಹಿತವಾದ ಕೇಂದ್ರೀಕೃತ ವಾಯು ಸ್ವಚ್ಛತೆ ವ್ಯವಸ್ಥೆ, ಮತ್ತು ಯುವಿ- ಕಿರಣ ಕ್ರಿಮಿನಾಶಕವನ್ನು ಒಳಗೊಂಡಿದೆ. ಕಟ್ಟಡವನ್ನು ಸಿಪಿಡಬ್ಲ್ಯುಡಿಯ ಬೆಂಗಳೂರು ಯೋಜನಾ ವೃತ್ತ ನಿರ್ಮಿಸುತ್ತದೆ. ಈ ಸುಸಜ್ಜಿತ ಕಟ್ಟಡದಲ್ಲಿ ಸಾರ್ವಜನಿಕರ ಕುಂದುಕೊರತೆಯನ್ನು ಆದ್ಯತೆಯ ಮೇಲೆ ನಿವಾರಿಸಲು ಪ್ರತ್ಯೇಕವಾದ ಸಾರ್ವಜನಿಕ ಸಂಪರ್ಕ ಕಚೇರಿ ಮತ್ತು ತೆರಿಗೆ ಪಾವತಿದಾರರಿಗೆ ಸರದಿಗಾಗಿ ಕಾದು ಕುಳಿತುಕೊಳ್ಳುವ ಆವರಣವೂ ಇರುತ್ತದೆ. ಇದನ್ನೂ ಓದಿ:ಸಮಾಜ ಸಂಘಟನೆ ಗಣೇಶ ಹಬ್ಬದ ಪ್ರತೀಕ, ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಿ: ಮಾಳವಿಕಾ ಅವಿನಾಶ್
ಇದು ಯಾವುದೇ ತೊಡಕು ರಹಿತ ತೆರಿಗೆದಾರರ ಸೇವೆಗಳನ್ನು ಒದಗಿಸಲು ಆದಾಯಕರ ಸೇವಾ ಕೇಂದ್ರವನ್ನು ಹೊಂದಿರುತ್ತದೆ. ಕೇಂದ್ರ ಸ್ಥಾನದಲ್ಲಿರುವ ಈ ಕಚೇರಿ ಕಟ್ಟಡವು ತೆರಿಗೆದಾರ ಸ್ನೇಹಿಯಾಗಿದೆ. ಕಟ್ಟಡದ ವಿನ್ಯಾಸ ಮತ್ತು ಜಾಗದ ಹಂಚಿಕೆಯು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅನುಕೂಲಕರವಾದ ಕಾರ್ಯ ವಾತಾವರಣವನ್ನು ಒದಗಿಸುತ್ತದೆ.
ನವದೆಹಲಿ: ಸೆಕ್ಷನ್ 139ಎಎ ಪ್ರಕಾರ ಪ್ರತಿಯೊಬ್ಬ ನಾಗರಿಕನು ತನ್ನ ಪ್ಯಾನ್ ಕಾರ್ಡಿಗೆ ಆಧಾರ್ ಲಿಂಕ್ ಮಾಡಬೇಕೆಂದು ಆದಾಯ ತೆರಿಗೆ ಇಲಾಖೆ ಈ ಹಿಂದೆಯೇ ಆದೇಶ ಹೊರಡಿಸಿತ್ತು. ಇದೀಗ ಮಾರ್ಚ್ 31ರ ಒಳಗಾಗಿ ಆಧಾರ್ ಲಿಂಕ್ ಮಾಡಿಸದೆ ಇದ್ದಲ್ಲಿ 1,000 ರೂಪಾಯಿ ದಂಡ ವಿಧಿಸುದಾಗಿ ತಿಳಿಸಿದೆ.
ಆದಾಯ ತೆರಿಗೆ ಇಲಾಖೆ ತಿಳಿಸಿರುವ ಪ್ರಕಾರ ಈಗಾಗಲೇ ಕೊಟ್ಟಿರುವ ಕಾಲಾವಕಾಶದ ಒಳಗಾಗಿ ಯಾರೂ ತಮ್ಮ ಪ್ಯಾನ್‍ಕಾರ್ಡಿಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡದೆ ಇರುತ್ತಾರೋ ಅಂತವರಿಗೆ 1 ಸಾವಿರ ರೂಪಾಯಿ ದಂಡ ಹಾಕಿ ಅವರ ಪ್ಯಾನ್ ಕಾರ್ಡನ್ನು ಅಮಾನ್ಯಗೊಳಿಸಲಾಗುವುದು ಎಂದು ತಿಳಿಸಿದೆ.
2021ನೇ ಹಣಕಾಸು ಮಸೂದೆಯಲ್ಲಿ ಹೊಸ ಸೆಕ್ಷನ್ 234 ಅನ್ನು ಆದಾಯ ತೆರಿಗೆ ಕಾಯ್ದೆಯಾಗಿ ರೂಪುಗೊಳಿಸಲಾಗಿದ್ದು, ಇದರ ಪ್ರಕಾರ ಮಾರ್ಚ್ 31ರ ಒಳಗಾಗಿ ಪ್ಯಾನ್ ಕಾರ್ಡ್‍ಗೆ ಆಧಾರ್ ಲಿಂಕ್ ಮಾಡದೆ ಇದ್ದರೆ ಅಂತವರಿಗೆ ದಂಡ ವಿಧಿಸಲಾಗುವುದು ಮತ್ತು ಪ್ಯಾನ್ ಕಾರ್ಡ್ ಅಮಾನ್ಯಗೊಳಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ.
ತುಮಕೂರು: ಇಂದು ಬೆಳ್ಳಂಬೆಳಗ್ಗೆ ಬಿಜೆಪಿ ಮುಖಂಡನ ಮೆಡಿಕಲ್ ಕಾಲೇಜಿನ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶಿರಾಗೇಟ್ ಬಳಿ ಇರುವ ಬಿಜೆಪಿ ಮುಖಂಡ ಡಾ.ಹುಲಿನಾಯಕ್ ಒಡೆತನದ ಶ್ರೀ ದೇವಿ ಮೆಡಿಕಲ್ ಕಾಲೇಜಿನ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ.
ಸುಮಾರು 30 ಜನ ಅಧಿಕಾರಿಗಳ ತಂಡ ಹುಲಿನಾಯ್ಕರ್ ಒಡೆತನದ ಮೆಡಿಕಲ್ ಕಾಲೇಜ್, ಎಂಜಿನಿಯರಿಂಗ್ ಕಾಲೇಜು ಹಾಗೂ ಎಸ್ ಎಸ್ ಪುರಂ ನಲ್ಲಿರುವ ಮನೆ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ.