Tag: ಆತ್ಮಹತ್ಯೆ ಬೆದರಿಕೆ

  • ನ್ಯಾಯಕ್ಕಾಗಿ ನೀರಿನ ಟ್ಯಾಂಕ್ ಏರಿ ಕುಳಿತ ಕುಟುಂಬ- ಆತ್ಮಹತ್ಯೆ ಬೆದರಿಕೆ

    ನ್ಯಾಯಕ್ಕಾಗಿ ನೀರಿನ ಟ್ಯಾಂಕ್ ಏರಿ ಕುಳಿತ ಕುಟುಂಬ- ಆತ್ಮಹತ್ಯೆ ಬೆದರಿಕೆ

    ಚಿಕ್ಕಬಳ್ಳಾಪುರ: ನಿವೃತ್ತ ಡಿವೈಎಸ್ಪಿ ಕೋನಪ್ಪರೆಡ್ಡಿ ಅವರು ಜಮೀನು ವಿಚಾರದಲ್ಲಿ ಮೋಸ ಮಾಡಿದ್ದಾರೆ. ನಮಗೆ ನ್ಯಾಯ ದೊರಕಿಸುವಂತೆ ಒತ್ತಾಯಿಸಿ ಚಿಂತಾಮಣಿ ಮೂಲದ ಕುಟುಂಬವೊಂದು ಆತ್ಮಹತ್ಯೆ ಬೆದರಿಕೆ ಒಡ್ಡುತ್ತಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಜಿಕೆವಿ ಲೇಔಟ್‍ನಲ್ಲಿ ನಡೆದಿದೆ.

    ನಿವೃತ್ತ ಡಿವೈಎಸ್ಪಿ ಕೋನಪ್ಪ ರೆಡ್ಡಿ ಅವರ ಕುಟುಂಬದ ಸದಸ್ಯರಾದ ಆಂಜನೇಯ ರೆಡ್ಡಿ ಕುಟುಂಬದ ನಾಲ್ವರು ಪುರುಷರು, ನಾಲ್ವರು ಮಹಿಳೆಯರು ಬೆಳ್ಳಂಬೆಳಗ್ಗೆ ನೀರಿನ ಟ್ಯಾಂಕ್ ಹೇರಿ ಕುಳಿತಿದ್ದು, ಜೊತೆಯಲ್ಲಿ ಪೆಟ್ರೋಲ್ ತುಂಬಿದ ಕ್ಯಾನ್ ಸಹ ಕೊಂಡೊಯ್ದಿದ್ದಾರೆ. ಕೋನಪ್ಪರೆಡ್ಡಿ ಅವರು 4 ಎಕರೆ 18 ಗುಂಟೆ ಜಮೀನು ವಿಚಾರದಲ್ಲಿ ಫೋರ್ಜರಿ ಮಾಡಿ ಮೋಸ ಮಾಡಿದ್ದಾರೆಂದು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಸೂರ್ಯ- ಚಂದ್ರ ಇರೋವರೆಗೂ ಸಂವಿಧಾನ ಬದಲಾವಣೆ ಅಸಾಧ್ಯ: ಆನಂದ್ ಸಿಂಗ್

    ನಮಗೆ ನ್ಯಾಯ ದೊರಕಿಸಿ ಇಲ್ಲವೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಪೊಲೀಸರು ಭೇಟಿ ನೀಡಿ ಮನವೊಲಿಸುವ ಕಾರ್ಯ ನಡೆಸುತ್ತಿದ್ದಾರೆ. ಆದರೆ ಪೊಲೀಸರ ಮನವೊಲಿಕೆಗೂ ಜಗ್ಗದ ಆಂಜನೇಯರೆಡ್ಡಿ ಕುಟುಂಬಸ್ಥರು ಹಠ ಹಿಡಿದು ನ್ಯಾಯಕ್ಕಾಗಿ ಪಟ್ಟು ಹಿಡಿದು ಕೂತಿದ್ದಾರೆ. ಇದನ್ನೂ ಓದಿ: ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು: ಡಾ.ಕೆ.ಸುಧಾಕರ್

  • ಸ್ಕೂಟಿ ಓಡಿಸುತ್ತಾ ಫೋನಿನಲ್ಲಿ ಮಾತು- ಪೊಲೀಸರು ದಂಡ ವಿಧಿಸಲು ಮುಂದಾಗುತ್ತಿದ್ದಂತೆ ಆತ್ಮಹತ್ಯೆ ಬೆದರಿಕೆ

    ಸ್ಕೂಟಿ ಓಡಿಸುತ್ತಾ ಫೋನಿನಲ್ಲಿ ಮಾತು- ಪೊಲೀಸರು ದಂಡ ವಿಧಿಸಲು ಮುಂದಾಗುತ್ತಿದ್ದಂತೆ ಆತ್ಮಹತ್ಯೆ ಬೆದರಿಕೆ

    ನವದೆಹಲಿ: ಹೊಸ ಸಂಚಾರ ನಿಯಮದಲ್ಲಿನ ದಂಡದಿಂದ ತಪ್ಪಿಸಿಕೊಳ್ಳಲು ಮಹಿಳೆಯೊಬ್ಬಳು ಪೊಲೀಸರಿಗೆ ಆತ್ಮಹತ್ಯೆ ಬೆದರಿಕೆ ಒಡ್ಡಿರುವ ಅಚ್ಚರಿ ಘಟನೆ ನಗರದಲ್ಲಿ ನಡೆದಿದೆ.

    ನಗರದ ಕಾಶ್ಮಿರಿ ಗೇಟ್ ಬಳಿ ಶನಿವಾರ ಬೆಳಗ್ಗೆ ಪೊಲೀಸರು ದ್ವಿಚಕ್ರ ವಾಹನವನ್ನು ತಡೆಯುತ್ತಿದ್ದಂತೆ ಮಹಿಳೆ ಆತ್ಮಹತ್ಯೆಯ ನಾಟಕವನ್ನಾಡಿದ್ದಾಳೆ.

    ಪೊಲೀಸ್ ಸಿಬ್ಬಂದಿ ಪ್ರಕಾರ, ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಮಹಿಳೆ ಫೋನಿನಲ್ಲಿ ಮಾತನಾಡುತ್ತಿದ್ದಳು. ಗಾಡಿಯ ನಂಬರ್ ಪ್ಲೇಟ್ ಸಹ ಮುರಿದು ಬಿದ್ದಿತ್ತು. ಮಹಿಳೆ ಹಲ್ಮೆಟ್ ಸಹ ಸರಿಯಾಗಿ ಧರಿಸಿರಲಿಲ್ಲ. ಆಗ ಪೊಲೀಸರು ಆಕೆಯ ವಾಹನ ತಡೆದು ನಿಲ್ಲಿಸಿ ಈ ಕುರಿತು ಪ್ರಶ್ನಿಸಿದಾಗ ರಸ್ತೆಯಲ್ಲೇ ಸೀನ್ ಕ್ರಿಯೇಟ್ ಮಾಡಿದ್ದಾಳೆ. ಅಲ್ಲದೆ ಪೊಲೀಸರ ವಿರುದ್ಧ ಕಿರುಚಲು ಪ್ರಾರಂಭಿಸಿದ್ದಾಳೆ. ಇದನ್ನು ಓದಿ: ತಲೆಯ ಗಾತ್ರದ ಹೆಲ್ಮೆಟ್ ಸಿಗದೆ ವ್ಯಕ್ತಿಯ ಪರದಾಟ- ದಂಡ ವಿಧಿಸದೆ ಬಿಟ್ಟು ಕಳುಹಿಸಿದ ಪೊಲೀಸ್

    ಮೊದಲಿಗೆ ಮಹಿಳೆ ದಂಡ ವಿಧಿಸದಂತೆ ಪೊಲೀಸರಲ್ಲಿ ವಿನಂತಿ ಮಾಡಿದ್ದಾಳೆ. ಆದರೆ ದಂಡ ಹಾಕಲು ಮುಂದಾದಾಗ ಕಣ್ಣೀರು ಹಾಕಲು ಪ್ರಾರಂಭಿಸಿದ್ದಾಳೆ. ಅಲ್ಲದೆ, ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ನಾಟಕ ಮಾಡತೊಡಗಿದಳು.

    ಪೊಲೀಸರ ಜೊತೆ ವಾದ ಮಾಡುವಾಗ ಅವಳು ಹೆಲ್ಮೆಟ್‍ನ್ನು ರಸ್ತೆಗೆ ಎಸೆದು ಸೀನ್ ಕ್ರಿಯೇಟ್ ಮಾಡಿದ್ದಾಳೆ. ನಂತರ ತಕ್ಷಣವೇ ಅವಳ ತಾಯಿಗೆ ಕರೆ ಮಾಡಿ ಪೊಲೀಸರು ದಂಡ ವಿಧಿಸುತ್ತಿರುವುದರ ಕುರಿತು ತಿಳಿಸಿದ್ದಾಳೆ. ಅಷ್ಟಾಗಿಯೂ ಚಲನ್ ಸ್ವೀಕರಿಸದ ಮಹಿಳೆ, ನಂತರ ನೇಣು ಬಿಗಿದುಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದಾಳೆ. ನಾನು ಸತ್ತರೆ ನೀವು ಏನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ.

    ಈ ನಾಟಕ ತೀವ್ರ ಸಂಚಾರದಟ್ಟಣೆ ಇರುವ ರಸ್ತೆಯಲ್ಲಿ 20 ನಿಮಿಷಗಳಿಗೂ ಹೆಚ್ಚು ಕಾಲ ನಡೆದಿದೆ. ಬಿಸಿ ಬಿಸಿ ಚರ್ಚೆಯನ್ನು ವೀಕ್ಷಿಸಲು ದಾರಿಹೋಕರು ಸಹ ಸುತ್ತಲೂ ಆವರಿಸಿದ್ದರು. ಹಲವು ನಿಮಿಷಗಳ ರಾದ್ಧಾಂತದ ನಂತರ ಪೊಲೀಸರು ಅಂತಿಮವಾಗಿ ಅವಳಿಗೆ ದಂಡ ಚಲನ್ ನೀಡದೇ ಬಿಟ್ಟು ಕಳುಹಿಸಿದ್ದಾರೆ.