Tag: ಆದಾಯ ತೆರಿಗೆ ಇಲಾಖೆ

  • ಡಿಜಿಟಲ್ ಪೇಮೆಂಟ್ ಕೋಲಾಹಲ – ಲಕ್ಷ, ಲಕ್ಷ ಟ್ಯಾಕ್ಸ್ ನೋಟಿಸ್‌ ಕಂಡು ಹೌಹಾರಿದ ಜನ; ಕ್ಯಾಶ್‌ ವಹಿವಾಟಿಗೆ ದುಂಬಾಲು

    ಡಿಜಿಟಲ್ ಪೇಮೆಂಟ್ ಕೋಲಾಹಲ – ಲಕ್ಷ, ಲಕ್ಷ ಟ್ಯಾಕ್ಸ್ ನೋಟಿಸ್‌ ಕಂಡು ಹೌಹಾರಿದ ಜನ; ಕ್ಯಾಶ್‌ ವಹಿವಾಟಿಗೆ ದುಂಬಾಲು

    ಬೆಂಗಳೂರು: ವಿಶ್ವದಲ್ಲೇ ಅತಿದೊಡ್ಡ ಆನ್‌ಲೈನ್ ಪೇಮೆಂಟ್ (Online Payment) ಕೀರ್ತಿ ಭಾರತದ್ದು. ಪ್ರಧಾನಿ ಮೋದಿ ಕನಸಿನ ಯೋಜನೆ ಡಿಜಿಟಲ್ ಇಂಡಿಯಾದ ಯುಪಿಐ (UPI) ಪೇಮೆಂಟ್‌ಗೆ ವಿಘ್ನ ಎದುರಾಗಿದೆ. ಬೇಕರಿ, ಟೀ-ಕ್ಯಾಂಡಿಮೆಂಟ್ಸ್, ತರಕಾರಿ, ಬೀಡ, ಹೂವಿನ ಅಂಗಡಿ, ಹಾಲು ಮಾರೋವ್ರು, ಡಾಬಾದವರು. ಹೀಗೆ.. ಎಲ್ಲರಿಗೂ ಯುಪಿಐ ವಹಿವಾಟು ಆಧರಿಸಿ ಲಕ್ಷಲಕ್ಷ ಟ್ಯಾಕ್ಸ್ (Tax) ಕಟ್ಟುವಂತೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ.

    ಈ ನೋಟಿಸ್, ಟ್ಯಾಕ್ಸ್ ಟಾರ್ಚರ್‌ಗೆ ಹೈರಾಣಾಗಿರೋ ವರ್ತಕರು, ನಮಗೆ ಯುಪಿಐ.. ಆನ್‌ಲೈನ್ ಪೇಮೆಂಟ್ ಸಹವಾಸವೇ ಬೇಡ… ಕೇವಲ ಕ್ಯಾಶ್ ಇದ್ದರೆ ಕೊಡಿ ಅಂತ ಗ್ರಾಹಕರಿಗೆ ಮನವಿ ಮಾಡ್ತಿದ್ದಾರೆ. ತಮ್ಮ ಅಂಗಡಿಗಳಿಗೆ ಅಂಟಿಸಿರೋ ಯುಪಿಐ ಕ್ಯೂಆರ್ ಕೋಡ್ ಸ್ಟಿಕ್ಕರ್‌ಗಳನ್ನು ತೆಗೆಯುತ್ತಿದ್ದಾರೆ. ಕಮ್ಮನಹಳ್ಳಿ, ಮಾರತಹಳ್ಳಿ ಭಾಗದ ಬೇಕರಿಗಳಲ್ಲಿ `ಕ್ಯಾಶ್ ಓನ್ಲಿ’ ಅಂತ ಬೋರ್ಡನ್ನೇ ಹಾಕಿಬಿಟ್ಟಿದ್ದಾರೆ. ಹೀಗಾಗಿ ಜಿಎಸ್‌ಟಿ ಟ್ಯಾಕ್ಸ್‌ ಅನ್ನು ಕಂಪ್ಲೀಟ್ ಮನ್ನಾ ಮಾಡಿ ಅಂತ ಅಂಗಡಿ ಮಾಲೀಕರು ಮನವಿ ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ, ಜಿಎಸ್‌ಟಿ ಕೌನ್ಸಿಲ್, ಕೇಂದ್ರ ಸರ್ಕಾರ, ಸಿಎಂಗೂ ಕೂಡ ಪತ್ರ ಬರೆದಿದ್ದಾರೆ.

    ಇದೆಲ್ಲದರ ಮಧ್ಯೆ, ಜುಲೈ- 23ರಿಂದ 2 ದಿನಗಳ ಕಾಲ ಹಾಲು, ಸಿಗರೇಟು ಮಾರಾಟ, ಕಾಂಡಿಮೆಂಟ್ಸ್, ಬೇಕರಿ ಬಂದ್ ಮಾಡಲಿದ್ದಾರೆ. ಜುಲೈ 25 ರಂದು ರಾಜ್ಯಾದ್ಯಂತ ಅಂಗಡಿ ಬಂದ್ ಮಾಡಿ ಕುಟುಂಬ ಸಮೇತ ಪ್ರತಿಭಟನೆಗೆ ನಿರ್ಧರಿಸಿರೋ ಕಾರ್ಮಿಕ ಪರಿಷತ್ ನಂತರ ಕೋರ್ಟ್ ಮೊರೆ ಹೋಗಲೂ ಸಜ್ಜಾಗ್ತಿದೆ.

    ಯುಪಿಐ ಪೇಮೆಂಟ್ ಗೊಂದಲ ಏನು..?
    * ವಾರ್ಷಿಕವಾಗಿ 20 ಲಕ್ಷದಿಂದ 40 ಲಕ್ಷ ರೂ. ವಹಿವಾಟು ಮಾಡಿದವರಿಗೆ ನೊಟೀಸ್
    * ಬಡ್ಡಿ ಸಮೇತ 1 ಕೋಟಿಯಿಂದ ಹಿಡಿದು, 60, 30, 20 ಲಕ್ಷ ರೂ. ವರೆಗೆ ಜಿಎಸ್‌ಟಿ ಕಟ್ಟೋಕೆ ನೋಟಿಸ್
    * ಜಿಎಸ್‌ಟಿ ಕಟ್ಟದೇ ಹೋದರೆ ಅಕೌಂಟ್ ಫ್ರೀಜ್ ಮಾಡುವ ಎಚ್ಚರಿಕೆ
    * ತೆರಿಗೆ ವಿನಾಯಿತಿ ಪಡೆದ ತರಕಾರಿ, ಹಣ್ಣಿನ ಅಂಗಡಿಗೂ ಟ್ಯಾಕ್ಸ್ ನೋಟಿಸ್

    ಯಾರಿಗೆ ಟ್ಯಾಕ್ಸ್.. ಯಾರಿಗಿಲ್ಲ..?
    * ಸರಕು ಪೂರೈಕೆದಾರರ ಸಮಗ್ರ ವಹಿವಾಟು ವಾರ್ಷಿಕ 40 ಲಕ್ಷ ರೂ. ಮೀರಿದ್ರೆ ಜಿಎಸ್‌ಟಿ ನೋಂದಣಿ ಕಡ್ಡಾಯ
    * ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು ವಾರ್ಷಿಕ 20 ಲಕ್ಷ ರೂ. ಮೀರಿದ್ರೆ ಜಿಎಸ್‌ಟಿ ನೋಂದಣಿ ಕಡ್ಡಾಯ
    * ತರಕಾರಿ, ಹಣ್ಣು ಯಾವುದೇ ತೆರಿಗೆ ವ್ಯಾಪ್ತಿಗೆ ಬರಲ್ಲ
    * ಹಾಲು, ಮೊಸರು, ಬ್ರೆಡ್‌ಗೆ ಟ್ಯಾಕ್ಸ್ ಇರಲ್ಲ
    * ಕುರುಕಲು ತಿಂಡಿಗೆ 5% ರಷ್ಟು ಟ್ಯಾಕ್ಸ್

    ಅಧಿಕಾರಿಗಳ ಎಡವಟ್ಟೇನು?
    – ವಿನಾಯಿತಿ ಇದ್ದರೂ ಹಾಲು, ತರಕಾರಿ ಅಂಗಡಿಗೂ ಟ್ಯಾಕ್ಸ್ ನೋಟಿಸ್
    – ವಿನಾಯಿತಿ ಸರಕುಗಳ ಬಿಲ್ ನೀಡಿದ್ರೆ ವಿನಾಯಿತಿ ನೀಡುವ ಸಬೂಬು
    – ಜಾಗೃತಿ ಮೂಡಿಸಿ ಜಿಎಸ್‌ಟಿ ನೋಂದಣಿ ಮಾಡಿಸದೇ ಲಕ್ಷ ಲಕ್ಷ ಟ್ಯಾಕ್ಸ್ ಕಟ್ಟುವಂತೆ ನೊಟೀಸ್
    – ಅಧಿಕಾರಿಗಳ ನೋಟಿಸ್ ಎಡವಟ್ಟಿಗೆ ಹೆದರಿದ ಸಣ್ಣ ವ್ಯಾಪಾರಿಗಳು
    – ಯುಪಿಐ ಪೇಮೆಂಟ್‌ಗೆ ನಿರಾಕರಿಸಿ, ಕ್ಯಾಶ್ ಮೊರೆ ಹೋಗಲು ಇವರೇ ಕಾರಣ

    ವರ್ತಕರ ಎಡವಟ್ಟೇನು..?
    * ವರ್ತಕರಲ್ಲಿ ಜಿಎಸ್‌ಟಿ ಅರಿವಿನ ಕೊರತೆ ಇರೋದು ನಿಜ
    * ಆದರೆ, ಜಿಎಸ್‌ಟಿ ವಿಚಾರದಲ್ಲಿ ಕೊಂಚ ಎಚ್ಚರಿಕೆ ವಹಿಸಬೇಕಿತ್ತು
    * ಡಿಜಿಟಲ್ ಪೇಮೆಂಟ್‌ನ ಪ್ರತಿ ಮಾಹಿತಿ ಅಧಿಕಾರಿಗಳಿಗೆ ಗೊತ್ತಾಗುತ್ತೆ ಅನ್ನೋದು ಗೊತ್ತು
    * ವಾರ್ಷಿಕ ವಹಿವಾಟು ನಿಯಮಾವಳಿಗಿಂತ ಹೆಚ್ಚಿದ್ದರೂ ಜಿಎಸ್‌ಟಿ ನೋಂದಣಿ ಮಾಡಿಸಿಲ್ಲ
    * ರಿಯಾಯಿತಿ ಪಡೆಯಲು ನಮ್ಮ ಬಳಿ ಬಿಲ್‌ಗಳಿಲ್ಲ ಎನ್ನುತ್ತಿರುವ ವರ್ತಕರು

    ʻಪಬ್ಲಿಕ್‌ ಟಿವಿʼ ರಿಯಾಲಿಟಿ ಚೆಕ್‌
    ಯುಪಿಐ ಪೇಮೆಂಟ್ ಗೊಂದಲದ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದ ಬಳಿಕ ವಾಣಿಜ್ಯ ತೆರಿಗೆ ಇಲಾಖೆ ಎಚ್ಚೆತ್ತುಕೊಂಡಿದೆ. ಯುಪಿಐ ನಿಲ್ಲಿಸಿ ಕ್ಯಾಶ್ ರೂಪದಲ್ಲಿ ಹಣ ಸ್ವೀಕರಿಸೋದು ಗಮನಕ್ಕೆ ಬಂದಿದೆ. ವ್ಯಾಪಾರಿಗಳು ಯಾವ ರೀತಿ ವಹಿವಾಟು ನಡೆಸಿದ್ರೂ ಜಿಎಸ್‌ಟಿ ಕಾಯ್ದೆಯಡಿ ತೆರಿಗೆ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು ಅಂತ ಎಚ್ಚರಿಕೆ ರವಾನಿಸಿದೆ. ಅಲ್ಲದೆ, ನೋಟಿಸ್ ಕೊಟ್ಟಿರೋ ವಿಚಾರಕ್ಕೆ ಮತ್ತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ನೋಟಿಸ್ ಬಂದಿರುವ ವರ್ತಕರು ಆದಾಯ ತೆರಿಗೆ ಇಲಾಖೆ ಕಚೇರಿಗೆ ತೆರಳಿ ಸೂಕ್ತ ದಾಖಲಾತಿ ನೀಡಿ ವಿವರಣೆ ನೀಡಬೇಕೆಂದು ತಿಳಿಸಿದೆ.

    ವಾಣಿಜ್ಯ ತೆರಿಗೆ ಇಲಾಖೆ ಹೇಳಿದ್ದೇನು..?
    * ವರ್ತಕರು ಕಚೇರಿಗೆ ತೆರಳಿ ಸೂಕ್ತ ದಾಖಲಾತಿ ಜೊತೆ ವಿವರಣೆ ನೀಡಬೇಕು
    * ತೆರಿಗೆ ಇರುವ ಸರಕಿಗೆ ಮಾತ್ರ ತೆರಿಗೆ ವಿಧಿಸಲಾಗುತ್ತೆ
    * ತೆರಿಗೆ ವಿನಾಯಿತಿ ಇರುವ ಸರಕು ಸೇವೆಗಳನ್ನು ಕೈಬಿಡಲಾಗುತ್ತದೆ
    * ರಾಜಿ ತೆರಿಗೆ ಪದ್ಧತಿ ಅನ್ನುವ ಉತ್ತಮ ಆಯ್ಕೆ ಇದೆ.
    * ವಾರ್ಷಿಕ ವಹಿವಾಟು 1.50 ಕೋಟಿ ರೂ.ಗಿಂತ ಕಡಿಮೆ ಇರುವ ವ್ಯಾಪಾರಿಗಳು ಜಿಎಸ್‌ಟಿ ಅಡಿ ನೋಂದಣಿ ಪಡೆದು ರಾಜಿ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳಬಹುದು.
    * ಈ ಪದ್ಧತಿಯಡಿ ಶೇ.0.5ರಷ್ಟು ಎಸ್‌ಜಿಎಸ್‌ಟಿ (ಸ್ಟೇಟ್) ಮತ್ತು ಶೇ.0.5ರಷ್ಟು ಸಿಜಿಎಸ್‌ಟಿ (ಸೆಂಟ್ರಲ್) ಪಾವತಿಸಬೇಕು. ಒಟ್ಟು 1% ನಷ್ಟು ತೆರಿಗೆ ಇದೆ.
    * ರಾಜ್ಯದಲ್ಲಿ ಈಗಾಗಲೇ 98,915 ವರ್ತಕರು ರಾಜಿ ತೆರಿಗೆ ಪದ್ಧತಿಯಡಿ ನೋಂದಣಿ
    * ವಾರ್ಷಿಕ ವಹಿವಾಟು ಮಿತಿ ಮೀರಿದ್ದರೂ ನೋಂದಣಿ ಮಾಡಿಸಿಕೊಳ್ಳದ ವರ್ತಕರಿಗೆ ಮಾತ್ರ ಈಗ ನೋಟಿಸ್

  • L2: ಎಂಪುರಾನ್‌ ನಿರ್ದೇಶಕ ಪೃಥ್ವಿರಾಜ್‌ಗೆ ಐಟಿ ನೋಟಿಸ್‌ – ಸಂಭಾವನೆ ವಿವರ ನೀಡುವಂತೆ ಸೂಚನೆ

    L2: ಎಂಪುರಾನ್‌ ನಿರ್ದೇಶಕ ಪೃಥ್ವಿರಾಜ್‌ಗೆ ಐಟಿ ನೋಟಿಸ್‌ – ಸಂಭಾವನೆ ವಿವರ ನೀಡುವಂತೆ ಸೂಚನೆ

    – 2022ರ ದಾಳಿಗೆ ಸಂಬಂಧಿಸಿದಂತೆ ನೋಟಿಸ್

    ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅಭಿನಯದ ಬ್ಲಾಕ್‌ ಬಸ್ಟರ್‌ ಸಿನಿಮಾ ಎಲ್‌2: ಎಂಪುರಾನ್‌ (L2: Empuraan) ವಿವಾದದ ಸುಳಿಯಲ್ಲಿ ಸಿಲುಕಿದ ಬೆನ್ನಲ್ಲೇ ಇದೀಗ ನಿರ್ದೇಶಕ ಪೃಥ್ವಿರಾಜ್‌ ಸುಕುಮಾರನ್‌ (Prithviraj Sukumaran) ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ನೀಡಿದೆ ಎಂದು ವರದಿಯಾಗಿದೆ.

    ಒಂದು ದಿನದ ಹಿಂದಷ್ಟೇ ಚಿತ್ರದ ನಿರ್ಮಾಪಕ ಗೋಕುಲಂ ಗೋಪಾಲನ್ ಅವರ ಚೆನ್ನೈ ಮತ್ತು ಕೊಚ್ಚಿಯಲ್ಲಿರುವ ಶ್ರೀ ಗೋಕುಲಂ ಚಿಟ್ಸ್ ಮತ್ತು ಫೈನಾನ್ಸ್‌ ಸಂಸ್ಥೆಯ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದರು. ವಿದೇಶಿ ವಿನಿಮಯದಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂಬ ಅನುಮಾನದಡಿ ಗೋಪಾಲನ್ ಅವರ ವಿಚಾರಣೆಯನ್ನು ಮಾಡಿದ್ದರು. ಈ ಬೆನ್ನಲ್ಲೇ ನಿರ್ದೇಶಕ ಪೃಥ್ವಿರಾಜ್ ಅವರಿಗೆ ಐಟಿ ಇಲಾಖೆ ನೋಟಿಸ್ ನೀಡಿದೆ.

    ಮಾರ್ಚ್ ಕೊನೆಯ ವಾರದಲ್ಲಿ ಅಂದ್ರೆ ಚಿತ್ರ ಬಿಡುಗಡೆಯಾದ 2-3 ದಿನದಲ್ಲಿಯೇ ಪೃಥ್ವಿರಾಜ್‌ಗೆ ಐಟಿ ಇಲಾಖೆ ನೋಟಿಸ್ ನೀಡಿದ್ದು ಈ ಹಿಂದೆ ಪೃಥ್ವಿರಾಜ್ ನಿರ್ಮಾಣದ ಚಿತ್ರಗಳ ಆದಾಯದ ಕುರಿತು ಲೆಕ್ಕವನ್ನು ನೀಡುವಂತೆ ಕೇಳಿದೆ. ಏಪ್ರಿಲ್‌ ಅಂತ್ಯದೊಳಗೆ ಕಳೆದ ಮೂರು ಸಿನಿಮಾಗಳ ಸಂಭಾವನೆಯ ಲೆಕ್ಕ ನೀಡುವಂತೆ ಗಡುವು ನೀಡಿದೆ ಎಂದು ವರದಿಗಳು ತಿಳಿಸಿವೆ.

    2022ರ ದಾಳಿಗೆ ಸಂಬಂಧಿಸಿದಂತೆ ನೋಟಿಸ್‌
    ಡಿಸೆಂಬರ್ 2022ರಲ್ಲಿ ಮಲಯಾಳಂ ಚಿತ್ರರಂಗದ ಅನೇಕ ನಿರ್ಮಾಪಕರ ಮನೆ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ತೆರಿಗೆ ವಂಚನೆ, ವಿದೇಶಗಳಲ್ಲಿನ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆಯನ್ನು ಅನೇಕರು ಮಾಡಿದ್ದಾರೆ ಎಂದು ದಾಳಿ ಮಾಡಿದ್ದ ಐಟಿ ಅಧಿಕಾರಿಗಳು ಪೃಥ್ವಿರಾಜ್ ಸುಕುಮಾರನ್ ಮನೆ ಮತ್ತು ಕಚೇರಿಯನ್ನು ಕೂಡ ಆಗ ಪರಿಶೀಲಿಸಿದ್ದರು. ಆ ತನಿಖೆಯ ಮುಂದುವರೆದ ಭಾಗವಾಗಿ ಈಗ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಐಟಿ ಇಲಾಖೆ ಇನ್ನೊಮ್ಮೆ ನೋಟಿಸ್ ಕಳುಹಿಸಿದೆ ಎಂದು ತಿಳಿದುಬಂದಿದೆ.

    ಇತ್ತೀಚೆಗಷ್ಟೇ ಎಂಪುರಾನ್‌ ಚಿತ್ರದ ಭಾರೀ ವಿವಾದಕ್ಕೀಡಾಗಿತ್ತು. ಗುಜರಾತ್‌ ಗಲಭೆಗೆ ಸಂಬಂಧಿಸಿದ ದೃಶ್ಯಗಳನ್ನು ತಿರುಚಿ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ 24 ದೃಶ್ಯಗಳಿಗೆ ಚಿತ್ರತಂಡ ಕತ್ತರಿ ಹಾಕಿತ್ತು.

  • ʻಗೇಮ್‌ ಚೇಂಜರ್‌ʼ ಸಿನಿ ನಿರ್ಮಾಪಕ ದಿಲ್‌ ರಾಜುಗೆ ಐಟಿ ಶಾಕ್‌ – 55 ತಂಡ, 8 ಕಡೆ ಏಕಕಾಲಕ್ಕೆ ದಾಳಿ

    ʻಗೇಮ್‌ ಚೇಂಜರ್‌ʼ ಸಿನಿ ನಿರ್ಮಾಪಕ ದಿಲ್‌ ರಾಜುಗೆ ಐಟಿ ಶಾಕ್‌ – 55 ತಂಡ, 8 ಕಡೆ ಏಕಕಾಲಕ್ಕೆ ದಾಳಿ

    ನಟ ರಾಮ್‌ ಚರಣ್‌ ಅಭಿನಯದ ʻಗೇಮ್‌ ಚೇಂಜರ್‌ʼ (Game Changer) ಸೇರಿದಂತೆ ಹಿಟ್‌ ಸಿನಿಮಾಗಳ ನಿರ್ಮಾಪಕ ದಿಲ್‌ ರಾಜು (Dil Raju) ಅವರಿಗೆ ಆದಾಯ ತೆರಿಗೆ ಇಲಾಖೆ (Income Tax officer) ಶಾಕ್‌ ಕೊಟ್ಟಿದೆ.

    ಒಟ್ಟು 55 ತಂಡಗಳು ನಿರ್ಮಾಪಕ ದಿಲ್‌ ರಾಜು ಅವರ ಮನೆ, ಕಚೇರಿ ಸೇರಿದಂತೆ 8 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿವೆ. ಹೈದರಾಬಾದ್‌ನ ಜೂಬ್ಲಿಹಿಲ್ಸ್, ಬಂಜಾರಹಿಲ್ಸ್‌ನಲ್ಲಿರುವ ನಿವಾಸಗಳ ಮೇಲೆ, ದಿಲ್ ರಾಜು ಸಹೋದರ ಶಿರೀಷ್, ಪುತ್ರಿ ಹನ್ಸಿತ ರೆಡ್ಡಿ ಹಾಗೂ ಸಂಬಂಧಿಕರ ಮನೆಗಳ ಮೇಲೂ ಐಟಿ ದಾಳಿ ನಡೆಸಿದ್ದು, ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಇದನ್ನೂ ಓದಿ: ಬೆಂಬಲ ತೊಗರಿ ಖರೀದಿ ಶುರು – ಜಿಲ್ಲೆಯಾದ್ಯಂತ 177 ಖರೀದಿ ಕೇಂದ್ರ ಸ್ಥಾಪನೆ

    ಇತ್ತೀಚೆಗಷ್ಟೇ ದೊಡ್ಡ ಬಜೆಟ್‌ ಸಿನಿಮಾ ʻಗೇಮ್ ಚೇಂಜರ್ʼ ನಿರ್ಮಿಸಿದ್ದರು. ಇದು ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಅದೇ ಹೊತ್ತಿಗೆ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ ʻಸಂಕ್ರಾಂತಿಕಿ ವಸ್ತುನ್ನಾಂʼ ಸಿನಿಮಾ ಕೂಡ ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ. ಈ ನಡುವೆ ಐಟಿ ಅಧಿಕಾರಿಗಳು ನಿರ್ಮಾಪಕರಿಗೆ ಶಾಕ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ICAT ಕೇಂದ್ರ ಸ್ಥಾಪನೆ ಖಚಿತ – ಉನ್ನತ ಅಧಿಕಾರಿಗಳೊಂದಿಗೆ ಹೆಚ್‌ಡಿಕೆ ಚರ್ಚೆ

  • ವಿದೇಶಿ ಸ್ವತ್ತು, ಆದಾಯ ಘೋಷಿಸದಿದ್ರೆ 10 ಲಕ್ಷ ರೂ. ದಂಡ – ಕೊನೇ ದಿನ ಯಾವಾಗ?

    ವಿದೇಶಿ ಸ್ವತ್ತು, ಆದಾಯ ಘೋಷಿಸದಿದ್ರೆ 10 ಲಕ್ಷ ರೂ. ದಂಡ – ಕೊನೇ ದಿನ ಯಾವಾಗ?

    ನವದೆಹಲಿ: ತೆರಿಗೆದಾರರು ವಿದೇಶದಲ್ಲಿ ಹೊಂದಿರುವ ಆಸ್ತಿ (Foreign Aassets) ಅಥವಾ ವಿದೇಶದಿಂದ ಗಳಿಸಿದ ಆದಾಯದ ವಿವರ ಘೋಷಿಸದಿದ್ದರೇ ಅಂತಹವರಿಗೆ ಕಪ್ಪುಹಣ ತಡೆ ಕಾಯ್ದೆ ಅಡಿಯಲ್ಲಿ 10 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ (Income Tax Department) ಎಚ್ಚರಿಕೆ ನೀಡಿದೆ.

    2024-25ನೇ ಐಟಿ ರಿಟರ್ನ್ಸ್‌ (ITR) ಮೌಲ್ಯಮಾಪನ ವರ್ಷದಲ್ಲಿ ಸಲ್ಲಿಸಿರುವ ಐಟಿಆರ್‌ಗಳಲ್ಲಿ ವಿದೇಶಿ ಸ್ವತ್ತು ಅಥವಾ ಆದಾಯ ಕುರಿತು ಘೋಷಣೆ ಮಾಡದಿರುವ ತೆರಿಗೆದಾರರಿಗೆ ಸಂದೇಶ ರವಾನಿಸಲು ಅಭಿಯಾನ ಆರಂಭಿಸಲಾಗಿದೆ. ಇದರ ಭಾಗವಾಗಿ ಇಲಾಖೆಯು ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಮಾಹಿತಿ ಪ್ರಕಟಿಸಿದೆ. ಇದನ್ನೂ ಓದಿ: Pushpa 2 The Rule Trailer: ಪುಷ್ಪ ಅಂದ್ರೆ ಫೈಯರ್‌ ಅಲ್ಲ, ವೈಲ್ಡ್‌ ಫೈಯರ್‌ – ಟ್ರೇಲರ್‌ನಲ್ಲಿ ಅಲ್ಲು ಅರ್ಜುನ್‌ ಖದರ್‌

    ವಿದೇಶಿ ಆಸ್ತಿ ಎಂದರೇನು?
    ಐ-ಟಿ ಇಲಾಖೆಯ ಸಲಹೆಯ ಪ್ರಕಾರ, ವಿದೇಶದಲ್ಲಿ ಬ್ಯಾಂಕ್ ಖಾತೆ, ವಿಮಾ ಒಪ್ಪಂದ, ಕಂಪನಿ ಅಥವಾ ವ್ಯವಹಾರದಲ್ಲಿನ ಬಡ್ಡಿ. ಸ್ಥಿರಾಸ್ತಿ, ಕಸ್ಟೋಡಿಯಲ್ ಖಾತೆ, ಟ್ರಸ್ಟಿ, ಷೇರು ಮತ್ತು ಸಾಲಪತ್ರಕ್ಕೆ ಲಭಿಸಿರುವ ಬಡ್ಡಿ ಇತ್ಯಾದಿಯನ್ನು ವಿದೇಶಿ ಸ್ವತ್ತು ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದೆ. ಇದನ್ನೂ ಓದಿ: ರಾತ್ರೋ ರಾತ್ರಿ ಬದಲಾಗ್ತಿದ್ಯಾ ಎಪಿಎಲ್, ಬಿಪಿಎಲ್ ಕಾರ್ಡ್? – ಅರ್ಹರಿಗೆ ಮಾತ್ರ ಸಿಗತ್ತೆ ಅಂತ ಸಿಎಂ ಸ್ಪಷ್ಟನೆ

    2024-25ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ವಿಳಂಬ ಹಾಗೂ ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31ರಂದು ಅಂತಿಮ ದಿನವಾಗಿದೆ. ಹಾಗಾಗಿ ಎಲ್ಲಾ ಅರ್ಹ ತೆರಿಗೆದಾರರು ತಮ್ಮ ಐಟಿ ರಿಟರ್ನ್ಸ್‌ನಲ್ಲಿ ವಿದೇಶಿ ಆಸ್ತಿ (ಎಫ್‌ಎ) ಅಥವಾ ವಿದೇಶಿ ಮೂಲ ಆದಾಯ (ಎಫ್‌ಎಸ್‌ಐ) ವೇಳಾಪಟ್ಟಿಯನ್ನು ʻಕಡ್ಡಾಯವಾಗಿʼ ಭರ್ತಿ ಮಾಡಬೇಕು ಎಂದು ಎಂದು ಇಲಾಖೆ ಎಚ್ಚರಿಸಿದೆ. ಇದನ್ನೂ ಓದಿ: ಮಣಿಪುರದ ಭದ್ರತಾ ವ್ಯವಸ್ಥೆ ಕುರಿತು ಅಮಿತ್ ಶಾ ಸಭೆ – ಸೋಮವಾರವೂ ಹೈವೋಲ್ಟೇಜ್‌ ಮೀಟಿಂಗ್‌ 

  • ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ದೆಹಲಿ, ಮುಂಬೈ ಮೂಲದ ಕಂಪನಿಗಳ ಮೇಲೆ ಐಟಿ ದಾಳಿ

    ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ದೆಹಲಿ, ಮುಂಬೈ ಮೂಲದ ಕಂಪನಿಗಳ ಮೇಲೆ ಐಟಿ ದಾಳಿ

    ಬೆಂಗಳೂರು: ನಗರದ (Bengaluru) ದೆಹಲಿ (Delhi) ಹಾಗೂ ಮುಂಬೈ (Mumbai) ಮೂಲದ ಹಲವು ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ (IT Raid) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ದೆಹಲಿ ಹಾಗೂ ಮುಂಬೈ ಶಾಖೆಯ ಅಧಿಕಾರಿಗಳಿಂದ ದಾಳಿ ನಡೆದಿದೆ. ಕಂಪನಿಗಳ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಯುತ್ತಿದ್ದಾರೆ.

  • ದರ್ಶನ್‌ ಬಳಿ 70 ಲಕ್ಷ ರೂ. ಪತ್ತೆ – ʻದಾಸʼನಿಗೆ ಕೊಲೆ ಆರೋಪದ ಜೊತೆಗೆ ಐಟಿ ಸಂಕಷ್ಟ!

    ದರ್ಶನ್‌ ಬಳಿ 70 ಲಕ್ಷ ರೂ. ಪತ್ತೆ – ʻದಾಸʼನಿಗೆ ಕೊಲೆ ಆರೋಪದ ಜೊತೆಗೆ ಐಟಿ ಸಂಕಷ್ಟ!

    ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) 2ನೇ ಆರೋಪಿಯಾಗಿರುವ ನಟ ದರ್ಶನ್‌ (Darshan Arrested) ಸೇರಿ ನಾಲ್ವರು ಆರೋಪಿಗಳನ್ನು ನ್ಯಾಯಾಲಯ ಪೊಲೀಸ್‌ ಕಸ್ಟಡಿಗೆ ವಹಿಸಿದೆ. ಈ ನಡುವೆ ಕೊಲೆ ಆರೋಪ ಹೊತ್ತಿರುವ ದರ್ಶನ್‌ಗೆ ಐಟಿ ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.

    ಹೌದು. ಮೊದಲಿಗೆ ರೇಣುಕಾಸ್ವಾಮಿ ಮೃತದೇಹ ವಿಲೇವಾರಿ ಮಾಡುವುದಕ್ಕಾಗಿ ನೀಡಲಾಗಿದ್ದ 30 ಲಕ್ಷ ರೂ. ಹಣವನ್ನು ಪೊಲೀಸರು ತನಿಖೆ ವೇಳೆ ವಶಪಡಿಸಿಕೊಂಡಿದ್ದರು. ಈ ಹಣವನ್ನು ದರ್ಶನ್‌ ಅವರೇ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಬಳಿಕ ದರ್ಶನ್‌ ಮನೆಯಲ್ಲಿ ಜೂನ್‌ 19ರಂದು ಪೊಲೀಸರು 37.40 ಲಕ್ಷ ರೂ. ಜಪ್ತಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಲೆ ಆರೋಪದ ಜತೆಗೆ ದರ್ಶನ್‌ಗೆ ಐಟಿ ಸಂಕಷ್ಟ ಎದುರುಗ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇದನ್ನೂ ಓದಿ: ರೇಣುಕಸ್ವಾಮಿ ಕೊಲೆಗೆ ಸಂಚು ರೂಪಿಸಿದ್ದೇ ಪವಿತ್ರಾಗೌಡ – ಹೊಸ ರಿಮ್ಯಾಂಡ್‌ ಕಾಪಿಯಲ್ಲಿ ಏನಿದೆ?

    ಕಾನೂನು ಪ್ರಕಾರ ಒಬ್ಬ ವ್ಯಕ್ತಿ 2 ಲಕ್ಷ ರೂ. ನಗದು ಮಾತ್ರ ಮನೆಯಲ್ಲಿ ಇಟ್ಟುಕೊಳ್ಳಬಹುದು. ಆದ್ರೆ ತನಿಖೆಯಲ್ಲಿ ಒಟ್ಟು 70 ಲಕ್ಷ ರೂ. ಹಣ ದರ್ಶನ್ ಬಳಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ 70 ಲಕ್ಷ ರೂ.ಗಳಿಗೆ ತೆರಿಗೆ ಪಾವತಿ ಮಾಡಲಾಗಿದ್ಯಾ? ಇಷ್ಟೊಂದು ನಗದು ಮೂಲ ಯಾವುದು ಎಂಬುದರ ಕುರಿತು ತನಿಖೆ ನಡೆಸಲು ಪೊಲೀಸರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಲಬುರಗಿ ಹೋಟೆಲ್‌ನಲ್ಲಿ ಸಿಲಿಂಡರ್‌ ಸ್ಫೋಟ – 11 ಮಂದಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ

  • ಶೂ ವ್ಯಾಪಾರಿ ಮನೆಯಲ್ಲಿ ಕಂತೆ ಕಂತೆ ಹಣ – ಬರೋಬ್ಬರಿ 40 ಕೋಟಿ ರೂ. ಜಪ್ತಿ!

    ಶೂ ವ್ಯಾಪಾರಿ ಮನೆಯಲ್ಲಿ ಕಂತೆ ಕಂತೆ ಹಣ – ಬರೋಬ್ಬರಿ 40 ಕೋಟಿ ರೂ. ಜಪ್ತಿ!

    ಲಕ್ನೋ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿ ನಡೆಸಿದ ದಾಳಿಯಲ್ಲಿ ಬರೋಬ್ಬರಿ 40 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದಾರೆ.

    ತೆರಿಗೆ ವಂಚನೆ ಮತ್ತು ಅಕ್ರಮ ಆಸ್ತಿ ಹೊಂದಿದ್ದ ಆರೋಪದ ಮೇಲೆ ಐಟಿ ಅಧಿಕಾರಿಗಳು ಆಗ್ರಾದಲ್ಲಿ ಶೂ ವ್ಯಾಪಾರಿ ರಾಮನಾಥ್‌ ಡಂಗ್‌ ಅವರ ಮನೆ ಮೇಲೆ ದಾಳಿ (Tax Raid) ನಡೆಸಿದ್ದರು. ಈ ವೇಳೆ ದಾಖಲೆ ಇಲ್ಲದ 500 ರೂ. ನೋಟುಗಳ ಹಲವು ಬಂಡಲ್‌ಗಳನ್ನು ಹೊರತೆಗೆದಿದ್ದಾರೆ. ಇದನ್ನೂ ಓದಿ: 2004: ಎನ್‌ಡಿಎ ಔಟ್‌.. ಯುಪಿಎ ಇನ್‌ – ಗಾಂಧಿಯೇತರ ನಾಯಕನಿಗೆ ಪ್ರಧಾನಿ ಪಟ್ಟ

    ಸದ್ಯ 40 ಕೋಟಿ ರೂ. ಜಪ್ತಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜಪ್ತಿ ಮಾಡಿದ ಹಣವನ್ನು ಇನ್ನೂ ಏಣಿಕೆ ಮಾಡಲಾಗುತ್ತಿದ್ದು, ಹಣದ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಾನು, ರಾಹುಲ್‌ ಒಟ್ಟಿಗೆ ಸ್ಪರ್ಧಿಸಿದ್ದರೆ ಬಿಜೆಪಿಗೆ ಲಾಭವಾಗ್ತಿತ್ತು – ಲೋಕಸಭೆಗೆ ಸ್ಪರ್ಧಿಸದಿರಲು ಕಾರಣ ತಿಳಿಸಿದ ಪ್ರಿಯಾಂಕಾ

    ಇತ್ತೀಚೆಗೆ ದೇಶದಲ್ಲಿ ನಡೆದ 2ನೇ ಅತಿದೊಡ್ಡ ದಾಳಿಯೂ ಇದಾಗಿದೆ. ಇದೇ ತಿಂಗಳ ಮೇ 6 ರಂದು ಜಾರ್ಖಂಡ್‌ನಲ್ಲಿ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳ ತಂಡ ಸಚಿವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಮತ್ತು ಅವರ ಮನೆ ಕೆಲಸಗಾರ ಜಹಾಂಗೀರ್ ಆಲಂ ಮನೆಯಲ್ಲಿ ಸಿಕ್ಕ 35 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿತ್ತು.

  • ರಾಜಕೀಯ ಉದ್ದೇಶಕ್ಕಾಗಿ ಕಾಂಗ್ರೆಸ್ ಪಕ್ಷದ ಬ್ಯಾಂಕ್‌ಖಾತೆಗಳನ್ನ ಬಿಜೆಪಿ ಸೀಜ್ ಮಾಡಿದೆ: ಪರಮೇಶ್ವರ್

    ರಾಜಕೀಯ ಉದ್ದೇಶಕ್ಕಾಗಿ ಕಾಂಗ್ರೆಸ್ ಪಕ್ಷದ ಬ್ಯಾಂಕ್‌ಖಾತೆಗಳನ್ನ ಬಿಜೆಪಿ ಸೀಜ್ ಮಾಡಿದೆ: ಪರಮೇಶ್ವರ್

    ಬೆಂಗಳೂರು: ಆದಾಯ ತೆರಿಗೆ ಇಲಾಖೆ (IT Department) ಕಾಂಗ್ರೆಸ್ ಪಕ್ಷದ ಬ್ಯಾಂಕ್‌ ಖಾತೆಗಳನ್ನು ಸೀಜ್‌ ಮಾಡಿರೋದು ರಾಜಕೀಯ ಉದ್ದೇಶದಿಂದ ಅಂತ ಗೃಹ ಸಚಿವ ಪರಮೇಶ್ವರ್ (G Parameshwara) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷಕ್ಕೆ (Congress Party) ಹೇಗಾದರೂ ಮಾಡಿ ತೊಂದರೆ ಕೊಡಬೇಕು ಅಂತ ನಿರ್ಧಾರ ಮಾಡಿದ ಹಾಗೆ ಇದೆ. ಸುಪ್ರೀಂ ಕೋರ್ಟ್ (Supreme Court) ಚುನಾವಣೆ ಬಾಂಡ್ ತೆಗೆದುಕೊಳ್ಳಬಾರದು ಅಂತ ಆದೇಶ ಮಾಡಿದೆ. ಇಲ್ಲಿವರೆಗೂ ತೆಗೆದುಕೊಂಡಿರೋ ಬಾಂಡ್‌ಗಳ ಬಗ್ಗೆ ಮಾಹಿತಿ ಕೊಡುವಂತೆ ಸುಪ್ರೀಂ ಕೋರ್ಟ್ ಕೇಳಿದೆ. ಈ ಹಿನ್ನೆಲೆಯಲ್ಲಿ ಅವರು ಸೀಜ್‌ ಮಾಡಿದ್ದಾರೆ ಅನ್ನಿಸುತ್ತೆ ಎಂದು ಕಿಡಿ ಕಾರಿದ್ದಾರೆ.

    ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಖಾತೆಗಳನ್ನ ಸೀಜ್ ಮಾಡೋ ಅವಶ್ಯಕತೆ ಇರಲಿಲ್ಲ. ಅಕೌಂಟ್ ‌ವಿವರ ಕೇಳಬಹುದಿತ್ತು. ಸೀಜ್ ಮಾಡೋ ಅವಶ್ಯಕತೆ ಇರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಮುಖವಾಣಿ; ಕೇರಳದ ʻಜೈಹಿಂದ್‌ ಟಿವಿʼ ಚಾನೆಲ್‌ ಬ್ಯಾಂಕ್‌ ಖಾತೆಗಳು ಫ್ರೀಜ್‌!

    ಐಟಿಗೆ ಅರಿವಾದ ಮೇಲೆ ಅಕೌಂಟ್ ಓಪನ್ ಮಾಡಿದ್ದಾರೆ. ಇದೆಲ್ಲವನ್ನು ನೋಡಿದ್ರೆ ಉದ್ದೇಶ ಪೂರ್ವಕವಾಗಿ ಕೇಂದ್ರ ಮಾಡ್ತಿದೆ ಅಂತ ನಮಗೆ ಅನಿಸುತ್ತದೆ. ಈ ಸಂಧರ್ಭದಲ್ಲಿ ಮಾಡಿದಾಗ ಉದ್ದೇಶಪೂರ್ವಕವಾಗಿ ಚುನಾವಣೆಗೆ ತೊಂದರೆ ಮಾಡೋದಕ್ಕೆ‌ ಮಾಡ್ತಿದ್ದಾರೆ ಅಂತ ಅನ್ನಿಸುತ್ತೆ. ಬರೀ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಹೀಗೆ, ಆದರೆ‌ ಇದು ಉದ್ದೇಶಪೂರ್ವಕವಾಗಿ ಆಗಿದೆ ಅಂತ ಅನ್ನಿಸುತ್ತದೆ. ಇದರಲ್ಲಿ ‌ರಾಜಕೀಯ ಇದೆ ಅಂತ ಅನ್ನಿಸುತ್ತೆ ಅಂತ ಕೇಂದ್ರದ ವಿರುದ್ದ ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

    115 ಕೋಟಿ ಹಣ ಫ್ರೀಜ್‌:
    ಚುನಾವಣಾ ಬಾಂಡ್‌ಗಳನ್ನು ಸುಪ್ರೀಂ ಕೋರ್ಟ್‌ ನಿಷೇಧಿಸಿದ ಮರು ದಿನವೇ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಮೂರು ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿದ ಬೆಳವಣಿಗೆ ನಡೆದಿದೆ. ಸಾರ್ವಜನಿಕರಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಲಾದ 210 ಕೋಟಿ ರೂ.ಗಳಿಗೆ ತೆರಿಗೆ ಪಾವತಿಸದ ಕಾರಣ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ಗೆ ಸೇರಿದ ಮೂರು ಬ್ಯಾಂಕ್‌ ಖಾತೆಗಳನ್ನು ಗುರುವಾರ ರಾತ್ರಿಯಿಂದಲೇ ಮುಟ್ಟುಗೋಲು ಹಾಕಿಕೊಂಡಿರುವುದು ವರದಿಯಾಗಿದೆ. ಆದಾಯ ತೆರಿಗೆ ಮೇಲ್ಮನವಿ ನ್ಯಾಯ ಮಂಡಳಿ ಆದೇಶದ ಬಳಿಕ ಬ್ಯಾಂಕ್‌ ಖಾತೆಗಳು ಚಾಲ್ತಿಗೆ ಬಂದಿದ್ದರೂ 115 ಕೋಟಿ ರೂ. ಹಣವನ್ನು ದಂಡದ ರೂಪದಲ್ಲಿ ಫ್ರೀಜ್‌ ಮಾಡಲಾಗಿದೆ. 115 ಕೋಟಿ ರೂ. ಹಣವನ್ನು ಬ್ಯಾಂಕ್‌ ಖಾತೆಯಲ್ಲಿ ಉಳಿಸಿ, ಪಕ್ಷದ ರಾಜಕೀಯ ಚಟುವಟಿಕೆಗಳಿಗೆ ಉಳಿದ ಹಣವನ್ನು ವಿನಿಯೋಗ ಮಾಡುತ್ತೇವೆ ಎಂದು ಅಜಯ್‌ ಮಾಕೆನ್‌ ಹೇಳಿದರು. ಇದಕ್ಕೆ ಸಂಬಂಧಿಸಿದಂತೆ ಪರಮೇಶ್ವರ್‌ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    `ಜೈಹಿಂದ್ ಚಾನೆಲ್’ನ ಬ್ಯಾಂಕ್ ಖಾತೆ ಫ್ರೀಜ್‌:
    ಕಾಂಗ್ರೆಸ್ ಮುಖವಾಣಿ ಸಂಸ್ಥೆ ಕೇರಳದ `ಜೈಹಿಂದ್ ಚಾನೆಲ್’ನ ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ಸ್ಥಗಿತಗೊಳಿಸಿದೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: Loksabha Election: ಸೋಮಣ್ಣ ಬಳಿಕ ಸಿ.ಟಿ ರವಿ, ಸುಧಾಕರ್, ಶ್ರೀರಾಮುಲು ಕಸರತ್ತು

  • ಕಾಂಗ್ರೆಸ್‌ ಮುಖವಾಣಿ; ಕೇರಳದ ʻಜೈಹಿಂದ್‌ ಟಿವಿʼ ಚಾನೆಲ್‌ ಬ್ಯಾಂಕ್‌ ಖಾತೆಗಳು ಫ್ರೀಜ್‌!

    ಕಾಂಗ್ರೆಸ್‌ ಮುಖವಾಣಿ; ಕೇರಳದ ʻಜೈಹಿಂದ್‌ ಟಿವಿʼ ಚಾನೆಲ್‌ ಬ್ಯಾಂಕ್‌ ಖಾತೆಗಳು ಫ್ರೀಜ್‌!

    – ಚಾನೆಲ್‌ಗೆ ಡಿಕೆಶಿ ಕುಟುಂಬ ಹೂಡಿಕೆ ಬಗ್ಗೆ ಮಾಹಿತಿ ಕೇಳಿದ್ದ ಸಿಬಿಐ

    ಬೆಂಗಳೂರು/ತಿರುವನಂತಪುರಂ: ಕಾಂಗ್ರೆಸ್‌ ಮುಖವಾಣಿ ಸಂಸ್ಥೆ ಕೇರಳದ ʻಜೈಹಿಂದ್ ಚಾನೆಲ್‌ʼನ ಬ್ಯಾಂಕ್‌ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ (Income Tax department) ಸ್ಥಗಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

    ʻಜೈಹಿಂದ್ ಟಿವಿ’ಯ (Jai Hind TV channel) ಮಾತೃಸಂಸ್ಥೆಯಾದ ಭಾರತ್ ಬ್ರಾಡ್ ಕಾಸ್ಟಿಂಗ್ ಕಂಪನಿಯಿಂದ ಬಾಕಿ ಇರುವ ತೆರಿಗೆ ಮೊತ್ತವನ್ನು ವಸೂಲಿ ಮಾಡುವಂತೆ ಎರಡು ಪ್ರಮುಖ ಖಾಸಗಿ ಬ್ಯಾಂಕುಗಳಿಗೆ ಇಲ್ಲಿನ ಕೇಂದ್ರ GST ಮತ್ತು ಅಬಕಾರಿ ಕಚೇರಿಯ ಸಹಾಯಕ ಆಯುಕ್ತರು ಇತ್ತೀಚೆಗೆ ನೋಟಿಸ್ ನೀಡಿದ್ದರು. ಇದರ ಬೆನ್ನಲ್ಲೇ ಈಗ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

    ಸಂಸ್ಥೆಯ ಖಾತೆಗಳನ್ನು ಸ್ಥಗಿತಗೊಳಿಸಿ ಕೈಗೊಂಡಿರುವ ಕ್ರಮಕ್ಕೂ, 7 ವರ್ಷಗಳ ಹಿಂದಿನ ಸೇವಾ ತೆರಿಗೆ ಬಾಕಿಗೆ ಸಂಬಂಧಿಸಿದ ಇದೇ ಸಂಸ್ಥೆಗೆ ಸಂಬಂಧಿಸಿದ ಪ್ರಕರಣಕ್ಕೂ ನಂಟಿದೆ. ಸೇವಾ ತೆರಿಗೆ ಬಾಕಿ ಕುರಿತ ಪ್ರಕರಣದ ವಿಚಾರಣೆ ಸದ್ಯ ಕೇರಳ ಹೈಕೋರ್ಟ್‌ನಲ್ಲಿ (Kerala Highcourt) ನಡೆಯುತ್ತಿದೆ. ಈ ನಡುವೆ ಇಲಾಖೆ ಕೈಗೊಂಡಿರುವ ಈ ದಿಢೀರ್ ಕ್ರಮ ದುರದೃಷ್ಟಕರ ಮಾತ್ರವಲ್ಲ. ಇದರಿಂದ ಚಾನೆಲ್ ಸಂಕಷ್ಟಕ್ಕೆ ಸಿಲುಕಿದೆ ಚಾನೆಲ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಶಿಜು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಇಂದಿರಾ ಗಾಂಧಿ 3ನೇ ಮಗ ಶಾಕ್? – ಪುತ್ರನ ಜೊತೆ ಕಮಲ್‌ನಾಥ್ ಬಿಜೆಪಿ ಸೇರ್ಪಡೆ?

    ಡಿಕೆಶಿ ಹೂಡಿಕೆ ಬಗ್ಗೆ ಮಾಹಿತಿ ಕೇಳಿದ್ದ ಸಿಬಿಐ:
    ಸದ್ಯ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಡಿಸಿಎಂ ಡಿ.ಕೆ ಶಿವಕುಮಾ‌ರ್ ಮತ್ತು ಅವರ ಕುಟುಂಬ ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದ್ದು, ಈ ಕುರಿತು ವಿವರ ನೀಡುವಂತೆ ಸಂಸ್ಥೆಗೆ ಕಳೆದ ಡಿಸೆಂಬರ್ 22ರಂದು ಸಿಬಿಐ ನೋಟಿಸ್ ನೀಡಿತ್ತು. ಈ ವಿಚಾರವಾಗಿ ನಾವು ತನಿಖಾ ಸಂಸ್ಥೆಗೆ ಸಹಕಾರ ನೀಡುತ್ತಿದ್ದೇವೆ. ಇದಾದ ನಂತರ, ನಾವು ಕೇಂದ್ರದ ವಿವಿಧ ಇಲಾಖೆಗಳಿಂದ 10ಕ್ಕೂ ಹೆಚ್ಚು ನೋಟಿಸ್‌ಗಳನ್ನು ಪಡೆದಿದ್ದೇವೆ ಎಂದು ಶಿಜು ಹೇಳಿದ್ದಾರೆ.

    ಡಿಕೆಶಿ ಕುಟುಂಬದಿಂದ 25 ಲಕ್ಷ ರೂ. ಹೂಡಿಕೆ?:
    2016-17 ರಲ್ಲಿ ಕೇರಳದ ಜೈಹಿಂದ್ ಪ್ರೈವೇಟ್ ಲಿಮಿಟೆಡ್‌ಗೆ ಡಿಸಿಎಂ ಡಿ.ಕೆ ಶಿವಕುಮಾರ್‌ ಕುಟುಂಬ 25 ಲಕ್ಷ ರೂ. ಹೂಡಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಡಿಕೆ ಶಿವಕುಮಾರ್‌ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಏರ್‌ಪೋರ್ಟ್ ಸ್ಫೋಟಿಸುತ್ತೇನೆ- ‌ ಬೆದರಿಕೆ ಕರೆ ಮಾಡಿ ಮೊಬೈಲ್‌ ಸ್ವಿಚ್ಛ್‌ ಆಫ್‌ ಮಾಡ್ಕೊಂಡ!

    115 ಕೋಟಿ ಹಣ ಫ್ರೀಜ್‌:
    ಚುನಾವಣಾ ಬಾಂಡ್‌ಗಳನ್ನು ಸುಪ್ರೀಂ ಕೋರ್ಟ್‌ ನಿಷೇಧಿಸಿದ ಮರು ದಿನವೇ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಮೂರು ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿದ ಬೆಳವಣಿಗೆ ನಡೆದಿದೆ. ಸಾರ್ವಜನಿಕರಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಲಾದ 210 ಕೋಟಿ ರೂ.ಗಳಿಗೆ ತೆರಿಗೆ ಪಾವತಿಸದ ಕಾರಣ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ಗೆ ಸೇರಿದ ಮೂರು ಬ್ಯಾಂಕ್‌ ಖಾತೆಗಳನ್ನು ಗುರುವಾರ ರಾತ್ರಿಯಿಂದಲೇ ಮುಟ್ಟುಗೋಲು ಹಾಕಿಕೊಂಡಿರುವುದು ವರದಿಯಾಗಿದೆ. ಆದಾಯ ತೆರಿಗೆ ಮೇಲ್ಮನವಿ ನ್ಯಾಯ ಮಂಡಳಿ ಆದೇಶದ ಬಳಿಕ ಬ್ಯಾಂಕ್‌ ಖಾತೆಗಳು ಚಾಲ್ತಿಗೆ ಬಂದಿದ್ದರೂ 115 ಕೋಟಿ ರೂ. ಹಣವನ್ನು ದಂಡದ ರೂಪದಲ್ಲಿ ಫ್ರೀಜ್‌ ಮಾಡಲಾಗಿದೆ. 115 ಕೋಟಿ ರೂ. ಹಣವನ್ನು ಬ್ಯಾಂಕ್‌ ಖಾತೆಯಲ್ಲಿ ಉಳಿಸಿ, ಪಕ್ಷದ ರಾಜಕೀಯ ಚಟುವಟಿಕೆಗಳಿಗೆ ಉಳಿದ ಹಣವನ್ನು ವಿನಿಯೋಗ ಮಾಡುತ್ತೇವೆ ಎಂದು ಅಜಯ್‌ ಮಾಕೆನ್‌ ಹೇಳಿದರು. ಇದನ್ನೂ ಓದಿ: ಹಳಿ ತಪ್ಪಿದ ರೈತರ ಪ್ರತಿಭಟನೆ; ಕತ್ತಿ ಝಳಪಿಸಿದ ನಿಹಾಂಗ್‌ ಸಿಖ್ಖರು – ಖಲಿಸ್ತಾನಿ ಉಗ್ರನ ಫೋಟೋ ಪತ್ತೆ!