Tag: ಆತ್ಮಾಹುತಿ ಬಾಂಬ್

  • ಅಫ್ಘಾನಿಸ್ತಾನದ ವಿವಾಹದಲ್ಲಿ ಆತ್ಮಾಹುತಿ ಬಾಂಬ್ – 63 ಸಾವು, 182 ಮಂದಿಗೆ ಗಾಯ

    ಅಫ್ಘಾನಿಸ್ತಾನದ ವಿವಾಹದಲ್ಲಿ ಆತ್ಮಾಹುತಿ ಬಾಂಬ್ – 63 ಸಾವು, 182 ಮಂದಿಗೆ ಗಾಯ

    ಕಾಬೂಲ್: ಅಫ್ಘಾನಿಸ್ತಾನದ ವಿವಾಹ ಮಂಟಪವೊಂದರಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, 63 ಮಂದಿ ಸಾವನ್ನಪ್ಪಿ ಸುಮಾರು 182 ಜನರು ಗಾಯಗೊಂಡಿದ್ದಾರೆ.

    ಈ ಘಟನೆ ಶನಿವಾರ ರಾತ್ರಿ ಅಫ್ಘಾನ್ ರಾಜಧಾನಿ ಕಾಬೂಲ್‍ನಲ್ಲಿ ನಡೆದಿದ್ದು, ತುಂಬಾ ಜನ ಸೇರಿದ್ದ ವಿವಾಹವೊಂದರ ಆರತಕ್ಷತೆಯ ಸಮಯದಲ್ಲಿ ಈ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಈ ದಾಳಿಯ ಹೊಣೆಯನ್ನು ತಾಲಿಬಾನ್ ಉಗ್ರಸಂಘಟನೆ ನಿರಾಕರಿಸಿದ್ದು, ಇದುವರಿಗೂ ಈ ದಾಳಿಯ ಹೊಣೆಯನ್ನು ಯಾವ ಉಗ್ರ ಸಂಘಟನೆಯು ಹೊತ್ತುಕೊಂಡಿಲ್ಲ.

    ಹತ್ತು ದಿನಗಳ ಹಿಂದೆ, ಪಶ್ಚಿಮ ಕಾಬೂಲ್‍ನಲ್ಲಿ ಅಫ್ಘಾನಿಸ್ತಾನದ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ತಾಲಿಬಾನ್ ಉಗ್ರಸಂಘಟನೆ ನಡೆಸಿದ ಕಾರು ಬಾಂಬ್ ದಾಳಿಯಲ್ಲಿ 14 ಮಂದಿ ಸಾವನ್ನಪ್ಪಿ, 145 ಮಂದಿ ಗಾಯಗೊಂಡಿದ್ದರು.

    ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾದ ಚಿತ್ರಗಳಲ್ಲಿ ವಿವಾಹ ಮಂಟಪದಲ್ಲಿ ಉರುಳಿಬಿದ್ದ ಟೇಬಲ್ ಮತ್ತು ಕುರ್ಚಿಗಳ ನಡುವೆ ಬಾಂಬ್ ಸ್ಫೋಟದ ತೀವ್ರತೆ ಛಿದ್ರವಾಗಿರುವ ಮೃತದೇಹಗಳು ಕಂಡು ಬಂದಿವೆ. ಈ ಅತ್ಮಾಹುತಿ ಬಾಂಬ್ ದಾಳಿಯನ್ನು ಪುರುಷ ವ್ಯಕ್ತಿಯೊಬ್ಬ ಮಾಡಿದ್ದಾನೆ ಎಂದು ಕಾಬೂಲ್‍ನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್ ಉಗ್ರಸಂಘಟನೆಗಳು ಸೇರಿದಂತೆ ಸುನ್ನಿ ಮುಸ್ಲಿಂ ಸಮುದಾಯದ ಸಶಸ್ತ್ರ ಗುಂಪುಗಳು ಹಲವಾರು ವರ್ಷಗಳಿಂದ ಅಫ್ಘಾನಿಸ್ತಾನ ಮತ್ತು ನೆರೆಯ ಪಾಕಿಸ್ತಾನದಲ್ಲಿರುವ ಶಿಯಾ ಹಜಾರಾ ಅಲ್ಪಸಂಖ್ಯಾತರ ಮೇಲೆ ಪದೇ ಪದೇ ಈ ರೀತಿಯ ದಾಳಿ ನಡೆಸುತ್ತಿವೆ.

    ಈ ದಾಳಿಯ ರೀತಿಯಲ್ಲೇ ಪಾಕಿಸ್ತಾನದ ಮಸೀದಿಯ ಮೇಲೆ ಕಳೆದ ಶುಕ್ರವಾರ ನಡೆದ ಬಾಂಬ್ ದಾಳಿಯಲ್ಲಿ ತಾಲಿಬಾನ್ ನಾಯಕ ಹೈಬತುಲ್ಲಾ ಅಖುಂಡ್ಜಾಡಾನ ಸಹೋದರ ಸಾವನ್ನಪ್ಪಿದ್ದ. ಅವನ ಜೊತೆಗೆ ನಾಲ್ಕು ಜನರು ಸಾವನ್ನಪ್ಪಿದ್ದರು ಮತ್ತು ಸುಮಾರು 20 ಮಂದಿ ಗಾಯಗೊಂಡಿದ್ದರು. ಆದರೆ ಈ ಸ್ಫೋಟದ ಜವಾಬ್ದಾರಿಯನ್ನು ಕೂಡ ಯಾವ ಉಗ್ರ ಸಂಘಟನೆಯು ವಹಿಸಿಕೊಂಡಿಲ್ಲ.

    https://twitter.com/MuslimShirzad/status/1162804228353662976

  • ಶ್ರೀಲಂಕಾ ಪೊಲೀಸರಿಂದ ಭಾರತದ ಪತ್ರಕರ್ತನ ಬಂಧನ

    ಶ್ರೀಲಂಕಾ ಪೊಲೀಸರಿಂದ ಭಾರತದ ಪತ್ರಕರ್ತನ ಬಂಧನ

    ಕೊಲಂಬೊ: ಈಸ್ಟರ್ ಭಾನುವಾರದ ಸರಣಿ ಬಾಂಬ್ ಸ್ಫೋಟದ ನಂತರ ಶ್ರೀಲಂಕಾ ಸರ್ಕಾರ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಈ ಸಮಯದಲ್ಲಿ ಅನಧಿಕೃತವಾಗಿ ಶಾಲೆಯೊಂದಕ್ಕೆ ಪ್ರವೇಶಿಸಲು ಯತ್ನಿಸಿದ ಭಾರತ ಮೂಲದ ಪತ್ರಕರ್ತನನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಪತ್ರಕರ್ತನನ್ನು ಭಾರತದ ದೆಹಲಿ ಮೂಲದ ಸಿದ್ದಿಕ್ ಅಹ್ಮದ್ ಡ್ಯಾನಿಶ್ ಎಂದು ಗುರುತಿಸಲಾಗಿದೆ. ಇವರು ನ್ಯೂಸ್ ಏಜೆನ್ಸಿಯೊಂದರಲ್ಲಿ ಛಾಯಾಚಿತ್ರ ಗ್ರಾಹಕರಾಗಿದ್ದಾರೆ. ಇದನ್ನು ಓದಿ ಸರಣಿ ಸ್ಫೋಟದ ಬಳಿಕ ಶ್ರೀಲಂಕಾದಲ್ಲಿ ಬುರ್ಕಾ ನಿಷೇಧ

    ಸಿದ್ದಿಕ್ ಅಹ್ಮದ್ ಏಪ್ರಿಲ್ 21 ರಂದು ನಡೆದ ಸರಣಿ ಬಾಂಬ್ ಸ್ಫೋಟದ ನಂತರ ಶ್ರೀಲಂಕಾದಲ್ಲಿ ಆದ ಪರಿಣಾಮದ ಬಗ್ಗೆ ವರದಿ ಮಾಡಲು ಹೋಗಿದ್ದರು. ಸೇಂಟ್ ಸೆಬಾಸ್ಟಿಯಾನ್ ಚರ್ಚ್‍ನಲ್ಲಿ ಬಾಂಬ್ ಬ್ಲಾಸ್ಟ್ ಆದಾಗ ಅಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆಯಲು ಶಾಲೆಗೆ ಹೋಗಿದ್ದಾರೆ. ಆ ಶಾಲೆಗೆ ಹೋಗಲು ಅನುಮತಿ ಇಲ್ಲದಿದ್ದರೂ ಅನಧಿಕೃತವಾಗಿ ಶಾಲೆಗೆ ಪ್ರವೇಶ ಬಯಸಿದ ಕಾರಣ ಶ್ರೀಲಂಕಾ ಪೊಲೀಸರು ಸಿದ್ದಿಕ್ ನನ್ನು ಬಂಧಿಸಿದ್ದಾರೆ. ಇದನ್ನು ಓದಿ  ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ -ಸಿಲಿಕಾನ್ ಸಿಟಿಯಲ್ಲಿ ತೀವ್ರ ಕಟ್ಟೆಚ್ಚರ!

    ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದ ದಿನ ನಡೆದ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಸುಮಾರು 250 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, 500 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

  • ಹುತಾತ್ಮ ಯೋಧ ಗುರು ಮನೆಗೆ ತೆರಳಿ ಕುಟುಂಬಸ್ಥರಿಗೆ ಜಿಲ್ಲಾಧಿಕಾರಿ ಸಾಂತ್ವಾನ

    ಹುತಾತ್ಮ ಯೋಧ ಗುರು ಮನೆಗೆ ತೆರಳಿ ಕುಟುಂಬಸ್ಥರಿಗೆ ಜಿಲ್ಲಾಧಿಕಾರಿ ಸಾಂತ್ವಾನ

    ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ ದೊಡ್ಡಿ ಸಮೀಪದ ಗುಡಿಕೆರೆ ಕಾಲೋನಿಯ ಯೋಧ ಗುರು ಎಚ್(33) ಹುತಾತ್ಮರಾಗಿದ್ದು, ಜಿಲ್ಲಾಧಿಕಾರಿ ಎನ್ ಮಂಜುಶ್ರೀ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರು ಕುಟುಂಬಕ್ಕೆ ಜಿಲ್ಲಾಡಳಿತದಿಂದ ಯಾವುದೇ ರೀತಿಯ ನೆರವಿಗೆ ಸಿದ್ಧವಿದೆ. ಕುಟುಂಬಸ್ಥರು ಧೈರ್ಯವಾಗಿರಬೇಕು ಹಾಗೆಯೇ ಹೆಚಚ್ಚಿನ ಆತಂಕಕ್ಕೆ ಒಳಗಾಗಬಾರದು ಎಂದು ಅವರು ಮನವಿ ಮಾಡಿಕೊಂಡರು.

    ಮೃತರ ಶರೀರ ಇಂದು ಅಥವಾ ನಾಳೆ ಸ್ವ-ಗ್ರಾಮಕ್ಕೆ ವಾಪಸ್ಸಾಗಲಿದೆ. ಆದ್ರೆ ಇನ್ನೂ ನಾವು ಅಧಿಕೃತ ಮಾಹಿತಿಗಾಗಿ ಕಾಯುತ್ತಿದ್ದೇವೆ. ಅದು ಬಂದ ನಂತರ ಇದೇ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸುವುದಾಗಿ ಅವರು ಹೇಳಿದರು.

    ಈಗಾಗಲೇ ನಾನು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಅಂತ್ಯಕ್ರಿಯೆಗಾಗಿ ತಾಲೂಕು ಆಡಳಿತದಿಂದ ಎರಡು ಜಾಗವನ್ನು ಗುರುತಿಸಿದ್ದೇವೆ. ಎರಡರಲ್ಲಿ ಯಾವುದು ಸೂಕ್ತ ಎನ್ನುವುದನ್ನು ನೋಡಿ ಅಂತಿಮ ಮಾಡುತ್ತೇವೆ. ಗುರು ಹುತಾತ್ಮರಾದ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಆದ್ರೆ ದೆಹಲಿಯಲ್ಲಿರುವ ಸಿಆರ್ ಪಿ ಎಫ್ ಕಚೇರಿಗೆ ಕರೆ ಮಾಡಿ ಕೇಳಿದಾಗ ಸಾವಾಗಿರುವುದು ನಿಶ್ಚಿತ ಎಂಬ ಮಾಹಿತಿ ಲಭಿಸಿದೆ ಎಂದು ಅವರು ತಿಳಿಸಿದ್ರು.

    ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅದಿಲ್ ದರ್ ಎಂಬ ಉಗ್ರ ಸ್ಕಾರ್ಪಿಯೋ ಕಾರಿನಲ್ಲಿ ಸ್ಫೋಟಕ ತುಂಬಿ ಆತ್ಮಾಹುತಿ ದಾಳಿ ಮಾಡಿದ್ದನು. ಈ ದಾಳಿಯಲ್ಲಿ ಇದೂವರೆಗೆ 44 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ.

    https://www.youtube.com/watch?v=Cagqto-A9E0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುಲ್ವಾಮಾದಲ್ಲಿ ದಾಳಿ ನಡೆಯೋ ಬಗ್ಗೆ ಮೊದ್ಲೇ ಸಿಕ್ಕಿತ್ತಾ ಸುಳಿವು..?

    ಪುಲ್ವಾಮಾದಲ್ಲಿ ದಾಳಿ ನಡೆಯೋ ಬಗ್ಗೆ ಮೊದ್ಲೇ ಸಿಕ್ಕಿತ್ತಾ ಸುಳಿವು..?

    ಪುಲ್ವಾಮಾ: ಜಮ್ಮು ಕಾಶ್ಮೀರದ ಆವಂತಿಪುರದಲ್ಲಿ ಉಗ್ರ ನಡೆಸಿದ ಆತ್ಮಾಹುತಿ ದಾಳಿಯ ಬಗ್ಗೆ ಭಾರತಕ್ಕೆ ಮೊದಲೇ ಸುಳಿವು ಸಿಕ್ಕಿದೆಯಾ ಎನ್ನುವ ಚರ್ಚೆಯೊಂದು ಇದೀಗ ಎದ್ದಿದೆ.

    ಪುಲ್ವಾಮಾದಲ್ಲಿ ನಡೆದ ದಾಳಿ ಕಳೆದ 20 ವರ್ಷಗಳಲ್ಲಿಯೇ ನಡೆದ ಅತೀ ದೊಡ್ಡ ದಾಳಿಯಾಗಿದೆ. 2001ರಲ್ಲಿ ಶ್ರೀನಗರದಲ್ಲಿರುವ ಸಚಿವಾಲಯದ ಮುಂಭಾಗ ನಡೆಸಿದ ಬಾಂಬ್ ದಾಳಿಯಲ್ಲಿ 38 ಮಂದಿ ಮೃತಪಟ್ಟು, 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಗುರುವಾರ ಪುಲ್ವಾಮಾದಲ್ಲಿ ನಡೆದ ದಾಳಿಯ ಬಗ್ಗೆ ಭಾರತಕ್ಕೆ ಮೊದಲೇ ಸುಳಿವು ಸಿಕ್ಕಿತ್ತು ಅನ್ನೋ ಚರ್ಚೆ ನಡೀತಿದೆ. ಇದನ್ನೂ ಓದಿ: ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ

    ಭಾರತಕ್ಕಿತ್ತಾ ದಾಳಿಯ ಸುಳಿವು..?
    ಫೆ. 5ರಂದು ಪಾಕಿಸ್ತಾನದ ಕರಾಚಿಯಲ್ಲಿ ಜೈಶ್ ಎ ಮೊಹ್ಮದ್ ಸಂಘಟನೆಯ ಜಾಥಾ ನಡೆದಿತ್ತು. ಇದರಲ್ಲಿ ಉಗ್ರ ಮಸೂದ್ ಅಜರ್ ಸಹೋದರ ಅಬ್ದುಲ್ ರವೂಫ್ ಅಜರ್ ಕೂಡಾ ಭಾಗಿಯಾಗಿದ್ದನು. ಈ ವೇಳೆ ಭಾರತದಲ್ಲಿ ದಾಳಿ ನಡೆಸಲು 7 ಉಗ್ರರ ತಂಡಗಳನ್ನು ಕಳುಹಿಸೋದಾಗಿ ಘೋಷಣೆ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: 2 ನಿಮಿಷ ಬಿಟ್ಟು ಕರೆ ಮಾಡ್ತೀನಿ ಅಂದೋನು ಮಾಡ್ಲೇ ಇಲ್ಲ- ಗುರು ಗೆಳೆಯ ಯೋಧ ಕಣ್ಣೀರು

    ರವೂಫ್ ಘೋಷಣೆಯ ಬೆನ್ನಲ್ಲೇ ಅಲರ್ಟ್ ಆಗಿದ್ದ ಭಾರತದ ಗುಪ್ತಚರ ಇಲಾಖೆ ಭಾರತದಲ್ಲಿ ಜೈಷ್ ಎ ಮೊಹಮ್ಮದ್, ಲಷ್ಕರ್ ಎ ತಯ್ಬಾ ದಾಳಿ ಬಗ್ಗೆ ಸುಳಿವು ನೀಡಿತ್ತು. ವಾಹನಗಳ ಮೂಲಕವೇ ದಾಳಿ ನಡೆಸೋದಾಗಿ ಉಗ್ರ ಸಂಘಟನೆಯ ದೂರವಾಣಿ ಕರೆಗಳ ಮೂಲಕ ಭದ್ರತಾ ಪಡೆಗಳಿಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಮಂಡ್ಯದ ಯೋಧ ಹುತಾತ್ಮ – ಫೆ.10ಕ್ಕೆ ರಜೆ ಮುಗಿಸಿ ಊರಿಂದ ಹೊರಟಿದ್ದರು


    ಇತ್ತೀಚಿನ ದಿನಗಳಲ್ಲಿ 2 ಸಂಘಟನೆಗಳು ಒಟ್ಟಾಗಿ ಕಾರ್ಯಚರಣೆ ನಡೆಸುತ್ತಿದ್ದು, ಇದೀಗ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಆತ್ಮಾಹುತಿ ದಾಳಿಯ ಪ್ಲಾನ್ ಮಾಡಿ 44 ಮಂದಿ ಭಾರತದ ಅಮಾಯಕ ಯೋಧರನ್ನು ಬಲಿತೆಗೆದುಕೊಂಡಿದೆ.

    https://www.youtube.com/watch?v=5JqTWRx0JWA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2 ನಿಮಿಷ ಬಿಟ್ಟು ಕರೆ ಮಾಡ್ತೀನಿ ಅಂದೋನು ಮಾಡ್ಲೇ ಇಲ್ಲ- ಗುರು ಗೆಳೆಯ ಯೋಧ ಕಣ್ಣೀರು

    2 ನಿಮಿಷ ಬಿಟ್ಟು ಕರೆ ಮಾಡ್ತೀನಿ ಅಂದೋನು ಮಾಡ್ಲೇ ಇಲ್ಲ- ಗುರು ಗೆಳೆಯ ಯೋಧ ಕಣ್ಣೀರು

    ಮಂಡ್ಯ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಮಂಡ್ಯದ ಯೋಧ ಗುರು ಹುತಾತ್ಮರಾಗಿದ್ದು, ಇದೀಗ ಜಿಲ್ಲೆಯಲ್ಲಿ ನೀರವ ಮೌನ ಆವರಿಸಿದೆ. ಗುರು ಪೋಷಕರು, ಪತ್ನಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ರೆ, ಇತ್ತ ಗೆಳೆಯರು ಕಣ್ಣೀರು ಹಾಕುತ್ತಿದ್ದಾರೆ.

    ಗುರು ಗೆಳೆಯರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಉಗ್ರ ಕೃತ್ಯವನ್ನು ಖಂಡಿಸಿ, ಪ್ರತೀಕಾರ ತೀರಿಸಿಕೊಳ್ಳಲೇ ಬೇಕು ಎಂದು ಆಗ್ರಹಿಸಿದ್ದಾರೆ. ಗೆಳೆಯರಾಗಿದ್ದ ಯೋಧರೊಬ್ಬರು ಮಾತನಾಡಿ, ಗುರು ಭಾಯ್ ಓರ್ವ ಯೋಧ. ಅವನು ತುಂಬಾ ನಿಯತ್ತಿನಿಂದ ಕೆಲಸ ಮಾಡುತ್ತಿದ್ದನು. ಒಳ್ಳೆಯ ವ್ಯಕ್ತಿತ್ವ ಹೊಂದಿದ್ದನು. ಆದ್ರೆ ಉಗ್ರರು ಈ ರೀತಿ ಮಾಡಿರುವುದು ತುಂಬಾನೇ ನೋವಾಗಿದೆ. ನಾನು ಕೂಡ ಓರ್ವ ಯೋಧನಾಗಿದ್ದೇನೆ. ಉಗ್ರರು ಈ ರೀತಿ ಮಾಡಿದ್ದಕ್ಕೆ ತಕ್ಕ ಉತ್ತರ ಕೊಡುತ್ತೇವೆ. ಬುಧವಾರವಷ್ಟೇ ಗುರು ನನ್ನ ಜೊತೆ ಫೋನಿನಲ್ಲಿ ಮಾತನಾಡಿ, ಡ್ಯೂಟಿಗೆ ಹೋಗ್ತಾ ಇದ್ದೀನಿ. 2 ನಿಮಿಷದ ಬಳಿಕ ಕರೆ ಮಾಡ್ತೀನಿ ಎಂದು ಹೇಳಿದ್ದನು. ಆದ್ರೆ ಮತ್ತೆ ಆತನ ಕರೆ ಬಂದೇ ಇಲ್ಲ ಎಂದು ಗುರವಿನ ಗೆಳೆಯ ಯೋದರೊಬ್ಬರು ಬೇಸರ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ

    ಒಂದು ವಾರದ ಹಿಂದೆಯಷ್ಟೇ ಗುರು ಊರಿಗೆ ಬಂದು ಮೂರು ದಿನಗಳ ಹಿಂದೆಯಷ್ಟೇ ತೆರಳಿ ಮತ್ತೆ ಕೆಲಸಕ್ಕೆ ಸೇರಿಕೊಂಡಿದ್ದರು. ಆದ್ರೆ ಇದೀಗ ಅವರು ಉಗ್ರನ ಕೃತ್ಯದಿಂದ ಹುತಾತ್ಮರಾಗಿದ್ದಾರೆ. ಈ ವಿಚಾರ ಸ್ನೇಹಿತರ ಬಳಗಕ್ಕೆ ತುಂಬಾ ಬೇಸರವಾಗುತ್ತದೆ. ಇದಕ್ಕೆ ಪ್ರತಿಫಲವಾಗಿ ನಮ್ಮ ಸರ್ಕಾರ ಸೇಡು ತೀರಿಸಿಕೊಳ್ಳಲೇ ಬೇಕು ಎಂದು ಗೆಳೆಯರೊಬ್ಬರು ಒತ್ತಾಯಿಸಿದ್ರು. ಇದನ್ನೂ ಓದಿ: 44 ಯೋಧರನ್ನು ಬಲಿ ಪಡೆದುಕೊಂಡ ಉಗ್ರನೂ ಭಾರತೀಯ..!

    ನನ್ನ ಗೆಳೆಯ ನಂದೀಶ್ ಎಂಬವರು ಜಾರ್ಖಂಡ್ ನಲ್ಲಿ ಸಿಆರ್‍ಪಿಎಫ್ ಯೋಧರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ನನಗೆ ಕರೆ ಮಾಡಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪಟ್ಟಿಯಲ್ಲಿ ಗುರು ಹೆಸರಿದೆ ಎಂಬ ಮಾಹಿತಿ ನೀಡಿದ್ರು. ಆದ್ರೆ ಈ ಬಗ್ಗೆ ಇನ್ನೂ ನಿಖರ ಮಾಹಿತಿಯಿಲ್ಲ. ಹೀಗಾಗಿ ªಅವರ ಮನೆಯವರಿಗೆ ವಿಷಯ ತಿಳಿಸಬೇಡ ಎಂದಿದ್ದರು. ಇನ್ನೊಬ್ಬರು ಚೆಲುರಾಜು ಎಂಬವರು ಕೂಡ ಅಲ್ಲೇ ಕೆಲಸ ನಿರ್ವಹಿಸುತ್ತಿಒದ್ದರು. ಅವರು ಕೂಡ 12 ಗಂಟೆ ಸುಮಾರಿಗೆ ಅದೇ ರಸ್ತೆಯಲ್ಲಿ ಪಾಸ್ ಆಗಿದ್ದರು. ಅವರು ಕೂಡ ಗುರು ಹುತಾತ್ಮರಾಗಿದ್ದಾರೆ ಎಂದು ಹೇಳಿದ್ರು ಎಂದು ಮತ್ತೋರ್ವ ಗೆಳೆಯ ಕಣ್ಣೀರು ಹಾಕಿದ್ರು. ಇದನ್ನೂ ಓದಿ: ಪುಲ್ವಾಮಾದಲ್ಲಿ ಮಂಡ್ಯದ ಯೋಧ ಹುತಾತ್ಮ – ಫೆ.10ಕ್ಕೆ ರಜೆ ಮುಗಿಸಿ ಊರಿಂದ ಹೊರಟಿದ್ದರು

    https://www.youtube.com/watch?v=5JqTWRx0JWA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 44 ಯೋಧರು ಹುತಾತ್ಮ- ಸಾಮಾಜಿಕ ಜಾಲತಾಣದಲ್ಲಿ ದುಷ್ಟರ ಸಂಭ್ರಮ

    44 ಯೋಧರು ಹುತಾತ್ಮ- ಸಾಮಾಜಿಕ ಜಾಲತಾಣದಲ್ಲಿ ದುಷ್ಟರ ಸಂಭ್ರಮ

    ಪುಲ್ವಾಮ: ಭಾರತಮಾತೆಗೆ ಗುರುವಾರ ಕರಾಳ ದಿನವಾಗಿದೆ. ಆದ್ರೆ ಕೆಲ ದುಷ್ಟಬುದ್ಧಿಯ ಉಗ್ರ ಬೆಂಬಲಿಗರು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಈ ದುರಂತವನ್ನು ಸಂಭ್ರಮಿಸಿದ್ದಾರೆ.

    ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸಹಿತ ಉಗ್ರಬೆಂಬಲಿಗ ರಾಷ್ಟ್ರಗಳ ಮಂದಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾದ ಭಾರತೀಯ ಯೋಧರ ಹತ್ಯೆ ಸುದ್ದಿಯನ್ನು ಸಂಭ್ರಮಿಸಿದ್ದಾರೆ.

    ಭಾರತಕ್ಕೆ ತಕ್ಕ ಶಾಸ್ತಿಯಾಗಿದೆ. ಹ್ಯಾಪಿ ವ್ಯಾಲೆಂಟೈನ್ಸ್ ಡೇ. ಈಗ ಸಾವಿನ ಸಂಖ್ಯೆ 40 ಆಗಿದ್ದು, ಇನ್ನೂ ಮುಂದುವರಿಯಲಿದೆ. ಕಾಶ್ಮೀರಕ್ಕೆ ಇಂದು ಸಂಭ್ರಮದ ದಿನ. ಹಿಂದೂಗಳಿಗೆ ದೀಪಾವಳಿಯ ಶುಭಾಶಯಗಳು ಎಂದೆಲ್ಲಾ ಸಂದೇಶ ಹರಿಬಿಟ್ಟಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪುರದಲ್ಲಿ ಗುರುವಾರ ನಡೆಸಿದ ಉಗ್ರರ ಆತ್ಮಾಹುತಿ ದಾಳಿಗೆ 44 ಮಂದಿ ಸಿಆರ್‍ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವು ಯೋಧರು ಸ್ಥಿತಿ ಗಂಭೀರವಾಗಿದೆ. ಸೇನಾ ವಾಹನದಲ್ಲಿದ್ದು ವೀರ ಮರಣವನ್ನಪ್ಪಿದ ಧೀರ ಯೋಧರ ಹೆಸರಿನ ಪಟ್ಟಿ ಸಿಕ್ಕಿದ್ದು, ಅದು ಈ ಕೆಳಗಿನಂತಿದೆ.

    * ಜಮಾಲ್ ಸಿಂಗ್, ನಾಸೀರ್ ಅಹಮ್ಮದ್, ಸಿಖ್ವಿಂದರ್ ಸಿಂಗ್, ರೋಹಿತಾಶ್ ಲಂಬಾ
    * ತಿಲಕ್ ರಾಜ್, ಭಗೀರಥ ಸಿಂಗ್, ಬೀರೇಂದ್ರ ಸಿಂಗ್, ಅವದೇಶ್ ಕುಮಾರ್ ಯಾದವ್
    * ನಿತಿನ್ ಸಿಂಗ್ ರಾಥೋರ್, ರತನ್ ಕುಮಾರ್ ಠಾಕೂರ್, ಸುರೇಂದ್ರ ಯಾದವ್
    * ಸಂಜಯ್ ಕುಮಾರ್ ಸಿಂಗ್, ರಾಮ್ ವಕೀಲ್, ಧರ್ಮಚಂದ್ರ, ಬೇಲ್‍ಖರ್ ಟಾಕಾ
    * ಶಾಮ್ ಬಾಬು, ಅಜಿತ್ ಕುಮಾರ್ ಆಜಾದ್, ಪ್ರದೀಪ್ ಸಿಂಗ್, ಸಂಜಯ್ ರಜಪೂತ್

    * ಜೀತ್‍ರಾಮ್, ಕೌಶಲ್‍ಕುಮಾರ್, ಅಮಿತ್ ಕುಮಾರ್, ಬಿಜಯ್ ಕುಮಾರ್
    * ಕುಲವಿಂದರ್ ಸಿಂಗ್, ವಿಜಯ್ ಸೋರಂಗ್, ವಸಂತ್ ಕುಮಾರ್, ಗುರು, ಶುಭಂ ಅನಿರಂಗ್
    * ಅಮರ್ ಕುಮಾರ್, ಅಜಯ್ ಕುಮಾರ್, ಮಣಿಂದರ್ ಸಿಂಗ್, ರಮೇಶ್ ಯಾದವ್
    * ಪ್ರಸನ್ನ ಕುಮಾರ್, ಹೇಮರಾಜ್, ಬಬಲಾಶ್ ಶಾಂತ್ರಾ, ಅಶ್ವಿನಿ ಕುಮಾರ್, ಪ್ರದೀಪ್ ಕುಮಾರ್
    * ಸುಧೀರ್ ಕುಮಾರ್ ಬನ್ಸಾಲ್, ರವೀಂದ್ರ ಸಿಂಗ್, ಬಷುಮಾತ್ರೆ, ಮಹೇಶ್ ಕುಮಾರ್, ಗುರ್ಜರ್

    ಗೋರಿಪುರ ಪ್ರದೇಶದಲ್ಲಿ ಉಗ್ರರು ಸುಧಾರಿತ ಸ್ಫೋಟಕ ಬಳಸಿ ಸಿಆರ್‍ಪಿಎಫ್ ಯೋಧರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಸ್ಫೋಟದ ಬಳಿಕ ಸ್ಥಳದಲ್ಲಿ ಗುಂಡಿನ ದಾಳಿ ಕೂಡ ನಡೆದಿದೆ. ಸುಧಾರಿತ ಸ್ಫೋಟಕ ಅಳವಡಿಸಿದ್ದ ಕಾರನ್ನು ಸಿಆರ್‍ಪಿಎಫ್ ಯೋಧರಿದ್ದ ವಾಹನಕ್ಕೆ ಗುದ್ದಿಸಿ ದಾಳಿ ನಡೆಸಿದ್ದಾರೆ. ಸ್ಫೋಟದ ತೀವ್ರತೆಗೆ ಯೋಧರ ದೇಹಗಳು ಛಿದ್ರ, ಛಿದ್ರವಾಗಿವೆ. ದಾಳಿಗೆ ಬಳಸಲಾಗಿರುವ ಆಟೋದ ಗುರುತು ಸಿಗದಷ್ಟು ಜಖಂ ಆಗಿದೆ. ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಲೋಕಸಭೆ ಚುನಾವಣೆ ಹೊತ್ತಲ್ಲಿ ಭಾರತದಲ್ಲಿ ಉಗ್ರರ ದೊಡ್ಡ ದಾಳಿ ನಡೆಯಲಿದೆ ಅಂತ ಅಮೆರಿಕ ಬೇಹುಗಾರಿಕೆ ಸಂಸ್ಥೆ ಎಚ್ಚರಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv