Tag: ಆಥಿಯಾ ಶೆಟ್ಟಿ

  • ಕ್ರಿಕೆಟಿಗ ರಾಹುಲ್‍ ಹುಟ್ಟುಹಬ್ಬಕ್ಕೆ ಗರ್ಲ್‍ಫ್ರೆಂಡ್ ಆಥಿಯಾ ಶೆಟ್ಟಿಯ ರೋಮ್ಯಾಂಟಿಕ್ ಫೋಟೋ

    ಕ್ರಿಕೆಟಿಗ ರಾಹುಲ್‍ ಹುಟ್ಟುಹಬ್ಬಕ್ಕೆ ಗರ್ಲ್‍ಫ್ರೆಂಡ್ ಆಥಿಯಾ ಶೆಟ್ಟಿಯ ರೋಮ್ಯಾಂಟಿಕ್ ಫೋಟೋ

    ಭಾರತೀಯ ಕ್ರಿಕೆಟಿಗ, ಕನ್ನಡಿಗ ಕೆ.ಎಲ್. ರಾಹುಲ್‍ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 30ನೇ ವಸಂತಕ್ಕೆ ಕಾಲಿಟ್ಟಿರುವ ಕೆ.ಎಲ್ ರಾಹುಲ್‍ಗೆ ಭಾರತೀಯ ಕ್ರಿಕೆಟ್ ತಂಡದ ಹಾಲಿ ಆಟಗಾರರು, ಮಾಜಿ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು, ಸ್ನೇಹಿತರು ಸೇರಿದಂತೆ ಅಸಂಖ್ಯಾತ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭ ಕೋರಿದ್ದಾರೆ. ಈ ನಡುವೆ ರಾಹುಲ್ ಗರ್ಲ್ ಫ್ರೆಂಡ್ ಆಥಿಯಾ ಶೆಟ್ಟಿ ಅವರು ಕೆ.ಎಲ್.ರಾಹುಲ್ ಜೊತೆಗಿರುವ ರೋಮ್ಯಾಂಟಿಕ್ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಶುಭ ಹಾರೈಸಿದ್ದು, ಸದ್ಯ ಈ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.

    ಆಥಿಯಾ ಶೆಟ್ಟಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ರಾಹುಲ್ ಅವರನ್ನು ತಮ್ಮ ಎರಡು ಕೈಗಳಿಂದ ಬಿಗಿದಪ್ಪಿಕೊಂಡಿರುವ ಕ್ಯೂಟ್ ಆ್ಯಂಡ್ ರೋಮ್ಯಾಂಟಿಕ್ ಫೋಟೋವನ್ನು ಶೇರ್ ಮಾಡಿದ್ದಾರೆ. ಜೊತೆಗೆ ನಿನ್ನೊಂದಿಗೆ ಎಲ್ಲಾ ಕಡೆಯಲ್ಲೂ ಇರುತ್ತೇನೆ. ಹ್ಯಾಪಿ ಬರ್ತ್‍ಡೇ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ರಿಯಾಕ್ಟ್ ಮಾಡಿರುವ ರಾಹುಲ್, ಲವ್ ಯೂ ಎಂದು ಬ್ಲ್ಯಾಕ್ ಕಲರ್ ಹಾರ್ಟ್ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ : ಜೋಗಿ ಪ್ರೇಮ್ ಹೊಸ ಸಿನಿಮಾ ಘೋಷಣೆ : ಧ್ರುವ ಸರ್ಜಾ ಹೀರೋ, ಏ.24 ಮುಹೂರ್ತ

     

    View this post on Instagram

     

    A post shared by Athiya Shetty (@athiyashetty)

    ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಲವಾರು ಲೈಕ್ಸ್ ಹಾಗೂ ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬಂದಿದೆ. ಸೆಲೆಬ್ರಿಟಿ ಮಾಳವಿಕಾ ಮೋಹನ್ ಕ್ಯೂಟೆಸ್ಟ್ ಎಂದು ಕಾಮೆಂಟ್ ಮಾಡುವುದರ ಜೊತೆ ಹಾರ್ಟ್ ಎಮೋಜಿ ಪೋಸ್ಟ್ ಮಾಡಿದ್ದಾರೆ. ಮತ್ತೊಂದೆಡೆ ಆಕಾಂಶಾ ರಂಜನ್ ಕಪೂರ್ ಎಕ್ಸೈಟ್ ಬಾಬೂಲ್ಸ್ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ : ಭಾವಿ ಪತಿಯ ತಂದೆ ನಿಧನ: ನಟಿ ಕಾವ್ಯ ಶಾ ಮದುವೆ ಮುಂದೂಡಿಕೆ

  • ರಾಹುಲ್ ಗೋಲ್ಡನ್ ಡಕ್ – ನಿರಾಸೆಗೊಂಡ ಆಥಿಯಾ ಶೆಟ್ಟಿ

    ರಾಹುಲ್ ಗೋಲ್ಡನ್ ಡಕ್ – ನಿರಾಸೆಗೊಂಡ ಆಥಿಯಾ ಶೆಟ್ಟಿ

    ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಲಕ್ನೋ ನಾಯಕ ಕೆಎಲ್ ರಾಹುಲ್ ಗೋಲ್ಡನ್ ಡಕ್ ಆಗುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ನಿರಾಸೆಗೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯ ವೀಕ್ಷಣೆಗಾಗಿ ರಾಹುಲ್ ಗೆಳತಿ ಆಥಿಯಾ ಶೆಟ್ಟಿ, ನಟ ಸುನೀಲ್ ಶೆಟ್ಟಿ ಆಗಮಿಸಿದ್ದರು. ಆದರೆ ಈ ಪಂದ್ಯದಲ್ಲಿ ರಾಹುಲ್ ಬ್ಯಾಟಿಂಗ್ ಆಗಮಿಸುತ್ತಿದ್ದಂತೆ ಟ್ರೆಂಟ್ ಬೌಲ್ಟ್ ಎಸೆದ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಔಟ್ ಆದರು. ಈ ವೇಳೆ ಕ್ಯಾಮೆರಾಮ್ಯಾನ್ ಗ್ಯಾಲರಿಯಲ್ಲಿದ್ದ ಆಥಿಯಾ ಶೆಟ್ಟಿ ಕಡೆ ಫೋಕಸ್ ಮಾಡುತ್ತಿದ್ದಂತೆ ಆಥಿಯಾ, ರಾಹುಲ್ ಔಟ್ ಆಗಿರುವುದನ್ನು ಕಂಡು ನಿರಾಸೆಯಾದರು. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಆಗುತ್ತಿದೆ. ಇದನ್ನೂ ಓದಿ: ಚಹಲ್, ಹೆಟ್ಮೆಯರ್ ಆಟಕ್ಕೆ ಲಕ್ನೋ ಲಾಕ್ – ರಾಜಸ್ಥಾನಕ್ಕೆ ರೋಚಕ ಜಯ

    KL RAhul

    166 ರನ್‍ಗಳ ಗುರಿ ಬೆನ್ನಟ್ಟಿದ ಲಕ್ನೋ ತಂಡ ನಾಯಕ ಕೆ.ಎಲ್ ರಾಹುಲ್ ಮತ್ತು ಕೆ. ಗೌತಮ್‍ರನ್ನು ಶೂನ್ಯಕ್ಕೆ ಕಳೆದುಕೊಂಡಿತು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ಡಿ ಕಾಕ್ ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ ಡಿ ಕಾಕ್ ಆಟ 39 ರನ್ (32 ಎಸೆತ, 2 ಬೌಂಡರಿ, 1 ಸಿಕ್ಸ್)ಗೆ ಅಂತ್ಯಗೊಂಡಿತು. ಲಕ್ನೋ ಪರ ದೀಪಕ್ ಹೂಡಾ 25 ರನ್ ಮತ್ತು ಕೃನಾಲ್ ಪಾಂಡ್ಯ 22 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಡೆಲ್ಲಿ ಗೆಲುವಿನ ಸಂಭ್ರಮಾಚರಣೆ- ಹೌ ಈಸ್ ದಿ ಜೋಶ್: ವಾರ್ನರ್

    ಕೊನೆಯಲ್ಲಿ ದುಷ್ಮಂತ ಚಮೀರ 13 ರನ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅಜೇಯ 38 ರನ್ (17 ಎಸೆತ, 2 ಬೌಂಡರಿ, 4 ಸಿಕ್ಸ್) ಸಿಡಿಸಿ ಲಕ್ನೋ ಗೆಲುವಿಗೆ ಶ್ರಮಿಸಿದರು ಫಲ ನೀಡಲಿಲ್ಲ. ಅಂತಿಮವಾಗಿ ಲಕ್ನೋ ತಂಡ 20 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಲಕ್ನೋ ವಿರುದ್ಧ ರಾಜಸ್ಥಾನ ರಾಯಲ್ಸ್ 3 ರನ್‍ಗಳ ರೋಚಕ ಗೆಲುವು ಕಂಡಿತು.

  • ನಟಿ ಆಥಿಯಾ ಶೆಟ್ಟಿ ಜೊತೆಗಿನ ಡೇಟಿಂಗ್ ಗಾಸಿಪ್‌ಗೆ ಬ್ರೇಕ್ ಹಾಕಿದ ರಾಹುಲ್

    ನಟಿ ಆಥಿಯಾ ಶೆಟ್ಟಿ ಜೊತೆಗಿನ ಡೇಟಿಂಗ್ ಗಾಸಿಪ್‌ಗೆ ಬ್ರೇಕ್ ಹಾಕಿದ ರಾಹುಲ್

    ಮುಂಬೈ: ಭಾರತ ಕ್ರಿಕೆಟ್‌ ತಂಡದ ಬ್ಯಾಟ್ಸಮನ್‌ ಕೆ.ಎಲ್.ರಾಹುಲ್‌ ಹಾಗೂ ನಟಿ ಆಥಿಯಾ ಶೆಟ್ಟಿ ಜೋಡಿಯ ಡೇಟಿಂಗ್‌ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಹಬ್ಬಿದ್ದವು. ಆಥಿಯಾ ಶೆಟ್ಟಿಯೊಂದಿಗಿನ ಸಂಬಂಧದ ಬಗ್ಗೆ ಅಧಿಕೃತವಾಗಿ ಘೋಷಿಸಿಕೊಳ್ಳುವ ಮೂಲಕ ಕೆ.ಎಲ್‌.ರಾಹುಲ್‌ ಗಾಸಿಪ್‌ಗಳಿಗೆ ತೆರೆ ಎಳೆದಿದ್ದಾರೆ.

    ಆಥಿಯಾ ಶೆಟ್ಟಿ ಜನ್ಮದಿನದಂದು ಕೆ.ಎಲ್‌.ರಾಹಲ್, ನಟಿಯೊಂದಿಗಿನ ಕೆಲವು ರೋಮ್ಯಾಂಟಿಕ್‌ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆಗಿನ ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಿರುವ ಶಿವಣ್ಣ, ರಾಘಣ್ಣ

    ಹೃದಯದ ಇಮೋಜ್‌ ಹಾಕಿ ಕೆ.ಎಲ್‌.ರಾಹುಲ್‌, ಜನ್ಮದಿನದ ಶುಭಾಶಯಗಳು ನನ್ನ ಪ್ರೀತಿಯ ಆಥಿಯಾ ಶೆಟ್ಟಿ ಎಂದು ವಿಶ್‌ ಮಾಡಿದ್ದಾರೆ. ಅದಕ್ಕೆ ಹೃದಯ ಮತ್ತು ಭೂಮಿಯ ಇಮೋಜ್‌ ಹಾಕಿ ರಾಹುಲ್‌ ವಿಶ್‌ಗೆ ಆಥಿಯಾ ಪ್ರತಿಕ್ರಿಯಿಸಿದ್ದಾರೆ. ಆಥಿಯಾ ತಂದೆ ಸುನಿಲ್‌ ಶೆಟ್ಟಿ ಮತ್ತು ಸಹೋದರ ಅಹಾನ್‌ ಶೆಟ್ಟಿ ಕೂಡ ಹೃದಯ ಇಮೋಜ್‌ ಹಾಕಿ ಖುಷಿ ವ್ಯಕ್ತಪಡಿಸಿದ್ದಾರೆ.

    ನಟಿ ಆಥಿಯಾ ಮತ್ತು ಕೆ.ಎಲ್‌.ರಾಹುಲ್‌ ಹಲವೆಡೆ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ತಮ್ಮಿಬ್ಬರ ಸಂಬಂಧದ ಬಗ್ಗೆ ಎಲ್ಲೂ ಮಾತನಾಡಿರಲಿಲ್ಲ. ಇಬ್ಬರೂ ಜೊತೆಯಾಗಿರುವ ಕೆಲವು ರೋಮ್ಯಾಂಟಿಕ್‌ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದರಿಂದ ಅವರಿಬ್ಬರ ನಡುವಿನ ಸಂಬಂಧದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಹಲವಾರು ಗಾಸಿಪ್‌ಗಳಿಗೆ ಕಾರಣವಾಗಿತ್ತು. ಇದನ್ನೂ ಓದಿ: ಪುನೀತ್ ಸಾವಿನ ನಂತರ ಜಯದೇವ ಆಸ್ಪತ್ರೆಗೆ ರೋಗಿಗಳು ಶೇ.30 ಹೆಚ್ಚಳ

    ಕೆ.ಎಲ್.ರಾಹುಲ್‌ ಈಗ ಟಿ20 ವಿಶ್ವಕಪ್‌ ಟೂರ್ನಿಗಾಗಿ ಯುಎಯಿನಲ್ಲಿದ್ದಾರೆ.

  • ಒಂಟಿಯಾಗಿ ಕುಳಿತಿದ್ದ ರಾಹುಲ್‍ಗೆ ಹಾರ್ಟ್ ಕಳುಹಿಸಿದ ಆಥಿಯಾ

    ಒಂಟಿಯಾಗಿ ಕುಳಿತಿದ್ದ ರಾಹುಲ್‍ಗೆ ಹಾರ್ಟ್ ಕಳುಹಿಸಿದ ಆಥಿಯಾ

    ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ಒಂಟಿಯಾಗಿ ಕುಳಿತಿದ್ದ ಫೋಟೋಗೆ ಸುನೀಲ್ ಶೆಟ್ಟಿ ಪುತ್ರಿ, ನಟಿ ಆಥಿಯಾ ಶೆಟ್ಟಿ ಹಾರ್ಟ್ ಎಮೋಜಿ ಕಮೆಂಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

     

    View this post on Instagram

     

    A post shared by KL Rahul???? (@rahulkl)

    ಈ ಜೋಡಿ ಸಮಾಜಿಕ ಜಾಲತಾಣಗಳಲ್ಲಿನ ಕಮೆಂಟ್ ಮೂಲಕವೇ ಗಮನಸೆಳೆಯುತ್ತಿದ್ದು, ಇಬ್ಬರೂ ಒಬ್ಬರಿಗೊಬ್ಬರು ಕಮೆಂಟ್ ಮಾಡಿಕೊಳ್ಳುತ್ತಿರುತ್ತಾರೆ. ಈ ಮೂಲಕ ಸುದ್ದಿಯಾಗುತ್ತಿದ್ದಾರೆ. ಇದೀಗ ಆಸಿಸ್ ಪ್ರವಾಸದ ದಿನಗಳನ್ನು ನೆನಪಿಸಿಕೊಂಡು ಕೆ.ಎಲ್.ರಾಹುಲ್ ಫೋಟೋವೊಂದನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಬೆಂಚ್ ಮೇಲೆ ಒಬ್ಬರೇ ಕುಳಿತಿರುವುದು ಹಾಗೂ ವಾಕ್ ಮಾಡುತ್ತಿರುವ ಫೋಟೋ ಹಂಚಿಕೊಂಡು, ಮೆಲ್ಬರ್ನ್ ಆರ್ಕೈವ್ಸ್ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಆಥಿಯಾ ಶೆಟ್ಟಿ ಹಾರ್ಟ್ ಎಮೋಜಿ ಕಮೆಂಟ್ ಮಾಡಿದ್ದಾರೆ.

    ನಟಿ ಆಥಿಯಾ ಶೆಟ್ಟಿ ಹಾಗೂ ಕೆ.ಎಲ್.ರಾಹುಲ್ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಕಳೆದ ಎರಡು ವರ್ಷಗಳಿಂದ ಹರಿದಾಡುತ್ತಲೇ ಇದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಬಹಿರಂಗವಾಗಿಲ್ಲ. ಈ ಜೋಡಿ ಮಾತ್ರ ಆಗಾಗ ಒಬ್ಬರಿಗೊಬ್ಬರು ಮಿಸ್ ಮಾಡಿಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೆ ಹುಟ್ಟುಹಬ್ಬಕ್ಕೆ ಸಹ ಅಷ್ಟೇ ವಿಶೇಷವಾಗಿ ಶುಭ ಕೋರುತ್ತಾರೆ.

     

    View this post on Instagram

     

    A post shared by KL Rahul???? (@rahulkl)

    ಈ ಹಿಂದೆ ಆಸಿಸ್ ಪ್ರವಾಸದ ವೇಳೆ ಕಾರ್ಡ್ಸ್ ಆಡುತ್ತಿದ್ದಾಗ ಸ್ಣೇಹಿತರನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಕೆ.ಎಲ್.ರಾಹುಲ್ ಪೋಸ್ಟ್ ಮಾಡಿದ್ದರು. ಈ ವೇಳೆ ಆಥಿಯಾ ಶೆಟ್ಟಿಯವರನ್ನು ಸಹ ಟ್ಯಾಗ್ ಮಾಡಿದ್ದರು. ಇದಕ್ಕೆ ನಟಿ ಪ್ರತಿಕ್ರಿಯಿಸಿ, ಗ್ರೇಟ್ ಕಾರ್ಡ್ಸ್ ಎಂದು ಕಮೆಂಟ್ ಮಾಡಿದ್ದರು. ಹೀಗೆ ಹಲವು ಸಂದರ್ಭಗಳಲ್ಲಿ ಈ ಜೋಡಿ ಸಾಮಾಜಿಕ ಜಾಲತಾಣಗಳ ಮೂಲಕವೇ ಸುದ್ದಿಯಾಗುತ್ತಿದೆ.

  • ಆಸೀಸ್ ಪ್ರವಾಸದಲ್ಲಿ ಗೆಳತಿಯನ್ನ ಮಿಸ್ ಮಾಡ್ಕೊಂಡ ಕೆ.ಎಲ್.ರಾಹುಲ್

    ಆಸೀಸ್ ಪ್ರವಾಸದಲ್ಲಿ ಗೆಳತಿಯನ್ನ ಮಿಸ್ ಮಾಡ್ಕೊಂಡ ಕೆ.ಎಲ್.ರಾಹುಲ್

    – ಗೆಳೆಯನ ಪೋಸ್ಟ್ ಗೆ ಆಥಿಯಾ ಕಮೆಂಟ್

    ನವದೆಹಲಿ: ಐಪಿಎಲ್ ಬಳಿಕ ಆಸೀಸ್ ಪ್ರವಾಸದಲ್ಲಿರುವ ಕ್ರಿಕೆಟಿಗ ಕೆ.ಎಲ್.ರಾಹುಲ್ ತಮ್ಮ ಗೆಳತಿ, ಬಾಲಿವುಡ್ ನಟಿ ಆಥಿಯಾ ಶೆಟ್ಟಿಯನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

    ಕೆ.ಎಲ್.ರಾಹುಲ್ ಇನ್‍ಸ್ಟಾದಲ್ಲಿ ಮಾಡಿದ ಪೋಸ್ಟ್ ಗೆ ಆಥಿಯಾ ರಿಪ್ಲೈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗೆಳೆಯರೊಂದಿಗೆ ಕಾರ್ಡ್ ಆಡುವದನ್ನ ಮಿಸ್ ಮಾಡಿಕೊಂಡಿರುವ ಕುರಿತು ರಾಹುಲ್ ಪೋಸ್ಟ್ ಮಾಡಿದ್ದರು. ಕೈಯಲ್ಲಿ ಕಾರ್ಡ್ ಹಿಡಿದು ಯೋಚನೆ ಮಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡು ಪೋಸ್ಟ್ ನ್ನು ಆಥಿಯಾ ಸೇರಿದಂತೆ ಕೆಲ ಗೆಳೆಯರಿಗೆ ಟ್ಯಾಗ್ ಮಾಡಿದ್ದರು.

     

    View this post on Instagram

     

    A post shared by KL Rahul???? (@rahulkl)

    ಕೆ.ಎಲ್.ರಾಹುಲ್ ಪೋಸ್ಟ್ ಗೆ ‘ಗ್ರೇಟ್ ಕಾರ್ಡ್ಸ್ ‘ ಎಂದು ಆಥಿಯಾ ಕಮೆಂಟ್ ಮಾಡಿದ್ದಾರೆ. ಸದ್ಯ ಆಥಿಯಾ ಕಮೆಂಟ್ ಸಾಕಷ್ಟು ವೈರಲ್ ಆಗುತ್ತಿದೆ.

    ಆಥಿಯಾ ಶೆಟ್ಟಿ ಹುಟ್ಟುಹಬ್ಬದ ದಿನದಂದು ಗೆಳತಿ ಜೊತೆಗಿನ ಫೋಟೋ ಹಂಚಿಕೊಂಡಿದ್ದ ಕೆ.ಎಲ್.ರಾಹುಲ್ ಹುಚ್ಚು ಹುಡುಗಿ ಎಂದು ಬರೆದುಕೊಂಡು ವಿಶ್ ಮಾಡಿದ್ದರು. ಇಬ್ಬರ ಕ್ಯೂಟ್ ಫೋಟೋ ಮಿಂಚಿನಂತೆ ಬಾಲಿವುಡ್, ಕ್ರಿಕೆಟ್ ಅಂಗಳದಲ್ಲಿ ಸದ್ದು ಮಾಡಿತ್ತು.

    ಕೆ.ಎಲ್.ರಾಹುಲ್ ಮತ್ತು ಆಥಿಯಾ ಶೆಟ್ಟಿ ಪ್ರೇಮ ಬಂಧನದಲ್ಲಿ ಸಿಲುಕಿದ್ದಾರೆ ಎಂಬ ಸುದ್ದಿ ಕಳೆದ ಎರಡು ವರ್ಷಗಳಿಂದ ಹರಿದಾಡುತ್ತಿದೆ. ಆದ್ರೆ ಇದುವರೆಗೂ ಇಬ್ರೂ ಈ ಬಗ್ಗೆ ಮಾತನಾಡಿಲ್ಲ. ಒಬ್ಬರನೊಬ್ಬರ ಹುಟ್ಟುಹಬಕ್ಕೆ ವಿಶ್ ಮಾಡುವ ಮೂಲಕ ಸದ್ದು ಮಾಡುತ್ತಿರುತ್ತಾರೆ.

     

    View this post on Instagram

     

    A post shared by KL Rahul???? (@rahulkl)

  • ಗೆಳತಿಯ ಫೋಟೋಗೆ ಕೆ.ಎಲ್.ರಾಹುಲ್ ಕಮೆಂಟ್- ಅಭಿಮಾನಿಗಳು ಫುಲ್ ಕನ್ಫ್ಯೂಸ್

    ಗೆಳತಿಯ ಫೋಟೋಗೆ ಕೆ.ಎಲ್.ರಾಹುಲ್ ಕಮೆಂಟ್- ಅಭಿಮಾನಿಗಳು ಫುಲ್ ಕನ್ಫ್ಯೂಸ್

    ಬೆಂಗಳೂರು: ಗೆಳತಿ, ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಫೋಟೋಗೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಮಾಡಿರುವ ಕಮೆಂಟ್ ಗೆ ಅಭಿಮಾನಿಗಳು ಫುಲ್ ಕನ್ಫ್ಯೂಸ್ ಆಗಿದ್ದಾರೆ. ರಾಹುಲ್ ಕಮೆಂಟ್‍ಗೆ ಪ್ರತಿಕ್ರಿಯೆ ನೀಡಿರುವ ಫ್ಯಾನ್ಸ್, ಅಣ್ಣ ಈ ಪದದ ಅರ್ಥ ಏನು ಎಂದು ಪ್ರಶ್ನೆ ಮಾಡಿದ್ದಾರೆ.

    ಬುಧವಾರ ಆಥಿಯಾ ಶೆಟ್ಟಿ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಮಿರರ್ ಸೆಲ್ಫಿ ಹಾಕಿಕೊಂಡಿದ್ದರು. ಇತ್ತ ನಟಿ ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆ ಕೆ.ಎಲ್.ರಾಹುಲ್, ಜೆಫಾ ಎಂದು ಕಮೆಂಟ್ ಮಾಡಿದ್ದಾರೆ. ಬಹುತೇಕರು ಜೆಫಾ ಅರ್ಥ ಹುಡುಕಲು ಗೂಗಲ್ ಮೊರೆ ಹೋಗಿದ್ದಾರೆ. ಇನ್ನು ಹಲವರು ಕೆ.ಎಲ್.ರಾಹುಲ್ ಅವರನ್ನ ಕೇಳಿದ್ದಾರೆ. ಗೂಗಲ್ ಮೊರೆ ಹೋದವರು ‘ಜೆಫಾ’ ಸ್ಪಾನಿಶ್ ಪದ. ಸ್ಪಾನಿಶ್ ನಲ್ಲಿ ಜೆಫಾ ಅಂದ್ರೆ ಬಾಸ್ ಎಂದರ್ಥ ಎಂದು ಹೇಳಿದ್ದಾರೆ.

    https://www.instagram.com/p/CEEJK2QHhfW/

    ಆಥಿಯಾ ಶೆಟ್ಟಿ ಪೋಸ್ಟ್ ಮಾಡಿರುವ ಮಿರರ್ ಸೆಲ್ಫಿ ಫೋಟೋ ಸಖತ್ ವೈರಲ್ ಆಗಿದೆ. ಫೋಟೋಗೆ 1 ಲಕ್ಷಕ್ಕೂ ಅಧಿಕ ಕಮೆಂಟ್ ಗಳು ಬಂದಿವೆ. ಆಥಿಯಾ ಮತ್ತು ಕೆ.ಎಲ್.ರಾಹುಲ್ ಒಬ್ಬರನ್ನೊಬ್ರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಬಹುದಿನಗಳಿಂದ ಹರಿದಾಡುತ್ತಿದೆ. ಕೆ.ಎಲ್.ರಾಹುಲ್ ಹುಟ್ಟುಹಬ್ಬದ ದಿನ ಗೆಳೆಯ ಫೋಟೋ ಶೇರ್ ಮಾಡಿಕೊಂಡಿದ್ದ ಆಥಿಯಾ ಬರ್ತ್ ಡೇ ವಿಶ್ ತಿಳಿಸಿದ್ದರು. ತದನಂತರ ಇಬ್ಬರು ಒಬ್ಬರೊನ್ನಬ್ಬರ ಫೋಟೋಗಳಿಗೆ ಕಮೆಂಟ್ ಮಾಡುವ ಮೂಲಕ ಪರೋಕ್ಷವಾಗಿ ತಮ್ಮ ಪ್ರೀತಿಯ ವಿಷಯವನ್ನು ಹೊರ ಹಾಕಿದ್ದಾರೆ. ಆದ್ರೆ ಇದುವರೆಗೂ ಅಧಿಕೃತವಾಗಿ ಎಲ್ಲಿಯೂ ಪ್ರೀತಿಯ ವಿಚಾರ ತಿಳಿಸಿಲ್ಲ.

    ಐಪಿಎಲ್ ನಲ್ಲಿ ಅತಿ ವೇಗವಾಗಿ ಅರ್ಧಶತಕ ಸಿಡಿಸಿದ ದಾಖಲೆ ಮೂಲಕ ರಾಹುಲ್ ಹೆಸರಿನಲ್ಲಿದೆ. ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕನಾಗಿ ರಾಹುಲ್ ಐಪಿಎಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್ ಸೀಸನ್ 13ರ ಪಂದ್ಯಗಳು ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿವೆ. ಪಂದ್ಯದ ಫೈನಲ್ ನವೆಂಬರ್ 10 ರಂದು ನಡೆಯಲಿದೆ.

    https://www.instagram.com/p/B_HV4MshXqD/