Tag: ಆತ್ಮಹತ್ಯೆ ಪಬ್ಲಿಕ್ ಟಿವಿ

  • ಪಕ್ಕದ ಮನೆ ಹುಡುಗ ಚುಡಾಯಿಸಿದ್ದಕ್ಕೆ ಗೃಹಿಣಿ ಆತ್ಮಹತ್ಯೆ

    ಪಕ್ಕದ ಮನೆ ಹುಡುಗ ಚುಡಾಯಿಸಿದ್ದಕ್ಕೆ ಗೃಹಿಣಿ ಆತ್ಮಹತ್ಯೆ

    ಮೈಸೂರು: ಪಕ್ಕದ ಮನೆಯ ಹುಡುಗ ಚುಡಾಯಿಸಿದನೆಂದು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡಿನ ಕಲ್ಲಹಳ್ಳಿಯಲ್ಲಿ ನಡೆದಿದೆ.

    ಜಯಶ್ರೀ ಅವರನ್ನು ಪಕ್ಕದ ಮನೆಯ ಯುವಕ ಮಂಜು ಎಂಬಾತ ಆಗಾಗ ಚುಡಾಯಿಸುತ್ತಿದ್ದ. ಇದರಿಂದ ಮನನೊಂದ ಜಯಶ್ರೀ 18 ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಜಯಶ್ರೀ ಮೃತಪಟ್ಟಿದ್ದಾರೆ.

    ಘಟನೆ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿ ಅಗಲಿಕೆಯಿಂದ ಮನನೊಂದ ಪತಿಯು ವಿಷ ಸೇವಿಸಿ ಆತ್ಮ ಹತ್ಯೆ

    ಪತ್ನಿ ಅಗಲಿಕೆಯಿಂದ ಮನನೊಂದ ಪತಿಯು ವಿಷ ಸೇವಿಸಿ ಆತ್ಮ ಹತ್ಯೆ

    ಹುಬ್ಬಳ್ಳಿ: ಪತ್ನಿ ಅಗಲಿಕೆಯಿಂದ ಮನನೊಂದ ಪತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯ ಕುಸಗಲ್ಲ ರಸ್ತೆಯ ಢಾಬಾ ಒಂದರಲ್ಲಿ ನಡೆದಿದೆ.

    ಕಳೆದ ಎರಡು ತಿಂಗಳ ಹಿಂದೆ ಈತನ ಪತ್ನಿ ವೈಯಕ್ತಿಕ ಕಾರಣಕ್ಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಅದನ್ನೇ ಮನದಲ್ಲಿಟ್ಟುಕೊಂಡ ಈತ ಆಕೆಯ ಅಗಲಿಕೆಯನ್ನ ತಾಳಲಾರದೇ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ನನ್ನ ಹೆಂಡತಿಯ ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ನನ್ನ ಅಂತ್ಯಕ್ರಿಯೆ ಮಾಡಿ ಎಂದು ಡೆತ್ ನೋಟ್‍ನಲ್ಲಿ ಬರೆದಿಟ್ಟು ವಿಷ ಸೇವಿಸಿದ್ದಾನೆ.

    ಬಹಳ ಹೊತ್ತಾದರೂ ಈತ ಎಚ್ಚರ ಆಗದನ್ನು ಕಂಡ ಹೋಟೆಲ್ ಮಾಲೀಕರು ತಕ್ಷಣ ಪೊಲೀಸರಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಕೇಶ್ವಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪರಿಚಿತನ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.