Tag: ಆತ್ಮಾಹುತಿ ಬಾಂಬ್ ದಾಳಿ

  • ಆತ್ಮಾಹುತಿ ಬಾಂಬ್‌ ದಾಳಿ – ತಾಲಿಬಾನ್‌ ಪ್ರಭಾವಿ ಸಚಿವ ಸಾವು

    ಆತ್ಮಾಹುತಿ ಬಾಂಬ್‌ ದಾಳಿ – ತಾಲಿಬಾನ್‌ ಪ್ರಭಾವಿ ಸಚಿವ ಸಾವು

    – ಇಸ್ಲಾಂ ಧರ್ಮ ರಕ್ಷಣೆಗೆ ಪ್ರಾಣವನ್ನೇ ಮುಡಿಪಾಗಿಟ್ಟಿದ್ದ ಹಕ್ಕಾನಿ

    ಕಾಬೂಲ್‌: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಭಯೋತ್ಪಾದಕರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಾಲಿಬಾನ್ ನಿರಾಶ್ರಿತರ ಸಚಿವ ಖಲೀಲ್ ಉರ್-ರಹಮಾನ್ ಹಕ್ಕಾನಿ (Khalil Ur Rahman Haqqani) ಹಾಗೂ ಇತರ ಇಬ್ಬರು ಮೃತಪಟ್ಟಿದ್ದಾರೆ. ಇದು ಮೂರು ವರ್ಷಗಳ ಹಿಂದೆ ಅಧಿಕಾರಕ್ಕೆ ಮರಳಿದ ನಂತರ ತಾಲಿಬಾನ್ ಹಿರಿಯ ಅಧಿಕಾರಿ ಮೇಲಿನ ಅತ್ಯಂತ ಮಹತ್ವದ ದಾಳಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಚಿವಾಲಯದ ಆವರಣದಲ್ಲೇ ಸ್ಫೋಟ ಸಂಭವಿಸಿದ್ದು, ನಿರಾಶ್ರಿತರ ಸಚಿವ ಖಲೀಲ್ ಹಕ್ಕಾನಿ ಹತರಾಗಿದ್ದಾರೆ. ಇವರು ತಾಲಿಬಾನ್ ಆಡಳಿತದಲ್ಲಿ ಮತ್ತೊಬ್ಬ ಪ್ರಭಾವಿ ನಾಯಕನಾಗಿರುವ ಗೃಹ ಸಚಿವ ಸಿರಾಜುದ್ದೀನ್ ಹಕ್ಕಾನಿಯವರ ಚಿಕ್ಕಪ್ಪ. ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಸದ್ಯಕ್ಕೆ ಹೊತ್ತುಕೊಂಡಿಲ್ಲ. ಇದನ್ನೂ ಓದಿ: ಜೈಲಿಂದ ಹೊರಬಂದು ಅತ್ಯಾಚಾರ ಸಂತ್ರಸ್ತೆಯ ಹತ್ಯೆ – ಮೃತದೇಹ ಕತ್ತರಿಸಿ ನದಿಗೆಸೆದ ಹಂತಕ

    ಈ ಕುರಿತು ತಾಲಿಬಾನ್‌ ಸರ್ಕಾರದ (Taliban Government) ಪ್ರಾಥಮಿಕ ವಕ್ತಾರರಾದ ಜಬಿಹುಲ್ಲಾ ಮುಜಾಹಿದ್ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಹಕ್ಕಾನಿ ಅವರ ಮರಣವು ಅತ್ಯಂತ ಗಮನಾರ್ಹವಾದುದು. ಇಸ್ಲಾಂ ಧರ್ಮ ರಕ್ಷಣೆಗಾಗಿ ಹಕ್ಕಾನಿ ಜೀವವನ್ನೇ ಮುಡಿಪಾಗಿಟ್ಟಿದ್ದರು. ಅವರೊಬ್ಬ ನಿಜವಾದ ಧಾರ್ಮಿಕ ಯೋಧ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ವೈದ್ಯನ ಕೈಹಿಡಿದ್ರೂ ಸುಖವಿಲ್ಲದ ಬದುಕು, 4 ವರ್ಷದಿಂದ ಗೃಹಬಂಧನದಲ್ಲಿ ಗೃಹಿಣಿ!

    ಇನ್ನೂ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಈ ಘಟನೆಯನ್ನು ಭಯೋತ್ಪಾದಕ ದಾಳಿ ಎಂದು ಖಂಡಿಸಿದ್ದಾರೆ. ಪಾಕಿಸ್ತಾನವು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಭಯೋತ್ಪಾದನೆಯನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶೇ.99 ರಷ್ಟು ಪುರುಷರದ್ದೇ ತಪ್ಪಿರುತ್ತದೆ – ಟೆಕ್ಕಿ ಅತುಲ್ ಆತ್ಮಹತ್ಯೆ ಕುರಿತು ಕಂಗನಾ ಪ್ರತಿಕ್ರಿಯೆ 

  • ಸೊಮಾಲಿಯಾದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ – 32 ಮಂದಿ ಸಾವು

    ಸೊಮಾಲಿಯಾದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ – 32 ಮಂದಿ ಸಾವು

    ಮೊಗಾದಿಶು: ಅಲ್‌-ಶಬಾಬ್‌ ಆತ್ಮಾಹುತಿ ಬಾಂಬರ್‌ ಮತ್ತು ಬಂದೂಕುಧಾರಿಗಳು ಸೊಮಾಲಿಯಾ (Somalia) ರಾಜಧಾನಿ ಮೊಗಾದಿಶುವಿನಲ್ಲಿ ನಡೆಸಿದ ದಾಳಿಯಲ್ಲಿ 32 ಮಂದಿ ಸಾವಿಗೀಡಾಗಿದ್ದಾರೆ.

    ಅಲ್‌ಖೈದಾ ಬೆಂಬಲಿತ ಜಿಹಾದಿಗಳು 17 ವರ್ಷಗಳಿಗೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಬೆಂಬಲಿತ ಫೆಡರಲ್ ಸರ್ಕಾರದ ವಿರುದ್ಧ ದಂಗೆ ನಡೆಸುತ್ತಿದ್ದಾರೆ. ಜನಪ್ರಿಯವಾಗಿರುವ ಲಿಡೋ ಬೀಚ್ ಪ್ರದೇಶವನ್ನು ಗುರಿಯಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ ಮೇಲಿನ ದಾಳಿಯ ಮಾಸ್ಟರ್‌ಮೈಂಡ್‌ ಮೊಹಮ್ಮದ್‌ ಡೀಫ್‌ ಹತ್ಯೆ

    ಈ ದಾಳಿಯಲ್ಲಿ 32 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ. ಸುಮಾರು 63 ಜನರು ಗಾಯಗೊಂಡಿದ್ದಾರೆ. ಅವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದಾರೆ ಎಂದು ಪೊಲೀಸ್ ವಕ್ತಾರ ಅಬ್ದಿಫತಾ ಆದಾನ್ ಹಸನ್‌ ತಿಳಿಸಿದ್ದಾರೆ.

    ದಾಳಿ ಶುಕ್ರವಾರ ತಡರಾತ್ರಿ ನಡೆದಿದ್ದು, ಅಲ್‌-ಶಬಾಬ್‌ ಹೊಣೆಗಾರಿಕೆ ಹೊತ್ತುಕೊಂಡಿದೆ. ಆತ್ಮಹತ್ಯಾ ಬಾಂಬರ್ ಸಾಧನವನ್ನು ಸ್ಫೋಟಿಸಿದಾಗ, ಬಂದೂಕುಧಾರಿಗಳು ಈ ಪ್ರದೇಶಕ್ಕೆ ನುಗ್ಗಿದರು ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಬರಿದಾಗ್ತಿದೆ ಆಮ್ಲಜನಕ.. ಜೀವಸಂಕುಲಕ್ಕೆ ಕಂಟಕ – ಭೂಮಿಯಲ್ಲಿ ಏನಾಗ್ತಿದೆ?

  • ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ – ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ

    ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ – ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ವಾಯುವ್ಯ ಪೇಶಾವರದ ಮಸೀದಿಯಲ್ಲಿ (Peshawar Mosque) ಆತ್ಮಾಹುತಿ ಬಾಂಬ್ ಸ್ಫೋಟಗೊಂಡ ಸ್ಥಳದಲ್ಲಿ ಶಂಕಿತ ಉಗ್ರನ ತುಂಡರಿಸಿದ ತಲೆ ಪತ್ತೆಯಾಗಿದೆ.

    ಈಗಾಗಲೇ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ (Suicide Bomb Blast) ಸಾವಿನ ಸಂಖ್ಯೆ 93ಕ್ಕೆ ಏರಿಕೆಯಾಗಿದ್ದು 221 ಮಂದಿ ತೀವ್ರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಉಳಿದ ಅವಶೇಷಗಳನ್ನು ಹೊರತೆಗೆಯಲು ರಕ್ಷಣಾ ಕಾರ್ಯ ಮುಂದುವರಿದಿದೆ. ಇದನ್ನೂ ಓದಿ: ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ – 89ಕ್ಕೇರಿದ ಸಾವಿನ ಸಂಖ್ಯೆ

    ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ - 89ಕ್ಕೇರಿದ ಸಾವಿನ ಸಂಖ್ಯೆ

    ಸ್ಫೋಟಕ್ಕೂ ಮುನ್ನ ಆತ್ಮಾಹುತಿ ದಾಳಿಕೋರ ಪೊಲೀಸರ ಸಾಲಿನಲ್ಲೂ ಇದ್ದ ಸಾಧ್ಯತೆಗಳಿವೆ. ಅಲ್ಲದೇ ಮಸೀದಿ ಪ್ರವೇಶಿಸಲು ಅಧಿಕೃತ ವಾಹನವನ್ನೇ ಬಳಸಿರಬಹುದು. ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಸ್ಫೋಟದ ನಿಖರ ಸ್ವರೂಪ ತಿಳಿಯಲಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

    ಪಾಕಿಸ್ತಾನಿ ತಾಲಿಬಾನ್ (Pakistani Taliban) ಎಂದು ಕರೆಯಲ್ಪಡುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ಸಂಘಟನೆಯು ಆತ್ಮಾಹುತಿ ದಾಳಿಯ ಹೊಣೆ ಹೊತ್ತಿದೆ. ಇದು ಕಳೆದ ಆಗಸ್ಟ್ನಲ್ಲಿ ಅಫ್ಘಾನಿಸ್ತಾನದಲ್ಲಿ ಹತ್ಯೆಗೀಡಾದ ಟಿಟಿಪಿ ಕಮಾಂಡರ್ ಉಮರ್ ಖಾಲಿದ್ ಖುರಾಸಾನಿಯ ಪ್ರತೀಕಾರದ ದಾಳಿಯ ಭಾಗವಾಗಿದೆ ಎಂದು ಹೇಳಿದೆ.

    ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ - 89ಕ್ಕೇರಿದ ಸಾವಿನ ಸಂಖ್ಯೆ

    2014ರಲ್ಲಿಯೂ ಪಾಕಿಸ್ತಾನಿ ತಾಲಿಬಾನ್ (Pakistani Taliban) ವಾಯುವ್ಯ ನಗರದ ಪೇಶಾವರ್‌ನಲ್ಲಿರುವ ಆರ್ಮಿ ಪಬ್ಲಿಕ್ ಸ್ಕೂಲ್ (ಎಪಿಎಸ್) ಮೇಲೆ ದಾಳಿ ಮಾಡಿ 131 ವಿದ್ಯಾರ್ಥಿಗಳು ಸೇರಿದಂತೆ 150 ಮಂದಿಯನ್ನು ಕೊಂದಿತ್ತು. ಇದನ್ನೂ ಓದಿ: ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್‌ ಸ್ಫೋಟ- 28 ಮಂದಿ ಸಾವು, 150 ಮಂದಿಗೆ ಗಾಯ

    ಏನಿದು ಘಟನೆ?
    ಪಾಕಿಸ್ತಾನದ ಪೇಶಾವರದ ಮಸೀದಿಯೊಂದರಲ್ಲಿ ಸೋಮವಾರ (ಜ.30) ಮಧ್ಯಾಹ್ನ 1:40 ಸುಮಾರಿಗೆ ಝುಹರ್ ನಮಾಜ್ ಬಳಿಕ ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸಿತ್ತು. ಸ್ಫೋಟದ ರಭಸಕ್ಕೆ ಮಸೀದಿಯ ಒಂದು ಬದಿ ಕುಸಿದುಬಿದ್ದಿತ್ತು.

    ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ - 89ಕ್ಕೇರಿದ ಸಾವಿನ ಸಂಖ್ಯೆ

    ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಸ್ಫೋಟವನ್ನು ಖಂಡಿಸಿದ್ದರು. ಅಲ್ಲದೇ ಈ ಸ್ಫೋಟ ಇಸ್ಲಾಂನೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಭಯೋತ್ಪಾದಕರು ಪಾಕಿಸ್ತಾನ ರಕ್ಷಿಸಲು ಕರ್ತವ್ಯ ನಿರ್ವಹಿಸುವವರನ್ನ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೇಗುಲ ಸ್ಫೋಟಿಸಲು ಬಂದಿದ್ದ ಬಾಂಬರ್ – ಸಾಹಿತ್ಯ ಓದಿಕೊಂಡೇ ISIS ಮೂಲಭೂತವಾದಿಯಾಗಿದ್ದ

    ದೇಗುಲ ಸ್ಫೋಟಿಸಲು ಬಂದಿದ್ದ ಬಾಂಬರ್ – ಸಾಹಿತ್ಯ ಓದಿಕೊಂಡೇ ISIS ಮೂಲಭೂತವಾದಿಯಾಗಿದ್ದ

    ಚೆನ್ನೈ: ತಮಿಳುನಾಡಿನ (Tamilnadu) 2ನೇ ಅತಿದೊಡ್ಡ ನಗರವಾಗಿರುವ ಕೊಯಮತ್ತೂರಿನಲ್ಲಿ ಅಕ್ಟೋಬರ್ 23ರಂದು ಸಂಭವಿಸಿದ್ದ ಕಾರು ಸ್ಫೋಟ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ಅಂದು ದೇಗುಲದ ಎದುರು ಕಾರು ಸ್ಫೋಟದಲ್ಲಿ (Car Blast) ಬಲಿಯಾದ 29 ವರ್ಷದ ಇಂಜಿನಿಯರಿಂಗ್ ಪದವೀಧರನು (Engineering Graduate) ಓರ್ವ ಆತ್ಮಾಹುತಿ ಬಾಂಬರ್ (Suicide Bomb Attack). ದೇಗುಲ ಹಾಗೂ ಅದರ ಸುತ್ತಲಿನ ಮನೆಗಳನ್ನು ಗುರಿಯಾಗಿಸಿಕೊಂಡೇ ದಾಳಿ ನಡೆಸಲು ಆತ ಬಂದಿದ್ದ ಎನ್ನುವ ಸ್ಫೋಟಕ ಮಾಹಿತಿ ತನಿಖೆ ವೇಳೆ ಬಹಿರಂಗಗೊಂಡಿದೆ. ಇದನ್ನೂ ಓದಿ: ಹ್ಯಾಲೋವೀನ್ ಹಬ್ಬದ ಸಂಭ್ರಮ – ಸಿಯೋಲ್‌ನಲ್ಲಿ ಕಾಲ್ತುಳಿಕ್ಕೆ 150 ಮಂದಿ ಬಲಿ

    ಮುಬಿನ್ ಪ್ಲ್ಯಾನ್ ಏನಿತ್ತು?
    ಕಾರು ಸ್ಫೋಟದಲ್ಲಿ ಬಲಿಯಾದ ಜಮೀಶಾ ಮುಬಿನ್ ನನ್ನು 2019ರಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಪ್ರಕರಣವೊಂದರ ಸಂಬಂಧ ವಿಚಾರಣೆಗೆ ಒಳಪಡಿಸಿತ್ತು. ಈತನೇ ಕೊಯಮತ್ತೂರಿನ ಕೊಟ್ಟೆಮೇಡುವಿನಲ್ಲಿರುವ ಸಂಗಮೇಶ್ವರ ದೇಗುಲದ ಬಳಿ ಕಾರು ಸೋಟಕ್ಕೆ ಅ.23ರ ನಸುಕಿನ ಜಾವ 4ಕ್ಕೆ ಬಲಿಯಾಗಿದ್ದ.

    ನೋಡ ನೋಡುತ್ತಿದ್ದಂತೆ ಸುಟ್ಟು ಕರಕಲಾಗಿದ್ದ. ಆದರೆ ಮುಬಿನ್ ಯೋಜಿಸಿದ್ದಂತೆ ಕಾರಿನಲ್ಲಿದ್ದ ಎರಡೂ ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರೆ ದೇಗುಲ ಹಾಗೂ ಅದರ ಸುತ್ತಲಿರುವ ಸಾಲು-ಸಾಲು ಮನೆಗಳಿಗೆ ಭಾರಿ ಹಾನಿಯಾಗಿಬಿಡುತ್ತಿತ್ತು. ಆದರೆ ಸ್ಫೋಟಕ್ಕೆ ಸಂಬಂಧಿಸಿದಂತೆ ಆತನಿಗೆ ಅನುಭವ ಇಲ್ಲದೇ ಇರುವ ಕಾರಣ ಘೋರ ದುರಂತ ತಪ್ಪಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸಿಗರೇಟು ಸೇದೋಕೆ ಕಾರು ನಿಲ್ಲಿಸಿದ ಮಾಲೀಕ – 75 ಲಕ್ಷ ಹಣದೊಂದಿಗೆ ಚಾಲಕ ಎಸ್ಕೇಪ್

    ಈವರೆಗೆ ಐಸಿಸ್ (ISIS) ಬಗ್ಗೆ ಸಹಾನುಭೂತಿ ಹೊಂದಿದ್ದ 6 ಮಂದಿಯನ್ನು ಬಂಧಿಸಲಾಗಿದೆ. ಅವರ ಹೇಳಿಕೆಯ ಪ್ರಕಾರ, ಆತ್ಮಾಹುತಿ ಬಾಂಬ್ ದಾಳಿ ನಡೆಸುವ ತನ್ನ ಯೋಜನೆ ಸಾಕಾರವಾದರೇ ದೇಗುಲದ ಸುತ್ತಲಿನ 50ರಿಂದ 100 ಮೀಟರ್ ಪ್ರದೇಶ ಸಂಪೂರ್ಣ ನಾಶವಾಗಲಿದೆ. ಅದರಲ್ಲಿ ದೇಗುಲ, ವಸತಿ ಕಟ್ಟಡಗಳೂ ಇರಲಿವೆ ಎಂದು ಮುಬಿನ್ ಬಲವಾಗಿ ನಂಬಿದ್ದ ಎನ್ನಲಾಗಿದೆ.

    ತನಿಖಾಧಿಕಾರಿಗಳ ಪ್ರಕಾರ, ಮುಬಿನ್ ಐಸಿಸ್ ಸಾಹಿತ್ಯ ಓದಿಕೊಂಡೇ ಮೂಲಭೂತವಾದಿಯಾಗಿದ್ದ. ಆತನಿಗೆ ಭಯೋತ್ಪಾದಕ ಕೃತ್ಯ ಕುರಿತಂತೆ ತರಬೇತಿಯಾಗಿರಲಿಲ್ಲ. ಹೀಗಾಗಿ ಇಂಟರ್ನೆಟ್‌ನಲ್ಲಿ ಬಾಂಬ್ ತಯಾರಿ ಕುರಿತು ಲಭ್ಯವಿರುವ ಮಾಹಿತಿಯನ್ನು ಓದಿ ಸ್ಫೋಟಕ ನಿರ್ವಹಣೆ ಬಗ್ಗೆ ತಿಳಿದುಕೊಂಡಿದ್ದ ಎಂದು ಹೇಳಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಿಜೆಪಿ ನಾಯಕ ಅಣ್ಣಾಮಲೈ (K Annamalai) ಪೊಲೀಸರು ಇದನ್ನು ಆತ್ಮಾಹುತಿ ಬಾಂಬ್ ದಾಳಿ ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪಾಕ್ ಆಸ್ಪತ್ರೆಯಲ್ಲಿ ಮಹಿಳಾ ಬಾಂಬರ್ ದಾಳಿಗೆ 6 ಬಲಿ

    ಪಾಕ್ ಆಸ್ಪತ್ರೆಯಲ್ಲಿ ಮಹಿಳಾ ಬಾಂಬರ್ ದಾಳಿಗೆ 6 ಬಲಿ

    ಇಸ್ಲಾಮಾಬಾದ್: ಪಾಕಿಸ್ತಾನದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಎರಡು ಕಡೆ ಭಯೋತ್ಪಾದಕ ದಾಳಿ ನಡೆದಿದ್ದು, ಎಂಟು ಮಂದಿ ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ.

    ಭಾನುವಾರ ಬೆಳಗ್ಗೆ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಮೊದಲು ದಾಳಿ ನಡೆದಿದ್ದು, ಜಿಲ್ಲೆಯ ಪೊಲೀಸ್ ಚೆಕ್‍ಪೋಸ್ಟ್ ಗೆ ಬೈಕಿನಲ್ಲಿ ಬಂದ ಕೆಲವು ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದರು.

    ನಂತರ ಈ ಪೊಲೀಸ್ ಮೃತದೇಹವನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ. ಈ ಸಮಯದಲ್ಲಿ ಆಸ್ಪತ್ರೆಯ ಮುಖ್ಯ ದ್ವಾರಕ್ಕೆ ಬಂದ ಮಹಿಳಾ ಆತ್ಮಾಹುತಿ ಬಾಂಬರ್ ದಾಳಿ ಮಾಡಿದ್ದಾಳೆ. ಈ ದಾಳಿಯಲ್ಲಿ ಮತ್ತೆ ಇಬ್ಬರು ಪೊಲೀಸರು ಮತ್ತು ಆಸ್ಪತ್ರೆಯಲ್ಲಿದ್ದ ರೋಗಿಗಳು ಮತ್ತು ಸಿಬ್ಬಂದಿಗಳು ಸೇರಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಸಲೀಮ್ ರಿಯಾಜ್ ಹೇಳಿದ್ದಾರೆ.

    ಈ ಬಾಂಬ್ ದಾಳಿಗೆ ಸುಮಾರು ಏಳು ಕಿಲೋಗ್ರಾಂಗಳಷ್ಟು ಸ್ಫೋಟಕಗಳನ್ನು ಬಳಸಲಾಗಿದೆ ಮತ್ತು ಆತ್ಮಾಹುತಿ ಬಾಂಬರ್ ಒಬ್ಬ ಮಹಿಳೆ ಎಂದು ತಿಳಿದು ಬಂದಿದೆ. ನಮಗೆ ಅವಳ ತಲೆಬುರುಡೆ ಮತ್ತು ಕಾಲುಗಳನ್ನು ಸಿಕ್ಕಿವೆ ಎಂದು ರಿಯಾಜ್ ಹೇಳಿದ್ದಾರೆ.

    ಆತ್ಮಾಹುತಿ ಬಾಂಬ್ ಸ್ಫೋಟದ ನಂತರ ರಕ್ಷಣಾ ತಂಡಗಳು ಮೃತ ದೇಹಗಳನ್ನು ಸ್ಥಳಾಂತರ ಮಾಡಿದ್ದು, ಗಾಯಗೊಂಡವರನ್ನು ಆಸ್ಪತ್ರೆಯ ತುರ್ತು ವಿಭಾಗಕ್ಕೆ ವರ್ಗಾಯಿಸಲಾಗಿದೆ. ಗಾಯಗೊಂಡರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಬಹುದು ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇನ್ನೂ ಈ ದಾಳಿಯ ಹೊಣೆಯನ್ನು ತೆಹ್ರೀಕ್ ಇ-ತಾಲಿಬಾನ್ ಎಂಬ ಉಗ್ರ ಸಂಘಟನೆ ಹೊತ್ತುಗೊಂಡಿದ್ದು, ಈ ಗುಂಪಿನ ನಾಯಕ ಒಮರ್ ಖೋರಸಾನಿ ಎಂಬ ಉಗ್ರ ಪತ್ರಕರ್ತರಿಗೆ ಕಳುಹಿಸಿದ ಸಂಕ್ಷಿಪ್ತ ಸಂದೇಶದಲ್ಲಿ ಈ ದಾಳಿಯನ್ನು ನಾವೇ ಮಾಡಿದ್ದು ಎಂದು ಖಚಿತಪಡಿಸಿದ್ದಾನೆ.

    ತೆಹ್ರೀಕ್ ಇ-ತಾಲಿಬಾನ್ ಎಂಬ ಉಗ್ರ ಸಂಘಟನೆ 2007 ರಲ್ಲಿ ರಚನೆಯಾದಾಗಿದ್ದು, ಪಾಕಿಸ್ತಾನ ಮತ್ತು ಅದರ ಮಿತ್ರ ರಾಷ್ಟ್ರಗಳೊಂದಿಗೆ ಹೋರಾಡುತ್ತಿದೆ. ಈ ಸಂಘಟನೆ ಇಸ್ಲಾಮಿಕ್ ಕಾನೂನುಗಳನ್ನು ಕಟ್ಟುನಿಟ್ಟಾಗಿ ದೇಶದ ಮೇಲೆ ಹೇರುವ ಗುರಿಯನ್ನು ಹೊಂದಿದೆ.

  • ಕಾಬೂಲ್‍ನಲ್ಲಿ ಆತ್ಮಾಹುತಿ ಕಾರ್ ಬಾಂಬ್ ದಾಳಿ – 24 ಸಾವು, 40 ಮಂದಿಗೆ ಗಾಯ

    ಕಾಬೂಲ್‍ನಲ್ಲಿ ಆತ್ಮಾಹುತಿ ಕಾರ್ ಬಾಂಬ್ ದಾಳಿ – 24 ಸಾವು, 40 ಮಂದಿಗೆ ಗಾಯ

    ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‍ನಲ್ಲಿ ಇಂದು ಬೆಳಿಗ್ಗೆ ಆತ್ಮಾಹುತಿ ದಾಳಿಕೋರನೊಬ್ಬ ಕಾರ್‍ನಲ್ಲಿ ಬಾಂಬ್ ಸ್ಫೋಟಿಸಿದ್ದಾನೆ. ಘಟನೆಯಲ್ಲಿ 24 ಮಂದಿ ಸಾವನ್ನಪ್ಪಿದ್ದು 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗೋ ಸಾಧ್ಯತೆಯಿದೆ ಎಂದು ಇಲ್ಲಿನ ಇಂಟೀರಿಯರ್ ಮಿನಿಸ್ಟ್ರಿ ವಕ್ತಾರರು ತಿಳಿಸಿದ್ದಾರೆ.

    ಇಲ್ಲಿನ ಉಪ ಸರ್ಕಾರಿ ಮುಖ್ಯ ಕಾರ್ಯನಿರ್ವಾಹಕ ಮೊಹಮ್ಮದ್ ಮೊಹಾಖಿಕ್ ಅವರ ಮನೆಯ ಬಳಿಯೇ ದಾಳಿ ನಡೆದಿದೆ. ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಈ ಪ್ರದೇಶದಲ್ಲಿ ಪ್ರಮುಖವಾಗಿ ಶಿಯೈಟ್ ಹಜಾರಾ ಸಮುದಾಯದವರು ವಾಸವಿದ್ದಾರೆ. ಆದ್ರೆ ದಾಳಿಯ ಉದ್ದೇಶ ಏನೆಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಗಣಿ ಇಲಾಖೆಗೆ ಸೇರಿದ ಚಿಕ್ಕ ಬಸ್‍ವೊಂದನ್ನು ಧ್ವಂಸ ಮಾಡಲಾಗಿದೆ ಎಂದು ವರದಿಯಾಗಿದೆ.

    ಎರಡು ವಾರಗಳ ಹಿಂದೆ ಇಲ್ಲಿನ ಮಸೀದಿಯೊಂದರಲ್ಲಿ ದಾಳಿ ನಡೆದು 4 ಜನ ಹತ್ಯೆಯಾಗಿದ್ದರು. ಐಸಿಸ್ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಇದೀಗ ಎರಡು ವಾರಗಳ ನಂತರ ಮತ್ತೆ ಬಾಂಬ್ ದಾಳಿ ನಡೆದಿದೆ.